Tag: coorg

  • ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ಕಿರಣ್ ಅಬ್ಬಾವರಂ ಡೆಸ್ಟಿನೇಷನ್ ವೆಡ್ಡಿಂಗ್

    ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ಕಿರಣ್ ಅಬ್ಬಾವರಂ ಡೆಸ್ಟಿನೇಷನ್ ವೆಡ್ಡಿಂಗ್

    ಟಾಲಿವುಡ್ ನಟ ಕಿರಣ್ ಅಬ್ಬಾವರಂ (Kiran Abbavaram) ಅವರು ನಟಿ ರಹಸ್ಯ ಗೋರಕ್ (Rahasya Gorak) ಜೊತೆ ಆ.22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವೈವಾಹಿಕ ಬದುಕಿಗೆ ತೆಲುಗು ನಟಿ-ನಟಿಯರು, ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯ ಮುದ್ರೆ ಒತ್ತಿದ್ದಾರೆ. ತೆಲುಗಿನ ಈ ಜೋಡಿಯ ಇಷ್ಟದಂತೆ ಕೊಡಗಿನಲ್ಲಿ ಅದ್ಧೂರಿಯಾಗಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿದೆ. ಈ ಮದುವೆಯಲ್ಲಿ (Wedding) ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

    ಕಿರಣ್ ಸಿಲ್ಕ್ ಪಂಟೆ ಮತ್ತು ಶರ್ಟ್ ಧರಿಸಿದ್ರೆ, ನಟಿ ರಹಸ್ಯ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಜೋಡಿಗೆ ಅನೇಕರು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ತೆಲುಗು ನಟಿ ಮೇಘಾ ಆಕಾಶ್‌ ನಿಶ್ಚಿತಾರ್ಥ

    ಕಿರಣ್ ಅಬ್ಬಾವರಂ ನಟನೆಯ ಮೊದಲ ಸಿನಿಮಾ ‘ರಾಜ ವರು ರಾಣಿ ಗಾರು’ ನಾಯಕಿ ಈ ರಹಸ್ಯ ಗೋರಕ್. ಹಲವು ವರ್ಷಗಳ ಡೇಟಿಂಗ್ ಬಳಿಕ ತಮ್ಮ ಕುಟುಂಬಸ್ಥರಿಗೆ ಪ್ರೀತಿಯ ವಿಚಾರ ತಿಳಿಸಿ ಮಾರ್ಚ್ 13ರಂದು ಹೈದರಾಬಾದ್ ನಿಶ್ಚಿತಾರ್ಥ ಮಾಡಿಕೊಂಡರು.

    ಅಂದಹಾಗೆ, ನಟ ಕಿರಣ್ ಅಬ್ಬಾವರಂಗೆ ಈಗ 31 ವರ್ಷ ವಯಸ್ಸು. ಯೂಟ್ಯೂಬ್‌ನಲ್ಲಿ ಶಾರ್ಟ್ ಫಿಲ್ಮ್ಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕಿರಣ್, ‘ರಾಜಾ ವಾರು ರಾಣಿ ಗಾರು’ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಎಂಟ್ರಿ ಕೊಟ್ಟರು. ಅವರ ನಟನೆಗೆ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಅವರಿಗೆ ಸಿಕ್ಕವು. ‘ಎಸ್‌ಆರ್ ಕಲ್ಯಾಣಮಂಟಪಂ’, ‘ಸೆಬಾಸ್ಟಿನ್ ಪಿ ಸಿ 524’, ‘ಸಮ್ಮಾಥಮೆ’, ‘ನೇನು ಮೀಕು ಬಾಗ ಕಾವಲ್ಸಿನವಾಡಿನಿ’, ‘ವಿನರೋ ಭಾಗ್ಯಮು ವಿಷ್ಣು ಕಥಾ’, ‘ರೂಲ್ಸ್ ರಂಜನ್’, ‘ಮೀಟರ್’ ಸಿನಿಮಾಗಳಲ್ಲಿ ಕಿರಣ್ ನಟಿಸಿದ್ದಾರೆ.

    ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕೇ ವರ್ಷಗಳಲ್ಲಿ ಅವರ 8 ಸಿನಿಮಾ ರಿಲೀಸ್ ಆಗಿರುವುದು ಕಿರಣ್‌ಗೆ ಇರುವ ಜನಪ್ರಿಯತೆಗೆ ಸಾಕ್ಷಿ. ಸದ್ಯ ‘ದಿಲ್ ರೂಬಾ’ ಅನ್ನೋ ಸಿನಿಮಾದಲ್ಲಿ ಕಿರಣ್ ಬಣ್ಣ ಹಚ್ಚಿದ್ದಾರೆ.

  • ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ

    ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ

    ಕೂರ್ಗ್ ಬೆಡಗಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತನ್ನ ಹುಟ್ಟೂರು ಕೊಡಗಿಗೆ ನಟಿ ಭೇಟಿ ನೀಡಿದ್ದಾರೆ. ಸ್ನೇಹಿತೆಯ ಮದುವೆಯಲ್ಲಿ ರಾಯಲ್‌ ಬ್ಯೂ ಸೀರೆಯಲ್ಲಿ ನಟಿ ಮಿರ ಮಿರ ಅಂತ ಮಿಂಚಿದ್ದಾರೆ.

    ಕೈತುಂಬಾ ಸಿನಿಮಾಗಳಿವೆ. ಮುಂಬೈ, ಹೈದರಾಬಾದ್, ಫಾರಿನ್ ಅಂತ ಶೂಟಿಂಗ್‌ಗಾಗಿ ತಿರುಗಾಡುತ್ತಲೇ ಇರುತ್ತಾರೆ. ಇದರ ನಡುವೆ ಕೆಲಸಕ್ಕೆ ಬ್ರೇಕ್ ಕೊಟ್ಟು ಗೆಳತಿಯ ಮದುವೆಗೆ ರಶ್ಮಿಕಾ ಹಾಜರಿ ಹಾಕಿದ್ದಾರೆ. ಸ್ನೇಹಿತೆಗೆ ವಿಶೇಷವಾಗಿ ಶುಭಕೋರಿದ್ದಾರೆ. ತನ್ನ ಊರನ್ನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ‘ದ ಪ್ರೆಸೆಂಟ್’ ಚಿತ್ರದ ಮುಹೂರ್ತ

    ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ. ಇವತ್ತು ನನ್ನ ಹುಡುಗಿಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನೀವು, ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಮತ್ತು ಆರೋಗ್ಯದಿಂದ ಇರು ಎಂದು ಬಯಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾನು ಮನೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ತನ್ನ ಊರಿನ ಶೈಲಿ ಕೊಡಗಿನ ಲುಕ್‌ನಲ್ಲಿ ಸೀರೆಯುಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ.

    ಅಂದಹಾಗೆ, ಪುಷ್ಪ 2, ಅನಿಮಲ್‌ ಪಾರ್ಕ್‌, ಕುಬೇರ, ಚಾವ, ದಿ ಗರ್ಲ್‌ಫ್ರೆಂಡ್‌, ರೈನ್‌ಬೋ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

     

  • ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

    ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

    ಸಾನ್ಯಾ  ಅಯ್ಯರ್ ತಮ್ಮ ಚೊಚ್ಚಲು ಸಿನಿಮಾ ‘ಗೌರಿ’ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಹಿಂದೆ ಪೋಸ್ಟ್ ಮಾಡಿದ್ದರು. ಇದೀಗ ಸಮ್ಮರ್ ಹಾಲಿಡೇ ಕಳೆಯಲ್ಲಿ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದಾರೆ.

    ‘ಗೌರಿ’ (Gauri) ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್ (Sanya Iyer), ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ (Photoshoot) ನಲ್ಲಿ ಭಾಗಿಯಾಗಿದ್ದರು.

    ಬ್ಲೌಸ್ ಇಲ್ಲದೇ ಕೇವಲ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿರುವ ಸಾನ್ಯಾ ಅಯ್ಯರ್. ಆ ಫೋಟೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಬ್ಯಾಕ್ ಲೆಸ್ ಪೋಸ್ ಕೂಡ ನೀಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು.

    ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್‌ನಲ್ಲಿ ಸ್ಟೈಲೀಶ್ ಗೆಟಪ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದರು.

     

    ಗೌರಿ ಸಿನಿಮಾ ಚಿಕ್ಕಮಗಳೂರು ಸೇರಿದಂತೆ ನಾನಾ ಸ್ಥಳಗಳಲ್ಲಿ ಶೂಟ್ ಆಗಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದಕ್ಕಿಂತ ಚೆನ್ನಾಗಿ ಅಭಿನಯಿಸಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

  • ‘ಕೂರ್ಗ್’ನಲ್ಲಿ ಸೀರೆ ಶೂಟಿಂಗ್ ಶುರು ಮಾಡಿದ ರಾಮ್ ಗೋಪಾಲ್ ವರ್ಮಾ

    ‘ಕೂರ್ಗ್’ನಲ್ಲಿ ಸೀರೆ ಶೂಟಿಂಗ್ ಶುರು ಮಾಡಿದ ರಾಮ್ ಗೋಪಾಲ್ ವರ್ಮಾ

    ಕ್ಷಿಣದ ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂರ್ಗ್ (Coorg) ನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ಹೊಸ ಸೀರೆ ಸಿನಿಮಾದ ಹಾಡಿನ ಚಿತ್ರೀಕರಣವನ್ನು (Shooting) ಅವರು ಕೊಡಗಿನಲ್ಲಿ ಮಾಡುತ್ತಿದ್ದು, ಆ ಸಣ್ಣದೊಂದು ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕೂರ್ಗ್ ಅದ್ಭುತ ಲೋಕೇಷನ್ ಎಂದು ಹಾಡಿ ಹೊಗಳಿದ್ದಾರೆ.

    ವರ್ಮಾ ಈ ಹಿಂದೆ ‘ಸೀರೆ’ (Saree) ಹೆಸರಿನ ಸಿನಿಮಾವೊಂದನ್ನು ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಮಲಯಾಳಿ ನಟಿ ಆರಾಧ್ಯ ದೇವಿ (Aradhya Devi) ಅಲಿಯಾಸ್ ಶ್ರೀಲಕ್ಷ್ಮಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಯಾವಾಗ ಶೂಟಿಂಗ್ ಶುರುವಾಗಲಿದೆ ಎಂದು ಮಾಹಿತಿ ನೀಡಿರಲಿಲ್ಲ. ಈಗ ಚಿತ್ರೀಕರಣ ನಡೆಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.

    ಈ ಸಿನಿಮಾದ ಶೂಟಿಂಗ್ ಗಾಗಿ ಭರ್ಜರಿಯ ಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ ವರ್ಮಾ. ಚಿತ್ರೀಕರಣಕ್ಕೂ ಮುನ್ನ  ನಾಯಕಿಯು  ಬದಲಾದ ಪರಿಗೆ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗಾಗಿ ನಾಯಕಿ ಭಾರೀ ಬದಲಾವಣೆ ಆಗಿರುವ ಕುರಿತು ಮೊನ್ನೆಯಷ್ಟೇ ಮಾಹಿತಿ ನೀಡಿದ್ದರು ರಾಮ್ ಗೋಪಾಲ್ ವರ್ಮಾ.

    ಆರಾಧ್ಯ ದೇವಿಯ ಹೊಸ ಫೋಟೋ ಶೂಟ್ ಅನ್ನು ಹಂಚಿಕೊಂಡಿದ್ದ ಆರ್.ಜಿ.ವಿ ನಟಿಯ ಬದಲಾವಣೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅದಕ್ಕಾಗಿ ಅವರು ಮಾಡಿಕೊಂಡಿದ್ದ ತಯಾರಿಯನ್ನು ಹಾಡಿ ಹೊಗಳಿದ್ದರು. ಜೊತೆಗೆ ಕ್ಯಾಮೆರಾದಲ್ಲಿ ಆಕೆಯನ್ನು ಸೆರೆ ಹಿಡಿದವರನ್ನು ವರ್ಮಾ ನೆನೆದಿದ್ದರು. ಆರಾಧ್ಯ ಫೋಟೋ ಶೂಟ್ ನಲ್ಲಿ ಸಖತ್ ಹಾಟ್ ಹಾಟ್ ಆಗಿ ಕಂಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿನ ವರ್ಷಗಳಲ್ಲಿ ಸಿನಿಮಾಕ್ಕಿಂತ ಹೆಚ್ಚು ಹುಡುಗಿಯರ ಅಂದವನ್ನು ಹೊಗಳುವುದರಲ್ಲಿ ಮತ್ತು ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

     

    ಮಾಡೆಲ್ ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಇರುವುದನ್ನೇ ಹವ್ಯಾಸ ಮಾಡಿಕೊಂಡಿರುವ ವರ್ಮಾ, ಈಗ ನಟಿ ಅಪ್ಸರಾ ರಾಣಿಯ ಹಿಂದೆ ಬಿದ್ದಿದ್ದಾರೆ. ನಿತ್ಯವೂ ಅಪ್ಸರಾ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿರುವ ವರ್ಮಾ, ಅದಕ್ಕೊಂದು ಕ್ಯಾಪ್ಷನ್ ಕೊಟ್ಟು ಕುತೂಹಲ ಮೂಡಿಸುತ್ತಿದ್ದಾರೆ.

  • ಮಂತ್ರಾಲಯಕ್ಕೆ ಭೇಟಿ ನೀಡಿದ ‘ಅಮೃತಧಾರೆ’ ನಟಿ ಸಾರಾ ಅಣ್ಣಯ್ಯ

    ಮಂತ್ರಾಲಯಕ್ಕೆ ಭೇಟಿ ನೀಡಿದ ‘ಅಮೃತಧಾರೆ’ ನಟಿ ಸಾರಾ ಅಣ್ಣಯ್ಯ

    ಕಿರುತೆರೆಯ ಜನಪ್ರಿಯ ‘ಕನ್ನಡತಿ’ (Kannadati) ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಾರಾ ಅಣ್ಣಯ್ಯ (Sara Annaiah) ಅವರು ಮಂತ್ರಾಲಯಕ್ಕೆ (Mantralaya)  ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ರಾಯರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ:ಮೈಸೂರಿಗೆ ಬಂದಿಳಿದ ನಟ ಉಸ್ತಾದ್ ರಾಮ್ ಪೋತಿನೇನಿ

    ‘ಕನ್ನಡತಿ’ ಸೀರಿಯಲ್‌ನ ವರುಧಿನಿ ಆಗಿ ಸೈ ಎನಿಸಿಕೊಂಡಿದ್ದ ನಟಿ ಸಾರಾ ಅವರು ಇತ್ತೀಚಿಗೆ ‘ನಮ್ಮ ಲಚ್ಚಿ’ (Namma Lacchi) ಎಂಬ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ನಟಿಸುತ್ತಿದ್ದರು. ಆದರೆ ಸಡನ್ ಆಗಿ ಈ ಸೀರಿಯಲ್‌ನಿಂದ ಹೊರಬಂದರು. ಈ ಬೆನ್ನಲ್ಲೇ ಹೊಸ ಧಾರಾವಾಹಿ ‘ಅಮೃತಧಾರೆ’ಯ (Amruthadaare) ಮಹಿಮ ಪಾತ್ರಕ್ಕೆ ಸಾರಾ ಜೀವ ತುಂಬುತ್ತಿದ್ದಾರೆ.

    ಸದ್ಯ ವೆಸ್ಟರ್ನ್ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೂರ್ಗ್ ಬ್ಯೂಟಿ ಸಾರಾ ಅಣ್ಣಯ್ಯ ಅವರು ಇದೀಗ ಟ್ರೆಡಿಷನಲ್ ಆಗಿ ಸೀರೆಯುಟ್ಟು ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಸದಾ ತುಂಡು ಬಟ್ಟೆಗಳನ್ನ ತೊಡುತ್ತಿದ್ದ ನಟಿ ಸಾರಾ ಈಗೀನ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಟ್ರೆಡಿಷನಲ್ ಬಟ್ಟೆಗಳನ್ನ ಧರಿಸಿ ಎಷ್ಟು ಚೆಂದ ಕಾಣ್ತೀರಾ ಅಂತಾ ಮನವಿ ಮಾಡಿದ್ದಾರೆ.

     

  • ರಾಗಿಣಿ ಮದುವೆಯಲ್ಲಿ ಪಾಲ್ಗೊಂಡ ರಶ್ಮಿಕಾ ಮಂದಣ್ಣ: ಫ್ಲೈಟ್ ಡಿಲೆಯಾಗಿ ಒದ್ದಾಡಿದ ನಟಿ

    ರಾಗಿಣಿ ಮದುವೆಯಲ್ಲಿ ಪಾಲ್ಗೊಂಡ ರಶ್ಮಿಕಾ ಮಂದಣ್ಣ: ಫ್ಲೈಟ್ ಡಿಲೆಯಾಗಿ ಒದ್ದಾಡಿದ ನಟಿ

    ತೆಲುಗು ಸಿನಿಮಾ ರಂಗದಲ್ಲಿ ರಶ್ಮಿಕಾ ಮಂದಣ್ಣ ನೆಲೆಯೂರಿದ ನಂತರ, ಅವರು ಕರ್ನಾಟಕಕ್ಕೆ ಬರುವುದು ತೀರಾ ಅಪರೂಪವಾಗಿದೆ. ಕನ್ನಡದಲ್ಲಿ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಕಾರಣಕ್ಕಾಗಿ ಅವರು ಬೆಂಗಳೂರು ಮುಖ ನೋಡಿಯೇ ತುಂಬಾ ದಿನವಾಗಿದೆ. ಈ ಮಧ್ಯ ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಳ್ಳಲು ರಶ್ಮಿಕಾ ಕೊಡಗಿಗೆ ಬಂದಿದ್ದಾರೆ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ಮದುವೆಗೆ ಬರುವುದಕ್ಕಾಗಿ ಅವರು ಬೆಳಗ್ಗೆ ನಾಲ್ಕು ಗಂಟೆಯ ಫ್ಲೈಟ್ ಗೆ ಬುಕ್ ಮಾಡಿದ್ದರು. ಆದರೆ, ಫ್ಲೈಟ್ ಬರುವುದಕ್ಕೆ ತಡವಾಗಿದೆ. ಇನ್ನೇನು ಮದುವೆ ಮಿಸ್ ಆಗಿ ಬಿಡುತ್ತದೆ ಎಂಬ ಒದ್ದಾಟದ ನಡುವೆಯೂ ಕಾಯ್ದು, ಫ್ಲೈಟ್ ಹತ್ತಿಕೊಂಡು ಬಂದು ಸ್ನೇಹಿತೆ ರಾಗಿಣಿ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದಾರಂತೆ. ಅದನ್ನು ಅವರು ಇನ್ಸ್ಟಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ

    ಮದುವೆಯಲ್ಲಿ ಪಾಲ್ಗೊಂಡಿದ್ದಷ್ಟೇ ಅಲ್ಲ, ತನ್ನ ಬಾಲ್ಯ ಸ್ನೇಹಿತೆಯರ ಜೊತೆ ಕ್ಷಣ ಹೊತ್ತು ಕಳೆದಿದ್ದಾರೆ. ಕೊಡಗಿನ ಸಾಂಪ್ರದಾಯಕ ಉಡುಗೆ ತೊಟ್ಟು ಸಂಭ್ರಮಿಸಿದ್ದಾರೆ. ಸ್ನೇಹಿತೆಯರ ಜೊತೆಗಿನ ಫೋಟೋಗಳನ್ನೂ ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಟಗರು-2ನಲ್ಲಿ ಶಿವಣ್ಣನ ಜತೆ ನಟಿಸಬೇಕಿತ್ತು ಅಪ್ಪು!

    ಸದ್ಯ ತಮಿಳು, ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಈ ನಡುವೆ ಬಿಡುವು ಮಾಡಿಕೊಂಡು ಸ್ನೇಹಿತೆಯ ಮದುವೆಯಲ್ಲಿ ಪಾಲ್ಗೊಂಡಿದ್ದರ ಕುರಿತು ಅಭಿಮಾನಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಈ ನೆಪದಲ್ಲಾದರೂ ನೀವು ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು ಖುಷಿಯಾಗಿದೆ ಎಂದು ಹರ್ಷ ‍ವ್ಯಕ್ತಪಡಿಸಿದ್ದಾರೆ.

  • ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಯೇಸುವಿನ ಮರಣದ ಜೀವಂತ ದೃಶ್ಯ ರೂಪಕ ಕಂಡು ಕಣ್ಣೀರು ಹಾಕಿದ ಭಕ್ತರು

    ಮಡಿಕೇರಿ: ಯೇಸು ಕ್ರಿಸ್ತ ಸಾಯುವ ಮುನ್ನ ಅನುಭವಿಸಿದ ನೋವು, ಯಾತನೆಯ ಜೀವಂತ ದೃಶ್ಯ ರೂಪಕವನ್ನು ಕಂಡು ಕ್ರೈಸ್ತ ಧರ್ಮದ ಜನರು ಕಣ್ಣೀರು ಹಾಕಿದ ಘಟನೆ ಸೋಮವಾರಪೇಟೆ ತಾಲೂಕಿನ ಗೋಪುರದ ಗ್ರಾಮದಲ್ಲಿ ನಡೆದಿದೆ.

    ಗೋಪಾಲಪುರ ಸಂತ ಅಂತೋಣಿ ಚರ್ಚ್‍ನಲ್ಲಿ ಗುಡ್ ಫ್ರೈಡೆ(ಶುಭ ಶುಕ್ರವಾರ) ಅಂಗವಾಗಿ ಕ್ರೈಸ್ತ ಭಕ್ತರು ಉಪವಾಸವೆಂದು ಶ್ರದ್ಧೆ ಭಕ್ತಿಯಿಂದ ಗೋಪಾಲಪುರದ ಚರ್ಚ್‍ಗೆ ಆಗಮಿಸಿದ್ದರು. ಈ ವೇಳೆ ಗೋಪಾಲಪುರ ಚರ್ಚ್‍ನ ಹಿಂದೆ ಇರುವ ಶಿಲುಬೆ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ಫಾದರ್ ಜಾಕಬ್ ಕೊಳನೂರು ಅವರು ಪ್ರಾರ್ಥನೆಯ ವಿಧಿ ವಿಧಾನಗಳು ಸಲ್ಲಿಸಿದರು. ಇದನ್ನೂ ಓದಿ: ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ 

    ಇದೇ ಸಂದರ್ಭದಲ್ಲಿ ಗೋಪಾಲಪುರ ಚರ್ಚ್‍ನ ಯುವತಂಡ, ಶಿಲುಬೆಯ ಹಾದಿಯಲ್ಲಿ ಯೇಸು ಅನುಭವಿಸಿದ ಯಾತನೆ ಹಾಗೂ ಮರಣದ ಬಗ್ಗೆ ನೈಜತೆಯಿಂದ ದೃಶ್ಯ ವೃತ್ತಾಂತವನ್ನು ಅಭಿನಯಿಸಿದ ಹಿನ್ನೆಲೆಯಲ್ಲಿ ಚರ್ಚ್‍ಗೆ ಬಂದ ಭಕ್ತರು ಅಂದಿನ ದಿನಗಳಲ್ಲಿ ಯೇಸು ಕ್ರೈಸ್ತ ಅನುಭವಿಸಿದ ನೋವುಗಳನ್ನು ನೋಡಿ ಕಣ್ಣೀರು ಹಾಕಿದ್ರು.

    ವಿಭಿನ್ನವಾಗಿ ದೃಶ್ಯ ರೂಪಕ ಪ್ರಸ್ತುತ ಪಡಿಸಿದವರನ್ನು ಮನಸೂರೆಗೊಳ್ಳಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಚರ್ಚ್‍ನ ಫಾದರ್ ಜಾಕಬ್ ಕೊಳನೂರು ಎಲ್ಲರಿಗೂ ಆಶೀರ್ವಚನ ನೀಡಿದರು. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

  • ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ

    ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ

    – ರಸ್ತೆಯ ಮೇಲ್ಭಾಗದಲ್ಲಿಯೇ ಹರಿಯಲಾರಂಭಿಸಿದ ನೀರು
    – ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು
    – ಮನೆ ಮೇಲೆ ಉರುಳಿದ ಬಂಡೆಗಳು

    ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಕುಸಿದು ಬಂದ್ ಆಗುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಹೆದ್ದಾರಿಗಳ ಮೇಲೆಯೇ ಇದೀಘ ಜಲಾದ ಮೂಲಗಳು ಹೆಚ್ಚಾಗಿದ್ದು, ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿಯಲು ಅರಂಭಿಸಿದೆ.

    ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು:
    ಕಳೆದ ಒಂದು ವಾರದವರೆಗೆ ಜಿಲ್ಲೆಯಲ್ಲಿ 1,600 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂರು ಕಡೆಗಳಲ್ಲಿ ಅತ್ಯಂತ ಅಪಾಯಕಾರಿ ಮತ್ತು ತೀವ್ರ ಕುಸಿಯುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈಗಾಗಲೇ ಮೂರು ಕಡೆಗಳಲ್ಲಿ ಬಿರುಕು ಮೂಡಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಎರಡು ಕಡೆ ಬಿರುಕು ಬಿಟ್ಟಿದ್ದರೆ, ಮದೆನಾಡು ಬಳಿ ರಸ್ತೆ ಉಬ್ಬುತ್ತಿದೆ. ಕರ್ತೋಜಿ ಬೆಟ್ಟ ಕುಸಿಯುತ್ತಿರುವುದರಿಂದ ಅದರ ಒತ್ತಡಕ್ಕೆ ಹೆದ್ದಾರಿ ಉಬ್ಬುತ್ತಿದೆ. ಹೀಗೆ ಉಬ್ಬಿದಂತೆಲ್ಲಾ ಮಣ್ಣು ತೆಗೆಯಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ 100 ಲೋಡಿಗೂ ಹೆಚ್ಚು ಮಣ್ಣನ್ನು ಉಬ್ಬಿದ ಸ್ಥಳದಿಂದ ತೆಗೆಯಲಾಗಿದೆ.

    ಉಕ್ಕುತ್ತಿರುವ ಅಂತರ್ಜಲ:
    ಜೊತೆಗೆ ಎರಡನೇ ಮೊಣ್ಣಂಗೇರಿಯಿಂದ ಮದೆನಾಡುವರೆಗೆ ಹೆದ್ದಾರಿಯಲ್ಲೇ ಅಂತರ್ಜಲ ಉಕ್ಕುತ್ತಿದೆ. ಇದರ ಜೊತೆಗೆ ಬೆಟ್ಟದ ಕೆಳ ಭಾಗದಲ್ಲಿಯೂ ಜಲ ಹೊರ ಬರುತ್ತಿದೆ. ಇದರಿಂದಾಗಿ ಈ ಬಾಗದ ಜನರಲ್ಲಿ ಅತಂಕ ಶುರುವಾಗಿದೆ. ಕಾರಣ ಕಳೆದ ವರ್ಷ ತಲಕಾವೇರಿಯಲ್ಲಿ ನಡೆದ ಭೀಕರ ದುರಂತಕ್ಕೂ ಮೊದಲು ಗಜಗಿರಿ ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ಅಂತರ್ಜಲ ಹರಿಯಲಾರಂಭಿಸಿತ್ತು. ಹೀಗೆ ಅಂತರ್ಜಲ ಹರಿದ ಕೆಲವೇ ತಿಂಗಳಲ್ಲಿ ಇಡೀ ಗಜಗಿರಿ ಬೆಟ್ಟ ಕುಸಿದು ಹೋಗಿತ್ತು. ಇದೀಗ ಮದೆನಾಡು, ಮೊಣ್ಣಂಗೇರಿಗಳಲ್ಲಿ ಒಂದೆಡೆ ಹೆದ್ದಾರಿ ಕುಸಿದ್ದಿದ್ರೆ, ಮತ್ತೊಂದೆಡೆ ಭಾರೀ ಪ್ರಮಾಣದಲ್ಲಿ ಅಂತರ್ಜಲ ಉಕ್ಕಿ ಹರಿಯುತ್ತಿರುವುದು ಆತಂಕ ಮೂಡಿಸಿದೆ.

    ಇನ್ನೂ ಮಡಿಕೇರಿ ಸೋಮವಾರಪೇಟೆ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಟ್ಟಿಹೊಳೆ ಸಮೀಪ ಬರೋಬ್ಬರಿ ಅರ್ಧ ಕಿಲೋಮೀಟರ್ ದೂರದವರೆಗೆ ಭಾರೀ ಬಿರುಕುಬಿಟ್ಟಿದೆ. ಮತ್ತೊಂದೆಡೆ ಮಡಿಕೇರಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಚೆಟ್ಟಳ್ಳಿ ಬಳಿ ಕುಸಿದಿದ್ದು, ಮಣ್ಣನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

    ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ. ಒಂದು ವೇಳೆ ಭಾರೀ ಮಳೆಯಾದಲ್ಲಿ ಈ ಎಲ್ಲಾ ರಸ್ತೆಗಳು ಕುಸಿದು ಹೋಗುವ ಸಾಧ್ಯತೆ ಇದ್ದು ಮಡಿಕೇರಿ ಕುಶಾಲನಗರ ಸಂಪರ್ಕವನ್ನು ಬಿಟ್ಟು ಉಳಿದೆಲ್ಲಾ ಸಂಪರ್ಕವನ್ನು ಕಡಿದುಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಹೆದ್ದಾರಿ ಸಂಪರ್ಕದ ಬಗ್ಗೆ ನಿತ್ಯ ಪರಿಶೀಲನೆಗೆ ಸೂಚಿಸಲಾಗಿದ್ದು, ಭಾರೀ ವಾಹನಗಳ ನಿಯಂತ್ರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

    ಉರುಳಿದ ಬಂಡೆಗಳು:
    ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮಪಂಚಾಯತಿ ವ್ಯಾಪ್ತಿಯ ನವಗ್ರಾಮದಲ್ಲಿ ಬಸಪ್ಪ ಮತ್ತು ಮಂಜುಳ ದಂಪತಿ ಮನೆ ಪಕ್ಕದಲ್ಲೇ ಬೆಟ್ಟ ಕುಸಿದಿದೆ. ಈ ವೇಳೆ ಭಾರೀ ಗಾತ್ರದ ಎರಡು ಬಂಡೆಗಳು ಬಸಪ್ಪ ಅವರ ಮನೆ ಮೇಲೆ ಉರುಳಿವೆ. ಭಾರೀ ಗಾತ್ರದ ಬಂಡೆಗಳು ಮನೆಗೆ ಅಪ್ಪಳಿಸಿದ್ದರಿಂದ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಆ ವೇಳೆಗೆ ಮನೆಯಲ್ಲೇ ಎಲ್ಲರೂ ಇದ್ದರಾದರೂ ಬಂಡೆಗಳು ಉರುಳಿದ ಭಾಗದಲ್ಲಿ ಯಾರು ಇರಲಿಲ್ಲ. ಹೀಗಾಗಿ ಅದೃವಷಾತ್ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.

    ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯ ಶಂಷುದ್ದಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಿಯಮ ಪ್ರಕಾರ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಥಳೀಯರು ತಮಗೆ ಸುರಕ್ಷಿತ ಸ್ಥಳದಲ್ಲಿ ಬದಲಿ ನಿವೇಶನ ಅಥವಾ ಮನೆ ನೀಡುವಂತೆ ಒತ್ತಾಯಿಸಿದ್ದಾರೆ.

  • ಪ್ರಕೃತಿ ವಿಕೋಪ ಎದುರಿಸಲು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆಗೆ ಡಿಸಿ ಚಾರುಲತಾ ಸೋಮಲ್ ಸೂಚನೆ

    ಪ್ರಕೃತಿ ವಿಕೋಪ ಎದುರಿಸಲು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆಗೆ ಡಿಸಿ ಚಾರುಲತಾ ಸೋಮಲ್ ಸೂಚನೆ

    ಮಡಿಕೇರಿ: ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಪ್ರವಾಹವನ್ನು ಎದುರಿಸಲು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ನಿರ್ದೇಶನ ನೀಡಿದ್ದಾರೆ.

    ಮುಂದಿನ ಮಳೆಗಾಲದ ಅವಧಿಯಲ್ಲಿ ಮಳೆಯಿಂದಾಗುವ ಹಾನಿಯ ಕುರಿತು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ನಗರದ ಜಿ.ಪಂ.ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    2018, 2019 ಮತ್ತು 2020 ರ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಭೂಕುಸಿತದಿಂದ ಪ್ರಾಣಹಾನಿ, ಜಾನುವಾರು ಹಾನಿ ಹೀಗೆ ಹಲವು ಸಂಕಷ್ಟ ಎದುರಿಸುವಂತಾಯಿತು. ಆದ್ದರಿಂದ ಈ ಬಾರಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಸಂಭವಿಸಬಹುದಾದ ಪ್ರಕೃತಿ ವಿಕೋಪ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

    ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ಮುಂಚಿತವಾಗಿ ಮಾಹಿತಿ ಪಡೆದು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆ ದಿಸೆಯಲ್ಲಿ ಮಳೆ ಹಾಗೂ ಇತರ ಸಂಬಂಧ ಪ್ರತೀ ದಿನದ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಒದಗಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಗತ್ಯ ಕಾರ್ಯಯೋಜನೆ ರೂಪಿಸಬೇಕು. ಇಂತಿಷ್ಟು ಮಳೆಯಾಗುತ್ತದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕು ಎಂದರು.

    ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಹೋಬಳಿವಾರು ನೋಡಲ್ ಅಧಿಕಾರಿಗಳು, ತಹಶೀಲ್ದಾರರು, ನಗರ, ಪಟ್ಟಣ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಇತರರು ತಮ್ಮ ಹಂತದಲ್ಲಿ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಚಾರುಲತ ಸೋಮಲ್ ಅವರು ತಿಳಿಸಿದರು. ಪ್ರಕೃತಿ ವಿಕೋಪ ಹಾಗೂ ಪ್ರವಾಹ ಎದುರಿಸುವಲ್ಲಿ ಮುಂಚಿತವಾಗಿ ಮಾಹಿತಿ ನೀಡಿದ್ದಲ್ಲಿ ಭಾರಿ ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

    ಮಳೆಗಾಲದ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಎಚ್ಚರ ವಹಿಸಬೇಕಿದೆ. ಪ್ರಕೃತಿ ವಿಕೋಪ ಹಾಗೂ ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ತಂಡ ರಚಿಸಲಾಗುವುದು. ಕಂದಾಯ, ಎನ್‍ಡಿಆರೆಫ್, ಎಸ್‍ಡಿಆರೆಫ್, ಅಗ್ನಿಶಾಮಕ, ಪೊಲೀಸ್, ಸೆಸ್ಕ್, ಅರಣ್ಯ ಹಾಗೆಯೇ ಎಂಜಿನಿಯರಿಂಗ್ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

  • ಕುಟುಂಬದವರ ಜೊತೆ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್

    ಕುಟುಂಬದವರ ಜೊತೆ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದೂದ್‍ಪೇಡ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ತಮ್ಮ ಕುಟುಂಬದವರ ಜೊತೆ ಮನೆಯಲ್ಲಿಯೇ ಕಾಲಕಳೆದಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆಯ ನಂತರ ಕುಟುಂಬದವರ ಜೊತೆ ಔಟಿಂಗ್ ಹೋಗಿದ್ದಾರೆ.

    ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿರುವ ಕೂರ್ಗ್ ಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಕೊರೊನಾ ಆತಂಕದ ನಡುವೆಯೂ ಹೊರಬಂದು ಪ್ರಕೃತಿ ಸೌಂದರ್ಯವನ್ನು ದಿಗಂತ್ ಮತ್ತು ಐಂದ್ರಿತಾ ರೇ ಎಂಜಾಯ್ ಮಾಡುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಇಷ್ಟು ದಿನಗಳನ್ನು ಮನೆಯಲ್ಲಿಯೇ ಇದ್ದರು. ಈಗ ಮನೆಯಿಂದ ಹೊರ ಬಂದು ಕುಟುಂಬ ಮತ್ತು ಪ್ರಕೃತಿಯ ಸೌಂದರ್ಯದ ಮಧ್ಯೆ ರಿಲ್ಯಾಕ್ಸ್ ಮಾಡುತ್ತಿದ್ದಾರೆ.

    https://www.instagram.com/p/CBxbnALFpv4/?igshid=ybw4dnn7bw2b

    ಪೋಷಕರು ಕೂಡ ಈ ಟ್ರಿಪ್‍ನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಜೋಡಿ ತಮ್ಮ ಟ್ರಿಪ್‍ಗೆ ಎರಡು ನಾಯಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಐಂದ್ರಿತಾ ಮತ್ತು ದಿಗಂತ್‍ಗೆ ಟ್ರಿಪ್, ಟ್ರಕ್ಕಿಂಗ್ ಎಂದರೆ ತುಂಬಾ ಇಷ್ಟ. ಆದ್ದರಿಂದ ಈ ದಂಪತಿ ಆಗಾಗ ಜಾಲಿ ಟ್ರಿಪ್ ಹೋಗುತ್ತಿದ್ದರು. ಸದ್ಯಕ್ಕೆ ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಪ್ರಕೃತಿ ಸೌಂದರ್ಯ ನೋಡಲು ಹೋಗಿದ್ದಾರೆ.

    ದಿಗಂತ್ ಹಾಗೂ ಐಂದ್ರಿತಾ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ 2018 ಡಿಸೆಂಬರಿನಲ್ಲಿ ಈ ಜೋಡಿ ವಿವಾಹವಾಗಿದ್ದಾರೆ.

    https://www.instagram.com/p/CB3T6AEFkEz/?igshid=paozvkq63lrx