Tag: Corona Hospital

  • ಕೋವಿಡ್ ವಾರ್ಡ್ ನಲ್ಲಿ ಸೋಂಕಿತನ ಬರ್ತ್ ಡೇ – ವೈರಲ್ ಆಯ್ತು ವಿಡಿಯೋ

    ಕೋವಿಡ್ ವಾರ್ಡ್ ನಲ್ಲಿ ಸೋಂಕಿತನ ಬರ್ತ್ ಡೇ – ವೈರಲ್ ಆಯ್ತು ವಿಡಿಯೋ

    ಲಕ್ನೋ: ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಹುಟ್ಟುಹಬ್ಬ ಆಚರಿಸುವ ಮೂಲಕ ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನ ಮಾನಸಿಕವಾಗಿ ಸದೃಢ ಮಾಡಿದ್ದಾರೆ. ಕೊರೊನಾ ರೋಗಿ ಬರ್ತ್ ಡೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ಮೀರಥ್ ನಗರದ ಗಢ ರಸ್ತೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತನ ಹುಟ್ಟುಹಬ್ಬವನ್ನ ಆಚರಿಸಲಾಗಿದೆ. ವಾರ್ಡ್ ನಲ್ಲಿ ಮ್ಯೂಸಿಕ್ ಹಾಕಿದ್ದು, ರೋಗಿಗಳು ಹೆಜ್ಜೆ ಹಾಕಿ ಸಂತೋಷಪಟ್ಟಿದ್ದಾರೆ.

    ಸೋಂಕಿತರನ್ನ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಹುಟ್ಟು ಹಬ್ಬ ಆಚರಿಸಲಾಗಿತ್ತು. ಕುಟುಂಬದಿಂದ ದೂರವಿರುವ ಸೋಂಕಿತರ ಮನೋರಂಜನೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಗಿಗಳಿಗೆ ಆಯುರ್ವೇದದ ಚಿಕಿತ್ಸೆ ಜೊತೆಗೆ ಪ್ರತಿದಿನ ಯೋಗ ಹೇಳಿ ಕೊಡಲಾಗ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅವ್ಯವಸ್ಥೆ ಸರಿಪಡಿಸಿದ ಜಿಲ್ಲಾ ಕೋವಿಡ್ ಆಸ್ಪತ್ರೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅವ್ಯವಸ್ಥೆ ಸರಿಪಡಿಸಿದ ಜಿಲ್ಲಾ ಕೋವಿಡ್ ಆಸ್ಪತ್ರೆ

    ಮಡಿಕೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿದ್ದ ಅವ್ಯವಸ್ಥೆ ಕುರಿತು ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ರೋಗಿಯೊಬ್ಬರು ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದರು.

    ಇದನ್ನು ಶುಕ್ರವಾರ ಪಬ್ಲಿಕ್ ಟಿವಿ ಸುದ್ದಿ ಮಾಡಿತ್ತು. ಈ ಸುದ್ದಿಯ ನಂತರ ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಶುಚಿತ್ವದ ಕಡೆ ಗಮನಹರಿಸಿದೆ. ಇದಕ್ಕೆಲ್ಲ ಸಹಾಯ ಮಾಡಿದ ಪಬ್ಲಿಕ್ ಟಿಗೆ ಕೊರೊನಾ ಒಳರೋಗಿಗಳು ಧನ್ಯವಾದ ಹೇಳಿದ್ದಾರೆ.

    ಅಸಮಾಧಾನ ವ್ಯಕ್ತಪಡಿಸಿದ್ದ ಸೋಂಕಿತ:
    ಆಸ್ಪತ್ರೆಯಲ್ಲಿ 20 ರೋಗಿಗಳಿಗೆ ಒಂದೇ ಟಾಯ್ಲೆಟ್ ಇದ್ದು, ಕುಡಿಯಲು ಬಿಸಿ ನೀರಿಗೂ ಪರದಾಡಬೇಕಿದೆ. ದಿನಕ್ಕೆ ಎರಡು ಬಾರಿ ಮಾತ್ರ ಬಿಸಿ ನೀರನ್ನು ಕೊಡುತ್ತಿದ್ದಾರೆ. ಸ್ಯಾನಿಟೈಸರ್ ವಿತರಣೆಯಲ್ಲೂ ವ್ಯತ್ಯಾಸ ಮಾಡಲಾಗಿದೆ. ಎರಡು ಮೂರು ದಿನಗಳಾದರೂ ಸ್ಯಾನಿಟೈಸರ್ ಕೊಡುತ್ತಿಲ್ಲ. ಆಸ್ಪತ್ರೆಯಲ್ಲಿ ಇರುವುದಕ್ಕಿಂತ ಮನೆಯಲ್ಲಿದ್ದರೆ ಚೆನ್ನಾಗಿರುತ್ತಿದ್ದೆವು ಎಂದು ಮಡಿಕೇರಿಯ ಕೋವಿಡ್ ವಾರ್ಡ್‍ನಲ್ಲಿರುವ ಕೊರೊನಾ ಸೋಂಕಿತ ಅಸಮಾಧಾನ ವ್ಯಕ್ತಪಡಿಸಿದ್ದರು.