Tag: Coriander

  • ಕೊತ್ತಂಬರಿ ಸೊಪ್ಪಿನೊಳಗೆ ಗಾಂಜಾ ಬೆಳೆದು ಸಿಕ್ಕಿಬಿದ್ದ ಭೂಪ

    ಕೊತ್ತಂಬರಿ ಸೊಪ್ಪಿನೊಳಗೆ ಗಾಂಜಾ ಬೆಳೆದು ಸಿಕ್ಕಿಬಿದ್ದ ಭೂಪ

    ಚಾಮರಾಜನಗರ: ಗಾಂಜಾ ಗಿಡಗಳನ್ನು (Cannabis Plant) ಬೆಳೆಯುವಂತಿಲ್ಲ, ಗಾಂಜಾ ಸೊಪ್ಪು ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ನಮ್ಮ ದೇಶದಲ್ಲಿದೆ. ಆದರೂ ಹಲವೆಡೆ ಅಕ್ರಮ ದಾರಿಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ.

    ಇಲ್ಲೊಬ್ಬ ಖತರ್ನಾಕ್ ವಂಚಕ, ತರಕಾರಿ ಬೆಳೆಯುವುದಾಗಿ ಮಹಿಳೆಯೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಯಾರಿಗೂ ಅನುಮಾನ ಬಾರದಿರಲೆಂದು ಕೊತ್ತಂಬರಿ ಸೊಪ್ಪಿನ (Coriander) ಜೊತೆ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾನೆ.

    ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಕಂಡಯ್ಯನಪಾಳ್ಯ ಗ್ರಾಮದ ಹನುಮಗೌಡ(40) ಬಂಧಿತ ಆರೋಪಿಯಾಗಿದ್ದಾನೆ. ಇವನು ಸರೋಜಮ್ಮ ಅವರ ಜಮೀನನ್ನು ಗುತ್ತಿಗೆ ಪಡೆದು ಕೊತ್ತಂಬರಿ ಸೊಪ್ಪು ಬೆಳೆದಿದ್ದ. ಜಮೀನಿನ ಮಧ್ಯ ಭಾಗದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವಲಯದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಗಿಡಗಳು ಪತ್ತೆಯಾಗಿವೆ. ಇದನ್ನೂ ಓದಿ: ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ಪೊಲೀಸರು ಜಮೀನಿನಲ್ಲಿ ಬೆಳೆದಿದ್ದ 348 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಿ- ನೆಟ್ಟಿಗರ ಆಗ್ರಹ

    ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಿ- ನೆಟ್ಟಿಗರ ಆಗ್ರಹ

    ಭಾರತೀಯರು ಇದು ಇಲ್ಲದೆ ಅಡುಗೆ ಮಾಡಲು ಸಾಧ್ಯವಾಗದ ಒಂದು ಮೂಲಿಕೆ ಎಂದು ಇದ್ದರೆ ಅದು ಕೊತ್ತಂಬರಿ (ದನಿಯಾ) ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೆಚ್ಚಿನವರು ಎಲ್ಲಾ ಆಹಾರಗಳಿಗೂ ಕೊತ್ತಂಬರಿ ಸೊಪ್ಪು ಬಳಕೆ ಮಾಡುವುದನ್ನು ಇಷ್ಟ ಪಡುತ್ತಾರೆ. ಇದೀಗ ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಲು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹ ಹೆಚ್ಚಾಗಿದೆ.

    ಈಗ ಜನಪ್ರಿಯ ಬಾಣಸಿಗರೊಬ್ಬರು ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಎಂದು ಗೊತ್ತುಪಡಿಸಲು ಅರ್ಜಿಯನ್ನು ಪ್ರಾರಂಭಿಸಿದ್ದಾರೆ. ಬಾಣಸಿಗನ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರ ಜೊತೆಗೆ ತಮ್ಮ ಅಭಿಪ್ರಾಯವನ್ನು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಗು ಹುಟ್ಟಿದ ಸಂಭ್ರಮದ ಮಧ್ಯೆ ಬೇರ್ಪಟ್ಟ ಎಲೋನ್ ಮಸ್ಕ್ ಜೋಡಿ

     

    View this post on Instagram

     

    A post shared by Ranveer Brar (@ranveer.brar)

    ದನಿಯಾ ಮೇಲಿನ ನನ್ನ ಪ್ರೀತಿ ರಹಸ್ಯವಾಗಿಲ್ಲ. ಕೊತ್ತಂಬರಿಯನ್ನು ಭಾರತದ ರಾಷ್ಟ್ರೀಯ ಮೂಲಿಕೆ ಮಾಡಬೇಕು ಎನ್ನುವ ಪೋಸ್ಟ್ ಆಗಿ ಪ್ರಾರಂಭವಾದದ್ದು, ವಾಸ್ತವವಾಗಿ ರಾಷ್ಟ್ರೀಯ ಚರ್ಚೆಯ ವಿಷಯವಾಗಿದೆ. ನೀವು ಸಹ ಸೇರಲು ಬಯಸಿದರೆ, ಅರ್ಜಿಗೆ ಸಹಿ ಮಾಡಿ ಮತ್ತು ಅದನ್ನು ಹಂಚಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಭಾರತದ ಅತ್ಯಂತ ಪ್ರೀತಿಯ ಮೂಲಿಕೆ ದನಿಯಾ ಎಂಬ ಶೀರ್ಷಿಕೆ ಅಡಿಯಲ್ಲಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ, 11, 300ಕ್ಕೂ ಹೆಚ್ಚು ಜನರು ಅರ್ಜಿಗೆ ಸಹಿ ಹಾಕಿದ್ದಾರೆ.

    ಸುವಾಸನೆ ಮಾತ್ರವಲ್ಲ, ಕೊತ್ತಂಬರಿಯು ಸೂಪರ್‌ ಆಹಾರ ಕೂಡ ಆಗಿದೆ. ಇದು ಆಂಟಿಮೈಕ್ರೊಬಿಯಲ್, ಆಂಟಿ-ಆಕ್ಸಿಡೆಂಟ್, ಆಂಟಿ-ಡಯಾಬಿಟಿಕ್, ಆಂಜಿಯೋಲೈಟಿಕ್, ಆಂಟಿಮ್ಯುಟಾಜೆನಿಕ್, ಆಂಟಿ-ಇನ್ಫ್ಲಮೇಟರಿ, ಆಂಟಿಡಿಸ್ಲಿಪಿಡೆಮಿಕ್, ಆಂಟಿ-ಹೈಪರ್ಟೆನ್ಸಿವ್, ನ್ಯೂರೋ ಅಂಶಗಳನ್ನು ಹೊಂದಿದೆ. ಇದು ಮಧುಮೇಹವನ್ನು ನಿಯಂತ್ರಿಸಲು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

  • ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

    ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

    -ವಿಡಿಯೋ ವೈರಲ್, 4.6 ಕೋಟಿಗೂ ಅಧಿಕ ವ್ಯೂವ್

    ಬೆಂಗಳೂರು: ಕೊರೊನಾ ಜೊತೆಗೆ ಜೀವನ ಸಾಗುತ್ತಿದ್ದು, ಜನರು ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕೆಂದು ಸರ್ಕಾರ ಸಲಹೆ ನೀಡುತ್ತಿದೆ. ಆದ್ರೆ ಯುವತಿ ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪನ್ನು ಸಾಬೂನಿನಿಂದ ತೊಳೆದಿರುವ ವಿಡಿಯೋ ವೈರಲ್ ಆಗುತ್ತಿದೆ.

    ಮನೆಗೆ ತಂದ ತರಕಾರಿ, ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದ್ರೆ ಉತ್ತಮ ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಹೊರಗಿನಿಂದ ಮನೆಗೆ ಬರೋ ಮುನ್ನ ಸ್ಯಾನಿಟೈಸ್ ಬಳಕೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ನಿರ್ದೇಶನ ನೀಡಿದೆ. ಈ ಯುವತಿ ಮಾತ್ರ ಮನೆಗೆ ತಂದ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದಿದ್ದಾಳೆ. ಸೊಪ್ಪು ತೊಳೆಯುವುದನ್ನ ಟಿಕ್‍ಟಾಕ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ.

    @1993pikachu

    1st rank par agyi humari ye vedio 7 din huye upload kiya or 40million views and 1.6M likes..thank uh is vedio koi itna pyar dene ke #jabalpuriyamuser

    ♬ original sound – 𝔅𝔯𝔬𝔨𝔢𝔫 𝔖𝔬𝔲𝔩 💔….

    ಕೆಲವು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿದ್ದು, 46 ಮಿಲಿಯನ್(4.6 ಕೋಟಿ)ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಓರ್ವ ಬಳಕೆದಾರ, ನೀವು ಕೊತ್ತಂಬರಿ ಸೊಪ್ಪನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ತೊಳೆಯಿರಿ ಎಂದು ಉಚಿತ ಸಲಹೆ ನೀಡಿದ್ದಾನೆ. ಇನ್ನು ಕೆಲವರು ಹೀಗೆ ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರ, ಈ ರೀತಿ ಸಾಬೂನಿನಿಂದ ತೊಳೆದ್ರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತೆ ಎಂದು ಎಚ್ಚರಿಸಿದ್ದಾರೆ.