Tag: Corona Positive

  • ಗಾಂಧಿನಗರದಲ್ಲಿ ಒಬ್ಬರಿಗೆ ಕೊರೊನಾ – 2 ದಿನದಲ್ಲಿ ಪಾಸಿಟಿವ್ ದರ ದುಪ್ಪಟ್ಟು ಏರಿಕೆ

    ಗಾಂಧಿನಗರದಲ್ಲಿ ಒಬ್ಬರಿಗೆ ಕೊರೊನಾ – 2 ದಿನದಲ್ಲಿ ಪಾಸಿಟಿವ್ ದರ ದುಪ್ಪಟ್ಟು ಏರಿಕೆ

    ಬೆಂಗಳೂರು: ದಿನೇ ದಿನೇ ಕೊರೊನಾ ಪಾಸಿಟಿವ್ (Covid Positive) ದರ ದುಪ್ಪಟ್ಟು ಏರಿಕೆಯಾಗುತ್ತಿದ್ದು, ಇದೀಗ ಗಾಂಧಿನಗರದ (Gandhi Nagar) ಒಬ್ಬರಲ್ಲಿ ಕೊರೊನಾ (Corona) ಕಾಣಿಸಿಕೊಂಡಿದೆ.

    ಗಾಂಧಿನಗರದ 46 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೋವಿಡ್ ಕಾಣಿಸಿಕೊಂಡಿದ್ದು, ಹೇಗೆ ಬಂತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದಾರೆ. ಸದ್ಯ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಕಾರಿನ ಮೇಲೆ ಬಿತ್ತು ಬೃಹತ್‌ ಮರ, ನಾಲ್ವರು ಪಾರು

    ರಾಜ್ಯದಲ್ಲಿ ಇದೀಗ ಕೊರೊನಾ ಟೆಸ್ಟಿಂಗ್ ಆರಂಭಿಸಲಾಗಿದ್ದು, ದಿನಗಳೆದಂತೆ ಪಾಸಿಟಿವ್ ದರ ಜಾಸ್ತಿಯಾಗುತ್ತಲಿದೆ. ಸೋಮವಾರ 191 ಜನರಿಗೆ ಟೆಸ್ಟ್ ಮಾಡಲಾಗಿದ್ದು, 37 ಜನರಿಗೆ ಪಾಸಿಟಿವ್ ಆಗಿದೆ. ಜೊತೆಗೆ 171 ಜನರಿಗೆ RT-PCR ಟೆಸ್ಟ್ ಮಾಡಲಾಗಿದೆ.

    ಮೇ 25ರಂದು ನಡೆಸಿದ ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ದರ 8.65% ಇತ್ತು. ಮೇ 26ರಂದು ನಡೆಸಿದ ಟೆಸ್ಟ್‌ನಲ್ಲಿ ಪಾಸಿಟಿವ್ ದರ 19.37%ಗೆ ಏರಿಕೆ ಆಗಿದೆ. ಇನ್ನೂ ಈ ಕುರಿತು ಸೋಮವಾರ ಸರ್ಕಾರ ನಡೆಸಿದ ಸಭೆಯಲ್ಲಿ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ ಎಂದಿದೆ. ಜೊತೆಗೆ ನಗರದ ಮಾಲ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಕುರಿತು ಇಂದು ತೀರ್ಮಾನಿಸುವ ಸಾಧ್ಯತೆಯಿದೆ.

    ಮೇ 26ರ ಜಿಲ್ಲಾವಾರು ಮಾಹಿತಿ ಪ್ರಕಾರ, ಬೆಂಗಳೂರು 73, ಬೆಂಗಳೂರು ಗ್ರಾಮಾಂತರ 2, ಮೈಸೂರು 3, ವಿಜಯನಗರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಂದೊಂದು ಕೋವಿಡ್‌ ಸಕ್ರಿಯ ಪ್ರಕರಣಗಳು ವರದಿಯಾಗಿದೆ.ಇದನ್ನೂ ಓದಿ: ಟಾಪ್‌-2ಗೆ ಫೈಟ್‌ | ಮಳೆಯಿಂದ ರದ್ದಾದ್ರೆ ಕ್ವಾಲಿಫೈಯರ್-1 ಆರ್‌ಸಿಬಿ ಎಂಟ್ರಿ!

  • ಮತ್ತೆ ಬೆಂಗಳೂರಿನ ಮೂವರಲ್ಲಿ ಕಾಣಿಸಿಕೊಂಡ ಕೊರೊನಾ

    ಮತ್ತೆ ಬೆಂಗಳೂರಿನ ಮೂವರಲ್ಲಿ ಕಾಣಿಸಿಕೊಂಡ ಕೊರೊನಾ

    ಬೆಂಗಳೂರು: ನಗರದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಮತ್ತೆ ಮೂರು ಜನರಲ್ಲಿ ಕೊರೊನಾ (Corona) ಕಾಣಿಸಿಕೊಂಡಿದೆ.

    ಬೆಂಗಳೂರಿನ (Bengaluru) ಮೂರು ಏರಿಯಾಗಳಾದ ಡಿಜೆಹಳ್ಳಿ, ಸಿವಿರಾಮನ್ ನಗರ ಹಾಗೂ ಜೈ ಭುವನೇಶ್ವರಿ ನಗರದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಕೊರೊನಾ ಪಾಸಿಟಿವ್ ಆಗಿದೆ.ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ – ಕೆಆರ್‌ಎಸ್‌ಗೆ ಹೆಚ್ಚಿದ ಒಳಹರಿವು

    ಮೂವರಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಕೋವಿಡ್ ಕಾಣಸಿಕೊಂಡಿದ್ದು. ಸದ್ಯ ಹೋಂ ಐಸೋಲೇಷನ್‌ನಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ.

    ಈಗಾಗಲೇ ಮಲ್ಲೇಶ್ವರಂನ 45 ವರ್ಷದ ವ್ಯಕ್ತಿಗೆ ಹಾಗೂ ರಾಜಾಜಿನಗರದ 38 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇಬ್ಬರನ್ನು ಹೋಂ ಐಸೂಲೇಷನ್‌ನಲ್ಲಿ ಇರಿಸಲಾಗಿದೆ.

    ಮೇ 17ರಂದು ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌ನ (WhiteField) 84 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ಇವೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಮುನೀರ್‌ಗೆ ಬೆಂಕಿ ಫೋಟೋ ಗಿಫ್ಟ್‌ ನೀಡಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕ್‌!

     

  • ರಾಜ್ಯದಲ್ಲಿ ಇಂದು 22 ಮಂದಿಯಲ್ಲಿ ಕೊರೊನಾ ದೃಢ- ಇದುವರೆಗೆ ಮೂವರು ಸಾವು

    ರಾಜ್ಯದಲ್ಲಿ ಇಂದು 22 ಮಂದಿಯಲ್ಲಿ ಕೊರೊನಾ ದೃಢ- ಇದುವರೆಗೆ ಮೂವರು ಸಾವು

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ (Corona Virus) ಅಬ್ಬರ ಶುರುವಾಗಿದ್ದು, ಇಂದು 22 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಓರ್ವ ವೃದ್ಧ ಕೋವಿಡ್ ಸೋಂಕಿನಿಂದ  ಸಾವಿಗೀಡಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ ಕಂಡಿದೆ.

    ರಾಜ್ಯದಲ್ಲಿ 808 ಮಂದಿಗೆ ಕೋವಿಡ್ ಟೆಸ್ಟ್ (Covid Test) ನಡೆಸಲಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿದೆ. 20 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ 7 ಮಂದಿ ಐಸಿಯುನಲ್ಲಿದ್ದಾರೆ. 72 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಐವರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ರೇಟ್ 2.47% ರಷ್ಟಿದೆ.

    ಕೋವಿಡ್ ಉಪತಳಿ ಜೆಎನ್.1 ವೈರಸ್ ಬಗ್ಗೆ ಅಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಅಲರ್ಟ್ ಮಾಡಿದೆ. ಆದರೆ ಇದರ ಬಗ್ಗೆ ಆತಂಕಪಡಬೇಕಿಲ್ಲ ಎಂಬ ಮಾತನ್ನು ಕೂಡ ಸೇರಿಸಿದೆ. ಕೋವಿಡ್ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜೊತೆ ವರ್ಚೂವಲ್ ಸಭೆ ನಡೆಸಿದ್ರು. ಈ ಸಂದರ್ಭದಲ್ಲಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ರು. ಈ ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಪಾಲ್ಗೊಂಡಿದ್ರು. ನಾವು ಎಲ್ಲಾ ರೀತಿಯಿಂದ ಸನ್ನದ್ದರಾಗಿದ್ದೇವೆ. ಅಗತ್ಯಬಿದ್ರೆ ನೆರವು ಕೇಳ್ತೇವೆ, ಸಹಕಾರ ಕೊಡಿ ಎಂದು ಕೇಂದ್ರ ಸಚಿವರನ್ನು ಕೋರಿದರು.

  • ಕಮಲ್ ಪುತ್ರಿ ಶ್ರುತಿ ಹಾಸನ್‍ಗೆ ಕೊರೊನಾ ಪಾಸಿಟಿವ್

    ಕಮಲ್ ಪುತ್ರಿ ಶ್ರುತಿ ಹಾಸನ್‍ಗೆ ಕೊರೊನಾ ಪಾಸಿಟಿವ್

    ಚೆನ್ನೈ: ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಶ್ರುತಿ ಹಾಸನ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಎಲ್ಲರಿಗೂ ನಮಸ್ಕಾರ. ನನಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಚೇತರಿಸಿಕೊಳ್ಳುತ್ತಿದ್ದೇನೆ. ಕಾಯಲು ಸಾಧ್ಯವಿಲ್ಲ ಶೀಘ್ರದಲ್ಲಿಯೇ ಕೆಲಸಕ್ಕೆ ಮರಳುತ್ತೇನೆ. ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

     

    View this post on Instagram

     

    A post shared by Shruti Haasan (@shrutzhaasan)

    ಶ್ರುತಿ ಹಾಸನ್ ಕೊನೆಯದಾಗಿ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗೆಡೆಗೊಂಡಿದ್ದ ಬೆಸ್ಟ್ ಸೆಲ್ಲರ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಮಿಥುನ್ ಚಕ್ರವರ್ತಿ, ಶ್ರುತಿ ಹಾಸನ್, ಅರ್ಜನ್ ಬಾಜ್ವಾ, ಗೌಹರ್ ಖಾನ್, ಸತ್ಯಜೀತ್ ದುಬೆ ಮತ್ತು ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಶ್ರುತಿ ಹಾಸನ್ ಪ್ರಭಾಸ್ ಜೊತೆ ಸಲಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಜಗಪತಿ ಬಾಪು ಕೂಡ ಅಭಿನಯಿಸಿದ್ದಾರೆ. ಮತ್ತೊಂದೆಡೆ ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಶ್ರುತಿ ಹಾಸನ್ ಸ್ಕ್ರೀನ್ ಶೇರ್ ಮಾಡಲಿದ್ದಾರೆ.  ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್‍ನಿಂದ ಗ್ರೌಂಡ್ ರಿಪೋರ್ಟ್ ಮಾಡಿದ ವಿದ್ಯಾರ್ಥಿಗಳು

  • ಕೋವಿಡ್ ಸೋಂಕಿತ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿ – ಜನರಲ್ಲಿ ಆತಂಕ

    ಕೋವಿಡ್ ಸೋಂಕಿತ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿ – ಜನರಲ್ಲಿ ಆತಂಕ

    ನೆಲಮಂಗಲ: ಕೋವಿಡ್ ಪಾಸಿಟಿವ್ ಇರುವ ಆರೋಗ್ಯ ಸಿಬ್ಬಂದಿಯೊಬ್ಬ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ನಸಿರ್ಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಮೂರ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಇಲ್ಲಾ ಅಂದರೆ ಮನೆಯಲ್ಲಿ ಹೋಮ್ ಐಸೋಲೇಶನ್ ಆಗಬೇಕು. ಅದನ್ನು ಬಿಟ್ಟು ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಭಾಗವಹಿಸಿದ್ದಾನೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

    ನರಸಿಂಹಮೂರ್ತಿ, ಕೊರೊನಾ ಪಾಸಿಟಿವ್ ವರದಿಯಿದ್ದರೂ ಉದ್ದಟತನ ಮೇರೆದಿದ್ದು, ಗ್ರೌಂಡ್‍ನಲ್ಲಿ ಬಿಂದಾಸ್ ಆಗಿ ಓಡಾಡಿದ್ದಾರೆ. 3 ದಿನದ ಹಿಂದೆ ನಡೆದ ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದ್ದಾರೆ. ಈ ಸಿಬ್ಬಂದಿಯಿಂದ ಕ್ರಿಕೆಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಆತಂಕ ಶುರುವಾಗಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ಕೋಳಿ ವ್ಯಾಪಾರ ಜೋರು – ಕೋವಿಡ್ ನಿಯಮ ಉಲ್ಲಂಘನೆ

     

  • ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

    ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

    ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವುದಾಗಿ ಅವರು ಎಂದು ತಿಳಿಸಿದ್ದಾರೆ.

    ಸದ್ಯ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಗಡ್ಕರಿ ಅವರು ತಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಆಗಿ ಅಲ್ಲಿ ಇರುವುದರ ಜೊತೆಗೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ಪಡೆದುಕೊಂಡು ನಾನು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್‌

    Nitin Gadkari

    ಹಿಂದಿನ ವರ್ಷ ಸಪ್ಟೆಂಬರ್ ತಿಂಗಳಿನಲ್ಲಿ ಅವರಿಗೆ ಮೊದಲ ಬಾರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಹಾರ ಸಿಎಂ ನಿತಿಶ್ ಕುಮಾರ್ ಹಾಗೂ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದನ್ನೂ ಓದಿ: BJP ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷರಿಗೆ ಕೊರೊನಾ ಪಾಸಿಟಿವ್

  • ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್

    ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್

    ರಾಮನಗರ: ಕಳೆದ ಎರಡು ದಿನದಿಂದ ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿ ಜವರೇಗೌಡಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

    ಶನಿವಾರ ಪಾದಯಾತ್ರೆ ನಡೆಸಬೇಡಿ ಎಂದು ಮನವಿ ಮಾಡಲು ಎಡಿಸಿ ಬಂದಿದ್ದರು. ನಿನ್ನೆ ಬೆಳಗ್ಗೆಯೂ ಕೊರೊನಾ ನಿಯಮ ಪಾಲಿಸಿ ಎಂದು ಹೇಳಿದ್ದರು. ಬಳಿಕ ಸಂಜೆ ಡಿಕೆಶಿ ಬಳಿ ಬಂದು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕೂಡ ಹೇಳಿದ್ದರು. ಈ ವೇಳೆ ಎಡಿಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೈದಿದ್ದರು. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್

    ಇತ್ತ ಪಾದಯಾತ್ರೆ ಬಳಿ ಹೋಗಿದ್ದ ಕಾರಣ ಎಡಿಸಿ ಇಂದು ಬೆಳಗ್ಗೆ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಸದ್ಯ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ

  • ಘಾನಾದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು – ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ

    ಘಾನಾದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು – ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ

    ಮಂಗಳೂರು: ಹೈರಿಸ್ಕ್ ದೇಶ ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದನ್ನೂ ಓದಿ: ಭಾರತದಲ್ಲಿ ಓಮಿಕ್ರಾನ್‌ ಸೆಂಚುರಿ – 101 ಮಂದಿಗೆ ಸೋಂಕು

    ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ರ್ಯಾಪಿಡ್ ಆರ್.ಟಿ.ಪಿ.ಸಿ.ಆರ್. ತಪಾಸಣೆ ವೇಳೆ ಪಾಸಿಟಿವ್ ಪತ್ತೆಯಾಗಿದೆ. ಆ ಪ್ರಯಾಣಿಕನ ಹತ್ತಿರದ ಸೀಟಿನ ಒಟ್ಟು 27 ಪ್ರಯಾಣಿಕರಿಗೆ ಟೆಸ್ಟ್ ನಡೆಸಿ ಕ್ವಾರೆಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಪ್ರಯಾಣಿಕರ ಗಂಟಲು ದ್ರವ್ಯವನ್ನು ಜನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ರಾಷ್ಟ್ರಪತಿಯ ದೃಷ್ಟಿ ತೆಗೆದ ಮಂಜಮ್ಮ ಜೋಗತಿ!

    ಪಾಸಿಟಿವ್ ಬಂದ ಹಿನ್ನೆಲೆ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದು, ಏರ್ ಪೋರ್ಟ್ ಮುಖ್ಯಸ್ಥರು, ಏರ್ ಪೋರ್ಟ್ ಆರೋಗ್ಯಾಧಿಕಾರಿ (ಎ.ಪಿ.ಹೆಚ್.ಓ), ಜಿಲ್ಲಾ ಸರ್ವೇಕ್ಷಾಣಾಧಿಕಾರಿ (ಡಿ.ಎಸ್.ಓ), ಕೋವಿಡ್ ನೋಡಲ್ ಅಧಿಕಾರಿ ಹಾಗೂ ಅಪೋಲೋ ಲ್ಯಾಬ್ ಮುಖ್ಯಸ್ಥರೊಂದಿಗೆ ಈ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಿಗಿಗೊಳಿಸಲು ಸೂಚನೆ ನೀಡಿದ್ದಾರೆ.

  • ಅರ್ಜುನ್ ಸರ್ಜಾಗೆ ಕೊರೊನಾ ಪಾಸಿಟಿವ್

    ಅರ್ಜುನ್ ಸರ್ಜಾಗೆ ಕೊರೊನಾ ಪಾಸಿಟಿವ್

    ಚೆನ್ನೈ: ನಟ ಅರ್ಜುನ್ ಸರ್ಜಾ ಅವರಿಗೂ ಕೋವಿಡ್ ಪಾಸಿಟಿವ್ ಆಗಿದೆ. ಈ ವಿಷಯವನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.

    ಸಂದೇಶದಲ್ಲಿ  ಏನಿದೆ?: ಲ್ಲರಿಗೂ ಹಾಯ್, ನನಗೆ ಕೋವಿಡ್ ಪಾಸಿಟಿವ್ ಆಗಿದೆ. ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ನಾನು ಐಸೊಲೇಟ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಾನು ಈಗ ಚೆನ್ನಾಗಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ರಾಮ ಭಕ್ತ ಹನುಮಾನ್ ಕಿ ಜೈ ಎಂದು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿ ಮೂಲಕವಾಗಿ ಅರ್ಜುನ್ ಸರ್ಜಾ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ.


    ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆಗುತ್ತಿದೆ. ಇತ್ತೀಚೆಗಷ್ಟೇ ನಟಿ ಕರೀನಾ ಕಪೂರ್ ಅವರಿಗೆ ಕೋವಿಡ್ ಸೋಂಕು ತಗಲಿರುವ ವಿಷಯ ಬಹಿರಂಗ ಆಗಿತ್ತು. ಇದೀಗ ಅರ್ಜುನ್ ಸರ್ಜಾ ಅವರಿಗೂ ಕೊರೊನಾ ಸೋಂಕು ತಗುಲಿದೆ ಎನ್ನುವ ವಿಚಾರ ಹೊರಬಿದ್ದಿದೆ. ಅರ್ಜುನ್? ಸರ್ಜಾ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕವಾಗಿ ಹಾರೈಸುತ್ತಿದ್ದಾರೆ.

  • ಮದುವೆಗೆ ಹೋಗಿ ಕೊರೊನಾ ತಂದುಕೊಳ್ಳಬೇಡಿ – ಉಡುಪಿ ಡಿಸಿ ವಿನಂತಿ

    ಮದುವೆಗೆ ಹೋಗಿ ಕೊರೊನಾ ತಂದುಕೊಳ್ಳಬೇಡಿ – ಉಡುಪಿ ಡಿಸಿ ವಿನಂತಿ

    ಉಡುಪಿ: ಜಿಲ್ಲೆಯಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ವಿಮರ್ಶೆ ಮಾಡಿ ನೋಡಿದಾಗ ಮದುವೆ ಮನೆಗಳಲ್ಲೇ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಉಡುಪಿ ಡಿಸಿ ಜಿ ಜಗದೀಶ್ ಹೇಳಿದ್ದಾರೆ.

    ಈ ಕುರಿತಂತೆ ಮಾತನಾಡಿದ ಅವರು, ನಾನು ಜಿಲ್ಲೆಯ ಅನೇಕ ಸೋಂಕಿತರ ಮನೆಗಳಿಗೆ, ಐಸೊಲೇಟೇಡ್ ಆದವರನ್ನು ಸಂಪರ್ಕಿಸಿದ್ದೇನೆ. ಇಲ್ಲಿ ತಿಳಿದ ವಿಷಯವೆಂದರೆ ಮದುವೆ ಸಮಾರಂಭಗಳಿಗೆ, ಮೆಹಂದಿ ಮತ್ತಿತರ ಕಾರ್ಯಕ್ರಮಗಳಿಗೆ ಹೋದವರಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ಗುಂಪಾಗಿ ಅಗತ್ಯ ವಸ್ತು ಖರೀದಿಸುವವರಿಗೂ ಸೋಂಕು ತಗುಲಿದೆ. ಆದ್ದರಿಂದ ಯಾವುದೇ ಸಮಾರಂಭಗಳಿಗೂ ಹೋಗಬೇಡಿ. ಗುಂಪು ಸೇರಬೇಡಿ ಎಂದು ಕೈಮುಗಿದು ಡಿಸಿರವರು ಮನವಿ ಮಾಡಿಕೊಂಡಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಜನರ ಸಹಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇದೇ ರೀತಿ ಸಹಕಾರ ನೀಡಿದರೆ ಇನ್ನೊಂದು ಲಾಕ್‍ಡೌನ್‍ಗೆ ಹೋಗುವುದು ತಪ್ಪಲಿದೆ ಎಂದರು.