Tag: Coolie Cinema

  • ಕೂಲಿ ವೀಕ್ಷಣೆಗಾಗಿ 100 ಕಿ.ಮೀ. ವೇಗದಲ್ಲಿ ಚಾಲನೆ – ಡಿವೈಡರ್‌ಗೆ ಡಿಕ್ಕಿ, ಇಬ್ಬರು ಸಾವು

    ಕೂಲಿ ವೀಕ್ಷಣೆಗಾಗಿ 100 ಕಿ.ಮೀ. ವೇಗದಲ್ಲಿ ಚಾಲನೆ – ಡಿವೈಡರ್‌ಗೆ ಡಿಕ್ಕಿ, ಇಬ್ಬರು ಸಾವು

    – ಪವಾಡ ಸದೃಶ ಓರ್ವ ಪ್ರಾಣಾಪಾಯದಿಂದ ಪಾರು

    ಹಾಸನ: ಕೂಲಿ ಸಿನಿಮಾ (Coolie Cinema) ನೋಡಲು 110 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು (Arakalagudu) ತಾಲೂಕಿನ ಬಸವಾಪಟ್ಟಣದ ಸಮೀಪದಲ್ಲಿ ನಡೆದಿದೆ.

    ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ (25), ಬಡಿಗೆ ಕೆಲಸ ಮಾಡುತ್ತಿದ್ದ ರಂಗನಾಥ ಪ್ರಸಾದ್ (22) ಮೃತ ಯುವಕರು.ಇದನ್ನೂ ಓದಿ: `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    ಮೈಸೂರಿನಲ್ಲಿ ಕೂಲಿ ಸಿನಿಮಾ ನೋಡಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಎಂಟು ಗಂಟೆಗೆ ಹೋಗಬೇಕಿದ್ದ ಕಾರಣ KA-53-MA-1196 ನಂಬರ್‌ನ ಕಾರಿನಲ್ಲಿ ಕೊಣನೂರು ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಗಂಟೆಗೆ 110 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಪರಿಣಾಮ ಬಸವಾಪಟ್ಟಣ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇನ್ನೂ ಅಪಘಾತದಲ್ಲಿ ಮೃತ ದರ್ಶನ್ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ

  • ಕೂಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್

    ಕೂಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್

    ಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾ ಆಗಸ್ಟ್ 14ಕ್ಕೆ ದೇಶದಾದ್ಯಂತ ತೆರೆಕಾಣಲು ರೆಡಿಯಾಗಿದೆ. ಈ ಸಿನಿಮಾ ಈಗಾಗ್ಲೇ ಟೀಸರ್ ಹಾಗೂ ಹಾಡುಗಳ ಮೂಲಕ ತಲೈವ ಫ್ಯಾನ್ಸ್ಗೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಸಿನಿಮಾ ನೋಡಿ ರಣಕೇಕೆ ಹಾಕಿ ಸಂಭ್ರಮಿಸೋಕೆ ರಜನಿ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

    ಲೊಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್ ಸಿಕ್ಕಿದೆ. ರಜನಿಕಾಂತ್ ನಟನೆಯ ಕೂಲಿ ಸಿನಿಮಾವಷ್ಟೇ ಅಲ್ಲ ಈ ಹಿಂದೆ 1982ರಲ್ಲಿ ತೆರೆಕಂಡ `ಪುದುಕವಿದೈ’ ಚಿತ್ರಕ್ಕೆ ಹಾಗೂ `ರಂಗ’ ಸಿನಿಮಾಗಳಿಗೆ `ಎ’ ಸರ್ಟಿಫಿಕೇಟ್ ದೊರೆತಿತ್ತು. ನಂತರ 1985ರಲ್ಲಿ `ನಾನ್ ಸಿಗಪ್ಪು ಮನಿದನ್’ ಚಿತ್ರಕ್ಕೂ ಕೂಡಾ `ಎ’ ಸರ್ಟಿಫಿಕೇಟ್ ಸಿಕ್ಕಿತ್ತು. ಅದಾದ ಬಳಿಕ ಕೂಲಿ ಸಿನಿಮಾಗೆ `ಎ’ ಸರ್ಟಿಫಿಕೇಟ್ ಸಿಕ್ಕಿರೋದು. ಇದನ್ನೂ ಓದಿ: ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ಲೊಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವೈಯಲೆನ್ಸ್ ಹಾಗೂ ಡ್ರಗ್ಸ್ ಮಾಫಿಯಾ, ರಕ್ತಪಾತದ ಸೀನ್‌ಗಳಿರುವ ಕಾರಣದಿಂದಾಗಿ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ನೀಡಿದೆಯಂತೆ ಸೆನ್ಸಾರ್ ಮಂಡಳಿ. ನಟ ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶೃತಿ ಹಾಸನ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ.

  • 22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

    22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

    ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಬಿಡುಗಡೆ ಮುನ್ನವೇ ಭಾರೀ ಬೇಡಿಕೆಯನ್ನು ಈ ಸಿನಿಮಾ ಉಳಿಸಿಕೊಂಡಿದೆ. ಕನ್ನಡದ ನಟ ಉಪೇಂದ್ರ, ಬಾಲಿವುಡ್ ನಟ ಆಮೀರ್‌ ಖಾನ್ (Aamir Khan) ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾವನ್ನು ವಿತರಿಸಲು ನಾಮುಂದು ತಾಮುಂದು ಎನ್ನುವಂತಾಗಿದೆ.

    ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾಗಳು ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತವೆ. ಸಿನಿಮಾ ಎವರೇಜ್ ಅಂದರೂ, ಮೊದಲ ಒಂದು ವಾರ ಗಲ್ಲಾಪೆಟ್ಟಿಗೆಯನ್ನು ತುಂಬಿಸುತ್ತವೆ. ಹಾಗಾಗಿ ರಜನಿ ಸಿನಿಮಾಗಳನ್ನು ವಿತರಿಸಲು ಕರ್ನಾಟಕದಲ್ಲಿ ಪೈಪೋಟಿ ನಡೆಯುತ್ತದೆ. ಕೂಲಿ ಸಿನಿಮಾಗಾಗಿಯೂ ಅಂಥದ್ದೊಂದು ಪೈಪೋಟಿ ವ್ಯಕ್ತವಾಗಿತ್ತಂತೆ.

    ಕನ್ನಡಪರ ಹೋರಾಟಗಾರ ಹಾಗೂ ನಿರ್ಮಾಪಕ ಸಾ.ರಾ ಗೋವಿಂದ್ ಹಿಂಟ್ ಕೊಟ್ಟಂತೆ ಕೂಲಿ ಸಿನಿಮಾವನ್ನು ಕರ್ನಾಟಕದಲ್ಲಿ ಬರೋಬ್ಬರಿ 22 ಕೋಟಿ ರೂಪಾಯಿ ಕೊಟ್ಟು ವಿತರಣೆ ಹಕ್ಕನ್ನು ಪಡೆದಿದ್ದಾರಂತೆ. ಹಕ್ಕು ಪಡೆದವರಿಗೆ ಈಗ ಸ್ವಲ್ಪ ಟೆನ್ಷನ್ ಶುರುವಾಗಿದೆಯಂತೆ. ಏಕರೂಪ ಟಿಕೆಟ್ ದರ ನಿಗದಿ ಆಗಿದ್ದರಿಂದ, ಅದು ಜಾರಿಗೆ ಬಂದರೆ, ಕಲೆಕ್ಷನ್ ಕಡಿಮೆ ಆಗುವ ಭಯ ಶುರುವಾಗಿದೆಯಂತೆ.