Tag: Corona Care Center

  • ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ

    ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ ವಿರುದ್ಧ ಸೋಂಕಿತರ ಆಕ್ರೋಶ

    ತುಮಕೂರು/ಚಾಮರಾಜನಗರ: ಸಂತೇಮರಹಳ್ಳಿ ಕೋವಿಡ್ ಕೇರ್ ಹಾಗೂ ಪಾವಗಡ ತಾಲೂಕಿನ ಕುರುಬರಹಳ್ಳಿಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಮೂಲಸೌಲಭ್ಯವಿಲ್ಲದೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಸೆಂಟರ್‌ನಲ್ಲಿ ಅವ್ಯವಸ್ಥೆ ಮುಂದುವರಿದಿದ್ದು, ಆಕ್ರೋಶಗೊಂಡ ಸೋಂಕಿತರು ಕೇರ್ ಸೆಂಟರ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿನ ಕೊರೊನಾ ಕೇರ್ ಸೆಂಟರ್‌ನಲ್ಲಿ ಹಳಸಿದ ಅನ್ನ, ಒಣಗಿದ ಚಪಾತಿ, ಅರ್ಧಂಬರ್ಧ ಬೆಂದ ದೋಸೆ, ಬಿಸಿನೀರಿನಂತಿರುವ ಟೀ ನೀಡಲಾಗುತ್ತಿದೆ. ಇದನ್ನೂ ಓದಿ: ಕಠಿಣ ಲಾಕ್‍ಡೌನ್ ಮಧ್ಯೆ ಹೊರ ರಾಜ್ಯಗಳಿಂದ ಕಳ್ಳ ದಾರಿಗಳ ಮೂಲಕ ಎಂಟ್ರಿ- ಕೊರೊನಾ ಹೊತ್ತು ತರುವ ಆತಂಕ

    5 ಬಾತ್ ರೂಮ್‍ಗೆ ಒಂದೇ ಬಕೆಟ್ ಇಡಲಾಗಿದೆ. 7-8 ದಿನಗಳಾದರೂ ಕಸ ಹೊಡೆದಿಲ್ಲ. ಶೌಚಾಲಯ ವಾರದವಾದರು ಸ್ವಚ್ಛ ಮಾಡಿಲ್ಲ, ಕೇಳಿದರೆ ನೀವೆ ಮಾಡಿಕೊಳ್ಳಿ ಎನ್ನುತ್ತಾರೆ. ಸರಿಯಾಗಿ ಔಷಧಿಯನ್ನು ನೀಡುವುದಿಲ್ಲ. ಹೀಗೆ ಮುಂದುವರಿದರೆ ಬೇರೆ ಬೇರೆ ಕಾಯಿಲೆಗಳು ಬರುತ್ತವೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನ ಪ್ಲೀಸ್ ಮನೆಗೆ ಕಳಿಸಿ- ಕೋವಿಡ್ ಸೋಂಕಿತರ ಅಳಲು

    ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸ್ಯಾನಿಟೈಸ್ ಮಾಡದೆ ಇರುವುದರಿಂದ ಹೊಸದಾಗಿ ರೋಗಿಗಳನ್ನು ತಂದು ಇಲ್ಲಿ ಬಿಡುತ್ತಿದ್ದಾರೆ. ಗುಣಮುಖರಾದವರು ಕೂಡ ಪುನಃ ಸೋಂಕಿಗೆ ಒಳಗಾಗುವಂತಹ ಸ್ಥಿತಿ ಇದೆ. ಬೆಳಗ್ಗೆ 7 ಗಂಟೆ ಆದರೂ ಬಿಸಿನೀರಿನ ವ್ಯವಸ್ಥೆ ಇರುವುದಿಲ್ಲ. ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅಡುಗೆ ಮನೆಯಲ್ಲಿಯೂ ಸ್ವಚ್ಛತೆ ಕಾಪಾಡಿಲ್ಲ. ಇದರಿಂದಾಗಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ, ಹೋಂ ಕ್ವಾರಂಟೈನ್‍ಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸೋಂಕಿತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..?

  • ಕೊರೊನಾ ಕೇರ್ ಸೆಂಟರ್‌ನಲ್ಲಿ ಸಂಗೀತ ರಸಮಂಜರಿ

    ಕೊರೊನಾ ಕೇರ್ ಸೆಂಟರ್‌ನಲ್ಲಿ ಸಂಗೀತ ರಸಮಂಜರಿ

    ಕೊಪ್ಪಳ: ಕೊರೊನಾ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಕೊರೊನಾ ಕೇರ್ ಸೆಂಟರ್‌ನಲ್ಲಿ ಮಾಡಲಾಗುತ್ತಿದೆ.

    ಕೊರೊನಾ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ರಸಮಂಜರಿ ಕಾರ್ಯಕ್ರಮದ ಮೂಲಕ ರಂಜಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿಯಲ್ಲಿರುವ ಕೊರೊನಾ ಕೇರ್ ಸೆಂಟರ್‌ನಲ್ಲಿ ನಿನ್ನೆ ರಾತ್ರಿ ಚಿಕ್ಕಹನುಮನಳ್ಳಿಯ ಕಲಾವಿದನಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಜರುಗಿತು. ಇದನ್ನೂ ಓದಿ: ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ ಬಡಿಸಿದ ರೇಣುಕಾಚಾರ್ಯ

    ಕಲಾವಿದ ದುರ್ಗಪ್ಪ ಅವರು ಸಂಗೀತ ಕಾರ್ಯಕ್ರಮದ ಮೂಲಕ ಕೊರೊನಾ ಕೇರ್ ಸೆಂಟರ್‌ನಲ್ಲಿ  ಸೋಂಕಿತರಿಗೆ ಮನೋರಂಜನೆಯನ್ನು ನೀಡಿದರು. ಒಟ್ಟು 30 ಜನ ಸೋಂಕಿತರಿರುವ ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ನಿತ್ಯ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಸೋಂಕಿತರಲ್ಲಿ ಧೈರ್ಯ, ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ನಿತ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಂಗೀತ ರಸಮಂಜರಿಯ ಹಾಡಿಗೆ ಸೋಂಕಿತರು ಕುಣಿದು ಕುಪ್ಪಳಿಸಿದರು. ಇದನ್ನೂ ಓದಿ: ನಮ್ಮನ್ನ ಪ್ಲೀಸ್ ಮನೆಗೆ ಕಳಿಸಿ- ಕೋವಿಡ್ ಸೋಂಕಿತರ ಅಳಲು

    ಕೆಲವುದಿನಗಳ ಹಿಂದೆ ಕೊರೊನೊ ಸೋಂಕಿತರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕುಣಿದು ಮನರಂಜನೆ ನೀಡಿದ್ದರು.