Tag: Corona Positive

  • ಸೀಲ್‍ಡೌನ್ ಏರಿಯಾದಲ್ಲಿ ತಂದೆ-ಮಗಳನ್ನು ಮೆರವಣಿಗೆ ಮಾಡಿದ ಸ್ಥಳೀಯರು

    ಸೀಲ್‍ಡೌನ್ ಏರಿಯಾದಲ್ಲಿ ತಂದೆ-ಮಗಳನ್ನು ಮೆರವಣಿಗೆ ಮಾಡಿದ ಸ್ಥಳೀಯರು

    ಯಾದಗಿರಿ: ನಗರದ ಸೀಲ್‍ಡೌನ್ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಸಂಭ್ರಮಾಚರಣೆ ಮಾಡಲಾಗಿದೆ.

    ಯಾದಗಿರಿನಗರದ ದೂಕನವಾಡಿಯಲ್ಲಿ ಹಾರ, ಹೂ ಚೆಲ್ಲಿ ಕೊರೊನಾ ನೆಗೆಟಿವ್ ಬಂದ ತಂದೆ-ಮಗಳನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.

    ದೂಕನವಾಡಿಯಲ್ಲಿ ತಂದೆ-ಮಗಳಿಗೆ ಕೊರೊನಾ ಪಾಸಿಟಿವ್ ಎಂದು ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ತಂದೆ-ಮಗಳಿಗೆ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಇಬ್ಬರನ್ನೂ ಇಂದು ಬಿಡುಗಡೆ ಮಾಡಲಾಗಿದೆ.

    ಬಿಡುಗಡೆಯಾದ ತಂದೆ-ಮಗಳನ್ನು ಸಾಮಾಜಿಕ ಅಂತರವನ್ನು ಮರೆತು ಗುಂಪು ಗುಂಪಾಗಿ ಮೆರವಣಿಗೆ ಮಾಡುವ ಮೂಲಕ ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಸ್ಥಳೀಯರು ಸ್ವಾಗತಿಸಿದ್ದಾರೆ.

  • ಹಾಸನದಲ್ಲಿ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್

    ಹಾಸನದಲ್ಲಿ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್

    – 144ಕ್ಕೇರಿದ ಸೋಂಕಿತರ ಸಂಖ್ಯೆ

    ಹಾಸನ: ಜಿಲ್ಲೆಯಲ್ಲಿ ಇಂದು ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ 4 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದ್ದು, 115 ಆ್ಯಕ್ಟಿವ್ ಪ್ರಕರಣಗಳಿವೆ.

    ಜಿಲ್ಲೆಯಲ್ಲಿ ಇದುವರೆಗೂ ಕೊರೊನಾದಿಂದ 29 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇಂದು ವರದಿಯಾದ ನಾಲ್ಕು ಪ್ರಕರಣಗಳಲ್ಲಿ ಎಲ್ಲರೂ ಆಲೂರು ತಾಲ್ಲೂಕಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಒಬ್ಬರು ಪೊಲೀಸ್ ಪೇದೆಯಾಗಿದ್ದು, ಬೆಳಗಾವಿಯ ನಿಪ್ಪಾಣಿಯಲ್ಲಿ ಸೇವೆ ಸಲ್ಲಿಸಿ ಹಾಸನಕ್ಕೆ ವಾಪಸಾಗಿದ್ದರು. ಬಳಿಕ ಕೊರೊನಾ ಪಾಸಿಟಿವ್ ವರದಿ ಬಂದು ಚಿಕಿತ್ಸೆ ಪಡೆಯುತ್ತಿರುವ ಪೊಲೀಸರ ಜೊತೆಗೆ ಸಂಪರ್ಕ ಹೊಂದಿದ ಕಾರಣದಿಂದ ಇವರಿಗೂ ಸೋಂಕು ಹರಡಿದೆ.

    ಇನ್ನೊಂದು ಪ್ರಕರಣದಲ್ಲಿ ಮಂಬೈನಿಂದ ಆಗಮಿಸಿದ್ದ ದಂಪತಿಗೆ ಪಾಸಿಟಿವ್ ಬಂದಿತ್ತು. ಮೊದಲ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದ ಮಗುವಿಗೆ 2ನೇ ಟೆಸ್ಟ್ ನಲ್ಲಿ ಪಾಸಿಟಿವ್ ವರದಿ ಬಂದಿದೆ. ಸದ್ಯ ಮಗುವನ್ನು ಆರೈಕೆ ಮಾಡಿದ ಅಜ್ಜಿ, ಮಾವನಿಗೂ ಸೋಂಕು ತಗುಲಿದೆ. ಇದೀಗ ಸೋಂಕಿತರು ವಾಸವಿದ್ದ ಹಳ್ಳಿ, ಪೊಲೀಸ್ ಕ್ವಾಟ್ರಸ್ ಸೀಲ್‍ಡೌನ್ ಮಾಡಲಾಗಿದೆ. ಪೊಲೀಸ್ ಠಾಣೆ ಸೀಲ್‍ಡೌನ್ ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಸೋಂಕಿತರೆಲ್ಲರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ರಾಯಚೂರಿನಲ್ಲಿ ಇಂದು 5 ಕೊರೊನಾ ಪ್ರಕರಣ- 71ಕ್ಕೇರಿದ ಸೋಂಕಿತರ ಸಂಖ್ಯೆ

    ರಾಯಚೂರಿನಲ್ಲಿ ಇಂದು 5 ಕೊರೊನಾ ಪ್ರಕರಣ- 71ಕ್ಕೇರಿದ ಸೋಂಕಿತರ ಸಂಖ್ಯೆ

    ರಾಯಚೂರು: ಜಿಲ್ಲೆಗೆ ಮಹಾರಾಷ್ಟ್ರದ ನಂಟಿನ ಎಫೆಕ್ಟ್ ಇಂದು ಸಹ ಮುಂದುವರಿದಿದ್ದು ಹೊಸ 5 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

    ದೇವದುರ್ಗ ಪಟ್ಟಣದ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದ 5 ಜನರಲ್ಲಿ ಕೋವಿಡ್ 19 ಧೃಡವಾಗಿದೆ. ರೋಗಿ ಸಂಖ್ಯೆ 2321, ರೋಗಿ ಸಂಖ್ಯೆ 2322, ರೋಗಿ ಸಂಖ್ಯೆ 2323, ರೋಗಿ ಸಂಖ್ಯೆ 2324, ರೋಗಿ ಸಂಖ್ಯೆ 2325 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಮಹಾರಾಷ್ಟ್ರದಿಂದ ಬಂದವರನ್ನೆಲ್ಲಾ ನೇರವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಈಗ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರೆಲ್ಲರೂ ಕ್ವಾರಂಟೈನ್‍ನಲ್ಲಿದ್ದಾರೆ. ಅಲ್ಲಿಯೇ ಅವರನ್ನು ಐಸೋಲೇಷನ್ ಮಾಡಲಾಗಿದೆ. ಉಳಿದಂತೆ ಸೋಂಕಿತರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದಿನ 5 ಪ್ರಕರಣಗಳು ಸೇರಿ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 71 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇನ್ನೂ ಮಸ್ಕಿ ಕೆನರಾ ಬ್ಯಾಂಕ್ ಸಿಬ್ಬಂದಿಗೆ ಪಾಸಿಟಿವ್ ಪ್ರಕರಣ ಹಿನ್ನೆಲೆ 22 ಜನ ಪ್ರಾಥಮಿಕ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್ ಹಾಗೂ 54 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ವ್ಯಕ್ತಿ ವಾಸವಾಗಿರುವ ಮಸ್ಕಿಯ ಪ್ರದೇಶವನ್ನ ಸೀಲ್ ಡೌನ್ ಮಾಡಲಾಗಿದೆ.

  • ತೆಲಂಗಾಣ, ಮುಂಬೈನಿಂದ ಧಾರವಾಡಕ್ಕೆ ಬಂದಿರೋ ಪಾಸಿಟಿವ್ ಪ್ರಕರಣಗಳ ಟ್ರಾವೆಲ್ ಹಿಸ್ಟರಿ

    ತೆಲಂಗಾಣ, ಮುಂಬೈನಿಂದ ಧಾರವಾಡಕ್ಕೆ ಬಂದಿರೋ ಪಾಸಿಟಿವ್ ಪ್ರಕರಣಗಳ ಟ್ರಾವೆಲ್ ಹಿಸ್ಟರಿ

    ಧಾರವಾಡ: ಹೊರ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಆಗಮಿಸಿದ ಐವರಲ್ಲಿ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದ್ದು, ಅವರನ್ನು ರೋಗಿ ಸಂಖ್ಯೆ-1505, ರೋಗಿ ಸಂಖ್ಯೆ-1506, ರೋಗಿ ಸಂಖ್ಯೆ-1507, ರೋಗಿ ಸಂಖ್ಯೆ-1508 ಹಾಗೂ ರೋಗಿ ಸಂಖ್ಯೆ-1509 ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರವನ್ನು ಜಿಲ್ಲಾಡಳಿತ ಪ್ರಕಟಿಸಿದೆ.

    ರೋಗಿ ಸಂಖ್ಯೆ-1505 ಹಾಗೂ ರೋಗಿ ಸಂಖ್ಯೆ-1506 ಸಂಖ್ಯೆ ರೋಗಿಗಳು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ. ಇವರು ಕಳೆದ ಮಾರ್ಚ್‍ನಲ್ಲಿ ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‍ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಬಳಿಕ ಮೇ 17ರ ಸಂಜೆ 5 ಗಂಟೆಗೆ ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೋ ಮೂಲಕ ಕರ್ನೂಲ್‍ನಲ್ಲಿಯ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 06.30ಕ್ಕೆ ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು, ಮಾನ್ವಿ, ಗಂಗಾವತಿ ಮಾರ್ಗವಾಗಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೋಸ್ಟ್ ನಲ್ಲಿ ದಾಟಿ ಹುಬ್ಬಳ್ಳಿ ತಲುಪಿದ್ದರು. ಹುಬ್ಬಳ್ಳಿಗೆ ಆಗಮಿಸಿದ ಕುಟುಂಬ ಸದಸ್ಯರ ಎಲ್ಲಾ ಸದಸ್ಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ ರೋಗಿ ಸಂಖ್ಯೆ-1505 ಹಾಗೂ ರೋಗಿ ಸಂಖ್ಯೆ-1506 ಇವರು ಕೋವಿಡ್-19 ಸೋಂಕಿತರೆಂದು ದೃಢಪಟ್ಟಿದೆ.

    ರೋಗಿ ಸಂಖ್ಯೆ-1507, ರೋಗಿ ಸಂಖ್ಯೆ-1508 ಹಾಗೂ ರೋಗಿ ಸಂಖ್ಯೆ-1509 ಇವರು ಮಹಾರಾಷ್ಟ್ರದ ಮುಂಬೈನ ಶಹರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ. ಮೇ 16ರಂದು ಬಾಡಿಗೆ ಇನ್ನೊವಾದಲ್ಲಿ ಕುಟುಂಬದ 11 ಜನ ಸದಸ್ಯರು ಮುಂಬೈಯಿಂದ ಹೊರಟು ಮೇ 18ರಂದು ಮುಂಜಾನೆ 5 ಗಂಟೆಗೆ ಧಾರವಾಡ ತಲುಪಿದ್ದಾರೆ. ಅದೇ ದಿನ ಕುಟುಂಬದ ಎಲ್ಲಾ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಇವರ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಬದಾಮಿ ತಾಲೂಕಿನಲ್ಲಿ 13 ಪಾಸಿಟಿವ್ ಪ್ರಕರಣ – ಗದಗ ಜಿಲ್ಲೆಯ ಗಡಿ ಭಾಗ ಬಂದ್

    ಬದಾಮಿ ತಾಲೂಕಿನಲ್ಲಿ 13 ಪಾಸಿಟಿವ್ ಪ್ರಕರಣ – ಗದಗ ಜಿಲ್ಲೆಯ ಗಡಿ ಭಾಗ ಬಂದ್

    ಗದಗ: ಬಾಗಲಕೋಟೆ ಜಿಲ್ಲೆಯ ಡಾಣಕಶಿರೂರನಲ್ಲಿ ಪಿ-607ರ ಗರ್ಭಿಣಿ ಜೊತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆ ಗಡಿ ಭಾಗದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಮಾಡುತ್ತಿದ್ದಾರೆ.

    ರೋಣ ತಾಲೂಕಿನ ಹುನಗುಂಡಿ ಗ್ರಾಮಕ್ಕೆ ಯಾರೂ ಬರದಂತೆ ರಸ್ತೆ ಮಧ್ಯೆ ಗುಂಡಿ ತೆಗೆದು ಗ್ರಾಮಕ್ಕೆ ದಿಗ್ಭಂಧನ ಹಾಕಲಾಗಿದೆ. ಬದಾಮಿ ತಾಲೂಕಿನ ಡಾಣಕಶಿರೂರ ಗ್ರಾಮ ಹಾಗೂ ಗದಗ ಜಿಲ್ಲೆ ಹುನಗುಂಡಿ ಗ್ರಾಮಕ್ಕೆ ಕೇವಲ 5 ಕಿಲೋಮೀಟರ್ ಅಂತರವಿದೆ. ಆದ್ದರಿಂದ ಜನರ ಒಡನಾಟ ಹೆಚ್ಚಿದ್ದರಿಂದ ಈ ತೀರ್ಮಾನ ಮಾಡಲಾಗಿದೆ.

    ಈ ಕಾರಣದಿಂದ ಈ ಕೊರೊನಾ ಸಂದರ್ಭದಲ್ಲಿ ಬದಾಮಿ ತಾಲೂಕಿನ ಜನರು ಬರದಂತೆ ಜಿಲ್ಲೆಯ ಹುನಗುಂಡಿ ಸಂಪರ್ಕಿಸುವ ಬಸರಕೋಡ, ಹೊಳೆಆಲೂರ, ನೈನಾಪೂರ, ಮಾಡಲಗೇರಿ ಸಂಪರ್ಕಿಸುವ ರಸ್ತೆ ಬಂದ್ ಮಾಡಲಾಗಿದೆ. ಬದಾಮಿ ತಾಲೂಕಿನ ಜನರು ಊರಿನ ಒಳಗೆ ಬರದಂತೆ, ಜೊತೆಗೆ ಈ ಹುನಗುಂಡಿ ಗ್ರಾಮಸ್ಥರು ಬದಾಮಿ ತಾಲೂಕಿಗೆ ಹೋಗದಂತೆ ನಿರ್ಬಂಧ ಹೇರಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಯುವಕರು, ಹಿರಿಯರು ಒಟ್ಟಾಗಿ ರಸ್ತೆ ಬಂದ್ ಮಾಡಿ, ತಮ್ಮ ಊರಿಗೆ ಕೊರೊನಾ ಬರದಂತೆ ತಡೆಯಲು ಪಣತೊಟ್ಟಿದ್ದಾರೆ.

  • ಹಾವೇರಿಯಲ್ಲಿ ಮೊದ್ಲ ಕೊರೊನಾ ಪ್ರಕರಣ- ಮುಂಬೈನಿಂದ ಲಾರಿಯಲ್ಲಿ ಬಂದಿದ್ದ ವ್ಯಕ್ತಿ

    ಹಾವೇರಿಯಲ್ಲಿ ಮೊದ್ಲ ಕೊರೊನಾ ಪ್ರಕರಣ- ಮುಂಬೈನಿಂದ ಲಾರಿಯಲ್ಲಿ ಬಂದಿದ್ದ ವ್ಯಕ್ತಿ

    ಹಾವೇರಿ: ಹಸಿರು ವಲಯದಲ್ಲಿದ್ದ ಹಾವೇರಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಮೊದಲ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

    ಜಿಲ್ಲೆಯ ಸವಣೂರು ಮೂಲದ 32 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಏಪ್ರಿಲ್ 8 ರಂದು ಮುಂಬೈನಿಂದ ಮೂರು ಜನರು ಲಾರಿಯಲ್ಲಿ ಸವಣೂರಿಗೆ ರಾತ್ರಿ ಆಗಮಿಸಿದ್ದರು. ಸ್ಥಳೀಯ ಹಾಗೂ ಆಶಾ ಕಾರ್ಯಕರ್ತೆರ ಮಾಹಿತಿ ಹಿನ್ನೆಲೆ ಏಪ್ರಿಲ್ 29ಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಲಾಗಿತ್ತು. ಅಲ್ಲದೇ ಮೂವರ ಗಂಟಲು ದ್ರವವನ್ನು ಪರೀಕ್ಷೆಗೆ ಲ್ಯಾಬ್‍ಗೆ ಕಳುಹಿಸಲಾಗಿತ್ತು.

    ಪರೀಕ್ಷೆಯಲ್ಲಿ 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಅಲ್ಲದೇ ಸೋಂಕಿತ ವ್ಯಕ್ತಿ 40 ವರ್ಷದ ಅಣ್ಣ ಹಾಗೂ 19 ವರ್ಷದ ಅಣ್ಣನ ಮಗನೊಂದಿಗೆ ಸವಣೂರಿಗೆ ಆಗಮಿಸಿದ್ದ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದಾರೆ.

    ಉಳಿದಂತೆ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಜನರು ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಚಿಕಿತ್ಸೆ ನೀಡಿದ ವೈದ್ಯರ ತಂಡವನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದ 14 ಜನರ ಪತ್ತೆ ಮಾಡಿ, ಅವರನ್ನು ಅವರ ಮನೆಗಳಲ್ಲಿ ಹೋಂ ಕ್ವಾರಂಟೈನ್ ಮಾಡಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಸೋಂಕಿತ ವ್ಯಕ್ತಿ ವಾಸ ಮಾಡುತ್ತಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದ್ದು, ಸುತ್ತಲಿನ 5 ಕಿ.ಮೀ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಸೀಲ್‍ಡೌನ್ ಆಗಿರುವ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳನ್ನ ಪೂರೈಸಲು ಜಿಲ್ಲಾಡಳಿತ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದ್ದಾರೆ.

  • ಚಿಕ್ಕಬಳ್ಳಾಪುರ ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್

    ಚಿಕ್ಕಬಳ್ಳಾಪುರ ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್

    – ರ್‍ಯಾಂಡಮ್ ಟೆಸ್ಟ್ ವೇಳೆ ಮಹಿಳೆಗೆ ಸೋಂಕು ಪತ್ತೆ!

    ಚಿಕ್ಕಬಳ್ಳಾಪುರ: ನಗರದ 17 ನೇ ವಾರ್ಡಿನಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ಧೃಡವಾಗಿದೆ.

    17ನೇ ವಾರ್ಡಿನ ಪಿ-250ರ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗಿದ್ದ. ತದನಂತರ ಈತನ ಮಗ ಹಾಗೂ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಡವಾಗಿತ್ತು. ಇದಾದ ನಂತರ ಈ ಮೃತ ವೃದ್ಧ ದಿನಸಿ ಕಿಟ್ ವಿತರಣೆ ಮಾಡಿದ್ದ ಹಿನ್ನೆಲೆ ಇದೇ ಏರಿಯಾ ದಲ್ಲಿ ದಿನಸಿ ಪಡೆದ ಕುಟುಂಬಗಳ 400ಕ್ಕೂ ಹೆಚ್ಚು ಮಂದಿಯನ್ನು ಸ್ವಾಬ್ ಟೆಸ್ಟ್ ಗೆ ನೀಡಲಾಗಿತ್ತು.

    ಸದ್ಯ ಓರ್ವ ಮಹಿಳೆಗೆ ಕೊರೊನಾ ಇರುವುದು ದೃಢವಾಗಿದ್ದ ಕಾರಣ ಇಡೀ ವಾರ್ಡ್ ಸೀಲ್‍ಡೌನ್ ಮಾಡಲಾಗಿತ್ತು. ಈ ಏರಿಯಾದಲ್ಲಿ ವಯಸ್ಸಾದವರು ಹಾಗೂ ಸಕ್ಕರೆ ಖಾಯಿಲೆ, ಬಿ ಪಿ ಯಿಂದ ಬಳಲುತ್ತಿದ್ದವರಿಗೆ ರ್‍ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19 ಆಗಿದ್ದು, ಆಕ್ಟೀವ್ ಪ್ರಕರಣಗಳ ಸಂಖ್ಯೆ 06ಕ್ಕೆ ಏರಿದೆ.

    ಮಹಿಳೆ ಕೊರೊನಾ ಸೋಂಕಿತ ಮೃತ ವೃದ್ಧನಿಂದ ದಿನಸಿ ಸಹ ಪಡೆದಿಲ್ಲ. ಅವರ ಮನೆಗೂ ಇವರ ಮನೆಗೂ 200 ಮೀಟರ್ ಅಂತರವಿದೆ. ಅವರ ಮನೆಯವರಿಗೆ ಇವರ ಮನೆಯವರಿಗೂ ಸಂಪರ್ಕ ಇರಲಿಲ್ಲ. ಆದರೂ ಈಕೆಗೆ ಹೇಗೆ ಸೋಂಕು ಬಂತು ಎಂಬ ಅನುಮಾನ ಮೂಡಿದ್ದು, ಜಿಲ್ಲಾಡಳಿತಕ್ಕೆ ಮತ್ತೆ ತಲೆನೋವು ತಂದಿದೆ. ಮೇ 3ರ ನಂತರ ಸ್ವಲ್ಪ ಸಡಿಲಿಕೆ ಸಿಗಬಹುದು ಎಂದು ಕಾಯುತ್ತಿದ್ದ ಜನರಿಗೆ ಹೊಸ ಪ್ರಕರಣ ಶಾಕ್ ತಂದಿದೆ.

    ನಗರದಲ್ಲಿ ಲಾಕ್‍ಡೌನ್ ಹಾಗೂ ಸೀಲ್‍ಡೌನ್ ಮತ್ತೆ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಇಂದು ಬಂದಿರುವ 40 ವರ್ಷದ ಮಹಿಳೆಯ ಪತಿ ಇಬ್ಬರು ಮಕ್ಕಳು, ಹಾಗೂ ಮಗಳು ಅಳಿಯ ಹಾಗೂ ಅವರಿಬ್ಬರು ಮಕ್ಕಳು ಸೇರಿ 07 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 19 ಪ್ರಕರಣಗಳಾಗಿದ್ದು, 11 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಜಿಲ್ಲೆಯಲ್ಲಿ ಮೃತಪಟ್ಟಿದ್ದರೆ 06 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಜಿಲ್ಲಾಡಳಿತ 1,967 ಮಂದಿಗೆ ಸ್ವಾಬ್ ಟೆಸ್ಟ್ ಮಾಡಿಸಿದ್ದು, 1,328 ವರದಿ ಬಂದಿದೆ. ಉಳಿದಂತೆ 620 ಮಂದಿಯ ವರದಿ ಬರಬೇಕಿದೆ. ಈ 620 ಮಂದಿಯಲ್ಲಿ ಮತ್ತೆಷ್ಟು ಮಂದಿಗೆ ಸೋಂಕು ಬರಬಹುದು ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ.

    ಕೊರೊನಾ ಸೋಂಕಿತ ಮಹಿಳೆಯನ್ನು ಕ್ವಾರಂಟೈನ್‍ಗೆ ಕರೆದೊಯ್ಯುವ ವೇಳೆ ಆಕೆ ಮಕ್ಕಳನ್ನು ಕಂಡು ಗದ್ಗಗಿತಳಾಗಿದ್ದು, ತಾನು ಮಕ್ಕಳನ್ನು ಬಿಟ್ಟು ಹೋಗಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಗೆ ಜಾಗೃತಿ ಮೂಡಿಸಿ ಬಳಿಕ ಆಕೆಯನ್ನು ಕ್ವಾರಂಟೈನ್‍ಗೆ ಕರೆ ತಂದಿದ್ದಾರೆ.

  • ಬೀಗ ಬೀಳುವ ಭೀತಿಯಲ್ಲಿದೆ ಬೆಂಗಳೂರಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ

    ಬೀಗ ಬೀಳುವ ಭೀತಿಯಲ್ಲಿದೆ ಬೆಂಗಳೂರಿನ ಅತಿ ದೊಡ್ಡ ಖಾಸಗಿ ಆಸ್ಪತ್ರೆ

    ಬೆಂಗಳೂರು: ನಗರದ ಅತಿ ದೊಡ್ಡ ಖಾಸಗಿ ಆಸ್ಪತ್ರೆಗೆ ಬೀಗ ಬೀಳುವ ಭೀತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು, ಈ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕ ಹಿನ್ನೆಲೆಯಲ್ಲಿ ಸದ್ಯ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.

    ನಗರದ ಬಿಳೆಕಲ್ಲಹಳ್ಳಿ ವಾರ್ಡಿನ ಕೋಡಿಚಿಕ್ಕನಹಳ್ಳಿಯ ನಿವಾಸಿಯಾಗಿದ್ದ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಳೆದ 10 ದಿನಗಳಿಂದ ಶೀತ, ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಆದರೆ ಇದಕ್ಕೂ ಮುನ್ನ ಮಹಿಳೆ ನಗರದ ಮೂರು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

    ನಗರದ ಬನ್ನೇರುಘಟ್ಟ, ಜಯನಗರ ಮತ್ತು ಮೈಕೋ ಲೇ ಔಟ್‍ನ ಪ್ರಮುಖ ಮೂರು ಖಾಸಗಿ ಆಸ್ಪತ್ರೆಗೆಗಳಿಗೆ ಕೊರೊನಾ ಸೋಂಕಿತೆ ಭೇಟಿ ನೀಡಿದ್ದರು. ಸದ್ಯ ಕೊರೊನಾ ಪಾಸಿಟಿವ್ ಖಚಿತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಬೀಗ ಜಡಿಯುವುದಕ್ಕೆ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ನಗರದ ಕೇಸ್ ನಂ.565ರ ಈಕೆ ಮೂರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಆ ಬಳಿಕ ಜಯನಗರ ಖಾಸಗಿ ಆಸ್ಪತ್ರೆ ಸೋಂಕಿತೆಯ ಸ್ವಾಬ್ ಟೆಸ್ಟ್ ನಡೆಸಿತ್ತು. ಆದರೆ ಸೋಂಕು ಇರುವುದು ಖಚಿತವಾಗಿದ್ದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲದೇ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಮ್ಮ ಮನೆ ಡಾಕ್ಟರ್ ಇದ್ದು, ಅವರ ಬಳಿಯೇ ಚಿಕಿತ್ಸೆ ತೆಗೆದುಕೊಳ್ಳುತ್ತೇನೆ ಎಂದು ಅಲ್ಲಿಂದ ತೆರಳಿದ್ದಾರೆ.

    ಇತ್ತ ಜಯನಗರದ ಖಾಸಗಿ ಆಸ್ಪತ್ರೆ ಸಿಬ್ಬಂದಿ ಕೂಡ ಈಕೆಗೆ ಕೊರೊನಾ ಲಕ್ಷಣಗಳು ಕಂಡು ಬಂದರು ಸ್ಯಾಂಪಲ್ ತೆಗೆದುಕೊಂಡು ಮನೆಗೆ ಕಳಿಸಿದ್ದಾರೆ. ಈ ವೇಳೆ ಆಕೆಯನ್ನು ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆ ವೇಳೆ ವಿಕ್ಟೋರಿಯಾದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಖಚಿತವಾಗಿತ್ತು. ಕೊರೊನಾ ಪಾಸಿಟಿವ್ ವರದಿ ಖಚಿತವಾದ ಹಿನ್ನೆಲೆಯಲ್ಲಿ ವೃದ್ಧೆಯ ಎಲ್ಲಿ ಹೋಗಿದ್ರು? ಹೇಗೆ ಬಂತು? ಇತ್ಯಾದಿ ಮಾಹಿತಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

  • ರೆಡ್‍ಝೋನ್ ಮಂಗಳೂರಿನಲ್ಲಿ ಮತ್ತೆ ಆತಂಕ- ಮಹಿಳೆಗೆ ಕೊರೊನಾ ಸೋಂಕು

    ರೆಡ್‍ಝೋನ್ ಮಂಗಳೂರಿನಲ್ಲಿ ಮತ್ತೆ ಆತಂಕ- ಮಹಿಳೆಗೆ ಕೊರೊನಾ ಸೋಂಕು

    ಮಂಗಳೂರು: ಮಂಗಳೂರಿನ ಮಹಿಳೆಗೆ ಕೊರೊನಾ ಸೋಂಕು ತಗುಲಿರೋದು ಇಂದು ದೃಢಪಟ್ಟಿದೆ. ಪಾಶ್ರ್ವವಾಯು ಪೀಡಿತರಾಗಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೋಳೂರಿನ ಮಹಿಳೆಗೆ ಸೋಂಕು ತಗಲಿದೆ.

    ಏಪ್ರಿಲ್ 20ರಂದೇ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರೂ, ಅದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದ ಮಹಿಳೆಗೆ ಎರಡು ದಿನಗಳ ಹಿಂದೆ ಸೋಂಕು ತಗುಲಿತ್ತು. ಆಕೆಯ ಸಂಪರ್ಕದಿಂದ ಈಗ ಬೋಳೂರಿನ ಮಹಿಳೆಗೂ ಸೋಂಕು ತಗಲಿದೆ. ಹೀಗಾಗಿ ಮಂಗಳೂರು ನಗರದ ಬೋಳೂರಿನಲ್ಲಿ ಸೋಂಕಿತೆಯ ಮನೆ ಇರುವ 200 ಮೀಟರ್ ಆಸುಪಾಸಿನಲ್ಲಿ ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ.

    ಈ ಪರಿಸರದಲ್ಲಿ 135 ಮನೆಗಳಿದ್ದು ಸುಮಾರು 650 ಮಂದಿ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ. ಇದಲ್ಲದೆ ಮಹಿಳೆಯ ಮನೆಯಲ್ಲಿದ್ದ ಐದು ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದೇ ವೇಳೆ ಬೋಳೂರಿನಿಂದ ಐದು ಕಿಮೀ ವ್ಯಾಪ್ತಿಯಲ್ಲಿ ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಪೊಲೀಸರು ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸದಂತೆ ನಿರ್ಬಂಧಿಸಿದ್ದಾರೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 22ಕ್ಕೇರಿದ್ದು ಜಿಲ್ಲೆಯನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ.

  • ಗದಗ್‍ನಲ್ಲಿ ವೃದ್ಧನಿಗೆ ಕೊರೊನಾ- ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

    ಗದಗ್‍ನಲ್ಲಿ ವೃದ್ಧನಿಗೆ ಕೊರೊನಾ- ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

    ಗದಗ: ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿಯೇ ಇಲ್ಲದ 75 ವರ್ಷದ ವೃದ್ಧನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

    ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಸೋಂಕಿತ ವೃದ್ಧನಿಗೆ(ರೋಗಿ-514)ಗೆ ಯಾರ ಸಂಪರ್ಕವೂ ಇರಲಿಲ್ಲ. ಹೆಲ್ತ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರು ನಗರದ ಗಂಜಿಬಸವೇಶ್ವರ ಸರ್ಕಲ್ ಬಳಿ ನಿವಾಸಿಯಾಗಿದ್ದು, ಮನೆಯಲ್ಲಿ ಸೋಂಕಿತ ವ್ಯಕ್ತಿ ಸೇರಿಸಿ ಒಟ್ಟು 9 ಮಂದಿ ಸದಸ್ಯರು ವಾಸವಿದ್ದರು. ಮನೆಯಲ್ಲಿದ್ದ 8 ಜನರ ವರದಿಗಳು ಸದ್ಯ ನೆಗೆಟಿವ್ ಎಂದು ಬಂದಿವೆ.

    ಪ್ರಾಥಮಿಕ ಸಂರ್ಪಕದಲ್ಲಿದ್ದ 24 ಜನರನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಗುರುತಿಸಿದೆ. ಅವರನ್ನ ಕೊರೊನಾ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಇದೂವರೆಗೆ ಒಟ್ಟು 5ನೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ 80 ವರ್ಷದ ವೃದ್ಧೆ(ರೋಗಿ-166) ಮೃತಪಟ್ಟಿದ್ದಾರೆ.

    ಉಳಿದ ನಾಲ್ಕು ಜನರು ಗದಗ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ 8 ದಿನಗಳ ನಂತರ ಮತ್ತೊಂದು ಪಾಸಿಟಿವ್ ಕೇಸ್ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ನಗರದ ಗಂಜಿ ಬಸವೇಶ್ವರ ಸರ್ಕಲ್ ಬಳಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.