Tag: Corn Pakoda

  • ಕಾರ್ನ್‌ನಿಂದ ಮಾಡಿ ಕ್ರಿಸ್ಪಿ ಪಕೋಡಾ

    ಕಾರ್ನ್‌ನಿಂದ ಮಾಡಿ ಕ್ರಿಸ್ಪಿ ಪಕೋಡಾ

    ಸ್ವೀಟ್‌ ಕಾರ್ನ್‌ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರಿಗೂ ಇಷ್ಟವಾಗುತ್ತೆ. ಬೇಯಿಸಿಕೊಂಡು, ಸುಟ್ಟುಕೊಂಡು ತಿನ್ನೋದು ಅಂದ್ರೇನೆ ಮಜಾ. ಆದ್ರೆ ಯಾವಾಗಲೂ ಒಂದೇ ರೀತಿ ತಿಂದು ಬೇಜಾರಾಗಿದ್ಯಾ? ಅದಕ್ಕೆ ಹೊಸದಾಗಿ ಮಾಡಿ ಕಾರ್ನ್‌ ಪಕೋಡಾ….

    ಬೇಕಾಗುವ ಸಾಮಗ್ರಿಗಳು;
    ಕಾರ್ನ್‌
    ಬೆಳ್ಳುಳ್ಳಿ
    ಮೆಣಸಿನಕಾಯಿ
    ಕರಿಬೇವು
    ಅರಿಶಿಣ
    ಕೆಂಪು ಖಾರದ ಪುಡಿ
    ಧನಿಯಾ ಪುಡಿ
    ಇಂಗು
    ಗರಂ ಮಸಾಲಾ
    ರುಚಿಗೆ ತಕ್ಕಷ್ಟು ಉಪ್ಪು
    ಕಡಲೆ ಹಿಟ್ಟು/ಬಜ್ಜಿ ಹಿಟ್ಟು
    ಅಕ್ಕಿ ಹಿಟ್ಟು
    ಎಣ್ಣೆ

    ಮಾಡುವ ವಿಧಾನ:
    ಮೊದಲಿಗೆ ಕಾರ್ನ್‌ನನ್ನು ಚೆನ್ನಾಗಿ ಬೇಯಿಸಿ. ಬೇಯಿಸಿದ ಕಾರ್ನ್‌ ಆರಿದ ನಂತರ ಒಂದು ಬೌಲ್‌ಗೆ ಹಾಕಿಕೊಳ್ಳಿ. ಅದಕ್ಕೆ ಉದ್ದವಾಗಿ ಕತ್ತರಿಸಿದ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು, ಅರಿಶಿಣ, ಕೆಂಪು ಖಾರದ ಪುಡಿ, ಧನಿಯಾ ಪುಡಿ, ಸ್ವಲ್ಪ ಇಂಗು, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.

    ಆನಂತರ ಅದಕ್ಕೆ ಕಡಲೆ ಹಿಟ್ಟು ಅಥವಾ ಬಜ್ಜಿ ಹಿಟ್ಟು ಹಾಕಿ ಕಲಸಿಕೊಳ್ಳಿ. ಕೊನೆಗೆ ಅಗತ್ಯಕ್ಕನುಸಾರವಾಗಿ ನೀರು ಹಾಕಿಕೊಂಡು ಬಜ್ಜಿ ಮಾಡುವ ಹದಕ್ಕೆ ಮಿಶ್ರಣಮಾಡಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಬಳಿಕ ಎಣ್ಣೆಯಲ್ಲಿ ಚೆನ್ನಾಗಿ ಕರಿದರೆ ಕಾರ್ನ್‌ ಪಕೋಡಾ ತಯಾರಾಗುತ್ತದೆ.

    ಇದನ್ನೂ ಸಾಸ್‌, ಚಟ್ನಿಯೊಂದಿಗೆ ಸವಿಯಬಹುದು!

  • ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

    ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ

    ಒಂದು ಕಪ್ ಟೀ ಜೊತೆಗೆ ಏನಾದರೂ ಕುರುಕಲು, ಕರಿದ ತಿಂಡಿಯಿಲ್ಲದಿದ್ದರೆ ಬೇಜಾರು ಅಲ್ವಾ? ಬಗೆ ಬಗೆಯ ಪಕೋಡಾಗಳನ್ನು ಮಾಡಿ ಸ್ನ್ಯಾಕ್ಸ್ ಟೈಮ್‌ನಲ್ಲಿ ಮನೆ ಮಂದಿಗೆ ಹಂಚಿದರೆ ಎಲ್ಲರಿಗೂ ಖುಷಿ. ಇಂದು ನೀವು ಡಿಫರೆಂಟ್ ಆಗಿ ಕಾರ್ನ್ ಪಕೋಡಾ ಮಾಡಿ ನೋಡಿ. ಇದನ್ನು ಸಾಮಾನ್ಯ ಕಾರ್ನ್ ಅಥವಾ ಸ್ವೀಟ್ ಕಾರ್ನ್ ಬಳಸಿಯೂ ಮಾಡಬಹುದು. ಕೇವಲ ಟೀ ಟೈಮ್ ಯಾಕೆ, ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಲು ಕೂಡಾ ಇದು ಪರ್ಫೆಕ್ಟ್ ಆಗಿರುತ್ತದೆ. ಕಾರ್ನ್ ಪಕೋಡಾ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮಧ್ಯಮ ಗಾತ್ರದ ಇಡೀ ಜೋಳ – 2
    ಕಡಲೆ ಹಿಟ್ಟು – ಒಂದೂವರೆ ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಕತ್ತರಿಸಿದ ಶುಂಠಿ – 1 ಇಂಚು
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಅರಿಶಿನ ಪುಡಿ – ಕಾಲು ಟೀಸ್ಪೂನ್
    ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
    ಹಿಂಗ್ – ಚಿಟಿಕೆ
    ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
    ಜೀರಿಗೆ ಪುಡಿ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅರ್ಧ ಕಪ್
    ಚಾಟ್ ಮಸಾಲಾ – ಐಚ್ಛಿಕ
    ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಟೀ ಪಾರ್ಟಿಗೆ ಮಾಡಿ ಪೈನಾಪಲ್ ಕುಕ್ಕೀಸ್

    ಮಾಡುವ ವಿಧಾನ:
    * ಮೊದಲಿಗೆ ಜೋಳಗಳನ್ನು ಪ್ರೆಶರ್ ಕುಕ್ಕರ್ ಅಥವಾ ಪ್ಯಾನ್‌ನಲ್ಲಿ ಬೇಯಿಸಿಕೊಳ್ಳಿ.
    * ನೀರನ್ನು ಹರಿಸಿ, ತಣ್ಣಗಾಗಲು ಬಿಡಿ. ಬಳಿಕ ಚಾಕುವಿನಿಂದ ಜಾಗರೂಕತೆಯಿಂದ ಜೋಳದ ಕಾಳುಗಳನ್ನು ಬೇರ್ಪಡಿಸಿ ಪಕ್ಕಕ್ಕಿಡಿ.
    * ಒಂದು ಬಟ್ಟಲಿನಲ್ಲಿ ಈರುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ ಪುಡಿ, ಹಿಂಗ್, ಕರಿಮೆಣಸಿನ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಕಡಲೆ ಹಿಟ್ಟು ಹಾಗೂ ನೀರು ಸೇರಿಸಿ ಮಿಶ್ರಣ ಮಾಡಿ.
    * ಮಿಶ್ರಣಕ್ಕೆ ಬೇಯಿಸಿದ ಜೋಳ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಈಗ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ತಯಾರಿಸಿಟ್ಟ ಬ್ಯಾಟರ್ ಅನ್ನು ಪಕೋಡಾ ರೀತಿಯಲ್ಲಿ ಸ್ವಲ್ಪ ಸ್ವಲ್ಪವೇ ಬಿಡಿ.
    * ಪಕೋಡಾಗಳು ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಹಾಗೂ ಗರಿಗರಿಯಾಗುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
    * ಈಗ ಪಕೋಡಾಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಕೊನೆಯಲ್ಲಿ ಚಾಟ್ ಮಸಾಲಾ ಸಿಂಪಡಿಸಿದರೆ ಗರಿಗರಿಯಾದ ಜೋಳದ ಪಕೋಡಾ ಸವಿಯಲು ಸಿದ್ಧವಾಗುತ್ತದೆ. ಇದನ್ನು ಗ್ರೀನ್ ಚಟ್ನಿ, ಪುದೀನಾ ಚಟ್ನಿ ಅಥವಾ ಸಾಸ್‌ನೊಂದಿಗೂ ಸವಿಯಬಹುದು. ಇದನ್ನೂ ಓದಿ: ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್