Tag: Corona Positive

  • 2ನೇ ಡೋಸ್ ಲಸಿಕೆ ಪಡೆದು 27 ದಿನ- ಚಾಮರಾಜನಗರ ಡಿಸಿಗೆ ಕೊರೊನಾ ದೃಢ

    2ನೇ ಡೋಸ್ ಲಸಿಕೆ ಪಡೆದು 27 ದಿನ- ಚಾಮರಾಜನಗರ ಡಿಸಿಗೆ ಕೊರೊನಾ ದೃಢ

    ಚಾಮರಾಜಕನಗರ: ಕೋವಿಶೀಲ್ಡ್ 2ನೇ ಡೋಸ್ ಲಸಿಕೆ ಪಡೆದು 27 ದಿನ ಕಳೆದ ಬಳಿಕವೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ.

    ಜಿಲ್ಲಾಧಿಕಾರಿಗೆ ಎರಡು ದಿನಗಳ ಹಿಂದೆ ನೆಗಡಿ, ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಶನಿವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಭಾನುವಾರ ಫಲಿತಾಂಶ ಬಂದಿದ್ದು, ಪಾಸಿಟಿವ್ ದೃಢಪಟ್ಟಿದೆ. ಸದ್ಯ ಅವರು ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ.

    ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಫೆ.8ರಂದು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಮಾ.8ರಂದು ಎರಡನೇ ಡೋಸ್ ಲಸಿಕೆ ಸಹ ಪಡೆದಿದ್ದರು. ಕೋವಿಶೀಲ್ಡ್‍ನ ಎರಡನೇ ಡೋಸ್ ಪಡೆದು 27 ದಿನಗಳಾಗಿದೆ.

  • ಬಿಜೆಪಿ ಶಾಸಕ ನಿಂಬಣ್ಣವರಿಗೂ ಕೊರೊನಾ ಸೋಂಕು ದೃಢ

    ಬಿಜೆಪಿ ಶಾಸಕ ನಿಂಬಣ್ಣವರಿಗೂ ಕೊರೊನಾ ಸೋಂಕು ದೃಢ

    ಹುಬ್ಬಳ್ಳಿ: ಕಲಘಟಗಿ ಬಿಜೆಪಿ ಶಾಸಕ ಸಿಎಂ ನಿಂಬಣ್ಣನವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿಯ ಸುಚಿರಾಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಕೆಲ ದಿನಗಳಿಂದ ಮೈಕೈ ನೋವು, ಚಳಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಸಕ ನಿಂಬಣ್ಣನವರ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಪರೀಕ್ಷೆ ನಂತರ ಶಾಸಕರಿಗೆ ಕೊರೊನಾ ಇರೋದು ದೃಢಪಟ್ಟಿದೆ. ಕೊರೊನಾ ದೃಢಪಟ್ಟಿರುವುದನ್ನು ಅಧಿಕೃತವಾಗಿ ಹೇಳಿಕೊಂಡಿರುವ ಶಾಸಕರು, ಮತಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದ್ದು ಶ್ರೀಘ್ರದಲ್ಲೆ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಸಂಪರ್ಕದಲ್ಲಿದ್ದವರು ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಧಾರವಾಡ ಜಿಲ್ಲೆಯ ಶಾಸಕರ ಪೈಕಿ ಈ ಹಿಂದೆ ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯರಿಗೂ ಸೋಂಕು ದೃಢಪಟ್ಟು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ಬಿಜೆಪಿ ಶಾಸಕ ನಿಂಬಣ್ಣನವರ ಅವರಿಗೂ ಸೋಂಕು ಕಾಣಿಸಿಕೊಂಡ ಪರಿಣಾಮ ಜಿಲ್ಲೆಯಲ್ಲಿ ಇಬ್ಬರು ಶಾಸಕರಿಗೆ ಕೊರೊನಾ ಬಂದತಾಗಿದೆ.

  • ಪಾಸಿಟಿವ್ ಬಂದಿರೋ ಗರ್ಭಿಣಿಗೆ ಹೆರಿಗೆ- ವೈದ್ಯರಿಗೆ ಸುಧಾಕರ್ ಧನ್ಯವಾದ

    ಪಾಸಿಟಿವ್ ಬಂದಿರೋ ಗರ್ಭಿಣಿಗೆ ಹೆರಿಗೆ- ವೈದ್ಯರಿಗೆ ಸುಧಾಕರ್ ಧನ್ಯವಾದ

    ಬೆಂಗಳೂರು: ಕೊರೊನಾ ಪಾಸಿಟಿವ್ ಬಂದಿರುವ ಗರ್ಭಿಣಿಗೆ ಧೈರ್ಯ ತುಂಬಿ ಹೆರಿಗೆ ಮಾಡಿಸಿದ ವೈದ್ಯರಿಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾದ ಕೋವಿಡ್ ಪಾಸಿಟಿವ್ ಗರ್ಭಿಣಿಗೆ ಧೈರ್ಯ ತುಂಬಿ ಹೆರಿಗೆ ಮಾಡಿಸಿದ ಡಾ. ಮಂಜುನಾಥ್ ದಳವಾಯಿ, ನರ್ಸ್, ರಾಣಿ ಲಖನಗೌಡ ಸೇರಿದಂತೆ ಎಲ್ಲಾ ವೈದ್ಯ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

    ಕೊರೊನಾ ಮಹಾಮಾರಿ ರಾಜ್ಯಕ್ಕೆ ಕಾಲಿಟ್ಟ ಬಳಿಕ ಜನಜೀವನ ಅಸ್ತವ್ಯಸ್ತ ಆಗಿದೆ. ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಬರದೆ ಹಲವು ಮಂದಿ ಮೃತಪಟ್ಟಿದ್ದಾರೆ. ಇನ್ನು ಕೆಲವೆಡೆಗಳಲ್ಲಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಘಟನೆಗಳು ಇವೆ. ಇವುಗಳ ಮಧ್ಯೆ ಕೊರೊನಾ ಪಾಸಿಟಿವ್ ಬಂದಿರುವ ಗರ್ಭಿಣಿಗೆ ಧೈರ್ಯ ತುಂಬಿ ಹೆರಿಗೆ ಮಾಡಿಸಿದ ವೈದ್ಯರು ನಿಜಕ್ಕೂ ಮಾದರಿಯಾಗಿದ್ದಾರೆ.

  • ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ಗೆ ಮತ್ತೆ ಕ್ವಾರಂಟೈನ್?

    ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ಗೆ ಮತ್ತೆ ಕ್ವಾರಂಟೈನ್?

    ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಮೂರನೇ ಬಾರಿ ಕ್ವಾರಂಟೈನ್ ಆಗುವ ಭೀತಿ ಎದುರಾಗಿದೆ.

    ಸಚಿವ ಸುಧಾಕರ್ ಅವರ ಆಪ್ತ ಸಹಾಯಕರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈಗಾಗಲೇ ವಿಧಾನಸೌಧದ ಸುಧಾಕರ್ ಅವರ ಕಚೇರಿ 339 ಕೊಠಡಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೇ ಆಪ್ತ ಸಿಬ್ಬಂದಿ ಶಾಖೆ ಇದ್ದ 339-ಎ ಕೊಠಡಿಯನ್ನು ಕೂಡ ಸೀಲ್‍ಡೌನ್ ಮಾಡಲಾಗಿದೆ.

    ಈ ಹಿಂದೆ ಸಚಿವರ ಕುಟುಂಸ್ಥರು ಹಾಗೂ ಆಪ್ತ ವಲಯದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ಎರಡು ಸಂದರ್ಭದಲ್ಲಿ ಸಚಿವರು ಕ್ವಾರಂಟೈನ್ ಆಗಿದ್ದರು. ಸದ್ಯ ಸಚಿವರ ಆಪ್ತ ಸಹಾಯಕರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕ್ವಾರಂಟೈನ್ ಆಗುತ್ತಾರಾ ಎಂಬ ಅನುಮಾನ ಮೂಡಿದೆ.

    ವಿಧಾನಸೌಧದಲ್ಲಿ ಸಚಿವರು ಹಾಗೂ ಆಪ್ತ ಸಹಾಯಕರ ಕೊಠಡಿಯನ್ನು ಸ್ಯಾನಿಟೈಸ್ ಮಾಡಿ ಬಳಿಕ ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೇ ಕೊಠಡಿಯತ್ತಾ ಯಾರು ತೆರಳದಂತೆ ಚೇರ್‌ಗಳನ್ನು ಅಡ್ಡ ಇಡಲಾಗಿದೆ. ಒಂದೊಮ್ಮೆ ಸಚಿವರು ತಮ್ಮ ಆಪ್ತ ಸಹಾಯಕ ಸಂಪರ್ಕಕ್ಕೆ ಕೆಲ ಸಮಯದಿಂದ ಬಾರದಿದ್ದರೆ ಕ್ವಾರಂಟೈನ್ ಆಗುವ ಅಗತ್ಯವಿರುವುದಿಲ್ಲ.

  • ಎನ್‍ಕೌಂಟರ್ ಆಗಿದ್ದ ದುಬೆ ಸಹಚರನಿಗೆ ಕೊರೊನಾ- ವಿಕಾಸ್ ಮೃತದೇಹ ಪರೀಕ್ಷೆಗೆ ರವಾನೆ

    ಎನ್‍ಕೌಂಟರ್ ಆಗಿದ್ದ ದುಬೆ ಸಹಚರನಿಗೆ ಕೊರೊನಾ- ವಿಕಾಸ್ ಮೃತದೇಹ ಪರೀಕ್ಷೆಗೆ ರವಾನೆ

    ಲಕ್ನೋ: ಮೃತ ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ಸಹಚರನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಇಂದು ಎನ್‍ಕೌಂಟರ್ ಗೆ ಬಲಿಯಾದ ವಿಕಾಸ್ ದುಬೆ ಮೃತದೇಹವನ್ನು ಪೊಲೀಸರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದಾರೆ.

    ಕಳೆದ ಎರಡು ದಿನದ ಹಿಂದೆ ವಿಕಾಸ್ ದುಬೆ ಬಲಗೈ ಬಂಟನಂತಿದ್ದ ಅಮರ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿದ್ದು, ಆತನಿಗೆ ಕೊರೊನಾ ಪಾಟಿಸಿವ್ ಬಂದಿತ್ತು. ಈ ಕಾರಣದಿಂದ ಇಂದು ಬೆಳಗ್ಗೆ ಎನ್‍ಕೌಂಟರ್ ಆದ ವಿಕಾಸ್ ದುಬೆ ಮೃತದೇಹವನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

    ಎಂಟು ಮಂದಿ ಪೊಲೀಸರನ್ನು ಅಮಾನುಷವಾಗಿ ಕೊಂದು ಹಾಕಿದ್ದ ಪ್ರಕರಣದಲ್ಲಿ, ಬುಧವಾರ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಸಿಬ್ಬಂದಿ ಪ್ರಮುಖ ಆರೋಪಿ ವಿಕಾಸ್ ದುಬೆ ಸಹಚರ ಅಮರ್ ದುಬೆಯನ್ನು ಎನ್‍ಕೌಂಟರ್ ಮಾಡಿತ್ತು. ಎನ್‍ಕೌಂಟರ್ ಗೆ ಬಲಿಯಾದ ಅಮರ್ ದುಬೆ ವಿಕಾಸ್ ದುಬೆ ಅಪ್ತನಾಗಿದ್ದು, ಈತ ಕೂಡ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಅಮರ್ ಹೆಸರು ಕೂಡ ಎಫ್‍ಐಆರ್ ಅಲ್ಲಿ ಉಲ್ಲೇಖವಾಗಿತ್ತು.

    ಗುರುವಾಗ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ವಿಕಾಸ್ ದುಬೆಯನ್ನು ಇಂದು ಮುಂಜಾನೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಮಧ್ಯಪ್ರದೇಶದ ಪೊಲೀಸರಿಂದ ದುಬೆಯನ್ನು ವಶಕ್ಕೆ ಪಡೆದು ಕರೆತರುವ ಸಮಯದಲ್ಲಿ ನಮ್ಮ ವಾಹನ ಅಪಘಾತವಾಗಿ ಪಲ್ಟಿಯಾಗಿತ್ತು. ಈ ವೇಳೆ ದುಬೆ ತಮ್ಮ ಪೊಲೀಸರ ಬಂದೂಕನ್ನು ಕಿತ್ತುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತನನ್ನು ಎನ್‍ಕೌಂಟರ್ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗ್ಯಾಂಗ್ ಅವರ ಮೇಲೆ ಗುಂಡಿನ ದಾಳಿ ಮಾಡಿ ಎಂಟು ಮಂದಿ ಪೊಲೀಸರನ್ನು ಕೊಂದು ಹಾಕಿತ್ತು.

  • ಪರಪ್ಪನ ಅಗ್ರಹಾರಕ್ಕೂ ಕೊರೊನಾ ಎಂಟ್ರಿ- 20 ಕೈದಿಗಳು, 6 ಮಂದಿ ಜೈಲು ಸಿಬ್ಬಂದಿಗೆ ಸೋಂಕು

    ಪರಪ್ಪನ ಅಗ್ರಹಾರಕ್ಕೂ ಕೊರೊನಾ ಎಂಟ್ರಿ- 20 ಕೈದಿಗಳು, 6 ಮಂದಿ ಜೈಲು ಸಿಬ್ಬಂದಿಗೆ ಸೋಂಕು

    ಬೆಂಗಳೂರು: ಚೀನಿ ಮಹಾಮಾರಿ ದಿನೇ ದಿನೇ ತನ್ನ ಆರ್ಭಟವನ್ನು ಜಾಸ್ತಿ ಮಾಡುತ್ತಿದ್ದು, ಈಗ ಪರಪ್ಪನ ಅಗ್ರಹಾರಕ್ಕೂ ವಕ್ಕರಿಸಿದೆ.

    ಸಿಲಿಕಾನ್ ಸಿಟಿಯ ಸೆಂಟ್ರಲ್ ಜೈಲಿನಲಿದ್ದ 20 ಕೈದಿಗಳು ಮತ್ತು ಆರು ಮಂದಿ ಜೈಲು ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಜೈಲಿನಲ್ಲಿ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೊಸದಾಗಿ ಅರೆಸ್ಟ್ ಆಗಿ ಜೈಲಿಗೆ ತೆರಳಿದ್ದ ಅರೋಪಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

    ಮೂರು ದಿನಗಳ ಹಿಂದೆ ಜೈಲಿನಲ್ಲಿದ್ದ ಸುಮಾರು 150 ಜನರ ಸ್ಯಾಂಪಲ್ ಪಡೆಯಲಾಗಿತ್ತು. ಈಗ ಇದರ ವರದಿ ಬಂದಿದ್ದು, 150 ಜನರ ಪೈಕಿ ಜೈಲು ಸಿಬ್ಬಂದಿಗೂ ಸೇರಿಸಿ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೊಸದಾಗಿ ಬಂದ 450 ಆರೋಪಿಗಳನ್ನು ಬೇರೆ ಕೈದಿಗಳ ಜೊತೆ ಸಂಪರ್ಕ ಇಲ್ಲದಂತೆ ಮಾಡಲಾಗಿತ್ತು. ಜೈಲಿಗೆ ಬಂದ ಪ್ರತಿ ಕೈದಿಯನ್ನು 21 ದಿನ ಕ್ವಾರಂಟೈನ್ ಮಾಡಲಾಗುತಿತ್ತು. ಕ್ವಾರಂಟೈನ್‍ನಲ್ಲಿದ್ದ ಕೈದಿಗಳಿಗೆ ಈಗ ಕೋವಿಡ್ ದೃಢಪಟ್ಟಿದೆ. ನಾಳೆ ಮತ್ತಷ್ಟು ಜನರ ಸ್ಯಾಂಪಲ್ ಪಡೆಯಲಾಗುತ್ತೆ.

    ಸೋಂಕು ದೃಢಪಟ್ಟ ಎಲ್ಲರೂ ವಿಚಾರಣಾಧೀನ ಕೈದಿಗಳಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಬಂಧನವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಿದ್ದರು. 22ನೇ ದಿನದ ಕೊರೊನಾ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ ಫ್ರೀಡಂ ಪಾರ್ಕ್ ಬಳಿ ಇರುವ ಜೈಲು ಅಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತಿದ್ದ ಸಿಬ್ಬಂದಿಗೂ ಕೊರೊನಾ ಕಾಣಿಸಿಕೊಂಡಿದೆ.

  • 52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ದೃಢ

    52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ದೃಢ

    – ನಗರದ 4 ಅಂಗನವಾಡಿ ಮಕ್ಕಳಿಗೆ ಕೊರೊನಾಂತಕ

    ಬೆಂಗಳೂರು: ಸುಮಾರು 52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದೆ.

    ಯಲಹಂಕ ಬಳಿಯ ಅಟ್ಟೂರು ಹಾಗೂ ಅಟ್ಟೂರು ಬಡಾವಣೆಯ ಅಂಗನವಾಡಿ ಸೇರಿದಂತೆ, ನಗರದ 4 ಅಂಗನವಾಡಿ ಕೇಂದ್ರಗಳಲ್ಲಿ ಈ ಡಾಕ್ಟರ್ ಆರೋಗ್ಯ ತಪಾಸಣೆ ನಡೆಸಿದ್ದರು. ಆಗ ತಾನೇ ಹುಟ್ಟಿದ ಮಕ್ಕಳಿಂದ 3 ವರ್ಷದ ಮಕ್ಕಳವರೆಗೆ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಈ ಎಲ್ಲ ಮಕ್ಕಳ ಪೋಷಕರಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ.

    4 ಅಂಗನವಾಡಿ ಕೇಂದ್ರದಲ್ಲಿ ಒಟ್ಟು 52 ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದೊಂದು ಅಂಗನವಾಡಿಯಲ್ಲಿ 13 ಮಕ್ಕಳಿಗೆ ತಪಾಸಣೆ ನಡೆಸಿದ್ದರು ಎನ್ನಲಾಗಿದೆ. ಕಳೆದ ಜೂನ್ 22ರಂದು ವೈದ್ಯೆ ಮಕ್ಕಳಿಗೆ ತಪಾಸಣೆ ನಡೆಸಿದ್ದರು. ಆದರೆ ಜೂನ್ 27ಕ್ಕೆ ವೈದ್ಯೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಕ್ಕಳಿಗೆ ತಪಾಸಣೆ ನಡೆಸಿದ ಐದೇ ದಿನಗಳಲ್ಲಿ ವೈದ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಕ್ಕಳ ಪೋಷಕರಿಗೆ ಆತಂಕ ಹೆಚ್ಚಾಗಿದೆ.

    ಇದರ ಜೊತೆಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ವೇಳೆ ವೈದ್ಯರು ಕೈಗೆ ಗ್ಲೌಸ್ ಕೂಡ ಬಳಸಿರಲಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಗ್ಲೌಸ್ ಬಳಕೆ ಮಾಡದೇ ಇರುವುದರಿಂದ ತಪಾಸಣೆಗೆ ಒಳಗಾಗಿರುವ ಮಕ್ಕಳಿಗೆ ಸೋಂಕು ಹರಡುವ ಭೀತಿ ಹೆಚ್ಚಾಗಿದೆ.

  • ಕೊರೊನಾಗೆ ಹೆದರಿ ವೃದ್ಧೆ ಆಸ್ಪತ್ರೆಯಲ್ಲೇ ನೇಣಿಗೆ ಶರಣು

    ಕೊರೊನಾಗೆ ಹೆದರಿ ವೃದ್ಧೆ ಆಸ್ಪತ್ರೆಯಲ್ಲೇ ನೇಣಿಗೆ ಶರಣು

    ಬೆಂಗಳೂರು: ಮಹಾಮಾರಿ ಕೊರೊನಾ ರಾಜ್ಯವನ್ನು ಒಕ್ಕರಿಸಿದ ಬಳಿಕ ಜನ ಜೀವನ ಅಸ್ತವ್ಯಸ್ತವಾಗಿದ್ದಲ್ಲದೇ, ಕೆಲವರು ಸೋಂಕಿಗೆ ಹೆದರಿ ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ನಗರದ ಕೆ.ಸಿ ಜನರಲ್ ಆಸ್ಪತೆಯಲ್ಲಿಯೂ ಕೂಡ ಅಂತದ್ದೇ ಘಟನೆಯೊಂದು ನಡೆದಿದೆ.

    ಹೌದು. ಕುಣಿಗಲ್ ಮೂಲದ 60 ವರ್ಷದ ವೃದ್ಧೆ ಕೊರೊನಾ ಪಾಸಿಟಿವ್ ದೃಢಪಟ್ಟು ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬಾತ್ ರೂಮ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ವೃದ್ಧೆ ನಗರದ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು. ಕಳೆದ 18ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ವೃದ್ಧೆ, ಸೊಸೆ, ಮೊಮ್ಮಗ ಸೇರಿ ಮೂವರು ಆಸ್ಪತ್ರೆ ಗೆ ದಾಖಲಾಗಿದ್ದರು. ಆದರೆ ಇದೀಗ ವೃದ್ಧೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

  • ಪಾತಕಿ ದಾವೂದ್‍ಗೂ ಕೊರೊನಾ – ಪತ್ನಿಗೂ ಅಂಟಿದ ಸೋಂಕು

    ಪಾತಕಿ ದಾವೂದ್‍ಗೂ ಕೊರೊನಾ – ಪತ್ನಿಗೂ ಅಂಟಿದ ಸೋಂಕು

    ನವದೆಹಲಿ: ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಆತನ ಪತ್ನಿಗೂ ಸೋಂಕು ಅಂಟಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ದಾವೂದ್ ಮತ್ತು ಅವನ ಹೆಂಡತಿಗೂ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ ಎಂದು ಪಾಕಿಸ್ತಾನ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

    ಪಾಕ್‍ನ ಸರ್ಕಾರಿ ಮೂಲಗಳ ಪ್ರಕಾರ ದಾವೂದ್ ಮತ್ತು ಅವನ ಪತ್ನಿ ಮೆಹಜಾಬಿನ್‍ಗೂ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಅವರನ್ನು ಕರಾಚಿಯಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಇಟ್ಟು ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಜೊತೆಗೆ ದಾವೂದ್ ಜೊತೆ ಇದ್ದ ಅವನ ಭದ್ರತಾ ಸಿಬ್ಬಂದಿಗಳಿಗೂ ಸೋಂಕು ಹಬ್ಬಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಪಾಕ್ ಸರ್ಕಾರಿ ಮೂಲಗಳು ತಿಳಿಸಿವೆ.

    ಮುಂಬೈನ ಡೊಂಗ್ರಿಯಲ್ಲಿ ಜನಿಸಿದ ದಾವೂದ್ ಇಬ್ರಾಹಿಂ ಕಸ್ಕರ್ ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ದಾವೂದ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ. ದಾವೂದ್ 1993ರಲ್ಲಿ ನಡೆದ ಬಾಂಬೆ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನ ವಿರುದ್ಧ ಹಲವಾರು ಇಂಟರ್ ಪೋಲ್ ನೋಟಿಸ್‍ಗಳು ಜಾರಿಯಾಗಿವೆ. ಆದರೆ ಆತ ಮಾತ್ರ ಪಾಕಿಸ್ತಾನದಲ್ಲಿ ಆವಿತು ಕುಳಿತ್ತಿದ್ದಾನೆ.

  • ರಾಜ್ಯದಲ್ಲಿಂದು 257 ಹೊಸ ಕೊರೊನಾ ಪ್ರಕರಣ ದೃಢ- 4 ಸಾವು, 106 ಮಂದಿ ಡಿಸ್ಚಾರ್ಜ್

    ರಾಜ್ಯದಲ್ಲಿಂದು 257 ಹೊಸ ಕೊರೊನಾ ಪ್ರಕರಣ ದೃಢ- 4 ಸಾವು, 106 ಮಂದಿ ಡಿಸ್ಚಾರ್ಜ್

    – ಉಡುಪಿಯಲ್ಲಿ ಅತಿ ಹೆಚ್ಚು 92 ಪ್ರಕರಣ
    – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೇರಿಕೆ

    ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸ 257 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ.

    ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಇಂದಿನ ವರದಿಯ ಅನ್ವಯ ಉಡುಪಿಯಲ್ಲಿ ಅತಿ ಹೆಚ್ಚು 92 ಪ್ರಕರಣಗಳು ಪತ್ತೆಯಾಗಿದ್ದು, ರಾಯಚೂರಿನಲ್ಲಿ 88 ಪ್ರಕರಣಗಳು ದೃಢವಾಗಿದೆ. ಬೆಂಗಳೂರಿನಲ್ಲಿ 9, ಮಂಡ್ಯ, ಹಾಸನದಲ್ಲಿ ತಲಾ 15, ದಕ್ಷಿಣ ಕನ್ನಡದಲ್ಲಿ 04, ಬೆಳಗಾವಿ 12, ದಾವಣಗೆರೆ 13, ಚಿಕ್ಕಬಳ್ಳಾಪುರ ಮತ್ತು ಗದಗ ಜಿಲ್ಲೆಯಲ್ಲಿ ತಲಾ 2, ವಿಜಯಪುರ, ಬಳ್ಳಾರಿ, ಹಾವೇರಿ, ಮೈಸೂರು, ತುಮಕೂರಿನಲ್ಲಿ ತಲಾ ಒಂದು ಕೋವಿಡ್-19 ಪ್ರಕರಣ ದಾಖಲಾಗಿದೆ. ಇದರಲ್ಲಿ 155 ಪಾಸಿಟಿವ್ ಪ್ರಕರಣಗಳು ಅಂತರರಾಜ್ಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದೆ.

    ಇಂದು ರಾಜ್ಯದಲ್ಲಿ 106 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡಿರುವವರ ಸಂಖ್ಯೆ 1610ಕ್ಕೇರಿದೆ. ನಿನ್ನೆ ಸಂಜೆ ಗದಗ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದ ಕೊರೊನಾ ಪಾಸಿಟವ್ ಪ್ರಕರಣ ಸೇರಿ 4 ಜನ ಇಂದು ಸಾವನ್ನಪಿದ್ದಾರೆ. ಇದರೊಂದಿಗೆ ಕೊರೊನಾದಿಂದ ಮೃತರಾದವರ ಸಂಖ್ಯೆ ರಾಜ್ಯದಲ್ಲಿ 57ಕ್ಕೇರಿದೆ. ಕೊರೊನಾ ಅಲ್ಲದ ಪ್ರಕರಣದಲ್ಲಿ ಇಂದು ಇಬ್ಬರು ಮೃತ ಪಟ್ಟಿದ್ದಾರೆ. 13 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಗದಗ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 4082, 44 ವರ್ಷದ ಪುರುಷ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾಗೆ 2ನೇ ಬಲಿಯಾಗಿದೆ. ಮೃತ ವ್ಯಕ್ತಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹ ಮತ್ತು ಮೂತ್ರಕೋಶ ತೊಂದರೆಯಿಂದ ಬಳಲುತ್ತಿದ್ದ ಅವರು ಮೇ 27 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಜ್ವರ, ಉಸಿರಾಟ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಜೂನ್ 1 ರಂದು ಕಿಮ್ಸ್ ಗೆ ದಾಖಲಿಸಲಾಗಿತ್ತು. ದಾವಣೆಗೆರೆಯ ರೋಗಿ ಸಂಖ್ಯೆ 4093, 83 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಇವರು ರೋಗಿ-2560ರ ಸಂಪರ್ಕಕ್ಕೆ ಬಂದಿದ್ದರು. ಎದೆ ನೋವಿನಿಂದ ಬಳಲುತ್ತಿದ್ದ ಇವರನ್ನು ಮೇ 31 ರಂದು ದಾವಣಗೆರೆಗೆ ಆಸ್ಪತ್ರೆ ದಾಖಲಿಸಲಾಗಿತ್ತು.

    ಬೆಂಗಳೂರು ನಗರದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದು, ತೀವ್ರ ಜ್ವರ, ನೆಗಡಿಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದರು. ಮತ್ತೊಂದು ಪ್ರಕರಣದಲ್ಲಿ 60 ವರ್ಷದ ಮಹಿಳೆ ನಿನ್ನೆ ಜ್ವರ ಮತ್ತು ವಾಂತಿ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

    ಬೆಂಗಳೂರಿನ ರಾಗಿಗುಡ್ಡದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದೇ ರೈಲಿನಲ್ಲಿ ಆಗಮಿಸಿದ್ದ ಅಮ್ಮ, ಮಗ, ಮಗಳು ಮತ್ತು ತಂಗಿ ಕ್ವಾರಂಟೈನಲ್ಲಿದ್ದರು. ಆದರೆ ಕೊರೊನಾ ವರದಿ ಬರುವ ಮುನ್ನವೇ ಇವರು ಮನೆಗೆ ಹಿಂದಿರುಗಿದ್ದು, ಆ ಬಳಿಕ ನಾಲ್ಕು ಜನ ಬೆಂಗಳೂರಿನ ನಾಲ್ಕು ಏರಿಯಾಗಳಲ್ಲಿ ವಾಸಿಸುತ್ತಿದ್ದರು. ಮಗಳು ಟ್ಯಾನರಿ ರೋಡ್ ಗಂಡನ ಮನೆಗೆ ತೆರಳಿದ್ದು, ಅಮ್ಮ, ಮಗ ರಾಗಿ ಗುಡ್ಡದ ಮನೆಗೆ ಹಾಗೂ ತಂಗಿ ಪುಟ್ಟೇನಹಳ್ಳಿಯ ಮನೆಗೆ ತೆರಳಿದ್ದರು. ಉಳಿದಂತೆ ಕಲಾಸಿಪಾಳ್ಯದಲ್ಲಿ ಕೊರೊನಾ ಪ್ರಕರಣ ವರದಿಯಾಗಿದ್ದು, 42 ವರ್ಷದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದೆ. ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಸರ್ಜರಿಗೆ ಎಂದು ಆಸ್ಪತ್ರೆಗೆ ತೆರಳಿದ್ದರು. ಆದರೆ ಸರ್ಜರಿಗೂ ಮುನ್ನ ನಡೆಸಿದ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಸದ್ಯ ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯಾಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಉಸಿರಾಟದ ಸಮಸ್ಯೆ ಹೊಂದಿದ್ದ 50 ವರ್ಷದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಿದೆ. ಹೊರಮಾವುನಲ್ಲಿ ಒಬ್ಬ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಗದಗ ಪ್ರಯಾಣದ ಹಿನ್ನೆಲೆ ಹೊಂದಿದ್ದರು.