ಬೆಂಗಳೂರು: ದಿನೇ ದಿನೇ ಕೊರೊನಾ ಪಾಸಿಟಿವ್ (Covid Positive) ದರ ದುಪ್ಪಟ್ಟು ಏರಿಕೆಯಾಗುತ್ತಿದ್ದು, ಇದೀಗ ಗಾಂಧಿನಗರದ (Gandhi Nagar) ಒಬ್ಬರಲ್ಲಿ ಕೊರೊನಾ (Corona) ಕಾಣಿಸಿಕೊಂಡಿದೆ.
ಗಾಂಧಿನಗರದ 46 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೋವಿಡ್ ಕಾಣಿಸಿಕೊಂಡಿದ್ದು, ಹೇಗೆ ಬಂತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದಾರೆ. ಸದ್ಯ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಕಾರಿನ ಮೇಲೆ ಬಿತ್ತು ಬೃಹತ್ ಮರ, ನಾಲ್ವರು ಪಾರು
ರಾಜ್ಯದಲ್ಲಿ ಇದೀಗ ಕೊರೊನಾ ಟೆಸ್ಟಿಂಗ್ ಆರಂಭಿಸಲಾಗಿದ್ದು, ದಿನಗಳೆದಂತೆ ಪಾಸಿಟಿವ್ ದರ ಜಾಸ್ತಿಯಾಗುತ್ತಲಿದೆ. ಸೋಮವಾರ 191 ಜನರಿಗೆ ಟೆಸ್ಟ್ ಮಾಡಲಾಗಿದ್ದು, 37 ಜನರಿಗೆ ಪಾಸಿಟಿವ್ ಆಗಿದೆ. ಜೊತೆಗೆ 171 ಜನರಿಗೆ RT-PCR ಟೆಸ್ಟ್ ಮಾಡಲಾಗಿದೆ.
ಮೇ 25ರಂದು ನಡೆಸಿದ ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ದರ 8.65% ಇತ್ತು. ಮೇ 26ರಂದು ನಡೆಸಿದ ಟೆಸ್ಟ್‌ನಲ್ಲಿ ಪಾಸಿಟಿವ್ ದರ 19.37%ಗೆ ಏರಿಕೆ ಆಗಿದೆ. ಇನ್ನೂ ಈ ಕುರಿತು ಸೋಮವಾರ ಸರ್ಕಾರ ನಡೆಸಿದ ಸಭೆಯಲ್ಲಿ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ ಎಂದಿದೆ. ಜೊತೆಗೆ ನಗರದ ಮಾಲ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಕುರಿತು ಇಂದು ತೀರ್ಮಾನಿಸುವ ಸಾಧ್ಯತೆಯಿದೆ.
ಬೆಂಗಳೂರು: ರಾಜ್ಯದಲ್ಲಿ 4ನೇ ಅಲೆ ಆತಂಕದ ಹೊತ್ತಲ್ಲಿ ಬಿಬಿಎಂಪಿ (BBMP) ಹೊಸ ಆಟ ಶುರು ಮಾಡಿದ್ಯಾ ಅನ್ನೋ ಅನುಮಾನ ಹೆಚ್ಚಾಗಿದೆ. ಬಿಎಫ್.7 ಕೊರೊನಾ ದೇಶಕ್ಕೆ ಕಾಲಿಡಬಹುದು ಅನ್ನೋ ಆತಂಕದ ಬೆನ್ನಲ್ಲೇ ಇದೀಗ ಬಿಬಿಎಂಪಿ ಜನರಿಗೆ ಕಿರಿಕಿರಿ ಮಾಡೋಕೆ ಹೊರಟಂತೆ ಕಾಣುತ್ತಿದೆ. ಕೊರೊನಾ ಟೆಸ್ಟ್ (Corona Test) ಮಾಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರೋಕೆ ಶುರುವಾಗಿದೆ. ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೊಬೈಲ್‍ಗೆ ಮೆಸೇಜ್‍ಗಳು ಬರುತ್ತಿರುವುದು ಬೆಳಕಿಗೆ ಬಂದಿದೆ.
ಹೌದು. ಬೆಂಗಳೂರಿನ ಪ್ರಜ್ವಲ್ ಎಂಬವರ ಮೊಬೈಲ್‍ಗೆ ಮೆಸೇಜ್‍ವೊಂದು ಬಂದಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಬರುವವರೆಗೂ ಹೋಂ ಐಸೋಲೇಟ್ ಆಗುವಂತೆ ಸೂಚಿಸಲಾಗಿದೆ. ಆದರೆ ಸ್ವಾಬ್ ಟೆಸ್ಟ್ ಗೆ ಕೊಡದಿದ್ದರೂ ಮೆಸೇಜ್ ಬಂದಿದ್ದೇಗೆ…? ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರಜ್ವಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರತಿನಿಧಿ: ನಿಮಗೇನಾದರೂ ತೊಂದರೆ ಇದ್ಯಾ…? ದೂರುದಾರ: ನಾನು ಆಫೀಸ್‍ನಲ್ಲಿದ್ದೇ ಒಂದು ಮೆಸೇಜ್ ಬಂತು. ಅದು ಟೆಸ್ಟ್‍ಗೆ ಕೊಟ್ಟಿರೋ ಮೆಸೇಜ್. ನಾನು ಯಾವುದೇ ಟೆಸ್ಟ್ ಗೆ ಕೊಟ್ಟಿಲ್ಲ. ನಾನು ಆಸ್ಪತ್ರೆಗೆ ಹೋಗಿಲ್ಲ. ಕೋವಿಡ್ ಮೆಸೇಜ್ ಬಂದಿದೆ. ನನಗೆ ಪಾಸಿಟಿವ್ ಅಂತ ಬಂದಿದೆ. ನನ್ನ ಮನೆ ಲಾಕ್‍ಡೌನ್ ಮಾಡಿದ್ರೆ ಇತರರಿಗೂ ತೊಂದರೆ ಆಗುತ್ತೆ. ನಾನು ಆರೋಗ್ಯವಾಗಿದ್ದರೂ, ಮೆಸೇಜ್ ಕ್ರಿಯೆಟ್ ಮಾಡಿ ಸರ್ಕಾರದವರು ದುಡ್ಡು ಮಾಡುತ್ತಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ
ಪ್ರತಿನಿಧಿ: ನೀವು ಟೆಸ್ಟ್ ಗೆ ಎಲ್ಲಿಯೂ ಹೋಗಿಯೇ ಇಲ್ವಾ…? ದೂರುದಾರ: ಕೋವಿಡ್ (COVID 19) ಸಂದರ್ಭದಲ್ಲಿ ಅಂದರೆ 8 ತಿಂಗಳ ಹಿಂದೆ ಮಾಡಿಸಿದ್ದು, ಅದು ಬಿಟ್ಟರೆ ಮತ್ತೆ ಮಾಡಿಸಿಲ್ಲ. ಹಿಂದೆ ನಾನು ಟೆಸ್ಟ್ ಗೆ ಹೋಗಿದ್ದ ವೇಳೆ ನಂಬರ್ ಇಟ್ಟುಕೊಂಡು ಈಗ ಮೆಸೇಜ್ ಕಳುಹಿಸುವ ಮೂಲಕ ಸ್ಕ್ಯಾಮ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿನಿಧಿ: ಓಕೆ…ಓಕೆ…
ಪ್ರಜ್ವಲ್‍ಗೆ ಟೆಸ್ಟ್ ಓಟಿಪಿ (Corona Test OTP) ಕೂಡ ಬಂದಿಲ್ಲ. ಆದರೂ ಹೋಂ ಐಸೋಲೇಟ್ ಆಗಿ ಅಂತ ಮೆಸೇಜ್ ಬಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ದೂರು ಕೊಡೋಕೆ ಕೂಡ ಪ್ರಜ್ವಲ್ ಮುಂದಾಗಿದ್ದಾರೆ. ಅಲ್ಲದೆ ಈ ಕುರಿತು ಸುಳಿವು ಕೂಡ ನೀಡಿದ್ದಾರೆ. ಒಟ್ಟಿನಲ್ಲಿ ಟೆಸ್ಟಿಂಗ್ ಟಾರ್ಗೆಟ್ ರೀಚ್ ಆಗಲು ಬಿಬಿಎಂಪಿ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರಾ…? ಅನ್ನೋ ಅನುಮಾನ ವ್ಯಕ್ತವಾಗಿದೆ. ಈ ರೀತಿಯಾಗಿದ್ರೆ ಜನರ ಜೀವ ಜೊತೆ ಚೆಲ್ಲಾಟವಾಡುತ್ತಿರೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಹಣ ಕೊಟ್ಟರೆ ಕೊರೊನಾ ನೆಗೆಟಿವ್ ರಿಪೋರ್ಟ್ ನಿಮ್ಮ ಕೈಗೆ ಸಿಗುತ್ತೆ ಎಂಬ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಮಾಡಿದ ಬೆನ್ನಲ್ಲೇ ಮೂವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಆಶಾ ವರ್ಕರ್, ಸ್ಟಾಫ್ ನರ್ಸ್, ಸ್ವಾಬ್ ಕಲೆಕ್ಟರ್ ಹುದ್ದೆಯಿಂದ ವಜಾ ಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮೂವರ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಕೊರೊನಾ ರಿಪೋರ್ಟ್ ನೆಗೆಟಿವ್ ಸ್ಟಿಂಗ್ ಆಪರೇಷನ್ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ಮೊದಲು ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಬ್ಲಿಕ್ ಟಿವಿ ಸ್ಟಿಂಗ್ ನೋಡಿ ವೈದ್ಯನಾಗಿ ನನಗೆ ನೋವಾಗಿದೆ. ಕೆಳಹಂತದ ಆರೋಗ್ಯ ಇಲಾಖೆ ಅಧಿಕಾರಿಗಳು ಇಂತಹ ಕೆಲಸ ಮಾಡಿರೋದು ನೋವಾಗಿದೆ. ತಕ್ಷಣ ಬಿಬಿಎಂಪಿ ಆಯುಕ್ತರ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಜಂಟಿ ಆಯುಕ್ತರು ಸ್ಥಳದಲ್ಲಿ ಈಗಾಗಲೇ ಇದ್ದಾರೆ. ಘಟನೆಯ ಸಂಪೂರ್ಣ ವಿವರ ತೆಗೆದುಕೊಂಡು ತಕ್ಷಣ ಕ್ರಮ ತೆಗೆದುಕೊಳ್ತೀನಿ. ಪಬ್ಲಿಕ್ ಟಿವಿ ಅಭಿಯಾನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಬಿಎಂಪಿ ಜಂಟಿ ಆಯುಕ್ತರು ಹಾಗೂ ಆರೋಗ್ಯ ಅಧಿಕಾರಿಗಳ ತಂಡ ಬೆಂಗಳೂರಿನ ಪೊಬ್ಬತ್ತಿ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋವಿಡ್ ಟೆಸ್ಟಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿರುವ ಆಶಾ ಕಾರ್ಯಕರ್ತೆ ಹಾಗೂ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. (1/2)
ಕೆಳ ಹಂತದ ನ್ಯೂನತೆ ಎತ್ತಿ ತೋರಿಸಿ ಕಣ್ಣು ತೆರೆಸುವ ಕೆಲಸ ಪಬ್ಲಿಕ್ ಟಿವಿ ಮಾಡಿದೆ. ಮುಂದೆ ಇಂತಹ ಘಟನೆ ಆಗದಂತೆ ಕಠಿಣ ಕಾನೂನು ಜಾರಿಗೆ ತರುತ್ತೇವೆ. ತಪಿತಸ್ಥರ ವಿರುದ್ದ ತಕ್ಷಣವೇ ಶಿಷ್ಟಾಚಾರದ ಅಡಿಯಲ್ಲಿ ಕ್ರಮ ತೆಗೆದುಕೊಳ್ತೀವಿ. ಇದೊಂದು ಅಮಾನವೀಯ, ಅನೈತಿಕ, ಕಾನೂನುಬಾಹಿರ ಕೆಲಸ. ಚಿಕಿತ್ಸೆ ಕೊಡೋ ಆರೋಗ್ಯ ಸಿಬ್ಬಂದಿ ಹೀಗೆ ತಪ್ಪು ಮಾಡಿದ್ರೆ ಅಮಾಯಕ ಜನರ ಜೀವಕ್ಕೆ ಸಮಸ್ಯೆ ಆಗುತ್ತೆ. ನೆಗೆಟೀವ್ ಅಂತ ಹೋಗಿ ಅವ್ರು ಬೇರೆ ಅವ್ರಿಗೆ ಹರಡಿ ಜೀವಕ್ಕೆ ಅಪಾರ ಆದ್ರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.
ಅಕ್ರಮ ಎಸಗುತ್ತಿದ್ದ ಸಿಬ್ಬಂದಿಗಳ ವಿರುಧ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದ್ದು ಶೀಘ್ರವೇ FIR ದಾಖಲಿಸಲಾಗುವುದು. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ನ ಅನ್ನು ಈ ಕೂಡಲೇ ವಜಾಗೊಳಿಸಲು ಆದೇಶಿಸಲಾಗಿದೆ. ಈ ಅಕ್ರಮವನ್ನು ಬಯಲಿಗೆ ತಂದ @publictvnews ಸಂಸ್ಥೆಗೆ ಅಭಿನಂದನೆಗಳು. (2/2)
ವೈದ್ಯಕೀಯ ಕೆಲಸ ಮಾಡೋಕೆ ಹೃದಯ ಪೂರ್ವಕವಾಗಿ ಸೇರಿರುತ್ತೇವೆ. ಹೀಗೆ ಅನೈತಿಕವಾಗಿ ಹಣ ಮಾಡೋದು ವೈದ್ಯಕೀಯ ಜಗತ್ತಿಗೆ, ವೃತ್ತಿಗೆ ಅವಮಾನ ಮಾಡಿದ ಹಾಗೆ ಆಗಿದೆ. ಇವರ ಕೆಲಸದಿಂದ ನಾವು ತಲೆ ತಗ್ಗಿಸುವಂತೆ ಆಗಿದೆ. ಮುಂದೆ ಹೀಗೆ ಆಗದಂತೆ ಅಗತ್ಯ ಕ್ರಮವಹಿಸುತ್ತೇನೆ ಎಂದು ಭರವಸೆ ನಿಡಿದರು. ಇದನ್ನೂ ಓದಿ: ಕಾಸು ಕೊಟ್ರೆ ಸಿಗುತ್ತೆ ಕೋವಿಡ್ ನೆಗೆಟಿವ್ ರಿಪೋರ್ಟ್- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು
ಪಬ್ಲಿಕ್ ಟಿವಿ ವರದಿ ಪ್ರಸಾರ ಆಗ್ತಿದ್ದಂತೆ ದಕ್ಷಿಣ ವಿಭಾಗದ ಜಂಟಿ ಆಯುಕ್ತ ವೀರಭದ್ರಯ್ಯ ಅವರು ಪೂಬ್ಬತಿ ಹೆರಿಗೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ವೇಳೆ ನರ್ಸ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡ ಅವರು ಯಾರಿದ್ದಾರೆ ಡಾಕ್ಟರ್ಸ್, ನರ್ಸ್ ಕರಿಯಿರಿ ಬೇಗ ಕಿಡಿಕಾರಿದ್ದಾರೆ. ನಂತರ ಅವರು ಗಂಟಲು ದ್ರವ ಸಂಗ್ರಹದ ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಆದರೆ ಈ ವೇಳೆ ಜಂಟಿ ಆಯುಕ್ತ ಕೇಳಿದ ಗಂಟಲು ದ್ರವದ ದಾಖಲೆಗಳೇ ಆಸ್ಪತ್ರೆಯಲ್ಲಿ ಇಲ್ಲ. ಅಲ್ಲದೆ ಜಂಟಿ ಆಯುಕ್ತರು ಭೇಟಿ ವೇಳೆ ಆಶಾ ವರ್ಕರ್, ಸ್ವಾಬ್ ಕಲೆಕ್ಟರ್ ಬಂದಿರಲಿಲ್ಲ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೀರಭದ್ರಯ್ಯ, ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲು 4 ಜನರ ವೈದ್ಯಾಧಿಕಾರಿಗಳ ತಂಡ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವಗುಪ್ತಾ ಮಾತನಾಡಿ, ನಾನು ಇದನ್ನ ತನಿಖೆ ಮಾಡಿಸುತ್ತೇನೆ. ಕೆಳ ಹಂತದ ಹುದ್ದೆಯಲ್ಲಿ ಇರೋರು ಈ ರೀತಿ ಕೆಲಸ ಮಾಡೋದು ಸರಿ ಇಲ್ಲ. ಮಾಹಿತಿ ತೆಗೆದುಕೊಂಡು ತನಿಖೆ ಮಾಡಿಸುತ್ತೇನೆ ಎಂದರು.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಕೊರೊನಾದ ಕರಾಳ ದಂಧೆಯನ್ನ ಪಬ್ಲಿಕ್ ಟಿವಿ ಸ್ಟಿಂಗ್ ತಂಡ ಬಯಲಿಗೆಳೆದಿದೆ.
ಕೊರೊನಾ ಹೆಸರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿದ್ದು, ವಾರಿಯರ್ಸ್ ದಿನಕ್ಕೆ ಸಾವಿರ ಸಾವಿರ ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೋವಿಡ್ ಟೆಸ್ಟಿಂಗ್ ಟಾರ್ಚರ್ ಗೆ ಕೊರೊನಾ ವಾರಿಯರ್ಸ್ ಕಳ್ಳದಾರಿ ಹಿಡಿರುವ ಅಸಲಿ ಮುಖ ಬಯಲಾಗಿದೆ.
ಕೈಗೆ ಕಾಸು ಕೊಟ್ಟರೆ ಸಾಕು, ಕೋವಿಡ್ ನೆಗಟಿವ್ ರಿಪೋರ್ಟ್ ನಿಮಗೆ ಸಿಗುತ್ತೆ. ಸ್ವಾಬ್ ಕಲೆಕ್ಟ್ ಮಾಡಿಕೊಳ್ಳದೇ, ಟ್ಯೂಬ್ ನಲ್ಲಿ ನೀರು ಹಾಕಿ ಸ್ಯಾಂಪಲ್ಸ್ ನ್ನು ಲ್ಯಾಬ್ ಗೆ ಕಳುಹಿಸುತ್ತಾರೆ. ಜಸ್ಟ್ ಮೊಬೈಲ್ ನಂಬರ್, ಓಟಿಪಿ ನಂಬರ್ ಕೊಟ್ರೆ ಸಾಕು ನೀವಿದ್ದಲ್ಲಿಗೆ ಕೋವಿಡ್ ರಿಪೋರ್ಟ್ ಬರುತ್ತೆ. ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಆಗೋಕೆ ಈ ಡರ್ಟಿ ಬ್ಯುಸಿನೆಸ್ಸೇ ಪ್ರಮುಖ ಕಾರಣವಾಗಿದೆ.
ವಾರ್ಡ್ 143, ವಿ ವಿ ಪುರಂನ, ಪೂಬತಿ ಹೆರಿಗೆ ಆಸ್ಪತ್ರೆಯಲ್ಲಿ ಡರ್ಟಿ ಬ್ಯುಸಿನೆಸ್ ನಡೆಯುತ್ತಿದೆ. ಒಂದೇ ನಂಬರ್ ಮೇಲೆ ನಾಲ್ಕೈದು ಐಡಿ ಕ್ರಿಯೆಟ್ ಮಾಡಿ ರಿಪೋರ್ಟ್ ಕೊಡುತ್ತಾರೆ. ಪೂಬತಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಗೊತ್ತಾಗದೇ ಈ ಕೊರೊನಾ ಧಂದೆ ನಡೆಯುತ್ತಿದೆ. ಗಂಟಲು ದ್ರವವನ್ನ ತೆಗದುಕೊಳ್ಳದೇ ಈ ಖತರ್ನಾಕ್ ಟೀಂ ರಿಸಲ್ಟ್ ಕೊಡುತ್ತೆ. ಒಬ್ಬೊಬ್ಬರಿಂದ 1,000-1,500 ರೂಪಾಯಿ ಹಣ ವಸೂಲಿ ಮಾಡುತ್ತದೆ. ಈ ಹಿಂದೆ ಬನಶಂಕರಿಯಲ್ಲಿ ಬಿಬಿಎಂಪಿ ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳದೇ ರಿಸಲ್ಟ್ ಕೊಟ್ಟಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ನಿರಂತರ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕವೂ ತನ್ನ ತಪ್ಪನ್ನ ಮುಚ್ಚಿಟ್ಟುಕೊಳ್ಳಲು ಬಿಬಿಎಂಪಿ ಯತ್ನಿಸಿತ್ತು.
ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳವಾಗಿದೆ. ಕೈಗೆ ಹಣ ಕೊಟ್ರೆ ಎಷ್ಟು ಜನರಿಗಾದ್ರೂ ನೆಗಟಿವ್ ರಿಪೋರ್ಟ್ ಕೊಡುವ ಜಾಲದ ಬಗ್ಗೆ ಪಬ್ಲಿಕ್ ಟಿವಿ ಸ್ಟಿಂಗ್ ತಂಡಕ್ಕೆ ಒಬ್ಬರು ಕರೆ ಮಾಡಿ ಅಕ್ರಮದ ಬಗ್ಗೆ ಮಾಹಿತಿ ಕೊಡ್ತಾರೆ. ಕೂಡಲೇ ಅಲರ್ಟ್ ಆದ ತಂಡ ಸ್ಪಾಟ್ ಗೆ ಲಗ್ಗೆ ಇಟ್ಟಿತು. ನಮ್ಗೆನು ಗೊತ್ತಿಲ್ಲದವ್ರಂತೆ ರಿಪೋರ್ಟ್ ಕೇಳಿದ್ವಿ ಅಷ್ಟೆ. ಸ್ವಲ್ಪ ವೇಟ್ ಮಾಡಿ, ಎಷ್ಟು ಜನ್ರಿದ್ದಾರೆ ಅಂತ ಮಾತಿಗಿಳಿದ್ರು. ನಮ್ಮ ಸ್ಟಿಂಗ್ ತಂಡದ ಜೊತೆ ಇಬ್ಬರು ಮಹಿಳೆಯರು ಮಾತಿಗಿಳಿದಾಗ ಕೊರೊನಾ ರಿಪೋರ್ಟ್ ನ ಕರಾಳ ಸತ್ಯ ಅನಾವರಣವಾಯ್ತು. ಅಲ್ಲಿ ಕೊರೊನಾ ದಂಧೆ ಹೇಗೆ ನಡೆಯುತ್ತೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.
ಆಶಾ ಕಾರ್ಯಕರ್ತೆ: ಎರಡೂವರೆ ಸಾವಿರ.. ಪಬ್ಲಿಕ್ ಟಿವಿ: ಇನ್ನೂ ಐದಾರು ಜನ ಇದ್ದಾರೆ.. ಆಶಾ ಕಾರ್ಯಕರ್ತೆ : ಅವ್ರಿಗೆಲ್ಲಾ ಜಾಸ್ತಿ ಹೇಳಬೇಕು. 1 ಸಾವಿರ ಹೇಳಬೇಕು ಪಬ್ಲಿಕ್ ಟಿವಿ: ನಾಲ್ವರಿಗಂದ್ರೂ ಎರಡೂವರೆ ಸಾವಿರ ಹೆಚ್ಚಾಯ್ತು ಆಶಾ ಕಾರ್ಯಕರ್ತೆ : ಜಾಸ್ತಿಯಾಯ್ತಾ. 1ವರೆ ಸಾವಿರ ಒಬ್ರಿಗೆ ತೊಗೊಳೋದು ಗೊತ್ತಾ ನಿಮ್ಗೆ. ನಾನು ನಿಮ್ಗೊಸ್ಕರ ಕಡಿಮೆ ಮಾಡಿದೇನೆ. ಪಬ್ಲಿಕ್ ಟಿವಿ: ನೆಕ್ಸ್ಟ್ ಇನ್ನೂ ಹುಡುಗ್ರುನಾ ಕರ್ಕೊಂಡು ಬರ್ತೇನೆ ಮೇಡಂ. ಆಶಾ ಕಾರ್ಯಕರ್ತೆ: ಆದ್ರೆ ಅಲ್ಲಿ ಬಂದು ಬರೆಸಿ ಬಿಡಬೇಕು ನೀನು. ನನಗೆ ಯಾರಾದಾದ್ರೂ ಒಂದು ನಂಬರ್ ಕೊಡಿ. ಬರೆಸಿದ ಮೇಲೆ ನಿಂತ್ಕೊಳ್ದೆ ಇಲ್ಲಿಗೆ ಕಳಿಸಬೇಕು.. ಬೇಜಾರಿಲ್ಲ ತಾನೆ ಪಬ್ಲಿಕ್ ಟಿವಿ: ನಮಗೆ ಯಾಕೆ ಬೇಜಾರು ಆಶಾ ಕಾರ್ಯಕರ್ತೆ: ಈಗ ನಾನು ಎಂಟ್ರಿ ಮಾಡ್ತೇನೆ. ನಿಮ್ ಮೊಬೈಲ್ ಗೆ ಮೆಸೇಜ್ ಬರುತ್ತೆ. ನೀವು ಹೊರಡಿ.. ಹೊರಡಿ..ಇಲ್ಲಿ ಇರ್ಬೇಡಿ..
ಹೀಗೆ ಗೊತ್ತಾಗದಂತೆ ಅದೇಗೆ ಹಣವನ್ನ ಲಪಟಾಯಿಸುತ್ತಿದ್ದಾರೆ. ಹಣ ಕೊಡೊದಿಕ್ಕಿಂತ ಮುಂಚೆ ತಂಡ ಈ ಆಶಾ ವರ್ಕರ್ ಹಾಗೂ ನರ್ಸ್ ಜೊತೆ ಮಾತಿಗಿಳಿದಾಗ ತಮ್ಮ ಇಲ್ಲಿಗಲ್ ಬ್ಯುಸಿನೆಸ್ ಬಗ್ಗೆ ಬಾಯ್ಬಿಟ್ರು. ಫೋನ್ ನಂಬರ್ ಒಂದು ಕೊಡಿ ಅಷ್ಟೆ ಸಾಕು. ನಾವು ಹ್ಯಾಂಡಲ್ ಮಾಡ್ತೇವೆ ಅಂತ ಫೋನ್ ನಂಬರ್ ತೆಗೆದುಕೊಂಡ್ರು. ನಮ್ಮ ಅಸಲಿ ಹೆಸ್ರುಗಳನ್ನ ಬದಲಿಸಿ ಬೇರೆಯದ್ದೇ ಹೆಸರನ್ನು ಬರೆಸಿದ್ವಿ. ಒಂದೇ ಫೋನ್ ನಂಬರ್ನ ಮೇಲೆ ನಾಲ್ಕು ಜನ್ರಿಗೆ Sಖಈ ಐಡಿ ಜನರೇಟ್ ಮಾಡಿದ್ರು. ನಮ್ಮ ಸ್ಟಿಂಗ್ ತಂಡದ ಜೊತೆ ಏನೆಲ್ಲಾ ಮಾತನಾಡಿದ್ರು ಎಂಬುದನ್ನು ಈ ಕೆಳಗಿನ ವೀಡಿಯೋ ನೋಡಿ.
ಮಂಗಳೂರು: ಬಂಟ್ವಾಳದ ಮಾಣಿ ವಲಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಗು, ಗಂಟಲ ದ್ರವ ಸಂಗ್ರಹಿಸುವ ಉಪಕರಣವನ್ನು ದಾನವಾಗಿ ನೀಡಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆಯವರು ಉಪಕರಣವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್-19 ಜಗತ್ತನ್ನೇ ಬಾಧಿಸಿದ್ದು, ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವ ಉದ್ದೇಶದಿಂದ ಮಾಣಿ ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆಯ ಸಾಧನವನ್ನು ಕೊಡುಗೆಯಾಗಿ ನೀಡಿರುವುದು ಅಭಿನಂದನೀಯ ಎಂದರು.
ಮಾಣಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ದಾನಿಗಳು ಹಾಗೂ ಸಮಾನ ಮನಸ್ಕರ ಸಹಕಾರದೊಂದಿಗೆ ಮಾಣಿ ಸ್ಥಳೀಯ ಸಂಸ್ಥೆಯ ವತಿಯಿಂದ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿ ಎಂಬಂತೆ ನಮ್ಮ ಸ್ಕೌಟ್ಸ್ ಸಂಸ್ಥೆ ವತಿಯಿಂದ ಮೂಗು, ಗಂಟಲು ದ್ರವ ಪರೀಕ್ಷಾ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದೇವೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಒದಗಿಸಿದ್ದೇವೆ ಎಂದರು.
ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಕೊರೊನಾ ನಿಗ್ರಹಕ್ಕೆ ಆಸ್ಪತ್ರೆ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಸ್ಕೌಟ್ಸ್ ಸಂಸ್ಥೆ ವತಿಯಿಂದ ನಮ್ಮ ಆಸ್ಪತ್ರೆಗೆ ಕೊರೊನಾ ಟೆಸ್ಟ್ ಗೆ ಬಳಸುವ ಸಾಧನ ನೀಡಿರುವುದು ಹೆಚ್ಚು ಉಪಕಾರಿಯಾಗಿದೆ. ಇದಕ್ಕಾಗಿ ಹೆಚ್ಚು ಮುತುವರ್ಜಿ ವಹಿಸಿದ ಇಬ್ರಾಹಿಂ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಾಣಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಇಬ್ರಾಹಿಂ ಕೆ. ಮಾಣಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೈಸೂರು: ಟಿಎಚ್‍ಒ ಡಾ.ನಾಗೇಂದ್ರ ಆತ್ಮಹತ್ಯೆಯಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ಕೊರೊನಾ ಪರೀಕ್ಷೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ.
ಮೈಸೂರಿನ ನಂಜನಗೂಡು ಟಿಎಚ್‍ಒ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೂ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಶುಕ್ರವಾರದಿಂದಲೇ ಕೊರೊನಾ ಪರೀಕ್ಷೆ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಕೂಡ ಕೊರೊನಾ ಟೆಸ್ಟ್ ನಡೆಯುತ್ತಿಲ್ಲ. ಟೆಸ್ಟ್ ಮಾತ್ರವಲ್ಲ ಡಾಟಾ ಎಂಟ್ರಿ ಸಹ ನಡೆಯುತ್ತಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರದಿಂದ ರಾಜ್ಯಾದ್ಯಂತ ಕೊರೊನಾ ಟೆಸ್ಟ್ ಪ್ರಕ್ರಿಯೆ ನಿಲ್ಲುತ್ತದೆ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ಇದಿಂದಾಗಿ ಸೋಮವಾರದಿಂದ ರಾಜ್ಯದ ಪರಿಸ್ಥಿತಿ ಗಂಭೀರ ಎನ್ನುವಂತಾಗಿದ್ದು, ವೈದ್ಯರು ನಿಲು ಬದಲಿಸುತ್ತಾರಾ ಕಾದು ನೋಡಬೇಕಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವೈದ್ಯಕೀಯ ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ಕರ್ತವ್ಯಕ್ಕೆ ಹಾಜರಾಗಿ, ಇಂತಹ ತುರ್ತು ಪರಿಸ್ಥಿತಿಯಲ್ಲಿ ಹಠ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರ ಡಾ.ನಾಗೇಂದ್ರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಘೋಷಿಸಿದ್ದು, ಅವರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ಕೊಡಿಸುವುದಾಗಿ ಸಹ ಭರವಸೆ ನೀಡಲಾಗಿದೆ. ಅಲ್ಲದೆ ವೈದ್ಯರ ಕೆಲಸದ ಒತ್ತಡ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಸರ್ಕಾರ ತಿಳಿಸಿದೆ.
ನವದೆಹಲಿ: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳ ಪರೀಕ್ಷೆ ನಡೆಸುವ ಅಗತ್ಯವಿಲ್ಲ, ಸಂಪರ್ಕಿತ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದ್ದಲ್ಲಿ ಮಾತ್ರ ಮೂರು ದಿನಗಳ ಬಳಿಕ ಕೊರೊನಾ ಟೆಸ್ಟ್ ನಡೆಸಬೇಕು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.
ವಿಶ್ವಾದ್ಯಂತ ಮಹಾಮಾರಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಲೇ ಇವೆ. ಈ ಪೈಕಿ ಕೊರೊನಾ ಸೋಂಕು ಪರೀಕ್ಷೆ ಸಂಬಂಧ ಹೊಸ ಅಧ್ಯಯನ ವರದಿವೊಂದು ಪ್ರಕಟವಾಗಿದೆ. ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ಜನರಲ್ ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, RT – PCR ದತ್ತಾಂಶ ಆಧರಿಸಿ ಸಂಶೋಧನಾ ವರದಿ ಪ್ರಕಟಿಸಲಾಗಿದೆ.
ಈ ವರದಿ ಪ್ರಕಾರ, ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕೂಡಲೇ ಕೊರೊನಾ ಪರೀಕ್ಷೆ ನಡೆಸಬಾರದು, ಒಂದು ವೇಳೆ ಎಲ್ಲರಿಗೂ ಪರೀಕ್ಷೆ ನಡೆಸಿದರೆ ಬಹುತೇಕ ವರದಿಗಳು ನೆಗೆಟಿವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೋಂಕಿತ ಸಂಪರ್ಕದಲ್ಲಿದ್ದ ವ್ಯಕ್ತಿಗೆ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ಪರೀಕ್ಷೆ ನಡೆಸಬೇಕು ರೋಗದ ಲಕ್ಷಣಗಳು ಕಾಣಿಸಿಕೊಂಡ ಮೂರು ದಿನಗಳ ಬಳಿಕ ಕೊರೊನಾ ಟೆಸ್ಟ್ ಮಾಡುವುದು ಉತ್ತಮ ಇದರಿಂದ ನಿಖರವಾದ ರಿಸಲ್ಟ್ ಪಡೆಯಬಹುದು ಎಂದು ವರದಿಯಲ್ಲಿ ಹೇಳಿದೆ.
ಸೋಂಕು ಹರಡುವುದನ್ನು ತಡೆಯಲು ಕೊರೊನಾ ಪೀಡಿತ ವ್ಯಕ್ತಿಯ ಸಂಪರ್ಕದಲ್ಲಿರಯವ ಎಲ್ಲರನ್ನೂ ಕೂಡಲೇ ಪರೀಕ್ಷೆಗೆ ಒಳಪಡಿಸುವುದು ಸರಿಯಾದ ಕ್ರಮ ಅಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹಾಸನ: ಕೊರೊನಾ ವಿಚಾರದಲ್ಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮೊದಲ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಎರಡನೇ ಬಾರಿ ಪರೀಕ್ಷೆ ನಡೆಸಿದಾಗ 10 ಜನರಿಗೆ ಪಾಸಿಟಿವ್ ಬಂದಿದೆ.
ಶುಕ್ರವಾರ ಸಂಜೆಯಿಂದ ಇಂದು ಬೆಳಗ್ಗೆವರೆಗೆ ಒಟ್ಟು 17 ಜನರಿಗೆ ಪಾಸಿಟಿವ್ ಕಂಡು ಬಂದಿದ್ದು, ಇದರಲ್ಲಿ 10 ಜನರಿಗೆ ಎರಡನೇ ಬಾರಿಗೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಇಂದು ಒಟ್ಟು 13 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದುವರೆಗೂ ಕಂಡು ಬಂದ ಒಟ್ಟು ಸೋಂಕಿತರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. 157 ಜನರಲ್ಲಿ ಈಗಾಗಲೇ 30 ಜನ ಕೊರೊನಾದಿಂದ ಗುಣಮುಖವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 127ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಒಟ್ಟು 9 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಬಳ್ಳಾರಿ: ಮಂಡ್ಯ ಜಿಲ್ಲೆಯ ಜೆಡಿಎಸ್ ವಿಧಾನ ಪರಿಷತ್‍ನ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು. ಅದು ಬಿಟ್ಟು ತಮ್ಮ ದುಂಡಾವರ್ತನೆಯನ್ನು ತೋರಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪತ್ರಕರ್ತರಿಗೆ ಈ ಕೊರೊನಾ ತಪಾಸಣೆಯನ್ನು ಆಯೋಜಿಸಲಾಗಿತ್ತು. ಆದರೆ ಎಂಎಲ್‍ಸಿ ಶ್ರೀಕಂಠೇಗೌಡರು ತಮ್ಮ ಪುತ್ರ ಕೃಷಿಕ್ ಗೌಡನನ್ನು ಎತ್ತಿಕಟ್ಟಿ ತಮ್ಮ ದುಂಡಾವರ್ತನೆಯನ್ನು ಪ್ರದರ್ಶಿಸಿದ್ದಾರೆ. ಶ್ರೀಕಂಠೇಗೌಡರು ಹಿರಿಯರು ಜೊತೆಗೆ ಅನುಭವಿ ರಾಜಕಾರಣಿ. ಈ ರೀತಿ ಬೀದಿಗಿಳಿದು ಜಗಳ ಮಾಡ ಬಾರದಿತ್ತು. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದರು.
ಇನ್ಮುಂದೆ ಯಾವುದೇ ರೀತಿಯ ದುರ್ಘಟನೆ ಆಗಬಾರದೆಂದು ಮನವಿ ಮಾಡುತ್ತೇನೆ. ಅವರ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಪಾದರಾಯನಪುರ ಸೇರಿದಂತೆ ನಾನಾ ಕಡೆ ಈ ರೀತಿಯ ಘಟನೆ ನಡೆದಿದೆ. ಇದು ರಿಪೀಟ್ ಆಗಬಾರದು. ಪತ್ರಕರ್ತರ ಮೇಲೆ ನಾನಾ ಕಡೆ ಹಲ್ಲೆಯಾಗುತ್ತಿವೆ. ಪತ್ರಕರ್ತರು ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಮತ್ತು ಅವರ ಕುಟುಂಬದ ರಕ್ಷಣೆ ನಮ್ಮ ಸರ್ಕಾರದ ಹೊಣೆ. ಹಾಗಾಗಿ ಪತ್ರಕರ್ತರಿಗೆ ಕೋವಿಡ್-19 ಚೆಕಪ್ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.
ಕೊರೊನಾ ವೈರಸ್‍ನ ಶಂಕಿತರು ಬಳ್ಳಾರಿ ಸೇರಿದಂತೆ ನಾನಾ ಕಡೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ಲಾಸ್ಮಾ ಥೆರಪಿ ನಾಳೆಯಿಂದ ಅಧಿಕೃತವಾಗಿ ಆರಂಭವಾಗಲಿದೆ. ಪ್ಲಾಸ್ಮಾ ಥೆರಪಿಗೆ ರಕ್ತದಾನ ಮಾಡಲು ಗುಣಮುಖರಾದವರು ಮುಂದೆ ಬರಬೇಕು. ರಾಜ್ಯದ ನಂಜನಗೂಡು, ಮೈಸೂರಿನಲ್ಲಿ ಹೆಚ್ಚು ಪ್ರಕರಣ ಬಂದಿವೆ. ಜ್ಯೂಬಿಲಿಯೆಂಟ್ ಕಾರ್ಖಾನೆ ಪಾಸಿಟಿವ್ ಮೂಲ ಯಾವುದೆಂದು ಇದುವರೆಗೆ ಗೊತ್ತಾಗಿಲ್ಲ. ಹೀಗಾಗಿ ಈ ಬಗ್ಗೆ ನಾಳೆ ನಡೆಯಲಿರುವ ಪ್ರಧಾನಿ ಮೋದಿಯವರ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಗಮನಕ್ಕೆ ತರುವುದಾಗಿ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುವವರಿಗೆ ಸಮಸ್ಯೆಯಾಗಿದೆ ಎಂದಿದ್ದರು. ನನ್ನ ಗಮನಕ್ಕೆ ಬಂದ ನಂತರ ನಾನು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದೇನೆ. ಡೆಂಗ್ಯೂ ಜ್ವರ, ಹೃದಯ ಸಂಬಂಧಿ ಕಾಯಿಲೆಯ ಸಮಸ್ಯೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.