Tag: Coonoor

  • ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬ್ರಿಟಿಷರ ರೈಲಿನಲ್ಲಿ ಊಟಿ ರೌಂಡ್ಸ್‌!

    ಬುಲೆಟ್‌ ರೈಲು ಬಗ್ಗೆ ನೀವು ಕೇಳಿರಬಹುದು. ಸೆಮಿ-ಹೈ-ಸ್ಪೀಡ್‌ ರೈಲಿನಲ್ಲಿ ನೀವು ಸಂಚರಿಸಿರಬಹುದು. ಆದರೆ ಮೀಟರ್‌ ಗೇಜ್‌ ರೈಲಿನಲ್ಲಿ ಸಂಚರಿಸಬೇಕಿದ್ದಲ್ಲಿ ನೀವು ಊಟಿಗೆ ಬರಬೇಕು. ಮೀಟರ್‌ ಗೇಜ್‌ ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಊಟಿ ಪ್ರವಾಸ ಕಂಪ್ಲೀಟ್‌ ಆಗಿದೆ ಅಂತ ಹೇಳಬಹುದು.

    ಈಗ ನಾವೆಲ್ಲ ಸಂಚರಿಸುತ್ತಿರುವುದು ಬ್ರಾಡ್‌ ಗೇಜ್‌ ರೈಲಿನಲ್ಲಿ. ಈ ರೈಲಿನ ಹಳಿಯ ಅಗಲ1.676 ಮೀಟರ್‌(5.4 ಅಡಿ). ಆದರೆ ಮೀಟರ್‌ ಗೇಜ್‌ ಹಳಿಯ ಅಗಲ ಕೇವಲ 1 ಮೀಟರ್‌(3.2 ಅಡಿ) ಮಾತ್ರ. ಊಟಿಯಿಂದ ಮೆಟ್ಟುಪಾಳ್ಯಂವರೆಗೆ ಈ ಮೀಟರ್‌ ಗೇಜ್‌ ರೈಲು ಸಂಚರಿಸುತ್ತದೆ. ಕೂನೂರಿನಲ್ಲಿರುವ ಪ್ರವಾಸಿ ತಾಣಕ್ಕೆ ತೆರಳಲು ವಾಹನದ ಮೂಲಕ ಹೋಗಬಹುದಾದರೂ ಈ ರೈಲಿನಲ್ಲಿ ಸಂಚರಿಸಿದರೆ ಸಿಗುವ ಮಜಾವೇ ಬೇರೆ.

    ಊಟಿ ಪ್ರವಾಸ ಯಶಸ್ವಿಯಾಗಬೇಕಾದರೆ ಮೊದಲೇ ನೀವು ಬಹಳ ಮುಖ್ಯವಾದ ಕೆಲಸ ಮಾಡಬೇಕು. ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಹೋಗಿ 15-20 ದಿನದ ಮೊದಲೇ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕಾಗುತ್ತದೆ. ಊಟಿ-ಕೂನೂರು-ಊಟಿಗೆ ಒಬ್ಬರಿಗೆ 325 ರೂ. ಟಿಕೆಟ್‌ ದರವಿದೆ.

    ಊಟಿಯಿಂದ ಕುನೂರಿಗೆ 21 ಕಿ.ಮೀ ದೂರವಿದೆ. ಒಟ್ಟು 1:15 ನಿಮಿಷ ಪ್ರಯಾಣ. ರೈಲಿನಲ್ಲಿ ಎದುರು ಬದುರು ಕುಳಿತುಕೊಳ್ಳಬೇಕು. ಒಂದು ಸೀಟ್‌ನ ಸಾಲಿನಲ್ಲಿ 4 ಜನ ಮಾತ್ರ ಕುಳಿತುಕೊಳ್ಳಬಹುದು. ಸಣ್ಣದಾಗಿರುವ 3 ಸುರಂಗದಲ್ಲಿ ಸಾಗುವ ಈ ರೈಲಿನಲ್ಲಿ ಟೀ ಎಸ್ಟೇಟ್‌ಗಳನ್ನು ನೋಡಬಹುದು. ನೇರವಾಗಿ ಬೆಳೆದಿರುವ ನೀಲಗಿರಿ ಮರಗಳಿರುವ ಕಾಡನ್ನು ವೀಕ್ಷಿಸುವುದು ಕಣ್ಣಿಗೆ ಹಬ್ಬ. ಪ್ರಕೃತಿ ಸೌಂದರ್ಯವನ್ನು ಅನುಭವಿಸುವವರ ನೆನಪಿನಲ್ಲಿ ಉಳಿಯುವ ರೈಲು ಪ್ರಯಾಣ ಇದು ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

    ಕೂನೂರು ರೈಲ್ವೇ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಬಾಡಿಗೆ ಕಾರು ಚಾಲಕರು ಬರುತ್ತಾರೆ. ಇಂಟರ್‌ನೆಟ್‌ನಲ್ಲಿ ಚೆಕ್‌ ಮಾಡಿದರೆ ಕೂನೂರು ಸಮೀಪವೇ ಬಹಳಷ್ಟು ಪ್ರವಾಸಿ ತಾಣಗಳಿವೆ. ಇವುಗಳನ್ನು ನೋಡಲು ಒಂದು ದಿನ ಪೂರ್ತಿ ಬೇಕಾದಿತು. ಹೆಚ್ಚಿನ ಜನರು ʼಡಾಲ್ಫಿನ್‌ ನೋಸ್‌ʼ ನೋಡಲು ತೆರಳುತ್ತಾರೆ. ಎತ್ತರದ ಘಾಟಿ ರಸ್ತೆಗಳಲ್ಲಿ ನಿಂತು ನೋಡಿದಾಗ ಹೇಗೆ ಪರಿಸರ ಕಾಣುತ್ತದೆ ಆ ರೀತಿ ವ್ಯೂ ನಿಮಗೆ ಇಲ್ಲೂ ಕಾಣುತ್ತದೆ. ಈ ಜಾಗ ವೀಕ್ಷಣೆ ಮಾಡಿದ ಟೀ ಫ್ಯಾಕ್ಟರಿಗೆ ಹೋಗಬಹುದು.

    ದೇಶದ ಮೊದಲ ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್‌) ಬಿಪಿನ್‌ ರಾವತ್‌ರಿಂದಾಗಿ ಕೂನೂರು ಸುದ್ದಿಯಲ್ಲಿತ್ತು. ರಾವತ್‌ ಅವರಿದ್ದ ಹೆಲಿಕಾಪ್ಟರ್‌ ಪತನಗೊಂಡ ಜಾಗ ಈ ಕೂನೂರು ತಾಲೂಕಿನಲ್ಲೇ ಬರುತ್ತದೆ. ರಾವತ್‌ ಅವರಿಂದ ಹೆಲಿಕಾಪ್ಟರ್‌ ಪತನಕ್ಕೆ ತಾಂತ್ರಿಕ ದೋಷ ಕಾರಣವಲ್ಲ. ಹವಾಮಾನ ವೈಪರೀತ್ಯದಿಂದ ದುರಂತ ಸಂಭವಿಸಿದೆ ಎಂದು ಸೇನೆಯ ತನಿಖಾ ತಂಡ ವರದಿ ನೀಡಿತ್ತು. ಈ ವರದಿ ನಿಜವೂ ಹೌದು. ಇಲ್ಲಿನ ಹವಾಮಾನ ಹೇಗೆ ದಿಢೀರ್‌ ಬದಲಾಗುತ್ತದೆ ಅಂದರೆ ಒಮ್ಮೆ ಬೆಟ್ಟ ದೂರದಿಂದ ಕಾಣುತ್ತಿರುತ್ತದೆ. ಕೆಲ ನಿಮಿಷದಲ್ಲಿ ಆ ಬೆಟ್ಟ ನಿಮ್ಮ ಕಣ್ಣಿನಿಂದ ಮರೆ ಆಗಿರುತ್ತದೆ. ಅಷ್ಟೊಂದು ಮಂಜು ಆವರಿಸಿರುತ್ತದೆ. ಇದನ್ನೂ ಓದಿ: ರಾವತ್ ಹೆಲಿಕಾಪ್ಟರ್ ಪತನಕ್ಕೆ ಮೋಡ ಕಾರಣ: ಭಾರತೀಯ ವಾಯುಪಡೆ

    ಮುಗಿಸುವ ಮುನ್ನ ಈ ಮೀಟರ್‌ ಗೇಜ್‌ ರೈಲನ್ನು ಆರಂಭಿಸಿದವರು ಬ್ರಿಟಿಷರು. 1854ರಿಂದ ಕಾಮಗಾರಿ ಆರಂಭವಾದರೂ ಪೂರ್ಣಗೊಂಡದ್ದು 1899ಕ್ಕೆ. 2005ರಲ್ಲಿ ಯುನೆಸ್ಕೋ ನೀಲಗಿರಿ ರೈಲ್ವೇಯನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ. ಮೀಟರ್‌ ಗೇಜ್‌ ರೈಲು ಊಟಿಯಲ್ಲಿ ಮಾತ್ರ ಇಲ್ಲ. ಭಾರತದ ಹಲವು ಕಡೆ ಸೇವೆಯಲ್ಲಿದೆ.

    – ಅಶ್ವಥ್‌ ಸಂಪಾಜೆ

    Live Tv
    [brid partner=56869869 player=32851 video=960834 autoplay=true]

  • ಎಲ್ಲರೊಂದಿಗೆ ನಗುನಗ್ತಾ ಮಾತಾಡ್ತಿದ್ದ ಮಗನ ನಗು ಈಗ ನಮ್ಮಿಂದ ದೂರವಾಗಿದೆ: ಪೃಥ್ವಿ ಸಿಂಗ್ ಚೌಹಾಣ್ ತಂದೆ ಕಣ್ಣೀರು

    ಎಲ್ಲರೊಂದಿಗೆ ನಗುನಗ್ತಾ ಮಾತಾಡ್ತಿದ್ದ ಮಗನ ನಗು ಈಗ ನಮ್ಮಿಂದ ದೂರವಾಗಿದೆ: ಪೃಥ್ವಿ ಸಿಂಗ್ ಚೌಹಾಣ್ ತಂದೆ ಕಣ್ಣೀರು

    – ಮಂಗಳವಾರವಷ್ಟೇ ಮಗನ ಜೊತೆ ಮಾತಾಡಿದ್ದೆ

    ಚೆನೈ: ತಮಿಳುನಾಡಿನ ಕುನೂರಿನಲ್ಲಿ ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಮೃತಪಟ್ಟ 13 ಜನರಲ್ಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಒಬ್ಬರು.

    42 ವರ್ಷದ ಚೌಹಾಣ್ ಆಗ್ರಾದಲ್ಲಿ ಹುಟ್ಟಿ ಬೆಳೆದವರು. ಇವರು ಐವರು ಮಕ್ಕಳಲ್ಲಿ ಕೊನೆಯವರಾಗಿದ್ದು 2007ರಲ್ಲಿ ವಿವಾಹವಾದರು. ಇವರಿಗೆ 12 ವರ್ಷದ ಮಗಳು ಮತ್ತು 9 ವರ್ಷದ ಮಗ ಇದ್ದಾರೆ. ಇದೀಗ ಚೌಹಾಣ್‍ರನ್ನು ಕಳೆದುಕೊಂಡು ಕಣ್ಣೀರಾಗಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ

    ವೃತ್ತಿ ಜೀವನ:
    ಮಿಲಿಟರಿ ವೃತ್ತಿ ಜೀವನವು ಗಣ್ಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‍ಡಿಎ)ಯಲ್ಲಿ ಆರಂಭವಾಯಿತು. ಅಲ್ಲಿ ಉತ್ತೀರ್ಣರಾದ ನಂತರ 2000 ಇಸವಿಯಲ್ಲಿ ಭಾರತೀಯ ವಾಯುಪಡೆಗೆ ಸೇರಿದರು. ಬಳಿಕ 2008ರಲ್ಲಿ ವಾಯುಪಡೆಗೆ ಸೇರ್ಪಡೆಯಾದರು. 2015ನಿಂದ ವಿಂಗ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಎಮ್‍ಐ-17ವಿ5 ಹೆಲಿಕಾಪ್ಟರ್‍ನಲ್ಲಿ ಪೈಲೆಟ್ ಇನ್ ಕಮಾಂಡರ್ ಆಗಿದ್ದರು. ಇದನ್ನೂ ಓದಿ: ತೀರಾ ಕೆಳಮಟ್ಟದಲ್ಲೇ ಹಾರಾಡ್ತಿದ್ದ ಹೆಲಿಕಾಪ್ಟರ್ ಕೊನೆಯ ದೃಶ್ಯ ಲಭ್ಯ

    ದುಖಃದಲ್ಲಿ ಕುಟುಂಬ:
    ಸುರೇಂದ್ರ ಸಿಂಗ್ ಅವರು ತಮ್ಮ ಮಗ ಚೌಹಾಣ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಐದು ಜನ ಮಕ್ಕಳಲ್ಲಿ ಕಿರಿಯ ಮತ್ತು ಒಬ್ಬನೇ ಮಗ. ಎಲ್ಲರೊಂದಿಗೆ ನಗು ನಗುತ್ತಾ ಮಾತನಾಡುತ್ತಿದ್ದ ಆದರೆ ಈಗ ಆ ನಗು ನಮ್ಮಿಂದ ದೂರ ಸರಿದಿದೆ ಎಂದು ಕಣ್ಣೀರಾಕಿದರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾಗಿರುವ ಸಾಯಿ ತೇಜ್‍ಗೆ 27 ವರ್ಷ!

    ಮಂಗಳವಾರ ರಾತ್ರಿಯಷ್ಟೇ ಮಗನೊಂದಿಗೆ ಮಾತನಾಡಿದೆ. ಆದರೆ ಬುಧವಾರ ಮಧ್ಯಾಹ್ನ ಅವನ ಸಾವಿನ ಸುದ್ದಿ ತೀವ್ರ ನೋವು ನೀಡಿದೆ. ಮಗನ ಸಾವಿನ ಬಗ್ಗೆ ಇನ್ನೂ ವೈಯುಕ್ತವಾಗಿ ತಿಳಿಸಿಲ್ಲ. ಆದರೆ ಮುಂಬೈನಲ್ಲಿ ನನ್ನ ಹಿರಿಯ ಮಗಳು ಮಧ್ಯಾಹ್ನ ಟಿವಿಯಲ್ಲಿ ಹೆಲಿಕಾಪ್ಟರ್ ಅಪಘಾತದ ಸುದ್ದಿಯನ್ನು ನೋಡಿದ್ದಾಳೆ ಎಂದು ಗದ್ಗದಿತರಾದರು. ಇತ್ತ ಪೃಥ್ವಿ ತಾಯಿ ಸುಶೀಲಾದೇವಿ ಕೂಡ ಮಗನ ಅಗಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪೃಥ್ವಿ ತಂದೆ, ತಾಯಿ, ಪತ್ನಿ, ಮಕ್ಕಳು, ಕುಟುಂಬದವರನ್ನು ಅಗಲಿದ್ದಾರೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ