Tag: cooking gas

  • ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ

    ನವದೆಹಲಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಯೂನಿಟ್‍ಗೆ 2.63 ರೂ. ರಷ್ಟು ಹೆಚ್ಚಿಸಲಾಗಿದೆ.

    ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಬಿಡಲಾಗುತ್ತೆ. ಈ ಹಿನ್ನೆಲೆ ಪೈಪ್‍ಲೈನ್ ಅಡುಗೆ ಅನಿಲಗಳ ಬೆಲೆಯನ್ನು ಆಗಾಗ ಹೆಚ್ಚಿಸಲಾಗುವುದು.  ಜುಲೈ 26 ರಂದು ಪೈಪ್‍ಲೈನ್ ಅಡುಗೆ ಅನಿಲ ಪರಿಷ್ಕರಿಸಿ ಪ್ರತಿ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 2.1 ರೂ. ಹೆಚ್ಚಿಸಲಾಗಿತ್ತು. ಆದರೆ ಬೆಲೆ ಹೆಚ್ಚಿಸಿ 2 ವಾರವೂ ಇನ್ನೂ ಕಳೆದಿಲ್ಲ. ಈಗಾಗಲೇ ಮತ್ತೆ 2.63 ರೂ. ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ 

    ಈ ಕುರಿತು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್(IGL) ಟ್ವೀಟ್ ಮಾಡಿದ್ದು, ಈ ಹಿಂದೆ ಪೈಪ್‍ಲೈನ್ ಅಡುಗೆ ಅನಿಲ ರೂ. 47.96 ರಷ್ಟಿತ್ತು. ಆದರೆ ದೆಹಲಿಯಲ್ಲಿ ಪೈಪ್ ಮೂಲಕ ಅಡುಗೆ ಅನಿಲದ ಬೆಲೆ ಈಗ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ ರೂ 50.59 ಆಗಲಿದೆ. ಈ ಹೆಚ್ಚಳವು ‘ಇನ್‍ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

    ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‍ನಲ್ಲಿ ಪಿಎನ್‍ಜಿಗೆ ಪ್ರತಿ ಎಸ್‍ಸಿಎಂಗೆ 50.46 ರೂ. ವೆಚ್ಚವಾಗಲಿದೆ. ಆದರೆ ಗುರುಗ್ರಾಮದಲ್ಲಿ ಪ್ರತಿ ಎಸ್‍ಸಿಎಂಗೆ 48.79 ರೂ. ಹರಿಯಾಣದ ಕರ್ನಾಲ್ ಮತ್ತು ರೇವಾರಿಯಲ್ಲಿ ಪ್ರತಿ ಎಸ್‍ಸಿಎಂಗೆ 49.40 ರೂ ಮತ್ತು ಮುಜಫರ್‍ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಪಿಎನ್‍ಜಿ ಪ್ರತಿ ಎಸ್‍ಸಿಎಂಗೆ 53.97 ರೂ. ಉತ್ತರ ಪ್ರದೇಶದ ಕಾನ್ಪುರ ಮತ್ತು ಫತೇಪುರ್‌ನಲ್ಲಿ ಗ್ಯಾಸ್‍ಗೆ 53.10 ರೂ. ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಭಿನ್ನವಾಗಿರುತ್ತವೆ. ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ – ಮಾರ್ಗರೇಟ್ ಆಳ್ವಾಗೆ TRS ಬೆಂಬಲ

    ಈ ಹಿಂದೆ ಆಗಸ್ಟ್ 3 ರಂದು ಮುಂಬೈನಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‍ಜಿ) ಬೆಲೆಯನ್ನು ಪ್ರತಿ ಯೂನಿಟ್‍ಗೆ 4 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ನಗರದ ಅನಿಲ ಕಂಪನಿಗಳಿಗೆ ಪೂರೈಕೆಯಾಗುವ ನೈಸರ್ಗಿಕ ಅನಿಲದ ಬೆಲೆಯಲ್ಲಿ ಶೇ.18ರಷ್ಟು ಏರಿಕೆ ಮಾಡುವುದಾಗಿ ಉಂIಐ ಪ್ರಕಟಿಸಿದೆ. ಈ ಘೋಷಣೆಯೊಂದಿಗೆ, ದೇಶದ ಇತರ ನಗರಗಳಲ್ಲಿ ಸಿಎನ್‍ಜಿ ಮತ್ತು ಪಿಎನ್‍ಜಿ ಬೆಲೆಗಳು ಹೆಚ್ಚಾಗಲು ಪ್ರಾರಂಭಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

    ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

    ನವದೆಹಲಿ: ಬೆಲೆ ಏರಿಕೆಯ ಬಿಸಿ ಸದ್ಯಕ್ಕೆ ಸಾಮಾನ್ಯ ಜನರ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯಾಗುತ್ತಿದ್ದು ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಯೂ ಬ್ರೇಕ್ ಬೀಳುತ್ತಿಲ್ಲ. ಇಂದೂ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ 25 ರೂ. ಏರಿಕೆಯಾಗಿದ್ದು ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 884 ರೂ.ಗೆ ಏರಿಕೆಯಾಗಿದೆ.

    ಇನ್ನು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯೂ 75 ರೂ. ಹೆಚ್ಚಳವಾಗಿದ್ದು ದೆಹಲಿಯಲ್ಲಿ ಸಿಲಿಂಡರ್ ಬೆಲೆ 1,693 ರೂ.ಗೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 887.50 ರೂ. ಹಾಗೂ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ 1760.50 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ : ನಾನು ಜೈಲಲ್ಲಿ ಇದ್ದೆ, ಒಂದು ಬೀಡಿಗೆ ಎಷ್ಟು ದುಡ್ಡು ಕೊಡ್ಬೇಕು ಗೊತ್ತು : ಆರಗ ಜ್ಞಾನೇಂದ್ರ

    ದೇಶದಲ್ಲಿ ಸಿಲಿಂಡರ್ ಬೆಲೆ ಪದೇ ಪದೇ ಏರಿಕೆಯಾಗುತ್ತಿದೆ. ಮಾರ್ಚ್ 1, 2014ಕ್ಕೆ ಹೋಲಿಸಿಕೊಂಡರೇ ಎಲ್‍ಪಿಜಿ ಬೆಲೆ ದುಪ್ಪಟ್ಟಾಗಿದೆ. 2014 ರಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 410.50. ಇತ್ತು ಇಂದು ಇದು 887.50 ರೂಪಾಯಿಗೆ ಏರಿಕೆಯಾಗಿದೆ. ಇದನ್ನೂ ಓದಿ : ಕಾರು ಅಪಘಾತಕ್ಕೂ ಮುನ್ನ ಮದ್ಯ ಖರೀದಿಸಿದ್ದ ಇಶಿತಾ, ಬಿಂದು 

    ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ 25 ರೂ. ಏರಿಕೆ ಮಾಡಲಾಗಿತ್ತು. ಇದಕ್ಕೂ ಮೊದಲು ಫೆಬ್ರವರಿ ಆರಂಭದಲ್ಲಿ 25 ರೂ., ಫೆಬ್ರವರಿ 15 ರಂದು 50 ರೂ., ಫೆಬ್ರವರಿ 25 ರಂದು 25 ರೂ., ಮಾರ್ಚ್ ಆರಂಭದಲ್ಲಿ 25 ರೂಪಾಯಿ ಏರಿಕೆಯಾಗಿತ್ತು.

    ಅಗಸ್ಟ್ ನಲ್ಲಿ ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 10 ರೂ. ಬೆಲೆ ಇಳಿಕೆ ಮಾಡಲಾಗಿತ್ತು. 2021 ರಲ್ಲಿ ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್ ಮೇಲೆ 165.50 ರೂ. ಬೆಲೆ ಏರಿಕೆಯಾಗಿದೆ.

  • ಎಲ್‌ಪಿಜಿ ಸಿಲಿಂಡರ್‌ ದರ 50 ರೂ. ಏರಿಕೆ

    ಎಲ್‌ಪಿಜಿ ಸಿಲಿಂಡರ್‌ ದರ 50 ರೂ. ಏರಿಕೆ

    ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 100ರ ಗಡಿಯತ್ತ ಬರುತ್ತಿರುವ ನಡುವೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಬಿಸಿಯೂ ತಟ್ಟಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ. ಏರಿಕೆಯಾಗಿದೆ.

    ಎಲ್‌ಪಿಜಿ ಸಿಲಿಂಡರ್‌ ದರ ಭಾನುವಾರ ಬೆಂಗಳೂರಿನಲ್ಲಿ 722 ರೂ. ಇತ್ತು. ಈಗ ಇದು 772 ರೂ.ಗೆ ಏರಿಕೆಯಾಗಿದೆ. ಕಳೆದ ಡಿಸೆಂಬರ್‌ನಿಂದ ಈಚೆಗೆ ಸಿಲಿಂಡರ್‌ ದರದಲ್ಲಿ ಮೂರು ಬಾರಿ ಹೆಚ್ಚಳ ಮಾಡಲಾಗಿದೆ. ಫೆ.4 ರಂದು 25 ರೂ. ಏರಿಕೆ ಕಂಡಿತ್ತು.

    ಸರ್ಕಾರ ಪ್ರತಿ ವರ್ಷ 14.2 ಕೆಜಿ ತೂಕದ 12 ಸಿಲಿಂಡರ್‌ಗಳನ್ನುಉಚಿತವಾಗಿ ನೀಡುತ್ತಿದೆ. ಕೋವಿಡ್‌ 19 ಕಾರಣದಿಂದ ಆದಾಯ ಕೊರತೆ ಎದುರಿಸುತ್ತಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸಬೇಕಾಗಿದೆ.

    ಎಲ್‌ಪಿಜಿ ಸಿಲಿಂಡರ್‌ ದರವನ್ನು ತೈಲ ಕಂಪನಿಗಳು ಪರಿಷ್ಕರಿಸುತ್ತಿರುತ್ತವೆ. ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಅಮೆರಿಕ ಡಾಲರ್-ರೂಪಾಯಿ ವಿನಿಮಯ ದರಗಳನ್ನು ಅವಲಂಬಿಸಿ, ಬೆಲೆಗಳು ಹೆಚ್ಚಾಗುತ್ತದೆ ಮತ್ತು ಇಳಿಕೆಯಾಗುತ್ತದೆ.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಆಗುತ್ತಿದೆ.

    ಎಲ್ಲಿ ಎಷ್ಟು ದರ?
    ದೆಹಲಿ 769 ರೂ., ಕೋಲ್ಕತ್ತಾ 795, ಮುಂಬೈ 769 ರೂ., ಚೆನ್ನೈ 785 ರೂ. ದರಕ್ಕೆ ಏರಿಕೆಯಾಗಿದೆ.

  • ಪೈಪ್‍ಲೈನ್ ಒಡೆದು ಅಡುಗೆ ಅನಿಲ ಸೋರಿಕೆ: ಸ್ಥಳೀಯರಲ್ಲಿ ಆತಂಕ

    ಪೈಪ್‍ಲೈನ್ ಒಡೆದು ಅಡುಗೆ ಅನಿಲ ಸೋರಿಕೆ: ಸ್ಥಳೀಯರಲ್ಲಿ ಆತಂಕ

    ಹುಬ್ಬಳ್ಳಿ: ರಸ್ತೆ ಕಾಮಗಾರಿ ನಡೆಸುವ ವೇಳೆ ಅಡುಗೆ ಅನಿಲದ (ಗ್ಯಾಸ್ ಸಿಲಿಂಡರ್) ಪೈಪ್‍ಲೈನ್ ಸೋರಿಕೆಯಾಗಿ ದೊಡ್ಡ ಪ್ರಮಾಣದಲ್ಲಿ ಅಡುಗೆ ಅನಿಲ(ಗ್ಯಾಸ್ ಸಿಲಿಂಡರ್) ವಾಸನೆ ಹಾಗೂ ದೂಳು ತುಂಬಿದ ಘಟನೆ ನಗರದ ನವನಗರದ ಕರ್ನಾಟಕ ಸರ್ಕಲ್ ಬಳಿ ನಡೆದಿದೆ.

    ಮನೆ ಮನೆಗೆ ಅಡುಗೆ ಅನಿಲ ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದ್ದು, ಕಾಮಗಾರಿ ನಡೆಯುವ ವೇಳೆಯಲ್ಲಿ ಸೋರಿಕೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸೋರಿಕೆಯನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿರುವ ಅಗ್ನಿ ಶಾಮಕದಳದ ಸಿಬ್ಬಂದಿ ಅಡುಗೆ ಅನಿಲ ಸೋರಿಕೆಯನ್ನು ತಡೆಗಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆದರೆ ಭಾರೀ ಪ್ರಮಾಣದಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದನ್ನು ಕಂಡು ನವನಗರದ ಜನ ಕೆಲ ಕಾಲ ಆತಂಕಗೊಂಡಿದರು.

  • ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ- ಮನೆ ಸುಟ್ಟು ಭಸ್ಮ

    ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ- ಮನೆ ಸುಟ್ಟು ಭಸ್ಮ

    ತುಮಕೂರು: ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣ ಭಸ್ಮವಾದ ಘಟನೆ ತುಮಕೂರು ಜಿಲ್ಲೆಯ ಚಿಕ್ಕಹಳ್ಳಿಯಲ್ಲಿ ಘಟನೆ ನಡೆದಿದೆ.

    ಮನೆ ಮಾಲೀಕ ಹಿರೇಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ನಾಗರಾಜು ಕುಟುಂಬಸ್ಥರೊಂದಿಗೆ ದೇವರ ಹೊಸಹಳ್ಳಿಯ ವೀರಭದ್ರಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ತೆರಳಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮನೆಯಲ್ಲಿ ಯಾರು ಇಲ್ಲದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ವಾಹನಗಳು ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.