Tag: cooking

  • ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಯುಗಾದಿ ಸ್ಪೆಷಲ್ – ಬೇವು, ಬೆಲ್ಲ ಮಾಡುವ ವಿಧಾನ

    ಹೊಸ ವರ್ಷದ ಆರಂಭದ ಸಂಕೇತವಾಗಿ ಯುಗಾದಿ ಹಬ್ಬ ಬರುತ್ತಿದೆ. ಹಬ್ಬದ ತಯಾರಿಗೆ ಈಗಾಗಲೇ ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಎಂದರೆ ಸಿಹಿ-ಕಹಿಯ ಹಬ್ಬವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಬೇವು-ಬೆಲ್ಲ ಮಾಡುವುದು ಸಂಪ್ರದಾಯ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಬೇವು ಬೆಲ್ಲ ಮಾಡುವ ವಿಧಾನ ಇಲ್ಲಿದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ

    ಬೇಕಾಗುವ ಸಾಮಾಗ್ರಿ
    1. ಹುರಿಗಡಲೆ- 2 ಚಮಚ
    2. ಬೆಲ್ಲ- 1 ಚಮಚ
    3. ಒಣ ಕೊಬ್ಬರಿ ತುರಿ- 2 ಚಮಚ
    4. ಬೇವಿನ ಹೂವಿನ ದಳಗಳು -ಸ್ವಲ್ಪ ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ವಿಶೇಷ ಪಾನಕ

    ಮಾಡುವ ವಿಧಾನ:
    * ಮೊದಲಿಗೆ ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು.
    * ನಂತರ ಬೆಲ್ಲವನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಿ.
    * ಒಣಕೊಬ್ಬರಿಯನ್ನು ಸಣ್ಣದಾಗಿ ತುರಿದುಕೊಳ್ಳಬೇಕು.
    * ಬೇವು ಸೊಪ್ಪಿನಲ್ಲಿನ ಕೇವಲ ಹೂವಿನ ದಳಗಳನ್ನು ಮಾತ್ರ ಬಿಡಿಸಿಟ್ಟುಕೊಳ್ಳಬೇಕು. ಇಲ್ಲಿ ಎಲೆಗಳ ಬದಲಾಗಿಯೇ ಹೂವಿನ ದಳ ತೆಗೆದುಕೊಳ್ಳಲಾಗಿರುತ್ತದೆ.
    * ಮೊದಲಿಗೆ ಹುರಿಗಡಲೆ ಪೌಡರ್‍ಗೆ ಬೇವು ಹೂವಿನ ದಳಗಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಕೊಬ್ಬರಿ ತುರಿ ಹಾಕಿ ಕಲಸಿಕೊಳ್ಳಿ.
    * ಕೊನೆಗೆ ಬೆಲ್ಲದ ಪುಡಿಯನ್ನು ಮಿಶ್ರಣದಲ್ಲಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಯುಗಾದಿ ಹಬ್ಬ ಆಚರಿಸಲು ಬೇವು-ಬೆಲ್ಲ ರೆಡಿ ಇದನ್ನೂ ಓದಿ: ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

  • ಹೋಳಿ ಸ್ಪೆಷಲ್ – ಥಂಡಾಯಿ ಪೌಡರ್ ಮಿಲ್ಕ್ ಮಾಡುವ ವಿಧಾನ

    ಹೋಳಿ ಸ್ಪೆಷಲ್ – ಥಂಡಾಯಿ ಪೌಡರ್ ಮಿಲ್ಕ್ ಮಾಡುವ ವಿಧಾನ

    ಇಂದು ಎಲ್ಲೆಲ್ಲೂ ಬಣ್ಣದ ಹಬ್ಬ. ಕುಟುಂಬದವರು, ಸ್ನೇಹಿತರು, ಮಕ್ಕಳು ಎಲ್ಲರೂ ಒಟ್ಟಿಗೆ ಸೇರಿ ಬಣ್ಣಗಳಲ್ಲಿ ಮಿಂದೇಳುತ್ತಾರೆ. ಪ್ರತಿ ಹಬ್ಬಕ್ಕೂ ಅದರದ್ದೆ ಆದ ಸಿಹಿ ತಿನಿಸು ಇರುತ್ತದೆ. ಅದೇ ಹೋಳಿ ಹಬ್ಬದ ಪ್ರಯುಕ್ತ ಥಂಡಾಯಿ ಪೌಡರ್ ಹಾಲು ಮಾಡುವ ವಿಧಾನ ಇಲ್ಲದೆ.

    ಬೇಕಾಗುವ ಸಾಮಾಗ್ರಿಗಳು
    1. ಬಾದಾಮಿ – ಅರ್ಧ ಕಪ್ (75 ಗ್ರಾಂ)
    2. ಗೋಡಂಬಿ – ಒಂದು ಕಪ್ (140 ಗ್ರಾಂ)
    3. ಪಿಸ್ತಾ – ಅರ್ಧ ಕಪ್(60 ಗ್ರಾಂ)
    4. ಜೀರಿಗೆ – 3 ಚಮಚ
    5. ಗಸಗಸೆ – 2 ಚಮಚ
    6. ಕೇಸರಿ – ಚಿಟಿಕೆ
    7. ಮೆಣಸು – 1 ಚಮಚ
    8. ಏಲಕ್ಕಿ – 10-12
    9. ಕಲ್ಲಂಗಡಿ ಹಣ್ಣಿನ ಬೀಜಗಳು- ಕಾಲ್‍ ಕಪ್(38 ಗ್ರಾಂ)
    10. ಒಳಗಿದ ಗುಲಾಬಿ ದಳಗಳು – 1 ಚಮಚ
    11. ಚಕ್ಕೆ – ಒಂದು

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಗೋಡಂಬಿ, ಬಾದಾಮಿ, ಪಿಸ್ತಾ, ಕಲ್ಲಂಗಡಿ ಹಣ್ಣಿನ ಬೀಜಗಳು ಹಾಕಿ 5-10 ನಿಮಿಷ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
    * ಪುಡಿಯನ್ನು ಒಂದು ಬೌಲ್‍ಗೆ ಹಾಕಿಕೊಳ್ಳಿ.
    * ಈಗ ಅದೇ ಜಾರಿಗೆ ಮೆಣಸು, ಜೀರಿಗೆ, ಗಸಗಸೆ, ಒಣಗಿದ ಗುಲಾಬಿ ದಳಗಳು, ಏಲಕ್ಕಿ, ಚಕ್ಕೆ, ಕೇಸರಿ ಹಾಕಿ 10-15 ನಿಮಿಷ ರುಬ್ಬಿಕೊಳ್ಳಿ.
    * ಈಗ ಮೊದಲು ಮಾಡಿಟ್ಟುಕೊಂಡಿದ್ದ ಪುಡಿಗೆ ಇದನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಒಂದು ಲೋಟ ಬಿಸಿ ಹಾಲು ತೆಗೆದುಕೊಂಡು ಅದಕ್ಕೆ 3 ಚಮಚ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.
    * ಈಗ ಇನ್ನೊಂದು ಲೋಟ ಹಾಲಿಗೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ, ಬಳಿಕ ಪುಡಿ ಮಿಕ್ಸ್ ಮಾಡಿದ್ದ ಹಾಲನ್ನು ಅದರೊಳಗೆ ಹಾಕಿ ಮಿಕ್ಸ್ ಮಾಡಿದರೆ ಥಂಡಾಯಿ ಹಾಲು ಕುಡಿಯಲು ಸಿದ್ಧ.

  • ಸಿಂಪಲ್ ಆಗಿ ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ ಇಲ್ಲಿದೆ

    ಸಿಂಪಲ್ ಆಗಿ ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ ಇಲ್ಲಿದೆ

    ನೆಯಲ್ಲಿ ಹಣ್ಣಾದ ಬಾಳೆಹಣ್ಣು ಇದೆ. ಇದರಲ್ಲಿ ಏನಾದ್ರೂ ರೆಸಿಪಿ ಮಾಡ್ಬೇಕು ಅಂತಾ ನೀವು ಯೋಚಿಸುತ್ತಿದ್ದೀರಾ. ಅದಕ್ಕಾಗಿ ಇಲ್ಲಿದೆ ನೋಡಿ ಒಂದು ಸೂಪರ್ ಸಿಂಪಲ್ ರೆಸಿಪಿ. ಸಖತ್ ಸುಲಭವಾಗಿ ಬಾಳೆಹಣ್ಣಿ ಹಲ್ವಾ ಮಾಡಿ ಟೇಸ್ಟ್ ನೋಡಿ.

    ಬೇಕಾಗುವ ಸಾಮಾಗ್ರಿಗಳು:
    1. ತುಪ್ಪ – 3-4 ಟೇಬಲ್ ಸ್ಪೂನ್
    2. ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ ಸ್ವಲ್ಪ
    3. ದ್ರಾಕ್ಷಿ ಸ್ವಲ್ಪ
    4. ರವೆ – 1 ಕಪ್
    5. ಹಣ್ಣಾದ ಬಾಳೆಹಣ್ಣು – 4-5
    6. ಹಾಲು – 2.5 ಕಪ್
    7. ಸಕ್ಕರೆ – 5-6 ಕಪ್
    8. ಏಲಕ್ಕಿ ಪೌಡರ್

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಫ್ರೈ ಮಾಡಿಟ್ಟುಕೊಳ್ಳಿ.
    * ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ 1 ಕಪ್ ರವೆ ಹಾಕಿ ಸುವಾಸನೆ ಬರುವವರೆಗೂ ಹುರಿಯಿರಿ.
    * ಬಳಿಕ ಹಣ್ಣಾದ ಬಾಳೆಹಣ್ಣನ್ನು ಸಣ್ಣಗೆ ತುಂಡರಿಸಿ ಮಿಕ್ಸ್ ಮಾಡಿ.
    * ನಂತರ 2.5 ಕಪ್ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
    * ಅದಕ್ಕೆ ಸಕ್ಕರೆ ಸೇರಿಸಿ ಹಲ್ವಾ ಹದಕ್ಕೆ ಬರುವತನಕ ಕೈಯಾಡಿಸುತ್ತೀರಿ.
    * ಕೊನೆಗೆ ಏಲಕಿ ಪೌಡರ್ ಹಾಕಿ, ಫ್ರೈ ಮಾಡಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಸೇರಿಸಿ ಕೆಳಗಿಳಿಸಿ.
    ನಿಮ್ಮ ಸಿಂಪಲ್ ಬಾಳೆಹಣ್ಣಿನ ಹಲ್ವಾ ರೆಡಿ ಟು ಸರ್ವ್

  • ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ವರಾತ್ರಿ  ಹಬ್ಬಕ್ಕೆ ಮನೆಯಲ್ಲಿ ಪ್ರತಿ ನಿತ್ಯ ಒಂದಲ್ಲ  ಒಂದು ಸಿಹಿ ತಿಸಿಸು ಕಾಮನ್. ನವರಾತ್ರಿಯನ್ನು ವಿಶೇಷವಾಗಿ ಆಚರಿಸುವ ಉತ್ತರ ಭಾರತದಲ್ಲಿ ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡುವ ಸಿಹಿ ತಿನಿಸು ಜಿಲೇಬಿ, ಅದರಲ್ಲೂ ನವರಾತ್ರಿ ಸಮಯದಲ್ಲಿ ತುಪ್ಪದ ಜಿಲೇಬಿಗೆ ಎಲ್ಲಿಲ್ಲದ ಬೇಡಿಕೆ.

    ಜೇಬಿಗೆ ಇದು ತುಸು ಭಾರ  ಅನಿಸಿದರೂ ಟೇಸ್ಟ್ ಮಾತ್ರ ಬೊಂಬಾಟಾಗಿರುತ್ತದೆ. ಹಾಗಾಗೀ ಶುಭ ಸಂದರ್ಭಗಳಲ್ಲಿ ತುಪ್ಪದ ಜಿಲೇಬಿ ಉತ್ತರ ಭಾರತದಲ್ಲಿ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ನಾವೂ ಜಿಲೇಬಿಗೂ ಮತ್ತು ತುಪ್ಪದ ಜಿಲೇಬಿಗೂ ಹೆಚ್ಚೆನೂ ವ್ಯತ್ಯಾಸ ಇಲ್ಲ.

    ತುಪ್ಪದ ಜಿಲೇಬಿ ಮಾಡುವ ವಿಧಾನ
    ಮೈದಾ ಹಿಟ್ಟಿಗೆ ನೀರನ್ನ ಬೆರೆಸಿಕೊಳ್ಳಬೇಕು. ಜಿಲೇಬಿ ಹಾಕಲು ಬರುವಂತೆ ಹದವಾಗಿ ನೀರು ಬೆರೆಸಿಕೊಂಡು ಹಿಟ್ಟು ತಯಾರಿಸಿಕೊಳ್ಳಬೇಕು. ಇದಕ್ಕೆ ನೀರು ಮತ್ತು ಮೈದಾ ಹೊರತುಪಡಿಸಿ ಬೇರೇನು ಬೆರೆಸಿಕೊಳ್ಳುವುದಿಲ್ಲ. ಹಿಟ್ಟು ತಯಾರಾದ ಬಳಿಕ ನಿಮ್ಮಿಷ್ಟದ ತುಪ್ಪವನ್ನು ಆಯ್ಕೆ ಮಾಡಿಕೊಂಡು ಕಡಾಯಿಗೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು.

    ಕಾದ ತುಪ್ಪಕ್ಕೆ ತಯಾರಿಸಿಟ್ಟ ಹಿಟ್ಟಿನಿಂದ ಜಿಲೇಬಿ ಹಾಕಿಕೊಂಡು ಕೆಂಪಗೆ ರೋಸ್ಟ್ ಆಗುವರೆಗೂ ಕರಿದುಕೊಳ್ಳಬೇಕು. ಆದಾದ ಬಳಿಕ ಸಕ್ಕರೆ ಪಾಕಕ್ಕೆ ತುಪ್ಪದಲ್ಲಿ ಕರೆದ ಜಿಲೆಬಿ ಅದ್ದಿದ್ರೆ ಬಿಸಿ ಬಿಸಿ ತುಪ್ಪದ ಜಿಲೇಬಿ ಸವಿಯಬಹುದು. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಸಾಮನ್ಯವಾಗಿ ಜಿಲೇಬಿಗೆ ಹಿಂದಿನ ದಿನಾ ರಾತ್ರಿಯೇ ಹಿಟ್ಟನ್ನು ಮಾಡಿಟ್ಟುಕೊಳ್ಳಬೇಕು, ಆದರೆ ತುಪ್ಪದ ಜಿಲೇಬಿಗೆ ಅದರ ಅವಶ್ಯಕತೆ ಇಲ್ಲ ಬಯಕೆ ಆದಾಕ್ಷಣ ಪಟಾಪಟ್ ಅಂತಾ ಆಗಲೇ ಹಿಟ್ಟು ತಯಾರಿಸಿ ಜಿಲೇಬಿ ಮಾಡಬಹುದು.

    ದೆಹಲಿಯಲ್ಲಿ ಈ ಜಿಲೇಬಿ ತುಂಬಾ ಪ್ರಖ್ಯಾತಿ, ಸಾಮಾನ್ಯ ದಿನಗಳಲ್ಲೂ ತುಪ್ಪದ ಜಿಲೇಬಿ ಸವಿಬಹುದು. ಚಾಂದನಿ ಚೌಕ್ ನಲ್ಲಿ ತುಪ್ಪದ ಜಿಲೇಬಿ ಮಾರುವ ಅಂಗಡಿ ಒಂದೇ ಒಂದು ಇದ್ದು ದೂರದೂರಿನಿಂದ ಬಂದವರೆಲ್ಲ ಒಮ್ಮೆ ತುಪ್ಪದ ಜಿಲೇಬಿ ಸವಿಯಬಹುದು.

     

  • ಖಾರವಾದ ಅಡುಗೆ ಇಷ್ಟ ಪಡುವವರಿಗಾಗಿ ಕ್ಯಾರೆಟ್ ಚಟ್ನಿ

    ಖಾರವಾದ ಅಡುಗೆ ಇಷ್ಟ ಪಡುವವರಿಗಾಗಿ ಕ್ಯಾರೆಟ್ ಚಟ್ನಿ

    ಕೊಬ್ಬರಿ, ಮಾವಿನಕಾಯಿ, ಬೆಳ್ಳುಳ್ಳಿ, ಟೊಮೆಟೊ ಚಟ್ನಿ ಎಲ್ಲರ ಮನೆಯಲ್ಲಿ ತಯಾರಿಸುತ್ತೇವೆ. ಆದರೆ ಇವತ್ತು ನಾವು ಖಾರ ಮತ್ತು ರುಚಿಯಾಗಿರುವ ಕ್ಯಾರೆಟ್ ಚಟ್ನಿ ಮಾಡುವುದರ ಕುರಿತು ತಿಳಿಯೋಣ. ಈ ಮಿಶ್ರಣವನ್ನು ಶುದ್ಧವಾದ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ 2 ದಿನಗಳವರೆಗೆ ಹಾಗೇ ಇಡಬಹುದಾಗಿದೆ, ಹಾಗಾದ್ರೆ ಬನ್ನಿ ಈ ಚಟ್ನಿಯನ್ನು ಹೇಗೆ ಮಾಡುವುದುಯ ಎನ್ನುವುದನ್ನು ಇಲ್ಲಿ ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ. ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮವಾಗಿ ಗುಜರಾತ್‍ಗೆ ಸಾಗಣೆ- 8.10 ಲಕ್ಷದ ಅಕ್ಕಿ ವಶಕ್ಕೆ

    ಬೇಕಾಗುವ ಸಾಮಗ್ರಿಗಳು:
    * ಕ್ಯಾರೆಟ್ 3-4
    * ಕೆಂಪು ಮೆಣಸಿನ ಪುಡಿ- 2ಚಮಚ
    * ಕರಿಮೆಣಸಿನ ಪುಡಿ- 1 ಚಮಚ
    * ಶುಂಠಿ- ಸ್ವಲ್ಪ
    * ಬೆಳ್ಳುಳ್ಳಿ-2
    * ಬಾದಾಮಿ-2
    * ಗಸೆಗಸೆ- 2 ಚಮಚ
    * ಏಲಕ್ಕಿ-3
    * ವಿನಿಗರ್- 1 ಚಮಚ
    * ಚಮಚ ಸಕ್ಕರೆ- 1 ಚಮಚ

    Carrot Chutney

    ಮಾಡುವ ವಿಧಾನ:

    * ಚಿಕ್ಕ ತುಂಡಾಗಳಾಗಿ ಕ್ಯಾರೆಟ್‍ಗಳನ್ನು ಕತ್ತರಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಸೇರಿಸಬೇಕು.
    * ಈ ಮಿಶ್ರಣಕ್ಕೆ ಒಂದು ಕಪ್ ನೀರು ಹಾಕಿ ಕ್ಯಾರೆಟ್ ಬೆಂದು ಆ ಮಿಶ್ರಣದಲ್ಲಿ ನೀರು ಬತ್ತಿ ಗಟ್ಟಿ ಮಿಶ್ರಣವಾಗುವವರೆಗೆ ಬೇಯಿಸಬೇಕು.

    Carrot Chutney

    * ಈ ಮಿಶ್ರಣವನ್ನು ಸೌಟ್ ನಿಂದ ಕುಟ್ಟುತ್ತಾ ಪೇಸ್ಟ್ ರೀತಿ ಮಾಡಬೇಕು.
    * ಈಗ ಆ ಮಿಶ್ರಣಕ್ಕೆ ವಿನಿಗರ್, ಸಕ್ಕರೆ, ಉಪ್ಪು, ಗಸೆಗಸೆ, ಬಾದಾಮಿ, ಗೋಡಂಬಿ, ಏಲಕ್ಕಿ ಹಾಕಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ. ಇದನ್ನೂ ಓದಿ: ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್

  • ಮನೆಮಂದಿಗೆ ಇಷ್ಟವಾಗುವ ಮಶ್ರೂಮ್ ಮಸಾಲ ಮಾಡಲು ಟ್ರೈ ಮಾಡಿ

    ಮನೆಮಂದಿಗೆ ಇಷ್ಟವಾಗುವ ಮಶ್ರೂಮ್ ಮಸಾಲ ಮಾಡಲು ಟ್ರೈ ಮಾಡಿ

    ಹೋಟೆಲ್ ಅಡುಗೆ ಎಂದರೆ ಹಲವರು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹೋಟೆಲ್‌ಗಳಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಬದಲಾಗಿ ನಾವೇ ಮನೆಯಲ್ಲಿಯೇ ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಸೇವಿಸ ಬಹುದಾಗಿದೆ. ಮಶ್ರೂಮ್ ಮಸಾಲ ಮಾಡಿದರೆ ಮನೆಮಂದಿಯ ಜೊತೆಗೆ ಕುಳಿತು ಸೇವಿಸಬಹುದಾಗಿದೆ.

    ಮಶ್ರೂಮ್ ಅನ್ನು ಇಷ್ಟ ಪಡುತ್ತಿರಿ ಎಂದಾದರೆ ಹಾಗೂ ಆರೋಗ್ಯಯುಕ್ತವಾಗಿರುವ ಪದಾರ್ಥಗಳನ್ನು ಬಳಸಿಕೊಂಡು ಕೆಲವು ಡಿಶ್ ಅನ್ನು ತಯಾರಿಸಲು ನೀವು ಬಯಸುವಿರಿ ಎಂದಾದರೆ, ಖಂಡಿತವಾಗಿಯೂ ಮಶ್ರೂಮ್ ಮಸಾಲವನ್ನು ಮಾಡಲು ಒಮ್ಮೆ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು
    * ಅಣಬೆ- ೨೦೦ ಗ್ರಾಂ
    * ಗಸಗಸೆ- ೧ ಚಮಚ
    * ಗೋಡಂಬಿ- ೬-೭
    * ಹಸಿಮೆಣಸಿನ ಕಾಯಿ-೩
    * ಕಾಯಿ ತುರಿ- ಅರ್ಧ ಬಟ್ಟಲು
    * ಎಣ್ಣೆ- ೩ ಚಮಚ
    * ಚಕ್ಕ, ಲವಂಗ-ಸ್ವಲ್ಪ
    * ಪಲಾವ್ ಎಲೆ- ೨
    * ಜೀರಿಗೆ – ೧ ಚಮಚ
    * ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ೧
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
    * ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಒಂದು ಬಟ್ಟಲು
    * ಅರಿಶಿಣದ ಪುಡಿ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ದನಿಯಾ ಪುಡಿ- ಅರ್ಧ ಚಮಚ
    * ಖಾರದ ಪುಡಿ – ೧ ಚಮಚ
    * ಜೀರಿಗೆ ಪುಡಿ – ಕಾಲು ಚಮಚ
    * ತುಪ್ಪ- ೨ ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಗರಂ ಮಸಾಲಾ ಪುಡಿ – ಅರ್ಧ ಚಮಚ

    ಮಾಡುವ ವಿಧಾನ:

    * ಮೊದಲಿಗೆ ಮಿಕ್ಸಿ ಜಾರ್‌ಗೆ ಗಸಗಸೆ, ಗೋಡಂಬಿ, ಹಸಿಮೆಣಸಿನ ಕಾಯಿ ಹಾಗೂ ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
    * ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಜೀರಿಗೆ ಹಾಗೂ ಈರುಳ್ಳಿ, ಟೊಮೆಟೊವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

    * ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣದ ಪುಡಿ, ಉಪ್ಪು, ದನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ೨-೩ ನಿಮಿಷ ಕುದಿಯಲು ಬಿಡಿ.

    * ನಂತರ ಅಣಬೆ ಹಾಗೂ ರುಬ್ಬಿಕೊಂಡ ಮಿಶ್ರಣ ಹಾಕಿ ಅಗತ್ಯವಿದ್ದಷ್ಟು ನೀರು ಹಾಕಿ ಕುದಿಯಲು ಬಿಡಿ.
    * ಪ್ಯಾನ್ ಒಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ ಇದನ್ನು ಕುದಿಯುತ್ತಿರುವ ಮಸಾಲೆಗೆ ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಮಶ್ರೂಮ್ ಮಾಸಾಲಾ ಸವಿಯಲು ಸಿದ್ಧವಾಗುತ್ತದೆ.

  • ಇಮ್ಯೂನಿಟಿ ಬೂಸ್ಟ್ ಮಾಡಿಕೊಳ್ಳಲು ಗೆಣಸಿನ ಚಟ್ನಿ ಟ್ರೈ ಮಾಡಿ

    ಇಮ್ಯೂನಿಟಿ ಬೂಸ್ಟ್ ಮಾಡಿಕೊಳ್ಳಲು ಗೆಣಸಿನ ಚಟ್ನಿ ಟ್ರೈ ಮಾಡಿ

    ಇಡ್ಲಿ ಮತ್ತು ದೋಸೆಗೆ ಒಂದೇ ರೀತಿಯ ಚಟ್ನಿ ತಿಂದು ಬೇಸರವಾಗಿದ್ದರೆ ನೀವು ಗೆಣಸಿನ ಚಟ್ನಿಯನ್ನು ಟ್ರೈ ಮಾಡಬಹುದು. ಇದನ್ನು ಈ ಚಳಿಗಾಲದಲ್ಲಿ ಸವಿಯಲು ತುಂಬಾ ಚೆನ್ನಾಗಿರುತ್ತೆ ಮತ್ತು ದೇಹಕ್ಕೂ ಇಮ್ಯೂನಿಟಿ ಬೂಸ್ಟ್ ಮಾಡಲು ಸಹ ಹೆಚ್ಚು ಸಹಾಯಕರಿಯಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಮಧ್ಯಮ ಗಾತ್ರದ ಸಿಹಿ ಗೆಣಸು
    * 2 ಚಮಚ ಉದ್ದಿನ ಬೆಳೆ
    * 3-5 ಕೆಂಪು ಮೆಣಸಿನ ಕಾಯಿ
    * ಸ್ವಲ್ಪ ಹುಣಸೆ ಹಣ್ಣು
    * 4 ಚಮಚ ಕಾಯಿ ತುರಿ
    * 2 ಚಮಚ ಎಣ್ಣೆ
    ಒಗ್ಗರಣೆಗೆ ಒಂದು ಚಮಚ ಸಾಸಿವೆ, 1 ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವಿನ ಎಲೆ

    ಮಾಡುವ ವಿಧಾನ:
    * ಸಿಹಿ ಗೆಣಸನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ
    * ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಚಿಟಿಕೆ ಇಂಗು, ಕರಿಬೇವು ಹಾಕಿ ಹುರಿಯಬೇಕು.
    * ಉದ್ದಿನ ಬೆಳೆ ಗೋಲ್ಡನ್ ಬ್ರೌನ್ ಬಂದ ನಂತರ ಗ್ಯಾಸ್ ಆಫ್ ಮಾಡಿ
    * ಇದು ತಣ್ಣಗಾದ ನಂತರ ಅದಕ್ಕೆ ಸಿಹಿ ಗೆಣಸು, ಉಪ್ಪು, ಕಾಯಿತುರಿ, ಹುಣಸೆ ಹಣ್ಣು, ಸ್ವಲ್ಪ ನೀರು ಹಾಕಿ ರುಬ್ಬಿ
    * ಮತ್ತೆ ಬಾಣಲೆಗೆ ಎಣ್ಣೆಯಾಕಿ ಕಾದ ನಂತರ ಅದಕ್ಕೆ ಕರಿಬೇವು, ಮೆಣಸು, ಇಂಗು ಹಾಕಿ ರೆಡಿ ಮಾಡಿ ಅದನ್ನು ರುಬ್ಬಿದ ಚಟ್ನಿ ಮೇಲೆ ಹಾಕಿ ಅಲಂಕರಿಸಿದರೆ ಗೆಣಸಿನ ಚಟ್ನಿ ಸವಿಯಲು ಸಿದ್ಧವಾಗುತ್ತೆ.

    ಗೆಣಸಿನ ಚಟ್ನಿಯ ಉಪಯೋಗಗಳು:
    * ಗೆಣಸಿನಲ್ಲಿ ತೇವಾಂಶ ಶೇ.68.5, ಕಾರ್ಬೊಹೈಡ್ರೇಟ್ ಶೇ.28.2, ಕೊಬ್ಬು ಶೇ.0.3, ಪ್ರೋಟಿನ್ ಶೇ.1.2 ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ.

    * ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ.

    * ಗರ್ಭಿಣಿಯರಿಗೆ ಬಹಳ ಆವಶ್ಯಕವಾದ ಬಿ-ವಿಟಾಮಿನ್ ಸೇರಿದಂತೆ ಪೋಲಿಕ್ ಆಸಿಡ್ ಗೆಣಸಿನಲ್ಲಿ ಹೇರಳವಾಗಿದೆ.

    * ಇದರ ಸೇವನೆಯಿಂದ ಇಮ್ಯೂನಿಟಿ ಬೂಸ್ಟ್ ಆಗಿ, ಅಸ್ತಮಾ ಸಮಸ್ಯೆ ನಿವಾರಣೆಯಾಗುತ್ತದೆ.

    * ಸಿಹಿ ಗೆಣಸಿನಲ್ಲಿರುವ ಬೀಟಾ-ಕೆರೊಟಿನ್ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‍ನಿಂದ ನಮ್ಮನ್ನು ಕಾಪಾಡುತ್ತವೆ.

    * ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ.

    * ಮ್ಯಾಂಗನೀಸ್ ಮತ್ತು ಕಬ್ಬಿಣಾಂಶಗಳು ಸಿಹಿಗೆಣಸಿನಲ್ಲಿ ಅಧಿಕವಾಗಿರುತ್ತವೆ. ಇವು ಋತುಚಕ್ರ ಪೂರ್ವ ಸಮಸ್ಯೆಗಳನ್ನು ನಿವಾರಿಸುತ್ತವೆ.

  • ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ: ಮಂಜು

    ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿಜೇತರಾಗಿ ಬಿಗ್‍ಬಾಸ್ ಸೀಸನ್-8 ರಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸದಸ್ಯರಲ್ಲಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿದ್ದು, ಮನೆಯ ಪುರುಷರಿಗೆ ಕಿಚನ್ ಏರಿಯಾದ ಜವಾಬ್ದಾರಿ ನಿಭಾಯಿಸುವಂತೆ ತಿಳಿಸಿದ್ದಾರೆ.

    ಇಷ್ಟು ದಿನ ದೊಡ್ಮನೆಯಲ್ಲಿ ಅಡುಗೆ ಮಾಡುವ ಕೆಲಸ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ವಾರ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ವಿಶೇಷವಾಗಿ ಮನೆಯ ಎಲ್ಲಾ ಸದಸ್ಯರಿಗೆ ಅಡುಗೆ ಮಾಡಲು ಪುರುಷ ಸದಸ್ಯರಿಗೆ ಸೂಚಿಸಿದ್ದಾರೆ.

    ಅದರಂತೆ ಈ ವಿಚಾರವಾಗಿ ಮಂಜು ಹಾಗೂ ಅರವಿಂದ್ ಕಿಚನ್‍ನಲ್ಲಿ ಚರ್ಚೆ ನಡೆಸಿದ್ದಾರೆ. ಈ ವಾರದಲ್ಲಿ ನೀನೆಷ್ಟು ಅಡುಗೆ ಕಲಿಯುತ್ತಿಯಾ ಹಾಗೂ ನಾನು ಎಷ್ಟು ಕಲಿಯುತ್ತೀನಿ ನೋಡೋಣ. ಅಲ್ಲದೇ ಮುಂದಿನ ವಾರ ಕೂಡ ನಾವೇ ಮಾಡಬೆಕಾಗುತ್ತೇನೋ ನನಗೆ ಅದು ಬೇರೆ ಟೆನ್ಷನ್ ಆಗುತ್ತಿದೆ ಎಂದು ಮಂಜು ಅರವಿಂದ್‍ಗೆ ಹೇಳುತ್ತಾರೆ.

    ನಂತರ ನಾವು ಅಡುಗೆಯ ರುಚಿಯನ್ನು ಸ್ವಲ್ಪ ಕಡಿಮೆ ಮಾಡೋಣ ಇಲ್ಲ ಅಂದರೆ ಲಾಕ್ ಆಗಿ ಬಿಡುತ್ತೇವೆ ಎಂದು ಮಂಜು ಅಂದಾಗ, ರುಚಿ ಏನಾದರೂ ಜಾಸ್ತಿಯಾಯಿತು ಎಂದರೆ ಹುಳಿ ಹಿಂಡಿ ಬೀಡೋಣ ಎಂದು ಅರವಿಂದ್ ಹೇಳುತ್ತಾರೆ.

    ಎಲ್ಲರೂ ಟೆಸ್ಟಿಂಗ್ ಪೌಡರ್ ಕೇಳುತ್ತಾರೆ ಆದರೆ ನಾವು ಟೆಸ್ಟ್ ಲೇಸ್ ಪೌಡರ್ ಕೇಳೋಣ. ನಾವು ಮಾಡುವುದು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ಟೆಸ್ಟ್ ಲೇಸ್ ಪೌಡರ್ ಹಾಕುವುದು ಉತ್ತಮ. ನಾಳೆ ಬೆಳಗ್ಗೆ ಆ್ಯಪಲ್ ಪಲ್ಯ ಮಾಡೋಣ ಎಂದು ಮಂಜು ಹೇಳುತ್ತಾರೆ. ಆಗ ದಿವ್ಯಾ ಉರುಡಗ, ಅರವಿಂದ್ ಜೋರಾಗಿ ನಗುತ್ತಾರೆ.

  • ಮಧ್ಯಾಹ್ನ ಊಟಕ್ಕೆ ಮಾಡಿ ನುಗ್ಗೇಕಾಯಿ ದಾಲ್

    ಮಧ್ಯಾಹ್ನ ಊಟಕ್ಕೆ ಮಾಡಿ ನುಗ್ಗೇಕಾಯಿ ದಾಲ್

    ಇಂದು ಊಟಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಾ ಇರುವ ಮನೆಯಲ್ಲಿ ಬಿಸಿ ಬಿಸಿಯಾಗಿ ಅನ್ನವನ್ನು ಮಾಡಿ. ಅನ್ನದ ಜೊತೆಗೆ ತರಕಾರಿ ಸಾಂಬಾರ್ ಮಾಡಬೇಕು ಎಂದು ಯೋಸಿಸುತ್ತಾ ಇದ್ದರೆ ಇಂದು ನೀವು ಮನೆಯಲ್ಲಿ ನುಗ್ಗೇಕಾಯಿ ದಾಲ್ ಮಾಡಿ.

    ಬೇಕಾಗುವ ಸಾಮಗ್ರಿಗಳು:

    * ನುಗ್ಗೇಕಾಯಿ- 4
    * ತೊಗರಿಬೇಳೆ – 3 ಟೀ ಸ್ಪೂನ್
    * ಕಡಲೇಬೇಳೆ- 2 ಟೀ ಸ್ಪೂನ್
    * ಬೇಳೆ- 3 ಟೀ ಸ್ಪೂನ್
    * ಹೆಸರುಬೇಳೆ- 2 ಟೀ ಸ್ಪೂನ್
    * ಟೊಮೆಟೋ
    * ಈರುಳ್ಳಿ- 1
    * ಅಚ್ಚಖಾರದ ಪುಡಿ- 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು
    * ಜೀರಿಗೆ- 1 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲು ಬೇಳೆಗಳೆಲ್ಲವನ್ನೂ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು.

    * ನುಗ್ಗೇಕಾಯಿಗಳನ್ನು ಚೆನ್ನಾಗಿ ತೊಳೆದುಕೊಂಡು ತುಂಡು ಮಾಡಿಟ್ಟುಕೊಳ್ಳಿ.

    * ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಖಾರದ ಪುಡಿಯನ್ನು ರುಬ್ಬಿಟ್ಟುಕೊಳ್ಳಿ.

    * ಸ್ವಲ್ಪ ನೀರಿಗೆ ಉಪ್ಪು ಹಾಕಿ ನುಗ್ಗೆಕಾಯಿ ಬೇಯಿಸಿಕೊಳ್ಳಿ. ಬೆಂದ ನುಗ್ಗೆಕಾಯಿದೆ ಬೇಯಿಸಿದ ಬೇಳೆಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ.

    * ಬಳಿಕ ಉಪ್ಪು, ಅರಿಶಿನದ ಪುಡಿ, ಜೀರಿಗೆ ಪುಡಿ ಹಾಗೂ ಟೊಮೆಟೋ ಪ್ಯೂರಿಯನ್ನು ಹಾಕಿ ಕುದಿಯಲು ಬಿಡಿ. ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ರುಚಿಕರವಾದ ನುಗ್ಗೇಕಾಯಿ ದಾಲ್ ಸವಿಯಲು ಸಿದ್ಧವಾಗುತ್ತದೆ.

  • ಖಾರ ಖಾರ ಎಗ್ ಮಂಚೂರಿ ಮಾಡುವ ವಿಧಾನ

    ಖಾರ ಖಾರ ಎಗ್ ಮಂಚೂರಿ ಮಾಡುವ ವಿಧಾನ

    ಮೊಟ್ಟೆ ಮಂಚೂರಿಯನ್ನು ಒಮ್ಮೆ ತಿಂದರೆ ಪದೇ ಪದೇ ತಿನ್ನಬೇಕು ಅಂತ ಅನಿಸುತ್ತೆ. ಹೊರಗೆ ಹೋಟೆಲ್‍ಗೆ ಹೋಗಿ ತರುವ ಬದಲು, ಮನೆಯಲ್ಲೇ ಮೊಟ್ಟೆ ಮಂಚೂರಿಯನ್ನು ಮಾಡಿ ಸವಿಯಿರಿ. ಹೋಟೆಲ್‍ನಲ್ಲಿ ಎಗ್ ಮಂಚೂರಿ ಟೇಸ್ಟ್ ನೋಡಿರುವ ನೀವು ನಿಮ್ಮ ಕೈಯಾರೆ ಸಿದ್ಧಮಾಡುವುದಕ್ಕೆ ಒಮ್ಮೆ ಟ್ರೈ ಮಾಡಲು ಇಲ್ಲಿದೆ ಮಾಡುವ ವಿಧಾನ.

    ಬೇಕಾಗುವ ಸಾಮಗ್ರಿಗಳು: ಮೊಟ್ಟೆ- 4
    * ಹಾಲು- 1ಕಪ್
    * ಉಪ್ಪು-ರುಚಿಗೆ ತಕ್ಕಷ್ಟು
    * ಕಾಳು ಮೆಣಸಿನ ಪುಡಿ- ಚಿಟಿಕೆಯಷ್ಟು
    * ಈರುಳ್ಳಿ- 2
    * ಕಡಲೆಹಿಟ್ಟು- 2 ಟೀ ಸ್ಪೂನ್
    * ಜೋಳದ ಹಿಟ್ಟು- 2 ಟೀ ಸ್ಪೂನ್
    * ಮೈದಾ ಹಿಟ್ಟು- 2 ಟೀ ಸ್ಪೂನ್
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್
    * ಎಣ್ಣೆ – 1ಕಪ್
    * ಕ್ಯಾಪ್ಸಿಕಂ- 1
    * ಸೋಯಾ ಸಾಸ್- 1 ಟೀ ಸ್ಪೂನ್
    * ಚಿಲ್ಲಿ ಸಾಸ್- 1 ಟೀ ಸ್ಪೂನ್
    * ಟೊಮೆಟೊ ಸಾಸ್-1 ಟೀ ಸ್ಪೂನ್
    * ವಿನೇಗರ್- 1 ಟೀ ಸ್ಪೂನ್

    ಮಾಡುವ ವಿಧಾನ:

    * ಮೊದಲು ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಉಪ್ಪು, ಮೆಣಸಿನ ಪುಡಿ, ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

    * ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ನೀರು ಕುದಿಯುವ ವೇಳೆ ಮೊಟ್ಟೆಯ ಮಿಶ್ರಣ ಇದ್ದ ಪಾತ್ರೆಯನ್ನು ಅದರಲ್ಲಿಟ್ಟು ಆವಿಯಲ್ಲಿ ಮೊಟ್ಟೆಯನ್ನು ಬೇಯಿಸಬೇಕು. ಬೆಂದ ಈ ಮೊಟ್ಟೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.

    * ನಂತರ ಮತ್ತೊಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಉಪ್ಪು, ಸ್ವಲ್ಪ ಅಚ್ಛ ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ತುಂಡರಿಸಿದ ಮೊಟ್ಟೆಗಳನ್ನು ಇದರಲ್ಲಿ ಅದ್ದಿ, ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಕರಿಯಬೇಕು.

    * ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿರು ಈರುಳ್ಳಿ, ಉಪ್ಪು ಹಾಗೂ ಎಲ್ಲಾ ಸಾಸ್, ವಿನೇಗರ್ ಹಾಕಿ ಮಿಶ್ರಣ ಮಾಡಬೇಕು. ನಂತರ ನೀರು ಹಾಕಿ ಕುದಿಯಲು ಬಿಟ್ಟು ಗ್ರೇವಿ ಗಟ್ಟಿಯಾದ ಬಳಿಕ ಈಗಾಗಲೇ ಎಣ್ಣೆಯಲ್ಲಿ ಕರಿದ ಮೊಟ್ಟೆಗಳನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.