Tag: Corona Report

  • ಮೋದಿ ಯೋಗಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ- ಇಲ್ಲಿದೆ ಕಾರ್ಯಕ್ರಮದ ವಿವರ

    ಮೋದಿ ಯೋಗಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ- ಇಲ್ಲಿದೆ ಕಾರ್ಯಕ್ರಮದ ವಿವರ

    ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿದ್ಧತೆಗಳು ಬಿರುಸು ಪಡೆದು ಕೊಂಡಿವೆ. ಮೈಸೂರು ಅರಮನೆ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮದ ಮೊದಲ ಹಂತದ ರೂಪು ರೇಷೆಗಳು ಸಿದ್ಧವಾಗಿವೆ. ಈ ಮಧ್ಯೆ ಕಾರ್ಯದಲ್ಲಿ ಪಾಲ್ಗೊಳ್ಳುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

    ಹೌದು. ಮೈಸೂರು ಅರಮನೆ ಮುಂಭಾಗ ಜೂನ್ 21 ರಂದು ಪ್ರಧಾನ ಮಂತ್ರಿಗಳು ಯೋಗ ಮಾಡಲಿದ್ದಾರೆ. ಪ್ರಧಾನಿಗಳ ಜೊತೆ 15 ಸಾವಿರ ಜನ ಯೋಗ ಮಾಡಲಿದ್ದು ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ಅಂದು ಬೆಳಗ್ಗೆ 6.30 ಕ್ಕೆ ಯೋಗ ಆರಂಭವಾಗಲಿದೆ. ಒಟ್ಟು ಮುಕ್ಕಾಲು ಗಂಟೆ 21 ಯೋಗದ ಆಸನಗಳನ್ನು ಮಾಡಲಾಗುತ್ತದೆ.

    ಪ್ರಧಾನಿಗಳು ಯೋಗ ಆರಂಭಿಸುವ ಒಂದು ಗಂಟೆ ಮುನ್ನ ಅಂದರೆ ಬೆಳಗ್ಗೆ 5.30 ರ ಒಳಗೆ ನೋಂದಣಿ ಮಾಡಿ ಕೊಂಡಿರುವ ಯೋಗಪಟುಗಳು ಅರಮನೆ ಒಳಗೆ ಬರಬೇಕು. ಸರಿಯಾಗಿ 5.30 ಕ್ಕೆ ಅರಮನೆಯ ಎಲ್ಲಾ ದ್ವಾರಗಳು ಬಂದ್ ಆಗುತ್ತವೆ. ನೋಂದಣಿಯಾದ ಪ್ರತಿಯೊಬ್ಬ ಯೋಗಪಟುವಿಗೂ ಯೋಗ ಮ್ಯಾಟ್, ಶೂ ಇಡುವ ಬಾಕ್ಸ್, ಮೊಬೈಲ್ ಇಟ್ಟುಕೊಳ್ಳಲು ಪ್ರತ್ಯೇಕ ಕವರ್ ಅನ್ನು ಕೇಂದ್ರದ ಆಯುಷ್ ಇಲಾಖೆಯೆ ನೀಡಲಿದೆ. ಅಲ್ಲದೆ ಅರಮನೆ ಆವರಣದಲ್ಲಿ ಯೋಗ ಮಾಡಲು ನೋಂದಣಿ ಮಾಡುವವರು ಕೊರೊನಾ ಎರಡನೇ ಡೋಸ್ ಕಡ್ಡಾಯವಾಗಿ ಪಡೆದಿರಬೇಕು. ಯೋಗ ದಿನಕ್ಕೂ 72 ಗಂಟೆ ಮುಂಚಿನ ಕರೋನಾ ನೆಗಟಿವ್ ರೀಪೋರ್ಟ್ ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ಒಟ್ಟು 15 ಸಾವಿರ ಜನರಲ್ಲಿ 12 ಸಾವಿರ ಸ್ಥಳೀಯರು, 1 ಸಾವಿರ ವಿವಿಧ ರಾಜ್ಯಗಳ ಪ್ರತಿನಿಧಿಗಳು, ಒಂದು ಸಾವಿರ ಆಯುಷ್ ಇಲಾಖೆ ಹಾಗೂ ಕೇಂದ್ರದ ವಿವಿಧ ಇಲಾಖೆ ಅಧಿಕಾರಿಗಳು, ಒಂದು ಸಾವಿರ ಕೇಂದ್ರ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. 12 ಸಾವಿರ ಸ್ಥಳೀಯರ ಆಯ್ಕೆ ಪ್ರಕ್ರಿಯೆ ಕೂಡ ಮುಗಿದಿದೆ. ಇದರಲ್ಲಿ ಪೌರಕಾರ್ಮಿಕರು, ಆಟೋ ಚಾಲಕರು, ತೃತೀಯ ಲಿಂಗಿಗಳು, ಯೋಗ ಒಕ್ಕೂಟಗಳಲ್ಲಿನ ಯೋಗ ಪಟುಗಳು, ರಾಜ್ಯ ಆರೋಗ್ಯ ಇಲಾಖೆ, ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಪೊಲೀಸ್ ಇಲಾಖೆ ಹೀಗೆ ಎಲ್ಲಾ ಕಾರ್ಮಿಕ ವರ್ಗ, ಎಲ್ಲಾ ಸ್ಥರದ ಜನರನ್ನು ಸೇರಿಸಿ ಕೊಳ್ಳಲಾಗಿದೆ. ಅವರ ಕೋವಿಡ್ ಲಸಿಕಾ ವರದಿಗಳನ್ನು ಪಡೆಯಲಾಗಿದೆ. ಅವರ ಪಾಸ್ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ.

    ಅರಮನೆ ಒಳಗೆ ಒಟ್ಟು 17 ಬ್ಲಾಕ್ ಮಾಡಲಾಗುತ್ತದೆ. ಪ್ರತಿ ಬ್ಲಾಕ್ ನಲ್ಲೂ 100 ಜನ ಯೋಗ ಮಾಡಲಿದ್ದಾರೆ. ಪಾಸ್ ಗಳಲ್ಲೆ ಯಾವ ಬ್ಲಾಕ್ ಗೆ ಹೋಗಬೇಕು ಎಂಬ ಸೂಚನೆ ಇರಲಿದೆ. ಒಟ್ಟು 120 ಮೊಬೈಲ್ ಶೌಚಾಲಯದ ವ್ಯವಸ್ಥೆ ಆಗಲಿದೆ. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಕೇಂದ್ರದ ಆಯುಷ್ ಇಲಾಖೆಯೆ ಮಾಡಲಿದೆ. ಆಹ್ವಾನ ಪತ್ರಿಕೆ ಮತ್ತು ವೇದಿಕೆ ನಿರ್ಮಾಣದ ಜವಾಬ್ದಾರಿ ಮಾತ್ರ ರಾಜ್ಯ ಸರಕಾರ ನಿರ್ವಹಿಸಲಿದೆ. ಇದನ್ನೂ ಓದಿ: ಕೋವಿಡ್‌ನಿಂದ ಹಳೆಯದೆಲ್ಲಾ ಮರೆತುಹೋಗಿದೆ ಎಂದ ದಿಲ್ಲಿ ಆರೋಗ್ಯ ಸಚಿವ – ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್‌

    ಕೇಂದ್ರ ಸರಕಾರ ಕ್ವಾಲಿಟಿ ಮುಖ್ಯ ಹೊರತು ಕ್ವಾಂಟಿಟಿ ಮುಖ್ಯವಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸಿದೆ. ಹೀಗಾಗಿ ಬೇಕಾಬಿಟ್ಟಿ ಜನರನ್ನು ಸೇರಿಸದೆ ಯೋಗವನ್ನು ಕ್ರಮ ಬದ್ದವಾಗಿ ಮಾಡುವವರನ್ನೆ ಗುರುತಿಸಿ ಯೋಗ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.

  • ಫಸ್ಟ್ ಟೈಂ ಬೆಂಗಳೂರಿನಲ್ಲಿ ಶೂನ್ಯ ಮರಣ ಪ್ರಕರಣ – 1,151 ಕೇಸ್

    ಫಸ್ಟ್ ಟೈಂ ಬೆಂಗಳೂರಿನಲ್ಲಿ ಶೂನ್ಯ ಮರಣ ಪ್ರಕರಣ – 1,151 ಕೇಸ್

    ಬೆಂಗಳೂರು: ರಾಜ್ಯದಲ್ಲಿ ಇಂದು 1,151 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 10 ಮಂದಿ ಸಾವನ್ನಪ್ಪಿದ್ದು, 1,442 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಎರಡನೇ ಅಲೆಯ ಬಳಿಕ ಮೊಟ್ಟಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಶೂನ್ಯ ಮರಣ ಪ್ರಕರಣ ದಾಖಲಾಗಿದೆ. ಜಿಲ್ಲಾವಾರು ವರದಿಯಲ್ಲಿ ಬೆಂಗಳೂರು ನಗರ 270 ಕೇಸ್‍ಗಳೊಂದಿಗೆ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.1.08ರಷ್ಟಿದೆ. ಇದನ್ನೂ ಓದಿ: ಕರೊನಾ ಆತಂಕ-ಗೋವಾದಲ್ಲಿ ಆಗಸ್ಟ್ 30ರ ವರೆಗೆ ಕರ್ಫ್ಯೂ ಮುಂದುವರಿಕೆ

    ರಾಜ್ಯದಲ್ಲಿ ಒಟ್ಟು 20,255 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,39,767 ಮಂದಿಗೆ ಕೊರೊನಾ ಬಂದಿದೆ. 28,82,331 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್ 19 ಮರಣ ಪ್ರಮಾಣ ಶೇ.0.86ರಷ್ಟಿದೆ. ಇದನ್ನೂ ಓದಿ: ಜುಲೈ ನಂತರ ಕೊರೊನಾ ತವರೂರಿನಲ್ಲಿ ವರದಿಯಾಗಿಲ್ಲ ಪ್ರಕರಣ

    ಇಂದು ರಾಜ್ಯದಲ್ಲಿ ಒಟ್ಟು 3,58,775 ಮಂದಿಗೆ ಕೊರೊನಾ ಲಸಿಕೆ ನಿಡಲಾಗಿದೆ. ಒಟ್ಟು 1,06,364 ಸ್ಯಾಂಪಲ್ (ಆರ್‍ಟಿ ಪಿಸಿಆರ್ 91,982 + 14,382 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 270 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 363 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಬೀದರ್, ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಉಳಿದಂತೆ ಬಳ್ಳಾರಿ 4, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 10, ಬೆಂಗಳೂರು ನಗರ 270, ಚಾಮರಾಜನಗರ 5, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 42, ಚಿತ್ರದುರ್ಗ 18, ದಕ್ಷಿಣ ಕನ್ನಡ 236, ದಾವಣಗೆರೆ 1, ಗದಗ 3, ಹಾಸನ 115, ಹಾವೇರಿ 1, ಕೊಡಗು 54, ಕೋಲಾರ 7, ಕೊಪ್ಪಳ 5, ಮಂಡ್ಯ 32, ಮೈಸೂರು 76, ರಾಮನಗರ 1, ಶಿವಮೊಗ್ಗ 8, ತುಮಕೂರು 44, ಉಡುಪಿ 137, ಉತ್ತರ ಕನ್ನಡ 42, ವಿಜಯಪುರ 2, ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ 1632 ಕೇಸ್ – ಬೆಂಗಳೂರಿಗಿಂತ ದಕ್ಷಿಣ ಕನ್ನಡದಲ್ಲಿ ಸೋಂಕು ಹೆಚ್ಚು

    ರಾಜ್ಯದಲ್ಲಿ 1632 ಕೇಸ್ – ಬೆಂಗಳೂರಿಗಿಂತ ದಕ್ಷಿಣ ಕನ್ನಡದಲ್ಲಿ ಸೋಂಕು ಹೆಚ್ಚು

    ಬೆಂಗಳೂರು: ರಾಜ್ಯದಲ್ಲಿ ಇಂದು 1632 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 25 ಮಂದಿ ಸಾವನ್ನಪ್ಪಿದ್ದು, 1612 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲಾವಾರು ವರದಿಯಲ್ಲಿ ದಕ್ಷಿಣ ಕನ್ನಡದಲ್ಲಿ 411 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.1.04ರಷ್ಟಿದೆ.

    ರಾಜ್ಯದಲ್ಲಿ ಒಟ್ಟು 22,698 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,28,033 ಮಂದಿಗೆ ಕೊರೊನಾ ಬಂದಿದೆ. 28,68,351 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.2.53ರಷ್ಟಿದೆ. 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ ಒಟ್ಟು 1,55,989 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,24,995 + 30,994 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 377 ಮಂದಿಗೆ ಕೊರೊನಾ ಸೋಂಕು ತಗುಲಿದೆ. 365 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ – ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಆರಂಭ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೀದರ್, ಗದಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ, ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 377, ಚಾಮರಾಜನಗರ 17, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 53, ಚಿತ್ರದುರ್ಗ 22, ದಕ್ಷಿಣ ಕನ್ನಡ 411, ದಾವಣಗೆರೆ 5, ಧಾರವಾಡ 3, ಹಾಸನ 97, ಹಾವೇರಿ 1, ಕಲಬುರಗಿ 3, ಕೊಡಗು 77, ಕೋಲಾರ 18, ಕೊಪ್ಪಳ 3, ಮಂಡ್ಯ 39, ಮೈಸೂರು 112, ರಾಯಚೂರು 1, ರಾಮನಗರ 3, ಶಿವಮೊಗ್ಗ 60, ತುಮಕೂರು 43, ಉಡುಪಿ 169, ಉತ್ತರ ಕನ್ನಡ 49 ಮತ್ತು ವಿಜಯಪುರದಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿಂದು 1,653 ಕೊರೊನಾ ಕೇಸ್- 31 ಸಾವು, 2,572 ಡಿಸ್ಚಾರ್ಜ್

    ರಾಜ್ಯದಲ್ಲಿಂದು 1,653 ಕೊರೊನಾ ಕೇಸ್- 31 ಸಾವು, 2,572 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿಂದು 1,653 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 31 ಮಂದಿ ಸಾವನ್ನಪ್ಪಿದ್ದಾರೆ. 2,572 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸದ್ಯ ರಾಜ್ಯದಲ್ಲಿ 24,695 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.17 ಮತ್ತು ಮರಣ ಪ್ರಮಾಣ ಶೇ.1.87ರಷ್ಟಿದೆ. ರಾಜ್ಯದಲ್ಲಿ ಇದುವರೆಗೆ 28,89,994 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 36,293 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,40,343 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬೆಂಗಳೂರಿನಲ್ಲಿಂದು 418 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 3 ಜನರು ಸಾವನ್ನಪ್ಪಿದ್ದಾರೆ. 8,748 ಸಕ್ರಿಯ ಪ್ರಕರಣಗಳಿದ್ದು, 1,162 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಬೆಂಗಳೂರಿನಲ್ಲಿ ಒಟ್ಟು 12,23,644 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಬೀದರ್ ಹಾಗೂ ಯಾದಗಿರಿಯಲ್ಲಿ ಇಂದು ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.

    ಯಾವ ಜಿಲ್ಲೆಯಲ್ಲಿ ಎಷ್ಟು?:
    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 6, ಬೆಳಗಾವಿ 60, ಬೆಂಗಳೂರು ಗ್ರಾಮಾಂತರ 46, ಬೆಂಗಳೂರು ನಗರ 418, ಬೀದರ್ 0, ಚಾಮರಾಜನಗರ 29, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 64, ಚಿತ್ರದುರ್ಗ 21, ದಕ್ಷಿಣ ಕನ್ನಡ 229, ದಾವಣಗೆರೆ 27, ಧಾರವಾಡ 14, ಗದಗ 3, ಹಾಸನ 97, ಹಾವೇರಿ 2, ಕಲಬುರಗಿ 3, ಕೊಡಗು 107, ಕೋಲಾರ 21, ಕೊಪ್ಪಳ 2, ಮಂಡ್ಯ 36, ಮೈಸೂರು 134, ರಾಯಚೂರು 2, ರಾಮನಗರ 3, ಶಿವಮೊಗ್ಗ 87, ತುಮಕೂರು 104, ಉಡುಪಿ 82, ಉತ್ತರ ಕನ್ನಡ 34, ವಿಜಯಪುರ 9, ಯಾದಗಿರಿಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.

  • ರಾಜ್ಯದಲ್ಲಿಂದು 1,639 ಪಾಸಿಟಿವ್ – 36 ಸಾವು, 2 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ರಾಜ್ಯದಲ್ಲಿಂದು 1,639 ಪಾಸಿಟಿವ್ – 36 ಸಾವು, 2 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 1,639 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 2,214 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪಾಸಿಟಿವಿಟಿ ರೇಟ್ ಶೇ.1.07ರಷ್ಟಿದೆ. ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಒಟ್ಟು 25,645 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 28,88,341 ಮಂದಿಗೆ ಕೊರೊನಾ ಬಂದಿದೆ. 28,26,411 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಕೋವಿಡ್-19 ಮರಣ ಪ್ರಮಾಣ ಶೇ.2.19ರಷ್ಟಿದೆ. ಇಂದಿನವರೆಗೆ ರಾಜ್ಯದಲ್ಲಿ ಒಟ್ಟು 36,262 ಮಂದಿ ಮರಣ ಹೊಂದಿದ್ದಾರೆ. ಇದನ್ನೂ ಓದಿ: ಜು.26 ರಂದು ಸಿಎಂ ನಿರ್ಗಮನ – ಷರತ್ತು ವಿಧಿಸಿದ ಹೈಕಮಾಂಡ್

    ಇಂದು ರಾಜ್ಯದಲ್ಲಿ ಒಟ್ಟು 1,52,714 ಸ್ಯಾಂಪಲ್ (ಆರ್‍ಟಿ ಪಿಸಿಆರ್ 30,876 + 1,21,838 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನವರೆಗೆ ಒಟ್ಟು 3,59,101 ಜನರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 419 ಮಂದಿಗೆ ಕೊರೊನಾ ಸೋಂಕು ತಗುಲಿದೆ. 963 ಜನ ಇಂದು ಡಿಸ್ಚಾರ್ಜ್ ಆಗಿದ್ದಾರೆ. 7 ಮಂದಿ ಸಾವನ್ನಪ್ಪಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 14, ಬೆಳಗಾವಿ 61, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 419, ಚಾಮರಾಜನಗರ 22, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 92, ಚಿತ್ರದುರ್ಗ 29, ದಕ್ಷಿಣ ಕನ್ನಡ 190, ದಾವಣಗೆರೆ 13, ಧಾರವಾಡ 19, ಗದಗ 1, ಹಾಸನ 141, ಹಾವೇರಿ 2, ಕಲಬುರಗಿ 2, ಕೊಡಗು 63, ಕೋಲಾರ 35, ಕೊಪ್ಪಳ 5, ಮಂಡ್ಯ 60, ಮೈಸೂರು 160, ರಾಯಚೂರು 1, ರಾಮನಗರ 5, ಶಿವಮೊಗ್ಗ 37, ತುಮಕೂರು 63, ಉಡುಪಿ 104, ಉತ್ತರ ಕನ್ನಡ 48, ವಿಜಯಪುರದಲ್ಲಿ 10 ಪ್ರಕರಣ ದಾಖಲಾಗಿದೆ.

  • ರಾಜ್ಯದಲ್ಲಿಂದು 1,464 ಕೊರೊನಾ ಕೇಸ್- 29 ಸಾವು, 2,706 ಡಿಸ್ಚಾರ್ಜ್

    ರಾಜ್ಯದಲ್ಲಿಂದು 1,464 ಕೊರೊನಾ ಕೇಸ್- 29 ಸಾವು, 2,706 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿಂದು 1,464 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 29 ಮಂದಿ ಸಾವನ್ನಪ್ಪಿದ್ದಾರೆ. 2,706 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸದ್ಯ ರಾಜ್ಯದಲ್ಲಿ 26,256 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.29 ಮತ್ತು ಮರಣ ಪ್ರಮಾಣ ಶೇ.1.98ರಷ್ಟಿದೆ. ರಾಜ್ಯದಲ್ಲಿ ಇದುವರೆಗೆ 28,86,702 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 36,226 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,13,456 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬೆಂಗಳೂರಿನಲ್ಲಿಂದು 352 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 5 ಜನರು ಸಾವನ್ನಪ್ಪಿದ್ದಾರೆ. 10,046 ಸಕ್ರಿಯ ಪ್ರಕರಣಗಳಿದ್ದು, 1,110 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಬೆಂಗಳೂರಿನಲ್ಲಿ ಒಟ್ಟು 12,22,807 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೊಪ್ಪಳದಲ್ಲಿ ಇಂದು ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.

    ಯಾವ ಜಿಲ್ಲೆಯಲ್ಲಿ ಎಷ್ಟು?:
    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 75, ಬೆಂಗಳೂರು ಗ್ರಾಮಾಂತರ 35, ಬೆಂಗಳೂರು ನಗರ 352, ಬೀದರ್ 2, ಚಾಮರಾಜನಗರ 16, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 81, ಚಿತ್ರದುರ್ಗ 11, ದಕ್ಷಿಣ ಕನ್ನಡ 200, ದಾವಣಗೆರೆ 13, ಧಾರವಾಡ 14, ಗದಗ 1, ಹಾಸನ 108, ಹಾವೇರಿ 3, ಕಲಬುರಗಿ 8, ಕೊಡಗು 56, ಕೋಲಾರ 36, ಕೊಪ್ಪಳ 0, ಮಂಡ್ಯ 37, ಮೈಸೂರು 117, ರಾಯಚೂರು 3, ರಾಮನಗರ 4, ಶಿವಮೊಗ್ಗ 63, ತುಮಕೂರು 86, ಉಡುಪಿ 68, ಉತ್ತರ ಕನ್ನಡ 53, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ.

  • ಪಾಸಿಟಿವಿಟಿ ರೇಟ್ ಶೇ.1.09ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,708 ಕೊರೊನಾ ಕೇಸ್

    ಪಾಸಿಟಿವಿಟಿ ರೇಟ್ ಶೇ.1.09ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,708 ಕೊರೊನಾ ಕೇಸ್

    – 36 ಸಾವು, 2,463 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿಂದು 1,708 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 36 ಮಂದಿ ಸಾವನ್ನಪ್ಪಿದ್ದಾರೆ. 2,463 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸದ್ಯ ರಾಜ್ಯದಲ್ಲಿ 29,291 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.09 ಮತ್ತು ಮರಣ ಪ್ರಮಾಣ ಶೇ.2.10ರಷ್ಟಿದೆ. ರಾಜ್ಯದಲ್ಲಿ ಇದುವರೆಗೆ 28,83,947 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 36,157 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,56,564 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬೆಂಗಳೂರಿನಲ್ಲಿಂದು 386 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 9 ಜನರು ಸಾವನ್ನಪ್ಪಿದ್ದಾರೆ. 11,751 ಸಕ್ರಿಯ ಪ್ರಕರಣಗಳಿದ್ದು, 793 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಬೆಂಗಳೂರಿನಲ್ಲಿ ಒಟ್ಟು 12,22,189 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಯಾದಗಿರಿಯಲ್ಲಿ ಇಂದು ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.

    ಯಾವ ಜಿಲ್ಲೆಯಲ್ಲಿ ಎಷ್ಟು?:
    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 1, ಬೆಳಗಾವಿ 55, ಬೆಂಗಳೂರು ಗ್ರಾಮಾಂತರ 32, ಬೆಂಗಳೂರು ನಗರ 386, ಬೀದರ್ 8, ಚಾಮರಾಜನಗರ 23, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 105, ಚಿತ್ರದುರ್ಗ 15, ದಕ್ಷಿಣ ಕನ್ನಡ 241, ದಾವಣಗೆರೆ 23, ಧಾರವಾಡ 21, ಗದಗ 1, ಹಾಸನ 171, ಹಾವೇರಿ 8, ಕಲಬುರಗಿ 3, ಕೊಡಗು 45, ಕೋಲಾರ 33, ಕೊಪ್ಪಳ 2, ಮಂಡ್ಯ 53, ಮೈಸೂರು 210, ರಾಯಚೂರು 4, ರಾಮನಗರ 3, ಶಿವಮೊಗ್ಗ 82, ತುಮಕೂರು 64, ಉಡುಪಿ 105, ಉತ್ತರ ಕನ್ನಡ 44, ವಿಜಯಪುರ 1 ಮತ್ತು ಯಾದಗಿರಿಯಲ್ಲಿ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.

  • ರಾಜ್ಯದಲ್ಲಿಂದು 1,869 ಕೊರೊನಾ ಕೇಸ್- 42 ಸಾವು, 3,144 ಡಿಸ್ಚಾರ್ಜ್

    ರಾಜ್ಯದಲ್ಲಿಂದು 1,869 ಕೊರೊನಾ ಕೇಸ್- 42 ಸಾವು, 3,144 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿಂದು 1,869 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 42 ಮಂದಿ ಸಾವನ್ನಪ್ಪಿದ್ದಾರೆ. 3,144 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಸದ್ಯ ರಾಜ್ಯದಲ್ಲಿ 30,082 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.30 ಮತ್ತು ಮರಣ ಪ್ರಮಾಣ ಶೇ.2.24ರಷ್ಟಿದೆ. ರಾಜ್ಯದಲ್ಲಿ ಇದುವರೆಗೆ 28,82,239 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು 36,121 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,42,856 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಬೆಂಗಳೂರಿನಲ್ಲಿಂದು 432 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. 615 ಸಕ್ರಿಯ ಪ್ರಕರಣಗಳಿದ್ದು, 635 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವರೆಗೆ ಬೆಂಗಳೂರಿನಲ್ಲಿ ಒಟ್ಟು 12,21,803 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಗದಗನಲ್ಲಿ ಇಂದು ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.

    ಯಾವ ಜಿಲ್ಲೆಯಲ್ಲಿ ಎಷ್ಟು?:
    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 11, ಬೆಳಗಾವಿ 97, ಬೆಂಗಳೂರು ಗ್ರಾಮಾಂತರ 46, ಬೆಂಗಳೂರು ನಗರ 432, ಬೀದರ್ 1, ಚಾಮರಾಜನಗರ 15, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 101, ಚಿತ್ರದುರ್ಗ 15, ದಕ್ಷಿಣ ಕನ್ನಡ 218, ದಾವಣಗೆರೆ 21, ಧಾರವಾಡ 24, ಗದಗ 0, ಹಾಸನ 173, ಹಾವೇರಿ 14, ಕಲಬುರಗಿ 6, ಕೊಡಗು 51, ಕೋಲಾರ 46, ಕೊಪ್ಪಳ 1, ಮಂಡ್ಯ 37, ಮೈಸೂರು 207, ರಾಯಚೂರು 3, ರಾಮನಗರ 11, ಶಿವಮೊಗ್ಗ 83, ತುಮಕೂರು 92, ಉಡುಪಿ 94, ಉತ್ತರ ಕನ್ನಡ 49, ವಿಜಯಪುರ ಮತ್ತು ಯಾದಗಿರಿಯಲ್ಲಿ ತಲಾ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

    ಪತ್ನಿಯಿಂದ ದೂರವಿರಲು ಕೋವಿಡ್ ಪಾಸಿಟಿವ್ ನಕಲಿ ವರದಿ ಮನೆಗೆ ಕಳಿಸಿದ

    ಇಂದೋರ್: ಪತ್ನಿಯಿಂದ ದೂರವಿರಲು 26 ವರ್ಷದ ವ್ಯಕ್ತಿ ಭರ್ಜರಿ ನಾಟಕವಾಡಿದ್ದು, ತನಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಮನೆಗೆ ಕಳುಹಿಸಿದ್ದಾನೆ.

    ಮಧ್ಯ ಪ್ರದೇಶದ ಮಹೌ ನಿವಾಸಿ ಇದೇ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ತನ್ನ ಪತ್ನಿಯೊಂದಿಗೆ ದೂರವಿರಲು ಬಯಸಿದ್ದಾನೆ. ಹೀಗಾಗಿ ಪತ್ನಿಯಿಂದ ದೂರವಿರಲು ಕೊರೊನಾ ಪಾಸಿಟಿವ್ ನಾಟಕವಾಡಿದ್ದಾನೆ. ಖಾಸಗಿ ಆಸ್ಪತ್ರೆಯ ವೆಬ್‍ಸೈಟ್ ಮೂಲಕ ಬೇರೆ ವ್ಯಕ್ತಿಯ ಕೊರೊನಾ ಪಾಸಿಟಿವ್ ರಿಪೋರ್ಟ್ ಡೌನ್‍ಲೋಡ್ ಮಾಡಿಕೊಂಡು, ಅದಕ್ಕೆ ತನ್ನ ಹೆಸರನ್ನು ಸೇರಿಸಿದ್ದಾನೆ ಎಂದು ಛೋಟಿ ಗ್ವಾಲ್‍ಟೋಲಿ ಪೊಲೀಸ್ ಠಾಣೆಯ ಇನ್‍ಚಾರ್ಜ್ ಸಂಜಯ್ ಶುಕ್ಲಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

    ತನ್ನ ಕೊರೊನಾ ಪಾಸಿಟಿವ್ ನಕಲಿ ವರದಿಯನ್ನು ಕುಟುಂಸ್ಥರಿಗೆ ಕಳುಹಿಸಿದ್ದು, ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ, ಪಾಸಿಟಿವ್ ಆಗಲು ಹೇಗೆ ಸಾಧ್ಯ ಎಂದು ಮನೆಯವರಿಗೆ ಅನುಮಾನ ಮೂಡಿದೆ.

    ವಾಟ್ಸಪ್ ಮೂಲಕ ತನ್ನ ತಂದೆ ಹಾಗೂ ಪತ್ನಿಗೆ ವ್ಯಕ್ತಿ ನಕಲಿ ರಿಪೋರ್ಟ್ ಕಳುಹಿಸಿ, ನಾಪತ್ತೆಯಾಗಿದ್ದಾನೆ. ವ್ಯಕ್ತಿಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇರಲಿಲ್ಲ. ಹೀಗಾಗಿ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಖಾಸಗಿ ಲ್ಯಾಬರೋಟರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಈ ವೇಳೆ ಕೊರೊನಾ ಪಾಸಿಟಿವ್ ಕುರಿತು ನಕಲಿ ವರದಿ ಪಡೆದಿರುವುದು ತಿಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಲ್ಯಾಬರೋಟರಿಯವರು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದು, ಬಳಿಕ ಸುಳ್ಳು ದಾಖಲೆ ಸೃಷ್ಟಿ ಸೇರಿದಂತೆ ಸಂಬಂಧಿಸಿದ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರ ಮುಂದೆ ಹಾಜರಾಗುವಂತೆ ವ್ಯಕ್ತಿಗೆ ಈಗಾಗಲೇ ನೋಟಿಸ್ ಕಳುಹಿಸಲಾಗಿದೆ ಎಂದು ಶುಕ್ಲ ಅವರು ತಿಳಿಸಿದ್ದಾರೆ.

  • ಗುಣಮುಖರ ಸಂಖ್ಯೆ ಹೆಚ್ಚಳ – 52,253 ಡಿಸ್ಚಾರ್ಜ್, 22,823 ಪಾಸಿಟಿವ್

    ಗುಣಮುಖರ ಸಂಖ್ಯೆ ಹೆಚ್ಚಳ – 52,253 ಡಿಸ್ಚಾರ್ಜ್, 22,823 ಪಾಸಿಟಿವ್

    ಬೆಂಗಳೂರು: ರಾಜ್ಯದಲ್ಲಿಂದು 22,823 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 52,253 ಜನರು ಗುಣಮುಖರಾಗಿದ್ದಾರೆ. ಇಂದು ಕೊರೊನಾಗೆ 401 ಸೋಂಕಿತರು ಪ್ರಾಣ ಕಳೆದುಕೊಂಡಿದ್ದು, ಇದುವರೆಗೂ ಮಹಾಮಾರಿಗೆ ರಾಜ್ಯದಲ್ಲಿ 27,806 ಜನ ಸಾವನ್ನಪ್ಪಿದ್ದಾರೆ.

    ಸದ್ಯ 3,72,373 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.16.42 ಮತ್ತು ಮರಣ ಪ್ರಮಾಣ ಶೇ.1.75ರಷ್ಟಿದೆ. ಇಂದು 1,38,983 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟು 1,90,825 ಮಂದಿಗೆ ಲಸಿಕೆ ನೀಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ 5,736 ಹೊಸ ಪ್ರಕರಣಗಳು ವರದಿಯಾಗಿದ್ದು, ಸದ್ಯ 2,80,697 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿಂದು 192 ಸೋಂಕಿತರು ಸಾವನ್ನಪ್ಪಿದ್ದು, 31,237 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 5,736, ಬೆಳಗಾವಿ 1,147, ಬೆಂಗಳೂರು ನಗರ 5,949, ಹಾಸನ 1,505, ಮೈಸೂರು 2,240, ತುಮಕೂರಿನಲ್ಲಿ 1,219ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.