Tag: Corona Update

  • ರಾಜ್ಯದಲ್ಲಿ ಕೊರೊನಾ ಪ್ರಕರಣ ಇಳಿಮುಖ – ಇಂದು 1,568 ಮಂದಿಗೆ ಸೋಂಕು, 25 ಸಾವು

    ರಾಜ್ಯದಲ್ಲಿ ಕೊರೊನಾ ಪ್ರಕರಣ ಇಳಿಮುಖ – ಇಂದು 1,568 ಮಂದಿಗೆ ಸೋಂಕು, 25 ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಮತ್ತು ಮರಣ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಮುಖಗೊಂಡಿದೆ. ಇಂದು 1,568 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 25 ಮರಣ ಪ್ರಕರಣ ದಾಖಲಾಗಿದೆ.

    ಬೆಂಗಳೂರು ಗ್ರಾಮಾಂತರ ಹಾಗೂ ಗದಗ ಜಿಲ್ಲೆಯಲ್ಲಿ ತಲಾ 7 ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ಪಾಸಿಟಿವಿಟಿ ರೇಟ್ 2.25%ಕ್ಕೆ ಇಳಿಕೆ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 31,215ಕ್ಕೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಒಟ್ಟು 754 ಹೊಸ ಕೇಸ್ ಪತ್ತೆಯಾಗಿದ್ದು, 5 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ- 2 ಲಕ್ಷ ರೂ. ಖರ್ಚು ಮಾಡಿ ಬಾಡಿಗೆ ಬಿಟ್ಟ

    ರಾಜ್ಯದಲ್ಲಿ ಒಟ್ಟು 6,025 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,28,237 ಮಂದಿಗೆ ಕೊರೊನಾ ಬಂದಿದೆ. ಒಟ್ಟು 38,57,323 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.59% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 2,06,173 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 69,546 ಸ್ಯಾಂಪಲ್ (ಆರ್‌ಟಿಪಿಸಿಆರ್ 57,313 + 12,233 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 18, ಬಳ್ಳಾರಿ 50, ಬೆಳಗಾವಿ 63, ಬೆಂಗಳೂರು ಗ್ರಾಮಾಂತರ 7, ಬೆಂಗಳೂರು ನಗರ 754, ಬೀದರ್ 8, ಚಾಮರಾಜನಗರ 20, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 18, ಚಿತ್ರದುರ್ಗ 21, ದಕ್ಷಿಣ ಕನ್ನಡ 55, ದಾವಣಗೆರೆ 14, ಧಾರವಾಡ 20, ಗದಗ 7, ಹಾಸನ 37, ಹಾವೇರಿ 22, ಕಲಬುರಗಿ 28, ಕೊಡಗು 26, ಕೋಲಾರ 12, ಕೊಪ್ಪಳ 12, ಮಂಡ್ಯ 35, ಮೈಸೂರು 78, ರಾಯಚೂರು 15, ರಾಮನಗರ 26, ಶಿವಮೊಗ್ಗ 91, ತುಮಕೂರು 37, ಉಡುಪಿ 31, ಉತ್ತರ ಕನ್ನಡ 14, ವಿಜಯಪುರ 15 ಮತ್ತು ಯಾದಗಿರಿಯಲ್ಲಿ 10 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

  • 24 ಗಂಟೆಯಲ್ಲಿ ದೇಶದಲ್ಲಿ 388 ಮಂದಿಗೆ ಕೊರೊನಾ – ದಾಟಿತು1900ರ ಗಡಿ

    24 ಗಂಟೆಯಲ್ಲಿ ದೇಶದಲ್ಲಿ 388 ಮಂದಿಗೆ ಕೊರೊನಾ – ದಾಟಿತು1900ರ ಗಡಿ

    ನವದೆಹಲಿ: ಇಡೀ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೊನಾ ವೈಸರ್‍ಗೆ ಬಾಧಿತರಾಗುವವರ ಸಂಖ್ಯೆ ದೇಶದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 388 ಮಂದಿಗೆ ಸೋಂಕು ತಗುಲಿದ್ದು, ಆತಂಕ ಮೂಡಿಸಿದೆ.

    ಇವತ್ತೊಂದೇ ದಿನ ದೇಶದ ವಿವಿಧೆಡೆ 6 ಮಂದಿ ಬಲಿ ಆಗಿದ್ದಾರೆ. ಈ ಕ್ಷಣದವರೆಗೂ 55 ಮಂದಿ ಬಲಿಯಾಗಿ, 1900ಕ್ಕೂ ಹೆಚ್ಚು ಮಂದಿಗೆ ಸೋಂಕು ವ್ಯಾಪಿಸಿದೆ. ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರದಲ್ಲಿ ಸೋಂಕು ತೀವ್ರ ವೇಗದಲ್ಲಿ ಹರಡುತ್ತಿದೆ.

    ಕೇವಲ ಮಹಾರಾಷ್ಟ್ರ ಒಂದರಲ್ಲೇ 16 ಮಂದಿ ಕೊರೊನಾಗೆ ಬಲಿ ಆಗಿದ್ದಾರೆ. ಆಂಧ್ರದಲ್ಲಿ ಇವತ್ತೊಂದೇ ದಿನ 43 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ದೆಹಲಿಯ ಮರ್ಕಜ್ ಮಸೀದಿಗೆ ಭೇಟಿ ನೀಡಿ ಬಂದವರೇ ಹೆಚ್ಚಿದ್ದಾರೆ.

    ಒಟ್ಟು ಸೋಂಕಿತರ ಪೈಕಿ ಇದುವರೆಗೂ 151 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ, ಇರಾನ್‍ನಲ್ಲಿ ಸಿಲುಕಿರುವ 850 ಭಾರತೀಯರನ್ನು ವಾಪಸ್ ಕರೆತರುವ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    850 ಮಂದಿ ಪೈಕಿ 250 ಮಂದಿಗೆ ಕೊರೊನಾ ಪಾಸಿಟೀವ್ ಇದೆ ಎಂದು ಕೇಂದ್ರ, ಸುಪ್ರೀಂಕೋರ್ಟ್‍ಗೆ ಮಾಹಿತಿ ನೀಡಿದೆ. ಗುರುವಾರ ಪ್ರಧಾನಿ ಮೋದಿ, ಎಲ್ಲಾ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಪ್ರಧಾನಿಗಳ ಪರಿಹಾರ ನಿಧಿಗೆ ವಿಪ್ರೋ, 1125 ಕೋಟಿ ರೂ. ದೇಣಿಗೆ ನೀಡಿದೆ.

    ಮಹಾರಾಷ್ಟ್ರ 325, ಕೇರಳ 265, ತಮಿಳುನಾಡು 234, ದೆಹಲಿ 123, ಉತ್ತರ ಪ್ರದೇಶ 116, ರಾಜಸ್ಥಾನ 108, ಕರ್ನಾಟಕ 110 ಮಂದಿಗೆ ಕೊರೊನಾ ವೈರಸ್ ಬಂದಿದೆ.