Tag: Corona Patient

  • ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್

    ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್

    ದೊಡ್ಡಬಳ್ಳಾಪುರ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆಸ್ಪತ್ರೆಯಿಂದ ಎಸ್ಕೇಪ್ ಆಗಿ ಸಿಬ್ಬಂದಿಗೆ ತಲೆ ಬಿಸಿ ನೀಡಿದ ಘಟನೆ ದೊಡ್ಡಬಳ್ಳಾಪುರ ಸಮೀಪದ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ.

    ಜ.3 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೊಡ್ಡಬಳ್ಳಾಪುರದ ಮಣಿಪಾಲ್ ಆಸ್ಪತ್ರೆಗೆ ರವಾನೆಯಾಗಿದ್ದ 26 ವರ್ಷದ ಸೋಂಕಿತ ವ್ಯಕ್ತಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಳ್ಳಲು ವೃದ್ಧೆಯ ರಂಪಾಟ

     

     

    ಬೆಳಗ್ಗೆ 11 ಗಂಟೆಗೆ ರೋಗಿ ಆಸ್ಪತ್ರೆಗೆ ದಾಖಲಾಗಿದ್ದು, 11:55 ಕ್ಕೆ ಆತ ಎಸ್ಕೇಪ್ ಆಗಿದ್ದಾನೆ. ಸೋಂಕಿತನನ್ನು ಆಸ್ಪತ್ರೆಯಲ್ಲಿ ಹುಡುಕಿದಾಗ ಆತ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

    ಸೋಂಕಿತನ ಮಾಹಿತಿಯನ್ನು ಆಧರಿಸಿ ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO

  • ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ

    ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಹಿಂದಿರುಗಿಸಿ-ಪುಟ್ಟ ಬಾಲಕಿಯ ಮನವಿ

    ಮಡಿಕೇರಿ: ಕೊರೊನಾ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ, ನನ್ನ ತಾಯಿ ನೆನೆಪುಗಳು ಇರುವ ಮೊಬೈಲ್ ಫೋನ್ ಅನ್ನು ದಯವಿಟ್ಟು ಹಿಂದಿರುಗಿಸಿ ಎಂದು ಪುಟ್ಟ ಬಾಲಕಿಯೊಬ್ಬಳು ಎಲ್ಲರ ಮನಕಲಕುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದಿದ್ದಾಳೆ.

    ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಅವರ ಮಗಳು ಹೃತೀಕ್ಷಾ ಹೀಗೆ ಎಲ್ಲರ ಕರುಳು ಹಿಂಡುವಂತೆ ಪತ್ರ ಬರೆದಿರುವ ಪುಟ್ಟ ಬಾಲಕಿಯಾಗಿದ್ದಾಳೆ. ಮೇ 6 ರಂದು ಬಾಲಕಿ ಹೃತೀಕ್ಷಾ ಈಕೆಯ ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೊರೊನಾ ಸೋಂಕು ತಗುಲಿತ್ತು. ಹೃತೀಕ್ಷಾ ಮತ್ತು ನವೀನ್ ಇಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊರೊನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆದರೆ ಪ್ರಭಾ ಅವರಿಗೆ ಚಿಕಿತ್ಸೆ ಫಲಿಸದೆ ಮೇ 16ರಂದು ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದರು. ಆದರೆ ಅವರೊಂದಿಗೆ ಇದ್ದ ಫೋನ್ ಅನ್ನು ಹಿಂದಿರುಗಿಸಲಿಲ್ಲ. ಆ ಫೋನ್‍ನಲ್ಲಿ ನನ್ನ ತಾಯಿಯ ನೆನಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ ನನ್ನ ತಾಯಿಯ ನೆನಪುಗಳನ್ನು ಉಳಿಸಿ ಕೊಡಿ ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ ಎಂದು ಬಾಲಕಿ ಹೃತೀಕ್ಷಾ ಕೊಡಗು ಜಿಲ್ಲಾಧಿಕಾರಿ, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕರುಳು ಹಿಂಡುವಂತೆ ಪತ್ರ ಬರೆದಿದ್ದಾಳೆ.

  • 250 ಟಾಕ್ಸಿಗಳನ್ನು ಮಿನಿ ಅಂಬುಲೆನ್ಸ್ ಆಗಿ ಪರಿವರ್ತಿಸಿದ ಚೆನ್ನೈ ನಾಗರಿಕ ಸಂಸ್ಥೆ

    250 ಟಾಕ್ಸಿಗಳನ್ನು ಮಿನಿ ಅಂಬುಲೆನ್ಸ್ ಆಗಿ ಪರಿವರ್ತಿಸಿದ ಚೆನ್ನೈ ನಾಗರಿಕ ಸಂಸ್ಥೆ

    ಚೆನ್ನೈ: ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸಂಸ್ಥೆಗಳು, ಎನ್‍ಜಿಒಗಳು ಮತ್ತು ಅನೇಕ ವ್ಯಕ್ತಿಗಳು ಸಹಾಯ ಮಾಡಲು ಮುಂದೆ ಬರತ್ತಿದ್ದಾರೆ. ಸದ್ಯ ಚೆನ್ನೈನಲ್ಲಿಯೂ ಸಹ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚೆನ್ನೈನ ನಾಗರಿಕ ಸಂಸ್ಥೆ 250 ಟ್ಯಾಕ್ಸಿಗಳನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಿದೆ.

    ಗ್ರೇಟರ್ ಚೆನ್ನೈ ಕಾಪೋರೇಷನ್ 250 ಕೋವಿಡ್-ವಿಶೇಷ ಟ್ಯಾಕ್ಸಿಗಳನ್ನು ಮಿನಿ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ಇಪ್ಪತ್ತು ವಾಹನಗಳಿಗೆ ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್ ಸಚಿವ ಕೆ.ಎನ್. ನೆಹರುರವರು ಚಾಲನೆ ನೀಡಿದರು.

    ಈ ಕುರಿತಂತೆ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಆಯುಕ್ತ ಗಗನ್ ಸಿಂಗ್ ಬೇಡಿ, 108 ಅಂಬುಲೆನ್ಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಮತ್ತು ಆಕ್ಸಿಜನ್ ಅಗತ್ಯವಿಲ್ಲದವರು ಕೂಡ 108 ಅಂಬುಲೆನ್ಸ್‌ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಆಕ್ಸಿಜನ್ ಅಗತ್ಯವಿರುವವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಟ್ಯಾಕ್ಸಿ ಹಾಗೂ ಕಾರುಗಳನ್ನು ತಾತ್ಕಾಲಿಕ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ನಾಗರಿಕ ಸಂಘವು ಪ್ರತಿ ವಲಯದಲ್ಲಿ 15 ವಾಹನಗಳನ್ನು ನಿಗದಿಪಡಿಸಿದೆ ಮತ್ತು 250 ವಾಹನಗಳನ್ನು ಕಾರನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ಆದೇಶಿಸಿದೆ ಎಂದರು.

  • ಕೊರೊನ ಸೋಂಕಿತರಿದ್ದ ಅಂಬುಲೆನ್ಸ್ ಗೆ ವಾಹನ ಡಿಕ್ಕಿ, ಬೆಂಕಿ – ಮೂವರ ಸ್ಥಿತಿ ಗಂಭೀರ

    ಕೊರೊನ ಸೋಂಕಿತರಿದ್ದ ಅಂಬುಲೆನ್ಸ್ ಗೆ ವಾಹನ ಡಿಕ್ಕಿ, ಬೆಂಕಿ – ಮೂವರ ಸ್ಥಿತಿ ಗಂಭೀರ

    ನೆಲಮಂಗಳ: ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಂಬುಲೆನ್ಸ್ ಹೊತ್ತಿ ಉರಿದ ಘಟನೆ ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ನಡೆದಿದೆ.

    ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಪರಿಣಾಮ ಅಂಬುಲೆನ್ಸ್ ನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತುಮಕೂರು ಮಾರ್ಗದಿಂದ ಬೆಂಗಳೂರು ಕಡೆ ಅಂಬುಲೆನ್ಸ್ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಂಬುಲೆನ್ಸ್ ನಲ್ಲಿ ನಾಲ್ಕು ಜನ ಸೋಂಕಿತರು ಮತ್ತು ಚಾಲಕ ಸೇರಿ ಐವರು ಇದ್ದ ಬಗ್ಗೆ ಮಾಹಿತಿ ಇದೆ. ಕೂಡಲೇ ಸ್ಥಳೀಯರು ಅಂಬುಲೆನ್ಸ್ ಗೆ ತಗುಲಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

  • ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದ ಕೊರೊನಾ ಸೋಂಕಿತರು

    ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದ ಕೊರೊನಾ ಸೋಂಕಿತರು

    ಧಾರವಾಡ/ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು. ಈ ವೇಳೆ ಅಣ್ಣಿಗೇರಿ ಪುರಸಭೆಯ ಮತಗಟ್ಟೆ ಸಂಖ್ಯೆ 50ರಲ್ಲಿ ಇಬ್ಬರು ಕೊರೊನಾ ಸೋಂಕಿತರು ಪಿಪಿಇ ಕಿಟ್ ಧರಿಸಿ ಕೋವಿಡ್ ನಿಯಂತ್ರಣದ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಮತ ಚಲಾಯಿಸಿದರು.

    ಹೋಂ ಐಸೋಲೇಷನ್ ನಲ್ಲಿದ್ದ ಓರ್ವ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಓರ್ವ ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದರು. ಇವರು ಮತಗಟ್ಟೆಗೆ ಬಂದು ಹೋಗಲು ಜಿಲ್ಲಾಡಳಿತದಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಮತದಾನದ ನಂತರ ಮತಗಟ್ಟೆಯನ್ನು ಪುನಃ ಸಂಪೂರ್ಣ ಸ್ಯಾನಿಟೈಸ್ ಮಾಡಲಾಯಿತು ಎಂದು ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್. ಎಂ.ಹೊನಕೇರಿ ಹೇಳಿದ್ದಾರೆ.

  • ಬೆಳಗ್ಗೆ 10 ಗಂಟೆಗೆ ಸೋಂಕು ದೃಢ- ರಾತ್ರಿ 11ಕ್ಕೆ ಬಂದ ಅಂಬುಲೆನ್ಸ್

    ಬೆಳಗ್ಗೆ 10 ಗಂಟೆಗೆ ಸೋಂಕು ದೃಢ- ರಾತ್ರಿ 11ಕ್ಕೆ ಬಂದ ಅಂಬುಲೆನ್ಸ್

    ಹಾವೇರಿ: ಕೊರೊನಾ ಸೋಂಕು ದೃಢಪಟ್ಟಿದ್ದ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆರೇಗೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಅರವತ್ತು ವರ್ಷದ ಸೋಂಕಿತೆ ವೃದ್ಧೆಯ ಪುತ್ರ ಬೆಳಗ್ಗೆ ಹತ್ತು ಗಂಟೆಗೆ ಸೋಂಕು ದೃಢಪಟ್ಟ ಮಾಹಿತಿ ನೀಡಿದ್ರೂ ರಾತ್ರಿ ಹನ್ನೊಂದು ಗಂಟೆಗೆ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಹಾನಗಲ್ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿ ವಿರುದ್ಧ ಸೋಂಕಿತನ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗ್ಗೆಯಿಂದ ಫೋನ್ ಮಾಡಿದ್ರೆ ಅಂಬ್ಯುಲೆನ್ಸ್ ಇಲ್ಲ, ಬರುತ್ತೆ ಬರುತ್ತೆ, ಡಿಎಚ್‍ಓ ಕಳಿಸ್ತಾರೆ ಅಂತಾ ಸಬೂಬು ಹೇಳಿದ್ದಾರೆ. ಡಿಎಚ್‍ಓ ಅಂಬ್ಯುಲೆನ್ಸ್ ಕಳಿಸಿಲ್ಲ, ಬೆಡ್ ಖಾಲಿ ಇರ್ಲಿಲ್ಲ, ಈಗ ಬೆಡ್ ಖಾಲಿ ಆಗಿವೆ ಅಂತಾ ಸಬೂಬು ಹೇಳಿ ಸಮಯವನ್ನ ಕಳೆದಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರಗೌಡ ಪಾಟೀಲ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೋಂಕಿತೆಯನ್ನ ಸಾಗಿಸಲು ಇಷ್ಟೊಂದು ತಡಮಾಡಿದ್ರೆ ನಮ್ಮನ್ನ ಹೋಂ ಕ್ವಾರಂಟೈನ್ ನಲ್ಲಿ ಇಟ್ಟುಬಿಡಿ ಎಂದು ಅಧಿಕಾರಿ ವಿರುದ್ಧ ವೃದ್ಧೆಯ ಪುತ್ರ ಆಕ್ರೋಶ ಹೊರಹಾಕಿದ್ದಾರೆ.

  • ತಾಂಡಾಗಳಲ್ಲಿರುವ ಸೋಂಕಿತರಿಂದ ಉದ್ಧಟತನ-ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಸೇರಲು ನಕಾರ

    ತಾಂಡಾಗಳಲ್ಲಿರುವ ಸೋಂಕಿತರಿಂದ ಉದ್ಧಟತನ-ಪಾಸಿಟಿವ್ ಬಂದ್ರೂ ಆಸ್ಪತ್ರೆಗೆ ಸೇರಲು ನಕಾರ

    – ಸೋಂಕಿತರ ಮನವೊಲಿಸಲು ಪೊಲೀಸರು, ಜಿಲ್ಲಾಡಳಿತದ ಹರಸಾಹಸ

    ಯಾದಗಿರಿ: ಕ್ವಾರಂಟೈನ್ ಅವಧಿ ಮುಗಿಸಿ ಕೊರೊನಾ ವರದಿ ಬರುವ ಮುನ್ನವೇ ತಮ್ಮ ಗ್ರಾಮಗಳಿಗೆ ತೆರಳಿರುವ ಮಹಾರಾಷ್ಟ್ರದ ಕಾರ್ಮಿಕರಿಂದ ಮತ್ತೊಂದು ತಲೆ ನೋವನ್ನು ಯಾದಗಿರಿ ಜಿಲ್ಲಾಡಳಿತ ಎದುರಿಸುತ್ತಿದೆ.

    ಕ್ವಾರಂಟೈನ್ ಅವಧಿ ಮುಗಿಸಿ ಮನೆಗಳಿಗೆ ತೆರಳಿರುವ ಕಾರ್ಮಿಕರ ವರದಿಗಳು ಈಗ ಪಾಸಿಟಿವ್ ಬರುತ್ತಿದ್ದು, ಸೋಂಕಿತರನ್ನು ವಾಪಸು ಕೋವಿಡ್ ಆಸ್ಪತ್ರೆಗೆ ಕರೆತರಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಮನೆಗೆ ಹೋಗಿರುವ ಸೋಂಕಿತರು ಪುನಃ ಆಸ್ಪತ್ರೆಗೆ ಬರಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಗ್ರಾಮಗಳಿಗೆ ಬರುತ್ತಿರುವ ಪೊಲೀಸರು, ಮತ್ತು ಅಧಿಕಾರಗಳ ಜೊತೆ ಕೆಲ ತಾಂಡಾಗಳ ಜನರು ವಾಗ್ವಾದ ನಡೆಸುತ್ತಿದ್ದಾರೆ.

    ಯಾದಗಿರಿ ತಾಲೂಕಿನ ಥಾವರುನಾಯಕ್ ತಾಂಡಾ, ಶಹಪುರದ ಬೇವನಹಳ್ಳಿ ತಾಂಡಾ, ಗುರುಮಿಠಕಲ್ ನ ಚಿಂತನಳ್ಳಿ ತಾಂಡಾಗಳಲ್ಲಿ ಸೋಂಕಿತರು ಉದ್ಧಟತನ ತೋರುತ್ತಿದ್ದಾರೆ. ಸೋಂಕು ದೃಢ ಹಿನ್ನೆಲೆ ಜನರನ್ನು ಕರೆ ತರಲು ತಾಂಡಾಗೆ ತೆರಳಿದ್ದ ಪೊಲೀಸರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

    ಕ್ವಾರಂಟೈನ್ ಮುಗಿಸಿ ಬಂದವರನ್ನ ಮತ್ತೆ ಏಕೆ ಕರೆದುಕೊಂಡು ಹೋಗುತ್ತೀರಿ, ನಾವು ಬರೋದಿಲ್ಲ ಎಂದು ಅಸಡ್ಡೆಯ ಮಾತುಗಳನ್ನಾಡುತ್ತಿದ್ದಾರೆ. ಸಾಂಸ್ಥಿಕ ಕ್ವಾರೆಂಟನ್ ನಲ್ಲಿದ್ದ ವಿವಿಧ ತಾಂಡಾಗಳ ಜನರ ಕ್ವಾರಂಟೈನ್ ಅವಧಿ ಜೂನ್ 7ರಂದು ಮುಗಿದಿತ್ತು. ಆದ್ರೆ ಇವರ ವರದಿ ಬಂದಿರಲಿಲ್ಲ. ಕ್ವಾರಂಟೈನ್ ಗಳಲ್ಲಿ ಕೆಲವರು ಗಲಾಟೆ ನಡೆಸಿದ್ದರು. ಹೀಗಾಗಿ ಜಿಲ್ಲಾಡಳಿತ ಇವರಿಗೆ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿ ಬಿಡುಗಡೆಗೊಳಿಸಿತ್ತು.

  • ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

    ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾ ಸ್ಫೋಟ ಆಗುತ್ತಿದೆ. ಇನ್ನೂ ಅರ್ಧಲಕ್ಷ ಸ್ಯಾಂಪಲ್ ಟೆಸ್ಟ್‌ಗಳ ವರದಿ ಬರಬೇಕಿದೆ. ಮುಂಬೈನಿಂದ ಒಂದೂವರೆ ಲಕ್ಷ ಮಂದಿ ಕನ್ನಡಿಗರು ರಾಜ್ಯಕ್ಕೆ ಬರಲು ಸಜ್ಜಾಗಿದ್ದಾರೆ. ಕೊರೊನಾ ಸ್ಫೋಟದ ಸದ್ಯದ ತೀವ್ರತೆ ಗಮನಿಸಿದರೆ ಮುಂದಿನ 10 ದಿನದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಬಹುದು ಎಂದು ಅಂದಾಜಿಸಲಾಗಿದೆ.

    ಕೊರೊನಾ ಸೋಂಕಿತರಿಗೆ ಎಲ್ಲಿ ಹೇಗೆ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿದೆ. 7 ಸಾವಿರ ಬೆಡ್‍ಗಳನ್ನು ರೆಡಿ ಮಾಡಿದೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ದೇಶದಲ್ಲಿ ಎಲ್ಲೂ ಇರದ ದುಬಾರಿ ದರಗಳನ್ನು ಕೊರೊನಾ ಚಿಕಿತ್ಸೆಗೆ ನಿಗದಿ ಮಾಡಲು ಮುಂದಾಗಿದೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಸರ್ಕಾರವನ್ನು ಪ್ರಶ್ನೆ ಮಾಡಿದೆ.

    ಕೊರೊನಾ ತಾಂಡವ ಆಡುತ್ತಿರುವ ಮಹಾರಾಷ್ಟ್ರದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಇಷ್ಟೊಂದು ದರ ಇಲ್ಲ. ನಮ್ಮ ರಾಜ್ಯದಲ್ಲೇಕೆ ದುಪ್ಪಟ್ಟು ದರ ವಿಧಿಸಲು ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿದೆ ಎನ್ನುವ ಪ್ರಶ್ನೆಯನ್ನ ಪಬ್ಲಿಕ್ ಟಿವಿ ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರವನ್ನು ಸರ್ಕಾರ ಒಪ್ಪಲು ಆಗಲ್ಲ. ಯಾವುದೇ ಕಾರಣಕ್ಕೂ ಅವರು ಹೇಳಿದ ದರ ಫಿಕ್ಸ್ ಮಾಡಲ್ಲ. ಶೀಘ್ರವೇ ಸರ್ಕಾರವೇ ಕೊರೊನಾ ಚಿಕಿತ್ಸೆಗೆ ಒಂದು ದರ ನಿಗದಿ ಮಾಡಲಿದೆ. ಒಂದು ಸಣ್ಣ ಕಂಪ್ಲೆಂಟ್ ಬಂದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರ:
    > ಜನೆರಲ್ ವಾರ್ಡ್ – 10,000 ರೂ.
    > ಸ್ಪೆಷಲ್ ವಾರ್ಡ್ – 20,000 ರೂ.
    > ಐಸಿಯು ವಾರ್ಡ್ – 25,000 ರೂ.
    > ವೆಂಟಿಲೇಟರ್ – 35,000 ರೂ.

    ಆದರೆ ಕೊರೋನಾ ಪೀಡಿತ ಮಹಾರಾಷ್ಟ್ರದಲ್ಲಿ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದರ ಭಾರೀ ಕಡಿಮೆ ಇದೆ.

    ‘ಮಹಾ’ ಖಾಸಗಿ ಆಸ್ಪತ್ರೆಗಳ ದರ:
    > ಜನೆರಲ್ ವಾರ್ಡ್ – 4,000 ರೂ.
    > ಸ್ಪೆಷಲ್ ವಾರ್ಡ್ – 6,000 ರೂ.
    > ಐಸಿಯು ವಾರ್ಡ್ – 7,500 ರೂ.
    > ವೆಂಟಿಲೇಟರ್ – 9,000 ರೂ.

  • ಕೊರೊನಾ ಸೋಂಕಿತನಿಗೆ ವೈದ್ಯನಿಂದ ಲೈಂಗಿಕ ಕಿರುಕುಳ

    ಕೊರೊನಾ ಸೋಂಕಿತನಿಗೆ ವೈದ್ಯನಿಂದ ಲೈಂಗಿಕ ಕಿರುಕುಳ

    -ಚಿಕಿತ್ಸೆ ವೇಳೆ ಅಸಭ್ಯ ವರ್ತನೆ
    -ವೈದ್ಯನನ್ನ ಕ್ವಾರಂಟೈನ್ ನಲ್ಲಿರಿಸಿದ ಪೊಲೀಸರು

    ಮುಂಬೈ: ಕೊರೊನಾ ಸೋಂಕಿತನಿಗೆ 34 ವರ್ಷದ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    44 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿದ್ದು, ನಗರದ ಖಾಸಗಿ ಆಸ್ಪತ್ರೆಯ ಕೋವಿಡ್-19 ಘಟಕದ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆ ವೇಳೆ ವೈದ್ಯ ಅಸಹಜವಾಗಿ ಸ್ವರ್ಶಿಸುತ್ತಿದ್ದ ಎಂದು ಸೋಂಕಿತ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ವೈದ್ಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರಿಂದ ಆತನನ್ನು ಬಂಧಿಸಿಲ್ಲ. ಹಾಗಾಗಿ ವೈದ್ಯನನ್ನು ಆತನ ಮನೆಯಲ್ಲಿಯೇ ಪೊಲೀಸ್ ಬಂದೋಬಸ್ತನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ.