Tag: Corona Bulletin

  • 31,531 ಮಂದಿಗೆ ಪಾಸಿಟಿವ್, 403 ಸಾವು – 36,475 ಮಂದಿ ಡಿಸ್ಚಾರ್ಜ್

    31,531 ಮಂದಿಗೆ ಪಾಸಿಟಿವ್, 403 ಸಾವು – 36,475 ಮಂದಿ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 31,531 ಮಂದಿಗೆ ಕೊರೊನಾ ಬಂದಿದ್ದು, 403 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 36,475 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 22,03,462 ಮಂದಿಗೆ ಸೋಂಕು ಬಂದಿದೆ. 15,81,457 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ 6,00,147 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,837ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.27.84 ಮತ್ತು ಮರಣ ಪ್ರಮಾಣ ಶೇ.1.27ರಷ್ಟಿದೆ.

    9,713 ಆಂಟಿಜನ್, 1,03,506 ಆರ್ ಟಿ ಪಿಸಿಆರ್ ಇತ್ಯಾದಿ ಸೇರಿದಂತೆ ಒಟ್ಟು 1,13,219 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 17,462 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,11,88,143 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 8,344 ಹೊಸ ಪ್ರಕರಣಗಳು ವರದಿಯಾಗಿದ್ದು, 143 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,61,380 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಬಾಗಲಕೋಟೆ 1,729 , ಬಳ್ಳಾರಿ 1,622, ಬೆಳಗಾವಿ 1,762, ಬೆಂಗಳೂರು ಗ್ರಾಮಾಂತರ 1,082, ಬೆಂಗಳೂರು ನಗರ 8,344, ಬೀದರ್ 129, ಚಾಮರಾಜನಗರ 440, ಚಿಕ್ಕಬಳ್ಳಾಪುರ 558, ಚಿಕ್ಕಮಗಳೂರು 963, ಚಿತ್ರದುರ್ಗ 640, ದಕ್ಷಿಣ ಕನ್ನಡ 957 , ದಾವಣಗೆರೆ 1155, ಧಾರವಾಡ 937, ಗದಗ 453 , ಹಾಸನ 1,182 , ಹಾವೇರಿ184 , ಕಲಬುರಗಿ 645, ಕೊಡಗು 191, ಕೋಲಾರ 778, ಕೊಪ್ಪಳ 617, ಮಂಡ್ಯ 709, ಮೈಸೂರು 1,811, ರಾಯಚೂರು 464, ರಾಮನಗರ 403, ಶಿವಮೊಗ್ಗ 643, ತುಮಕೂರು2138, ಉಡುಪಿ 745 , ಉತ್ತರ ಕನ್ನಡ 1,087, ವಿಜಯಪುರ 330 ಮತ್ತು ಯಾದಗಿರಿಯಲ್ಲಿ 233 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 41,664 ಮಂದಿಗೆ ಪಾಸಿಟಿವ್, 249 ಸಾವು – 34,425 ಮಂದಿ ಡಿಸ್ಚಾರ್ಜ್

    41,664 ಮಂದಿಗೆ ಪಾಸಿಟಿವ್, 249 ಸಾವು – 34,425 ಮಂದಿ ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 41,664 ಮಂದಿಗೆ ಕೊರೊನಾ ಬಂದಿದ್ದು, 249 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 34,425 ಮಂದಿ ಡಿಸ್ಚಾರ್ಜ್ ಆಗಿದ್ದಾರೆ

    ಒಟ್ಟು ರಾಜ್ಯದಲ್ಲಿ 21,71,931 ಮಂದಿಗೆ ಸೋಂಕು ಬಂದಿದ್ದು, 15,44,982 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.35.20 ಮತ್ತು ಮರಣ ಪ್ರಮಾಣ ಶೇ.0.83ರಷ್ಟಿದೆ.

    ಇಂದು 1,18,345 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 82,793 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,11,49,833 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 13,402 ಹೊಸ ಪ್ರಕರಣಗಳು ವರದಿಯಾಗಿದ್ದು, 94 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,66,791 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 584, ಬಳ್ಳಾರಿ 1622, ಬೆಳಗಾವಿ 1502, ಬೆಂಗಳೂರು ಗ್ರಾಮಾಂತರ 1265, ಬೆಂಗಳೂರು ನಗರ 13402, ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1,093, ಚಿತ್ರದುರ್ಗ 454, ದಕ್ಷಿಣ ಕನ್ನಡ 1,787, ದಾವಣಗೆರೆ 292, ಧಾರವಾಡ 901, ಗದಗ 459 , ಹಾಸನ 2,443, ಹಾವೇರಿ267, ಕಲಬುರಗಿ 832, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1,188, ಮೈಸೂರು 2,489, ರಾಯಚೂರು 467, ರಾಮನಗರ524, ಶಿವಮೊಗ್ಗ 1081, ತುಮಕೂರು 2302, ಉಡುಪಿ 1,146, ಉತ್ತರ ಕನ್ನಡ 1,226, ವಿಜಯಪುರ 789 ಮತ್ತು ಯಾದಗಿರಿಯಲ್ಲಿ 343 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ರಾಜ್ಯದಲ್ಲಿ 41,779 ಪಾಸಿಟಿವ್, 373 ಸಾವು – 35,879 ಜನ ಡಿಸ್ಚಾರ್ಜ್

    ರಾಜ್ಯದಲ್ಲಿ 41,779 ಪಾಸಿಟಿವ್, 373 ಸಾವು – 35,879 ಜನ ಡಿಸ್ಚಾರ್ಜ್

    ಬೆಂಗಳೂರು: ಗುರುವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 41,779 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಇಂದು ಕೊರೊನಾದಿಂದ 373 ಮಂದಿ ಮೃತಪಟ್ಟಿದ್ದು, ಇಲ್ಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 21,085ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 35,879 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.32.86 ಮತ್ತು ಮರಣ ಪ್ರಮಾಣ ಶೇ.0.89ರಷ್ಟಿದೆ. ಇಂದು 1,27,105 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 56,350 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,10,51,982 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 14,316 ಹೊಸ ಪ್ರಕರಣಗಳು ವರದಿಯಾಗಿದ್ದು, 121 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,60,862 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 773, ಬಳ್ಳಾರಿ 2,421, ಬೆಳಗಾವಿ 1,592, ಬೆಂಗಳೂರು ಗ್ರಾಮಾಂತರ 707, ಬೆಂಗಳೂರು ನಗರ 14,316, ಬೀದರ್ 223, ಚಾಮರಾಜನಗರ 713, ಚಿಕ್ಕಬಳ್ಳಾಪುರ 676, ಚಿಕ್ಕಮಗಳೂರು 435, ಚಿತ್ರದುರ್ಗ 314, ದಕ್ಷಿಣ ಕನ್ನಡ 1,215, ದಾವಣಗೆರೆ 581, ಧಾರವಾಡ 829, ಗದಗ 591, ಹಾಸನ 1,339, ಹಾವೇರಿ 292, ಕಲಬುರಗಿ 929, ಕೊಡಗು 539, ಕೋಲಾರ 306, ಕೊಪ್ಪಳ 495, ಮಂಡ್ಯ 1,385, ಮೈಸೂರು 2,340, ರಾಯಚೂರು 1,063, ರಾಮನಗರ 459, ಶಿವಮೊಗ್ಗ 1,045, ತುಮಕೂರು 2,668, ಉಡುಪಿ 1,219, ಉತ್ತರ ಕನ್ನಡ 787, ವಿಜಯಪುರ 444 ಮತ್ತು ಯಾದಗಿರಿಯಲ್ಲಿ 683 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಇಂದು 35,297 ಪಾಸಿಟಿವ್, 517 ಸಾವು – 34,057 ಜನ ಡಿಸ್ಚಾರ್ಜ್

    ಇಂದು 35,297 ಪಾಸಿಟಿವ್, 517 ಸಾವು – 34,057 ಜನ ಡಿಸ್ಚಾರ್ಜ್

    ಬೆಂಗಳೂರು: ಬುಧವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಗಿಂತ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, 35,297 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಇಂದು ಕೊರೊನಾದಿಂದ 344 ಮಂದಿ ಮೃತಪಟ್ಟಿದ್ದು, ಇಲಿಯವರೆಗೂ ಕೋವಿಡ್‍ನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 20,712ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 34,057 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.27.64 ಮತ್ತು ಮರಣ ಪ್ರಮಾಣ ಶೇ.0.97ರಷ್ಟಿದೆ. ಇಂದು 1,27,668 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 68,658 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,09,76,189 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,191 ಹೊಸ ಪ್ರಕರಣಗಳು ವರದಿಯಾಗಿದ್ದು, 161 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,59,565 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 520, ಬಳ್ಳಾರಿ 1,865, ಬೆಳಗಾವಿ 713, ಬೆಂಗಳೂರು ಗ್ರಾಮಾಂತರ 10,79 ಬೆಂಗಳೂರು ನಗರ 15,191, ಬೀದರ್ 257, ಚಾಮರಾಜನಗರ 842, ಚಿಕ್ಕಬಳ್ಳಾಪುರ 354, ಚಿಕ್ಕಮಗಳೂರು 445, ಚಿತ್ರದುರ್ಗ 292, ದಕ್ಷಿಣ ಕನ್ನಡ 812, ದಾವಣಗೆರೆ 494, ಧಾರವಾಡ 737, ಗದಗ 430, ಹಾಸನ 792, ಹಾವೇರಿ 160, ಕಲಬುರಗಿ 497, ಕೊಡಗು 425, ಕೋಲಾರ 488, ಕೊಪ್ಪಳ 437, ಮಂಡ್ಯ 1,153, ಮೈಸೂರು 1,260, ರಾಯಚೂರು 170, ರಾಮನಗರ 518, ಶಿವಮೊಗ್ಗ 880, ತುಮಕೂರು 1,798, ಉಡುಪಿ 891, ಉತ್ತರ ಕನ್ನಡ 791, ವಿಜಯಪುರ 331 ಮತ್ತು ಯಾದಗಿರಿಯಲ್ಲಿ 675 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಇಳಿಕೆ- 24 ಗಂಟೆಯಲ್ಲಿ 62 ಸಾವಿರ ಜನರಿಗೆ ಸೋಂಕು

    ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕೆ ಇಳಿಕೆ- 24 ಗಂಟೆಯಲ್ಲಿ 62 ಸಾವಿರ ಜನರಿಗೆ ಸೋಂಕು

    – ಒಟ್ಟು ಪ್ರಕರಣಗಳ ಪೈಕಿ ಶೇ.10.70ರಷ್ಟು ಮಾತ್ರ ಆ್ಯಕ್ಟಿವ್ ಕೇಸ್

    ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹಾಗೂ ಸೋಂಕಿನಿಂದ ಸಾವನ್ನುತ್ತಿರುವವರ ಸಂಖ್ಯೆ ಇಳಿಕೆಯಾಗುತ್ತಿದ್ದು, ಒಟ್ಟು ಸೋಂಕಿತರ ಪೈಕಿ ಕೇವಲ ಶೇ.10.70ರಷ್ಟು ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    ಕಳೆದ ಒಂದೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಕೇವಲ ಶೇ.10.70ರಷ್ಟು ಸಕ್ರಿಯವಾಗಿವೆ. ಗುಣಮುಖರಾಗುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

    ಕಳೆದ 24 ಗಂಟೆಗಳಲ್ಲಿ 62,212 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 837 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 74,32,681ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 7,95,087 ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಶೇ.79ರಷ್ಟು ಕೇವಲ 10 ರಾಜ್ಯಗಳಲ್ಲಿ ಕಂಡು ಬಂದಿವೆ.

    ಒಂದೇ ದಿನ 65,24,596 ಜನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಕಳೆದ 24 ಗಂಟೆಗಳಲ್ಲಿ 837 ಜನ ಸಾವನ್ನಪ್ಪಿದ್ದು, ಇದರಲ್ಲಿ ಶೇ.82ರಷ್ಟು ಜನ ಕೇವಲ 10 ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 1,12,998 ಜನ ಕೊರೊನಾಗೆ ಬಲಿಯಾಗಿದ್ದಾರೆ.

    ಕಳೆದ 24 ಗಂಟೆಯಲ್ಲಿ 70,816 ಜನ ಕೊರೊನಾದಿಂದ ಗುಣಮುಖರಾಗಿದ್ದು, ಈ ವರೆಗೆ ಒಟ್ಟು 65,24,595 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಲ್ಲಿ ಶೇ.78ರಷ್ಟು ಜನ 10 ರಾಜ್ಯಗಳಲ್ಲಿ ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಗೆಲ್ಲುತ್ತಿರುವವರ ಸಂಖ್ಯೆಯಲ್ಲಿ ಬೆಳವಾನಿಗೆ ಕಾಣುತ್ತಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

  • ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ಪ್ರಧಾನಿ ಮೋದಿ

    ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ಪ್ರಧಾನಿ ಮೋದಿ

    – ಮಾಸ್ಕ್, ಸಾಮಾಜಿಕ ಅಂತರ ಭಾರೀ ಮುಖ್ಯ

    ನವದೆಹಲಿ: ಒಂದೇ ದಿನ 96 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ದೇಶದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಕೊರೊನಾ ಸ್ಫೋಟವಾಗುತ್ತಿದ್ದರೂ ಜನ ಮಾತ್ರ ಈ ಕುರಿತು ಜಾಗೃತಿ ವಹಿಸುತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿ ಈ ಕುರಿತು ಎಚ್ಚರಿಸಿದ್ದಾರೆ.

    ಈ ಕುರಿತು ಸಾರ್ವಜನಿಕರನ್ನು ಎಚ್ಚರಿಸಿರುವ ಅವರು, ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ಮೂಲಕ ಕೊರೊನಾದಿಂದ ದೂರ ಇರಬೇಕು ಎಂದು ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

    ದೇಶದಲ್ಲಿ ಒಂದೇ ದಿನ 96 ಸಾವಿರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಮೂಲಕ ಈ ಹಿಂದಿನ ಕೊರೊನಾ ಪ್ರಕರಣಗಳ ದಾಖಲೆ ಮುರಿದಿದೆ. ಕಳೆದ 24 ಗಂಟೆಯಲ್ಲಿ ಈ ಪರಿಪ್ರಮಾಣದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು.

    ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 44 ಲಕ್ಷಕ್ಕೆ ಏರಿಕೆಯಾಗಿದೆ. ಅಲ್ಲದೆ
    ಒಂದೇ ದಿನದಲ್ಲಿ 95,735 ಮಂದಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 44,65,864ಕ್ಕೆ ಏರಿಕೆಯಾಗಿದೆ.

    ಕಳೆದ 24 ಗಂಟೆಯಲ್ಲಿ 1,172 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 44,65,864 ಸೋಂಕಿತರ ಸಂಖ್ಯೆಯಲ್ಲಿ 919018 ಸಕ್ರಿಯ ಪ್ರಕರಣಗಳಿದ್ದು, 3471784 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದೂವರೆಗೂ ದೇಶದಲ್ಲಿ 75,062 ಮಂದಿ ಕೋವಿಡ್ 19ಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

    ದೇಶದಲ್ಲಿ ನಿನ್ನೆ ಒಂದೇ ದಿನ 11,29,756 ಮಂದಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇದೂವರೆಗೂ 5,29,34,433 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

    ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ನಿನ್ನೆ ಒಂದೇ ದಿನ 23,816 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,67,349ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ 2,52,734 ಸಕ್ರಿಯ ಪ್ರಕರಣಗಳಿದ್ದರೆ, 6,86,462 ಮಂದಿ ಕೋವಿಡ್ 19 ನಿಂದ ಗುಣಮುಖರಾಗಿದ್ದಾರೆ. ಇದೂವರೆಗೂ ಮಹಾರಾಷ್ಟ್ರದಲ್ಲಿ 27,787 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.