Tag: coron avirus

  • ರಾಜ್ಯದಲ್ಲಿ 328 ಮಂದಿಗೆ ಕೊರೊನಾ ಪಾಸಿಟಿವ್

    ರಾಜ್ಯದಲ್ಲಿ 328 ಮಂದಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ರಾಜ್ಯದಲ್ಲಿ ಇಂದು 328 ಮಂದಿಯಲ್ಲಿ ಕೊರೊನಾ ಪಾಸಿಟಿವ್ (Corona Positive) ಕಾಣಿಸಿಕೊಂಡಿದೆ.

    ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‍ನಲ್ಲಿ ಇಂದು ಒಟ್ಟು 7,205 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 328 ಮಂದಿಯಲ್ಲಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲಿ 163 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇಂದು 409 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ರಾಜ್ಯದಲ್ಲಿ ಒಟ್ಟು 1,159 ಸಕ್ರೀಯ ಕೇಸ್‍ಗಳಿದ್ದು, 1,087 ಮಂದಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. 72 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 9 ಮಂದಿ ಐಸಿಯುನಲ್ಲಿದ್ದರೆ, ಮೂವರು ಐಸಿಯು ಜೊತೆ ವೆಂಟಿಲೇಟರ್ ಸಪೋರ್ಟ್‍ನಲ್ಲಿದ್ದಾರೆ. ಇನ್ನು 51 ಮಂದಿ ಜನರಲ್ ಬೆಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಎಂ.ವೈ‌ ಪಾಟೀಲ್ ಕಾರು ಅಪಘಾತ

    ಬೆಂಗಳೂರು ಬಿಟ್ಟರೆ ಮೈಸೂರಿನಲ್ಲಿ ಅತಿ ಹೆಚ್ಚು ಸಕ್ರೀಯ ಪ್ರಕರಣ ದಾಖಲಾಗಿವೆ. ಮೈಸೂರು 26, ಬೆಂಗಳೂರು ಗ್ರಾಮೀಣ 18, ತುಮಕೂರು 15, ಹಾಸನ 12 ಹಾಗೂ ಚಿಕ್ಕಬಳ್ಳಾಪುರದಲ್ಲಿ 10 ಸಕ್ರೀಯ ಪ್ರಕರಣಗಳಿವೆ.

  • ಕೊರೊನಾ ನಿಯಮ ಉಲ್ಲಂಘನೆ- ಹರಿದ್ವಾರಕ್ಕೆ ಹರಿದು ಬಂದ ಭಕ್ತ ಸಾಗರ

    ಕೊರೊನಾ ನಿಯಮ ಉಲ್ಲಂಘನೆ- ಹರಿದ್ವಾರಕ್ಕೆ ಹರಿದು ಬಂದ ಭಕ್ತ ಸಾಗರ

    ಡೆಹ್ರಾಡೂನ್: ಕೋವಿಡ್ 2ನೇ ಅಲೆ ನಡುವೆ ಹರಿದ್ವಾರದಲ್ಲಿ ಕುಂಭಮೇಳಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಜನರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

    ಪವಿತ್ರ ಸ್ನಾನಕ್ಕಾಗಿ ಸಾವಿರಾರು ಮಂದಿ ಹರಿದ್ವಾರಕ್ಕೆ ಬಂದಿದ್ದಾರೆ. ಈ ವೇಳೆ ಕೊರೊನಾ ನಿಯಮವಾದ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ. ಕುಂಭಸ್ನಾನಕ್ಕಾಗಿ ಬಂದ ಭಕ್ತರಲ್ಲಿ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುವುದೂ ಕಷ್ಟ. ಅವರಿಗೆ ದಂಡ ವಿಧಿಸಲೂ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ನಾವು ಜನರಲ್ಲಿ ಕೊರೊನಾ ನಿಯಮ ಪಾಲಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ಆದರೆ ಜನರ ಗುಂಪಿನಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಸಾಧ್ಯವಾಗುತ್ತಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದು ಹರಿದ್ವಾರ ಕುಂಭ ಮೇಳದಲ್ಲಿ ಕರ್ತವ್ಯ ನಿರತರಾಗಿರುವ ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ.

    ಹರಿದ್ವಾರದ ಹರ್ ಕೀ ಪೌರಿಯಲ್ಲಿ ಗಂಗಾಸ್ನಾನಕ್ಕಾಗಿ ಸಾವಿರಾರು ಮಂದಿ ಬಂದು ಸೇರಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯವರೆಗೆ ಮಾತ್ರ ಸಾಮಾನ್ಯ ಜನರಿಗೆ ಇಲ್ಲಿ ಪ್ರವೇಶವಿದ್ದು, ನಂತರ ಸಾಧುಗಳಿಗೆ ಕಾಯ್ದಿರಿಸಲಾಯಿತು.

  • ಇಂದು 36 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ

    ಇಂದು 36 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಇಂದು 36 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.

    ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬೆಂಗಳೂರಿನಲ್ಲಿ 12, ಚಿತ್ರದುರ್ಗ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 7 ತುಮಕೂರು 1, ಬೀದರ್ ನಲ್ಲಿ 3, ವಿಜಯಪುರ 1 ಹಾಗೂ ದಾವಣಗೆರೆಯಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ.

    ಸೋಂಕಿತರ ವಿವರ:
    1. ರೋಗಿ-754: ದಾವಣಗೆರೆಯ 20 ವರ್ಷದ ಯುವತಿ – ರೋಗಿ 651ರ ಸಂಪರ್ಕ
    2. ರೋಗಿ-755: ದಾವಣಗೆರೆಯ 45 ವರ್ಷದ ಪುರುಷ – ರೋಗಿ 651ರ ಸಂಪರ್ಕ
    3. ರೋಗಿ-756: ದಾವಣಗೆರೆಯ 24 ವರ್ಷದ ಯುವಕ – ರೋಗಿ 651ರ ಸಂಪರ್ಕ
    4. ರೋಗಿ-757: ದಾವಣಗೆರೆಯ 24 ವರ್ಷದ ಯುವಕ – ರೋಗಿ 651ರ ಸಂಪರ್ಕ
    5. ರೋಗಿ-758: ದಾವಣಗೆರೆಯ 26 ವರ್ಷದ ಯುವಕ – ರೋಗಿ 651ರ ಸಂಪರ್ಕ
    6. ರೋಗಿ-759: ಬೆಂಗಳೂರಿನ 36 ವರ್ಷದ ಪುರುಷ – ರೋಗಿ 419ರ ಸಂಪರ್ಕ

    7. ರೋಗಿ-760: ಬೆಂಗಳೂರಿನ ನಿವಾಸಿ 60 ವರ್ಷದ ವೃದ್ಧ – ರೋಗಿ 419ರ ಸಂಪರ್ಕ
    8. ರೋಗಿ-761: ಬೆಂಗಳೂರಿನ 55 ವರ್ಷದ ಮಹಿಳೆ – ರೋಗಿ 449ರ ಸಂಪರ್ಕ
    9. ರೋಗಿ-762: ಬೆಂಗಳೂರಿನ 20 ವರ್ಷದ ಯುವತಿ – ರೋಗಿ 454ರ ಸಂಪರ್ಕ
    10. ರೋಗಿ-763: ಬೆಂಗಳೂರಿನ 40 ವರ್ಷದ ಮಹಿಳೆ – ರೋಗಿ 454ರ ಸಂಪರ್ಕ
    11. ರೋಗಿ-764: ತುಮಕೂರಿನ 45 ವರ್ಷದ ಪುರುಷ – ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡಿನ ರೋಗಿ 135ರ ಸಂಪರ್ಕ
    12. ರೋಗಿ-765: ಬೆಂಗಳೂರಿನ 20 ವರ್ಷದ ಯುವತಿ – ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡಿನ ರೋಗಿ 135ರ ಸಂಪರ್ಕ
    13. ರೋಗಿ-766: ಬೆಂಗಳೂರಿನ 40 ವರ್ಷದ ಪುರುಷ – ರೋಗಿ 419ರ ಸಂಪರ್ಕ
    14. ರೋಗಿ-767: ಬೆಂಗಳೂರಿನ 24 ವರ್ಷದ ಯುವಕ – ರೋಗಿ 419ರ ಸಂಪರ್ಕ

    15. ರೋಗಿ-768: ಬೆಂಗಳೂರಿನ 37 ವರ್ಷದ ಮಹಿಳೆ – ರೋಗಿ 419ರ ಸಂಪರ್ಕ
    16. ರೋಗಿ-769: ವಿಜಯಪುರದ 11 ವರ್ಷದ ಬಾಲಕಿ – ರೋಗಿ 510ರ ಸಂಪರ್ಕ
    17. ರೋಗಿ-770: ಬೀದರ್ ನ 30 ವರ್ಷದ ಪುರುಷ – ರೋಗಿ 647ರ ಸಂಪರ್ಕ
    18. ರೋಗಿ-771: ಬೀದರ್ ನ 12 ವರ್ಷದ ಬಾಲಕಿ – ರೋಗಿ 648ರ ಸಂಪರ್ಕ
    19. ರೋಗಿ-772: ಬೀದರ್ ನ 30 ವರ್ಷದ ಮಹಿಳೆ- ರೋಗಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
    20. ರೋಗಿ-773: ಬೆಂಗಳೂರಿನ 46 ವರ್ಷದ ಪುರುಷ- ರೋಗಿ 454ರ ಸಂಪರ್ಕ
    21. ರೋಗಿ-774: ಬೆಂಗಳೂರಿನ 19 ವರ್ಷದ ಯುವತಿ- ರೋಗಿ 454ರ ಸಂಪರ್ಕ
    22. ರೋಗಿ-775: ಬೆಂಗಳೂರಿನ 31 ವರ್ಷದ ಮಹಿಳೆ- ರೋಗಿ 449ರ ಸಂಪರ್ಕ

    23. ರೋಗಿ-776: ದಾವಣಗೆರೆಯ 48 ವರ್ಷದ ಪುರುಷ- ರೋಗಿ 553ರ ದ್ವಿತೀಯ ಸಂಪರ್ಕ
    24. ರೋಗಿ-777: ದಕ್ಷಿಣ ಕನ್ನಡ, ಬಂಟ್ವಾಳದ 30 ವರ್ಷದ ಯುವಕ- ರೋಗಿ 578ರ ಸಂಪರ್ಕ
    25. ರೋಗಿ-778: ಬಂಟ್ವಾಳದ 60 ವರ್ಷದ ಮಹಿಳೆ- ರೋಗಿ 578ರ ಸಂಪರ್ಕ
    26. ರೋಗಿ-779: ಬಂಟ್ವಾಳದ 70 ವರ್ಷದ ವೃದ್ಧೆ- ರೋಗಿ 578ರ ಸಂಪರ್ಕ
    27. ರೋಗಿ-780: ಉತ್ತರ ಕನ್ನಡ ಭಟ್ಕಳದ 2 ವರ್ಷದ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ
    28. ರೋಗಿ-781: ಭಟ್ಕಳದ 65 ವರ್ಷದ ವೃದ್ಧ- ರೋಗಿ 659ರ ದ್ವಿತೀಯ ಸಂಪರ್ಕ
    29. ರೋಗಿ-782: ಭಟ್ಕಳದ 50 ವರ್ಷದ ಮಹಿಳೆ- ರೋಗಿ 659ರ ದ್ವಿತೀಯ ಸಂಪರ್ಕ
    30. ರೋಗಿ-783: ಭಟ್ಕಳದ 68 ವರ್ಷದ ಮಹಿಳೆ- ರೋಗಿ 740ರ ಸಂಪರ್ಕ
    31. ರೋಗಿ-784: ಭಟ್ಕಳದ 1 ವರ್ಷ 5 ತಿಂಗಳ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ

    32. ರೋಗಿ-785: ಭಟ್ಕಳದ 17 ವರ್ಷದ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ
    33. ರೋಗಿ-786: ಭಟ್ಕಳದ 23ವರ್ಷದ ಯುವತಿ- ರೋಗಿ 659ರ ದ್ವಿತೀಯ ಸಂಪರ್ಕ
    34. ರೋಗಿ-787: ಚಿತ್ರದುರ್ಗದ 34 ವರ್ಷದ ಯುವಕ- ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    35. ರೋಗಿ-788: ಚಿತ್ರದುರ್ಗದ 26 ವರ್ಷದ ಯುವಕ- ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ
    36. ರೋಗಿ-789: ಚಿತ್ರದುರ್ಗದ 17 ವರ್ಷದ ಹುಡುಗ- ಅಹಮದಾಬಾದ್, ಗುಜರಾತ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ