Tag: Cooking LPG Cylinder

  • ಬೆಲೆ ಏರಿಕೆ ವಿರುದ್ಧ ಅಸಮಾಧಾನ – ಖಾಲಿ ಸಿಲಿಂಡರ್ ಪ್ರದರ್ಶನ

    ಬೆಲೆ ಏರಿಕೆ ವಿರುದ್ಧ ಅಸಮಾಧಾನ – ಖಾಲಿ ಸಿಲಿಂಡರ್ ಪ್ರದರ್ಶನ

    ಮಡಿಕೇರಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

    ಮಡಿಕೇರಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಖಾಲಿ ಸಿಲಿಂಡರ್ ಗಳನ್ನು ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದ ಮಹಿಳಾ ಕಾಂಗ್ರೆಸ್ಸಿಗರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ನೆರವಾಗುವ ಬದಲು ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಆರೋಪಿಸಿದರು. ಇದನ್ನೂ ಓದಿ: ರಸ್ತೆ ಬಿಟ್ಟು ಮನೆ ಛಾವಣಿ ಹತ್ತಿ ನಿಂತ ಆಟೋ!

    ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಲೆ ಏರಿಕೆ ಕ್ರಮವನ್ನು ಖಂಡಿಸಿದರು. ಮಾಜಿ ಸಚಿವೆ ಸುಮಾ ವಸಂತ್, ನಗರಸಭಾ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಕೆಪಿಸಿಸಿ ಪ್ರಮುಖರಾದ ಟಿ.ಪಿ.ರಮೇಶ್, ಶಾಹಿದ್ ತೆಕ್ಕಿಲ್, ಜಿಲ್ಲಾ ಸಮಿತಿಯ ಹನೀಫ್ ಮಡಿಕೇರಿ, ಯುವ ಘಟಕದ ಹನೀಫ್ ಸಂಪಾಜೆ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಜಿ.ಪಂ, ತಾ.ಪಂ ಮಾಜಿ ಸದಸ್ಯರುಗಳು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೂರು ದಿನದಿಂದ ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತ ಬಸ್ – ವಾಹನ ಸವಾರರ ಪರದಾಟ

  • ಹೊಸ ವರ್ಷಕ್ಕೆ ಗಿಫ್ಟ್ – ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ಹೊಸ ವರ್ಷಕ್ಕೆ ಗಿಫ್ಟ್ – ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಇಳಿಕೆ

    ನವದೆಹಲಿ: ಗೃಹ ಬಳಕೆ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ದರ 5.91 ರೂ. ಇಳಿಕೆಯಾಗಿದೆ. ಬೆಲೆ ಇಳಿಕೆಯಾಗುವ ಮೂಲಕ ಜನರಿಗೆ ಹೊಸ ವರ್ಷಕ್ಕೆ ಗಿಫ್ಟ್ ಸಿಕ್ಕಿದಂತಾಗಿದೆ.

    ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು 2ನೇ ಬಾರಿ ಇಳಿಕೆ ಮಾಡಿದ್ದು, ಡಿಸೆಂಬರ್ 1 ರಂದು 6.52 ರೂ. ಕಡಿತಗೊಳಿಸಿತ್ತು. ಇದರೊಂದಿಗೆ 12.43 ರೂ. ಒಂದೇ ತಿಂಗಳಿನಲ್ಲಿ ಕಡಿಮೆ ಆಗಿದೆ. ಜೂನ್ ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ತಿಂಗಳಿನಿಂದ ಸತತ 6 ಬಾರಿ 14.13 ರೂ. ಹೆಚ್ಚಳವಾಗಿತ್ತು.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ಅನಿಲದ ಬೆಲೆ ಇಳಿಕೆಯಾಗಿರುವ ಕಾರಣ ಬೆಲೆಯನ್ನು ಕಡಿತಗೊಳಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ ಬರೋಬ್ಬರಿ 120.50 ರೂ. ಕಡಿತಗೊಳಿಸಿದೆ.

    ಡಿಸೆಂಬರ್ 1 ರಂದು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 133 ರೂ. ಕಡಿತಗೊಳಿಸಲಾಗಿತ್ತು. ಇದರೊಂದಿಗೆ ಡಿಸೆಂಬರ್ ತಿಂಗಳಿನಲ್ಲಿ 253.50 ರೂ. ದರ ಕಡಿತವಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಪರಿಷೃತ ದರ ಜಾರಿ ಬರಲಿದ್ದು, ದೆಹಲಿಯಲ್ಲಿ 500.90 ರೂ. ಇದ್ದ 14.2 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ ದರ ಕಡಿತದಿಂದ 494.99 ರೂ. ಆಗಲಿದೆ.

    ಇದರೊಂದಿಗೆ ಜನವರಿ ತಿಂಗಳಿನಲ್ಲಿ ಸಬ್ಸಿಡಿ ಸಿಲಿಂಡರ್ ಪಡೆಯುವ ಗ್ರಾಹಕರ ಖಾತೆಗೆ ಪ್ರತಿ ಸಿಲಿಂಡರ್ ಗೆ 94.01 ರೂ. ಜಮೆ ಆಗಲಿದೆ. ನವೆಂಬರ್ ನಲ್ಲಿ ಸಬ್ಸಿಡಿ ಸಿಲಿಂಡರ್ ಗ್ರಾಹಕರಿಗೆ ನೀಡುತ್ತಿದ್ದ ಹಣವನ್ನು 433.66 ರೂ.ಗೆ ಇಳಿಸಲಾಗಿತ್ತು. ಬಳಿಕ ಡಿಸೆಂಬರ್ ತಿಂಗಳಿನಲ್ಲಿ 308.60 ರೂ.ಗೆ ಕಡಿತಗೊಳಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv