Tag: Coolie

  • `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರನ್ನ (Upendra) ಹಾಡಿ ಹೊಗಳಿದ್ದಾರೆ. ಮುಕ್ತ ವೇದಿಕೆಯಲ್ಲಿ ತಲೈವಾ ಕನ್ನಡದ ಬುದ್ಧಿವಂಥನ್ನ ಕೊಂಡಾಡಿದ್ದಾರೆ. ಈ ಘಟನೆ ನಡೆದಿದ್ದು ಕೂಲಿ (Coolie Movie) ಸಿನಿಮಾ ಪ್ರಿರಿಲೀಸ್ ಇವೆಂಟ್‌ನಲ್ಲಿ. ಚೆನೈನಲ್ಲಿ ನಡೆದ ಇವೆಂಟ್‌ನಲ್ಲಿ ಅದೇ ನೆಲದಲ್ಲೇ ಕನ್ನಡದ ಓಂ ಸಿನಿಮಾ ಕುರಿತಾಗಿ ಒಳ್ಳೆಯ ಮಾತನಾಡಿದ್ದಾರೆ. ಕಾರಣ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡ ಉಪೇಂದ್ರ ಕುರಿತು ತಲೈವಾ ಹೊಗಳಿಕೆಯ ಮಾತನ್ನಾಡಿದ್ದಾರೆ.

    ನಟನೆ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡ ಉಪೇಂದ್ರ ವಿಶ್ವಾದ್ಯಂತ ಛಾಪು ಮೂಡಿಸಿರುವ ಕನ್ನಡದ ಪ್ರತಿಭೆ. ವಿವಿಧ ಭಾಷೆಯಲ್ಲಿ ಉಪೇಂದ್ರ ನಟಿಸುತ್ತಾ ಬಂದಿದ್ದಾರೆ. ಇದೀಗ ಉಪೇಂದ್ರ ಜೊತೆ ಕೂಲಿ ಚಿತ್ರದಲ್ಲಿ ತೆರೆಹಂಚಿಕೊಂಡಿರುವ ರಜನಿಕಾಂತ್ ಉಪ್ಪಿ ಗುಣಗಾನ ಮಾಡಿರುವ ಮಾತುಗಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ತಾವು ನಟಿಸಿದ್ದ `ಭಾಷಾ ಸಿನಿಮಾಗಿಂತ ಉಪೇಂದ್ರ ನಿರ್ದೇಶಿಸಿದ್ದ ಸಿನಿಮಾ ಹತ್ತು ಪಟ್ಟು ಉತ್ತಮ ಸಿನಿಮಾ’ ಎಂದಿರುವ ರಜನಿಕಾಂತ್ ಮಾತು ಗಮನಾರ್ಹ. ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

    ಉಪೇಂದ್ರ ಕುರಿತು ರಜನಿಕಾಂತ್ ಮಾತುಗಳೇನು?
    ಭಾರತದಲ್ಲಿರುವ ಮೋಸ್ಟ್ ಇಂಟಲೆಕ್ಚುವಲ್ ಡೈರೆಕ್ಟರ್‌ಗಳಿಗೆ ಇನ್ಸಿರೇಷನ್ ಅಂದ್ರೆ ಅದು ಉಪೇಂದ್ರ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳಂ, ತಮಿಳು ಎಲ್ಲರೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು, ಕನ್ನಡದಲ್ಲಿ ಶಿವರಾಜ್‌ಕುಮಾರ್ ಆಕ್ಟ್ ಮಾಡಿದ್ದ ಓಂ ಸಿನಿಮಾವನ್ನ ಅವರೇ ನಿರ್ದೇಶನ ಮಾಡಿದ್ರು , ಈ ಸಿನಿಮಾ ಭಾಷಾ ಚಿತ್ರಕ್ಕಿಂತ ಹತ್ತುಪಟ್ಟು ಬೆಟರ್ ಸಿನಿಮಾ, ನನಗೆ ಆಕ್ಟರ್ ಉಪೇಂದ್ರಗಿಂತ ಡೈರೆಕ್ಟರ್ ಉಪೇಂದ್ರ ಇಷ್ಟ. ಈಗ ಲೋಕೇಶ್ ಕನಕರಾಜ್ ನಾನ್‌ಲೀನಿಯರ್ ಸಿನಿಮಾ ಮಾಡ್ತಿದ್ದಾರೆ, ನಾನ್‌ಲೀನಿಯರ್ ಸಿನಿಮಾಗಳನ್ನ ಆಗಲೇ ಮಾಡುತ್ತಿದ್ದವರು ಡೈರೆಕ್ಟರ್ ಉಪೆಂದ್ರ.

  • ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್

    ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್

    ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾಗೆ ದೇಶದಾದ್ಯಂತವಷ್ಟೇ ಅಲ್ಲದೇ ವಿದೇಶದಲ್ಲೂ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟ್ರೈಲರ್‌ ಹಾಗೂ ಹಾಡುಗಳ ಮೂಲಕವೇ ಹೈಪ್ ಕ್ರಿಯೇಟ್ ಮಾಡಿರೋ ಕೂಲಿ ಸಿನಿಮಾ ನಾರ್ತ್ ಅಮೆರಿಕಾದ (America) ಪ್ರೀಮಿಯರ್‌ಗೆ ಭರ್ಜರಿ ಹವಾ ಸೃಷ್ಟಿಸಿದೆ. ನಾರ್ತ್ ಅಮೆರಿಕಾದಲ್ಲಿ ಪ್ರೀಮಿಯರ್‌ಗೆ ಬುಕ್ಕಿಂಗ್ ಓಪನ್ ಆಗಿ ಕೆಲವೇ ಗಂಟೆಯಲ್ಲೇ 35 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಈ ಮೂಲಕ ಹೊಸ ದಾಖಲೆಯತ್ತ ಸಾಗಿದೆ ಕೂಲಿ.

    ಲೊಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದ ವಿಜಯ್ ದಳಪತಿ ನಟನೆಯ ಲಿಯೋ ಸಿನಿಮಾ ಇದೇ ನಾರ್ತ್ ಅಮೆರಿಕಾದ ಪ್ರೀಮಿಯರ್‌ಗೆ 30 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿತ್ತು. ಇದೀಗ ಕೂಲಿ ಸಿನಿಮಾ, ವಿಜಯ್ ದಳಪತಿ ಸಿನಿಮಾಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆಗಷ್ಟ್ 13ರಂದು ನಡೆಯಲಿರುವ ಪ್ರೀಮಿಯರ್‌ಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗ್ತಿದೆ.

    ಸೂಪರ್‌ಸ್ಟಾರ್ ರಜನಿಕಾಂತ್, ರಿಯಲ್‌ಸ್ಟಾರ್ ಉಪೇಂದ್ರ, ಅಮಿರ್ ಖಾನ್, ಸತ್ಯರಾಜ್, ಶೃತಿ ಹಾಸನ್, ರಚಿತಾ ರಾಮ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಪೂಜಾ ಹೆಗ್ಡೆ ಈ ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಲೊಕೇಶ್ ಕನಗರಾಜ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷಗಳಿವೆ. ಆಗಷ್ಟ್ 14ರಂದು ತೆರೆಗೆ ಬರಲಿರುವ ಸಿನಿಮಾವನ್ನ ನೋಡಲು ಕಾದು ಕುಳಿತಿದ್ದಾರೆ ತಲೈವ ಫ್ಯಾನ್ಸ್.

  • 22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

    22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

    ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಬಿಡುಗಡೆ ಮುನ್ನವೇ ಭಾರೀ ಬೇಡಿಕೆಯನ್ನು ಈ ಸಿನಿಮಾ ಉಳಿಸಿಕೊಂಡಿದೆ. ಕನ್ನಡದ ನಟ ಉಪೇಂದ್ರ, ಬಾಲಿವುಡ್ ನಟ ಆಮೀರ್‌ ಖಾನ್ (Aamir Khan) ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾವನ್ನು ವಿತರಿಸಲು ನಾಮುಂದು ತಾಮುಂದು ಎನ್ನುವಂತಾಗಿದೆ.

    ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾಗಳು ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತವೆ. ಸಿನಿಮಾ ಎವರೇಜ್ ಅಂದರೂ, ಮೊದಲ ಒಂದು ವಾರ ಗಲ್ಲಾಪೆಟ್ಟಿಗೆಯನ್ನು ತುಂಬಿಸುತ್ತವೆ. ಹಾಗಾಗಿ ರಜನಿ ಸಿನಿಮಾಗಳನ್ನು ವಿತರಿಸಲು ಕರ್ನಾಟಕದಲ್ಲಿ ಪೈಪೋಟಿ ನಡೆಯುತ್ತದೆ. ಕೂಲಿ ಸಿನಿಮಾಗಾಗಿಯೂ ಅಂಥದ್ದೊಂದು ಪೈಪೋಟಿ ವ್ಯಕ್ತವಾಗಿತ್ತಂತೆ.

    ಕನ್ನಡಪರ ಹೋರಾಟಗಾರ ಹಾಗೂ ನಿರ್ಮಾಪಕ ಸಾ.ರಾ ಗೋವಿಂದ್ ಹಿಂಟ್ ಕೊಟ್ಟಂತೆ ಕೂಲಿ ಸಿನಿಮಾವನ್ನು ಕರ್ನಾಟಕದಲ್ಲಿ ಬರೋಬ್ಬರಿ 22 ಕೋಟಿ ರೂಪಾಯಿ ಕೊಟ್ಟು ವಿತರಣೆ ಹಕ್ಕನ್ನು ಪಡೆದಿದ್ದಾರಂತೆ. ಹಕ್ಕು ಪಡೆದವರಿಗೆ ಈಗ ಸ್ವಲ್ಪ ಟೆನ್ಷನ್ ಶುರುವಾಗಿದೆಯಂತೆ. ಏಕರೂಪ ಟಿಕೆಟ್ ದರ ನಿಗದಿ ಆಗಿದ್ದರಿಂದ, ಅದು ಜಾರಿಗೆ ಬಂದರೆ, ಕಲೆಕ್ಷನ್ ಕಡಿಮೆ ಆಗುವ ಭಯ ಶುರುವಾಗಿದೆಯಂತೆ.

  • ರಜನಿಕಾಂತ್‌ ʻಕೂಲಿʼ ಚಿತ್ರದ ಫಸ್ಟ್‌ ಸಾಂಗ್‌ಗೆ ಮುಹೂರ್ತ ಫಿಕ್ಸ್

    ರಜನಿಕಾಂತ್‌ ʻಕೂಲಿʼ ಚಿತ್ರದ ಫಸ್ಟ್‌ ಸಾಂಗ್‌ಗೆ ಮುಹೂರ್ತ ಫಿಕ್ಸ್

    ಕಾಲಿವುಡ್ ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ (Rajinikanth) ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ʻಕೂಲಿʼ (Coolie) ಫಸ್ಟ್ ಲುಕ್‌ನಿಂದಲೇ ಗಮನ ಸೆಳೆದಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಕೂಲಿ ಸಿನಿಮಾದಲ್ಲಿ ಅತೀದೊಡ್ಡ ತಾರಾಗಣವಿದೆ. ರಿಯಲ್ ಸ್ಟಾರ್ ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶೃತಿ ಹಾಸನ್ ಸೇರಿದಂತೆ ಬಹುತಾರಾಗಣ ಈ ಸಿನಿಮಾದಲ್ಲಿದೆ.

    ಕೂಲಿ ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಜೂನ್ 25ರಂದು ಸಾಂಗ್ ರಿಲೀಸ್ ಆಗುತ್ತಿದೆ ಅನ್ನೋದು ರಿವೀಲ್ ಆಗಿದೆ. ರಜನಿಕಾಂತ್ ಪಿಆರ್ ಮ್ಯಾನೇಜರ್ ರಿಯಾಜ್ ಅಹ್ಮದ್ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಮುಂದಿನ ಆಗಸ್ಟ್‌ 25ರಂದು ಕೂಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಫಸ್ಟ್ ಲುಕ್‌ನಿಂದ, ಡಿಫರೆಂಟ್ ಮೇಕಿಂಗ್‌ನಿಂದಲೇ ಭಾರತೀಯ ಚಿತ್ರರಂಗದಲ್ಲೇ ಹವಾ ಕ್ರಿಯೇಟ್ ಮಾಡಿದೆ. ಇನ್ನು ಕನ್ನಡದ ರಿಯಲ್‌ಸ್ಟಾರ್ ಸೌತ್‌ನ ಸೂಪರ್‌ಸ್ಟಾರ್ ಜೊತೆ ನಟಿಸುತ್ತಿರೋದು ಮತ್ತೊಂದು ವಿಶೇಷ.

    ಇತ್ತೀಚೆಗೆ ರಜನಿಕಾಂತ್ ಜೈಲರ್-2 ಸಿನಿಮಾದ ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿಗೆ ಶೂಟಿಂಗ್‌ಗೆ ಬಂದ ತಲೈವ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು. ಸದ್ಯ ರಜನಿ ಫ್ಯಾನ್ಸ್ ತಂಡದಿಂದ ಗುಡ್‌ನ್ಯೂಸ್ ಸಿಕ್ಕಿದೆ.

  • ತಲೈವಾಗೆ ಯುವ ನಿರ್ದೇಶಕ ಆ್ಯಕ್ಷನ್ ಕಟ್

    ತಲೈವಾಗೆ ಯುವ ನಿರ್ದೇಶಕ ಆ್ಯಕ್ಷನ್ ಕಟ್

    ಜನಿಕಾಂತ್ ಅವರು (Rajinikanth) ‘ಕೂಲಿ’ ಮತ್ತು ‘ಜೈಲರ್ 2’ (Jailer 2) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಯುವ ನಿರ್ದೇಶಕನ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಕಾನ್ 2025: ಕತ್ತಲ್ಲಿ ಮೋದಿ ಚಿತ್ರವಿರುವ ನೆಕ್ಲೆಸ್ ಧರಿಸಿ ನಟಿ ಗುಜ್ಜರ್ ವಾಕ್!

    ತಲೈವಾಗೆ 74 ವರ್ಷವಾದ್ರೂ ಅವರಿಗುವ ಚಾರ್ಮ್, ಅಭಿಮಾನಿಗಳ ಕ್ರೇಜ್ ಇದುವರೆಗೂ ಕಮ್ಮಿಯಾಗಿಲ್ಲ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಂಟೆಂಟ್ ಹೊತ್ತು ಅವರು ಬರುತ್ತಾರೆ. ಅಂತಹದ್ದೇ ಭಿನ್ನವಾಗಿರುವ ಚಿತ್ರಕ್ಕೆ ತಲೈವಾ ಓಕೆ ಎಂದಿದ್ದಾರಂತೆ. ಅಂತೆ ಸುಂದರಣಿಕಿ, ಸರಿಪೋಧಾ ಶನಿವಾರಂ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವಿವೇಕ್ ಅತ್ರೇಯ ಈಗ ತಲೈವಾ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು

    ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳನ್ನು ಮುಗಿಸಿದ ಬಳಿಕ ವಿವೇಕ್ (Vivek Athreya) ಜೊತೆ ತಲೈವಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿದೆಯಾ ಕಾದುನೋಡಬೇಕಿದೆ.

    ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ (Coolie) ಆಗಸ್ಟ್ 14 ರಂದು ರಿಲೀಸ್ ಆಗಲಿದೆ. ‘ಜೈಲರ್ 2’ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

  • ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?

    ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಯಶಸ್ಸು ಸಿಗದೇ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಹೀಗಿರುವಾಗ ‘ಕೂಲಿ’ ಸಿನಿಮಾದಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿರುವ ಪೂಜಾ ಈಗ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.

    ಇತ್ತೀಚೆಗಷ್ಟೇ ‘ಕೂಲಿ’ (Coolie) ಚಿತ್ರತಂಡ ಪೂಜಾ ಹೆಗ್ಡೆ ಸಿನಿಮಾದ ಭಾಗವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಚಿತ್ರದಲ್ಲಿ ಸ್ಪೆಷಲ್ ಡ್ಯಾನ್ಸ್ ಮಾಡಲು ನಟಿಯನ್ನು ಸಂಪರ್ಕಿಸಿದ ಸಮಯದಲ್ಲಿ 2 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದಕ್ಕೆ ಚಿತ್ರತಂಡವು ಕೂಡ ಒಪ್ಪಿಗೆ ನೀಡಿ 2 ಕೋಟಿ ರೂ. ಸಂಭಾವನೆಯನ್ನು ಪೂಜಾಗೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಶ್ರೇಯಾ ಘೋಷಾಲ್ ಎಕ್ಸ್‌ ಅಕೌಂಟ್ ಹ್ಯಾಕ್: ಲಿಂಕ್‌ ಕ್ಲಿಕ್‌ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ

    ಇನ್ನೂ ಈ ಹಿಂದೆ ‘ಜೈಲರ್’ ಸಿನಿಮಾದಲ್ಲಿ ತಲೈವಾ ಮತ್ತು ತಮನ್ನಾ ಡ್ಯಾನ್ಸ್ ಸಖತ್ ಕಿಕ್ ಕೊಟ್ಟಿತ್ತು. ಕಾವಾಲಯ್ಯ ಸಾಂಗ್ ಸೂಪರ್ ಹಿಟ್ ಆಗಿತ್ತು. ಅದೇ ಶೈಲಿಯಲ್ಲಿ ರಜನಿಕಾಂತ್ (Rajinikanth) ಮತ್ತು ಪೂಜಾ ಹೆಗ್ಡೆ ಸಾಂಗ್ ಶೂಟ್ ಮಾಡುವ ಪ್ಲಾö್ಯನ್ ಚಿತ್ರತಂಡಕ್ಕಿದೆ. ಈ ಸಾಂಗ್ ಕೂಡ ಹಿಟ್ ಆಗಲಿದೆ ಎಂಬುದು ನಿರ್ಮಾಪಕರ ಊಹೆ.

    ಅವಕಾಶವಿದ್ದರೂ ಸಕ್ಸಸ್ ಸಿಗದೇ ಒದ್ದಾಡುತ್ತಿರುವ ಪೂಜಾ ಹೆಗ್ಡೆಗೆ ಈ ಕೂಲಿ ಸಿನಿಮಾದ ಐಟಂ ಸಾಂಗ್ ಕೆರಿಯರ್‌ನಲ್ಲಿ ತಿರುವು ನೀಡುತ್ತಾ? ಮುಂದೆ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

  • ತಲೈವಾಗೆ ‘ಯುಐ’ ವಾರ್ನರ್ ತೋರಿಸಿದ್ರಾ ರಿಯಲ್ ಸ್ಟಾರ್?- ಉಪ್ಪಿ ರಿಯಾಕ್ಷನ್

    ತಲೈವಾಗೆ ‘ಯುಐ’ ವಾರ್ನರ್ ತೋರಿಸಿದ್ರಾ ರಿಯಲ್ ಸ್ಟಾರ್?- ಉಪ್ಪಿ ರಿಯಾಕ್ಷನ್

    ಸ್ಟಾರ್ ನಟ ಉಪೇಂದ್ರ ಅವರು UI ಸಿನಿಮಾದ ಕೆಲಸದ ನಡುವೆಯೇ ರಜನಿಕಾಂತ್ (Rajanikanth) ನಟನೆಯ ಕೂಲಿ ಸಿನಿಮಾದಲ್ಲಿಯೂ ನಟಿಸುತ್ತಾ ಇದ್ದಾರೆ. ಇದರ ನಡುವೆ ‘ಯುಐ’ ಚಿತ್ರದ ವಾರ್ನರ್ (ಟ್ರೈಲರ್) ತಲೈವಾಗೆ ಉಪೇಂದ್ರ ತೋರಿಸಿದ್ದಾರಾ? ಎಂಬುದರ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

    ಇಂದು (ಡಿ.2) ನಡೆದ UI ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಮಾತನಾಡಿ, ‘ಕೂಲಿ’ (Coolie) ಸಿನಿಮಾದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಯುಐ ವಾರ್ನರ್ ಸಿದ್ಧವಾಗಿರಲಿಲ್ಲ. ಮುಂದಿನ ಶೆಡ್ಯೂಲ್‌ಗಾಗಿ ಸೆಟ್ ಹೋದಾಗ ರಜನಿಕಾಂತ್‌ಗೆ ‘ಯುಐ’ ವಾರ್ನರ್, ಗ್ಲಿಂಪ್ಸ್ ತೋರಿಸುತ್ತೇನೆ ಎಂದು ಉಪೇಂದ್ರ ಮಾತನಾಡಿದ್ದಾರೆ. ಇನ್ನೂ ಕೂಲಿ ಸಿನಿಮಾದಲ್ಲಿ ಉಪೇಂದ್ರಗೆ ಉತ್ತಮ ಪಾತ್ರ ಸಿಕ್ಕಿದೆ. ಪವರ್‌ಫುಲ್ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ.

    ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

    ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ (Upendra) ಅವರಿಗೆ ನಟನೆ ಮತ್ತು ಡೈರೆಕ್ಷನ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಕ್ರೇಜ್ ಇದೆ. ಇನ್ನೂ ಕನ್ನಡದ ಸಾಲು ಸಾಲು ಸಿನಿಮಾಗಳ ನಡುವೆ ತಲೈವಾ ಜೊತೆ ‘ಕೂಲಿ’ (Coolie) ಚಿತ್ರ ಕೂಡ ಮಾಡ್ತಿದ್ದಾರೆ. ಈಗ ‘ಯುಐ’ (UI Film) ಸುದ್ದಿಗೋಷ್ಠಿಯಲ್ಲಿ ಕೂಲಿ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ನಟ ರಿವೀಲ್ ಮಾಡಿದ್ದಾರೆ.

    ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್ ಸರ್ (Rajanikanth) ಜೊತೆ ಸಿನಿಮಾ ಮಾಡುತ್ತಿದ್ದೇನೆ. ಚಿತ್ರದಲ್ಲಿ ಒಂದೊಳ್ಳೆಯ ಪಾತ್ರ ಮಾಡ್ತಿದ್ದೀನಿ, ವಿಲನ್ ರೋಲ್ ಅಲ್ಲ ಎಂದು ಉಪೇಂದ್ರ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉಪೇಂದ್ರ ಹುಟ್ಟುಹಬ್ಬ: ‘ಯುಐ’ ಚಿತ್ರದ ರಿಲೀಸ್ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಚಿತ್ರತಂಡ

    ಈ ಹಿಂದೆ ರಜನಿಯ ‘ಜೈಲರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿ ಭಾರೀ ಗಮನ ಸೆಳೆದಿದ್ದರು. ಅದೇ ರೀತಿ ಇನ್ನೋರ್ವ ಕನ್ನಡದ ಸ್ಟಾರ್ ನಟ ಉಪೇಂದ್ರ ಕೂಡ ನಟಿಸುತ್ತಿದ್ದಾರೆ. ಈಗಾಗ್ಲೇ ಕಾಲಿವುಡ್-ಟಾಲಿವುಡ್‌ಗಳಲ್ಲಿ ಚಿರಪರಿಚಿತರಾಗಿರುವ ಉಪೇಂದ್ರರನ್ನು ಎರಡನೇ ಬಹುಮುಖ್ಯ ಪಾತ್ರವನ್ನಾಗಿ ಡಿಸೈನ್ ಮಾಡಲಾಗಿದೆ. ತಲೈವಾ ಮತ್ತು ಉಪೇಂದ್ರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

  • Coolie: ತಲೈವಾ ಸಿನಿಮಾದಲ್ಲಿ ಶ್ರುತಿ ಹಾಸನ್- ಪೋಸ್ಟರ್ ಔಟ್

    Coolie: ತಲೈವಾ ಸಿನಿಮಾದಲ್ಲಿ ಶ್ರುತಿ ಹಾಸನ್- ಪೋಸ್ಟರ್ ಔಟ್

    ಕಾಲಿವುಡ್‌ನ ಬಹುನಿರೀಕ್ಷಿತ ‘ಕೂಲಿ’ (Coolie) ಸಿನಿಮಾದಲ್ಲಿ ರಜನಿಕಾಂತ್ (Rajanikanth) ಜೊತೆ ಶ್ರುತಿ ಹಾಸನ್ (Shruti Haasan) ನಟಿಸುವ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ಜೊತೆಗೆ ಸಿನಿಮಾದಲ್ಲಿನ ಶ್ರುತಿ ಹಾಸನ್ ಲುಕ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ

    ‘ಕೂಲಿ’ ಸಿನಿಮಾದಲ್ಲಿನ ಶ್ರುತಿ ಪಾತ್ರದ ಲುಕ್ ರಿವೀಲ್ ಮಾಡಲಾಗಿದೆ. ಪ್ರೀತಿ ಎಂಬ ಪಾತ್ರದಲ್ಲಿ ನಟಿಸಿರುವ ಶ್ರುತಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಚೂಪಾದ ಆಯುಧ ಹಿಡಿದು ಖಡಕ್ ಲುಕ್ ಕೊಟ್ಟಿದ್ದಾರೆ. ಈ ಪೋಸ್ಟರ್ ನೋಡಿರುವ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕೌತುಕ ಮೂಡಿಸಿದೆ.

    ಅಂದಹಾಗೆ, ‘ಕೂಲಿ’ ಚಿತ್ರಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಲೈವಾ ಜೊತೆ ಕನ್ನಡದ ನಟ ಉಪೇಂದ್ರ (Upendra), ಶ್ರುತಿ ಹಾಸನ್, ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಜೈಲರ್ ಬಳಿಕ ಮತ್ತೆ ಅದೇ ಮಾಸ್ ಅವತಾರದಲ್ಲಿ ತಲೈವಾ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್

    ತಮಿಳು ಸೂಪರ್ ಸ್ಟಾರ್ ಸಿನಿಮಾದಲ್ಲಿ ಕನ್ನಡದ ಸೂಪರ್ ಸ್ಟಾರ್ ಫಿಕ್ಸ್

    ಕಾಲಿವುಡ್ ಗಲ್ಲಿಯಿಂದ ಕುತೂಹಲದ ಸುದ್ದಿಯೊಂದು ತೂರಿಬಂದಿತ್ತು. ರಜನಿಕಾಂತ್ ಮುಂದಿನ `ಕೂಲಿ’  (Coolie) ಸಿನಿಮಾದಲ್ಲಿ ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ನಟಿಸುತ್ತಾರೆ ಎನ್ನುವುದೇ ಆ ಸುದ್ದಿಯ ಆಳವಾಗಿತ್ತು. ಇದೀಗ ಈ ವಿಚಾರವನ್ನ ಕನ್ಫರ್ಮ್ ಮಾಡಿದ್ದಾರೆ ಉಪೇಂದ್ರ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುವುದು ಸಹಜ, ರಜನಿಕಾಂತ್ (Rajinikanth)  ಜೊತೆ ನಟಿಸುವ ಅವಕಾಶವನ್ನ ಉಪೇಂದ್ರ ಮಿಸ್ ಮಾಡಿಕೊಳ್ಳದಿರಲು ಸಿದ್ಧವಿಲ್ವಂತೆ. ಕಾರಣ ಇದೇ ಅಕ್ಟೋಬರ್‌ನಲ್ಲಿ ಶುರುವಾಗುವ `ಕೂಲಿ’ ಎರಡನೇ ಶೆಡ್ಯೂಲ್ ಚಿತ್ರೀಕರಣದಲ್ಲಿ ಉಪೇಂದ್ರ (Upendra)  ಎಂಟ್ರಿಯಾಗಲಿದ್ದಾರೆ.

    ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ರಜನಿಕಾಂತ್‌ಗೆ ನಿರ್ದೇಶಿಸುತ್ತಿರುವ ದೊಡ್ಡ ಪ್ರಾಜೆಕ್ಟ್ ಕೂಲಿ.  ಲೋಕೇಶ್ ಸಿನಿಮಾ ಅಂದ್ರೆ ಇಡೀ ಭಾರತದಾದ್ಯಂತ ಕ್ರೇಜ಼್ ಹೆಚ್ಚು. ಇಂತಹ ಕ್ರೇಜೀ಼ ನಿರ್ದೇಶಕನ ಜೊತೆ ಕ್ರೇಜ಼್ ಕಾ ಬಾಪ್ ರಜನಿಕಾಂತ್ ಕೈ ಜೋಡಿಸಿಬಿಟ್ಟರೆ ಅದೆಂತಹ ರೋಚಕ ಪ್ರಾಜೆಕ್ಟ್ ಆಗಿರಬೇಡ. ಅದುವೇ ಈ `ಕೂಲಿ’ ಸಿನಿಮಾ. ಈ ಬಿಗ್ ಪ್ರಾಜೆಕ್ಟ್ನಲ್ಲಿ ಉಪೇಂದ್ರ ಬಹುಮುಖ್ಯ ಪಾತ್ರ ಮಾಡಲಿದ್ದಾರೆ.

    ಕಾಂಬಿನೇಶನ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟಿಸಿರುವ `ಕೂಲಿ’. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ ಅತಿಥಿ ಪಾತ್ರವಲ್ಲ ಬದಲಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಕಾಲಿವುಡ್ ಮೂಲೆಯಿಂದ ಉಪ್ಪಿ ನಟಿಸುತ್ತಿರುವ ಸುದ್ದಿಯೇನೋ ಬಂದಿತ್ತು. ಆದರೆ ಇದುವರೆಗೂ ಈ ವಿಚಾರವನ್ನ ಉಪೇಂದ್ರ ಒಪ್ಪಿಕೊಂಡಿರಲಿಲ್ಲ. ಇದೀಗ ಖಾಸಗಿ ಪತ್ರಿಕೆಯೊಂದಕ್ಕೆ ಉಪೇಂದ್ರ ದೂರವಾಣಿ ಸಂದರ್ಶನದಲ್ಲಿ ತಾವು ನಟಿಸುತ್ತಿರುವ ಸುದ್ದಿ ಕನ್ಫರ್ಮ್ ಮಾಡಿದ್ದಾರೆ. ಅಲ್ಲಿಗೆ ಸೂಪರ್‌ಸ್ಟಾರ್‌ಗಳ ಮುಖಾಮುಖಿ ಒಂದೇ ಚಿತ್ರದಲ್ಲಾಗುತ್ತೆ.

     

    ಹಿಂದೆ ರಜನಿಯ `ಜೈಲರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿ ಭಾರೀ ಗಮನ ಸೆಳೆದಿದ್ದರು. ಅದೇ ರೀತಿ ಇನ್ನೋರ್ವ ಕನ್ನಡದ ಸ್ಟಾರ್ ಮೇಲೆ ರಜನಿಕಾಂತ್ ದೃಷ್ಟಿ ಬಿದ್ದಿದೆ. ಉಪೇಂದ್ರ ಕೂಡ ಈಗಾಗ್ಲೇ ಕಾಲಿವುಡ್-ಟಾಲಿವುಡ್‌ಗಳಲ್ಲಿ ಚಿರಪರಿಚಿತ ಕನ್ನಡದ ನಟ. ಹೀಗೆ ಉಪೇಂದ್ರರನ್ನ ಎರಡನೇ ಬಹುಮುಖ್ಯ ಪಾತ್ರವನ್ನಾಗಿ ಡಿಸೈನ್ ಮಾಡಲಾಗಿದೆ ಅನ್ನೋದು ಸದ್ಯಕ್ಕೆ ಬಂದಿರುವ ವಿಚಾರ. ಇನ್ನು ಉಪೇಂದ್ರ ಕೂಡ ರಜನಿಕಾಂತ್ ಜೊತೆ ಸ್ಕ್ರೀನ್‍್ ಶೇರ್ ಮಾಡಿಕೊಳ್ಳಲು ಬಹಳ ಉತ್ಸುಕರಾಗಿರುವ ವಿಚಾರ ಹೇಳ್ಕೊಂಡಿದ್ದಾರೆ. `ಯುಐ’ ಚಿತ್ರ ತೆರೆಕಂಡ ಬಳಿಕ ಕೂಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ಉಪೇಂದ್ರ `ಕೂಲಿ’ ತಂಡ ಸೇರ್ತಾರೆ ಎನ್ನಲಾಗುತ್ತಿದೆ.