Tag: cooking

  • ಸಿಂಪಲ್ಲಾಗಿ ಮಾಡಿ ಆರೋಗ್ಯಕರ ಸೋಯಾ ಚಂಕ್ಸ್ ಫ್ರೈ

    ಸಿಂಪಲ್ಲಾಗಿ ಮಾಡಿ ಆರೋಗ್ಯಕರ ಸೋಯಾ ಚಂಕ್ಸ್ ಫ್ರೈ

    ಸೋಯಾ ಬೀನ್ ಹಾಗೂ ಸೋಯಾ ಹಾಲಿನಂತೆ ಸೋಯಾ ಚಂಕ್ಸ್ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದನ್ನ ಪಲಾವ್ ಅಥವಾ ಟೊಮೆಟೋ ಬಾತ್ ಮಾಡಿದಾಗ ಅದರಲ್ಲಿ ಬಳಸಿರುತ್ತೀರಿ. ಇದನ್ನು ಸೈಡ್ ಡಿಶ್‍ನಂತೆ ಅಥವಾ ಸಂಜೆಯ ತಿಂಡಿಗೆ ಸ್ನಾಕ್ಸ್‌ ಕೂಡ ಮಾಡಿಕೊಳ್ಳಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಂಪಲ್‌ ಆಗಿ ಸೋಯಾ ಚಂಕ್ಸ್‌ ಫ್ರೈ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ನಿಮ್ಮ ಮನೆಯಲ್ಲಿ ಒಂದ್ಸಲ ಇದನ್ನ ಟ್ರೈ ಮಾಡಿ ನೋಡಿ, ಖಂಡಿತವಾಗಿಯೂ ಇಷ್ಟವಾಗುತ್ತೆ.

    ಬೇಕಾಗುವ ಸಾಮಗ್ರಿಗಳು:
    ಸೋಯಾ ಚಂಕ್ಸ್ – 2 ಕಪ್
    ಈರುಳ್ಳಿ – 1
    ಕ್ಯಾಪ್ಸಿಕಮ್ – 1
    ಶುಂಠಿ – ಅರ್ಧ ಇಂಚು
    ಬೆಳ್ಳುಳ್ಳಿ – 4
    ಜೀರಿಗೆ – 1 ಚಮಚ
    ಟೊಮೆಟೋ – 2
    ಸೋಯಾ ಸಾಸ್ – 1/2 ಚಮಚ
    ಅರಿಶಿಣ – ಕಾಲು ಚಮಚ
    ಖಾರದಪುಡಿ – 1 ಚಮಚ
    ಧನಿಯಾ ಪುಡಿ – ಅರ್ಧ ಚಮಚ
    ಜೀರಿಗೆ ಪುಡಿ – ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – 2 ಚಮಚ

    ಮಾಡುವ ವಿಧಾನ: 
    * ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಸೋಯಾ ಚಂಕ್ಸ್ ಹಾಕಿ ಮುಚ್ಚಳ ಮುಚ್ಚಿ 8 ನಿಮಿಷ ಬೇಯಿಸಿ.
    * ಮತ್ತೊಂದು ಪಾತ್ರೆಯಲ್ಲಿ ತಣ್ಣೀರು ಹಾಕಿ ಅದಕ್ಕೆ ಬೆಂದ ಸೋಯಾ ಚಂಕ್ಸ್ ಹಾಕಿ ಆರಲು ಬಿಡಿ.
    * ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಒಂದು ಚಮಚ ಜೀರಿಗೆ ಹಾಕಿ ನಂತರ ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ.
    * ನಂತರ ಇದಕ್ಕೆ ಟೊಮೆಟೋ ಹಾಕಿ ಅದು ಬೇಯುವವರೆಗೂ ಚೆನ್ನಾಗಿ ಫ್ರೈ ಮಾಡಿ.
    * ಟೊಮೆಟೋ ಬೆಂದ ನಂತರ, ಅರಿಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ನಂತರ ತಣ್ಣೀರಿನಲ್ಲಿರುವ ಸೋಯಾ ಚಂಕ್ಸ್ ತೆಗೆದು ಸಂಪೂರ್ಣವಾಗಿ ನೀರನ್ನು ಹಿಂಡಿ ಬಾಣಲೆಗೆ ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.
    * ನೀರು ಸಂಪೂರ್ಣವಾಗಿ ಇಂಗಿದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಒಲೆಯಿಂದ ಕೆಳಗಿಳಿಸಿ ಸವಿಯಲು ಕೊಡಿ.

  • ಫಟಾಫಟ್ ಅಂತ ಮಾಡಿ ಎಗ್ ಪೆಪ್ಪರ್ ಫ್ರೈ

    ಫಟಾಫಟ್ ಅಂತ ಮಾಡಿ ಎಗ್ ಪೆಪ್ಪರ್ ಫ್ರೈ

    ಜೆ ಬಂದ್ರೆ ಸಾಕು ಮನೆಯಲ್ಲಿ ಎಲ್ಲರೂ ಇರುತ್ತಾರೆ. ಒಂದೇ ಕಡೆ ಎಲ್ರೂ ಇದ್ದರೆ ಸಾಕು ಏನಾದ್ರೂ ಸ್ಪೈಸಿಯಾಗಿ ತಿನ್ನೋಕೆ ಕೇಳುತ್ತಾರೆ. ಪ್ರತಿದಿನ ಅದೇ ತಿಂಡಿ ಅಂತ ಬೇಸರ ಮಾಡಿಕೊಂಡು ತಿನ್ನುವುದಿಲ್ಲ. ಹೀಗಾಗಿ ಬೇಗ ತಯಾರಾಗುವ ಎಗ್ ಪೆಪ್ಪರ್ ಫ್ರೈ ಮಾಡಿ ಬಾಯಿ ಚಪ್ಪರಿಸಿ. ಫಟಾಫಟ್ ಅಂತ ಮಾಡುವ ಸಿಂಪಲ್ ವಿಧಾನ..

    ಬೇಕಾಗುವ ಸಾಮಾಗ್ರಿಗಳು
    ಮೊಟ್ಟೆ – 4
    ಎಣ್ಣೆ – 2-3 ಚಮಚ
    ಮೆಣಸು – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು -ಸ್ವಲ್ಪ
    ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಒಂದು ಕುಕ್ಕರ್ ಗೆ ಹಾಕಿ, ಸ್ವಲ್ಪ ಉಪ್ಪು, ನೀರು ಹಾಕಿ ಒಂದು ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ.
    * ಈಗ ಮೊಟ್ಟೆ ಬಿಡಿಸಿ ಒಂದು ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದ ಮೇಲೆ ಕಟ್ ಮಾಡಿದ್ದ ಮೊಟ್ಟೆಯನ್ನು ಇಟ್ಟು 1 ನಿಮಿಷ ಬೇಯಿಸಿಕೊಳ್ಳಿ.
    * ನಂತರ ಮೊಟ್ಟೆಯನ್ನು ಉಲ್ಟಾ ಮಾಡಿ ಸ್ವಲ್ಪ ಬ್ರೌನ್ ಬಣ್ಣ ಬರುವರೆಗೆ ಬೇಯಿಸಿಕೊಳ್ಳಿ.
    * ಈಗ ಕಡಿಮೆ ಉರಿ ಇಟ್ಟು ಅದರ ಮೇಲೆ ಚಿಟಿಕೆ ಅರಿಶಿಣ ಉದುರುಸಿ.
    * ಈಗ ಮೆಣಸು ಮತ್ತು ಉಪ್ಪನ್ನು ಪುಡಿ ಮಾಡಿಕೊಂಡು ಮೊಟ್ಟೆಯ ಮೇಲೆ ಉದುರಿಸಿ.
    * ಮತ್ತೆ ಮೊಟ್ಟೆಯನ್ನು ಉಲ್ಟಾ ಮಾಡಿ ಮೆಣಸು ಮತ್ತು ಉಪ್ಪಿನ ಪುಡಿ ಉದುರಿಸಿ.
    * ನಂತರ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ಪೈಸಿ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ.

  • Ramanagara | ಅಡುಗೆ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    Ramanagara | ಅಡುಗೆ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ರಾಮನಗರ: ಅಡುಗೆ (Cooking) ಮಾಡುವ ವಿಚಾರಕ್ಕೆ ಪತಿ- ಪತ್ನಿಯ (Husband-Wife) ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಮಾಗಡಿ (Magadi) ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ.

    ತಿಮ್ಮಮ್ಮ (65) ಮೃತ ಮಹಿಳೆ. ಪತಿ ರಂಗಯ್ಯ (75) ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಾಯಿ ತುರಿಯುವ ಮಣೆಯಿಂದ ಹೊಡೆದು ರಂಗಯ್ಯ ಪತ್ನಿ ತಿಮ್ಮಮ್ಮಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಪತ್ನಿ ಹತ್ಯೆ ಮಾಡಿದ ನಂತರ ತಿರುಪತಿಗೆ ಎಸ್ಕೇಪ್ ಆಗಲು ರಂಗಯ್ಯ ಮುಂದಾಗಿದ್ದ ಎನ್ನಲಾಗಿದೆ. ತಕ್ಷಣವೇ ಮಾಹಿತಿ ಪಡೆದ ಪೊಲೀಸರು ರಾಮನಗರದಲ್ಲಿ ರಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

    ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಡ್ರಗ್ಸ್ ಸೇವನೆ: ನಟ ಶ್ರೀಕಾಂತ್ ಬಳಿಕ ಮತ್ತೋರ್ವ ನಟನ ಬಂಧನ

  • ಟೇಸ್ಟಿ, ಸ್ಪೆಷಲ್ ಪ್ರಾನ್ಸ್ ಫ್ರೈಡ್‌ ರೈಸ್ ಮನೆಯಲ್ಲೇ ತಯಾರಿಸಿ

    ಟೇಸ್ಟಿ, ಸ್ಪೆಷಲ್ ಪ್ರಾನ್ಸ್ ಫ್ರೈಡ್‌ ರೈಸ್ ಮನೆಯಲ್ಲೇ ತಯಾರಿಸಿ

    ಫ್ರೈಡ್‌ ರೈಸ್ ಅಂದರೆ ನಿಮ್ಗೆ ಇಷ್ಟನಾ? ಚಿಕನ್, ಎಗ್ ಫ್ರೈಡ್‌ ರೈಸ್ ತಿಂದು ಬೇರೆ ವೆರೈಟಿ ಫ್ರೈಡ್‌ ರೈಸ್ ತಿನ್ನಬೇಕು ಅಂತಾ ಅಂದ್ಕೊಂಡಿದ್ರೆ, ಸ್ಪೆಷಲ್ ಆಗಿ ಸೀ ಫುಡ್‌ನಲ್ಲಿ ಫ್ರೈಡ್‌ನ ಟ್ರೈ ಮಾಡಿ. ಹೌದು, ನಾವಿವತ್ತು ಸಮುದ್ರದಲ್ಲಿ ಸಿಗುವ ಸಿಗಡಿ ಅಂದ್ರೆ ಪ್ರಾನ್ಸ್ ಫ್ರೈಡ್‌ ರೈಸ್ ಮಾಡೋದು ಹೇಗೆ ಅಂತಾ ಹೇಳಿ ಕೊಡ್ತೀವಿ. ನೀವು ಮನೆಯಲ್ಲೇ ಟ್ರೈ ಮಾಡಿ ಟೇಸ್ಟಿ ಪ್ರಾನ್ಸ್ ಫ್ರೈಡ್‌ ರೈಸ್.

    ಪ್ರಾನ್ಸ್ ಫ್ರೈಡ್‌ ರೈಸ್‌ಗೆ ಬೇಕಾಗುವ ಸಾಮಾಗ್ರಿಗಳು:
    ಸಿಗಡಿ – ಅರ್ಧ ಕೆಜಿ
    ಬಾಸ್ಮತಿ ಅಕ್ಕಿ – ಅರ್ಧ ಕೆಜಿ
    ಅರಿಸಿನ – ಅರ್ಧ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
    ಚಿಲ್ಲಿ ಪೇಸ್ಟ್ – 1 ಸ್ಪೂನ್
    ಕಾಳುಮೆಣಸಿನ ಪುಡಿ – ಅರ್ಧ ಸ್ಪೂನ್
    ಮೊಟ್ಟೆ – 2
    ಈರುಳ್ಳಿ – 2
    ಕ್ಯಾರೆಟ್ ತುರಿ – ಅರ್ಧ ಕಪ್
    ಬೀನ್ಸ್ – ಅರ್ಧ ಕಪ್
    ಕೊತ್ತಂಬರಿ ಪುಡಿ – 3 ಸ್ಪೂನ್
    ಕೊತ್ತಂಬರಿ ಸೊಪ್ಪು
    ಸೋಯಾ ಸಾಸ್ – 1 ಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ- ಸ್ವಲ್ಪ

    ಪ್ರಾನ್ಸ್ ಫ್ರೈಡ್‌ ರೈಸ್ ಮಾಡುವ ವಿಧಾನ:
    * ಮೊದಲು ಕ್ಯಾರೆಟ್ ಅನ್ನು ತುರಿದುಕೊಂಡು, ಬೀನ್ಸ್ ಅನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು.
    * ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ನೀರು ಸೇರಿಸಿ ಮತ್ತು 10 ನಿಮಿಷ ಬೇಯಿಸಿಕೊಳ್ಳಬೇಕು.
    * ನಂತರ ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ.
    * ಈಗ ಒಂದು ಬೌಲ್‌ಗೆ ಮೊಟ್ಟೆಗಳನ್ನು ಒಡೆದು ಹಾಕಿ, ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
    * ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಮೊಟ್ಟೆಯನ್ನು ಆಮ್ಮೆಟ್ ಮಾಡಿ. ಆಮ್ಲೆಟ್ ಅನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ.
    * ಈಗ ಸಿಗಡಿ(ಪ್ರಾನ್ಸ್)ಗಳನ್ನು ಒಂದು ಬೌಲ್‌ಗೆ ಹಾಕಿ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ನೀರು ಸೇರಿಸಿ. ಸ್ವಲ್ಪ ಸಮಯದವರೆಗೆ ಅವುಗಳನ್ನು ಬೇಯಿಸಿ.
    * ಸಿಗಡಿ 90% ನೀರಿನಲ್ಲಿ ಬೇಯಬೇಕು.
    * ಬಳಿಕ ಬಾಸ್ಮತಿ ರೈಸ್‌ನಿಂದ ಉದುರುದುರಾದ ಅನ್ನ ಮಾಡಿಟ್ಟುಕೊಳ್ಳಬೇಕು.
    * ಈಗ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿಕೊಳ್ಳಬೇಕು.
    * ಎಣ್ಣೆ ಬಿಸಿಯಾದ ಮೇಲೆ ಕತ್ತರಿಸಿಟ್ಟುಕೊಂಡ ಈರುಳ್ಳಿ ಸೇರಿಸಿ. ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು.
    * ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಬೇಯಿಸಿಟ್ಟುಕೊಂಡ ಸಿಗಡಿಯನ್ನು ಸೇರಿಸಿಕೊಳ್ಳಬೇಕು.
    * ಜೊತೆಗೆ ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ. ಉಪ್ಪು, ಮೆಣಸು ಪುಡಿ ಮತ್ತು ಸೋಯಾ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಇದಕ್ಕೆ ಮೊದಲೇ ಬೇಯಿಸಿದ ಕ್ಯಾರೆಟ್ ಮತ್ತು ಬೀನ್ಸ್ಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ನಂತರ ಬೇಯಿಸಿಟ್ಟುಕೊಂಡ ಅನ್ನ ಹಾಗೂ ಕತ್ತರಿಸಿಟ್ಟುಕೊಂಡ ಆಮ್ಲೆಟ್ ತುಂಡು ಸೇರಿಸಿ ಎಲ್ಲಾ ಮಿಕ್ಸ್ ಮಾಡಿಕೊಂಡು, ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಬೇಕು.
    * ಈಗ ನಿಮ್ಮ ಮುಂದೆ ರುಚಿಯಾದ ಸಿಗಡಿ ಫ್ರೈಡ್‌ ರೈಸ್ ಸವಿಯಲು ಸಿದ್ದ.

  • ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಇಡೀ ಭಾರತ ದೇಶವೇ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಅಂದರೆ ಗಣೇಶ ಚತುರ್ಥಿ. ಹಬ್ಬಗಳು ಬಂದರೆ ಸಾಕು ಸಿಹಿ ತಿನಿಸುಗಳನ್ನು ಮಾಡಬೇಕು. ಅದರಲ್ಲೂ ಗಣೇಶ ಹಬ್ಬವೆಂದರೆ ಮುಂಚಿತವಾಗಿ ಗಣಪನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳನ್ನು ಮಾಡಿ ಸಿದ್ಧ ಮಾಡಿಕೊಳ್ಳಬೇಕು. ಗಣೇಶನಿಗೆ ವಿಶೇಷವಾಗಿ ಸಿಹಿ ಕಡುಬು ಎಂದರೆ ಇಷ್ಟವಾಗುತ್ತದೆ. ಆದ್ದರಿಂದ ಗಣಪನಿಗೆ ಸಿಹಿ ಕಡುಬು ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಅಕ್ಕಿ ಹಿಟ್ಟು – ಅರ್ಧ ಕೆಜಿ
    2. ಬೆಲ್ಲ – 1 ಅಚ್ಚು
    3. ಹುರಿಗಡಲೆ – 1/4 ಕೆಜಿ
    4. ಕೊಬ್ಬರಿ ತುರಿ – 1 ಬಟ್ಟಲು
    5. ಏಲಕ್ಕಿ – 2-3
    6. ತುಪ್ಪ – 2 ಚಮಚ
    7. ಬಾಳೆ ಎಲೆ ಇದನ್ನೂ ಓದಿ: ಕೃಷ್ಣನಿಗಾಗಿ ಸಿಹಿ ಕರ್ಜಿಕಾಯಿ ಮಾಡುವ ವಿಧಾನ

    ಮಾಡುವ ವಿಧಾನ
    * ಬೆಲ್ಲವನ್ನು ತುರಿದುಕೊಳ್ಳಿ. ಹಾಗೆಯೇ ಹುರಿಗಡಲೆಯನ್ನು ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಪುಡಿ ಮಾಡಿದ ಹುರಿಗಡಲೆ, ತುರಿದ ಬೆಲ್ಲ, ಕೊಬ್ಬರಿ ತುರಿ, ಏಲಕ್ಕಿ ಪುಡಿ ಸೇರಿಸಿ ಊರ್ಣ ತಯಾರಿಸಿಕೊಳ್ಳಿ. (ಸಿಹಿ ಜಾಸ್ತಿ ಬೇಕಾದ್ರೆ ಬೆಲ್ಲ ಸೇರಿಸಿ, ಬೇಕಿದ್ದರೆ ಗೋಡಂಬಿ, ದ್ರಾಕ್ಷಿ. ಬಾದಾಮಿಯನ್ನು ಸಣ್ಣಗೆ ಕಟ್ ಮಾಡಿ ಸೇರಿಸಬಹುದು. ಗಸಗಸೆ ಕೂಡ ಸೇರಿಸಬಹುದು)
    * ಒಂದು ಅಗಲವಾದ ತಳಹತ್ತದ ಅಥವಾ ನಾನ್ ಸ್ಟಿಕ್ ಪಾತ್ರೆಗೆ ಒಂದು ಲೋಟ ನೀರು ಹಾಕಿ ಕುದಿಸಿ.
    * ನೀರು ಕುದಿಯುತ್ತಿರುವಾಗ ನಿಧಾನವಾಗಿ ಅಕ್ಕಿ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ.
    * ಕೈ ಬಿಡದೇ ಹಿಟ್ಟಿನ ಕೋಲನ್ನು ಬಳಸಿ ತಿರುಗಿಸುತ್ತೀರಿ. ಈಗ 2 ಚಮಚ ತುಪ್ಪ ಸೇರಿಸಿ.
    * ಹಿಟ್ಟು ತೀರ ತೆಳ್ಳಗೂ ಅಲ್ಲದೆ, ತೀರ ಗಟ್ಟಿಯಾಗಿಯೂ ಇರಬಾರದು.

    * ಈಗ ಲಾಡು ಸೈಜ್‍ನ ಅಕ್ಕಿ ಹಿಟ್ಟಿನ ಮುದ್ದೆ ತೆಗೆದುಕೊಂಡು ಕೈಯಲ್ಲೇ ಅಗಲ ಮಾಡಿ ಒಳಗೆ ಊರ್ಣ ಇಟ್ಟು ಕಡುಬು ಶೇಪ್‍ನಲ್ಲಿ ಮಡಿಚಿ.
    * ಹಿಟ್ಟು ಬಿಸಿ ಇರುವಾಗಲೇ ಮಾಡಬೇಕು, ಆಮೇಲೆ ಮಾಡಿದರೆ ಹಿಟ್ಟು ಒಡೆಯುತ್ತದೆ. ಬಿಸಿ ಆರಿದ್ರೆ ಬೇಕಾದಲ್ಲಿ ಮತ್ತೆ ಒಲೆಯ ಮೇಲಿಟ್ಟು ಬಿಸಿ ಮಾಡಿಕೊಳ್ಳಬಹುದು.
    * ಹೀಗೆ ಮಾಡಿಟ್ಟುಕೊಂಡ ಕಡುಬುಗಳನ್ನು ಬಾಳೆಎಲೆಯಲ್ಲಿ ಅಥವಾ ಅರಿಶಿನ ಎಲೆಯ ಒಳಗಿಟ್ಟು ಇಡ್ಲಿ ಕುಕ್ಕರ್ ನಲ್ಲಿಟ್ಟು 10-12 ನಿಮಿಷ ಬೇಯಿಸಿ.
    * ಬಿಸಿಬಿಸಿ ಇರುವಾಗಲೇ ಸರ್ವ್ ಮಾಡಿ. ಕಾಯಿ ಹಾಲು, ತುಪ್ಪ ಸೇರಿಸಿ ತಿಂದರೆ ಟೇಸ್ಟೇ ಬೇರೆಯಾಗಿರುತ್ತದೆ. ಇದನ್ನೂ ಓದಿ: ಒಂದು ಬೈಟ್ ಸಾಕಾಗಲ್ಲ – ಮತ್ತೆ ಮತ್ತೆ ಬೇಕೆನಿಸೋ ಕ್ಯಾರಮೆಲ್ ಮಿಠಾಯಿ ರೆಸಿಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಷಣಮಾತ್ರದಲ್ಲೇ ಮೊಸರು ಬೋಂಡಾ ಮಾಡೋದು ಹೇಗೆ?

    ಕ್ಷಣಮಾತ್ರದಲ್ಲೇ ಮೊಸರು ಬೋಂಡಾ ಮಾಡೋದು ಹೇಗೆ?

    ಸಂಜೆ ವೇಳೆ ಕುಟುಂಬದವರ ಜೊತೆ ಟೀ, ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಜೊತೆ ಬಿಸಿಬಿಸಿಯಾಗಿ ಏನಾದರೂ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ. ಬೋಂಡಾ ಮಾಡೋಣ ಅಂದರೆ ತಿಂದು ತಿಂದು ಬೇಸರವಾಗಿರುತ್ತದೆ. ಹೀಗಾಗಿ ನಿಮಗಾಗಿ ಸುಲಭವಾಗಿ ಮೊಸರು ಬೋಂಡಾ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    1. ಮೈದಾ ಹಿಟ್ಟು – 1/2 ಕೆಜಿ
    2. ಗಟ್ಟಿ ಮೊಸರು – 1/4 ಲೀಟರ್
    3. ಈರುಳ್ಳಿ – 2
    4. ಹಸಿಮೆಣಸಿನಕಾಯಿ – 4-5
    5. ಜೀರಿಗೆ -1 ಚಮಚ
    6. ಉಪ್ಪು – ರುಚಿಗೆ ತಕ್ಕಷ್ಟು
    7. ತುರಿದ ತೆಂಗಿನ ಕಾಯಿ – ಸ್ವಲ್ಪ
    8. ಎಣ್ಣೆ – ಕರಿಯಲು
    9. ಅಕ್ಕಿ ಹಿಟ್ಟು – 1 ಚಮಚ

    ಮಾಡುವ ವಿಧಾನ
    * ಒಂದು ಬಟ್ಟಲಿಗೆ ಮೈದಾ ಹಿಟ್ಟನ್ನು ಜರಡಿ ಹಿಡಿದು ಹಾಕಿಕೊಳ್ಳಿ.
    * ಅದಕ್ಕೆ ಅಕ್ಕಿ ಹಿಟ್ಟು, ಸಣ್ಣಗೆ ಹಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ತೆಂಗಿನ ಕಾಯಿ, ಉಪ್ಪು ಹಾಕಿ ಕಲಸಿ.
    * ನಂತರ ಗಟ್ಟಿ ಮೊಸರು ಹಾಕಿ ಬೋಂಡಾ ಹದಕ್ಕೆ ಕಲಸಿ. (ಹಿಟ್ಟು ಕಲಸಲು ನೀರು ಬಳಸಬಾರದು).
    * ಕಾದ ಎಣ್ಣೆಗೆ ಬೋಂಡಾ ರೀತಿ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಕರಿಯಿರಿ.
    * ಸಂಜೆಯ ಟೀ, ಕಾಫಿ ಜೊತೆಗೆ ಮೊಸರು ಬೋಂಡಾ ಸವಿಯಿರಿ.

  • ಗರಿಗರಿಯಾಗಿ ಕಡಿಮೆ ಸಮಯದಲ್ಲಿ ಆಲೂ ಸೇವ್ ಮಾಡಿ

    ಗರಿಗರಿಯಾಗಿ ಕಡಿಮೆ ಸಮಯದಲ್ಲಿ ಆಲೂ ಸೇವ್ ಮಾಡಿ

    ವೀಕೆಂಡ್‌ ಸಮಯದಲ್ಲಿ ಮನೆಯಲ್ಲಿಯೇ ಇದ್ದು, ಟಿವಿ ನೋಡುತ್ತಾ, ಮಕ್ಕಳು ಆಟವಾಡುತ್ತಾ ರಿಲ್ಯಾಕ್ಸ್ ಮಾಡುತ್ತಿರುತ್ತಾರೆ. ಜೊತೆಗೆ ಏನಾದರೂ ಗರಿಗರಿಯಾಗಿ, ಬಿಸಿಬಿಸಿಯಾಗಿ ತಿನ್ನಲು ಕೇಳುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಇರುವ ಆಲೂಗಡ್ಡೆಯಿಂದ ಬಿಸಿಬಿಸಿಯಾಗಿ ಆಲೂ ಸೇವ್ ಮಾಡಿಕೊಡಬಹುದು. ಆಲೂ ಸೇವ್ ಮಾಡೋದು ಹೇಗೆ ಎನ್ನುವ ವಿವರವನ್ನು ತಿಳಿಸಲಾಗಿದೆ.

     

    ಬೇಕಾಗುವ ಸಾಮಾಗ್ರಿಗಳು
    * ಬೇಯಿಸಿದ ಆಲೂಗಡ್ಡೆ – 2
    * ಖಾರದ ಪುಡಿ – 2 ಚಮಚ
    * ಉಪ್ಪು – ರುಚಿಗೆ ತಕ್ಕಷ್ಟು
    * ಗರಂ ಮಸಾಲ – ಅರ್ಧ ಚಮಚ
    * ಕಡ್ಲೆಹಿಟ್ಟು – ಒಂದು ಬಟ್ಟಲು
    * ಎಣ್ಣೆ – ಕರಿಯಲು ಇದನ್ನೂ ಓದಿ: ಸಖತ್ ರುಚಿ – ಮಲ್ಟಿಗ್ರೇನ್ ನಿಪ್ಪಟ್ಟು ರೆಸಿಪಿ

     

    ಮಾಡುವ ವಿಧಾನ
    * ಮೊದಲು ಬೇಯಿಸಿದ ಆಲೂಗಡ್ಡೆಯನ್ನು ತುರಿದಿಟ್ಟುಕೊಳ್ಳಿ.
    * ಅದಕ್ಕೆ ಕಡ್ಲೆ ಹಿಟ್ಟು, ಖಾರದ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ ಹಿಟ್ಟಿನ ರೀತಿ ಕಲಸಿಡಿ.(ಸೂಚನೆ – ಹಿಟ್ಟು ಕಲಸಲು ನೀರು ಬಳಸಬೇಡಿ)
    * ಕಲಸಿದ ಹಿಟ್ಟನ್ನು ಅರ್ಧ ಗಂಟೆ ಮುಚ್ಚಿಡಿ.
    * ಬಳಿಕ ಚಕ್ಕುಲಿ ಒರಳಿಗೆ ಸಣ್ಣ ರಂಧ್ರವುಳ್ಳ ಶ್ಯಾವಿಗೆ ಪ್ಲೇಟ್ ಹಾಕಿ.
    * ಅದಕ್ಕೆ ಎಣ್ಣೆ ಸವರಿ ಸಣ್ಣ ಉಂಡೆ ಮಾಡಿದ ಹಿಟ್ಟನ್ನು ಹಾಕಿ.
    * ಕಾದ ಎಣ್ಣೆಗೆ ನೇರವಾಗಿ ಒರಳಿನಿಂದ ಶ್ಯಾವಿಗೆ ರೀತಿ ಒತ್ತಿ ಹಾಕಿ.
    * ಕಂದು ಬಣ್ಣ ಬರುವರೆಗೂ ಕರಿಯಿರಿ.
    * ಬಳಿಕ ಖಾರಖಾರವಾಗಿ ಆಲೂ ಸೇವ್ ವನ್ನು ಸವಿಯಿರಿ. ಇದನ್ನೂ ಓದಿ: ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ರವಾ ಟೋಸ್ಟ್ ಮಾಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ

    ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ

    ರಾಗಿ ಎಲ್ಲಾ ರೀತಿಯಲ್ಲಿ ಆರೋಗ್ಯ ಒಳ್ಳೆಯದು. ಹಿರಿಯರು ಮುದ್ದೆ ತಿನ್ನುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಮಕ್ಕಳು ಮುದ್ದೆ ತಿನ್ನುವುದಿಲ್ಲ. ಹೀಗಾಗಿ ತಾಯಂದಿರು ಅವರಿಗೆ ರಾಗಿ ದೋಸೆ, ರೊಟ್ಟಿ ಮಾಡಿಕೊಡುತ್ತಾರೆ. ಇದೇ ರೀತಿ ಮಕ್ಕಳಿಗೆ ಆರೋಗ್ಯಕ್ಕೂ ಉತ್ತಮವಾದ ರಾಗಿ ಪಾಯಸ ಮಾಡಿ ಕೊಡಿ. ರಾಗಿ ಪಾಯಸ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    ತೆಂಗಿನಕಾಯಿ ತುರಿ – 3 ಚಮಚ
    ಗಸಗಸೆ – 2 ಚಮಚ
    ಬಾದಾಮಿ – 7-8
    ಏಲಕ್ಕಿ – 3
    ಹಾಲು – ಕಾಲು ಕಪ್
    ಸಕ್ಕರೆ – 3 ಚಮಚ
    ರಾಗಿ ಹಿಟ್ಟು- 3-4 ಚಮಚ
    ತುಪ್ಪ – 1 ಚಮಚ

     

    ಮಾಡುವ ವಿಧಾನ
    * ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಗಸಗಸೆ, ಬಾದಾಮಿ (ನೆನಸಿ ಸಿಪ್ಪೆ ತೆಗೆದಿರಬೇಕು) ಏಲಕ್ಕಿ, ಹಾಲು ಹಾಕಿ ರುಬ್ಬಿಕೊಳ್ಳಿ.
    * ಈಗ ಒಂದು ಬಾಣಲೆಗೆ ಒಂದು ಚಮಚ ತುಪ್ಪ, ಕಾಲು ಕಪ್ (3-4 ಚಮಚ) ರಾಗಿ ಹಿಟ್ಟನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಈಗ 700 ಮಿ.ಲೀಟರ್ ಹಾಲನ್ನು ಒಂದು ಬೌಲ್‍ಗೆ ಹಾಕಿ ಬಿಸಿಯಾಗಲು ಬಿಡಿ, ನಂತರ ಅದಕ್ಕೆ ಫ್ರೈ ಮಾಡಿಕೊಂಡಿದ್ದ ರಾಗಿ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ 5 ಮಿನಿಷ ಕುದಿಸಿರಿ (ಗಂಟು ಬಾರದಂತೆ ತಿರುಗಿಸುತ್ತೀರಿ)
    * ನಂತರ ಕಂಡೆನ್ಸ್ ಡ್ ಮಿಲ್ಕ್ (Condensed Milk) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ 3 ಚಮಚ ಸಕ್ಕರೆ (ಸಕ್ಕರೆ ಬದಲು ಬೆಲ್ಲವನ್ನು ಹಾಕಬಹುದು) ಮತ್ತು ರುಬ್ಬಿಕೊಂಡಿದ್ದ ಪೇಸ್ಟನ್ನು ಹಾಕಿ ತಿರುಗಿಸಿರಿ.
    * 3 ರಿಂದ 4 ನಿಮಿಷದವರೆಗೂ ಕುದಿಸಿದರೆ ರುಚಿಯಾದ ರಾಗಿ ಪಾಯಸ ಸವಿಯಲು ಸಿದ್ಧ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಂಪತಿ ಈ ಕೆಲಸ ಮಾಡಿದ್ರೆ ದಾಂಪತ್ಯ ಜೀವನ ಸುಖಮಯವಾಗಿರುತ್ತೆ..

    ದಂಪತಿ ಈ ಕೆಲಸ ಮಾಡಿದ್ರೆ ದಾಂಪತ್ಯ ಜೀವನ ಸುಖಮಯವಾಗಿರುತ್ತೆ..

    ದಾಂಪತ್ಯ ಎಂಬುದು ಬದುಕಿನ ಒಂದು ಅಮೂಲ್ಯ ಘಟ್ಟ. ಪ್ರತಿ ಸನ್ನಿವೇಶದಲ್ಲೂ ಸತಿ-ಪತಿ ಹೊಂದಾಣಿಕೆಯಿಂದ ಸಾಗಿದರೆ ಸಂಸಾರ ಸುಂದರವಾಗಿರುತ್ತೆ. ದಾಂಪತ್ಯದ ಪ್ರತಿ ಕ್ಷಣವೂ ಸುಮಧುರವಾಗಿರಬೇಕು. ಮುಂದೊಮ್ಮೆ ಅದರ ನೆನಪುಗಳು ಸಿಹಿಯಾಗಿರಬೇಕು.

    ದಾಂಪತ್ಯದಲ್ಲಿ ಹೊಂದಾಣಿಕೆಯ ಬದುಕು ಅಷ್ಟು ಸುಲಭವಲ್ಲ. ಸಾಗರದಲ್ಲಿ ನೌಕೆಗೆ ಎದುರಾಗುವ ಅಡೆತಡೆಗಳಂತೆಯೇ ಸಂಸಾರದಲ್ಲೂ ಅಡ್ಡಿ ಆತಂಕಗಳಿರುತ್ತವೆ. ಅದೆಲ್ಲವನ್ನೂ ಸ್ವೀಕರಿಸಿ ಸುಖಿ ಜೀವನ ನಡೆಸಬೇಕು ಎನ್ನುವುದಾದರೆ, ದಂಪತಿ (Couple) ತಮ್ಮ ನಿತ್ಯದ ಬದುಕಿನಲ್ಲಿ ಮಾಡಬೇಕಾದ ಒಂದಷ್ಟು ಕೆಲಸಗಳಿವೆ. ಬನ್ನಿ ಅವುಗಳನ್ನು ತಿಳಿಯೋಣ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಒಟ್ಟಿಗೆ ಡ್ಯಾನ್ಸ್‌ ಮಾಡಿ
    ನಿಮ್ಮ ದಿನಚರಿಯಲ್ಲಿ ಕೆಲಹೊತ್ತು ಇಬ್ಬರೂ ಸೇರಿ ನೃತ್ಯ ಮಾಡಿ. ತುಂಬಾ ಟ್ರೆಂಡಿಂಗ್‌ನಲ್ಲಿರೋ ರೊಮ್ಯಾಂಟಿಕ್‌ ನೃತ್ಯವನ್ನೇ ಆಯ್ಕೆ ಮಾಡಿಕೊಳ್ಳಿ. ಇಬ್ಬರೂ ಒಟ್ಟಿಗೆ ನೃತ್ಯ ಕಲಿಯಿರಿ. ಅದನ್ನು ಚಿತ್ರೀಕರಿಸಿ ಫನ್‌ ಮಾಡಿ.

    ಬೈಕ್‌ ರೈಡ್‌ ಹೋಗಿ
    ದಂಪತಿ ಒಟ್ಟಿಗೆ ಆಗಾಗ ಬೈಕ್‌ ರೈಡ್‌ ಹೋಗಿ. ಬೀದಿ ಬದಿಯಲ್ಲಿ ಸಿಗುವ ತಿನಿಸನ್ನು ಸವಿಯಿರಿ. ಅಲ್ಲಿ ಟೀ, ಕಾಫಿ ಸೇವಿಸಿ. ಬೈಕ್‌ ರೈಡ್‌ನ್ನು ಇಬ್ಬರೂ ಎಂಜಾಯ್‌ ಮಾಡಿ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಇಷ್ಟದ ಅಡುಗೆಯನ್ನು ಜೊತೆಯಾಗಿ ಮಾಡಿ
    ಅಡುಗೆ ಮನೆ ಗೃಹಿಣಿಗೆ ಮಾತ್ರ ಸೀಮಿತ ಅನ್ನೋದು ಕಾಮನ್‌. ಎಂದಾದರೂ ಪುರುಷರೂ ಕಿಚನ್‌ಗೆ ಹೋಗಿ, ಅಡುಗೆ ಮಾಡಲು ಹೆಂಡತಿಗೆ ಸಹಾಯ ಮಾಡಿದ್ದೀರಾ? ಇನ್ಮುಂದೆ ಆ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಇಷ್ಟದ ಅಡುಗೆಯನ್ನು ಪತ್ನಿಯೊಂದಿಗೆ ಸೇರಿ ಮಾಡಿ. ಬದುಕಿನಲ್ಲಿ ಇಬ್ಬರಿಗೂ ಅದು ಮರೆಯಲಾಗದ ಕ್ಷಣ ಆಗಿರುತ್ತೆ.

    ಮನೆ ಸ್ವಚ್ಛಗೊಳಿಸಿ
    ಮನೆಗೆಲಸವನ್ನು ಪತ್ನಿಗೆ ಮಾತ್ರ ಬಿಡುವುದು ಸರಿಯಲ್ಲ. ಎಲ್ಲಾ ಸಂದರ್ಭದಲ್ಲೂ ಅವರಿಗೆ ಸಾಥ್‌ ನೀಡುವುದು ಪತಿಯ ಕರ್ತವ್ಯ ಆಗಬೇಕು. ಆಗ ನೀವು ಪತ್ನಿ ಮನಸ್ಸಿಗೆ ಇನ್ನಷ್ಟು ಹತ್ತಿರ ಆಗ್ತೀರಾ. ಇಬ್ಬರೂ ಒಟ್ಟಿಗೆ ಮನೆ ಕ್ಲೀನ್‌ ಮಾಡಿ. ವಸ್ತುಗಳನ್ನು ನಿಗದಿತ ಸ್ಥಗಳಲ್ಲಿ ಇಟ್ಟುಕೊಳ್ಳಿ. ಮನೆ ಶುಚಿಯಾಗಿದ್ದಷ್ಟೂ, ಮನಸ್ಸು ಪ್ರಶಾಂತವಾಗಿರುತ್ತೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಮೂವಿ ನೋಡಿ
    ಮೂವಿ ನೋಡಲು ದಂಪತಿ ಸಿನಿಮಾ ಥಿಯೇಟರ್‌ಗಳಿಗೇ ಹೋಗಬೇಕು ಎಂದೇನು ಇಲ್ಲ. ಮನೆಯಲ್ಲೇ ಒಟ್ಟಿಗೆ ಕೂತು ಇಷ್ಟದ ಸಿನಿಮಾ ವೀಕ್ಷಿಸಬಹುದು. ಇಂತಹ ಸಂದರ್ಭದಲ್ಲಿ ಆದಷ್ಟು ಕಾಮಿಡಿ ಸಿನಿಮಾಗಳನ್ನು ನೋಡಿದರೆ ಮತ್ತಷ್ಟು ಎಂಜಾಯ್‌ ಮಾಡಬಹುದು.

    ಆಗಾಗ ಪಿಕ್ನಿಕ್‌ಗೆ ಹೋಗಿ
    ಮನೆ, ಕಚೇರಿ ಅಂತಷ್ಟೇ ಇದ್ದರೆ ಲೈಫು ತುಂಬಾ ಬೇಜಾರು ಎನಿಸುತ್ತೆ. ಕಪಲ್‌ ಆಗಾಗ ಹೊರಗಡೆ ಪಿಕ್ನಿಕ್‌ಗೆ ಹೋಗಬೇಕು. ಮನೆಯಿಂದಲೇ ಒಂದಷ್ಟು ಹಣ್ಣು-ಹಂಪಲು, ಸ್ನ್ಯಾಕ್ಸ್‌ ಪ್ಯಾಕ್‌ ಮಾಡಿಕೊಂಡು, ಪಿಕ್ನಿಕ್‌ ಸ್ಥಳದಲ್ಲಿ ಜೊತೆಯಾಗಿ ಸವಿಯಿರಿ. ಜೀವನದಲ್ಲಿ ಇದು ಕೂಡ ಮರೆಯಲಾಗದ ಕ್ಷಣವಾಗುತ್ತೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

    ನನ್ನ ಹೆಂಡತಿಗೆ ಮೊಟ್ಟೆನೂ ಬೇಯಿಸೋಕೆ ಬರಲ್ಲ: ಸೀದು ಹೋದ ಮೊಟ್ಟೆ ಹಂಚಿಕೊಂಡ ರವೀಂದ್ರ

    ಮಿಸ್ ಮ್ಯಾಚ್ ಜೋಡಿ ಎಂದೇ ಖ್ಯಾತರಾಗಿರುವ ತಮಿಳಿನ ರವೀಂದ್ರ ಚಂದ್ರಶೇಖರ್ (Ravindra) ಮತ್ತು ಮಹಾಲಕ್ಷ್ಮಿ ಜೋಡಿ ಇದೀಗ ಮೊಟ್ಟೆ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಮೊನ್ನೆಯಷ್ಟೇ ಮಧ್ಯರಾತ್ರಿ ಹೆಂಡತಿಯನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಬಿರಿಯಾನಿ ಕೊಡಿಸಿದ್ದ ರವೀಂದ್ರ, ಇದೀಗ ಮನೆಯಲ್ಲೇ ಮೊಟ್ಟೆ ಬೇಯಿಸಲು ಹೋಗಿ ಹೆಂಡತಿ ಏನು ಮಾಡಿದ್ದಾಳೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸೀದು ಹೋದೆ ಮೊಟ್ಟೆಯ ಫೋಟೋವನ್ನೂ ಅವರು ಅಪ್ ಲೋಡ್ ಮಾಡಿದ್ದಾರೆ.

    ಮಹಾಲಕ್ಷ್ಮಿಯನ್ನು (Mahalakshmi) ಮದುವೆಯಾದ ನಂತರ ಶೂಟಿಂಗ್ ಸ್ಥಳಕ್ಕೆ ಮನೆಯಿಂದಲೇ ಊಟ ತಗೆದುಕೊಂಡು ಹೋಗಿದ್ದರು ರವೀಂದ್ರ. ಆನಂತರ ಬೇರೆ ಬೇರೆ ಹೋಟೆಲ್ ಗಳಲ್ಲಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಊಟ ಕೊಡಿಸಿದ್ದರು. ಬಹುಶಃ ಹೋಟೆಲ್ ಊಟ ಸಾಕು ಅನಿಸಿರಬೇಕು. ಹಾಗಾಗಿಯೇ ಹೆಂಡತಿಗೆ ಮೊಟ್ಟೆ ಬೇಯಿಸಲು ರವೀಂದ್ರ ಹೇಳಿದ್ದರಂತೆ. ಆದರೆ, ಮಹಾಲಕ್ಷ್ಮಿಗೆ ಮೊಟ್ಟೆಯನ್ನೂ ಸರಿಯಾಗಿ ಬೇಯಿಸಲು ಬರುವುದಿಲ್ಲ ಎನ್ನುವುದು ಇವರ ಆಕ್ಷೇಪನೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಎರಡು ಮೊಟ್ಟೆಗಳನ್ನು (eggs) ಬೇಯಿಸಲು ಇಟ್ಟಿದ್ದ ಮಹಾಲಕ್ಷ್ಮಿ, ಅದನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕಾಗಿ ಮೊಟ್ಟೆಗಳು ಸೀದು ಹೋಗಿವೆ. ಅವುಗಳನ್ನು ಫೋಟೋ ತಗೆದಿರುವ ರವೀಂದ್ರ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಕುಕ್ಕಿಂಗ್ ಸ್ಕಿಲ್ಸ್ ಬಗ್ಗೆ ತಮಾಷೆಯಾಗಿಯೇ ಅವರು ಶೇರ್ ಮಾಡಿದ್ದಾರೆ. ಮೊಟ್ಟೆ ಸೀದು ಹೋಗಿದ್ದನ್ನು ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ನ್ಯೂ ಲೈಫ್ ಮೈ ವೈಫ್ ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]