Tag: Corona Covid-19

  • ಜನರ ಸಾವು ಬದುಕಿನ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ: ಎಂಬಿ ಪಾಟೀಲ್

    ಜನರ ಸಾವು ಬದುಕಿನ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ: ಎಂಬಿ ಪಾಟೀಲ್

    ಬೆಂಗಳೂರು: ಕೋವಿಡ್ (Covid) ಸಂದರ್ಭದಲ್ಲಿ ಸರ್ಕಾರ ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕಿತ್ತು. ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯುವ ಮೂಲಕ ದೊಡ್ಡ ಹಗರಣವನ್ನು ಸೃಷ್ಟಿಮಾಡಿದ್ದಾರೆ. ನಮ್ಮ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ (Private Medical College) ನಾವು ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಕೊಟ್ಟಿದ್ದೇವೆ. ಅದು ನಮ್ಮ ಜವಾಬ್ದಾರಿ. ನಾನು ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಕಳಪೆ ಮಟ್ಟದ ಉಪಕರಣಗಳ ಬಳಕೆ ಮಾಡಿದ್ದಾರೆ. ಕೆಲಸ ಮಾಡಬೇಕು ನಿಜ, ಲೂಟಿ ಹೊಡೆಯಬೇಕು ಎಂದಿಲ್ಲ ಆದರೆ ಸಾವು-ಬದುಕಿನ ಸಂದರ್ಭದಲ್ಲಿ ಲೂಟಿ ಹೊಡೆದಿದ್ದಾರೆ ಎಂದರು.ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಪ್ರವಾಹ – ಸಾವಿನ ಸಂಖ್ಯೆ 27ಕ್ಕೆ ಏರಿಕೆ

    ಸರ್ಕಾರ ಫಿಕ್ಸ್ ಮಾಡಿದ ಹಣಕ್ಕಿಂತ ನಮ್ಮ ಮೆಡಿಕಲ್ ಆಸ್ಪತ್ರೆಯಲ್ಲಿ ಕಡಿಮೆ ಬೆಲೆಗೆ ಮಾಡಿದ್ದೀವಿ. ನಾವು ಒಂದು ಸಾವಿರಕ್ಕೆ ಗುಣಮಟ್ಟದ ಪಿಪಿಇ ಕಿಟ್‌ (PPE Kit) ಗಳನ್ನು ತಗೋತಿದ್ವಿ. ಆದರೆ ಸರ್ಕಾರ ಕಳಪೆ ಮಟ್ಟದ 150 ರೂ. ದನ್ನು ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಿದ್ದಾರೆ. ಕೊರೊನಾದಲ್ಲಿ (Corona) ಮಾನವೀಯತೆ ಮೆರೆಯಬೇಕಿತ್ತು ಆದರೆ ಸಾವಿರಾರು ಕೋಟಿ ಲೂಟಿ ಹೊಡೆದು ದೊಡ್ಡ ಹಗರಣವನ್ನೇ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಈ ಹಗರಣದಲ್ಲಿ ಡಾ.ಕೆ ಸುಧಾಕರ್ (Dr. K Sudhakar) ಭಾಗಿ ನಿಶ್ಚಿತವಾಗಿದೆ. ಆ ಸಮಯದಲ್ಲಿ ಮಂತ್ರಿ ಸ್ಥಾನದಲ್ಲಿದ್ದರೂ ಇದರ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ. ನಾನು ರಿಪೋರ್ಟ್ ನೋಡಿಲ್ಲ, ಆದ್ರೆ ನಿಶ್ಚಿತವಾಗಿ ಭಾಗಿಯಾಗಿದ್ದಾರೆ. ಬೋವಿ ನಿಗಮ, ಅಂಬೇಡ್ಕರ್ ನಿಗಮ, ಟ್ರಕ್ ಟರ್ಮಿನಲ್ ಬಹಳ ಹಗರಣಗಳಿವೆ. ಪಿಎಸ್‌ಐ ನೇಮಕಾತಿ ಸ್ಕ್ಯಾಮ್ ಎಲ್ಲವನ್ನು ತರಿಸಿಕೊಳ್ತೀವಿ. ಕ್ಯಾಬಿನೆಟ್ ಅನುಮತಿ ಇಲ್ಲದೇ ಬಹಳ ಭ್ರಷ್ಟಾಚಾರ ಮಾಡಿದ್ದಾರೆ. ಬಿಟ್ ಕಾಯಿನ್ ಮಾತ್ರವಲ್ಲ ಎಲ್ಲಾ ಹಗರಣಗಳ ತನಿಖೆ ಆಗಬೇಕು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಮೂಡುಗಲ್ಲು ಕೇಶವನಾಥೇಶ್ವರ ದೇಗುಲಕ್ಕೆ ಭೇಟಿ ನೀಡಿದ ಜೂನಿಯರ್‌ ಎನ್‌ಟಿಆರ್‌

    ಜೊಲ್ಲೆಯವರು ಕೇಸನ್ನು ವಿಲೇವಾರಿ ಮಾಡಿದ್ದೀನಿ. ಬಾಕಿಯದ್ದು ಪರಿಶೀಲನೆಗೆ ಕಳುಹಿಸಿದ್ದೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಜ್ಯಪಾಲರ ನಡೆ ಇಡಿ ರಾಜ್ಯಕ್ಕೆ ಗೊತ್ತಾಗಿದೆ. ಸ್ವಯಂ ಆಗಿ ಕೆಲಸ ಮಾಡ್ತಿಲ್ಲ. ರಾಜಭವನ ಬಿಜೆಪಿ ಕಚೇರಿ ಆಗಿದೆ ಎಂದು ಕಿಡಿಕಾರಿದ್ದಾರೆ.

    ಹೈಕೋರ್ಟ್‌ನಲ್ಲಿ ಸಿಎಂಗೆ ಹಿನ್ನಡೆ ಆಗೋ ಪ್ರಶ್ನೆ ಇಲ್ಲ. ಸಿಎಂ ಈಗ ಶಕ್ತಿಶಾಲಿ ಇದ್ದಾರೆ, ಇನ್ನಷ್ಟು ಶಕ್ತಿಶಾಲಿ ಆಗ್ತಾರೆ. ಖರ್ಗೆ ಹಿರಿಯರು, ಎಐಸಿಸಿ ಅಧ್ಯಕ್ಷರಿದ್ದಾರೆ. ಅಂಥದ್ದೇನೂ ಇಲ್ಲ ದೇಶಪಾಂಡೆ ಅವ್ರು ಸುಮ್ಮನೆ ಮಾತಾಡಿದ್ದಾರೆ ಎಂದರು.

  • ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!

    ಪಾಸಿಟಿವ್ ಬಂದಿದ್ದ ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ರಿಪೋರ್ಟ್!

    ಹುಬ್ಬಳ್ಳಿ: ಪಾಸಿಟಿವ್ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಎರಡೇ ದಿನದಲ್ಲಿ ನೆಗೆಟಿವ್ ಬಂದಿರುವುದರಿಂದ ಈಗ ಜನರಿಗೆ ಕೋವಿಡ್ ರಿಪೋರ್ಟ್ ಮೇಲೆ ಅನುಮಾನ ಶುರುವಾಗಿದೆ.

    ಅಯೋಧ್ಯೆಯಲ್ಲಿ ನಡೆದ ಸೆಮಿನಾರ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಡಿ.2ರಂದು ಹುಬ್ಬಳ್ಳಿಯ ಆಯುರ್ವೇದ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ಆದರೆ ಮತ್ತೆ ಶನಿವಾರ (ಡಿ.4) ಟೆಸ್ಟ್ ಮಾಡಿಸಿದಾಗ ನೆಗೆಟಿವ್ ರಿಪೋರ್ಟ್ ಬಂದಿದೆ.

    ಈ ರಿಪೋರ್ಟ್ ನೋಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಕ್ ಆಗಿದ್ದಾರೆ. ಎರಡೇ ದಿನದಲ್ಲಿ ಕೊರೊನಾ ಹೋಯ್ತಾ ಎನ್ನುವ ಪ್ರಶ್ನೆ ಪಾಲಕರಲ್ಲಿ ಕಾಡುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಟೆಸ್ಟ್ ಮಾಡಿಸಿದ್ದರು. ಎರಡು ಬಾರಿಯೂ ಅದೇ ಲ್ಯಾಬ್‌ನಲ್ಲಿ ಟೆಸ್ಟಿಂಗ್ ಮಾಡಿಸಿದ್ದಾರೆ. ಇದರಿಂದಾಗಿ ಕಿಮ್ಸ್ ಲ್ಯಾಬ್ ರಿಸಲ್ಟ್ ಮೇಲೆ ಈಗ ಅನುಮಾನ ಪ್ರಾರಂಭವಾಗಿದೆ. ಇದನ್ನೂ ಓದಿ: ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಉತ್ಪಾದಕತೆ ಹೆಚ್ಚಿಸಿ: ಬಿ.ಸಿ ಪಾಟೀಲ್

    ಎರಡೇ ದಿನದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ನೆಗೆಟಿವ್ ಬಂದಿದ್ದರಿಂದ ಕಾಲೇಜು ಆಡಳಿತ ಮಂಡಳಿಯಿಂದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನ ಕೋಟಿ ಲಸಿಕೆ ನೀಡಿಕೆ-5ನೇ ಸಲ ದಾಖಲೆ

  • ವ್ಯಾಕ್ಸಿನ್‌ ಭಾರತ ಮಹಾನ್‌ – 9 ಗಂಟೆಯಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

    ವ್ಯಾಕ್ಸಿನ್‌ ಭಾರತ ಮಹಾನ್‌ – 9 ಗಂಟೆಯಲ್ಲಿ 2 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

    ನವದೆಹಲಿ: ಕೋವಿಡ್‌ ಲಸಿಕೆ ನೀಡುವ ವಿಚಾರದಲ್ಲಿ ಭಾರತ ಮತ್ತೊಮ್ಮೆ ದಾಖಲೆ ಬರೆದಿದೆ. ಪ್ರಧಾನಿ ಮೋದಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಇಂದು ನಡೆದ ಬೃಹತ್‌ ಲಸಿಕಾ ಅಭಿಯಾನದ ಮೊದಲ 9 ಗಂಟೆಯಲ್ಲೇ 2 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ.

    ದೇಶದಲ್ಲಿ ಕೆಲ ತಿಂಗಳ ಅವಧಿಯಲ್ಲಿ ನಾಲ್ಕು ಬಾರಿ ದಾಖಲೆಯ ಒಂದು ಕೋಟಿಗೂ ಅಧಿಕ ಲಸಿಕೆ ವಿತರಿಸುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಇವತ್ತು ಒಂದೇ ದಿನ ಬರೋಬ್ಬರಿ 2ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, ಮುಂದಿನ ಅಕ್ಟೋಬರ್ ಮೊದಲ ವಾರದೊಳಗೆ 100 ಕೋಟಿ ಲಸಿಕೆ ದಾಟುವ ಸಾಧ್ಯತೆಗಳಿವೆ. ಈ ಹಿಂದೆ ಆಗಸ್ಟ್ 27 ಮತ್ತು 31 ರಂದು ಒಂದು ಕೋಟಿಗೂ ಅಧಿಕ ಲಸಿಕೆ ಹಾಕಲಾಗಿತ್ತು. ಆ ಬಳಿಕ ಸೆಪ್ಟೆಂಬರ್ 6 ಮತ್ತು ಇಂದು ಒಂದು ಕೋಟಿಗೂ ಅಧಿಕ ಲಸಿಕೆ ಹಾಕಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 1,003 ಕೇಸ್- ಐದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಕರ್ನಾಟಕದಲ್ಲೂ ದೊಡ್ಡಮಟ್ಟದಲ್ಲೇ ವ್ಯಾಕ್ಸಿನೇಷನ್ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಇವತ್ತು 23 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ನೀಡಿದ್ದ ಒಟ್ಟಾರೆ ಪ್ರಮಾಣ 5 ಕೋಟಿ ದಾಟಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಪ್ರಧಾನಿ ಮೋದಿಗೆ ಜನ್ಮದಿನದ ಕಾಣಿಕೆ ನೀಡಬೇಕೆಂದು ದೇಶವಾಸಿಗಳಿಗೆ ಬಿಜೆಪಿ ನಾಯಕರು ಕರೆ ನೀಡಿದ್ದರು. ಲಸಿಕೆ ಹಾಕಿಸಿಕೊಂಡು, ಇತರರಿಗೆ ಸ್ಲಾಟ್ ಬುಕ್ ಮಾಡಿಕೊಟ್ಟು ವ್ಯಾಕ್ಸಿನ್ ಸೇವೆಯಲ್ಲಿ ಪಾಲ್ಗೊಳ್ಳಿ ಎಂದು ಕೇಂದ್ರ ಆರೋಗ್ಯ ಮಂತ್ರಿ ಮನಸುಖ್ ಮಾಂಡವೀಯ ಮನವಿ ಮಾಡಿದ್ದರು. ಇದಕ್ಕೆ ದೊಡ್ಡಮಟ್ಟದಲ್ಲಿ ಸ್ಪಂದನೆ ಸಿಕ್ಕಿದೆ. ಜನ ಪ್ರವಾಹೋಪಾದಿಯಲ್ಲಿ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಂಡಿದ್ದಾರೆ.

    ಎಲ್ಲಿಯೂ ಯಾವುದೇ ರೀತಿಯ ತೊಂದರೆ ಅವಘಡಗಳು ಆಗದಂತೆ, ಕೋವಿಡ್ ನಿಯಮಗಳು ಬ್ರೇಕ್ ಆಗದ ರೀತಿಯಲ್ಲಿ ಲಸಿಕಾ ಅಭಿಯಾನವನ್ನು ಇಂದು ಯಶಸ್ವಿಯಾಗಿದೆ. ಇದನ್ನೂ ಓದಿ: 1 ಸಾಲಿನಲ್ಲಿ ಪ್ರಧಾನಿಗೆ ವಿಶ್ ಮಾಡಿದ ರಾಹುಲ್ ಗಾಂಧಿ

  • ರಾಜ್ಯದಲ್ಲಿ ಒಟ್ಟು 1,003 ಕೇಸ್- ಐದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ರಾಜ್ಯದಲ್ಲಿ ಒಟ್ಟು 1,003 ಕೇಸ್- ಐದು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಇಂದು 1,003 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 18 ಮಂದಿ ಸಾವನ್ನಪ್ಪಿದ್ದು, 1,119 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಇಂದು ಶೂನ್ಯ ಪ್ರಕರಣ ವರದಿಯಾಗಿದೆ.

    ರಾಜ್ಯದಲ್ಲಿ ಒಟ್ಟು 15,960 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,66,194 ಮಂದಿಗೆ ಕೊರೊನಾ ಬಂದಿದೆ. 29,12,633 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.67ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.79ರಷ್ಟಿದೆ. ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಶುರುವಾಯಿತು ಜೋಕುಮಾರನ ಆರಾಧನೆ

    ಇಂದು ರಾಜ್ಯದಲ್ಲಿ ಒಟ್ಟು 23 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,48,496 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,17,226 + 31,270 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 310 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 6 ಜನ ಮರಣ ಹೊಂದಿದ್ದಾರೆ. 276 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಕಾಲಿಗೆ ಹಾಕೋ ಚಪ್ಪಲಿಗೆ ಗ್ಯಾರಂಟಿ ಕೇಳ್ತೀವಿ, ಲಸಿಕೆಗೆ ಗ್ಯಾರಂಟಿ ಬೇಡ್ವಾ: ಅಧಿಕಾರಿಗಳಿಗೆ ಯುವಕನ ಪ್ರಶ್ನೆ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಬೀದರ್, ಹಾವೇರಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಳ್ಳಾರಿ 4, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 15, ಬೆಂಗಳೂರು ನಗರ 310, ಚಾಮರಾಜನಗರ 4, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 37, ಚಿತ್ರದುರ್ಗ 10, ದಕ್ಷಿಣ ಕನ್ನಡ 124, ದಾವಣಗೆರೆ 3, ಧಾರವಾಡ 9, ಹಾಸನ 48, ಕಲಬುರಗಿ 5, ಕೊಡಗು 96, ಕೋಲಾರ 14, ಮಂಡ್ಯ 31, ಮೈಸೂರು 46, ರಾಮನಗರ 2, ಶಿವಮೊಗ್ಗ 27, ತುಮಕೂರು 61, ಉಡುಪಿ 94, ಉತ್ತರ ಕನ್ನಡ 35, ಮತ್ತು ಯಾದಗಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ ಒಟ್ಟು 973 ಪಾಸಿಟಿವ್ – ದಕ್ಷಿಣ ಕನ್ನಡದಲ್ಲಿ ಕೇಸ್ ಏರಿಕೆ

    ರಾಜ್ಯದಲ್ಲಿ ಒಟ್ಟು 973 ಪಾಸಿಟಿವ್ – ದಕ್ಷಿಣ ಕನ್ನಡದಲ್ಲಿ ಕೇಸ್ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಇಂದು 973 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. 17 ಮಂದಿ ಸಾವನ್ನಪ್ಪಿದ್ದು, 1,071 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ಒಟ್ಟು 258 ಕೇಸ್ ದಾಖಲಾಗಿದೆ.

    ರಾಜ್ಯದಲ್ಲಿ ಒಟ್ಟು 17,386 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,56,137 ಮಂದಿಗೆ ಕೊರೊನಾ ಬಂದಿದೆ. 29,01,299 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.0.69ರಷ್ಟಿದೆ. ಕೋವಿಡ್-19 ಮರಣ ಪ್ರಮಾಣ ಶೇ.1.74ರಷ್ಟಿದೆ. ಇದನ್ನೂ ಓದಿ: ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

    ಇಂದು ರಾಜ್ಯದಲ್ಲಿ ಒಟ್ಟು 4,41,743 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,39,090 ಸ್ಯಾಂಪಲ್ (ಆರ್‍ಟಿ ಪಿಸಿಆರ್ 1,20,816 + 18,274 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಇಂದು 243 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 8 ಜನ ಮರಣ ಹೊಂದಿದ್ದಾರೆ. 260 ಜನ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಅರವಿಂದ್‍ಗೆ ಕ್ಯೂಟ್ ಎಂದ ದಿವ್ಯಾ ಉರುಡುಗ

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬಳ್ಳಾರಿ 6, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 243, ಚಾಮರಾಜನಗರ 3, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 30, ಚಿತ್ರದುರ್ಗ 10, ದಕ್ಷಿಣ ಕನ್ನಡ 258, ದಾವಣಗೆರೆ 7, ಧಾರವಾಡ 6, ಹಾಸನ 62, ಕಲಬುರಗಿ 8, ಕೊಡಗು 52, ಕೋಲಾರ 12, ಕೊಪ್ಪಳ 1, ಮಂಡ್ಯ 11, ಮೈಸೂರು 78, ರಾಮನಗರ 1, ಶಿವಮೊಗ್ಗ 37, ತುಮಕೂರು 31, ಉಡುಪಿ 53, ಉತ್ತರ ಕನ್ನಡ 31, ಮತ್ತುವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.