Tag: Cooperative Bank

  • ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಣೆ: ಬೊಮ್ಮಾಯಿ

    ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಣೆ: ಬೊಮ್ಮಾಯಿ

    ಹಾವೇರಿ: ಪ್ರಜಾಪಭುತ್ವ ಗಟ್ಟಿಗೊಳಿಸಲು ಸಹಕಾರಿ ರಂಗ ಹೆಚ್ಚು ಸಹಕಾರಿಯಾಗಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ರೀತಿಯಲ್ಲಿ ಸಹಕಾರ ರಂಗ ಸರ್ಕಾರದ ಮೇಲೆ ಹಿಡಿತ ಸಾಧಿಸುವಂತಾಗಬೇಕು. ಕೆಎಂಎಫ್ ಮಾದರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟಿದ್ದಾರೆ.

    ಹಾವೇರಿಯಲ್ಲಿ (Haveri) ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ನಿಯಮಿತ, ಬೆಂಗಳೂರು ಹಾಗೂ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ಆಡಳಿತ ಕಛೇರಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಗೌರವ ಉಪಸ್ಥಿತಿ ವಹಿಸಿ ಮಾತನಾಡಿದರು. ವಿಶ್ವದಲ್ಲಿ ಎರಡು ವ್ಯವಸ್ಥೆಗಳ ನಡುವೆ ಸದಾ ಸಂಘರ್ಷ ಇದೆ. ಕೆಲವು ದೇಶಗಳು ಕಮ್ಯುನಿಸ್ಟ್ ದೇಶಗಳಿವೆ. ಇನ್ನು ಕೆಲವು ಫೆಡರಲ್ ದೇಶಗಳಿವೆ. ಈ ಎರಡು ವಿಚಾರಧಾರೆಯ ಆಡಳಿತ ವಿಶ್ವದಲ್ಲಿದೆ. ಬಂಡವಾಳ ಶಾಹಿಗಳಿಗೆ ಮತ್ತು ಕಮ್ಯುನಿಸ್ಟ್ಗಳಿಗೆ ಪರ್ಯಾಯವಾಗಿರುವ ವ್ಯವಸ್ಥೆ ಸಹಕಾರ ತತ್ವ, ಕೋ ಆಪರೇಟಿವ್ ವ್ಯವಸ್ಥೆ ಜನರಿಂದ ಜನರಿಗೋಸ್ಕರ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ವಸ್ತುಗಳ ತೆರಿಗೆ ಭಾರೀ ಇಳಿಕೆ ಸಾಧ್ಯತೆ – ಜಿಎಸ್‌ಟಿಯಲ್ಲಿ ಇರಲಿದೆ ಎರಡೇ ಸ್ಲ್ಯಾಬ್‌!

    ಸಹಕಾರಿ ಸಂಘ ಯಶಸ್ವಿಯಾಗಲು ಎರಡು ಸಾಮಾನ್ಯ ತತ್ವ ಮುಖ್ಯ. ಒಂದು ಹಾಲು ಉತ್ಪಾದಕ, ಸಾಮಾನ್ಯ ನೇಕಾರ, ಸ್ವಾಭಿಮಾನದ ಮೂಲಕ ಸಹಕಾರ ರಂಗ ಕಟ್ಟುವ ಮೂಲಕ ಹೆಚ್ಚು ಬಂಡವಾಳ ಇಲ್ಲದೇ ಸಂಘ ಕಟ್ಟಬಹುದು. ಇನ್ನೊಂದು ಪ್ರಜಾಪಭುತ್ವ ಗಟ್ಟಿಗೊಳಿಸಲು ಸಹಕಾರಿ ರಂಗ ಹೆಚ್ಚು ಸಹಕಾರಿಯಾಗಿದೆ. ಸಹಕಾರ ಕ್ಷೇತ್ರ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಹೆಚ್ಚು ಶಕ್ತಿಶಾಲಿಯಾಗಿದೆ. ಅಲ್ಲಿ ಸಹಕಾರ ರಂಗ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತದೆ. ಇಲ್ಲಿ ಸರ್ಕಾರ ಸಹಕಾರ ರಂಗದ ಮೇಲೆ ಹಿಡಿತ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.

    ನಾವೂ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ರೈತರ ಕೈಯಲ್ಲಿ ಇಟ್ಟುಕೊಳ್ಳಬೇಕು. ಭಾರತದ ಗೃಹ ಸಚಿವರು ಹೊಸದಾಗಿ ಆಗಿರುವ ಸಹಕಾರ ಇಲಾಖೆಯ ಸಚಿವರು, ಅಮಿತ್ ಶಾ ಅವರು ಇಷ್ಟು ವರ್ಷ ರಾಜಕಾರಣದಲ್ಲಿದ್ದಾರೆ. ಆದರೆ, ಅವರು ತಮ್ಮೂರಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಅಂದರೆ ಎಷ್ಟು ಮಹತ್ವದ್ದಾಗಿದೆ ಎಂದರ್ಥ. ಸಹಕಾರ ರಂಗದಲ್ಲಿ ಹಾಲು ಉತ್ಪಾದನೆಯ ಕ್ಷೀರ ಕ್ಷೇತ್ರ ಯಶಸ್ವಿಯಾಗಿದೆ. ಒಂದು ವ್ಯವಸ್ಥೆಯ ಮೂಲಕ ಆರ್ಥಿಕ ಚಟುವಟಿಕೆ, ವ್ಯಾಪಾರ, ವ್ಯವಹಾರ, ಆಧುನಿಕ ತಂತಜ್ಞಾನ ಬಳಸಿಕೊಂಡು ಯಶಸ್ವಿಯಾಗಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.

    ಹಾಲು ಒಕ್ಕೂಟಕ್ಕೆ ಖಾಸಗಿಯವರಿಂದ ಬಹಳಷ್ಟು ಸ್ಪರ್ಧೆ ಇದೆ. ನಮ್ಮ ರೈತರು ಒಗ್ಗಟ್ಟಾಗಿ ಹಾವೇರಿ ಒಕ್ಕೂಟ ನನ್ನದು ಎಂದು ತೀರ್ಮಾನ ಮಾಡಿದರೆ ಹಾಲು ಒಕ್ಕೂಟ ಗಟ್ಟಿಯಾಗಿ ಬೆಳೆಯುತ್ತದೆ. ಇದು ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಬಹಳ ಉಪಯುಕ್ತವಾಗಿದೆ. ಕೇವಲ ಒಕ್ಕಲುತನ ಮಾಡಿದರೆ ಉದ್ಧಾರವಾಗಲು ಸಾಧ್ಯವಿಲ್ಲ. ಅದರ ಜೊತೆಗೆ ಉಪಕಸುಬು ಮಾಡುವ ಮೂಲಕ ಸಮಗ್ರ ಕೃಷಿ ಮಾಡಿದರೆ ರೈತರಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಮಾಡಲು ಸುಲಭವಾಗಿ ಸಾಧ್ಯವಾಗುತ್ತದೆ. ಇದನ್ನು ಸರ್ಕಾರ ಮನಗಂಡು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಧರ್ಮಾಧಿಕಾರಿಗಳ ವಿರುದ್ಧ ಅವಹೇಳನ ಮಾಡಲಾಗುತ್ತಿದೆ: ಲಕ್ಷ್ಮಿ ಹೆಬ್ಬಾಳ್ಕರ್‌

    ನಾನು ಗೃಹ ಸಚಿವನಾಗಿದ್ದಾಗ ಹಾಗೂ ಸಿಎಂ ಆಗಿದ್ದಾಗ ಹಾಲು ಉತ್ಪಾದಕರ ಸಹಕಾರಿ ಬ್ಯಾಂಕ್ ಸ್ಥಾಪಿಸಲು ಪಯತ್ನ ಮಾಡಿದ್ದೆವು. ಆದರೆ, ಆರ್‌ಬಿಐ ಅನುಮತಿ ಕೊಡಲಿಲ್ಲ. ಸಹಕಾರ ರಂಗದಲ್ಲಿ ರೆಸಲ್ಯೂಷನ್ ಮಾಡಿದರೆ ರಾಜ್ಯ ಮಟ್ಟದಲ್ಲಿ ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಮಾಡಲು ಸಾಧ್ಯವಿದೆ. 50 ವರ್ಷದಲ್ಲಿ ನಮ್ಮ ದುಡ್ಡಿನಲ್ಲಿಯೇ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಬಹುದು. ಲಕ್ಷಾಂತರ ಹಾಲು ಉತ್ಪಾದಕರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಹೇಳಿದ್ದಾರೆ.

    ಧಾರವಾಡ ಹಾಲು ಒಕ್ಕೂಟದಿಂದ ಬೇರ್ಪಡಿಸಲು ಒಗ್ಗಟ್ಟಾಗಿ ಹೋಗಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಿಕೊಂಡೆವು. ಧಾರವಾಡ ಮತ್ತು ಹಾವೇರಿ ನಿರ್ದೇಶಕರ ಮಂಡಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಹಾಲು ಉತ್ಪಾದನೆ ಜೊತೆಗೆ ಇತರ ಉತ್ಪನ್ನ ಮಾಡಿದರೆ ಮಾದರಿ ಹಾಲು ಒಕ್ಕೂಟ ಮಾಡಲು ಸಾಧ್ಯ. ಪ್ರಸ್ತುತ 1 ಲಕ್ಷ 20 ಸಾವಿರದಿಂದ 1 ಲಕ್ಷ 50 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರು ಮನಸು ಮಾಡಿದರೆ 3 ಲಕ್ಷ ಲೀ. ಹಾಲು ಉತ್ಪಾದನೆ ಮಾಡಬಹುದು. ಮೆಗಾ ಡೈರಿಗೆ ನಾನು 70 ಕೋಟಿ ರೂ. ಕೊಟ್ಟಿದ್ದೇನೆ. ಆದಷ್ಟು ಬೇಗ ಮೆಗಾ ಡೈರಿ ಕಾರ್ಯ ಆರಂಭಿಸಬೇಕು. ಹಾವೇರಿಗೆ ಮೆಡಿಕಲ್ ಕಾಲೇಜು ಉದ್ಘಾಟನೆಗೆ ಸಿಎಂ ಅವರನ್ನು ಕರೆಸಲು ತೀರ್ಮಾನಿಸಿದ್ದೇವೆ. ಅದೇ ಸಂದರ್ಭದಲ್ಲಿ ಮೆಗಾ ಡೈರಿ ಉದ್ಘಾಟನೆ ಮಾಡಲು ಪ್ರಯತ್ನ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಮೋದಿ ಇಂದು ದಣಿದಿದ್ದಾರೆ, ನಾಳೆ ನಿವೃತ್ತಿ ಆಗ್ತಾರೆ – ಜೈರಾಮ್‌ ರಮೇಶ್‌

    ಈಗಿನ ನಿರ್ದೇಶಕ ಮಂಡಳಿಯವರು ಒಕ್ಕೂಟವನ್ನು ಎತ್ತಿ ಹಿಡಿಯಬೇಕು. ರೈತರಿಗೆ ಅನುಕೂಲ ಮಾಡಬೇಕು ಎನ್ನುವ ಕಳಕಳಿ ಇದೆ. ನಾವು ನಿಮ್ಮ ಜೊತೆಗೆ ಇದ್ದೇವೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ. ಹಿಂದಿನ ನಿರ್ದೇಶಕ ಮಂಡಳಿಯೂ ಬಹಳಷ್ಟು ಶ್ರಮವಹಿಸಿದೆ. ಅವರಿಗೂ ಕೂಡ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಾರಿ ಸವಾಲು ರೂಪದಲ್ಲಿದೆ. ಧಾರವಾಡ ಹಾಲು ಒಕ್ಕೂಟಕ್ಕಿಂತ ಎರಡು ಪಟ್ಟು ಹಾಲು ಉತ್ಪಾದನೆ ಹಾವೇರಿ ಒಕ್ಕೂಟದಿಂದ ಮಾಡೋಣ. ಈಗ ಕೆಎಂಎಫ್‌ನವರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಪ್ಯಾಕೇಜಿಂಗ್ ಯುನಿಟ್ ಪಾರಂಭ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ 5 ಕೋಟಿ ರೂ. ಹಣ ಆದಷ್ಟು ಬೇಗ ಬರುವಂತೆ ಸಚಿವರು ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್ ಹತ್ತಾರು ಎಕ್ರೆ ಪ್ರದೇಶದಲ್ಲಿ ರೆಸಾರ್ಟ್‌ ಮಾಡಿದ್ದಾನೆ – ಬ್ರಾಹ್ಮಣ ಪುರೋಹಿತ ಪರಿಷತ್‌ ಆರೋಪ

    ಆಡಳಿತ ಮಂಡಳಿ ಕಚೇರಿ ಪಾರಂಭವಾಗಿದೆ. ಒಳ್ಳೆಯ ವ್ಯವಸ್ಥೆ ಇದೆ. ಅದರಲ್ಲಿ ಕುಳಿತು ಹೇಗೆ ಆಡಳಿತ ಮಾಡಬೇಕು ಎನ್ನುವುದು ಮುಖ್ಯ. ಪ್ರತೀ ನಿರ್ಣಯ ಬಡ ರೈತನಿಗೆ ಅನುಕೂಲವಾಗಬೇಕು. ಹಾಲು ಮಾರುವವ ಎಷ್ಟೇ ಪ್ರಾಮಾಣಿಕವಾಗಿದ್ದರೂ ಹಾಲಿನಲ್ಲಿ ನೀರು ಹಾಕಿದ್ದೀಯಾ ಎಂದು ಕೇಳುತ್ತಾರೆ. ಆಲ್ಕೋಹಾಲಿನವರು ಹಾಗೇ ಕೊಟ್ಟರೂ ನೀರು ಹಾಕಿಕೊಂಡು ಕುಡಿಯುತ್ತಾರೆ. ಹಾವೇರಿಯಲ್ಲಿ ಮೆಗಾ ಡೈರಿ ಉದ್ಘಾಟನೆಯಾದ ದಿನ ಅತ್ಯಂತ ಸಂತೋಷವಾಗಲಿದೆ. ರೈತರ ಮುಖದಲ್ಲಿ ನಗು ಇರಬೇಕು. ರೈತ ರೇಷ್ಮೆ ಅಂಗಿ, ರೇಷ್ಮೆ ಧೋತರಾ ತೊಟ್ಟಿರಬೇಕು. ಕಾಲಾಗ ಝುರಕಿ ಚಪ್ಪಲಿ ಹಾಕಿರಬೇಕು. ರೈತ ನಕ್ಕೊಂತ ಇರಬೇಕು. ಆಗ ನಮ್ಮ ದೇಶ ಉದ್ಧಾರ ಆಗಿದೆ ಅಂತ ಅರ್ಥ ಎಂದಿದ್ದಾರೆ.

    ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ಶಾಸಕ ಬಸವರಾಜ್ ಶಿವಣ್ಣನವರ್, ಶ್ರೀನಿವಾಸ್ ಮಾನೆ, ಪ್ರಕಾಶ್ ಕೋಳಿವಾಡ, ಮಾಜಿ ಶಾಸಕ ಎಸ್.ಆರ್ ಪಾಟೀಲ್, ವೀರುಪಾಕ್ಷಪ್ಪ ಬಳ್ಳಾರಿ, ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್, ಉಪಾಧ್ಯಕ್ಷ ಉಜ್ಜನಗೌಡ ಮಾವೀನತೋಪ ಸೇರಿ ಹಲವರು ಉಪಸ್ಥಿತರಿದ್ದರು.

  • ಮಂಗಳೂರು ಬ್ಯಾಂಕ್‌ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?

    ಮಂಗಳೂರು ಬ್ಯಾಂಕ್‌ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?

    ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಹಗಲು ದರೋಡೆ ಪ್ರಕರಣ (Kotekar Cooperative Bank Robbery) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ 5 ನಿಮಿಷದಲ್ಲಿ ಹಣ, ಚಿನ್ನದ ಮೂಟೆ ಕಟ್ಟಿಕೊಂಡು ಹೋಗಿದ್ದ ಖದೀಮರ ಮಾಸ್ಟರ್ ಪ್ಲ್ಯಾನ್‌ ಏನು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

    ಬ್ಯಾಂಕ್‌ನಲ್ಲಿ ಲೂಟಿ ಮಾಡಿದ ಡಕಾಯಿತರು ಕೋಟೆಕಾರು ಜಂಕ್ಷನ್‌ನಿಂದ ಮುಖ್ಯರಸ್ತೆಗೆ ಹೋಗಿ ಅಲ್ಲಿಂದ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ದರೋಡೆ ವೇಳೆ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಕಸಿದಿದ್ದ ಕಿಡಿಗೇಡಿಗಳು, ಮಂಗಳೂರು (Mangaluru) ನಗರವನ್ನು ಸುತ್ತಿ ಕದ್ರಿ ರಸ್ತೆಯ ಬಳಿ ಮೊಬೈಲ್ ಎಸೆದಿದ್ದಾರೆ. ಇದನ್ನೂ ಓದಿ: ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ

     

    1 ಕಾರ್ ಮಂಗಳೂರಿನ ಕಡೆಗೆ ಹೋದರೆ ಇನ್ನೊಂದು ಕಾರು ಚಿನ್ನಾಭರಣ ಸಮೇತ ಕೇರಳ ಕಡೆಗೆ ಹೋಗಿದೆ. ಕಾರಿಗೆ ಬೆಂಗಳೂರು ನಂಬರ್ ಪ್ಲೇಟ್ ಅಂಟಿಸಿದ್ದಾರೆ. ತಲಪಾಡಿ ಟೋಲ್ ಗೇಟ್‌ನಲ್ಲಿ 150 ರೂಪಾಯಿ ಟೋಲ್ ಕಟ್ಟಿದ್ದಾರೆ. ಈ ಟೋಲ್ ಗೇಟ್‌ನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರ 2 ತಂಡ ಕಾಸರಗೋಡು, ಕೇರಳದತ್ತ ಹೋಗಿವೆ. ಕೇರಳ ತಲುಪಿದ್ದ ದರೋಡೆಕೋರರು ಬೋಟ್ ಮೂಲಕ ತಮಿಳುನಾಡು ತಲುಪಿರುವ ಶಂಕೆಯೂ ವ್ಯಕ್ತವಾಗಿದೆ. ಅಲ್ಲದೇ ನಕಲಿ ಇಡಿ ಅಧಿಕಾರಿಗಳ ಹೆಸರಲ್ಲಿ ಬೀಡಿ ವ್ಯಾಪಾರಿಗೆ ವಂಚಿಸಿದ್ದ ಗ್ಯಾಂಗೇ ಈ ಕೃತ್ಯವನ್ನು ಎಸಗಿರುವ ಅನುಮಾನವಿದೆ.

     

    ಬ್ಯಾಂಕ್ ದರೋಡೆಯಾದ ಬೆನ್ನಲ್ಲೇ ಆತಂಕಕ್ಕೊಳಗಾದ ಗ್ರಾಹಕರು ಬ್ಯಾಂಕ್ ಮುಂದೆ ಜಮಾಯಿಸಿದ್ದರು. ನಮ್ಮ ಚಿನ್ನ, ಹಣ ನಮಗೆ ಕೊಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ನವರ ನಿರ್ಲಕ್ಷ್ಯದಿಂದಲೇ ಈ ದರೋಡೆ ನಡೆದಿದೆ. ಅವರ ಕೈವಾಡವೂ ಇರಬಹುದು ಅಂತ ಗ್ರಾಹಕರು ಆರೋಪಿಸಿದ್ದಾರೆ.

     

  • ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ಸಿಎಂ ಪ್ಲ್ಯಾನ್

    ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ಸಿಎಂ ಪ್ಲ್ಯಾನ್

    ಮೈಸೂರು: ಕ್ಷೇತ್ರದಲ್ಲಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ (Siddaramaiah)ವರ್ಸಸ್ ಜಿ.ಟಿ ದೇವೇಗೌಡರ (G.T Devegowda) ಸಮರ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಜಿಟಿಡಿ ತೊಡೆ ತಟ್ಟಿ ನಿಂತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ (Cooperative Bank) ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ಸಿಎಂ ತಂತ್ರವನ್ನು ಉಲ್ಟಾ ಮಾಡುವುದಾಗಿ ಜಿಟಿಡಿ ಸವಾಲು ಹಾಕಿದ್ದಾರೆ.

    ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಎಂಡಿಸಿಸಿ ಬ್ಯಾಂಕ್ ಚುನಾವಣೆ ಈಗ ದಿಢೀರ್ ಮುಂದೂಡಲಾಗಿದೆ. ಚುನಾವಣೆ ಘೋಷಣೆ ಮಾಡಿದ್ದ ಜಿಲ್ಲಾಧಿಕಾರಿಗಳು ದಿಢೀರ್ ಆದೇಶ ಹಿಂತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿ ಗೆದ್ದಿದ್ದ ಜಿಟಿಡಿ, ಈಗ ಮೈಸೂರು ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಸಿಎಂ ವಿರುದ್ಧ ಸಮರ ಆರಂಭಿಸಿದ್ದಾರೆ. ಕಳೆದ ಬಾರಿ ಸಿಎಂ ಆಗಿದ್ದಾಗಲು ಇದೆ ರೀತಿ ಪ್ಲಾನ್ ಮಾಡಿದ್ದರು. ಆಗಲೂ ಅದು ಯಶಸ್ವಿಯಾಗಿರಲಿಲ್ಲ. ಈಗ ಸಿಎಂ ಮಾಡಿರುವ ಪ್ಲಾನ್‍ನ್ನು ಸವಾಲಾಗಿ ಸ್ವೀಕರಿಸಿರುವ ಅವರು ಈ ಬಾರಿಯ ಸಹಕಾರ ಕ್ಷೇತ್ರದಲ್ಲಿ ಗೆಲ್ಲುವ ಶಪಥ ಮಾಡಿದ್ದಾರೆ.

    ಈ ಬಾರಿಯು ಆರು ತಿಂಗಳು ಕಾಲ ಚುನಾವಣೆ ಮುಂದೂಡಲು ಸಿಎಂ ಪ್ಲಾನ್ ಮಾಡಿದ್ದಾರೆ. ಸಹಕಾರಿಗಳು ನಮ್ಮ ಜೊತೆ ಇದ್ದಾರೆ. ಎಷ್ಟೇ ದಿನದ ನಂತರ ಚುನಾವಣೆ ನಡೆದರೂ ಈ ಕ್ಷೇತ್ರದಲ್ಲಿ ನಾನು ಪಾರುಪಥ್ಯ ಸಾಧಿಸುತ್ತೇನೆ ಎಂದು ಜಿಟಿಡಿ ಹೇಳಿದ್ದಾರೆ. ಇದನ್ನೂ ಓದಿ: ವಿಜಯೇಂದ್ರಗೆ ಹಾರ ಹಾಕಿ, ಶಾಲು ಹೊದಿಸಿ ತಬ್ಬಿಕೊಂಡು ಶುಭಕೋರಿದ ಸಿ.ಟಿ.ರವಿ

  • ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ಕನ್ನ ಹಾಕಿದ ಖದೀಮರು!

    ಮಹಿಳಾ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ಕನ್ನ ಹಾಕಿದ ಖದೀಮರು!

    ವಿಜಯಪುರ: ಇಲ್ಲಿನ ಬೆಂಡಿಗೇರಿ ಗಲ್ಲಿಯಲ್ಲಿ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ಗೆ ಖದೀಮರು ಕನ್ನಾ ಹಾಕಿದ ಘಟನೆ ನಡೆದಿದೆ.

    ಬೆಲೆಬಾಳುವ ವಸ್ತುಗಳು ಸೇರಿದಂತೆ ನಗದು ದೋಚಿಕೊಂಡು ಖದೀಮರು ಪರಾರಿಯಾಗಿದ್ದಾರೆ. ನಗರದ ಕ್ರೆಡಿಟ್ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪೂಜೆ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಕೆರೆಯಲ್ಲಿ ಸಿಲುಕಿದ್ದ ಪಕ್ಷಿ ರಕ್ಷಿಸಲು ಹೋಗಿ ಪ್ರಾಣಬಿಟ್ಟ ಯುವಕ!

    ಕಳ್ಳರು ತಡರಾತ್ರಿ ಬಾಗಿಲಿನ ಬೀಗ ಮುರಿದು ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ

  • ಎಲ್ಲ ಸಹಕಾರಿ ಬ್ಯಾಂಕುಗಳು ಆರ್‌ಬಿಐ ವ್ಯಾಪ್ತಿಗೆ  – ಕೇಂದ್ರದಿಂದ ಸುಗ್ರೀವಾಜ್ಞೆ

    ಎಲ್ಲ ಸಹಕಾರಿ ಬ್ಯಾಂಕುಗಳು ಆರ್‌ಬಿಐ ವ್ಯಾಪ್ತಿಗೆ – ಕೇಂದ್ರದಿಂದ ಸುಗ್ರೀವಾಜ್ಞೆ

    ನವದೆಹಲಿ: ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಎಲ್ಲ ಸಹಕಾರಿ ಬ್ಯಾಂಕುಗಳು ಇನ್ನು ಮುಂದೆ ರಿಸರ್ವ್‌ ಬ್ಯಾಂಕ್‌ ಅಡಿಯಲ್ಲಿ ಬರಲಿವೆ.

    ಇಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಸಭೆ ನಡೆಯಿತು. ಈ ವೇಳೆ ಕ್ಯಾಬಿನೆಟ್‌ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ನೀಡಿತು.

    ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ – 2020 ಈ ವರ್ಷದ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿತ್ತು. ಆದರೆ ಕೋವಿಡ್‌ 19ನಿಂದಾಗಿ ಅಧಿವೇಶನವನ್ನು ಮುಂದೂಡಿದ್ದರಿಂದ ಮಸೂದೆ ಪಾಸ್‌ ಆಗಿರಲಿಲ್ಲ. ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇರಿಸಿರುವ ಗ್ರಾಹಕರ ಹಿತವನ್ನು ಕಾಯಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ವಿಡಿಯೋ ಕನ್ಫರೆನ್ಸ್‌ ಮೂಲಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಕಾಶ್‌ ಜಾವಡೇಕರ್‌, ಇನ್ನು ಮುಂದೆ 1,482 ನಗರ ಸಹಕಾರ ಬ್ಯಾಂಕುಗಳು ಮತ್ತು 58 ರಾಜ್ಯ ಸಹಕಾರಿ ಬ್ಯಾಂಕುಗಳು ಆರ್‌ಬಿಐ ನಿಗಾದಲ್ಲಿ ಕೆಲಸ ಮಾಡಲಿದೆ ಎಂದು ಎಂದು ತಿಳಿಸಿದರು.

    ರಾಷ್ಟ್ರಪತಿಗಳು ಸುಗ್ರೀವಾಜ್ಞೆಗೆ ಸಹಿ ಹಾಕಿದ ದಿನದಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. ಕಳೆದ ವರ್ಷ ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂನಲ್ಲಿ ನಡೆದ ಅವ್ಯವಹಾರ ಬೆಳಕಿಗೆ ಬಂದ ನಂತರ ಗ್ರಾಹಕರ ಹಿತವನ್ನು ಸರ್ಕಾರ ಕಾಪಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವೆ ಆರ್‌ಬಿಐ ಅಡಿಯಲ್ಲಿ ಸಹಕಾರಿ ಬ್ಯಾಂಕುಗಳು ತರಲಾಗುವುದು ಎಂದು ತಿಳಿಸಿದ್ದರು.

  • ಬೆಳಗಾವಿ ಆಯ್ತು, ಈಗ ಹಾಸನ ಸರದಿ- ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಸಂಘರ್ಷ!

    ಬೆಳಗಾವಿ ಆಯ್ತು, ಈಗ ಹಾಸನ ಸರದಿ- ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್, ಜೆಡಿಎಸ್ ಸಂಘರ್ಷ!

    ಹಾಸನ: ಬೆಳಗಾವಿ ಆಯ್ತು, ಈಗ ಹಾಸನ ಸರದಿ. ಚನ್ನರಾಯಪಟ್ಟಣ ತಾಲೂಕಿನ ಕುಂದೂರು ಮಠ ಗ್ರಾಮದ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲೂ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಂಘರ್ಷ ಏರ್ಪಟ್ಟಿದೆ.

    ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ, ಪುತ್ರ ಸೂರಜ್ ಅಧಿಕಾರ ಉಳಿಸಿಕೊಳ್ಳಲು ಆರು ಮಂದಿ ಸದಸ್ಯರ ಸಹಿಯನ್ನು ಪೋರ್ಜರಿ ಮಾಡಿದ್ದಾರೆಂದು ಆರೋಪಿಸಿ ಸಹಕಾರಿ ಬ್ಯಾಂಕ್‍ನ ಇತರೆ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    13 ಮಂದಿ ಸದಸ್ಯರನ್ನು ಹೊಂದಿರುವ ಈ ಸಹಕಾರಿ ಸಂಘ ಜೆಡಿಎಸ್ ಹಿಡಿತದಲ್ಲಿತ್ತು. ಆದರೆ ಕೆಲ ದಿನಗಳ ಹಿಂದೆ ಹಾಲಿ ಅಧ್ಯಕ್ಷ ಜೆಡಿಎಸ್‍ನ ರವೀಶ್, ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಂಘವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ರೇವಣ್ಣ ಆಡಳಿತಾವಧಿ ಮುಗಿಯುವುದಕ್ಕೆ ಇನ್ನೂ ಎರಡು ವರ್ಷ ಬಾಕಿ ಇರುವಂತೆ ಸೂಪರ್‌ಸೀಡ್‌ ಮಾಡಿ ನಿಯಂತ್ರಿಸಲು ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿಯೇ 6 ಮಂದಿ ಸದಸ್ಯರ ಸಹಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಮತ್ತು ಸೂರಜ್ ಈ ಪ್ರಕರಣದಲ್ಲಿ ಭಾಗಿ ಎಂದು ಆರೋಪಿಸಿರುವ ಸಂಘದ ಇತರೆ ಸದಸ್ಯರು ಇದು ಅಸಂವಿಧಾನಿಕ ಎಂದು ಪ್ರತಿಭಟನೆ ನಡೆಸಿದ್ದಾರೆ.

    ಸದಸ್ಯರನ್ನು ತಮ್ಮ ಮನೆಗೆ ಕರೆದುಕೊಂಡು ಒತ್ತಾಯ ಪೂರ್ವಕವಾಗಿ ನಿಯಮಮೀರಿ ಅವರ ಸಹಿಯನ್ನು ಪಡೆದಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪ. ಹಾಲಿ ಅಧ್ಯಕ್ಷ ರವೀಶ್ ಮತ್ತು ಇತರೆ ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದು, ಸಚಿವರು ಹಾಗೂ ಸೂರಜ್ ರೇವಣ್ಣ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

    ಡಿಕೆ ಸಹೋದರರ ಆಪ್ತರ ಮನೆ, ಕಚೇರಿ ಗಳ ಮೇಲೆ ಸಿಬಿಐ ದಾಳಿ

    ಬೆಂಗಳೂರು: 500, 1 ಸಾವಿರ ರೂ. ನೋಟು ನಿಷೇಧಗೊಂಡ ಸಮಯದಲ್ಲಿ ಹಣ ವಿನಿಮಯ ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಡಿಕೆ ಸಹೋದರರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿದೆ.

    ನಿನ್ನೆಯೇ ಸಿಬಿಐ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಸಿಬಿಐ ಅಧಿಕಾರಿಗಳು ಇಂದು ಕನಕಪುರ, ರಾಮನಗರ, ಯಶವಂತಪುರ, ಬಸವನಗುಡಿ, ನೆಲಮಂಗಲ ಸೇರಿದಂತೆ ಹಲವು ಕಡೆ ದಾಳಿ ಮಾಡಿದ್ದಾರೆ.

    ಸರ್ಕಾರಿ ಬ್ಯಾಂಕ್‍ನಲ್ಲಿ ನಡೆದಿದ್ದ 10 ಲಕ್ಷ ಹಣ ಬದಲಾವಣೆ ಕುರಿತು ದಾಳಿ ನಡೆಸಿರುವ ಸಿಬಿಐ, ಸರ್ಕಾರಿ ಬ್ಯಾಂಕ್ ನ ಇಬ್ಬರು ಮ್ಯಾನೇಜರ್ ಗಳ ಮನೆ ಹಾಗೂ ಕಚೇರಿ ಮೇಲೆ, ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿಗಳ ಮನೆ ಮೇಲೆ ಕೂಡ ದಾಳಿ ನಡೆಸಿದೆ. 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿಗೊಳಗಾಗಿರುವ ಎಲ್ಲರೂ ಡಿಕೆ ಸಹೋದರರ ಆಪ್ತರಾಗಿದ್ದಾರೆ.

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ ಸಂಸದ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರು 11 ಮಂದಿ ಆಪ್ತರ ಮೇಲೆ ಸಿಬಿಐ, ಇಡಿ ಮತ್ತು ಐಟಿ ಮೂಲಕ ಕೇಸ್ ದಾಖಲಿಸಿ ಸರ್ಚ್ ವಾರೆಂಟ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿನ್ನೆಯೇ ಸರ್ಚ್ ವಾರೆಂಟ್ ಪಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದರು.

    ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ಹೆದರುವುದಿಲ್ಲ ಎದುರಿಸಲು ಸಿದ್ಧರಿದ್ದೇವೆ. ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ ಅಕ್ರಮ ಮಾಡಿಲ್ಲ. ಸುಳ್ಳು ಕೇಸ್ ದಾಖಲಿಸಿ ಧ್ವನಿಯನ್ನು ಅಡಗಿಸುತ್ತೇವೆ ಅಂತ ಅಂದುಕೊಂಡಿದ್ದಲ್ಲಿ ಅದು ಬಿಜೆಪಿಯವರ ಭ್ರಮೆ ಎಂದು ಹೇಳಿದರು.