Tag: Corona Public TV

  • ಪಾಸಿಟಿವಿಟಿ ರೇಟ್ ಶೇ.0.57- 836 ಹೊಸ ಕೊರೊನಾ ಕೇಸ್, 15 ಸಾವು

    ಪಾಸಿಟಿವಿಟಿ ರೇಟ್ ಶೇ.0.57- 836 ಹೊಸ ಕೊರೊನಾ ಕೇಸ್, 15 ಸಾವು

    ಬೆಂಗಳೂರು: ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಇಂದು 836 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 15 ಜನರನ್ನು ಮಹಾಮಾರಿ ಬಲಿ ಪಡೆದಿದೆ. 7 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

    ಇಂದು 852 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 13,590 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,71,044 ಜನರಿಗೆ ಕೊರೊನಾ ಸೋಂಕು ತಗುಲಿದೆ. 29,19,742 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.57ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.79ರಷ್ಟಿದೆ.

    ಇಂದು ರಾಜ್ಯದಲ್ಲಿ ಒಟ್ಟು 1,59,049 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,45,085 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,18,033+ 27,052 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 310 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 7 ಜನ ಮರಣ ಹೊಂದಿದ್ದಾರೆ. 239 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇದನ್ನೂ ಓದಿ:  ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಪ್ರಭು ಚವ್ಹಾಣ್

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಚಿಕ್ಕಮಗಳೂರು, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 01, ಬಳ್ಳಾರಿ 03, ಬೆಳಗಾವಿ 07, ಬೆಂಗಳೂರು ಗ್ರಾಮಾಂತರ 17, ಬೆಂಗಳೂರು ನಗರ 310, ಬೀದರ್ 03, ಚಾಮರಾಜನಗರ 05, ಚಿಕ್ಕಮಗಳೂರು 26, ಚಿತ್ರದುರ್ಗ 2, ದಕ್ಷಿಣ ಕನ್ನಡ 106, ದಾವಣಗೆರೆ 2, ಧಾರವಾಡ 3, ಹಾಸನ 47, ಕಲಬುರಗಿ 5, ಕೊಡಗು 37, ಕೋಲಾರ 15, ಮಂಡ್ಯ 18, ಮೈಸೂರು 78, ರಾಮನಗರ 3, ಶಿವಮೊಗ್ಗ 22, ತುಮಕೂರು 25, ಉಡುಪಿ 69 ಹಾಗೂ ಉತ್ತರ ಕನ್ನಡ 32 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 1074 ಪಾಸಿಟಿವ್, 4 ಸಾವು – ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆ

    ಇಂದು 1074 ಪಾಸಿಟಿವ್, 4 ಸಾವು – ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1,074 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 04 ಜನರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆಯಾಗಿದೆ.

    ಇಂದು 1,136 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 16,998 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 29,58,164 ಜನರಿಗೆ ಸೋಂಕು ತಗುಲಿದೆ. 29,04,683 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.63ಕ್ಕೆ ಇಳಿಕೆಯಾಗಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.37ರಷ್ಟಿದೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

    ಒಟ್ಟು 3,07,11,505 ಸ್ಯಾಂಪಲ್ (ಆರ್‍ಟಿ ಪಿಸಿಆರ್ 2,60,60572+ 46,50933 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಭಾಷೆ, ಸಂಸ್ಕೃತಿಯಿಂದಲೇ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದು: ಟಿ.ಎಸ್.ನಾಗಾಭರಣ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಬೀದರ್, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಳ್ಳಾರಿ 5, ಬೆಳಗಾವಿ 08, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ 343, ಚಾಮರಾಜನಗರ 2, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 68, ಚಿತ್ರದುರ್ಗ 8, ದಕ್ಷಿಣ ಕನ್ನಡ 176, ದಾವಣಗೆರೆ 3, ಧಾರವಾಡ 7, ಹಾಸನ 81, ಕಲಬುರಗಿ 7, ಕೊಡಗು 59, ಕೋಲಾರ 12, ಮಂಡ್ಯ 20, ಮೈಸೂರು 15, ರಾಯಚೂರು 6, ರಾಮನಗರ 2, ಶಿವಮೊಗ್ಗ 39, ತುಮಕೂರು 22, ಉಡುಪಿ 126, ಉತ್ತರ ಕನ್ನಡ 25, ವಿಜಯಪುರದಲ್ಲಿ 1 ಮತ್ತು ಯಾದಗಿರಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ:  ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

    ಬೆಂಗಳೂರಿನಲ್ಲಿ ಕೂಡ ಇಂದು 343 ಕೇಸ್ ದಾಖಲಾಗಿದ್ದು, ಕಳೆದ ಮೂರು ದಿನಗಳಿಂದ ಕೇಸ್ 300ರ ಆಸುಪಾಸಿನಲ್ಲಿ ದಾಖಲಾಗುತ್ತಿದೆ. ಬೆಂಗಳೂರಿನಲ್ಲಿ ಕೊರೊನಾಗೆ 03 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಬಹಳ ದಿನಗಳ ನಂತರ ಸ್ವಲ್ಪ ಮಟ್ಟಿಗೆ ಡೆತ್ ಕಂಟ್ರೋಲ್ ಗೆ ಬಂದಿದೆ. ಜೊತೆಗೆ ರಾಜ್ಯದಲ್ಲಿ ಇಂದು 1136 ಜನ ಡಿಸ್ಸಾರ್ಜ್ ಆಗಿದ್ದು, ಬೆಂಗಳೂರಿನಲ್ಲಿ 251 ಜನ ಇಂದು ಡಿಸ್ಸಾರ್ಜ್ ಆಗಿದ್ದಾರೆ.

  • ರಾಜ್ಯದಲ್ಲಿಂದು 1,224 ಕೊರೊನಾ ಕೇಸ್- 22 ಸಾವು, 1,668 ಡಿಸ್ಚಾರ್ಜ್

    ರಾಜ್ಯದಲ್ಲಿಂದು 1,224 ಕೊರೊನಾ ಕೇಸ್- 22 ಸಾವು, 1,668 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 1,224 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 22 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. 1,668 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ 19,318 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ರೇಟ್ ಶೇ.0.62ಕ್ಕೆ ಇಳಿಕೆಯಾಗಿದೆ. ಮರಣ ಪ್ರಮಾಣ ಶೇ.1.79ರಷ್ಟಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 29,42,250 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 37,206 ಜನ ಸಾವನ್ನಪ್ಪಿದ್ದಾರೆ. 28,85,700 ಜನ ಈವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಶುಕ್ರವಾರ ನಮಾಜ್, ಸಂಡೇ ಪ್ರಾರ್ಥನೆ ನಡೆಯುತ್ತಲ್ವಾ? ಗಣೇಶೋತ್ಸವಕ್ಕೂ ಅವಕಾಶ ಕೊಡಿ: ಪ್ರತಾಪ್ ಸಿಂಹ

    ಒಟ್ಟು 1,95,966 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,60,463 + 35,503 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 309 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 657 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 7,231 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ರೇಟ್ ನಿಧಾನವಾಗಿ ಕಡಿಮೆಯಾಗುತ್ತಿದೆ. ಇದೇ ಹೊತ್ತಲ್ಲಿ ಮೂರನೇ ಅಲೆಯ ಅಪ್ಪಳಿಸುವ ಕುರಿತು ಎಚ್ಚರಿಕೆಯನ್ನು ಸಹ ತಜ್ಞರು ನೀಡಿದ್ದಾರೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 2, ಬಳ್ಳಾರಿ 3, ಬೆಳಗಾವಿ 19, ಬೆಂಗಳೂರು ಗ್ರಾಮಾಂತರ 13, ಬೆಂಗಳೂರು ನಗರ 309, ಬೀದರ್ 0, ಚಾಮರಾಜನಗರ 6, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 28, ಚಿತ್ರದುರ್ಗ 10, ದಕ್ಷಿಣ ಕನ್ನಡ 217, ದಾವಣಗೆರೆ 11, ಧಾರವಾಡ 11, ಗದಗ 0, ಹಾಸನ 95, ಹಾವೇರಿ 3, ಕಲಬುರಗಿ 10, ಕೊಡಗು 41, ಕೋಲಾರ 17, ಕೊಪ್ಪಳ 2, ಮಂಡ್ಯ 38, ಮೈಸೂರು 102, ರಾಯಚೂರು 1, ರಾಮನಗರ 1, ಶಿವಮೊಗ್ಗ 42, ತುಮಕೂರು 52, ಉಡುಪಿ 130, ಉತ್ತರ ಕನ್ನಡ 48, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 8 ಕೊರೊನಾ ಪ್ರಕರಣ ಪತ್ತೆಯಾಗಿದೆ.

  • ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತ ರಾಜ್ಯ

    ಅರುಣಾಚಲ ಪ್ರದೇಶ ಈಗ ಕೊರೊನಾ ವೈರಸ್ ಮುಕ್ತ ರಾಜ್ಯ

    ಇಟಾನಗರ: ಅರುಣಾಚಲ ಪ್ರದೇಶವು ಭಾನುವಾರ ಕೊರೊನಾ ವೈರಸ್ ಮುಕ್ತ ರಾಜ್ಯವಾಗಿದೆ. ಕಳೆದ 24 ಗಂಟೆಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

    ರಾಜ್ಯದಲ್ಲಿ ಒಟ್ಟು 16,836 ರಷ್ಟು ಸೋಂಕಿತರಿದ್ದರು. ಈ ಪೈಕಿ 16,780 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 56 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.99.66 ರಷ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ 312 ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದೆ.

    ಇಲ್ಲಿಯವರೆಗೆ ಒಟ್ಟು 4,05,647 ಜನರನ್ನು ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ 32,325 ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆಯನ್ನು ನೀಡಲಾಗಿದೆ. ವಾರದಲ್ಲಿ ನಾಲ್ಕುದಿನ ಲಸಿಕೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.