Tag: Coron Virus

  • ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಭಾಗ್ಯ – ನರ್ಸಿಂಗ್ ವಿದ್ಯಾರ್ಥಿಗಳು ಫುಲ್ ಖುಷ್

    ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಭಾಗ್ಯ – ನರ್ಸಿಂಗ್ ವಿದ್ಯಾರ್ಥಿಗಳು ಫುಲ್ ಖುಷ್

    – ನಾಳೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ
    – 8 ವಲಯಗಳಿಗೆ 90 ಸಾವಿರ ಲಸಿಕೆ ಹಂಚಿಕೆ

    ಬೆಂಗಳೂರು : ನಗರದ ಸೆಂಟ್ ಫಿಲೋಮೀನಾ ನರ್ಸಿಂಗ್ ಕಾಲೇಜಿನಲ್ಲಿಂದು ಲಸಿಕೆ ಅಭಿಯಾನ ನಡೆಯಿತು. ಕೊರೋನಾ ಸಂಜೀವಿನಿ ನೀಡಲು ಎರಡನೆ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಇಂದು ವಿದ್ಯಾರ್ಥಿಗಳ ಪಟ್ಟಿ ಮಾಡಿರುವುದು ಹೆಚ್ಚು ಗಮನಾರ್ಹವಾಗಿತು.

    ನಿನ್ನೆ ಇಡೀ ದಿನ ಆಸ್ಪತ್ರೆ ಸಿಬ್ಬಂದಿಗೆ ಲಸಿಕೆ ಕೊಡಲಾಯಿತು. ಆದರೆ ಇವತ್ತು ಇಂದೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಲಸಿಕೆ ಕೇಂದ್ರದಲ್ಲಿ ನೀಡಲು ವ್ಯವಸ್ಥೆ ಆಗಿತ್ತು.

     

    ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯನ್ನು ಚಾಚು ತಪ್ಪದೇ ಪಾಲನೆ ಮಾಡಲಾಗಿತ್ತು. ಒನ್ ಎಂಟ್ರಿ ,ಒನ್ ಎಕ್ಸಿಟ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಬ್ಯಾನರ್ಸ್ , ಪೋಸ್ಟರ್, ಐಇಸಿ(ಇನ್ಪಾರ್ಮೆಷನ್‌ ಎಜುಕೇಶನ್‌ ಆಂಡ್‌ ಕಮ್ಯೂನಿಕೇಷನ್‌) ಎಲ್ಲವೂ ಪಕ್ಕಾ ಸಿದ್ಧಪಡಿಸಲಾಗಿತ್ತು.

    ಮೊದಲು ಲಸಿಕೆ ಪಡೆದ ನರ್ಸಿಂಗ್ ವಿದ್ಯಾರ್ಥಿ ಆನ್ಸಿ ಅಂಟೋನಿಗೆ ಲಸಿಕೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ವ್ಯಾಕ್ಸಿನ್ ಸಿಕ್ಕಿದ್ದರಿಂದ ಸೇವೆ ಮಾಡಲು ಧೈರ್ಯ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ: ಸೋಮವಾರ ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಲಭ್ಯವಿರಲಿದೆ. ಸರಿಸುಮಾರು 14,100 ಬಿಬಿಎಂಪಿ ಆಸ್ಪತ್ರೆಗಳಲ್ಲೇ ಕೊರೋನಾ ಲಸಿಕೆ ಕೊಡಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಪ್ರಕಾರ ಪ್ರತಿ ಕೇಂದ್ರಕ್ಕೂ 90 ರಿಂದ 100 ಮಂದಿಗೆ ಲಸಿಕೆ ಹಂಚಿಕೆ ಮಾಡಲಾಗಿದೆ.

    ಎಲ್ಲ ಪಿ ಎಚ್ ಸೆಂಟರ್ ಗಳಿಗೂ ಲಸಿಕೆ ಹಂಚಿಕೆ ಪೂರ್ಣವಾಗಿದ್ದು, ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಹಂಚಿಕೆ ಪ್ರಕಿಯೆ ಪೂರ್ಣವಾಗಿದೆ. ಈ ಪ್ರಕಾರ ಬರೊಬ್ಬರಿ 90 ಸಾವಿರ ಲಸಿಕೆ 8 ವಲಯಗಳಿಗೂ ಹಂಚಿಕೆ ಆಗಿದೆ.

    ನಾಳೆ ನಗರದಲ್ಲಿ ಲಸಿಕೆ ನೀಡುವ ಕೇಂದ್ರಗಳಿಗೆ ಸವಲತ್ತು ಪೂರೈಕೆ ಆಗಿದೆ. ಸದ್ಯ ದಾಸಪ್ಪ ಆಸ್ಪತ್ರೆಯಲ್ಲಿ ಸುಮಾರು 7 ಸಾವಿರ ಲಸಿಕೆ ಮಾತ್ರ ಉಳಿದಿದೆ. ಫಲಾನುಭವಿಗಳ ಪಟ್ಟಿಯಾದ ಕೂಡಲೇ ಸೆಂಟರ್ ಗಳಿಗೆ ಕಳಿಸುವ ಲೆಕ್ಕಚಾರ ಆಗಿದೆ ಎಂದು ದಾಸಪ್ಪ ಆಸ್ಪತ್ರೆ ಸ್ಟೋರೇಜ್ ಮೇಲ್ವಿಚಾರಕಿ ಮಂಜುಳ ತಿಳಿಸಿದ್ದಾರೆ.

  • ರಾಜ್ಯದಲ್ಲಿ ಇಂದು 12 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 535ಕ್ಕೆ ಏರಿಕೆ

    ರಾಜ್ಯದಲ್ಲಿ ಇಂದು 12 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 535ಕ್ಕೆ ಏರಿಕೆ

    -ತುಮಕೂರು ಜಿಲ್ಲೆಯಲ್ಲಿ ಕೊರೊನಾಗೆ 2ನೇ ಸಾವು
    -ಸಾವಿನ ಸಂಖ್ಯೆ 21ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಇಂದು 12 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ ಕ್ಕೆ ಏರಿಕೆಯಾಗಿದೆ. ಇವತ್ತು 9 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಇಂದು ಬೆಳಗ್ಗೆ ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ 9 ಮಂದಿಗೆ, ಸಂಜೆ ಬುಲೆಟಿನ್ ನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಕಳೆದ ಐದು ದಿನಗಳಲ್ಲಿ 60 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 73 ವರ್ಷದ ವೃದ್ಧ ಸಾವನ್ನಪ್ಪಿದ್ದ, ರಾಜ್ಯದಲ್ಲಿ ಮೃತರ ಸಂಖ್ಯೆ 21 ಆಗಿದೆ.

    ರೋಗಿಗಳ ಮಾಹಿತಿ:
    ರೋಗಿ-524: ಬೆಳಗಾವಿ ಹುಕ್ಕೇರಿಯ 12 ವರ್ಷದ ಬಾಲಕ- ರೋಗಿ 293ರ ಜೊತೆ ಸಂಪರ್ಕ.
    ರೋಗಿ-525: ಕಲಬುರಗಿಯ ನಾಲ್ಕೂವರೆ ವರ್ಷದ ಬಾಲಕಿ- ರೋಗಿ 395ರ ಜೊತೆ ಸಂಪರ್ಕ.
    ರೋಗಿ-526: ಕಲಬುರಗಿಯ 28 ವರ್ಷದ ಯುವಕ- ರೋಗಿ 515ರ ಜೊತೆ ಸಂಪರ್ಕ.
    ರೋಗಿ-527: ಕಲಬುರಗಿಯ 14 ವರ್ಷದ ಬಾಲಕಿ- ರೋಗಿ 425ರ ಜೊತೆ ಸಂಪರ್ಕ
    ರೋಗಿ-528: ಕಲಬುರಗಿಯ 22 ವರ್ಷದ ಯುವಕ- ರೋಗಿ 205ರ ಜೊತೆ ಸಂಪರ್ಕ
    ರೋಗಿ-529: ಕಲಬುರಗಿ 40 ವರ್ಷದ ಮಹಿಳೆ- ರೋಗಿ 425ರ ಜೊತೆ ಸಂಪರ್ಕ
    ರೋಗಿ 530: ಕಲಬುರಗಿಯ 20 ವರ್ಷದ ಯುವಕ- ರೋಗಿ 205ರ ಜೊತೆ ಸಂಪರ್ಕ
    ರೋಗಿ-531: ಕಲಬುರಗಿ 17 ವರ್ಷದ ಬಾಲಕಿ- ರೋಗಿ 425ರ ಜೊತೆ ಸಂಪರ್ಕ
    ರೋಗಿ-532: ಕಲಬುರಗಿಯ 12 ವರ್ಷದ ಬಾಲಕಿ- ರೋಗಿ 425ರ ಜೊತೆ ಸಂಪರ್ಕ
    ರೋಗಿ-533: 35 ವರ್ಷದ ಮಹಿಳೆ ದಾವಣಗೆರೆಯ ನಿವಾಸಿ. ಜ್ವರದ ಲಕ್ಷಣಗಳು ಕಂಡು ಬಂದಿವೆ.
    ರೋಗಿ-534: ಮೈಸೂರು ಜಿಲ್ಲೆಯ ನಂಜನಗೂಡಿನ 26 ವರ್ಷದ ಯುವಕ. ರೋಗಿ ನಂಬರ್ 346ರ ಜೊತೆ ಸಂಪರ್ಕದಲ್ಲಿದ್ದರು.

    ರೋಗಿ-535: ತುಮಕೂರಿನ 73 ವರ್ಷದ ವೃದ್ಧ. ತೀವ್ರ ಉಸಿರಾಟದ ತೊಂದರೆ. ಇಂದು ಸಾವು

    ಕಲಬುರಗಿಯಲ್ಲಿ ರೋಗಿ ನಂಬರ್ 425ರ ಮಹಿಳೆಯಿಂದ ನಾಲ್ವರಿಗೆ ಕೊರೊನಾ ಹಬ್ಬಿದ್ದು, ಜಿಲ್ಲೆಯಲ್ಲಿ ಒಟ್ಟು 8 ಮಂದಿಗೆ ಹಾಗೂ ಬೆಳಗಾವಿಯಲ್ಲಿ 12 ವರ್ಷದ ಬಾಲಕ, ಮೈಸೂರು ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಈವರಗೆ 21 ಮಂದಿ ಮೃತಪಟ್ಟಿದ್ದು, 216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

  • ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’

    ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’

    – ಕೊರೊನಾ ಮೊದಲು ಬಂದಿದ್ದು ಈ ಮಹಿಳೆಗೆ
    – ಅಧ್ಯಯನ ವರದಿ ಆಧಾರಿಸಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟ

    ಬೀಜಿಂಗ್/ ಲಂಡನ್: ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೊನಾ ವೈರಸ್ ತಗಲಿದ ಮೊದಲು ರೋಗಿ ಯಾರು ಎನ್ನುವುದು ಈಗ ಬೆಳಕಿಗೆ ಬಂದಿದೆ.

    ವುಹಾನ್ ನಲ್ಲಿ ಸೀಗಡಿ ಮಾರಾಟ ಮಾಡುತ್ತಿದ್ದ 57 ವರ್ಷದ ‘ವೀ’ ಎಂಬಾಕೆ ಮೊದಲ ಕೊರೊನಾ ಸಂತ್ರಸ್ತೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಈ ವರದಿ ಮಾಡಿದೆ.

    ಆಸ್ಟ್ರೇಲಿಯಾದ ಸಿಡ್ನಿ ವಿಶ್ವ ವಿದ್ಯಾಲಯದ ಸ್ಕೂಲ್ ಲೈಫ್ ಆಂಡ್ ಎನ್ವಿರಾನ್ಮೆಂಟ್ ಸೈನ್ಸ್ ಪ್ರೊಫೆಸರ್ ಎಡ್ವರ್ಡ್ ಹೋಮ್ಸ್, ಚೀನಾದ ಶಾಂಘೈ ವಿಶ್ವವಿದ್ಯಾಲಯದ ಪಬ್ಲಿಕ್ ಹೆಲ್ತ್ ಕ್ಲಿನಿಕಲ್ ಕೇಂದ್ರದ ಪ್ರೊಫೆಸರ್ ಜಾಂಗ್ ಯಂಗ್‍ಜೆನ್ ಶಾಂಘೈ ಫುಡಾನ್ ವಿಶ್ವವಿದ್ಯಾಲಯದ ‘ಸೆಲ್’ ಜರ್ನಲ್ ಗೆ ಬರೆದ ಅಧ್ಯಯನ ವರದಿಯನ್ನು ಆಧಾರಿಸಿ ಪತ್ರಿಕೆ ವರದಿ ಮಾಡಿದೆ.

    ಪತ್ರಿಕೆಯ ಪ್ರಕಾರ, ಡಿಸೆಂಬರ್ 10 ರಂದು ಸಿಗಡಿಯನ್ನು ಹುನಾನ್ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಈಕೆಗೆ ಜ್ವರ ಬಂದಿದೆ. ಈಕೆ ಕ್ಲಿನಿಕ್‍ಗೆ ಹೋದಾಗ ಸಾಮಾನ್ಯ ಜ್ವರ ಎಂದು ಭಾವಿಸಿ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ನೀಡಿದರೂ ಈಕೆಯ ಜ್ವರ ಜಾಸ್ತಿಯಾಗಿ ನಿತ್ರಾಣಗೊಂಡ ಕಾರಣ ಡಿಸೆಂಬರ್ 16 ರಂದು ವುಹಾನ್ ನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್

    ಈ ಪ್ರದೇಶದ ಅತಿ ದೊಡ್ಡ ಆಸ್ಪತ್ರೆಯಾಗಿರುವ ವುಹಾನ್ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿ ಆಕೆ ರೋಗದ ಲಕ್ಷಣ ತಿಳಿಸಿದ್ದಾಳೆ. ಈಕೆ ದಾಖಲಾದ ನಂತರ ಮತ್ತಷ್ಟು ರೋಗಿಗಳು ಆಸ್ಪತ್ರೆಗೆ ಅಡ್ಮಿಟ್ ಆಗಿ ಈಕೆ ಹೇಳಿದ ರೋಗ ಲಕ್ಷಣವನ್ನೇ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಈಕೆಯನ್ನು ‘ಝೀರೋ ಪೇಶೆಂಟ್’ ಎಂದು ಕರೆಯಲಾಗುತ್ತದೆ. ಈಕೆಯನ್ನು ಡಿಸೆಂಬರ್, ಜನವರಿವರೆಗೆ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು.

    ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್ ವೀ ಸಹ ಈ ವಿಚಾರ ದೃಢಪಡಿಸಿದೆ. ವೀ ಮೊದಲ ರೋಗಿಯಾಗಿದ್ದರೆ ವುಹಾನ್ ಮಾರುಕಟ್ಟೆಗೆ ನೇರ ಸಂಬಂಧ ಹೊಂದಿದ್ದ 27 ಮಂದಿಗಳು ಕೊರೊನಾ ಪಾಸಿಟಿವ್ ಆಗಿದ್ದರು ಎಂದು ತಿಳಿಸಿದೆ.

    ಮೊದಲ ರೋಗಿ ವೀ ಆರೋಗ್ಯ ಜನವರಿಯಲ್ಲಿ ಸುಧಾರಣೆಯಾಗಿತ್ತು. ವೀ ಮೊದಲ ರೋಗಿಯೇ ಎಂದು ನಿಖರವಾಗಿ ಹೇಳುವುದಿಲ್ಲ. ಆದರೆ ಮೊದಲ ಬಾರಿಗೆ ಆಕೆ ಆಸ್ಪತ್ರೆಗೆ ದಾಖಲಾಗಿ ರೋಗ ಲಕ್ಷಣ ತಿಳಿಸಿದ ಪರಿಣಾಮ ಆಕೆಗೆ ‘ಪೇಶೆಂಟ್ ಝೀರೋ’ ಹೆಸರನ್ನು ನೀಡಲಾಗಿದೆ.

    ವುಹಾನ್ ನಗರದಲ್ಲಿರುವ ವೆಟ್ ಮಾರುಕಟ್ಟೆಯಿಂದ(ಜೀವಂತ ಪಕ್ಷಿ, ಪ್ರಾಣಿಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕತ್ತರಿಸಿ ವಿತರಿಸುವ ಸ್ಥಳ) ವೈರಸ್ ಬಂದಿದೆಯೋ ಅಥವಾ ವೈರಲಾಜಿ ಲ್ಯಾಬ್‍ನಿಂದ ವೈರಸ್ ಸೋರಿಕೆಯಾಗಿದೆಯೇ ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈಗ ವೆಟ್ ಮಾರ್ಕೆಟ್ ನಲ್ಲಿರುವ ಪ್ರಾಣಿಗಳಿಂದ ವೈರಸ್ ಹರಡಿರಬಹುದು ಎನ್ನುವ ವಾದಕ್ಕೆ ಕೆಲ ಆಧಾರ ಸಿಕ್ಕಿದೆ.