Tag: cops

  • ಮಾಲ್‌ ಬಳಿ ಸಿಗರೇಟ್‌ ಸೇದುತ್ತಿದ್ದವರಿಂದ ಹಣ ವಸೂಲಿ – ಮತ್ತಿಬ್ಬರು ಪೇದೆಗಳು ಸಸ್ಪೆಂಡ್‌

    ಮಾಲ್‌ ಬಳಿ ಸಿಗರೇಟ್‌ ಸೇದುತ್ತಿದ್ದವರಿಂದ ಹಣ ವಸೂಲಿ – ಮತ್ತಿಬ್ಬರು ಪೇದೆಗಳು ಸಸ್ಪೆಂಡ್‌

    ಬೆಂಗಳೂರು: ರಾತ್ರಿ 11 ಗಂಟೆ ನಂತರ ಓಡಾಡಿದ್ದರು ಎಂಬ ಕಾರಣಕ್ಕೆ ದಂಪತಿಯಿಂದ ದಂಡದ ರೂಪದಲ್ಲಿ ಹಣ ವಸೂಲಿ ಮಾಡಿದ್ದ ಪೊಲೀಸರು ಅಮಾನತುಗೊಂಡ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅದೇ ಮಾದರಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಬೆಂಗಳೂರಿನಲ್ಲಿ (Bengaluru) ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.

    ಆಡುಗೋಡಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಅರವಿಂದ್ ಮತ್ತು ಮಾಳಪ್ಪ ಬಿ.ವಾಲಿಕಾರ್ ಅಮಾನತಾದ ಪೊಲೀಸ್‌ ಪೇದೆಗಳು. ಇದನ್ನೂ ಓದಿ: ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್‌

    ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಪೇದೆಗಳು, ಹಣ ನೀಡುವಂತೆ ಹೇಳಿದ್ದಾರೆ. ಇಲ್ಲದಿದ್ದರೆ ಎಫ್‌ಐಆರ್‌ ದಾಖಲು ಮಾಡ್ತೀವಿ ಎಂದು ಬೆದರಿಸಿದ್ದಾರೆ.

    ಪೊಲೀಸರ ಅವಾಜ್‌ಗೆ ಹೆದರಿದ ರತ್ನಾಕರ್‌ ಮತ್ತು ಚೀರಾಸ್‌, ಕಾನ್‌ಸ್ಟೇಬಲ್‌ಗಳಿಗೆ ಪರಿಚಿತರ ಟೀ ಅಂಗಡಿಯವರಿಂದ 4 ಸಾವಿರ ರೂ. ಹಣವನ್ನು ಫೋನ್‌ಪೇ ಮಾಡಿಸಿದ್ದಾರೆ. ಈ ಬಗ್ಗೆ ರತ್ನಾಕರ್ ಎಂಬಾತ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು. ಇದನ್ನೂ ಓದಿ: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿ: ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ

    ಪ್ರಾಥಮಿಕ ತನಿಖೆಯಲ್ಲಿ ಹಣ ಪಡೆದಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಪೊಲೀಸರನ್ನು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಅವರು ಅಮಾನತು ಮಾಡಿದ್ದಾರೆ. ಮಡಿವಾಳ ಎಸಿಪಿಗೆ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಕಲಿ ಮದ್ಯ ಸೇವಿಸಿ 42 ಮಂದಿ ಸಾವು ಪ್ರಕರಣ – ಇಬ್ಬರು SP ವರ್ಗಾವಣೆ, 6 ಪೊಲೀಸರು ಸಸ್ಪೆಂಡ್‌

    ನಕಲಿ ಮದ್ಯ ಸೇವಿಸಿ 42 ಮಂದಿ ಸಾವು ಪ್ರಕರಣ – ಇಬ್ಬರು SP ವರ್ಗಾವಣೆ, 6 ಪೊಲೀಸರು ಸಸ್ಪೆಂಡ್‌

    ಗಾಂಧೀನಗರ: ನಕಲಿ ಮದ್ಯ ಸೇವಿಸಿ 42 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಟಾಡ್‌ ಮತ್ತು ಅಹಮದಾಬಾದ್‌ನ ಇಬ್ಬರು ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, 6 ಪೊಲೀಸರನ್ನು ಗುಜರಾತ್‌ ಗೃಹ ಇಲಾಖೆ ಅಮಾನತುಗೊಳಿಸಿದೆ.

    ಬೊಟಾಡ್ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಿಥೈಲ್ ಆಲ್ಕೋಹಾಲ್ ಅಥವಾ ಮೆಥನಾಲ್ ಎಂಬ ಅತ್ಯಂತ ವಿಷಕಾರಿ ಕೈಗಾರಿಕಾ ದ್ರಾವಕದೊಂದಿಗೆ ನೀರನ್ನು ಬೆರೆಸಿ ನಕಲಿ ಮದ್ಯವನ್ನು ತಯಾರಿಸಿ ಪ್ರತಿ ಪೌಚ್‌ಗೆ 20 ರೂ.ಗೆ ಗ್ರಾಮಸ್ಥರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

    ಮಿಥೈಲ್ ಆಲ್ಕೋಹಾಲ್ ಸೇವಿಸಿ 42 ಮಂದಿ ಮೃತಪಟ್ಟಿರುವುದು ವಿಧಿವಿಜ್ಞಾನ ವರದಿಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಾವು ಬೊಟಾಡ್ ಎಸ್ಪಿ ಕರಣ್‌ರಾಜ್ ವಘೇಲಾ ಮತ್ತು ಅಹಮದಾಬಾದ್ ಎಸ್ಪಿ ವೀರೇಂದ್ರಸಿಂಗ್ ಯಾದವ್ ಅವರನ್ನು ವರ್ಗಾವಣೆ ಮಾಡಿದ್ದೇವೆ. ಇಬ್ಬರು ಡೆಪ್ಯುಟಿ ಎಸ್‌ಪಿ ಸೇರಿದಂತೆ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ತರಗತಿಯನ್ನೇ ಮಸಾಜ್ ಪಾರ್ಲರ್ ಮಾಡಿಕೊಂಡ ಶಿಕ್ಷಕಿ – ವಿದ್ಯಾರ್ಥಿಗೆ ಮಸಾಜ್ ಮಾಡುವಂತೆ ಒತ್ತಾಯ

    ಕರ್ತವ್ಯ ಲೋಪ ಮತ್ತು ಬದ್ಧತೆಯ ಕೊರತೆಯಿಂದಾಗಿ ಈ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಏಕೆಂದರೆ ಅವರು ತಮ್ಮ ಪ್ರದೇಶಗಳಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬೆರೆಸಿದ ಮದ್ಯದ ಸಾಗಣೆ, ಮಾರಾಟ ಮತ್ತು ಸೇವನೆಯನ್ನು ತಡೆಯಲು ವಿಫಲರಾಗಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ಹೊರಡಿಸಿದ ಅಮಾನತು ಪತ್ರಗಳಲ್ಲಿ ಉಲ್ಲೇಖಿಸಿದೆ.

    ಜುಲೈ 25 ರಂದು ಬೊಟಾಡ್ ಮತ್ತು ನೆರೆಯ ಅಹಮದಾಬಾದ್ ಜಿಲ್ಲೆಯ 42 ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಆದರೆ 97 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ

    ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ

    – ಸಾವಿರಾರು ರೂ. ಹಣ ಪಡೆದು ವಂಚನೆ
    – ವಂಚನೆ ಬಯಲಾಗುತ್ತಿದ್ದಂತೆ ಪರಾರಿ

    ಆನೇಕಲ್: ಪಿಎಸ್‍ಐ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಈಗ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ತಾನು ನಿವೃತ್ತ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬಡ ಹಾಗೂ ಅಮಾಯಕ ನಿರುದ್ಯೋಗಿ ಯುವಕರಿಗೆ ವ್ಯಕ್ತಿಯೊಬ್ಬ ವಂಚಿಸಿ ಪರಾರಿಯಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ದೊಡ್ಡಬಳ್ಳಾಪುರ ಮೂಲದ ಜ್ಞಾನಮೂರ್ತಿ ಎಂಬಾತ ಬಣ್ಣ ಬಣ್ಣದ ಕಥೆ ಕಟ್ಟಿ ಯುವಕರನ್ನು ವಂಚಿಸಿ ಈಗ ಓಡಿ ಹೋಗಿದ್ದಾನೆ. ಬೆಂಗಳೂರು ಹೊರವಲಯ ಆನೇಕಲ್ ಭಾಗದಲ್ಲಿ ನಾನು ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂದು ಪೋಸ್ ಕೊಟ್ಟು ಹೇಳಿ ಯುವಕರಿಂದ ಸಾವಿರಾರು ರೂ. ಪಡೆದು ಈಗ ಜಾಗ ಖಾಲಿ ಮಾಡಿದ್ದಾನೆ. ಇದನ್ನೂ ಓದಿ: ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಚಿಂತನೆ: ಕೋಟ ಶ್ರೀನಿವಾಸ ಪೂಜಾರಿ ವಿಶೇಷ ಸಭೆ 

    ಆನೇಕಲ್ ಥಳಿ ಮುಖ್ಯರಸ್ತೆಯ ಸಿಕೆ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಮೇ ತಿಂಗಳಿನಲ್ಲಿ ಆಗಮಿಸಿದ ಜ್ಞಾನಮೂರ್ತಿ ನಾನು ಆನೇಕಲ್ ಭಾಗದಲ್ಲಿ 80 ಲಕ್ಷಕ್ಕೆ ಜಮೀನು ಖರೀದಿ ಮಾಡಿದ್ದೇನೆಂದು ಪರಿಚಯ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ನಾನು ಸಬ್-ಇನ್ಸ್‌ಪೆಕ್ಟರ್ ಎಂದು ಹೇಳಿ ಹೇಳಿ ಡಿಸ್ಕೌಂಟ್‍ನಲ್ಲಿ ರೂಮ್ ಪಡೆದಿದ್ದಾನೆ. ಜಮೀನು ವ್ಯವಹಾರ ಮುಗಿಯುವವರೆಗೂ ಬಂದು ಹೋಗುತ್ತೇನೆಂದು ರೂಮ್ ಬಾಡಿಗೆ ಪಡೆದು ತನ್ನ ಕೃತ್ಯ ಆರಂಭಿಸಿದ್ದ.

    ಬಡ ಯುವಕರೇ ಟಾರ್ಗೆಟ್
    ಮೊದಲು ತಾನು ಉಳಿದುಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಕಳ್ಳಾಟವಾಡಿದ್ದ. ತನ್ನ ಮಾತಿನ ಶಕ್ತಿಯಿಂದ ಕಿಶೋರ್ ಹಾಗೂ ಕ್ಯಾಷಿಯರ್ ಆನಂದ್ ಅವರನ್ನ ಪರಿಚಯ ಮಾಡಿಕೊಂಡು ಬಲೆಗೆ ಬೀಳಿಸಿದ್ದ ಜ್ಞಾನಮೂರ್ತಿ, ಡಿಜಿಪಿ ಅವರ ಪಿಎ ನನ್ನ ಸ್ನೇಹಿತ. ಅವರ ಸಹಾಯದಿಂದ ನಿಮಗೆ ಪೊಲೀಸ್ ಕೆಲಸ ಕೊಡಿಸುತ್ತೇನೆಂದು ನಂಬಿಸಿದ್ದ.

    ನಾನು ಈಗಾಗಲೇ ಹಲವು ಮಂದಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೋಡಿದ್ದು ನಿಮಗೆ ಉದ್ಯೋಗ ಬೇಕಾದರೆ ಮುಂಗಡ ಹಣವನ್ನು ನೀಡಬೇಕು ಎಂದು ಹೇಳಿದ್ದಾನೆ. ಈತನ ಮಾತಿಗೆ ಮರಳಾಗಿ ಆನಂದ್ 30 ಸಾವಿರ ರೂ. ಹಾಗೂ ಸಪ್ಲೇಯರ್ ಕಿಶೋರ್ 45 ಸಾವಿರ ರೂ. ನೀಡಿದ್ದಾರೆ. ಈತ ವ್ಯವಹಾರದಲ್ಲಿ ಎಷ್ಟು ಚಾಲಕಿ ಎಂದರೆ ತನ್ನ ಮೇಲೆ ಯುವಕರಿಗೆ ನಂಬಿಕೆ ಬರಲೆಂದು ಡಿಜಿಪಿ ಪಿಎ ಎಂದು ಬೇರೊಬ್ಬ ವ್ಯಕ್ತಿಯ ಮೂಲಕ ಫೋನ್‍ನಲ್ಲಿ ಮಾತನಾಡಿಸಿದ್ದ.

    ತಾನು ಉಳಿದುಕೊಂಡಿದ್ದ ರೆಸ್ಟೋರೆಂಟ್ ಸಿಬ್ಬಂದಿಗೆ ಮೋಸ ಮಾಡಿದ ಬಳಿಕ ತನ್ನ ಕಳ್ಳಾಟದ ಕ್ಷೇತ್ರವನ್ನು ಮುತ್ಯಾಲಮಡು ಪ್ರವಾಸಿ ತಾಣಕ್ಕೆ ವಿಸ್ತರಿಸಿದ್ದ. ಈ ತಾಣದಲ್ಲಿ ಕೆಲಸ ಮಾಡುತ್ತಿದ್ದ ಯುವಕರಿಗೆ, ಮೈಸೂರು ಕುದುರೆ ಹಾಗೂ ಪೊಲೀಸರು ಸೀಜ್ ಮಾಡಿರುವ ಪೆಟ್ಟಿ ಅಂಗಡಿಯನ್ನ ಕಡಿಮೆ ಬೆಲೆಗೆ ಕೊಡಿಸೋದಾಗಿ ಕಥೆ ಕಟ್ಟಿದ್ದ. ಈತನ ಮಾತಿಗೆ ಮರಳಾಗಿ ರವಿ 75 ಸಾವಿರ ರೂ. ನೀಡಿದ್ದರು. ಇದನ್ನೂ ಓದಿ: ಆಚರಣೆ, ವೈಭವಗಳನ್ನ ಇಷ್ಟಪಡದ ಸಿದ್ದರಾಮಯ್ಯ ಈಗ ಉತ್ಸವ ಆಚರಿಕೊಳ್ಳುತ್ತಿದ್ದಾರೆ: ವಿ.ಸೋಮಣ್ಣ 

    ವಂಚಿಸುವುದರಲ್ಲಿ ನಿಸ್ಸೀಮನಾಗಿದ್ದ ಈತ ಯುವಕರನ್ನು ಕರೆದೊಯ್ದು ನಾಲ್ಕೈದು ಬಿಲ್ಡಿಂಗ್ ತೋರಿಸಿ ಇದೆಲ್ಲವೂ ನನ್ನದೇ ಎಂದು ಪೋಸ್ ಕೊಟ್ಟಿದ್ದ. ರಾಜ್ಯದಲ್ಲಿ ಸಂಚಲನ ಮೂಡಿಸಿದ ಪಿಎಸ್‍ಐ ಹಗರಣ ಬೆಳಕಿಗೆ ಬಂದ ಬಳಿಕ ಯುವಕರಿಗೆ ಜ್ಞಾನಮೂರ್ತಿಯ ಬಗ್ಗೆ ಅನುಮಾನ ಬಂದಿದೆ. ಅನುಮಾನ ಬಂದ ಬೆನ್ನಲ್ಲೇ ಈತನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ನಕಲಿ ಪೊಲೀಸಪ್ಪನ ಅಸಲಿ ಕಹಾನಿ ಬಯಲಾಗಿದೆ.

    ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ಯುವಕರು ಆರೋಪಿಸಿದ್ದಾರೆ. ಈ ಅಸಾಮಿ ಫೋನ್ ಮೂಲಕ ಬಣ್ಣ, ಬಣ್ಣದ ಕಥೆಗಳನ್ನ ಹೇಳಿ ಮೋಸ ಮಾಡಿರುವ ಆಡಿಯೋವನ್ನ ಯುವಕರು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ.

    ಸದ್ಯ ಜ್ಞಾನಮೂರ್ತಿ ವಂಚನೆ ಪ್ರಕರಣ ಆನೇಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆರೋಪಿ ಸಿಕ್ಕ ಬಳಿಕ ಎಲ್ಲಿ? ಯಾರಿಗೆ ಎಷ್ಟು ಹಣ ವಂಚಿಸಿದ್ದಾನೆ ಎಂಬುದರ ಬಗ್ಗೆ ತಿಳಿಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕುತ್ತಿಗೆ ಸೀಳಿ, ಕೈ ಬೆರಳು ಕತ್ತರಿಸಿ ಹುಡುಗನ ಬರ್ಬರ ಹತ್ಯೆ

    ಕುತ್ತಿಗೆ ಸೀಳಿ, ಕೈ ಬೆರಳು ಕತ್ತರಿಸಿ ಹುಡುಗನ ಬರ್ಬರ ಹತ್ಯೆ

    ಲಕ್ನೋ: ಕುತ್ತಿಗೆ ಸೀಳಿ, ಕೈಬೆರಳುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ 17 ವರ್ಷದ ಬಾಲಕನ ಶವ ರಸ್ತೆ ಬದಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ನಗರದಲ್ಲಿ ನಡೆದಿದೆ.

    ಮೇಲ್ನೋಟಕ್ಕೆ ಚಾಪಾದ ಚಾಕುವಿನಿಂದ ಕತ್ತು ಸೀಳಿ ಹತ್ಯೆ ಮಾಡಿರುವುದಾಗಿ ಕಾಣಿಸುತ್ತದೆ. ಸುತಾವರದಿಂದ ಚೌಮುಖಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಹುಡುಗನ ಶವ ಪತ್ತೆಯಾಗಿದ್ದು, ಆತನ ಕೈ ಹಾಗೂ ಕಾಲು ಬೆರಳುಗಳನ್ನು ದುಷ್ಕರ್ಮಿಗಳು ಕತ್ತರಿಸಿ ಎಸೆದಿದ್ದಾರೆ. ಈ ಸಂಬಂಧ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತ ಹುಡುಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಧವ್‌, ಏಕನಾಥ್‌ ವೈಮನಸ್ಸಿಗೆ ಮರಾಠಿ ಸಿನಿಮಾ ಕಾರಣ?

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಸಂಕಲ್ಪ್ ಶರ್ಮಾ ಅವರು, ಮೃತನನ್ನು ರೆಹಮಾನ್ (17) ಎಂದು ಗುರುತಿಸಲಾಗಿದ್ದು, ಈತ ಲಾರ್ ಟೌನ್ ನಿವಾಸಿಯಾಗಿದ್ದಾನೆ. ಈ ಪ್ರದೇಶದಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ತನ್ನ ತಂದೆಗೆ ಕೆಲಸ ಮಾಡುವ ಮೂಲಕ ಸಹಾಯ ಮಾಡುತ್ತಿದ್ದನು. ತಡರಾತ್ರಿ ಬೈಕ್‍ನಲ್ಲಿ ರೆಹಮಾನ್ ಮನೆಯಿಂದ ಹೋಗಿದ್ದನು. ಇದೀಗ ರೆಹಮಾನ್ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 55 ಶಾಸಕರು ನಮ್ಮ ಬಳಿ ಇದ್ದಾರೆ – ಉದ್ಧವ್ ಬೆದರಿಕೆಗೆ ಜಗ್ಗದ ರೆಬೆಲ್ಸ್

    Live Tv

  • ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

    ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

    ನವದೆಹಲಿ: ಪತಿಯೋರ್ವ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಲೆ ಮಾಡಿ ಶವವನ್ನು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಕಪಿಲ್ ವಿಹಾರ್ ನಿವಾಸಿ ವಿಜಯ್(38) ಜೂನ್ 18 ರಂದು ಭಾಲ್ಸ್ವಾ ಡೈರಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ಕುರಿತು ತನಿಖೆ ಮಾಡಿದ್ದಾರೆ.

    ಪರಿಶೀಲನೆ ವೇಳೆ ಬಾತ್‍ರೂಮ್ ಒಳಗೆ ಬಟ್ಟೆಯಲ್ಲಿ ಸುತ್ತಿದ್ದ ಮೃತ ಸಂತೋಷಿದೇವಿ ದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್‍ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ತನಿಖೆಯಲ್ಲಿ ತಿಳಿದಿದ್ದೇನು?
    ವಿಜಯ್‍ಗೆ ಈ ಹಿಂದೆ ಬೇರೊಂದು ಮಹಿಳೆ ಜೊತೆ ವಿವಾಹವಾಗಿದ್ದು, ಆತನಿಗೆ 4 ಮಕ್ಕಳಿದ್ದರು. ಆದರೆ ಮೊದಲ ಹೆಂಡತಿ ಅವನಿಂದ ಬೇರೆಯಾಗಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿದೇವಿಯನ್ನು ವಿಜಯ್ ಭೇಟಿಯಾಗಿದ್ದು, ನಂತರ ಅದು ಪ್ರೇಮಕ್ಕೆ ತಿರುಗಿಕೊಂಡಿದೆ.

    ಸಂತೋಷಿಗೂ 4 ಮಕ್ಕಳಿದ್ದು 14, 13 ಮತ್ತು 12 ವರ್ಷದ ಮೂವರು ಹುಡುಗಿಯರು ಮತ್ತು 8 ವರ್ಷದ ಒಬ್ಬ ಗಂಡು ಮಗುವಿದೆ. ಆಕೆಯೂ ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು.

    CNG CRIME

    ಈ ಮಧ್ಯೆ ವಿಜಯ್ ಮತ್ತು ಸಂತೋಷಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇವರಿಬ್ಬರು ಒಂದು ಮಗುವನ್ನು ಸಹ ಹೊಂದಿದ್ದರು. ನಂತರ ಎಲ್ಲ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ವಿಜಯ್ ಮತ್ತು ಸಂತೋಷಿ ನಡುವೆ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು. ಇದನ್ನೂ ಓದಿ: ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

    CRIME 2

    ಜೂನ್ 17ರ ಸಂಜೆ ಸಂತೋಷಿ ಕೆಲಸ ಮುಗಿಸಿ ವಾಪಸ್ಸಾಗಿದ್ದು, ಎಲ್ಲಾ ಮಕ್ಕಳು ಕೆಳಗೆ ಮಲಗಿಕೊಂಡಿದ್ದರು. ರಾತ್ರಿ 11:30ರ ಸುಮಾರಿಗೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಇದು ಅತಿರೇಕಕ್ಕೆ ಹೋಗಿ ವಿಜಯ್, ಸಂತೋಷಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬೇರೆಕಡೆ ಸಾಗಿಸಲು ಬಟ್ಟೆಯಲ್ಲಿ ಸುತ್ತಿದ್ದಾನೆ. ಆದರೆ ಇದನ್ನು ನಿಭಾಯಿಸಲು ಸಾಧ್ಯವಾಗದೆ ಜೂನ್ 18ರಂದು ರಾತ್ರಿ 8.45ರ ಸುಮಾರಿಗೆ ಪೊಲೀಸರ ಮೊರೆ ಹೋಗಿದ್ದು, ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

    Live Tv

  • ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಬೆಂಗಳೂರು: ತಮ್ಮ ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ವ್ಯಾಪಾರಾ ಮಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯ ಬಂಧಿತ ಆರೋಪಿಗಳು. ಬೆಂಗಳೂರಿನ ಹುಳಿಮಾವು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 40 ಸಾವಿರ ಮೌಲ್ಯದ ಸರ್ಕಾರಿ ಶಾಲೆಯ ಪ್ರೊಜೆಕ್ಟರ್ ಕದ್ದರು! 

    ಏನಿದು ಪ್ರಕರಣ?
    ಸಿಗಿಲ್ ವರ್ಗಿಸ್ ಮತ್ತು ವಿಷ್ಟುಪ್ರಿಯ ವಿದ್ಯಾಭ್ಯಾಸಕ್ಕಾಗಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ಡ್ರಗ್ಸ್ ಸೇವನೆ ಚಟಕ್ಕೆ ಬಿದ್ದಿದ್ದ ಇಬ್ಬರು ಪ್ರೇಮಿಗಳು ಐಷಾರಾಮಿ ಜೀವನ ನಡೆಸಲು ಪೆಡ್ಲಿಂಗ್ ನಡೆಸಲು ಶುರುಮಾಡಿದ್ದಾರೆ.

    ಕೇರಳ ಮತ್ತು ತಮಿಳುನಾಡಿನ ಕೊಯಮತ್ತೂರಿನಿಂದ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಪೊಲೀಸರಿಗೆ ಈ ದಂಧೆಯ ಅಧಿಕೃತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 5 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ – ಪ್ರಾಂಶುಪಾಲ ಅರೆಸ್ಟ್! 

    ಬಂಧಿತ ಆರೋಪಿಗಳಿಂದ 8 ಕೋಟಿ ರೂ. ಮೌಲ್ಯದ ವಿವಿಧ ರೀತಿಯ ಡ್ರಗ್ಸ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

  • ಕಾಲೇಜಿಗೆ ಹೋದವಳು ಸಿಕ್ಕಿದ್ದು ಸುಟ್ಟುಕರಕಲಾಗಿ 

    ಕಾಲೇಜಿಗೆ ಹೋದವಳು ಸಿಕ್ಕಿದ್ದು ಸುಟ್ಟುಕರಕಲಾಗಿ 

    ಮಂಡ್ಯ: ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ಯುವತಿ ಅಜ್ಞಾತ ಸ್ಥಳದಲ್ಲಿ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಸಿಕ್ಕಿದ್ದು, ಆ ಯುವತಿಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿ ಸುಟ್ಟು ಹಾಕಿ ಪಾರಾರಿಯಾಗಿದ್ದಾನೆ ಎಂಬ ಆರೋಪ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಕೇಳಿ ಬರುತ್ತಿದೆ.

    mandya

    ಮೃತ ದುರ್ದೈವಿಯನ್ನು ಯುಕ್ತಿ ಎಂದು ಗುರುತಿಸಲಾಗಿದೆ. ಜನವರಿ 27 ರಂದು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಬೆಳಗ್ಗೆಯೇ ಮನೆಯಿಂದ ಯುಕ್ತಿ ಕಾಲೇಜಿಗೆ ಹೋಗಿದ್ದಳು. ಅಂದು ಸಂಜೆ 6 ಗಂಟೆಯಾದರೂ ಯುಕ್ತಿ ಮನೆಗೆ ಬಾರದ ಕಾರಣ ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಅಂದು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಯುಕ್ತಿ ಮಳವಳ್ಳಿ ಪಟ್ಟಣದ ಶಶಿಕುಮಾರ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಯುಕ್ತಿ ಕಾಣೆಯಾದ ದಿನವೇ ಶಶಿಕುಮಾರ್ ಸಹ ನಾಪತ್ತೆಯಾಗಿದ್ದಾನೆ. ಹೀಗಾಗಿ ಯುಕ್ತಿ ಪೋಷಕರು ಮಾರನೇ ದಿನ ಬೆಳಗ್ಗೆ ಶಶಿಕುಮಾರ್ ಮೇಲೆ ಕಿಡ್ನಾಪ್ ಕೇಸ್ ಹಾಕಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಕಿಡ್ನಾಪ್ ಕೇಸ್ ದಾಖಲು ಮಾಡಿಕೊಳ್ಳದೇ ಮಿಸ್ಸಿಂಗ್ ಕಂಪ್ಲೇಂಟ್‍ನ್ನು ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಜ್ವಲ ಭವಿಷ್ಯಕ್ಕೆ ನ್ಯಾನೋ ತಂತ್ರಜ್ಞಾನ ನಿರ್ಣಾಯಕ: ಬೊಮ್ಮಾಯಿ

    ಇತ್ತ ಯುಕ್ತಿ ಶಶಿಕುಮಾರ್ ಜೊತೆ ಹೊರಟು ಹೋಗಿರಬೇಕೆಂದು ಆಕೆಯ ಪೋಷಕರು ಮನೆ ಮತ್ತು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರು. ಆದರೆ ಜನವರಿ 27 ರಂದು ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ನೀಲಗಿರಿ ತೋಪಿನಲ್ಲಿ ಯುವತಿಯ ಶವವೊಂದು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ. ಈ ವೇಳೆ ಮಿಸ್ಸಿಂಗ್ ಕಂಪ್ಲೇಂಟ್ ಇದ್ದರೂ ಸಹ ಆ ಶವವನ್ನು ಯುಕ್ತಿ ಪೋಷಕರಿಗೆ ಪೊಲೀಸರು ತೋರಿಸಿರುವುದಿಲ್ಲ. ಪೊಲೀಸರೇ ಇದೊಂದು ಅನಾಥ ಶವ ಎಂದು ಅಂತ್ಯಸಂಸ್ಕಾರ ಮಾಡಿದ್ದರು. ಇದಾದ ಬಳಿಕ ಫೆಬ್ರವರಿ 17 ರಂದು ಪೊಲೀಸರು ಯುಕ್ತಿ ತಾಯಿಯ ವಾಟ್ಸ್‌ಆಪ್‌ಗೆ ಅನಾಥ ಶವದ ಮೈ ಮೇಲೆ ಇದ್ದ ಓಲೆ ಮತ್ತು ಉಂಗರವನ್ನು ಕಳುಹಿಸಿ ಇದು ನಿಮ್ಮ ಮಗಳದ್ದಾ ಎಂದು ಕೇಳಿದ್ದಾರೆ. ಇದನ್ನು ಕಂಡ ತಾಯಿ ಹೌದು ಇದು ನನ್ನ ಮಗಳದ್ದೇ ಎಂದು ಗುರುತಿಸಿದ್ದಾರೆ. ಈ ವೇಳೆ ಶಶಿಕುಮಾರ್ ಜೊತೆ ಮದುಯಾಗಲು ಯುಕ್ತಿ ಓಡಿ ಹೋಗಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಆಕೆ ಕ್ರೂರವಾಗಿ ಸಾವನ್ನಪ್ಪಿದ್ದಾಳೆ ಎಂಬ ವಿಷಯ ತಿಳಿಯುತ್ತದೆ. ಈ ಮಧ್ಯೆ ಶಶಿಕುಮಾರ್ ಕುಟುಂಬದವರು ನಿಮ್ಮ ಮಗಳು, ನಮ್ಮ ಮಗ ಓಡಿ ಹೋಗಿದ್ದಾರೆ. ಅವರಿಗೆ ಮದುವೆ ಮಾಡೋಣಾ ಎಂದು ಯುಕ್ತಿ ಕುಟುಂಬದವರೊಂದಿಗೆ ಮಾತನಾಡಿದ್ದರು. ಆದರೆ ಇದೀಗ ಯುಕ್ತಿ ಕೊಲೆಯಾಗಿರುವುದರಿಂದ ಆ ಕೊಲೆ ಮಾಡಿರುವುದು ಶಶಿಕುಮಾರ್ ಎಂದು ಆಕೆಯ ಪೋಷಕರು ಆರೋಪ ಮಾಡುತ್ತಿದ್ದಾರೆ.

    POLICE JEEP

    ಈ ಘಟನೆ ನಡೆದು ಇಲ್ಲಿಯವರೆಗೆ ಒಂದೂವರೆ ತಿಂಗಳಾದರೂ ಸಹ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಅಲ್ಲದೇ ಕೊಲೆಯಾದ ದಿನದಿಂದಲೂ ಶಶಿಕುಮಾರ್ ಕಣ್ಮರೆಯಾಗಿದ್ದು, ಆತನ ಪತ್ತೆಯನ್ನು ಸಹ ಪೊಲೀಸರು ಮಾಡಿಲ್ಲ. ಇಡೀ ಪ್ರಕರಣವನ್ನು ಗಮನಿಸಿದರೆ ಶಶಿಕುಮಾರ್ ಆರೋಪಿ ಎಂದು ಎಲ್ಲಾ ಸಾಕ್ಷಿಗಳು ಬೆಟ್ಟು ಮಾಡಿ ತೋರಿಸುತ್ತಿವೆ. ಹೀಗಿದ್ದರೂ ಸಹ ಶಶಿಕುಮಾರ್‌ನನ್ನು ಪತ್ತೆ ಮಾಡದ ಕಾರಣ, ಪೊಲೀಸರು ಆತನನ್ನು ಈ ಪ್ರಕರಣದಿಂದ ಬಚಾವ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಯುಕ್ತಿ ಪೋಷಕರು ಆರೋಪ ಮಾಡುತ್ತಿದ್ದಾರೆ. ಇತ್ತ ಶಶಿಕುಮಾರ್ ಕುಟುಂಬಸ್ಥರು ನನ್ನ ಮಗನು ಸಹ ಆ ದಿನದಿಂದ ಕಾಣೆಯಾಗಿದ್ದಾನೆ. ಆತ ಏನು ಆಗಿದ್ದಾನೆ ಎಂದು ನಮಗೆ ಗೊತ್ತಿಲ್ಲ. ನಮ್ಮ ಮಗನನ್ನು ಸಹ ಪೊಲೀಸರು ಹುಡುಕಿಕೊಡಬೇಕು. ನನ್ನ ಮಗ ಅಲ್ಲ ಯಾರೇ ಯುಕ್ತಿ ಕೊಲೆ ಮಾಡಿದರೂ ಸಹ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಜೇಮ್ಸ್ ಅಪ್ಪು ನಟನೆಯ ಕೊನೆ ಸಿನಿಮಾವಲ್ಲ: ಜೇಮ್ಸ್ ನಂತರವೂ ಮತ್ತೊಂದು ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್

    ಒಟ್ಟಾರೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೋದ ಯುವತಿ ಕಾಣೆಯಾಗಿದ್ದು, ನಂತರ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತ್ತ ಆಕೆಯ ಪ್ರಿಯಕರನು ನಾಪತ್ತೆಯಾಗಿರುವುದು, ಆತನನ್ನು ಹುಡುಕುವಲ್ಲಿ ಪೊಲೀಸರು ತಡಮಾಡುತ್ತಿರುವುದು ಎಲ್ಲ ನೋಡುತ್ತಿದ್ದರೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಪೊಲೀಸರು ಸತ್ಯ ಸತ್ಯತೆಗಳನ್ನು ಪರಿಶೀಲಿಸಿ ಕೊಲೆ ಮಾಡಿರುವವರನ್ನು ಪತ್ತೆ ಮಾಡಿ ನ್ಯಾಯಾಲಯದ ಮುಂದೆ ನಿಲ್ಲಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

  • ಮದ್ಯದ ಅಂಗಡಿಯಲ್ಲಿ ತಳ್ಳಿದಕ್ಕೆ ಹತ್ಯೆಗೈದ – ಆರೋಪಿ ಅರೆಸ್ಟ್

    ಮದ್ಯದ ಅಂಗಡಿಯಲ್ಲಿ ತಳ್ಳಿದಕ್ಕೆ ಹತ್ಯೆಗೈದ – ಆರೋಪಿ ಅರೆಸ್ಟ್

    ಮುಂಬೈ: ಮದ್ಯದ ಅಂಗಡಿಯೊಂದರಲ್ಲಿ ತಳ್ಳಿದಕ್ಕೆ 23 ವರ್ಷದ ಗ್ರಾಹಕನ ಮೇಲೆ ಮತ್ತೋರ್ವ ವ್ಯಕ್ತಿ ಹಲ್ಲೆ ನಡೆಸಿ ಕೊಂದಿರುವ ಘಟನೆ ಎಸ್‍ಜಿ ಬಾರ್ವೇ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ದುರ್ದೈವಿಯನ್ನು ರಾಜೇಶ್ ಬಲೋಟಿಯಾ ಎಂದು ಗುರುತಿಸಲಾಗಿದ್ದು, ರಾಜೇಶ್ ಬಲೋಟಿಯಾ ಮದ್ಯದಂಗಡಿಯಿಂದ ಹೊರಬರುತ್ತಿದ್ದಾಗ ಆರೋಪಿ ರಾಜೇಶ್ ವಾಘಮಾರೆಯನ್ನು ತಳ್ಳಿದ್ದಾನೆ. ಇದರಿಂದ ಕೋಪಗೊಂಡ ರಾಜೇಶ್ ವಾಘಮಾರೆ ರಾಜೇಶ್ ಬಲೋಟಿಯಾ ತಲೆಗೆ ನಡು ರಸ್ತೆಯಲ್ಲಿ ಹೊಡೆದಿದ್ದಾನೆ. ಈ ಗಲಾಟೆ ನಡೆಯುವ ವೇಳೆ ಅಂಗಡಿ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    POLICE JEEP

    ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ರಾಜೇಶ್ ಬಲೋಟಿಯಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗಿದೆ ಅವರು ಕೊನೆಯುಸಿರೆಳೆದಿದ್ದಾರೆ. ಇದೀಗ ಪೊಲೀಸರು ಆರೋಪಿ ರಾಜೇಶ್ ವಾಘಮಾರೆಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ ಹೊರಗಡೆ ಹಿಜಬ್‌ ವಿವಾದ ಇತ್ಯರ್ಥಕ್ಕೆ ಅನುಮತಿ ಕೋರಿ ಅರ್ಜಿ

  • ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ ಖದೀಮರು ಅರೆಸ್ಟ್

    ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ ಖದೀಮರು ಅರೆಸ್ಟ್

    ಹುಬ್ಬಳ್ಳಿ: ಐಷಾರಾಮಿ ಕಾರುಗಳನ್ನು ಮಂಗ ಮಾಯ ಮಾಡುತ್ತಿದ್ದ 7 ಜನರ ಗ್ಯಾಂಗ್ ನ್ನು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರ ತಂಡ ಬಂಧಿಸಿದ್ದಾರೆ.

    7 ಕುಖ್ಯಾತ ಕಾರು ವಂಚಕರು ಕರ್ನಾಟಕ ರಾಜ್ಯಾದ್ಯಂತ ಬಾಡಿಗೆಗೆ ಎಂದು ಕಾರುಗಳನ್ನು ಪಡೆದುಕೊಂಡು, ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಮಂಗಳೂರಿನಿಂದ ಬಾಡಿಗೆಗೆ ಅಂತ ಪ್ರೀಮಿಯಂ ಕಾರುಗಳನ್ನು ಪಡೆದು ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಇವರು, ಇಲ್ಲಿಗೆ ಬಂದ ನಂತರ ಆ ಎಲ್ಲಾ ಕಾರುಗಳಿಗೆ ನಕಲಿ ದಾಖಲೆ ತಯಾರಿಸಿ ಕಡಿಮೆ ಹಣಕ್ಕೆ ಅಡವಿಟ್ಟು ಹಣ ಪಡೆಯುತ್ತಿದ್ದರು. ಹೀಗೆ ಮೋಸದಿಂದ ನಂಬಿಸಿ ಕಾರಗಳನ್ನು ಅಡವಿಟ್ಟು ಹಣ ತಗೆದುಕೊಂಡು ಪರಾರಿಯಾಗುತ್ತಿದ್ದರು. ಇದನ್ನೂ ಓದಿ: ಹೊಸ ಮನೆಗೆ ರಶ್ಮಿಕಾ ಶಿಫ್ಟ್ – ಮತ್ತೊಂದು ಅಪಾರ್ಟ್‍ಮೆಂಟ್ ಖರೀದಿ?

    ಕೆಲವು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ತಮ್ಮ ದಂಧೆಯಲ್ಲಿ ತೊಡಗಿದ್ದರು. ಹುಬ್ಬಳ್ಳಿಯ ಒರ್ವನ ಬಳಿ ಇವರು ಕಾರು ಅಡವಿಟ್ಟು ಹಣ ಪಡೆದಿದ್ದ ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿಗಳಿಂದ 12 ವಿವಿಧ ಕಂಪನಿಗಳ ಕಾರು, 1 ಬೈಕ್ ಹಾಗೂ 22,7000 ರೂ. ನಗದು ಸೇರಿದಂತೆ ಒಟ್ಟು 50,27,000 ಮೌಲ್ಯದ ಸ್ವತ್ತು ರಿಕವರಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು

  • ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ

    ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ

    ಕೊಪ್ಪಳ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ ಎಂದು ಬೈಕ್ ಸವಾರನಿಗೆ ಕೊಪ್ಪಳದಲ್ಲಿ ಪೇದೆ ಮನವಿ ಮಾಡಿದ್ದಾರೆ.

    ನಗರದ ಅಶೋಕ ವೃತ್ತದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಮಾಸ್ಕ್ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಬೈಕ್ ಸವಾರ ಮಾಸ್ಕ್ ಹಾಕದೇ ರಸ್ತೆಯಲ್ಲಿ ಬರುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್ ಪೇದೆ ವಾಹನ ಸವಾರನಿಗೆ ಮಾಸ್ಕ್ ಕೇಳಿದ್ದಾರೆ. ಅದಕ್ಕೆ ಆ ಸವಾರ ಬೇಕಿದ್ದರೆ ಮನೆಗೆ ಹೋಗಿ ತೆಗೆದುಕೊಂಡು ಬರ್ತೀನಿ ಎಂದು ಬೈಕ್ ಸವಾರ ಬೇಜವಾಬ್ದಾರಿಯಿಂದ ಉತ್ತರಿಸಿದ್ದಾನೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್ 

    ಬೈಕ್ ಸವಾರನ ಮಾತಿಗೆ ಗರಂ ಆದ ಪೊಲೀಸ್ ಪೇದೆ, ನಮಗೋಸ್ಕರ ಜೀವನ ಮಾಡ್ತೀರಾ? ನಿಮಗೆ ಒಳ್ಳೆಯದು ಆಗಲಿ ಎಂದು ನಾವು ಕೆಲಸ ಮಾಡುತ್ತಿದ್ದೇವೆ. ಮಾಸ್ಕ್ ಹಾಕಿ ಎಂದರೆ ನಮ್ಮ ಮೇಲೆ ಕೋಪ ಮಾಡಿಕೊಳ್ತೀರಾ. ನಾವು ನಿಮಗೆ ಒಳ್ಳೆಯದು ಹೇಳ್ತೀವಾ? ಕೆಟ್ಟದ್ದು ಹೇಳ್ತೀವಾ? ನಿಮ್ಮ ಜೀವನ ನಮಗೋಸ್ಕರ ಕಾಪಾಡ್ತಾ ಇದ್ದೀವಾ ಎಂದು ಪ್ರಶ್ನೆ ಕೇಳಿದ್ದಾರೆ.

    ಎಲ್ಲ ಸಮಯದಲ್ಲಿ ಪೊಲೀಸರು ಇರೋದಿಲ್ಲ. ನಿಮ್ಮ ಸಲುವಾಗಿ ಮಾಸ್ಕ್ ಹಾಕಿ ಎಂದು ಹೇಳುತ್ತಿದ್ದೇವೆ ಎಂದು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಬಳಿಕ ಪೊಲೀಸರು ಮಾಸ್ಕ್ ಹಾಕದ ಬೈಕ್ ಸವಾರಿನಿಗೆ ದಂಡ ಹಾಕಿದ್ದಾರೆ. ಇದನ್ನೂ ಓದಿ:  ನಾವು ಆಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ: ರೇಣುಕಾಚಾರ್ಯ