Tag: Coron Vaccine

  • ಒಂದೇ ಸಿರಿಂಜ್‍ನಲ್ಲಿ 39 ಮಕ್ಕಳಿಗೆ ಕೊರೊನಾ ಲಸಿಕೆ- ಆರೋಪಿ ಪರಾರಿ

    ಒಂದೇ ಸಿರಿಂಜ್‍ನಲ್ಲಿ 39 ಮಕ್ಕಳಿಗೆ ಕೊರೊನಾ ಲಸಿಕೆ- ಆರೋಪಿ ಪರಾರಿ

    ಭೋಪಾಲ್: ಒಂದೇ ಸಿರಿಂಜ್‍ನಲ್ಲಿ 39 ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡಿದ ಘಟನೆ ಮಧ್ಯಪ್ರದೇಶದ ಸಾಗರ್ ನಗರದ ಖಾಸಗಿ ಶಾಲೆಯಲ್ಲಿ ನಡೆದಿದೆ.

    ನಗರದ ಜೈನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೆಗಾ ಲಸಿಕೆ ಅಭಿಯಾನದ ವೇಳೆ ಈ ಘಟನೆ ನಡೆದಿದೆ. ವೈದ್ಯನೊಬ್ಬ ವಿದ್ಯಾರ್ಥಿಗಳಿಗೆಲ್ಲರಿಗೂ ಒಂದೇ ಸಿರಿಂಜ್ ಬಳಸಿ ಲಸಿಕೆ ಹಾಕುತ್ತಿದ್ದನ್ನು ಗಮನಿಸಿದರು. ಈ ರೀತಿಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು.

    ಈ ಹಿನ್ನೆಲೆಯಲ್ಲಿ ಪೋಷಕರು ಪ್ರತಿಭಟನೆಯನ್ನು ನಡೆಸಿದರು. ತೀವ್ರವಾದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಜಿತೇಂದ್ರ ಅಹಿರ್ವಾರ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಿಸಲಾಯಿತು. 9 ರಿಂದ 12ನೇ ತರಗತಿ ವರೆಗೆ ಓದುತ್ತಿರುವ 39 ಮಕ್ಕಳಿಗೆ ಈ ಸಿರಿಂಜ್‍ನ್ನು ಬಳಸಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ಪತ್ನಿಗೆ ಟಿಕೆಟ್‌ ಕೊಡಿ – ಬಿಜೆಪಿ ಕಾರ್ಯಕರ್ತರ ಹೊಸ ಬೇಡಿಕೆ

    vaccine

    ಘಟನೆಗೆ ಸಂಬಂಧಿಸಿದಂತೆ ಸಾಗರ್‌ನ ಉಸ್ತುವಾರಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆರೋಪಿ ಜಿತೇಂದ್ರ ಅಹಿರ್ವಾರ್ ಸ್ಥಳದಿಂದ ಪರಾರಿಯಾಗಿದ್ದು, ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾರ್ಥ ಚಟರ್ಜಿಯನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ಮಮತಾ ಬ್ಯಾನರ್ಜಿ

    Live Tv
    [brid partner=56869869 player=32851 video=960834 autoplay=true]

  • ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

    ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

    ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಕಿತರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಓಮಿಕ್ರಾನ್ ಕೂಡ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಮತ್ತೆ ಭೀತಿಯನ್ನು ಉಂಟುಮಾಡುತ್ತಿದೆ. ಈ ನಡುವೆಯೇ ಈಗಾಗಲೇ ಎರಡು ಡೋಸ್ ಪಡೆದ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಇಂದಿನಿಂದ ಆರಂಭವಾಗಲಿದೆ.

    ಕಳೆದ ಡಿ. 25ರಂದು ಪ್ರಧಾನಿ ಮೋದಿ ಜ.10 ರಿಂದ 60 ವರ್ಷ ದಾಟಿದವರಿಗೆ, ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವುದಾಗಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಇಂದಿನಿಂದ ಚಾಲನೆ ದೊರಯಲಿದೆ. ಅದರಂತೆ ಜ.8ರ ಶನಿವಾರದಿಂದಲೇ ಕೋವಿನ್ ಪೋರ್ಟಲ್‌ನಲ್ಲಿ 3ನೇ ಡೋಸ್ ಪಡೆಯಲು ಬುಕ್ಕಿಂಗ್ ಆರಂಭವಾಗಿದೆ. ಲಸಿಕಾ ಕೇಂದ್ರಗಳಲ್ಲಿ ನೇರವಾಗಿ ಬುಕ್ ಮಾಡಿಸಿ ಲಸಿಕೆ ಪಡೆಯಲು ಅವಕಾಶವಿದೆ.

    ಯಾರು ಪಡೆಯಬಹುದು?: ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ ಪೂರ್ವ ರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂತಹವರು ಬೂಸ್ಟರ್ ಡೋಸ್‌ನ್ನು ಪಡೆಯಲು ಅರ್ಹರಾಗಿರುತ್ತಾರೆ.

    ಯಾವ ಲಸಿಕೆ ತೆಗೆದುಕೊಳ್ಳಬೇಕು?: ಮೊದಲಿನ 2 ಡೋಸ್ ಲಸಿಕೆ ಯಾವ ಕಂಪನಿಯದ್ದಾಗಿರುತ್ತೋ, ಅದೇ ಕಂಪನಿಯ ಲಸಿಕೆಯನ್ನು 3ನೇ ಡೋಸ್ ಆಗಿ ಪಡೆಯಬೇಕು. ಅಂದರೆ ಮೊದಲು ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಡಬಲ್ ಡೋಸ್ ಲಸಿಕೆ ಪಡೆದವರು ಪುನಃ ಅದೇ ಲಸಿಕೆಯನ್ನು ಪಡೆಯಬೇಕು. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

    ಬೂಸ್ಟರ್ ಡೋಸ್ ಯಾಕೆ?:  ಕಾಯಿಲೆ ಪೀಡಿತರಿಗೆ ಮೊದಲ 2 ಡೋಸ್ ಪಡೆದರೂ ಅವರ ರೋಗನಿರೋಧಕ ಶಕ್ತಿ ವೃದ್ಧಿಸದೇ ಇರಬಹುದು. ಇನ್ನು ವೈದ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ನಿತ್ಯ ಸಾವಿರಾರು ಜನ ಹಾಗೂ ರೋಗಿಗಳು ಸಂಪರ್ಕಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಅವರಿಗೆ ಮುಂಜಾಗ್ರತಾ ಡೋಸ್ ನೀಡಲಾಗುತ್ತದೆ. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ಲಸಿಕೆ ಮಿಶ್ರಣವಿಲ್ಲ: ಬೂಸ್ಟರ್ ಡೋಸ್ ಬಗ್ಗೆ ಇದ್ದ ಗೊಂದಲಕ್ಕೆ ಕೊನೆಗೂ ಕೇಂದ್ರ ಸರ್ಕಾರ ತೆರೆ ಎಳೆಯುವ ಕೆಲಸ ಮಾಡಿದೆ. ಬೂಸ್ಟರ್ ಡೋಸ್‌ಗೆ ಯಾವುದೇ ಕಾರಣಕ್ಕೂ ಮಿಶ್ರಣ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಮೊದಲು ಕೊಟ್ಟಂತೆಯೇ ಬೂಸ್ಟರ್ ಲಸಿಕೆ ನೀಡಲಾಗುತ್ತದೆ. ಬೂಸ್ಟರ್ ಡೋಸ್ ಲಸಿಕೆ ವೇಳೆ ಮಿಕ್ಸ್ ಡೋಸ್ ನೀಡಲು ಅವಕಾಶವಿಲ್ಲ. ಈ ಹಿಂದೆ ಮೊದಲ, ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು. ಮಿಕ್ಸ್ ಬೂಸ್ಟರ್ ಡೋಸ್ ನೀಡಲು ಅನುಮತಿಯಿಲ್ಲ.

  • ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ?

    ಲಸಿಕೆ ಪ್ರಮಾಣ ಹೆಚ್ಚಳ – ಯಾದಗಿರಿ ಜಿಲ್ಲಾಡಳಿತದ ಪ್ಲ್ಯಾನ್ ಯಶಸ್ವಿಯಾಗಿದ್ದು ಹೇಗೆ?

    ಯಾದಗಿರಿ: ಒಂದು ತಿಂಗಳ ಹಿಂದೆ ಯಾದಗಿರಿಯಲ್ಲಿ ಶೇ.38 ರಷ್ಟಿದ್ದ ವ್ಯಾಕ್ಸಿನೇಷನ್, ಇಂದು ಶೇ.85 ರಷ್ಟಾಗಿದ್ದು, ಜನರಲ್ಲಿನ ಮೂಢನಂಬಿಕೆ ಹೋಗಲಾಡಿಸುವಲ್ಲಿ ಜಿಲ್ಲಾಡಳಿತ ಯಶಸ್ಸು ಕಂಡಿದೆ.

    ಲಸಿಕೆ ನೀಡಲು ಮನೆಗೆ ತೆರಳಿದ ಅಧಿಕಾರಿಗಳ ಮೇಲೆ ದರ್ಪ, ಲಸಿಕೆ ಬಗ್ಗೆ ಮೂಢನಂಬಿಕೆ ಹೀಗೆ ತಮ್ಮ ಅಜ್ಞಾನದಿಂದ ಲಸಿಕೆ ಬಗ್ಗೆ ಯಾದಗಿರಿ ಜನ ಒಂದು ರೀತಿಯ ಅಭಿಪ್ರಾಯಕ್ಕೆ ಒಳಗಾಗಿದ್ದರು, ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡ ಯಾದಗಿರಿ ಜಿಲ್ಲಾಡಳಿತ ಒಂದು ತಿಂಗಳಲ್ಲಿ ವ್ಯಾಕ್ಸಿನ್ ಚಿತ್ರಣವನ್ನೇ ಬದಲಾಯಿಸಿದೆ. ಇದನ್ನೂ ಓದಿ: ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ಒಂದು ತಿಂಗಳ ಹಿಂದೆ ಯಾದಗಿರಿ ವ್ಯಾಕ್ಸಿನೇಷನ್ ಶೇ.38ರಷ್ಟಿತ್ತು. ಆದರೆ ಇಂದು ಶೇ.85ರಷ್ಟು ವ್ಯಾಕ್ಸಿನೇಷನ್ ಮಾಡುವ ಮೂಲಕ ಜಿಲ್ಲಾಡಳಿತ ಸಾಧನೆ ಮಾಡಿದೆ. ಲಸಿಕೆ ಬಗ್ಗೆ ಜನರಲ್ಲಿರುವ ಮೂಢನಂಬಿಕೆಯಿಂದಾಗಿ ಜಿಲ್ಲಾಡಳಿತ ಹೈರಾಣಾಗಿತ್ತು. ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮತ್ತು ಡಿಎಚ್‍ಓ ಇಂದುಮತಿ ಪಾಟೀಲ್ ಮಾಡಿದ ಮಾಸ್ಟರ್ ಪ್ಲ್ಯಾನ್ ವರ್ಕೌಟ್ ಆಗಿದೆ.

    ಏನು ಪ್ಲ್ಯಾನ್ ಮಾಡಿತ್ತು?: ವಾರದಲ್ಲಿ ಒಂದು ದಿನ ಬೃಹತ್ ಲಸಿಕಾ ಶಿಬಿರವನ್ನು ಹಮ್ಮಿಕೊಂಡು ಮನೆ ಮನೆಗೆ ಹೋಗಿ ಲಸಿಕೆ ಹಾಕುವುದು. ಲಸಿಕಾ ಎಕ್ಸ್‌ಪ್ರೆಸ್ ಕಾರು, ಬೀದಿ ನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು. ಹೀಗೆ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ವಿಶೇಷ ಪ್ಲಾನ್ ಯಾದಗಿರಿಯಲ್ಲಿ ಸಕ್ಸಸ್ ಆಗಿದೆ.  ಇದನ್ನೂ ಓದಿ: ಹಿಂದಿ ಹೇರಿಕೆ- ಭೂತ ದಹಿಸಿ ವಾಟಳ್ ಪ್ರತಿಭಟನೆ

    ಇದರಿಂದಾಗಿ ಜಿಲ್ಲೆಯಲ್ಲಿ ಶೇ.85 ರಷ್ಟು ಜನರಿಗೆ ಮೊದಲನೇ ಡೋಸ್ ಸಂಪೂರ್ಣಗೊಂಡಿದೆ. ಜಿಲ್ಲಾಡಳಿತದ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಶೇ.100 ರಷ್ಟು ವ್ಯಾಕ್ಸಿನೇಷನ್ ಮಾಡುವ ವಿಶ್ವಾಸವನ್ನು ಜಿಲ್ಲಾಡಳಿತ ವ್ಯಕ್ತಪಡಿಸಿದೆ.

  • ಲಸಿಕೆ ಅಭಿಯಾನ ಯಶಸ್ವಿಗೊಳಿಸಿ ರಾಜ್ಯವನ್ನು ಕೊರೊನಾ ಮುಕ್ತಗೊಳಿಸಿ: ಈಶ್ವರಪ್ಪ

    ಲಸಿಕೆ ಅಭಿಯಾನ ಯಶಸ್ವಿಗೊಳಿಸಿ ರಾಜ್ಯವನ್ನು ಕೊರೊನಾ ಮುಕ್ತಗೊಳಿಸಿ: ಈಶ್ವರಪ್ಪ

    ಶಿವಮೊಗ್ಗ: ಕೊರೊನಾ ರೋಗವನ್ನು ಹಿಮ್ಮೆಟ್ಟಿಸಲು ಅವಶ್ಯಕವಾಗಿರುವ ಕೋವಿಡ್ ಲಸಿಕೆಯನ್ನು ದೊರಕಿಸುವ ಲಸಿಕಾ ಅಭಿಯಾನವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ರಾಜ್ಯವನ್ನು ಕೊರೊನಾ ಮುಕ್ತಗೊಳಿಸಲು ಎಲ್ಲರೂ ಒಗ್ಗೂಡಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಜಿಲ್ಲಾ ಪಂಚಾಯತ್ ಸಭಾಂಣದಲ್ಲಿ ಧ್ವನಿ ಫೌಂಡೇಶನ್ ಬೆಂಗಳೂರು, ಜಿಲ್ಲಾ ಪಂಚಾಯತ್ ಹಾಗೂ ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಕೋವಿಡ್ ಜಿಲ್ಲಾ ನೋಡಲ್ ಏಜೆನ್ಸಿ ಇವರ ಸಹಯೋಗದಲ್ಲಿ ಕೋವಿಡ್ ಲಸಿಕೆ ಮಹತ್ವ ಮತ್ತು ಅದರ ಉಪಯೋಗ ಕುರಿತು ಎಲ್ಲರಿಗೂ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಯಾರಿಸಲಾಗಿರುವ ಲಸಿಕೆ ಮೂಲಕ ಕೋವಿಡ್ 19ನ್ನು ನಿಯಂತ್ರಿಸಲು ಮಾರ್ಗದರ್ಶಿಕೆಯನ್ನು ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಕೆಲಸದ ಒತ್ತಡದಿಂದಾಗಿ ವ್ಯಕ್ತಿಗೆ ಖಾಲಿ ಸಿರಿಂಜ್ ಚುಚ್ಚಿದ ನರ್ಸ್..!

    ರಾಜ್ಯ ಸರಕಾರ ಈಗಾಗಲೇ ತುಂಬ ವ್ಯವಸ್ಥಿತವಾಗಿ ಎಲ್ಲರಿಗೂ ಲಸಿಕೆ ದೊರಕಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಜೂನ್ 21ರಂದು ಸುಮಾರು 11 ಲಕ್ಷ ಜನರಿಗೆ ಒಂದೇ ದಿನ ಲಸಿಕೆ ಹಾಕುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಲಾಗಿದೆ. ಹೀಗೆ ಇಡೀ ರಾಜ್ಯದ ಜನತೆಗೆ ಲಸಿಕೆ ದೊರಕಬೇಕು ಹಾಗೂ ರಾಜ್ಯ ಕೊರೊನಾ ಮುಕ್ತವಾಗಬೇಕು ಎಂಬ ಸದುದ್ದೇಶದಿಂದ ಮಾರ್ಗದರ್ಶಿಕೆಯನ್ನು ಇಂದು ಲೋಕಾರ್ಪಣೆ ಮಾಡಿದ್ದೇನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಮಾರ್ಗದರ್ಶಿಕೆಯನ್ನು ಗ್ರಾಮ ಪಂಚಾಯ್ತಿ ಮೂಲಕ ಜನರಿಗೆ ತಲುಪಿಸಬೇಕು ಎಂದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಪ್ರಯತ್ನಿದರೆ ತಪ್ಪೇನು, ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ : ಈಶ್ವರಪ್ಪ

    ಆರಂಭದಲ್ಲಿ ಲಸಿಕೆ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆ ಇತ್ತು. ಈಗಲೂ ಕೆಲವರಲ್ಲಿ ಇದೆ. ಅದನ್ನು ಹೋಗಲಾಡಿಸುವ ಪ್ರಯತ್ನ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾಡುತ್ತಿದೆ. ಜೊತೆಗೆ ಇತ್ತೀಚೆಗೆ ಲಸಿಕೆ ಬಗ್ಗೆ ಜಾಗೃತಿ ಕೂಡ ಹೆಚ್ಚಾಗಿದೆ. ಲಸಿಕೆ ಬೇಡಿಕೆ ಹೆಚ್ಚಿದೆ. ನಮ್ಮ ಪ್ರಧಾನಿಯವರು ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವ ಪಣ ತೊಟ್ಟಿದ್ದಾರೆ. ಲಸಿಕೆಯನ್ನೂ ಪೂರೈಸುತ್ತಿದ್ದಾರೆ ಎಂದು ಹೇಳಿದರು.

    ಕೊರೊನಾ ನಿಯಂತ್ರಣ ಕುರಿತು ಜನಜಾಗೃತಿ ಮತ್ತು ಎರಡನೇ ಅಲೆ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯ ಸರ್ಕಾರ, ವಿವಿಧ ಇಲಾಖೆಗಳು ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಗ್ರಾಮೀಣಾಭಿವೃದ್ದಿ ಇಲಾಖೆಯ ಸೇವೆಯನ್ನು ಮರೆಯುವಂತಿಲ್ಲ. ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎನ್‍ಜಿಓಗಳು ಜನ ಜಾಗೃತಿಗೊಳಿಸುವಲ್ಲಿ ಮಾಡುತ್ತಿರುವ ಕೆಲಸ ಅತ್ಯುತ್ತಮವಾಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ವ್ಯಾಕ್ಸಿನ್ ಕೊರತೆ- NO STOCK ಫಲಕ ಹಾಕಿದ ಆಸ್ಪತ್ರೆಗಳು

    ಗ್ರಾಮ ಮಟ್ಟದಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಬೇಕು ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಅಭಿಯಾನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಮಾರ್ಗದರ್ಶಿಯನ್ನು ಹೊರತಂದಿದ್ದು, ಇದರಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾ.ಪಂ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸ್ವಯಂ ಸೇವಕರ ಪಾತ್ರವನ್ನು ವಿವರಿಸಲಾಗಿದೆ. ಈ ಮಾರ್ಗದರ್ಶಿಕೆಯಿಂದಾಗಿ ಜಿಲ್ಲಾಧಿಕಾರಿಯಿಂದ ಹಿಡಿದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರೆಗೆ ಎಲ್ಲರಿಗೂ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗುತ್ತದೆ. ಈ ಮಾರ್ಗದರ್ಶಿಕೆಯನ್ನು ಉಪಯೋಗಿಸಿಕೊಂಡು ಎಲ್ಲಾ ಮಟ್ಟದಲ್ಲಿಯೂ ಅಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ವ್ಯವಸ್ಥಿತವಾಗಿ ಕೆಲಸ ಮಾಡಿ ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಿ ಕೊರೊನಾದಿಂದ ರಾಜ್ಯ ಮುಕ್ತಿ ಪಡೆಯಲು ಸಹಾಯವಾಗಲಿದೆ ಎಂದರು. ಇದನ್ನೂ ಓದಿ: ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?

    ಇದೇ ವೇಳೆ ಕೊರೊನಾ ಲಸಿಕೆ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ, ಡಿ.ಎಸ್. ಜಯಲಕ್ಷ್ಮಿ, ಡಿಹೆಚ್‍ಓ ಡಾ. ರಾಜೇಶ್ ಸುರಗಿಹಳ್ಳಿ, ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಸಿಇಓ ಬದ್ರೀಶ.ಬಿ.ಟಿ, ಇತರೆ ಅಧಿಕಾರಿಗಳು ಹಾಜರಿದ್ದರು.

  • 45 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ – ಬೆಂಗಳೂರು ವರದಿ ಬಿಡುಗಡೆ

    45 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ – ಬೆಂಗಳೂರು ವರದಿ ಬಿಡುಗಡೆ

    ಬೆಂಗಳೂರು: ನಗರದಲ್ಲಿ ಮೂರನೇ ಕೋವಿಡ್ ಅಲೆಯ ಅಪಾಯದಿಂದ ಪಾರಾಗಲು ವ್ಯಾಕ್ಸಿನ್ ವಿತರಣೆಯನ್ನೇ ಪ್ರಮುಖ ಅಸ್ತ್ರವಾಗಿ ಬಿಬಿಎಂಪಿ ಪರಿಗಣಿಸಿದೆ. 45 ವರ್ಷ ಮೇಲ್ಪಟ್ಟವರಿಗೇ ಎಲ್ಲರಿಗೂ ಲಸಿಕೆ ವಿತರಣೆ ಮಾಡುವ ಉದ್ದೇಶವನ್ನು ಆರಂಭದಲ್ಲಿ ಹಾಕಿಕೊಂಡಿದೆ. ಈ ಹಿನ್ನಲೆಯಲ್ಲಿ ಪ್ರತೀ ಮನೆ-ಮನೆ (ಡೋರ್ ಟು ಡೋರ್ ಸರ್ವೇ) ಸರ್ವೇ ನಡೆಸಿರುವ ಬಿಬಿಎಂಪಿ ಶೇ.60 ರಷ್ಟು ಸರ್ವೇಕಾರ್ಯ ಮುಗಿಸಿದ್ದು, ಮಧ್ಯಂತರ ವರದಿ ನೀಡಿದೆ.

    ನಗರದಲ್ಲಿ 23,85,266 ಮನೆಗಳಿದ್ದು, 14,46,505 (ಶೇ.61) ಜನರ ಸರ್ವೇ ನಡೆಸಲಾಗಿದೆ. 45 ವರ್ಷ ಮೇಲ್ಪಟ್ಟ 18,58,719 ಜನರಲ್ಲಿ 12,96,282 ಜನರು ಒಂದು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಆದರೆ ಶೇ.33 ಮಂದಿ ಅಂದರೆ 6,14,175 ಮಂದಿ ಇನ್ನೂ ಕೂಡಾ ಒಂದ್ ಡೋಸ್ ವ್ಯಾಕ್ಸಿನ್ ಕೂಡಾ ಪಡೆದಿಲ್ಲ. ಇದನ್ನೂ ಓದಿ:  ಭಾರತದ ಕೊವಾಕ್ಸಿನ್ ತುರ್ತು ಬಳಕೆಗೆ ಫಿಲಿಪೈನ್ಸ್ ಅನುಮೋದನೆ

    ವ್ಯಾಕ್ಸಿನ್ ಪಡೆದವರ ವಲಯವಾರು ವಿವರ:
    ಮನೆಸರ್ವೇ ಪ್ರಮಾಣ ಪಶ್ಚಿಮ 2,05619 1,67,940 (ಶೇ.45) ಶೇ.65, ದಕ್ಷಿಣ 4,83,793 1,93,645(ಶೇ.29) ಶೇ.62, ಬೊಮ್ಮನಹಳ್ಳಿ 1,97,817 74,183(ಶೇ.27) ಶೇ.35, ದಾಸರಹಳ್ಳಿ 35,083 13,633(ಶೇ.28) ಶೇ.62, ಮಹದೇವಪುರ 1,29,103 41,678(ಶೇ.24) ಶೇ.52, ಯಲಹಂಕ 1,04,265 38,201(ಶೇ.31) ಶೇ.86, ಆರ್‍ಆರ್ ನಗರ 1,40,265 84,895(ಶೇ.42) ಶೇ.81, ಒಟ್ಟು 12,96,282 6,14,175(ಶೇ.33) ಶೇ.61 ಪೂರ್ವ ವಲಯದಲ್ಲಿ ಸ್ಲಂ ಮನೆಗಳಲ್ಲಿ ಮಾತ್ರಸರ್ವೇ ನಡೆಸಿಸದ್ದು, 45 ವರ್ಷ ಮೇಲ್ಪಟ್ಟ 51,910 ಜನರ ಪೈಕಿ, 16,745 ಒಂದು ಡೋಸ್ ವ್ಯಾಕ್ಸಿನ್ ಸಂಪೂರ್ಷಗೊಳಿಸಿದ್ದು, 34,817 ಜನ ಇನ್ನೂ ಒಂದು ಡೋಸ್ ಕೂಡಾ ವ್ಯಾಕ್ಸಿನ್ ಪಡೆದಿಲ್ಲ.

    ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ರಂದೀಪ್ ಡಿ, ನಗರದಲ್ಲಿ ಬೇರೆ ಬೇರೆ ವರ್ಗಗಳಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜನರಿಗೂ ವ್ಯಾಕ್ಸಿನ್ ಕೊಡಬೇಕೆಂದಾಗ ಎಷ್ಟು ಜನಕ್ಕೆ ವ್ಯಾಕ್ಸಿನ್ ಆಗಿದೆ ಎಷ್ಟು ಜನರಿಗೆ ಕೊಡಬೇಕಿದೆ ಎಂಬ ವಾರ್ಡ್ ವಾರು ಮೈಕ್ರೋಪ್ಲಾನ್ ಮಾಡಲು ಮಾಹಿತಿ ಸರ್ವೇಯಿಂದ ಗೊತ್ತಾಗಲಿದೆ. ವ್ಯಾಕ್ಸಿನೇಷನ್ ಸಂಪೂರ್ಣಗೊಂಡ ಶೇ.33 ರಷ್ಟು ಜನರ ಮಾಹಿತಿ ಕೋವಿಡ್ ಪೋರ್ಟಲ್‍ನಲ್ಲಿಯೂ ನಮೂದಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆದವರ ಕೆಲವು ಮಾಹಿತಿ ದಾಖಲಾಗಿಲ್ಲ, ಹೀಗಾಗಿ ಇದನ್ನು ಸಂಪೂರ್ಣ ಮಾಹಿತಿ ಪಡೆಯಲು ಡೋರ್ ಟು ಡೋರ್ ಸರ್ವೇ ನಡೆಸಲಾಗಿದೆ ಎಂದರು.

    ಮಾಹಿತಿ ಕೊಡಲು ನಿರ್ಲಕ್ಷ್ಯ:
    ಮನೆ ಮನೆ ಸರ್ವೆ ನಡೆಸಲು ಶಿಕ್ಷಕರು, ಬಿಎಲ್ ಒಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಮನೆಮನೆಗೂ ಹೋದ ಸಂದರ್ಭದಲ್ಲಿ ಹೆಚ್ಚಿನ ಕಡೆ ನಿಖರವಾದ ಮಾಹಿತಿ ನೀಡುತ್ತಿಲ್ಲ. ಬದಲಾಗಿ ನಂತರ ಬನ್ನಿ, ನಾಳೆ ಬನ್ನಿ ಎಂದು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜನರ ಆರೋಗ್ಯಕ್ಕಾಗಿ ಪಾಲಿಕೆ ಕೆಲಸ ಮಾಡುತ್ತಿರುವಾಗ ಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಇದರೊಂದಿಗೆ ಕೆಲವೆಡೆ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂಜರಿಕೆ ಇದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ಸ್ಲಂ ಜನರಿಗೆ ವ್ಯಾಕ್ಸಿನ್:
    ನಗರದ ಕೊಳಚೆ ಪ್ರದೇಶಗಳಲ್ಲಿರುವ ಬಡ ಜನರಿಗೆ ಆಕ್ಟ್ ಸಂಸ್ಥೆಯ ಮೂಲಕ ಉಚಿತವಾಗಿ ವ್ಯಾಕ್ಸಿನ್ ನೀಡಲು ಕ್ರಮಕೈಗೊಳ್ಳಲಾಗಿದೆ.ಒಟ್ಟಿನಲ್ಲಿ ಬೆಂಗಳೂರು ನಗರ ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಿ ದಾಖಲೆ ನಿರ್ಮಿಸುತ್ತಿದ್ದರೂ ಬಹುತೇಕ ಜನರು ಒಂದು ಡೋಸ್ ವ್ಯಾಕ್ಸಿನ್ ಕೂಡಾ ಪಡೆಯದೆ ಹೊರಗುಳಿದಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಸರ್ವೇ ಸಂಪೂರ್ಣಗೊಳ್ಳಲಿದ್ದು, ನಿಖರ ಮಾಹಿತಿ ಸಿಗಲಿದೆ.