Tag: Corona Report

  • 1,630 ಪಾಸಿಟಿವ್, 19 ಸಾವು – 1,333 ಡಿಸ್ಚಾರ್ಜ್

    1,630 ಪಾಸಿಟಿವ್, 19 ಸಾವು – 1,333 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 1,630 ಮಂದಿಗೆ ಸೋಂಕು ತಗುಲಿದ್ದು, 1,333 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 19 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,78,055ಕ್ಕೆ ಏರಿಕೆಯಾಗಿದೆ. ಈ ಪೈಕಿ 8,41,432 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,890 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,714 ಮಂದಿ ಸೋಂಕಿಗೆ ಮೃತಪಟ್ಟಿದ್ದು, 405 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 19,974 ಆಂಟಿಜನ್ ಟೆಸ್ಟ್, 1,02,480 ಆರ್.ಟಿ.ಪಿ.ಸಿ.ಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,22,454 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,05,70,159 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 916 ಮಂದಿಗೆ ಸೋಂಕು ಬಂದಿದ್ದು, ಇಂದು 11 ಮಂದಿ ಮೃತಪಟ್ಟಿದ್ದಾರೆ. ಮೈಸೂರು 61, ತುಮಕೂರು 44, ಬೆಂಗಳೂರು ಗ್ರಾಮಾಂತರದಲ್ಲಿ 51 ಜನರಲ್ಲಿ ಸೋಂಕು ಪತ್ತೆಯಾದರೆ, ವಿಜಯಪುರ 19, ಕಲಬುರಗಿ 27, ಚಿತ್ರದುರ್ಗದಲ್ಲಿ 70 ಪ್ರಕರಣಗಳು ಪತ್ತೆಯಾಗಿವೆ.

    ಒಟ್ಟು 405 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 202, ತುಮಕೂರು 29, ಮೈಸೂರು 23, ಕಲಬುರಗಿ 12, ಬಳ್ಳಾರಿಯಲ್ಲಿ 10 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 1,870 ಪಾಸಿಟಿವ್, 17 ಸಾವು, 1,949 ಡಿಸ್ಚಾರ್ಜ್

    1,870 ಪಾಸಿಟಿವ್, 17 ಸಾವು, 1,949 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 1,870 ಮಂದಿಗೆ ಸೋಂಕು ತಗುಲಿದ್ದು, 1,949 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 17 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,76,425ಕ್ಕೆ ಏರಿಕೆಯಾಗಿದೆ. ಈ ಪೈಕಿ 8,40,099 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,612 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,695 ಮಂದಿ ಸೋಂಕಿಗೆ ಮೃತಪಟ್ಟಿದ್ದು, 418 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 21,879 ಆಂಟಿಜನ್ ಟೆಸ್ಟ್, 96,353 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,18,232 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,04,47,705 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 927 ಮಂದಿಗೆ ಸೋಂಕು ಬಂದಿದ್ದು, ಇಂದು 12 ಮಂದಿ ಮೃತಪಟ್ಟಿದ್ದಾರೆ. ಮೈಸೂರು 159, ತುಮಕೂರು 95, ಬೆಂಗಳೂರು ಗ್ರಾಮಾಂತರದಲ್ಲಿ 89 ಜನರಲ್ಲಿ ಸೋಂಕು ಪತ್ತೆಯಾದರೆ, ವಿಜಯಪುರ, ಕಲಬುರಗಿ, ಚಿತ್ರದುರ್ಗಗಳಲ್ಲಿ ತಲಾ 41 ಪ್ರಕರಣಗಳು ಪತ್ತೆಯಾಗಿವೆ.

    ಒಟ್ಟು 418 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 206, ತುಮಕೂರು 29, ಮೈಸೂರು 23, ಕಲಬುರಗಿ 15, ಬಳ್ಳಾರಿಯಲ್ಲಿ 10 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಇಂದು ಕೇವಲ 1,509 ಕೇಸ್, 1,645 ಡಿಸ್ಚಾರ್ಜ್, 24 ಸಾವು

    ಇಂದು ಕೇವಲ 1,509 ಕೇಸ್, 1,645 ಡಿಸ್ಚಾರ್ಜ್, 24 ಸಾವು

    ಬೆಂಗಳೂರು: ಇಂದು ರಾಜ್ಯದಲ್ಲಿ ಕೇವಲ 1,509 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1,645 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 24 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆಯಾಗಿದೆ. ಈ ಪೈಕಿ 8,38,150 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,708 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,678 ಮಂದಿ ಸೋಂಕಿಗೆ ಮೃತಪಟ್ಟಿದ್ದು, 438 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ 1,704 ಮಂದಿಗೆ ಸೋಂಕು ತಗುಲಿತ್ತು.

    ಇಂದು ಒಟ್ಟು 8,682 ಆಂಟಿಜನ್ ಟೆಸ್ಟ್, 87,413 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 96,095 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,03,29,473 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 725 ಮಂದಿಗೆ ಸೋಂಕು ಬಂದಿದ್ದು, ಇಂದು 10 ಮಂದಿ ಮೃತಪಟ್ಟಿದ್ದಾರೆ. ಮೈಸೂರು 104, ತುಮಕೂರು 89, ಮಂಡ್ಯ 58, ಕಲಬುರಗಿಯಲ್ಲಿ 56 ಜನರಲ್ಲಿ ಸೋಂಕು ಪತ್ತೆಯಾದರೆ, ಹಾಸನ 39, ಕೋಲಾರದಲ್ಲಿ 35 ಬೆಂಗಳೂರು ಗ್ರಾಮಾಂತರ ಹಾಗೂ ಬಳ್ಳಾರಿಯಲ್ಲಿ 34 ಹಾಗೂ ಉತ್ತರ ಕನ್ನಡದಲ್ಲಿ 30 ಮಂದಿಗೆ ಸೋಂಕು ಬಂದಿದೆ.

    ಒಟ್ಟು 438 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 213, ಮೈಸೂರು 26, ತುಮಕೂರು 29, ಕಲಬುರಗಿ 17, ಹಾಸನ 13, ಬಳ್ಳಾರಿಯಲ್ಲಿ 12 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 1,704 ಪಾಸಿಟಿವ್, 13 ಸಾವು, 1,537 ಡಿಸ್ಚಾರ್ಜ್

    1,704 ಪಾಸಿಟಿವ್, 13 ಸಾವು, 1,537 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 1,704 ಮಂದಿಗೆ ಸೋಂಕು ತಗುಲಿದ್ದು, 1,537 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,73,046ಕ್ಕೆ ಏರಿಕೆಯಾಗಿದೆ. ಈ ಪೈಕಿ 8,36,505 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,868 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,654 ಮಂದಿ ಸೋಂಕಿಗೆ ಮೃತಪಟ್ಟಿದ್ದು, 470 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 20,399 ಆಂಟಿಜನ್ ಟೆಸ್ಟ್, 1,06,505 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,26,904 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,02,33,378 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 1,039 ಮಂದಿಗೆ ಸೋಂಕು ಬಂದಿದ್ದು, ಇಂದು 10 ಮಂದಿ ಮೃತಪಟ್ಟಿದ್ದಾರೆ. ಮೈಸೂರು 100, ದಕ್ಷಿಣ ಕನ್ನಡದಲ್ಲಿ 46, ಹಾಸನ 44, ಬೆಂಗಳೂರು ಗ್ರಾಮಾಂತರದಲ್ಲಿ 41 ಜನರಲ್ಲಿ ಸೋಂಕು ಪತ್ತೆಯಾದರೆ, ರಾಯಚೂರು, ಬೆಳಗಾವಿ ಹಾಗೂ ಮಂಡ್ಯದಲ್ಲಿ ತಲಾ 32 ಮಂದಿಗೆ ಸೋಂಕು ಬಂದಿದೆ.

    ಒಟ್ಟು 470 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 237, ಮೈಸೂರು 27, ತುಮಕೂರು 29, ಕಲಬುರಗಿ 17, ಬಳ್ಳಾರಿಯಲ್ಲಿ 16 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 1,781 ಪಾಸಿಟಿವ್, 20 ಸಾವು, 1,799 ಡಿಸ್ಚಾರ್ಜ್

    1,781 ಪಾಸಿಟಿವ್, 20 ಸಾವು, 1,799 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 1,781 ಮಂದಿಗೆ ಸೋಂಕು ತಗುಲಿದ್ದು, 1,799 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 20 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,71,342ಕ್ಕೆ ಏರಿಕೆಯಾಗಿದೆ. ಈ ಪೈಕಿ 8,34,968 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,714 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,641 ಮಂದಿ ಸೋಂಕಿಗೆ ಮೃತಪಟ್ಟಿದ್ದು, 498 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 22,646 ಆಂಟಿಜನ್ ಟೆಸ್ಟ್, 1,02,691 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,25,337 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,01,06,474 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 972 ಮಂದಿಗೆ ಸೋಂಕು ಬಂದಿದ್ದು, ಇಂದು 10 ಮಂದಿ ಮೃತಪಟ್ಟಿದ್ದಾರೆ. ಮೈಸೂರು 124, ತುಮಕೂರು 92, ವಿಜಯಪುರ 63, ದಕ್ಷಿಣ ಕನ್ನಡದಲ್ಲಿ 46 ಜನರಲ್ಲಿ ಸೋಂಕು ಪತ್ತೆಯಾದರೆ, ಚಿಕ್ಕಬಳ್ಳಾಪುರ 38, ಬಳ್ಳಾರಿ 37, ಬೆಳಗಾವಿ 35, ಚಿತ್ರದುರ್ಗ 34, ಮಂಡ್ಯದಲ್ಲಿ 37 ಮಂದಿಗೆ ಸೋಂಕು ಬಂದಿದೆ.

    ಒಟ್ಟು 494 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 247, ಮೈಸೂರು 27, ತುಮಕೂರು 26, ಕಲಬುರಗಿಯಲ್ಲಿ 20 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

    ನೆಗೆಟಿವ್ ಬಂದ್ರು ಕನ್ನಡಿಗರಿಗಿಲ್ಲ ಅಯ್ಯಪ್ಪನ ದರ್ಶನ ಭಾಗ್ಯ

    – ಕೇರಳ ಪೊಲೀಸ ದೌರ್ಜನ್ಯಕ್ಕೆ ಕರ್ನಾಟಕ ಭಕ್ತರು ಕಂಗಾಲು

    ಬೆಂಗಳೂರು: ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮಾಲೆ ಧರಿಸಿ ತಮ್ಮ ಕಷ್ಟ ಕಾರ್ಪಣ್ಯವನ್ನು ನೀಗಿಸು ತಂದೆ ಎಂದು ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮಾಡುವ ಕನ್ನಡದ ಭಕ್ತರಿಗೆ ಕೊರೊನಾ ವಿಚಾರದಲ್ಲಿ ಸಮಸ್ಯೆ ಎದುರಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆಲ ಸ್ವಾಮಿ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರೆ. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ಜೊತೆಗೆ ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದು, ಅಲ್ಲಿನ ಡಾಕ್ಟರ್ ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.

  • 1,781 ಪಾಸಿಟಿವ್, 17 ಸಾವು, 2,181 ಡಿಸ್ಚಾರ್ಜ್

    1,781 ಪಾಸಿಟಿವ್, 17 ಸಾವು, 2,181 ಡಿಸ್ಚಾರ್ಜ್

    ಬೆಂಗಳೂರು: ಇಂದು ರಾಜ್ಯದಲ್ಲಿ 1,781 ಮಂದಿಗೆ ಸೋಂಕು ತಗುಲಿದ್ದು, 2,181 ಜನ ಆಸ್ಪ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 17 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,69,561ಕ್ಕೆ ಏರಿಕೆಯಾಗಿದೆ. ಈ ಪೈಕಿ 8,33,169 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,752 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,621 ಮಂದಿ ಸೋಂಕಿಗೆ ಮೃತಪಟ್ಟಿದ್ದು, 539 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 17,811 ಆಂಟಿಜನ್ ಟೆಸ್ಟ್, 1,03,801 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,21,612 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 99,81,137 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 1,067 ಮಂದಿಗೆ ಸೋಂಕು ಬಂದಿದ್ದು, ಇಂದು 6 ಮಂದಿ ಮೃತಪಟ್ಟಿದ್ದಾರೆ. ಮಂಡ್ಯ 66, ಬೆಂಗಳೂರು ಗ್ರಾಮಾಂತರ 66, ಬಳ್ಳಾರಿ 54, ತುಮಕೂರು 48, ಮೈಸೂರಿನಲ್ಲಿ 46 ಜನರಲ್ಲಿ ಸೋಮಕು ಪತ್ತೆಯಾದರೆ, ಬೆಳಗಾವಿ 38, ದಕ್ಷಿಣ ಕನ್ನಡ 36, ಉತ್ತರ ಕನ್ನಡದಲ್ಲಿ 33 ಮಂದಿಗೆ ಸೋಂಕು ಬಂದಿದೆ.

    ಒಟ್ಟು 539 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 279, ತುಮಕೂರು 28, ಕಲಬುರಗಿಯಲ್ಲಿ 23 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಆಸ್ಟ್ರೇಲಿಯಾ ಪ್ರವಾಸ – ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್

    ಆಸ್ಟ್ರೇಲಿಯಾ ಪ್ರವಾಸ – ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್

    ಸಿಡ್ನಿ: ಮೂರು ಮಾದರಿಯ ಸರಣಿಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ತೆರಳಿರುವ ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ಬಂದಿದ್ದು, ಎಲ್ಲ ಆಟಗಾರರ ರಿಪೋರ್ಟ್ ನೆಗೆಟಿವ್ ಬಂದಿದೆ.

    ಕಳೆದ ಎರಡು ತಿಂಗಳಿಂದ ಯುಎಇಯಲ್ಲಿ ನಡೆದ ಐಪಿಎಎಲ್-2020ಯಲ್ಲಿ ನಿರತರಾಗಿದ್ದ ಭಾರತದ ಆಟಗಾರರು, ವಾಪಸ್ ತವರಿಗೂ ಬಾರದೇ ಯುಎಇಯಿಂದಲೇ ಆಸ್ಟ್ರೇಲಿಯಾಕ್ಕೆ ಹಾರಿದ್ದರು. ಆಸ್ಟ್ರೇಲಿಯಾ ತಲುಪಿದ ಬಳಿಕ ಪ್ರತ್ಯೇಕ ರೂಮಿನಲ್ಲಿ ಕ್ವಾರಂಟೈನ್ ಕೂಡ ಆಗಿದ್ದರು. ಈಗ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದೆ.

    ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದೆ. ಜೊತೆಗೆ ಎರಡು ದಿನದ ಬಳಿಕ ಟೀಂ ಇಂಡಿಯಾ ಮೊದಲ ಹೊರಾಂಗಣ ಅಭ್ಯಾಸವನ್ನು ಆರಂಭ ಮಾಡಿದೆ ಎಂದು ಟ್ವೀಟ್ ಮಾಡಿ, ಆಟಗಾರರು ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ. ಜೊತೆಗೆ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಟ್ವೀಟ್ ಮಾಡಿ ಬ್ಯಾಕ್ ಟೂ ನ್ಯಾಷನಲ್ ಡ್ಯೂಟಿ ಎಂದು ಬರೆದುಕೊಂಡಿದ್ದಾರೆ.

    ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ. ಐಪಿಎಲ್ ಮುಗಿಯುವ ಮುನ್ನವೇ ಬಿಸಿಸಿಐ ಮೂರು ಮಾದರಿ ಕ್ರಿಕೆಟ್‍ಗೆ ತಂಡಗಳನ್ನು ಘೋಷಣೆ ಮಾಡಿತ್ತು.

  • ಎಲ್ಲರಿಗೂ ಹಬ್ಬಿಸಿ ಬಂದ್ಮೇಲೆ ಕೊರೊನಾ ರಿಪೋರ್ಟ್ ಕೊಡ್ತಾರೆ: ಶಿವಲಿಂಗೇಗೌಡ

    ಎಲ್ಲರಿಗೂ ಹಬ್ಬಿಸಿ ಬಂದ್ಮೇಲೆ ಕೊರೊನಾ ರಿಪೋರ್ಟ್ ಕೊಡ್ತಾರೆ: ಶಿವಲಿಂಗೇಗೌಡ

    – ರ‍್ಯಾಪಿಡ್‌  ಟೆಸ್ಟಿನಲ್ಲಿ ಪಾಸಿಟಿವ್, ಆರ್‌ಟಿಪಿಸಿಆರ್ ಟೆಸ್ಟಿನಲ್ಲಿ ನೆಗೆಟಿವ್
    – 300 ರೂ. ಕಿಟ್‍ನ, 2500 ರೂ.ಗೆ ಮಾರುತ್ತಾರೆ

    ಬೆಂಗಳೂರು: ಎಲ್ಲರಿಗೂ ಹಬ್ಬಿಸಿ ಬಂದ ಮೇಲೆ ಕೊರೊನಾ ರಿಪೋರ್ಟ್ ಕೊಡುತ್ತಾರೆ ಎಂದು ಶಾಸಕ ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

    ಇಂದು ಸದನದಲ್ಲಿ ಗುಡುಗಿದ ಶಿವಲಿಂಗೇಗೌಡರು, ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ಮೂರೂವರೆ ಲಕ್ಷ ವಸೂಲಿ ಮಾಡುತ್ತಾರೆ. ಸಚಿವರು ಆಸ್ಪತ್ರೆಗಳನ್ನು ಹೊಗಳಿಕೊಂಡಿದ್ದೇ ಹೊಗಳಿಕೊಂಡಿದ್ದು, ಏನ್ ಕಡಿದು ಕಟ್ಟೆ ಹಾಕಿದ್ರು ಅಂತ ಹೊಗಳಿದ್ದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

    300 ರೂ.ಗೆ ಕಿಟ್ ಸಿಗುತ್ತೆ, ಅದನ್ನು 2500 ರೂ.ಗೆ ಮಾರುತ್ತಾರೆ. ಯಾವ್ಯಾವ ಕಂಪನಿಯಿಂದ ನೀವು ಮೆಡಿಕಲ್ ಕಿಟ್ ಪಡೆದಿದ್ದೀರಾ? ಅದನ್ನು ಎಲ್ಲೆಲ್ಲಿಂದ ತಂದು ಕೊಡುತ್ತಾರೆ ನಿಮಗೆ ಗೊತ್ತಾ? ಆಕ್ಸಿಜನ್ ಹಾಕಿದರೆ ಮಧ್ಯಾಹ್ನಕ್ಕೆ ಮುಗಿಯುತ್ತೆ. ರಾತ್ರಿಹೊತ್ತಿಗೆ ಪೇಶೆಂಟ್ ಹೋಗಿಬಿಡುತ್ತಾನೆ. ಇದರಲ್ಲಿ ಏನೇನಾಗಿದೆ ದೇವರೇ ನೋಡಿಕೊಳ್ಳುತ್ತಾನೆ. ಅಂತವರಿಗೆ ದೊಡ್ಡ ರೋಗ ಬರುತ್ತೆ ಎಂದು ಶಿವಲಿಂಗೇಗೌಡ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

    ರ‍್ಯಾಪಿಡ್  ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಆರ್.ಟಿ.ಪಿ.ಸಿ.ಆರ್ ನಲ್ಲಿ ನೆಗೆಟಿವ್ ಬರುತ್ತೆ. ರಿಪೋರ್ಟ್ ಬರೋದು ಮೂರ್ನಾಲ್ಕು ದಿನ ಆಗುತ್ತೆ. ಅಲ್ಲಿ ತನಕ ಟೆಸ್ಟ್ ಮಾಡಿಸಿದವನು ಎಲ್ಲ ಕಡೆ ಸುತ್ತಾಡಿಕೊಂಡು ಎಲ್ಲರಿಗೂ ಸೋಂಕು ಅಂಟಿಸಿ ಹೋಗುತ್ತಾನೆ. ಇದೇನಾ ವ್ಯವಸ್ಥೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

  • ಇನ್ನು ಮುಂದೆ ನೀವೇ ಕೊರೊನಾ ಟೆಸ್ಟ್ ವರದಿ ಚೆಕ್ ಮಾಡಬಹುದು

    ಇನ್ನು ಮುಂದೆ ನೀವೇ ಕೊರೊನಾ ಟೆಸ್ಟ್ ವರದಿ ಚೆಕ್ ಮಾಡಬಹುದು

    ಬೆಂಗಳೂರು: ಇನ್ನು ಮುಂದೆ ಕೊರೊನಾ ಪರೀಕ್ಷೆ ಮಾಡಿದ ಬಳಿಕ ಫಲಿತಾಂಶಕ್ಕಾಗಿ ಆರೋಗ್ಯ ಇಲಾಖೆಯ ಮಾಹಿತಿಗಾಗಿ ಕಾಯುವ ಅಗತ್ಯವಿಲ್ಲ. ನೀವೇ ಮನೆಯಲ್ಲಿ ಕುಳಿತುಕೊಂಡು ಪರೀಕ್ಷಾ ವರದಿಯನ್ನು ಚೆಕ್ ಮಾಡಬಹುದು.

    ಎಸ್.ಆರ್.ಎಫ್ ಐಡಿಯಿಂದ ತಮ್ಮ ಮೊಬೈಲ್‍ನಲ್ಲೇ ಕೊರೊನಾ ವರದಿ ಪಡೆಯುವ ವ್ಯವಸ್ಥೆಯಲ್ಲಿ ಆರೋಗ್ಯ ಇಲಾಖೆ ಮಾಡಿದೆ.

    ಈ ಮುಂಚೆ ಕೊರೊನಾ ಪರೀಕ್ಷೆ ನಡೆದ ನಂತರ ವರದಿಗಾಗಿ ಅಧಿಕಾರಿಗಳ ಫೋನ್ ಕರೆಗೆ ಕಾಯಬೇಕಿತ್ತು ಅಥವಾ ಆರೋಗ್ಯ ಇಲಾಖೆ ಕಳುಹಿಸುವ ಸಂದೇಶವನ್ನು ನಿರೀಕ್ಷಿಸಬೇಕಿತ್ತು. ಆದರೆ ಈಗ ಪರೀಕ್ಷೆ ವೇಳೆ ನೀಡಿದ ಮೊಬೈಲ್ ನಂಬರ್ ಗೆ ಬರುವ ಎಸ್.ಆರ್.ಎಫ್ ಐಡಿಯನ್ನು ಆರೋಗ್ಯ ಇಲಾಖೆ ನೀಡಿದ ಪೋರ್ಟಲ್‍ಗೆ ಹೋಗಿ ನಮೂದಿಸಿದರೆ ಕ್ಷಣಾರ್ಧದಲ್ಲಿ ರಿಸಲ್ಟ್ ಗೊತ್ತಾಗುತ್ತೆ.

    https://www.covidwar.karnataka.gov.in/service1 ಈ ವೆಬ್‍ಸೈಟಿಗೆ ಹೋಗಿ ಅಲ್ಲಿ ನಿಮ್ಮ ಮೊಬೈಲ್‍ಗೆ ಬಂದಿರುವ ಎಸ್.ಆರ್.ಎಫ್ ಐಡಿ ಕೊಟ್ಟರೆ ನಿಮ್ಮ ಕೊರೊನಾ ವರದಿಯನ್ನು ನೀವು ನಿಮ್ಮ ಮೊಬೈಲ್‍ನಲ್ಲೇ ನೋಡಬಹುದು. ರಿಸಲ್ಟ್ ಪಾಸಿಟಿವ್ ಬಂದರೂ ಆತಂಕ ಪಡದೇ ಮನೆಯಲ್ಲೇ ಐಸೊಲೇಶನ್ ಆಗಬೇಕು. ನಂತರ ಆರೋಗ್ಯಾಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.