Tag: Cooker BombBlast

  • ನೀವು ಸರ್ವನಾಶ ಆಗಿ ಹೋಗ್ತೀರಾ – ಡಿಕೆಶಿ ವಿರುದ್ಧ ಮುತಾಲಿಕ್ ಕಿಡಿ

    ನೀವು ಸರ್ವನಾಶ ಆಗಿ ಹೋಗ್ತೀರಾ – ಡಿಕೆಶಿ ವಿರುದ್ಧ ಮುತಾಲಿಕ್ ಕಿಡಿ

    ಧಾರವಾಡ: ದೇಶಕ್ಕೆ ಸುರಕ್ಷತೆ ಮುಖ್ಯ, ನಿಮ್ಮ ರಾಜಕಾರಣವಲ್ಲ. ನಿಮ್ಮ ತುಷ್ಟಿಕರಣದಿಂದಲೇ ಕಾಂಗ್ರೆಸ್ (Congress) ಇವತ್ತು ಈ ಸ್ಥಿತಿಗೆ ಬಂದಿದೆ. ಇನ್ನೂ ಅರ್ಥ ಮಾಡಿಕೊಂಡಿಲ್ಲ ಅಂದ್ರೆ, ನೀವು ಸರ್ವನಾಶ ಆಗಿ ಹೋಗ್ತಿರಾ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಕಿಡಿ ಕಾರಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker BombBlast) ವಿಚಾರದಲ್ಲಿ ಡಿಕೆಶಿ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಭಯೋತ್ಪಾದಕರ ಪರವೇ? – ಡಿಕೆಶಿ ವಿರುದ್ಧ ಸಿಎಂ ಕಿಡಿ

    ಡಿಕೆಶಿ ಟೆರರಿಸ್ಟ್‌ಗಳಿಗೆ (Terrorist) ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧ. ಮುಸ್ಲಿಂ ವೋಟಿಗಾಗಿ (Muslims Vote) ಕಾಂಗ್ರೆಸ್ ತುಷ್ಟೀಕರಣ ಮಾಡಿದ ಪರಿಣಾಮ ಇಡೀ ದೇಶದಲ್ಲಿ ಕಾಂಗ್ರೆಸ್ ಕಸದ ಬುಟ್ಟಿಗೆ ಸೇರಿದೆ. ಆದ್ರೂ ಅವರಿಗೆ ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ಕೋಡೊದು ಸರಿಯಲ್ಲ. ನಾನು ಇದನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಿಂಡಿ ಪ್ಯಾಕೆಟ್‍ನಲ್ಲಿ 500 ರೂ. ನೋಟುಗಳು – ಕಿರಾಣಿ ಅಂಗಡಿಗಳಿಗೆ ಮುಗಿಬಿದ್ದ ಜನ

    ಟೆರರಿಸ್ಟ್‌ಗಳ ಬಗ್ಗೆ ಒಲವು ತೋರುವಂತೆ ಡಿಕೆಶಿ ಮಾತನಾಡಿದ್ದಾರೆ. ದೇಶದಲ್ಲಿ ಮತ್ತೆ ಮುಂಬೈ ಹಾಗೂ ಪುಲ್ವಾಮಾ ದಾಳಿಯಂತೆ ರಕ್ತ ಹರಿಯಬೇಕಿತ್ತಾ? ಹೆಣಗಳು ಬಿಳಬೇಕಾ? ಪೊಲೀಸ್ ಇಲಾಖೆ ಆರೋಪಿಯನ್ನ ಪತ್ತೆಹಚ್ಚಿ ಅನಾಹುತ ತಪ್ಪಿಸಿದ್ದಾರೆ. ಆದ್ರೆ ಕೇವಲ ವೋಟಿಗಾಗಿ ಟೆರರಿಸ್ಟ್ಗಳ ಪರ ಮಾತನಾಡುವುದು ದೇಶಕ್ಕೆ ಅಪಾಯಕಾರಿ. ಡಿಕೆಶಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯದೇ ಇದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]