Tag: Corona Vaccine

  • ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭದ ಆತಂಕ- ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ

    ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭದ ಆತಂಕ- ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ

    ಬೆಂಗಳೂರು: ನೆರೆ ರಾಜ್ಯವಾದ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿ, ಲಾಕ್‍ಡೌನ್ ಘೋಷಣೆಯಾಗಿದೆ. ರಾಜ್ಯದ ಕೋವಿಡ್ ಪ್ರಕರಣಗಳಲ್ಲಿಯೂ ನಿಧಾನವಾಗಿ ಏರಿಕೆ ಕಂಡುಬರುತ್ತಿದ್ದು, ಬೆಂಗಳೂರಿನ ಕೋವಿಡ್ ಪ್ರಕರಣಗಳಲ್ಲಿಯೂ ಟ್ರಾವೆಲ್ ಹಿಸ್ಟರಿಯಿಂದ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರ ಜೊತೆಗೆ ಮೂರನೇ ಅಲೆ ಆರಂಭದ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಕಟ್ಟುನಿಟ್ಟಾಗಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ. ಈ ಬಗ್ಗೆ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ, ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದು, ಪ್ರಕರಣ ಹೆಚ್ಚಳದ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು, ಮೈಕ್ರೋಕಂಟೈನ್ ಮೆಂಟ್ ಮಾಡಬೇಕು, ನಿಗದಿತ ಗುಂಪುಗಳಿಗೆ ವ್ಯಾಕ್ಸಿನೇಷನ್ ಹೆಚ್ಚಿಸಬೇಕು, ಗಡಿ ಭಾಗಗಳಲ್ಲಿಯೂ ಎಚ್ಚರಿಕೆಯಿಂದ ನಿಗಾವಹಿಸಬೇಕೆಂದು ತಿಳಿಸಿದ್ದಾರೆ.

    ಪೂರ್ವ, ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಹೆಚ್ಚು ಕೋವಿಡ್
    ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಮಾತನಾಡಿ, ನಗರದ ಅಲ್ಲಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಕ್ಲಸ್ಟರ್ ಗಳನ್ನು ಹತ್ತು ಪ್ರಕರಣದಿಂದ ಮೂರಕ್ಕೆ ಇಳಿಸಿ, ಮೈಕ್ರೋಕಂಟೈನ್ ಮೆಂಟ್ ಮಾಡಲಾಗ್ತಿದೆ. ನೂರು ಜಾಗಗಳಲ್ಲಿ ಕ್ಲಸ್ಟರ್ಸ್ ಕಂಡುಬಂದಿದೆ. ಅದರಲ್ಲೂ ನೂರು ಮೀಟರ್ ಒಳಗೆ ಹೆಚ್ಚು ಕ್ಲಸ್ಟರ್ ಗಳು ಕಂಡುಬಂದಿವೆ. ಪೂರ್ವ ವಲಯ, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಹಚ್ಚು ಕೋವಿಡ್ ಕಂಡುಬಂದಿದೆ. ಅಪಾರ್ಟ್ ಮೆಂಟ್ ಹಾಗೂ ಮನೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಪ್ರತೀ ಕೋವಿಡ್ ಸೋಂಕಿತರ 20-30 ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡಲಾಗ್ತಿದೆ. ಆದರೆ ಸಂಪರ್ಕಿತರಲ್ಲೂ ಕೋವಿಡ್ ಪಾಸಿಟಿವ್ ಕಂಡುಬರುತ್ತಿದೆ. ಟಾರ್ಗೆಟ್ ಟೆಸ್ಟಿಂಗ್ ಮಾಡುವುದರಿಂದ ಕೋವಿಡ್ ಸಂಖ್ಯೆಗಳು ಹೆಚ್ಚು ಕಂಡುಬರುತ್ತಿವೆ ಎಂದರು.

    ನಗರದ ಪ್ರತೀ ವಲಯಗಳಿಗೂ ಎಚ್ಚರಿಕೆ ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಹೊರರಾಜ್ಯದಿಂದ ಪ್ರಯಾಣ ಮಾಡಿರುವ ಹಿನ್ನೆಲೆ, ಪ್ರವಾಸ ಹೋಗಿ ಬಂದಿರೋದು ಕಂಡುಬರುತ್ತಿದೆ. ತಜ್ಞರ ಸಭೆಯಲ್ಲೂ ಈ ಬಗ್ಗೆ ಮಾಹಿತಿ ಬಂದಿದ್ದು, ಕೇರಳದಿಂದ ಬಂದಿರುವವರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಿಸಲು ಸೂಚಿಸಿದ್ದಾರೆ. ವ್ಯಾಕ್ಸಿನ್ ಪಡೆದಿದ್ದರೂ, ಯಾವುದೇ ವಿನಾಯಿತಿ ನೀಡದೆ ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಹೆಚ್ಚು ಟೆಸ್ಟಿಂಗ್ ಕಡ್ಡಾಯ ಮಾಡಲಾಗಿದೆ ಎಂದರು. ವ್ಯಾಕ್ಸಿನ್ ಅಭಾವ ಪಾಲಿಕೆ ಕೈಯಲ್ಲಿಲ್ಲ. ರಾಜ್ಯದಿಂದ ಎರಡು ದಿನಕ್ಕೊಮ್ಮೆ, 30-50 ಸಾವಿರ ಡೋಸ್ ಮಾತ್ರ ಬರುತ್ತಿದೆ ಎಂದರು.

    ಆಗಸ್ಟ್ 10 ರಿಂದಲೇ ಮೂರನೇ ಅಲೆಯ ನಿರೀಕ್ಷೆ:
    ಮೂರನೇ ಅಲೆಯ ಆರಂಭವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಎರಡನೇ ಅಲೆ ಹತ್ತು ದಿನದಲ್ಲೇ 5 ಸಾವಿರ ಪ್ರಕರಕ್ಕೆ ಏರಿಕೆಯಾಗಿತ್ತು. ಆಗಸ್ಟ್ 10 ರಿಂದಲೇ ಈ ನಿರೀಕ್ಷೆ ಇದ್ದು, ಹಾಸಿಗೆಗಳು, ಮಕ್ಕಳ ತಜ್ಞ ವೈದ್ಯರ ಸಿದ್ಧತೆ ಮಾಡಲಾಗ್ತಿದೆ. ಕಂಟೈನ್ ಮೆಂಟ್ ಕೂಡಾ ಹೆಚ್ಚು ಮಾಡಲಾಗ್ತಿದೆ ಎಂದರು.

    ಮಕ್ಕಳಿಗೆ ಶಾಲಾರಂಭಕ್ಕೆ ಅವಸರ ಬೇಡ
    ಪಾಲಿಕೆ ವ್ಯಾಪ್ತಿಯಲ್ಲಿ ತಕ್ಷಣವೇ ಶಾಲೆಗಳನ್ನು ಆರಂಭ ಮಾಡಲು ಬದಲು, ಸ್ವಲ್ಪ ಕಾದುನೋಡಬೇಕಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗುವುದಿಲ್ಲ, ಆದರೆ ಹೆಚ್ಚಾಗುವ ಸಂಕೇತಗಳು ಕಂಡುಬರುತ್ತಿವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳದಲ್ಲಿ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ

    ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ಕೇರಳ ಗಡಿಭಾಗದ ರಾಜ್ಯದ ಜಿಲ್ಲೆಗಳಲ್ಲಿ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದರು. ನಗರದ ಅತ್ತಿಬೆಲೆ, ಹೊಸೂರು ಚೆಕ್ ಪೋಸ್ಟ್ ಗಡಿಭಾಗದಲ್ಲಿ ನಿಗಾವಹಿಸಲಾಗ್ತಿದೆ. ಕೇರಳದ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ತಮಿಳುನಾಡು ಬಾರ್ಡರ್ ನಿಂದ ಉದ್ಯೋಗಕ್ಕಾಗಿ ನಗರಕ್ಕೆ ಬಹಳಷ್ಟು ಜನ ಬರುತ್ತಿದ್ದು, ಅವರ ಮೇಲೂ ನಿಗಾ ವಹಿಸಲು ಕಂಪನಿಗಳು, ಗಾರ್ಮೆಂಟ್ಸ್ ಗಳಿಗೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ – 2 ವರ್ಷದ ಹಿಂದೆ 10 ಸಾವಿರ, ಈಗ ಕೇವಲ 3,800 ರೂ.

  • ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ – ಆರೋಗ್ಯ ಸಚಿವರ ಸುಳಿವು

    ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ – ಆರೋಗ್ಯ ಸಚಿವರ ಸುಳಿವು

    ನವದೆಹಲಿ: ಆಗಸ್ಟ್ ಮೂರನೇ ವಾರದಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸುಳಿವನ್ನು ಕೇಂದ್ರ ಆರೋಗ್ಯ ಸಚಿವ ಮನ್‍ಸುಖ್ ಮಾಂಡವಿಯಾ ನೀಡಿದ್ದಾರೆ.

    ಮಂಗಳವಾರ ಸಂಸದ್ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಸಭೆಯಲ್ಲಿ ವ್ಯಾಕ್ಸಿನೇಷನ್ ನೀಡುವ ಕುರಿತು ಮನ್‍ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆಗಸ್ಟ್ ನಲ್ಲಿಯೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮಾತುಗಳನ್ನಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಸದ್ಯ ದೇಶ ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದು, ಮೂರನೇ ಅಲೆಯ ಆತಂಕದ ಹೊಸ್ತಿಲಿನಲ್ಲಿದೆ. ಮೂರನೇ ಅಲೆ ಮಕ್ಕಳ ಮೇಲೆಯೇ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈಗ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

    ದೇಶದ ಹಲವೆಡೆ ವಿವಿಧ ಹಂತಗಳಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಭಾರತ್ ಬಯೋಟೆಕ್ ಸಹ ಲಸಿಕೆಯ ಪ್ರಯೋಗ ನಡೆಸಿದ್ದು, ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಲಭ್ಯವಾಗುವ ಸಾಧ್ಯತೆಗಳಿವೆ. ಜಾಯಿಡ್ಸ್ ಕ್ಯಾಡಿಲ್ ನಡೆಸಿದ ಟ್ರಯಲ್ ಅಂತಿಮಗೊಂಡಿದ್ದು, ಶೀಘ್ರವೇ ಲಸಿಕೆಗೆ ಅನುಮತಿ ಸಿಗಲಿದೆ. ಇದನ್ನೂ ಓದಿ: 20 ತಿಂಗಳಾದ್ರೂ ಜಾರಿಗೆ ಬರದ ಸಿಎಎ – ಇನ್ನೂ 6 ತಿಂಗಳು ಸಮಯ ಕೇಳಿದ ಕೇಂದ್ರ

    ಇತ್ತ ವಿಶ್ವದಲ್ಲಿ ಫೈಜರ್, ಮೊಡೆರ್ನಾ ವಿದೇಶಿ ಕಂಪನಿಗಳು 12 ರಿಂದ 17 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ನೀಡುತ್ತಿವೆ. ಈ ಲಸಿಕೆಗಳಿಗೆ ಭಾರತದಲ್ಲಿ ಅನುಮತಿ ಸಿಗಲಿದೆ ಎನ್ನಲಾಗುತ್ತಿದೆ. ಇದುವರೆಗೂ 44 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, 9 ಕೋಟಿಗೂ ಅಧಿಕ ಜನರು ಸಂಪೂರ್ಣ ವ್ಯಾಕ್ಸಿನೇಟ್ ಆಗಿದ್ದಾರೆ. ಇದನ್ನೂ ಓದಿ: ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ

  • ಮಳೆಯಲ್ಲೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ – ಸರ್ಕಾರದ ವ್ಯವಸ್ಥೆಗೆ ಹಿಡಿಶಾಪ

    ಮಳೆಯಲ್ಲೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ – ಸರ್ಕಾರದ ವ್ಯವಸ್ಥೆಗೆ ಹಿಡಿಶಾಪ

    ಬೆಂಗಳೂರು: ಕೊರೋನಾವನ್ನು ಮುಕ್ತ ಮಾಡಲು ಇರೋ ಮಾರ್ಗ ವ್ಯಾಕ್ಸಿನ್. ವ್ಯಾಕ್ಸಿನ್ ಪಡೆಯಲು ಮೊದಮೊದಲು ಜನ ಹಿಂಜರಿಕೆ ತೋರುತ್ತಿದ್ದರು. ಆದರೆ ಎರಡನೇ ಅಲೆ ಬಂದ್ಮೇಲೆ ವ್ಯಾಕ್ಸಿನ್ ಪಡೆಯೋದು ಎಷ್ಟು ಮುಖ್ಯ.

    ವ್ಯಾಕ್ಸಿನ್ ಹೇಗೆ ಕೊರೋನಾ ವೈರಸ್ ಗೆ ಮಾರಕವಾಗಿದೆ ಅಂತಾ ಜನ ತಿಳಿದುಕೊಂಡಿದ್ದಾರೆ. ಹಾಗಾಗಿ ವ್ಯಾಕ್ಸಿನ್ ಪಡೆಯಲು ಜನ ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತಿದ್ದಾರೆ. ಬೆಳಗ್ಗೆ 9 ಗಂಟೆಯ ಬಳಿಕ ವ್ಯಾಕ್ಸಿನ್ ಹಾಕುವ ಕಾರ್ಯ ಶುರುವಾಗುತ್ತೆ. ಆದರೆ ವ್ಯಾಕ್ಸಿನ್ ಪಡೆಯಲು ಜನ ಬೆಳಗ್ಗಿನ ಜಾವ 5 ಗಂಟೆಯಿಂದಲೇ ಮಲ್ಲೇಶ್ವರಂನ ವ್ಯಾಕ್ಸಿನ್ ಸೆಂಟರ್ ಮುಂದೆ ಬಂದಿದ್ದಾರೆ.

    ಮೊನ್ನೆಯಿಂದಲೂ ಬೆಂಗಳೂರಿನಲ್ಲಿ ಮಳೆ ಆಗ್ತಿದೆ. ಇಂದು ಸಹ ತುಂತುರು ಮಳೆಯಾಗ್ತಿದೆ. ಮಳೆ ಬಂದ್ರೂ ಪರವಾಗಿಲ್ಲ ವ್ಯಾಕ್ಸಿನ್ ಪಡೆಯಲೇ ಬೇಕು ಅಂತಾ ಜನ ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತಿದ್ದಾರೆ. ಮಳೆ ಬರ್ತಿದೆ, ವ್ಯಾಕ್ಸಿನ್ ಕೊಡೋದನ್ನ ಬೇಗ ಶುರು ಮಾಡಿದ್ರೆ ಒಳ್ಳೆಯದು, ಸರ್ಕಾರ ವ್ಯಾಕ್ಸಿನ್ ಕೊಡದಕ್ಕೆ ಒಂದು ವರ್ಷ ಮಾಡೋ ಆಗೆ ಕಾಣ್ತಿದೆ. ಸರಿಯಾದ ವ್ಯವಸ್ಥೆ ಮಾಡಿ ಬೇಗ ಬೇಗವಾಗಿ ವ್ಯಾಕ್ಸಿನ್ ಕೊಟ್ರೆ ಉತ್ತಮ, ಸರ್ಕಾರದವರು ಆರಾಮವಾಗಿ ಮನೆಯಲ್ಲಿ ಇದ್ದಾರೆ.

    ನಾವೂ ವ್ಯಾಕ್ಸಿನ್ಗಾಗಿ ಹೀಗೆ ಮಳೆಯಲ್ಲಿ ನೆನೆಯಬೇಕಾಗಿದೆ. ಕೊನೆ ಪಕ್ಷ ವ್ಯಾಕ್ಸಿನ್ ಸೆಂಟರ್ ಒಳಕ್ಕಾದ್ರೂ ಬಿಡಬೇಕು, ಅದು ಸಹ ಮಾಡೋಲ್ಲ, ಸರ್ಕಾರ ಇದಕ್ಕೆಲ್ಲ ಸರಿಯಾದ ವ್ಯವಸ್ಥೆ ಮಾಡಿದ್ರೆ ಉತ್ತಮ ಅಂತಾ ಜನ ಮಳೆಯಲ್ಲೇ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಚಳಿ ಗಾಳಿ ಲೆಕ್ಕಿಸದೇ ಬೆಳಂಬೆಳಗ್ಗೆಯೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ

    ಚಳಿ ಗಾಳಿ ಲೆಕ್ಕಿಸದೇ ಬೆಳಂಬೆಳಗ್ಗೆಯೇ ವ್ಯಾಕ್ಸಿನ್‍ಗಾಗಿ ಕ್ಯೂ ನಿಂತ ಜನ

    ಬೆಂಗಳೂರು: ಕೊರೋನಾ ವೈರಸ್ ನಿಂದ ಬಚಾವ್ ಆಗಬೇಕಾದ್ರೇ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಷ್ಟು ಮುಖ್ಯವೋ ವ್ಯಾಕ್ಸಿನ್ ಕೂಡ ಅಷ್ಟೇ ಮುಖ್ಯ. ವ್ಯಾಕ್ಸಿನ್ ಪಡೆದವರ ಮೇಲೆ ಕೊರೋನಾ ಪ್ರಭಾವ ಕಡಿಮೆ, ಹಾಗಾಗಿ ವ್ಯಾಕ್ಸಿನ್ ಪಡೆಯಲು ಜನ ಚಳಿ, ಗಾಳಿ, ಮಳೆಯನ್ನ ಲೆಕ್ಕಿಸದೇ ಬೆಳ್ಳಂಬೆಳಗ್ಗೆಯೇ ಬಂದು ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯ ಆವರಣದ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರೋ ವ್ಯಾಕ್ಸಿನ್ ಡ್ರೈವ್ ಗೆ ಬೆಳಗ್ಗೆ 6 ಗಂಟೆಗೇ ಜನ ಸೇರಿದ್ದಾರೆ. 9 ಗಂಟೆಯ ನಂತರ ಶುರುವಾಗೋ ವ್ಯಾಕ್ಸಿನ್ ಡ್ರೈವ್ ಗಾಗಿ ಜನ ಬೆಳ್ಳಂಬೆಳಗ್ಗೆಯೇ ಬಂದು ಸರತಿಸಾಲಿನಲ್ಲಿ ನಿಂತಿದ್ದಾರೆ.  ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

    ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಚಳಿ ಗಾಳಿಯನ್ನು ಸಹ ಲೆಕ್ಕಿಸದೇ ವ್ಯಾಕ್ಸಿನ್ ಸಿಕ್ಕಿದ್ರೇ ಸಾಕು ಅಂತಾ ಕ್ಯೂ ನಲ್ಲಿ ನಿಂತಿದ್ದಾರೆ. ಆದರೆ ವ್ಯಾಕ್ಸಿನ್ ಪಡೆಯೋ ಉತ್ಸಾಹದಲ್ಲಿ ಜನ ಸಾಮಾಜಿಕ ಅಂತರವನ್ನ ಸಂಪೂರ್ಣವಾಗಿ ಮರೆತಿದ್ದಾರೆ. ಇದನ್ನೂ ಓದಿ: ಪಕ್ಷೇತರರಾಗಿ ಅಖಾಡಕ್ಕಿಳೀತಾರಾ ಜಿಟಿಡಿ..?

  • ಮೂರನೇ ಡೋಸ್‍ಗಾಗಿ ಫೈಜರ್‌ನಿಂದ ಅರ್ಜಿ

    ಮೂರನೇ ಡೋಸ್‍ಗಾಗಿ ಫೈಜರ್‌ನಿಂದ ಅರ್ಜಿ

    ನವದೆಹಲಿ: ಡೆಲ್ಟಾ, ಡೆಲ್ಟಾ ಪ್ಲಸ್ ಹೀಗೆ ಕೋವಿಡ್ ಸೋಂಕಿನ ಹೊಸ ಹೊಸ ರೂಪಾಂತರಿ ತಳಿಗಳ ಆತಂಕ ಹೊತ್ತಲ್ಲೇ 2ನೇ ಡೋಸ್ ಪಡೆದವರಿಗೆ 3ನೇ ಡೋಸ್ ಲಸಿಕೆ ಕೊಡುವ ಬಗ್ಗೆ ಚರ್ಚೆ ಆರಂಭ ಆಗಿದೆ.

    ಬ್ರಿಟನ್ ಬಳಿಕ ಈಗ ಅಮೆರಿಕದಲ್ಲಿ ಮೂರನೇ ಡೋಸ್ ಲಸಿಕೆ ಕೊಡುವ ಸಾಧ್ಯತೆ ಇದೆ. ಆಗಸ್ಟ್‍ನಲ್ಲಿ 3ನೇ ಡೋಸ್ ಲಸಿಕೆ ವಿತರಣೆಗೆ ಅನುಮತಿ ಕೇಳಿ ಫೈಜರ್ ಕಂಪನಿ ಅರ್ಜಿ ಸಲ್ಲಿಸಲಿದೆ. ಮೂರನೇ ಡೋಸ್ ಕೊಟ್ಟರೆ ಆಗ ಪ್ರತಿಕಾಯ ಶೇಕಡಾ 5ರಿಂದ 10 ಪಟ್ಟು ಹೆಚ್ಚಾಗಲಿದ್ದು, ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಲಿದೆ ಎಂದು ಆರಂಭಿಕ ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಫೈಜರ್ ಹೇಳಿದೆ.

    ಆಸ್ಟ್ರಾಜೆನಿಕಾದ ಕೋವಿಡ್ ಲಸಿಕೆಯ 2ನೇ ಡೋಸ್ ತೆಗೆದುಕೊಂಡವರಿಗೆ 6 ತಿಂಗಳ ಬಳಿಕ 3ನೇ ಡೋಸ್ ಕೊಟ್ಟರೆ ರೋಗ ನಿರೋಧಕ ಶಕ್ತಿ ಅತ್ಯಧಿಕವಾಗಿರಲಿದೆ ಎಂದು ಆಕ್ಸ್ ಫರ್ಡ್ ವಿವಿ ಅಧ್ಯಯನ ತಿಳಿಸಿದೆ. ಬ್ರಿಟನ್‍ನಲ್ಲಿ ಸೆಪ್ಟೆಂಬರ್ ವೇಳೆ 3ನೇ ಡೋಸ್ ಲಸಿಕೆ ವಿತರಣೆ ಆರಂಭ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ನಿಜಕ್ಕೂ ಬಹಳ ಖುಷಿಯಾಗುತ್ತೆ- ಅಭಿಮಾನಿ ಪ್ರೀತಿಗೆ ಡಿಂಪಲ್ ಕ್ವೀನ್ ಫಿದಾ

    ರೋಗ ನಿರೋಧಕ ಶಕ್ತಿ ಕಡಿಮೆ ಆದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಡೋಸ್ ನೀಡಲು ನಿರ್ಧರಿಸಲಾಗಿದೆ. 2 ಡೋಸ್ ಪಡೆದ ಬಳಿಕ ಎಷ್ಟು ದಿನಗಳ ಕಾಲ ಪ್ರತಿಕಾಯ ಉಳಿಯುತ್ತೆ ಅಂತಾ ಸಾಬೀತು ಆಗಿಲ್ಲ. ದೇಹದಲ್ಲಿ ಉತ್ಪತ್ತಿಯಾದ ರೋಗ ನಿರೋಧಕ ಶಕ್ತಿ 8 ತಿಂಗಳ ಬಳಿಕ ನಶಿಸಿ ಹೋಗುತ್ತಿದೆ. ಹೀಗಾಗಿ 3ನೇ ಡೋಸ್ ನೀಡುವುದರ ಬಗ್ಗೆ ಐಸಿಎಂಆರ್ ಸಲಹೆ ನೀಡಿದೆ.

    ಶೇ.4.5 ನಷ್ಟು ರೋಗ ನಿರೋಧಕ ಶಕ್ತಿ ಇದ್ದು ಡೆಲ್ಟಾ ವೈರಸ್ ವೈರಸ್ ಬಂದರೆ, ಶೇ.3.2ನಷ್ಟು ರೋಗ ನಿರೋಧಕ ಶಕ್ತಿ ಕುಗ್ಗುವುದರ ಬಗ್ಗೆ ಫ್ರಂಟ್ ಲೈನ್ ವಾರಿಯರ್ಸ್ ಮೇಲೆ ನಡೆದ ಅಧ್ಯಯನದಲ್ಲಿ ಬಯಲಾಗಿದೆ. ಹಾಗಾಗಿ 3ನೇ ಡೋಸ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಹರಿದು ಬಾಲಕ ಸಾವು- ವಿಷಯ ತಿಳಿದ ಚಾಲಕ ಆತ್ಮಹತ್ಯೆ

  • ವ್ಯಾಕ್ಸಿನ್‍ಗಾಗಿ ನೂಕು ನುಗ್ಗಲು- ಅಂತರ ಕಾಯ್ದುಕೊಳ್ಳದೆ ಆತಂಕ ಸೃಷ್ಟಿಸಿದ ಜನ

    ವ್ಯಾಕ್ಸಿನ್‍ಗಾಗಿ ನೂಕು ನುಗ್ಗಲು- ಅಂತರ ಕಾಯ್ದುಕೊಳ್ಳದೆ ಆತಂಕ ಸೃಷ್ಟಿಸಿದ ಜನ

    ಮಡಿಕೇರಿ: ಕೋವಿಡ್ ವ್ಯಾಕ್ಸಿನ್ ಪಡೆಯಲು ಜಿಲ್ಲೆಯ ಜನ ಸಮರೋಪಾದಿಯಲ್ಲಿ ಆಗಮಿಸುತ್ತಿದ್ದು, ಲಸಿಕಾ ಕೇಂದ್ರದ ಬಳಿ ಜನಜಂಗುಳಿ ಉಂಟಾಗುತ್ತಿದೆ.

    ಇಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ವ್ಯಾಕ್ಸಿನ್ ಗಾಗಿ ನೂಕು ನುಗ್ಗಲು ಉಂಟಾಗಿದೆ. ಅಂತರ ಕಾಯ್ದುಕೊಳ್ಳದೆ ಜನ ಸೋಂಕು ವ್ಯಾಪಿಸುವ ಆತಂಕ ಸೃಷ್ಟಿಸಿದರು. ಜನರನ್ನು ನಿಯಂತ್ರಿಸಲು ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಹರಸಾಹಸಪಡುವಂತಾಯಿತು. ಕೆಲವರು ಬೆಳಗ್ಗೆ 7.30ಕ್ಕೆ ಲಸಿಕೆ ನೀಡುವ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎದುರು ಸಾಲುಗಟ್ಟಿ ನಿಂತಿದ್ದರು. ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ

    ಇಂದು ಎರಡನೇ ಡೋಸ್ ಲಸಿಕೆ ಮಾತ್ರ ನೀಡಲಾಗುವುದು ಎಂದು ವೈದ್ಯರು ತಿಳಿಸಿದ ನಂತರ ಹಲವರು ನಿರಾಶೆಯಿಂದ ಮರಳಿದರು. ಅಲ್ಪ ಪ್ರಮಾಣದ ವ್ಯಾಕ್ಸಿನ್ ಬಂದಿದೆ ಎನ್ನುವ ವಿಚಾರ ತಿಳಿದು ಜನಜಂಗುಳಿ ಉಂಟಾಯಿತು ಎಂದು ಹೇಳಲಾಗಿದೆ. ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿಲ್ಲವೆಂದು ಸ್ಥಳೀಯರು ದೂರಿಕೊಂಡಿದ್ದಾರೆ. ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ನೀಡಲಾಗುತ್ತಿದೆ. ಆದರೆ ಇದನ್ನು ಪಡೆಯಲು ಬರುತ್ತಿರುವವರು ಕೋವಿಡ್ ಮಾರ್ಗಸೂಚಿಯನ್ನು ಗಾಳಿಗೆ ತೂರಿ ನೂಕು ನುಗ್ಗಲು ಉಂಟು ಮಾಡುತ್ತಿದ್ದಾರೆ.

    ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲಸಿಕೆ ಪಡೆಯಲು ಬಂದವರು ರಸ್ತೆಯುದ್ದಕ್ಕೂ ಎರಡೂ ಬದಿ ವಾಹನಗಳನ್ನು ನಿಲ್ಲಿಸಿದ್ದರಿಂದ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಸಹ ಉಂಟಾಯಿತು.

  • ಮಲ್ಲೇಶ್ವರಂ ಕ್ಷೇತ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆಯದವರು ಪಟ್ಟಿ ಸಲ್ಲಿಸಿ: ಅಶ್ವತ್ಥ ನಾರಾಯಣ

    ಮಲ್ಲೇಶ್ವರಂ ಕ್ಷೇತ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆಯದವರು ಪಟ್ಟಿ ಸಲ್ಲಿಸಿ: ಅಶ್ವತ್ಥ ನಾರಾಯಣ

    ಬೆಂಗಳೂರು: ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯ ಮೊದಲನೇ ಡೋಸ್ ಇನ್ನೂ ಯಾರಿಗೆ ಆಗಿಲ್ಲವೋ ಅಂಥವರ ಹೆಸರುಗಳ ಪಟ್ಟಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಮನವಿ ಮಾಡಿದ್ದಾರೆ.

    ಈ ಕುರಿತು ಕ್ಷೇತ್ರ ವ್ಯಾಪ್ತಿಯ ಸಂಘ ಸಂಸ್ಥೆಗಳಿಗೆ ಅವರು ಪತ್ರ ಬರೆದಿದ್ದಾರೆ. ಕೋವಿಡ್ ಲಸಿಕೆಯ ಒಂದನೇ ಡೋಸ್ ಹಾಕಿಸಿಕೊಳ್ಳಬೇಕಾಗಿರುವವರ 18 ವರ್ಷವಾದವರ ಪಟ್ಟಿಯನ್ನು ತಮ್ಮ ಕ್ಷೇತ್ರ ಕಚೇರಿಗೆ ಸಲ್ಲಿಸಲು ಅಥವಾ +91 80 23563944 ಸಂಖ್ಯೆಯನ್ನು ಬೆಳಿಗ್ಗೆ 9ರಿಂದ- ಸಂಜೆ 5ರೊಳಗೆ ಸಂಪರ್ಕಿಸಿ ಮಾಹಿತಿ ಕೊಡಲು ಕೋರಿದ್ದಾರೆ.

    ಮೇ ತಿಂಗಳಿಂದ ಇಲ್ಲಿಯವರೆಗೆ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ 81 ಲಸಿಕಾ ಶಿಬಿರಗಳನ್ನು ನಡೆಸಲಾಗಿದ್ದು, 18ರಿಂದ 45 ವಯೋಮಾನದೊಳಗಿನ 40,043 ನಾಗರಿಕರು ಪ್ರಯೋಜನ ಪಡೆದಿದ್ದಾರೆ. 45 ವರ್ಷವಾದವರನ್ನು ಸರ್ಕಾರಿ ಲಸಿಕಾ ಕೇಂದ್ರಗಳಿಗೆ ತೆರಳಲು ಉತ್ತೇಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಮಲ್ಲೇಶ್ವರಂ ಕ್ಷೇತ್ರವು 18 ವರ್ಷ ಮೇಲ್ಪಟ್ಟವರಿಗೆ ಶೇ 100ರಷ್ಟು ಲಸಿಕೆ ಪೂರೈಸಿದ ಮೊದಲ ಕ್ಷೇತ್ರವಾಗಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ, ಲಸಿಕಾ ವ್ಯಾಪ್ತಿಗೆ ಎಲ್ಲರನ್ನೂ ಒಳಪಡಿಸಲು ಅಗತ್ಯ ಸಹಕಾರ ನೀಡಬೇಕು. ಈ ಸಂಬಂಧ ಯಾವುದೇ ಮಾಹಿತಿಯನ್ನು ashwathcn@gmail.com ಗೆ ಇ-ಮೇಲ್ ಕೂಡ ಮಾಡಬಹುದು ಎಂದು ತಿಳಿಸಿದ್ದಾರೆ.

  • ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿ – ಬಾಗಿಲು ತಳ್ಳಿ ಲಸಿಕಾ ಕೇಂದ್ರಕ್ಕೆ ನುಗ್ಗಿದ ಜನ

    ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿ – ಬಾಗಿಲು ತಳ್ಳಿ ಲಸಿಕಾ ಕೇಂದ್ರಕ್ಕೆ ನುಗ್ಗಿದ ಜನ

    ಕಾರವಾರ: ರಾಜ್ಯಾದ್ಯಂತ ಕೊರೊನಾ ಲಸಿಕೆಯ ಅಭಾವ ಮಿತಿಮೀರಿದ್ದು ಗಡಿ ಜಿಲ್ಲೆ ಉತ್ತರ ಕನ್ನಡವನ್ನೂ ಬಿಟ್ಟಿಲ್ಲ. 15 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಇದುವರೆಗೆ 3,81000 ಜನ ಮೊದಲ ಹಂತದ ಲಸಿಕೆ ಪಡೆದಿದ್ದಾರೆ. 77000 ಜನ ಎರಡನೇ ಹಂತದ ಲಸಿಕೆ ಸಹ ನೀಡಲಾಗಿದೆ. ಆದರೆ ಇದೀಗ ರಾಜ್ಯ ಹಾಗೂ ಕೇಂದ್ರದಿಂದ ಬರಬೇಕಾದ ಪ್ರಮಾಣದಲ್ಲಿ ಲಸಿಕೆ ಬರುತ್ತಿಲ್ಲ.

    ಕಳೆದ ಮೂರು ದಿನದಿಂದ ಜಿಲ್ಲೆಯಲ್ಲಿ ಲಸಿಕೆ ಅಭಾವ ಸಹ ಆಗಿದ್ದು, ಜಿಲ್ಲಾಡಳಿತದಿಂದ ನಿಗದಿ ಮಾಡಿದವರನ್ನು ಹೊರತುಪಡಿಸಿ ಉಳಿದವರಗೆ ನೀಡುತ್ತಿಲ್ಲ. ಆದರೆ ನಿಗದಿ ಮಾಡಿದ ಜನರಿಗೂ ಇದೀಗ ಲಸಿಕೆ ಅಭಾವದ ಬಿಸಿ ತಟ್ಟಿದ್ದು ಇಂದು ಕಾರವಾರದಲ್ಲಿ ವ್ಯಾಕ್ಸಿನ್ ಖಾಲಿಯಾಗಿ ಜನ ವ್ಯಾಕ್ಸಿನ್ ಗಾಗಿ ತಳ್ಳಾಟ ನೂಕಾಟ ನಡೆಸಿದರು.

    ಇಂದು ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡುತಿದ್ದು, ಹೆಚ್ಚಿನ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಆಗಮಿಸಿದ್ದರು. ಆದರೆ ಲಸಿಕಾ ಕೇಂದ್ರದಲ್ಲಿ 150 ಡೋಸ್ ಮಾತ್ರ ಇದ್ದು ಐನೂರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಇದರಿಂದಾಗಿ ನೂಕು ನುಗ್ಗಾಟ ನಡೆದಿದ್ದು ಜನ ಲಸಿಕಾ ಕೇಂದ್ರದಲ್ಲಿ ಬಾಗಿಲು ಮುರಿದು ಒಳಬರಲು ಪ್ರಯತ್ನಿಸಿದರು. ಇದನ್ನೂ ಓದಿ: ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

    ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಿ ಸಮಾಧಾನಪಡಿಸಿ ಲಸಿಕೆಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ನಂತರ ಜನರು ಲಸಿಕಾ ಕೇಂದ್ರದಿಂದ ತೆರಳಿದರು. ಸದ್ಯ ಜಿಲ್ಲೆಗೆ ಬರಬೇಕಾದ ಲಸಿಕೆ ಕಳೆದ ಎರಡು ದಿನದಿಂದ ಜಿಲ್ಲೆಗೆ ಆಗಮಿಸಿಲ್ಲ. ಹೀಗಾಗಿ ಬಹುತೇಕ ಲಸಿಕಾ ಕೇಂದ್ರಗಳು ಮುಚ್ಚಿವೆ.

  • ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಲಸಿಕೆ ಕೊರತೆ- ಕೊಟ್ಟ ಮಾತು ಉಳಿಸ್ಕೊಳ್ಳುತ್ತಾರಾ ಬೊಮ್ಮಾಯಿ?

    ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಲಸಿಕೆ ಕೊರತೆ- ಕೊಟ್ಟ ಮಾತು ಉಳಿಸ್ಕೊಳ್ಳುತ್ತಾರಾ ಬೊಮ್ಮಾಯಿ?

    ಉಡುಪಿ: ಜಿಲ್ಲೆಗೆ ಪ್ರತಿದಿನ 10 ಸಾವಿರ ಡೋಸ್ ಲಸಿಕೆಯನ್ನು ರವಾನಿಸುವುದಾಗಿ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದ್ರೆ ಲಸಿಕೆ ಪೂರೈಕೆ ಸಮರ್ಪಕವಾಗಿ ಆಗುತ್ತಿದೆ. ಜಿಲ್ಲೆ ಈ ವಾರ ಸುಮಾರು 30 ಸಾವಿರ ಡೋಸೇಜ್ ನ ಕೊರತೆ ಅನುಭವಿಸುತ್ತಿದೆ.

    ಜಿಲ್ಲೆಗೆ ಪ್ರತಿದಿನ 10 ಸಾವಿರ ಲಸಿಕೆ ಬಂದರೂ ಅದನ್ನ ಒಂದೇ ದಿನದಲ್ಲಿ ಸಾರ್ವಜನಿಕರಿಗೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಜಿಲ್ಲೆಯ ಏಳು ತಾಲೂಕಿನಲ್ಲಿ ಲಸಿಕೆ ಅಭಿಯಾನವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆದ್ರೆ ಬೇಡಿಕೆ ಪೂರೈಸುವಲ್ಲಿ ಸರ್ಕಾರ ಹಿನ್ನಡೆ ಅನುಭವಿಸಿದೆ.

    ಉಡುಪಿ ಜಿಲ್ಲೆಯಲ್ಲಿ ಮೈನಸ್ 5 ಲಸಿಕೆ ನಷ್ಟ
    ಉಡುಪಿ ಜಿಲ್ಲೆಯಲ್ಲಿ ವೇಸ್ಟೇಜ್ -5 ಇದೆ. ಅಂದರೆ ಜಿಲ್ಲೆಯಲ್ಲಿ ಶೇಕಡಾ ಐದರಷ್ಟು ನಾವು ಲಸಿಕೆ ಹಂಚಿಕೆಯಲ್ಲಿ ಲಾಭ ಮಾಡಿದ್ದೇವೆ. ಒಂದು ವಯಲಿನ್ ಅಲ್ಲಾ ಡೋಸೇಜನ್ನು ಸಾರ್ವಜನಿಕರಿಗೆ ನೀಡಲು ನಾವು ಯಶಸ್ವಿಯಾಗಿದ್ದೇವೆ. ಯಾವುದೇ ವಯಲ್ ನಲ್ಲಿ ಲಸಿಕೆ ವೇಸ್ಟ್ ಮಾಡುತ್ತಿಲ್ಲ. 10 ಜನ ಸಿದ್ಧವಾಗಿದ್ದರೆ ಮಾತ್ರ ವಯಲ್ ಓಪನ್ ಮಾಡುತ್ತೇವೆ. ವೇಸ್ಟೇಜ್ ಕಡಿಮೆ ಮಾಡಿರುವ ಪೈಕಿ ರಾಜ್ಯದಲ್ಲೇ ನಾವು ಎರಡನೇ ಸ್ಥಾನದಲ್ಲಿದ್ದೇವೆ ವ್ಯಾಕ್ಸಿನೇಷನ್ ಮಾಡುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳ ಕಾಳಜಿಯಿಂದ ಇದು ಸಾಧ್ಯವಾಗಿದೆ ಎಂದು ಉಡುಪಿ ಜಿಲ್ಲಾ ಲಸಿಕಾಧಿಕಾರಿ ಡಾ.ರಾಮ್ ಹೇಳಿದರು.

    ಜಿಲ್ಲೆಯಲ್ಲಿ 10 ಲಕ್ಷ ಜನರಿಗೆ ವ್ಯಾಕ್ಸಿನೇಷನ್ ಮಾಡುವ ಗುರಿಯನ್ನು ಉಡುಪಿ ಜಿಲ್ಲಾಡಳಿತ ಹೊಂದಿದೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 5,34,160 ಡೋಸ್ ವ್ಯಾಕ್ಸಿನೇಶನ್ ಆಗಿದೆ. 18ರ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮೊದಲ ಡೋಸ್ ಪಡೆಯದ, ಎರಡನೇ ಡೋಸ್ ಡ್ಯೂ ಇರುವ ಎಲ್ಲಾ ಲೆಕ್ಕಾಚಾರವನ್ನು ತೆಗೆದುಕೊಂಡರೆ 2 ಲಕ್ಷ ಕೊರತೆ ಇದೆ ಎಂದರು. ಇದನ್ನೂ ಓದಿ: 15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್

    ಮೂರು ತಿಂಗಳಲ್ಲಿ 15 ಲಕ್ಷ ಲಸಿಕೆ ಬೇಡಿಕೆ
    ಮುಂದಿನ ಮೂರುವರೆ ತಿಂಗಳ ಒಳಗೆ 15 ಲಕ್ಷ ಡೋಸೇಜ್ ವ್ಯಾಕ್ಸಿನ್ ಜಿಲ್ಲೆಗೆ ಅಗತ್ಯವಿದೆ. ಕೊರೊನಾದ ಮೂರನೇಯ ಅಲೆ ಅಪ್ಪಳಿಸುವ ಮೊದಲು ಲಸಿಕೆ ಬಂದರೆ ಎಲ್ಲರನ್ನೂ ತಲುಪಲು ಸಾಧ್ಯವಿದೆ. ಇದನ್ನೂ ಓದಿ: ‘ಅ’ ಕಾರಕ್ಕೂ, ‘ಹ’ ಕಾರಕ್ಕೂ ವ್ಯತ್ಯಾಸ ತಿಳಿದುಕೊಳ್ಳಿ: ಅನಿತಾ ಭಟ್

  • ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸುಳ್ಳು ಹೇಳ್ತಿದೆ: ಸಿದ್ದರಾಮಯ್ಯ

    ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸುಳ್ಳು ಹೇಳ್ತಿದೆ: ಸಿದ್ದರಾಮಯ್ಯ

    ದಾವಣಗೆರೆ: ಜನರನ್ನು ಕೋವಿಡ್ ನಿಂದ ಕಾಪಾಡಬೇಕು ಎಂದರೆ ಸರಿಯಾದ ಸಮಯಕ್ಕೆ ಲಸಿಕೆ ನೀಡಬೇಕು. ಆದರೆ ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

    ನಗರದ ದುರ್ಗಾಂಬಿಕ ದೇವಸ್ಥಾನ ಬಳಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡುತ್ತಿದ್ದು, ಲಸಿಕಾ ಕೆಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಸರ್ಕಾರ ಮಾಡುವ ಕೆಲಸವನ್ನು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಮಾಡುತ್ತಿದ್ದು, ಅರ್ಹ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಕಾಲಕ್ಕೆ ಲಸಿಕೆ ನೀಡದ ಕಾರಣ ಈ ಕೆಲಸವನ್ನು ಶಾಮನೂರು ಶಿವಶಂಕರಪ್ಪ ಮಾಡುತ್ತಿದ್ದಾರೆ. ಸರ್ಕಾರದ ಬಳಿ ವ್ಯಾಕ್ಸಿನ್ ಇಲ್ಲ, ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮುಂದಿನ ಸಿಎಂ ಸಿದ್ದರಾಮಯ್ಯ
    ಜಿಲ್ಲೆಯ ಹರಿಹರ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅವರ ಪುತ್ರಿಯ ವಿವಾಹಕ್ಕೆ ಸಿದ್ದರಾಮಯ್ಯ ಆಗಮಿಸಿದ್ದು, ಈ ವೇಳೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾರ್ಯಕರ್ತರು ಕೂಗಿದ್ದಾರೆ.

    ಸಿದ್ದರಾಮಯ್ಯನವರು ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕಾರ್ಯಕರ್ತರು ಕೂಗಿದರು. ಶಾಸಕ ರಾಮಪ್ಪ ಅವರ ಮಗಳ ಮದುವೆಯಲ್ಲಿ ಸಾಮಾಜಿಕ ಅಂತರ ಮಾಯ ಆಗಿದ್ದು, ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಘೋಷಣೆ ಕೂಗಿದರು. ಜನ ಗುಂಪು ಸೇರಿದರು. ಅಲ್ಲದೆ ಮದುವೆಗೆ ಕೇವಲ 40 ಜನರಿಗೆ ಮಾತ್ರ ಅವಕಾಶ ಇದೆ. ಆದರೆ ಶಾಸಕರ ಮಗಳ ಮದುವೆಯಲ್ಲಿ ಹೆಚ್ಚು ಜನ ಸೇರಿದ್ದರು. ಈ ಮೂಲಕ ಜನಪ್ರತಿನಿಧಿಗಳೇ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ.