Tag: cooking

  • ಜಿಟಿಜಿಟಿ ಮಳೆಗೆ ಮನೆಯಲ್ಲೇ ಮಾಡಿ ಸವಿಯಿರಿ ಬಿಸಿ ಬಿಸಿ ಚೀಸ್ ಬಾಲ್

    ಜಿಟಿಜಿಟಿ ಮಳೆಗೆ ಮನೆಯಲ್ಲೇ ಮಾಡಿ ಸವಿಯಿರಿ ಬಿಸಿ ಬಿಸಿ ಚೀಸ್ ಬಾಲ್

    ಹೊರಗೆ ಜಿಟಿ ಜಿಟಿ ಮಳೆಯ ಸುರಿಯುತ್ತಿರೋ ವೇಳೆ ಚಳಿ ಚಳಿ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಮಳೆಯಲ್ಲಿ ಹೊರಹೋಗಲು ಸಾಧ್ಯವಾಗುದಿಲ್ಲ. ಹೀಗಾಗಿ ನಿಮಗಾಗಿ ಮನೆಯಲ್ಲೇ ಬಿಸಿ ಬಿಸಿಯಾದ ಚೀಸ್ ಬಾಲ್ ಮಾಡುವ ವಿಧಾನ ಇಲ್ಲಿದೆ.

    ಬೇಕಾದ ಸಾಮಾಗ್ರಿಗಳು
    * ತುರಿದುಕೊಂಡಿರುವ ಚೀಸ್ – 2 ಕಪ್
    * ಬ್ರೆಡ್ ಕ್ರಮ್ಸ್ – ಒಂದೂವರೆ ಕಪ್
    * ಮೈದಾ – 2 ಚಮಚ
    * ಕೊತ್ತಂಬರಿ – ಅರ್ಧ ಕಪ್
    * ಹಾಲು – 2 ಚಮಚ
    * ಕಾರ್ನ್ ಪ್ಲೋರ್ – 1 ಚಮಚ
    * ಕಪ್ಪು ಮೆಣಸಿನ ಪುಡಿ – ಅರ್ಧ ಚಮಚ
    * ಚಿಲ್ಲಿ ಪದರ – 1 ಚಮಚ
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ತುರಿದುಕೊಂಡಿರುವ ಚೀಸ್ ಅನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.
    * ಅದಕ್ಕೆ ಬ್ರೆಡ್ ಕ್ರಮ್ಸ್, ಮೈದಾಹಿಟ್ಟು, ಕಾರ್ನ್ ಪ್ಲೋರ್, ಕರಿಮೆಣಸಿನ ಪುಡಿ, ಚಿಲ್ಲಿ ಪದರ, ಉಪ್ಪು ಮತ್ತು ಹಾಲನ್ನು ಹಾಕಿ ಕಲಸಿ.
    * ನಂತರ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಒಂದೊಂದು ಉಂಡೆ ಮಾಡಿ ಇಟ್ಟುಕೊಳ್ಳಿ.
    * ಉಂಡೆ ಮಾಡಿ ಇಟ್ಟುಕೊಂಡ ಬಾಲ್‍ಗಳನ್ನು ಮೈದಾ ಹಿಟ್ಟಿನೊಳಗೆ ರೋಲ್ ಮಾಡಿ, 20 ನಿಮಿಷ ಫ್ರಿಜ್ ನಲ್ಲಿಡಿ.
    * ಇತ್ತ ಸ್ಟವ್ ಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ, ನಂತ್ರ ಕಾದ ಎಣ್ಣೆಗೆ ಬೋಂಡದ ರೀತಿಯ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಆ ಬಳಿಕ ಬಾಣಲೆಯಿಂದ ತೆಗೆದು ಒಂದು ಪ್ಲೇಟ್ ಗೆ ಹಾಕಿ, ಚಳಿಯಲ್ಲಿ ಬಿಸಿ ಬಿಸಿ ಚೀಸ್ ಬಾಲ್ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಮನೆಯಲ್ಲಿಯೇ ಮಾಡಿ ಮಸಾಲ ಸ್ವೀಟ್ ಕಾರ್ನ್

    ಮನೆಯಲ್ಲಿಯೇ ಮಾಡಿ ಮಸಾಲ ಸ್ವೀಟ್ ಕಾರ್ನ್

    ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮಸಾಲ ಸ್ವೀಟ್ ಕಾರ್ನ್ ಅಂದರೆ ಇಷ್ಟ ಪಡುತ್ತಾರೆ. ಮಕ್ಕಳು ಸಂಜೆ ವೇಳೆ ಏನಾದರೂ ಸ್ನ್ಯಾಕ್ಸ್ ತಿನ್ನಲು ಕೇಳುತ್ತಿರುತ್ತಾರೆ. ಆಗ ಮನೆಯಲ್ಲಿ ಜೋಳ ಇದ್ದರೆ ಸುಲಭವಾಗಿ ಕಡಿಮೆ ಸಮಯದಲ್ಲಿ ಮಸಾಲ ಸ್ವೀಟ್ ಕಾರ್ನ್ ಮಾಡಿಕೊಡಿ. ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಮಸಾಲ ಸ್ವೀಟ್ ಕಾರ್ನ್  ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸ್ವೀಟ್ ಕಾರ್ನ್(ಜೋಳ) – 1 ಕಪ್
    2. ಖಾರದ ಪುಡಿ – 1/4 ಚಮಚ
    3. ಚಾಟ್ ಮಸಾಲ ಪುಡಿ – 1/4 ಚಮಚ
    4. ಮೆಣಸಿನ ಪುಡಿ – 1/4 ಚಮಚ
    5. ನಿಂಬೆಹಣ್ಣು – 1/4 ಚಮಚ
    6. ಕೊತ್ತಂಬರಿ ಸೊಪ್ಪು – ಸ್ವಲ್ಪ
    7. ಬೆಣ್ಣೆ – 1 ಚಮಚ
    8. ಉಪ್ಪು – ರುಚಿಗೆ ತಕ್ಕಷ್ಟು
    9. ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲು ಕುಕ್ಕರ್ ಗೆ ಜೋಳ ಮತ್ತು ಚಿಟಿಕೆ ಅರಿಶಿಣ ಹಾಕಿ ಎರಡು ವಿಶಲ್ ಬರುವವರೆಗೆ ಬೇಯಿಸಿ.
    * ಬಳಿಕ ಕುಕ್ಕರ್ ವಿಶಲ್ ತೆಗೆದು ಜೋಳ ಮೃದುವಾಗಿ ಬೆಂದಿದೆಯಾ ಎಂದು ಪರೀಕ್ಷಿಸಿಕೊಳ್ಳಿ.
    * ನಂತರ ಅದನ್ನು ಕುಕ್ಕರ್ ನಿಂದ ಹೊರ ತೆಗೆದು ಡ್ರೈ ಮಾಡಿಕೊಳ್ಳಿ.
    * ಜೋಳ ಬಿಸಿ ಇರುವಾಗಲೇ ಒಂದು ಬೌಲ್ ಗೆ ಹಾಕಿ ಅದಕ್ಕೆ ಬೆಣ್ಣೆ ಹಾಕಿ ಮಿಕ್ಸ್ ಮಾಡಿ.
    * ನಂತರ ಖಾರದ ಪುಡಿ, ಮೆಣಸಿನ ಪುಡಿ, ಚಾಟ್ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
    * ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.
    * ಖಾರ ತುಂಬಾ ತಿನ್ನುವರು ಎಷ್ಟು ಬೇಕೋ ಅಷ್ಟು ಖಾರ ಹಾಕಿಕೊಳ್ಳಿ.
    * ಬಳಿಕ ಒಂದು ಬೌಲ್ ಹಾಕಿ ಸವಿಯಿರಿ.

  • ಸುಲಭವಾಗಿ ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ

    ಸುಲಭವಾಗಿ ಬಾಳೆಕಾಯಿ ಚಿಪ್ಸ್ ಮಾಡುವ ವಿಧಾನ

    ಕೆಲವು ದಿನಗಳಿಂದ ಮಳೆಯಾದ ಪರಿಣಾಮ ವಾತಾವರಣ ತುಂಬಾ ತಣ್ಣಗೆ ಚಳಿ ಚಳಿಯಾಗಿ ಇದೆ. ಈ ವಾತಾವರಣದಲ್ಲಿ ಬಿಸಿ ಬಿಸಿಯಾಗಿ ಏನಾದರೂ ಖಾರವಾಗಿ ತಿನ್ನೋಣ ಅನ್ನಿಸುತ್ತಿದೆ. ಅದರಲ್ಲೂ ಆಗ ತಾನೇ ಮಾಡಿದ ಬಿಸಿ ತಿಂಡಿಯನ್ನು ಸವಿಯಲು ಇಷ್ಟ ಪಡುತ್ತೀರಾ. ಆದ್ದರಿಂದ ನಿಮಗಾಗಿ ಸುಲಭವಾಗಿ ಬಾನಾನ ಚಿಪ್ಸ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಬಾಳೆಕಾಯಿ – 2-4
    2. ಅರಿಶಿನ ಪುಡಿ – ಚಿಟಿಕೆ
    3. ಖಾರದ ಪುಡಿ – ಅರ್ಧ ಚಮಚ
    4. ಗರಂ ಮಸಾಲ – ಅರ್ಧ ಚಮಚ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಎಣ್ಣೆ – ಕರಿಯಲು

    ಮಾಡುವ ವಿಧಾನ
    *  ಒಂದು ಪ್ಯಾನ್‍ ಗೆ ಎಣ್ಣೆ ಹಾಕಿ ಬಿಸಿಯಾಗಲು ಇಡಿ.
    *  ಬಾಳೆಕಾಯಿಯ ಹಸಿರು ಸಿಪ್ಪೆಯನ್ನು ತೆಗೆದು, ಸ್ಲೈಸ್ ಗಳನ್ನಾಗಿ ಮಾಡಿ.
    *  ಪ್ಯಾನ್ ಮೇಲೆ ಸ್ಲೈಸರ್ ಇಟ್ಟುಕೊಂಡು ಕಾದ ಎಣ್ಣೆಗೆ ಬಾಳೆಕಾಯಿಯ ಸ್ಲೈಸ್ ಗಳನ್ನು ಹಾಕಿ.
    *  ಬಾಳೆಕಾಯಿಯನ್ನು ಚೆನ್ನಾಗಿ ಫ್ರೈ ಮಾಡಿ, ಟಿಶ್ಯೂ ಪೇಪರ್ ಮೇಲೆ ಹಾಕಿ.
    *  ಅದಕ್ಕೆ ಉಪ್ಪು, ಅರಶಿನ ಪುಡಿ, ಖಾರದ ಪುಡಿ, ಗರಂ ಮಸಾಲ ಪುಡಿಯನ್ನು ಚುಮುಕಿಸಿ ಮಿಕ್ಸ್ ಮಾಡಿ, ಚೆನ್ನಾಗಿ ಕಲಸಿ.
    *  ಗರಿ ಗರಿಯಾದ ಬಾಳೆಕಾಯಿ ಚಿಪ್ಸ್ ಸವಿಯಲು ಸಿದ್ಧ, ಚಿಪ್ಸ್ ತಣ್ಣಗಾದ ಮೇಲೆ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ ಬಳಸಬಹುದು.

  • ಸಿಹಿ ಸಿಹಿಯಾಗಿ ರುಚಿಯಾದ ಶಾವಿಗೆ ಪಾಯಸ ಮಾಡುವ ವಿಧಾನ

    ಸಿಹಿ ಸಿಹಿಯಾಗಿ ರುಚಿಯಾದ ಶಾವಿಗೆ ಪಾಯಸ ಮಾಡುವ ವಿಧಾನ

    ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅಥವಾ ಮಕ್ಕಳ ಹುಟ್ಟುಹಬ್ಬ ದಿನ ಮನೆಯಲ್ಲಿಯೇ ಏನಾದರೂ ಸಿಂಪಲ್ಲಾಗಿ ಬೇಗ ಸಿದ್ಧವಾಗುವಂತಹ ಸಿಹಿ ಮಾಡಬೇಕು ಎಂದುಕೊಂಡಿರುತ್ತೀರಾ. ಅದಕ್ಕಾಗಿ ನಿಮಗಾಗಿ ರುಚಿರುಚಿಯಾಗಿ ಸಿಹಿಯಾದ ಶಾವಿಗೆ ಪಾಯಸ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಹಾಲು –  ಕಾಲ್ ಲೀಟರ್
    2. ಶಾವಿಗೆ – 1 ಕಪ್
    3. ಸಕ್ಕರೆ – 4/3 ಕಪ್
    4. ತುಪ್ಪ – 2 ಚಮಚ
    5. ಗೋಡಂಬಿ – ಸ್ವಲ್ಪ
    6. ದ್ರಾಕ್ಷಿ – ಸ್ವಲ್ಪ
    7. ಎಲಕ್ಕಿ ಪುಡಿ – ಚಿಟಿಕೆ

    ಮಾಡುವ ವಿಧಾನ:
    * ಮೊದಲು ಒಂದು ಬೌಲ್ ಗೆ ಶಾವಿಗೆ ಹಾಕಿ ಲೈಟ್ ಬ್ರೋನ್ ಬಣ್ಣ ಬರವವರೆಗೆ ಫ್ರೈ
    ಮಾಡಿಕೊಳ್ಳಿ.
    * ಇನ್ನೊಂದು ಬೌಲ್ ನಲ್ಲಿ ಹಾಲು ಇಟ್ಟು ಕುದಿಸಿರಿ.
    * ಪ್ರೈ ಮಾಡಿದ್ದ ಶಾವಿಗೆಯನ್ನು ಕಾಯಿಸಿದ ಹಾಲಿಗೆ ಹಾಕಿ ಸಣ್ಣ ಉರಿಯಲ್ಲಿ ತಿರುವಿರಿ.
    * ಬಳಿಕ ಅದಕ್ಕೆ ಸಕ್ಕರೆಯನ್ನು ಹಾಕಿ 15 ನಿಮಿಷ ತಿರುವುಕೊಂಡು ಬೇಯಿಸಿ.
    * ಶಾವಿಗೆ ಪ್ರೈ ಮಾಡಿದ್ದ ಬೌಲ್ ಗೆ ಎರಡು ಚಮಚ ತುಪ್ಪ ಹಾಕಿ ದ್ರಾಕ್ಷಿ-ಗೋಡಂಬಿ ಹಾಕಿ ಫ್ರೈ ಮಾಡಿಕೊಳ್ಳಿ.
    * ಇದನ್ನು ಬೇಯುತ್ತಿದ್ದ ಶಾವಿಗೆ ಒಳಗೆ ಹಾಕಿ ಮಿಕ್ಸ್ ಮಾಡಿ.
    * ಬಳಿಕ ಇದಕ್ಕೆ ಚಿಟಿಕಿ ಎಲಕ್ಕಿ ಹಾಕಿ ತಿರುವಿರಿ. ನಂತರ ಒಂದು ಬೌಲ್ ಗೆ ಹಾಕಿಕೊಂಡು ಸವಿಯಿರಿ.

  • ಸುಲಭವಾಗಿ ಟೇಸ್ಟಿ ಕೊಬ್ಬರಿ ಲಡ್ಡು ಮಾಡೋದು ಹೇಗೆ?

    ಸುಲಭವಾಗಿ ಟೇಸ್ಟಿ ಕೊಬ್ಬರಿ ಲಡ್ಡು ಮಾಡೋದು ಹೇಗೆ?

    ನೆಯಲ್ಲಿ ಕೊಬ್ಬರಿ ಉಳಿದಿದೆಯಾ? ಅಯ್ಯೊ ಸುಮ್ನೆ ಕೊಬ್ಬರಿ ವೇಸ್ಟ್ ಆಗತ್ತಲ್ಲಾ ಅಂತಾ ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಇಲ್ಲಿದೆ ಸಿಂಪಲ್ ಕೊಬ್ಬರಿ ಲಡ್ಡು ಮಾಡೊ ವಿಧಾನ.

    ಬೇಕಾಗುವ ಸಾಮಗ್ರಿಗಳು:
    ತುರಿದಿರುವ ಕೊಬ್ಬರಿ – 1 ಕಾಲು ಕಪ್
    ಹಾಲು – ಮುಕ್ಕಾಲು ಲೀಟರ್
    ಸಕ್ಕರೆ – 1/3 ಕಪ್
    ತುಪ್ಪ – 2 ಚಮಚ
    ಏಲಕ್ಕಿ ಪುಡಿ – ಎರಡು ಚಿಟಿಕೆ
    ಬಾದಾಮಿ- ಸ್ವಲ್ಪ

    ಮಾಡುವ ವಿಧಾನ:
    1. ಮೊದಲು ಒಂದು ಪ್ಯಾನ್‍ನನ್ನು ಸ್ಟೌವ್ ಮೇಲಿಟ್ಟು, ಬಿಸಿಯಾದ ಬಳಿಕ 1 ಕಾಲು ಕಪ್ ತುರಿದ ಕೊಬ್ಬರಿಯನ್ನು ಹಾಕಿ ಸ್ವಲ್ಪ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ.

    2. ಬಳಿಕ ಫ್ರೈ ಮಾಡಿರುವ ಕೊಬ್ಬರಿ ತುರಿಗೆ ಮುಕ್ಕಾಲು ಲೀಟರ್ ಕಪ್ ಹಾಲು ಹಾಗೂ 1/3 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಕಡಿಮೆ ಉರಿಯಲ್ಲಿ ಮಿಶ್ರಣವನ್ನು ಡ್ರೈ ಆಗಲು ಬಿಡಿ.

    3. ಕೊಬ್ಬರಿ ಮಿಶ್ರಣಕ್ಕೆ 2 ಚಮಚ ತುಪ್ಪ ಹಾಗೂ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವು ಗಟ್ಟಿಯಾಗುವ ತನಕ ಅದನ್ನು ಸೌಟಿನಿಂದ ತಿರುಗಿಸುತ್ತಾ ಇರಿ.

    4. ಮಿಶ್ರಣ ಗಟ್ಟಿಯಾದ ಮೇಲೆ ಸ್ಟೌವ್ ಆಫ್ ಮಾಡಿ, ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ನಿಧಾನವಾಗಿ ಮಿಶ್ರಣವನ್ನು ಒಂದೊಂದೆ ಉಂಡೆ ಆಕಾರದಲ್ಲಿ ಮಾಡಿ ಪ್ಲೇಟ್‍ನಲ್ಲಿ ಇಡಿ. ಕೊಬ್ಬರಿ ತುರಿಯಿಂದ ತಯಾರಿಸಿದ ಲಡ್ಡುಗಳನ್ನು ಒಂದೊಂದು ಬಾದಾಮಿ ಅಲಂಕರಿಸಿ ಸಿದ್ಧ ಪಡಿಸಿದರೆ ಕೊಬ್ಬರಿ ಲಡ್ಡು ಸವಿಯಲು ಸಿದ್ಧ.

    ಮಕ್ಕಳಿಂದ ದೊಡ್ಡವರವರೆಗೂ ಸ್ವೀಟ್ ಅಂದ್ರೆ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಸ್ವೀಟ್ ಪ್ರಿಯರಿಗೆಂದೇ ಈ ರೆಸಿಪಿ ತಯಾರಾಗಿದೆ. ಸಿಂಪಲ್ ಕೊಬ್ಬರಿ ಲಾಡು ಎಲ್ಲರಿಗೂ ಸಖತ್ ಇಷ್ಟ ಅಗೊದ್ರಲ್ಲಿ ಎರಡು ಮಾತೇ ಇಲ್ಲ.

  • ಸಿಂಪಲ್ಲಾಗಿ ಎಗ್ ಮಂಚೂರಿ ತಯಾರಿಸೋದು ಹೇಗೆ?- ಇಲ್ಲಿದೆ ಸುಲಭ ವಿಧಾನ

    ಸಿಂಪಲ್ಲಾಗಿ ಎಗ್ ಮಂಚೂರಿ ತಯಾರಿಸೋದು ಹೇಗೆ?- ಇಲ್ಲಿದೆ ಸುಲಭ ವಿಧಾನ

    ಜಾ ದಿನಗಳಲ್ಲಿ ಮನೆಯಲ್ಲಿ ಏನಾದರೂ ಸ್ಪೆಶಲ್ ಆಗಿ ಮಾಡಿಕೊಂಡು ತಿನ್ನುವ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಇದಕ್ಕಾಗಿ ಎಗ್ ಪ್ರಿಯರಿಗೆಂದೇ ಸಿಂಪಲ್ಲಾಗಿ ಎಗ್ ಮಂಚೂರಿ ಮಾಡುವ ವಿಧಾನ ಇಲ್ಲಿ ತಿಳಿಸಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    1. 2 ಬೇಯಿಸಿದ ಮೊಟ್ಟೆ ಹಾಗೂ 1 ಹಸಿ ಮೊಟ್ಟೆ
    2. ಈರುಳ್ಳಿ- 1 ಮೀಡಿಯಂ
    3. ಟೊಮೆಟೊ- 1 ಮೀಡಿಯಂ
    3. ಹಸಿಮೆಣಸಿನಕಾಯಿ- 4
    4. ಕೊತ್ತಂಬರಿ ಸೊಪ್ಪು ಸ್ವಲ್ಪ
    5. ಶುಂಠಿ ಬೆಳ್ಳುಳಿ ಪೇಸ್ಟ್
    6. ಕಾನ್‍ಪ್ಲವರ್ ಹಿಟ್ಟು- 200 ಗ್ರಾಂ
    7. ಅಕ್ಕಿ ಹಿಟ್ಟು- 50 ಗ್ರಾಂ
    8. ಉಪ್ಪು-ರುಚಿಗೆ ತಕ್ಕಷ್ಟು
    9. ಖಾರದ ಪುಡಿ ಹಾಗೂ ಎಗ್ ಮಸಾಲಾ ಪುಡಿ ರುಚಿಗೆ ತಕ್ಕಷ್ಟು
    10. ಟೊಮೆಟೊ ಸಾಸ್ ಸ್ವಲ್ಪ
    11. ಎಣ್ಣೆ ಕರಿಯಲು

    ಮಾಡುವ ವಿಧಾನ:
    * ಮೊದಲಿಗೆ ಬೇಯಿಸಿಕೊಂಡಿದ್ದ ಮೊಟ್ಟೆಯನ್ನು ಸಣ್ಣಗೆ ಹಚ್ಚಿಕೊಳ್ಳಬೇಕು.
    * ಒಂದು ಬಟ್ಟಲಿನಲ್ಲಿ 200 ಗ್ರಾಂ ಕಾನ್‍ಫ್ಲವರ್ ಹಿಟ್ಟು ಹಾಗೂ 100 ಗ್ರಾಂ ಅಕ್ಕಿ ಹಾಕಿ ಹಿಟ್ಟಿನ ಮಿಶ್ರಣ ಸಿದ್ದಪಡಿಸಿಕೊಳ್ಳಿ.
    * ಹಿಟ್ಟಿನ ಮಿಶ್ರಣಕ್ಕೆ ಹಸಿಮೊಟ್ಟೆಯ ವೈಟ್ ಭಾಗ ಹಾಗೂ ಸಣ್ಣಗೆ ಹಚ್ಚಿದ ಮೊಟ್ಟೆಯನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಕಲಸಿಕೊಂಡು 10 ನಿಮಿಷ ನೆನೆ ಇಟ್ಟುಕೊಳ್ಳಿ.
    * ಕಲಸಿಕೊಂಡ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆ ಗಾತ್ರದಲ್ಲಿ ಕಾದ ಎಣ್ಣೆಯಲ್ಲಿ ಗೋಲ್ಡನ್ ಫ್ರೈ ಆಗುವವರೆಗೆ ಕರಿಯಬೇಕು.
    * ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹಚ್ಚಿದ ಈರುಳ್ಳಿ, ಮೆಣಸಿಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ.
    * ಇದಕ್ಕೆ ಟೊಮೆಟೊ ಹಾಗೂ ರುಚಿಗೆ ಬೇಕಾದಷ್ಟು ಉಪ್ಪು, ಖಾರದ ಪುಡಿ ಹಾಗೂ ಎಗ್ ಮಸಾಲವನ್ನು ಹಾಕಿಕೊಂಡು ಮಿಶ್ರಣವನ್ನು ತಯಾರಿಸಿಕೊಳ್ಳಿ.
    * ಕರಿದ ಎಗ್ ಉಂಡೆಗಳನ್ನು ತಯಾರಿಸಿಕೊಂಡ ಮಿಶ್ರಣದಲ್ಲಿ ಹಾಕಿ ಇದಕ್ಕೆ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ.
    * ನಂತರ ಟೊಮೆಟೊ ಸಾಸ್‍ನೊಂದಿಗೆ ಎಗ್ ಮಂಚೂರಿ ಸವಿಯಿರಿ.

  • ಸಿಂಪಲ್ಲಾಗಿ ಜೋಳದ ಕಬಾಬ್ ಸ್ಟಿಕ್ ಮಾಡುವ ವಿಧಾನ

    ಸಿಂಪಲ್ಲಾಗಿ ಜೋಳದ ಕಬಾಬ್ ಸ್ಟಿಕ್ ಮಾಡುವ ವಿಧಾನ

    ಮತ್ತೆ ಕರ್ನಾಟಕದಾದ್ಯಂತ ಮಳೆ ಆರಂಭವಾಗಿದೆ. ಮಕ್ಕಳು, ಕೆಲಸಕ್ಕೆ ಹೋಗುವವರು ಬೇಗ ಬೇಗ ಮನೆ ಸೇರಿಕೊಳ್ಳುತ್ತಾರೆ. ಆದರೆ ಮನೆಯಲ್ಲಿ ಇದ್ದರೆ ಏನಾದರೂ ಬಿಸಿಬಿಸಿಯಾಗಿ ಖಾರಖಾರವಾಗಿ ತಿನ್ನೋಣ ಅನ್ನಿಸುತ್ತದೆ. ಹೀಗಾಗಿ ಸಿಂಪಲ್ಲಾಗಿ ಜೋಳದ ಕಾಬಾಬ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಸ್ವೀಟ್ ಕಾರ್ನ್ – ಅರ್ಧ ಬಟ್ಟಲು
    2. ಆಲೂಗಡ್ಡೆ -1 ಸಣ್ಣದು
    3. ಈರುಳ್ಳಿ – 1 ಮೀಡಿಯಂ
    4. ಕ್ಯಾಪ್ಸಿಕಂ – 1/4 ಬಟ್ಟಲು
    5. ಹಸಿಮೆಣಸಿಕಾಯಿ – 5
    6. ನಿಂಬೆ ಹಣ್ಣು – ಸಣ್ಣದು
    7. ಕೊತ್ತಂಬರಿ ಸೊಪ್ಪು + ಪುದೀನಾ – ಸ್ವಲ್ಪ
    9. ಶುಂಠಿ – ಸ್ವಲ್ಪ
    10. ಗರಂ ಮಸಾಲ – 1/2 ಚಮಚ
    11. ಅಕ್ಕಿ ಹಿಟ್ಟು – 1 ಚಮಚ
    12. ಕಡಲೆ ಹಿಟ್ಟು – 1 ಚಮಚ
    13. ಬ್ರೆಡ್ – 2 ಸ್ಲೈಸ್
    14. ಉಪ್ಪು – ರುಚಿಗೆ ತಕ್ಕಷ್ಟು
    15. ಎಣ್ಣೆ – ಕರಿಯಲು
    16. ಐಸ್‍ಕ್ರೀಂ ಸ್ಟಿಕ್ – 5-10

    ಮಾಡುವ ವಿಧಾನ:
    * ಮೊದಲಿಗೆ ಸ್ವೀಟ್ ಕಾರ್ನ್ ಅನ್ನು ನೀರಿನಲ್ಲಿ ಬೇಯಿಸಿ.
    * ಬಳಿಕ ನೀರು ಸೋಸಿ ಮಿಕ್ಸರ್ ಜಾರ್ ಗೆ ಹಾಕಿ ಒಂದು ಸುತ್ತು ಗ್ರೈಂಡ್ ಮಾಡಿ
    * ತರಿತರಿಯಾಗಿ ರುಬ್ಬಿದ ಸ್ವೀಟ್ ಕಾರ್ನ್ ಅನ್ನು ಒಂದು ಮಿಕ್ಸಿಂಗ್ ಬೌಲ್ ಗೆ ಹಾಕಿ.
    * ಅದಕ್ಕೆ ಬೇಯಿಸಿ ತುರಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಶುಂಠಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ, ಪುದೀನಾ ಹಾಕಿ ಕಲಸಿ.
    * ನಂತರ ಅದಕ್ಕೆ ಗರಂ ಮಸಾಲ ಜೊತೆಗೆ ನೀರಿನಲ್ಲಿ ಅದ್ದಿ ಹಿಂಡಿದ ಬ್ರೆಡ್ ಅನ್ನು ಪುಡಿ ಮಾಡಿ ಹಾಕಿ.
    * ನಂತರ 1 ಚಮಚ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿರಿ.
    * ಬಳಿಕ ಬೇಯಿಸಿದ ಸ್ವೀಟ್ ಕಾರ್ನ್ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ.
    * ಬಳಿಕ ಎಲ್ಲವೂ ಸರಿಯಾಗಿ ಮಿಕ್ಸ್ ಆಗುವಂತೆ ಕೈಯಲ್ಲಿ ಕಲಸಿಡಿ.
    * ಎರಡೂ ಅಂಗೈಗೆ ಎಣ್ಣೆ ಸವರಿಕೊಂಡು ಹಿಟ್ಟು ರೋಲ್ ಮಾಡಿ ಐಸ್‍ಕ್ರೀಂ ಸ್ಟಿಕ್‍ಗೆ ಅಂಟಿಸಿ.
    * ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಸವಿಯಿರಿ..
    ಗಮನಿಸಿ: (ಹಿಟ್ಟು ಮಿಕ್ಸ್ ಮಾಡಲು ನೀರು ಬಳಸಬೇಡಿ)

  • ರಂಜಾನ್ ಸ್ಪೆಷಲ್ – ಬ್ರೆಡ್ ಚಿಕನ್ ರೋಲ್ ಮಾಡೋದು ಹೇಗೆ?

    ರಂಜಾನ್ ಸ್ಪೆಷಲ್ – ಬ್ರೆಡ್ ಚಿಕನ್ ರೋಲ್ ಮಾಡೋದು ಹೇಗೆ?

    ಇದೇ ತಿಂಗಳು ರಂಜಾನ್ ಹಬ್ಬವಿದೆ. ಪ್ರತಿ ವರ್ಷ ರಂಜಾನ್ ಗೆ ಚಿಕನ್, ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಮಾಡುತ್ತಾರೆ. ಪ್ರತಿವರ್ಷ ಒಂದೇ ತರಹದ ಅಡುಗೆ ಮಾಡಿ ನಿಮಗೂ ಬೇಸರವಾಗಿರಬಹುದು. ಹೀಗಾಗಿ ಈ ವರ್ಷ ರಂಜಾನ್ ಸ್ಪೆಷಲ್ ಅಡುಗೆ ಬ್ರೆಡ್ ಚಿಕನ್ ರೋಲ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಬೋನ್ ಲೆಸ್ ಚಿಕನ್ – 300 ಗ್ರಾಂ
    2. ಮೊಸರು – ಅರ್ಧ ಕಪ್
    3. ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    4. ಕೆಂಪು ಮೆಣಸಿನಕಾಯಿ ತರಿ – 1 ಚಮಚ
    5. ತಂದೂರಿ ಮಸಾಲ ಪುಡಿ – 1 ಚಮಚ
    6. ಹಾಲಿನ ಗಟ್ಟಿ ಕೆನೆ
    7. ಎಣ್ಣೆ – ಕರಿಯಲು
    8. ಉಪ್ಪು – ರುಚಿಗೆ ತಕ್ಕಷ್ಟು
    9. ಬ್ರೆಡ್ ಸ್ಲೈಸ್ – ಬೇಕಾದಷ್ಟು
    10. ಮೊಟ್ಟೆ – 2
    11. ಬ್ರೆಡ್ ಕ್ರಮ್ಸ್ – ಅರ್ಧ ಕಪ್

    ಮಾಡುವ ವಿಧಾನ
    * ಸಣ್ಣಗೆ ಕತ್ತರಿಸಿದ ಅಥವಾ ಕ್ಯೂಬ್ ಆಕಾರದಲ್ಲಿ ಕತ್ತರಿಸಿದ ಬೋನ್‍ಲೆಸ್ ಚಿಕನ್, ಮೊಸರು, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನಕಾಯಿ ತರಿ, ತಂದೂರಿ ಮಸಾಲಾ ಪುಡಿ ಎಲ್ಲವನ್ನು ಸೇರಿಸಿ ಕಲಸಿರಿ.
    * ಕಲಸಿದ ಚಿಕನ್ ಮಸಾಲಾವನ್ನು 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಫೀಸರ್‍ನಲ್ಲಿಡಿ.
    * ನಂತರ 1 ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ ಮ್ಯಾರಿನೇಟ್ ಆದ ಚಿಕನ್ ಹಾಕಿ ಫ್ರೈ ಮಾಡಿ.
    * ಬಳಿಕ ಬ್ರೆಡ್ ಸ್ಲೈಸ್ ನ ಅಂಚು ಕತ್ತರಿಸಿ ಸ್ವಲ್ಪ ಗಟ್ಟಿ ಕೆನೆಯನ್ನು ಸವರಿ ಫ್ರೈ ಮಾಡಿದ ಚಿಕನ್ ಫಿಲ್ ಮಾಡಿ ರೋಲ್ ಮಾಡಿ.
    * 2 ಮೊಟ್ಟೆ ಒಡೆದು ಬೀಟ್ ಮಾಡಿ ಅದರಲ್ಲಿ ರೋಲ್ ಡಿಪ್ ಮಾಡಿ.
    * ಬ್ರೆಡ್ ಕ್ರಮ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
    * ಸಾಸ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬ್ರೆಡ್ ಚಿಕನ್ ರೋಲ್ ಸವಿಯಿರಿ.

  • ಇಲ್ಲಿದೆ ಮನೆಯಲ್ಲಿಯೇ ಸಿಂಪಲ್ಲಾಗಿ ಬೇಲ್ ಪುರಿ ಮಾಡುವ ವಿಧಾನ

    ಇಲ್ಲಿದೆ ಮನೆಯಲ್ಲಿಯೇ ಸಿಂಪಲ್ಲಾಗಿ ಬೇಲ್ ಪುರಿ ಮಾಡುವ ವಿಧಾನ

    ಸಂಜೆ ಸಮಯ ಏನಾದರೂ ತಿನ್ನಬೇಕು ಅನಿಸುತ್ತದೆ. ಆದರೆ ಈಗ ಸಂಜೆ ಆದರೆ ಸಾಕು ಮಳೆ ಪ್ರಾರಂಭವಾಗುತ್ತದೆ. ಮನೆಯಲ್ಲಿಯೇ ಇದ್ದು ಖಾರ ಖಾರವಾದ ತಿಂಡಿ ತಿನ್ನಬೇಕು. ಹಾಗಿದ್ದರೆ ಇಲ್ಲಿದೆ ನೋಡಿ ಸಿಂಪಲ್ ಆಗಿ ಬೇಲ್ ಪುರಿ ಮಾಡುವ ವಿಧಾನ.

    ಬೇಕಾಗುವ ಸಾಮಾಗ್ರಿಗಳು
    1. ಚುರುಮುರಿ – 1 ಬೌಲ್
    2. ಖಾರದ ಪುಡಿ – 1 ಚಮಚ
    3. ಕ್ಯಾರೆಟ್ – 1
    4. ಕೊತ್ತಂಬರಿ ಸೊಪ್ಪು
    5. ಹಸಿರು ಮೆಣಸಿನಕಾಯಿ – 2
    6. ನಿಂಬೆ ರಸ
    7. ಹುಣಸೆ ರಸ
    8. ಟೊಮೆಟೋ – 1
    9. ಈರುಳ್ಳಿ – 1
    10. ಚಾಟ್ ಮಸಲಾ
    11. ಶೇಂಗ ಕಾಳು – ಅರ್ಧ ಬೌಲ್
    12. ಸೇವ್ – 1 ಕಪ್
    13. ಉಪ್ಪು- ರುಚಿಗೆ ತಕ್ಕಷ್ಟು
    14. ಸಕ್ಕರೆ- ರುಚಿಗೆ ತಕ್ಕಷ್ಟು

    ಬೇಲ್ ಪುರಿ ಮಾಡುವ ವಿಧಾನ
    * ಒಂದು ಬೌಲ್ ಗೆ ಚುರುಮುರಿ, ಸಣ್ಣಗೆ ಕತ್ತರಿಸಿದ ಟೊಮೆಟೋ ಮತ್ತು ಈರುಳ್ಳಿ ಹಾಕಿ.
    * ನಂತರ ಸಣ್ಣಗೆ ತುರಿದ ಕ್ಯಾರೆಟ್, ಶೇಂಗ ಕಾಳು, ಖಾರದ ಪುಡಿ, ಹಸಿ ಮೆಣಸಿನಕಾಯಿ, ಉಪ್ಪು, ನಿಂಬೆ ಮತ್ತು ಹುಣಸೆ ರಸ ಹಾಕಿ ಮಿಕ್ಸ್ ಮಾಡಿ.
    * ಚಾಟ್ ಮಸಲಾ, ಉಪ್ಪು, ಸಕ್ಕರೆ ಹಾಕಿ ಮಿಕ್ಸ್ ಮಾಡಿ.
    * ಇದೆಲ್ಲಾ ಮಿಕ್ಸ್ ಮಾಡಿ ನಂತರ ಅದರ ಮೇಲೆ ಸೇವ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಬೇಲ್ ಪುರಿ ಸವಿಯಲು ಸಿದ್ಧ.

  • ಕುಲ್ಫಿ ಐಸ್‍ಕ್ರೀಂ ಮಾಡೋದು ಹೇಗೆ?

    ಕುಲ್ಫಿ ಐಸ್‍ಕ್ರೀಂ ಮಾಡೋದು ಹೇಗೆ?

    ಬಿಸಿಲೇರುತ್ತಿದೆ. ಆಚೆ ಹೋಗೋಕು ಆಗ್ತಿಲ್ಲ. ಮನೆಯಲ್ಲೇ ಏನಾದ್ರೂ ತಣ್ಣಗೆ ತಿನ್ನೋಣ. ಕುಡಿಯೋಣ ಅನ್ನೋರಿಗಾಗಿ ಇಲ್ಲಿದೆ ಕುಲ್ಫಿ ಐಸ್‍ಕ್ರೀಂ ರೆಸಿಪಿ

    ಬೇಕಾಗಿರುವ ಸಾಮಾಗ್ರಿಗಳು
    ಕೆನೆಭರಿತ ಹಾಲು – 1/2ಲೀಟರ್
    ಸಕ್ಕರೆ – 1/4 ಕಪ್
    ಜೋಳದ ಹಿಟ್ಟು – 1 ಟಿಎಸ್‍ಪಿ
    ಕೇಸರಿ ದಳಗಳು
    ಕನ್ಡೆನ್ಸ್‍ಡ್ ಮಿಲ್ಕ್ – 1/4 ಕಪ್
    ಗೋಡಂಬಿ, ಪಿಸ್ತಾ, ಬಾದಾಮಿ – 8-10
    ———-


    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ಕೆನೆ ಭರಿತ ಅರ್ಧ ಲೀಟರ್ ಹಾಲನ್ನು ಮುಕ್ಕಾಲು ಭಾಗವಾಗುವಷ್ಟು ಚೆನ್ನಾಗಿ ಕುದಿಸಿ
    * 1 ಟಿಎಸ್‍ಪಿ ಜೋಳದ ಹಿಟ್ಟುನ್ನು ನೀರಿನಲ್ಲಿ ಕಲಸಿ ಹಾಲಿಗೆ ಮಿಕ್ಸ್ ಮಾಡಿ ತಿರುಗಿಸಿ. ಹಾಲು ಸ್ವಲ್ಪ ಗಟ್ಟಿ ಆಗಲು ಆರಂಭಿಸುತ್ತದೆ.
    * ಗಟ್ಟಿಯಾದ ಹಾಲಿಗೆ 1/4 ಕಪ್ ಸಕ್ಕರೆ ಸೇರಿಸಿ ತಿರುಗಿಸಿ.
    * ಕುದಿಯುತ್ತಿರುವ ಹಾಲಿಗೆ ಕೇಸರಿ ದಳಗಳನ್ನು ಹಾಕಿ ತಿರುಗಿಸಿ ಸ್ಟವ್ ಆಫ್ ಮಾಡಿ.
    * ಆರಿದ ಹಾಲನ್ನು ಒಂದು ಬೌಲ್‍ಗೆ ಹಾಕಿಕೊಳ್ಳಿ. ಅದಕ್ಕೆ 1/4 ಕಪ್ ಕನ್ಡೆನ್ಸ್ ಡ್ ಮಿಲ್ಕ್ ಸೇರಿಸಿ ಬ್ಲೇಂಡ್ ಮಾಡಿ. ಎಲ್ಲವೂ ಸಮ ಪ್ರಮಾಣದಲ್ಲಿ ಮಿಕ್ಸ್ ಆಗೋವರೆಗೂ ಬ್ಲೇಂಡ್ ಮಾಡಿ
    * ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಗೋಡಂಬಿ, ಪಿಸ್ತಾ, ಬಾದಾಮಿ ಚೂರುಗಳನ್ನು ಮಿಕ್ಸ್ ಮಾಡಿ. ಒಂದು ಪ್ಲಾಸ್ಟಿಕ್ ಕಪ್ ಅಥವಾ ಮೌಲ್ಡ್‍ಗೆ ವರ್ಗಾಯಿಸಿ. ಮಧ್ಯೆದಲ್ಲಿ ಐಸ್‍ಕ್ರೀಂ ಕಡ್ಡಿ ಇಡಿ.
    * 15-20 ನಿಮಿಷ ಫ್ರೀಜ್ ಮಾಡಿ ಹೊರತೆಗೆಯಿಸಿ. ಬೇಸಿಗೆ ದಾಹ ತೀರಿಸಲು ನಿಮ್ಮ ಕುಲ್ಫಿ ಐಸ್‍ಕ್ರೀಂ ರೆಡಿ.