Tag: cooker Bomb blast

  • ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಎನ್‌ಐಎ ತನಿಖೆಗೆ ಹಸ್ತಾಂತರಿಸಲು ಸರ್ಕಾರ ನಿರ್ಧಾರ: ಆರಗ ಜ್ಞಾನೇಂದ್ರ

    ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಎನ್‌ಐಎ ತನಿಖೆಗೆ ಹಸ್ತಾಂತರಿಸಲು ಸರ್ಕಾರ ನಿರ್ಧಾರ: ಆರಗ ಜ್ಞಾನೇಂದ್ರ

    ಬೆಂಗಳೂರು: ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿದೆ. ಕಳೆದ ವಾರ ನಡೆದ ಘಟನೆಯ ಹಿಂದೆ ಉಗ್ರರ ದೊಡ್ಡ ಸಂಚೇ ಇತ್ತು ಎಂಬುದು ಬೆಳಕಿಗೆ ಬರುತ್ತಲೇ ಇದರ ತನಿಖೆಯನ್ನು ಎನ್‌ಐಎಗೆ (NIA) ವಹಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. ಇದೀಗ ಮಂಗಳೂರು ಸ್ಫೋಟ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.

    ಮಂಗಳೂರಿನ ಕಂಕನಾಡಿ ಸಮೀಪ ಕುಕ್ಕರ್ ಬಾಂಬ್ ಸ್ಫೋಟ ಘಟನೆಯ ಮುಂದಿನ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಾ ದೇವಾಲಯಗಳಲ್ಲೂ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ಮಾಡಬೇಕು – ಪ್ರಮೋದ್ ಮುತಾಲಿಕ್

    ನವೆಂಬರ್ 19ರಂದು ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢವಾಗಿ ಸ್ಫೋಟವೊಂದು ಸಂಭವಿಸಿತ್ತು. ಘಟನೆಯಲ್ಲಿ ಆಟೋ ಡ್ರೈವರ್ ಹಾಗೂ ಹಿಂಬದಿ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿತ್ತು. ತನಿಖೆಯ ವೇಳೆ ಪ್ರಯಾಣಿಕನ ಸೋಗಿನಲ್ಲಿ ಬಂದು ಬಾಂಬ್ ಬ್ಲಾಸ್ಟ್ ಮಾಡಿದ್ದ ವ್ಯಕ್ತಿ ಮೋಸ್ಟ್ ವಾಂಟೆಡ್ ಶಾರೀಕ್ (Shariq) ಎಂಬುದು ತಿಳಿದುಬಂದಿದೆ. ಈತ ಮಂಗಳೂರಿನ ದೇವಾಲಯಗಳು ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಯೋಜಿಸಿದ್ದ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಶಾರೀಕ್ ಅಲ್ಲ ಘಜನಿಯಿಂದ ಟಿಪ್ಪುವರೆಗಿನ ಎಲ್ಲರೂ ದೇವಸ್ಥಾನದ ಮೇಲೆ ದಾಳಿ ಮಾಡ್ಕೊಂಡೇ ಬಂದಿದ್ದಾರೆ: ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ

    ಬುದ್ಧಿವಾದ ಹೇಳಿದ್ದಕ್ಕೆ ಶಾಲೆ ಬಿಟ್ಟ ಶಾರೀಕ್- ಕುಕ್ಕರ್ ಬಾಂಬರ್ ಹಿನ್ನೆಲೆಯೇ ರೋಚಕ

    ಮಂಗಳೂರು: ಬಾಂಬ್ ಸ್ಫೋಟ ಮಾಡಿದ ಉಗ್ರ ಶಾರೀಕ್ (Shariq) ದಾರಿ ತಪ್ಪಿದ್ದು ಹೇಗೆ, ಶಿಕ್ಷಣ ಕಲಿತು ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಬೇಕಿದ್ದ ಶಾರೀಕ್ ಶಿಕ್ಷಣ ಕಲಿತ ಊರನ್ನೇ ಸ್ಫೋಟಿಸಲು ಸಂಚು ರೂಪಿಸಿದ್ಯಾಕೆ. ತಂದೆ-ತಾಯಿ ಇಲ್ಲದ ಅನಾಥ ಹುಡುಗ ಕುಟುಂಬದ ಮಾತು ಕೇಳಿದ್ರೆ ಇಂದು ಉಗ್ರನಾಗುತ್ತಿರಲಿಲ್ಲ.

    ಹೌದು. ಮಂಗಳೂರಿನ ಕುಕ್ಕರ್ ಬಾಂಬರ್ ಶಾರೀಕ್ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ಮೊದಲ ಬಾರಿಗೆ ಮಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ರೂಪಿಸಿದ್ದ ಸಂಚು ಸಹ ವಿಫಲವಾಗಿದೆ. ಅಷ್ಟಕ್ಕೂ ಈತ ಈ ಮಟ್ಟಿಗೆ ಉಗ್ರತ್ವವನ್ನು ಮೈಗೂಡಿಸಿಕೊಳ್ಳಲು ಕಾರಣ ಏನು ಅಂತ ನೋಡಿದ್ರೆ. ಈತ ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಳಿಕ ಮಲತಾಯಿಯ ಆಶ್ರಯದಲ್ಲಿ ಬೆಳೆದಿದ್ದ. ಇದನ್ನೂ ಓದಿ: ರಾಷ್ಟ್ರಧ್ವಜ ಕಂಡರೆ ಬೆಂಕಿ ಹಚ್ಚುತ್ತಿದ್ದ ಶಾರೀಕ್ ಗ್ಯಾಂಗ್

    ಕಳೆದ ಕೆಲ ವರ್ಷದ ಹಿಂದೆ ಆತನ ತಂದೆ ಅಬ್ದುಲ್ ಮಜೀದ್ ಕೂಡಾ ಸಾವನ್ನಪ್ಪಿದ್ದು ಬಳಿಕ ಮನೆಯಿಂದಲೂ ದೂರವಾಗಿದ್ದ. ಮಂಗಳೂರಿನ ದೇರಳಕಟ್ಟೆಯಲ್ಲಿ ಶಿಕ್ಷಣ ಪಡೆಯಲು ಬಂದಿದ್ದ ಶಾರೀಕ್ ನಗರದ ಬಲ್ಮಠದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ. ಈ ನಡುವೆ ಶಿಕ್ಷಣ ಕಲಿಯುವುದಕ್ಕಿಂತಲೂ ಹೆಚ್ಚಾಗಿ ಉಗ್ರ ಸಂಪರ್ಕಕ್ಕೆ ಹಾತೊರೆಯುತ್ತಿದ್ದ. ಇದೇ ಸಂದರ್ಭದಲ್ಲಿ ಉಗ್ರರ ಪರ ಗೋಡೆ ಬರಹ ಬರೆದು ಉಗ್ರರಿಂದ ಆಕರ್ಷಿತನಾಗಿದ್ದ. ಇದನ್ನೂ ಓದಿ: ಕುಕ್ಕರ್‌ ಬಾಂಬರ್‌ ಶಾರೀಕ್‌ ಗುಣಮುಖನಾಗಲು 25 ದಿನ ಬೇಕು

    ಕಳೆದ 2020ರ ಡಿಸೆಂಬರ್ 5 ರಂದು ಮಂಗಳೂರಿನ ಎರಡು ಕಡೆ ಗೋಡೆ ಬರಹ ಬರೆದಿದ್ದು ಅದರಲ್ಲಿ ತಾಲಿಬಾನ್ (Taliban), ಲಷ್ಕರ್ ತೊಯ್ಬಾ ಜಿಂದಾಬಾದ್, ಸಂಘಿಗಳ ಅಟ್ಟಹಾಸವನ್ನು ಮಟ್ಟಹಾಕಲು ಲಷ್ಕರ್ ತೋಯ್ಬಾವನ್ನು ಮಂಗಳೂರಿಗೆ ಕರೆಸಬೇಕಾಗುತ್ತದೆ ಎಂದು ಬರೆದಿದ್ದ. ಈ ವೇಳೆ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರ ಬಂದಿದ್ದ. ಬಳಿಕ ಮನೆಯವರೂ ಈತನಿಗೆ ಬುದ್ಧಿಮಾತು ಹೇಳಿದ್ದು ಇಂತಹ ಕೆಲಸ ಮಾಡಬೇಡ ಎಂದು ಎಚ್ಚರಿಕೆ ನಿಡಿದ್ರು.

    ಇದರಿಂದ ರೊಚ್ಚಿಗೆದ್ದು ಮನೆ ಬಿಟ್ಟು ಬಂದಿದ್ದ ಶಾರೀಕ್, ಬಳಿಕ ಭೂಗತನಾಗಿದ್ದ. ಉಗ್ರರ ನಶೆಯಲ್ಲೇ ಇದ್ದ ಶಾರೀಕ್ ಹೇಗಾದ್ರೂ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಮಾಡಬೇಕೆಂದು ನಿರ್ಧರಿಸಿದ್ದ. ಅದಕ್ಕಾಗಿ ತಾನು ಶಿಕ್ಷಣ (Education) ಕಲಿತ ಮಂಗಳೂರನ್ನೇ ಆಯ್ಕೆ ಮಾಡಿಕೊಂಡಿದ್ದ. ಈ ಮೂಲಕ ಉಗ್ರರನ್ನು ಮಂಗಳೂರಿಗೆ ಕರೆಸುತ್ತೇವೆ ಎಂದು ಗೋಡೆ ಬರಹದಲ್ಲಿ ಬರೆದಂತೆ ತಾನೇ ಉಗ್ರನಾಗಿ ಬಂದು ವಿಧ್ವಂಸಕ ಕೃತ್ಯ ನಡೆಸಲು ಯತ್ನಿಸಿದ್ದ. ಆದರೆ ಆತ ಅಂದುಕೊಂಡಂತೆ ಯಾವುದೂ ನಡೆಯದೆ ಸಣ್ಣ ಪ್ರಮಾಣದಲ್ಲಿ ಸ್ಫೋಟ ನಡೆದು ಹೋಯ್ತು.

    ಒಟ್ಟಿನಲ್ಲಿ ಶಿಕ್ಷಣ ಕಲಿತು ಮನೆಗೆ ಆಧಾರ ಸ್ತಂಭವಾಗಬೇಕಿದ್ದ ಶಾರೀಕ್ ಇದೀಗ ಉಗ್ರನಾಗಿ ಬಾಂಬ್ ಸ್ಫೋಟಿಸಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ತಾನು ಮಾಡಿದ ಕೆಟ್ಟ ಕೆಲಸಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

    ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

    ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದವನ್ನು ಎಡಿಜಿಪಿ ಅಲೋಕ್ ಕುಮಾರ್ (Alok Kumar) ಸಲ್ಲಿಸಿದರು.

    ಅಧರ್ಮದ ಹಾದಿಯಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಅವಳಿ ವೀರ ಪುರುಷರ ಪವಾಡ ಇದಾಗಿದೆ. ಗರೋಡಿ ಕ್ಷೇತ್ರ (Garodi Kshetra) ದ 200 ಮೀಟರ್ ದೂರ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದೆ. ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳಿದ್ದಾರೆ ಎಂದರು.

    Kankanady Garodi Jatre 2021 Highlights - Myoksha | Tulunadu Koti Chennayya Temple - YouTube

    ಮಂಗಳೂರಿನ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ನೆಲೆಯೂರಿರುವ ಕೋಟಿ-ಚೆನ್ನಯ್ಯ ಅವಳಿ ಮಹಾಪುರುಷ ಶಕ್ತಿಗಳು. ದೊಡ್ಡ ಮಟ್ಟದ ಅನಾಹುತ ತಪ್ಪಿಸಿದ್ದು ಈ ಶಕ್ತಿಗಳು. ಮಾನವ ಬಲವೊಂದಿದ್ದರೆ ಸಾಲದು ದೈವಬಲವೂ ಬೇಕು ಅನ್ನೋದಕ್ಕೆ ಸಾಕ್ಷಿ ಎಂದು ತಿಳಿಸಿದರು. ಇದನ್ನೂ ಓದಿ: ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

    ಪ್ರತಿ ದಿನ ಬ್ರಹ್ಮಬೈದರ್ಕಳ ಕ್ಷೇತ್ರಕ್ಕೆ ಬಂದು ಆಟೋ ಚಾಲಕ ಪುರುಷೋತ್ತಮ್ ಕೈ ಮುಗಿಯುತ್ತಿದ್ದರು. ಪ್ರತೀ ಆಟೋ ಚಾಲಕರು ಈ ಕ್ಷೇತ್ರದಲ್ಲಿ ಕೈಮುಗಿದು ದಿನ ಆರಂಭ ಮಾಡುತ್ತಿದ್ದರು. ಹೀಗಾಗಿ ಶಕ್ತಿಯೇ ದೊಡ್ಡ ಅನಾಹುತ ತಪ್ಪಿದೆ ಅನ್ನೋದು ಭಕ್ತರ ನಂಬಿಕೆಯಾಗಿದೆ ಎಂದರು.

    ಕರಾವಳಿ ಉಗ್ರರ ಸ್ಲೀಪರ್ ಸೆಲ್ ಆದರೂ ಇಲ್ಲಿ ತನಕ ಬಹಿರಂಗ ಬ್ಲಾಸ್ಟ್ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಯತ್ನ ನಡೆದರೂ ವಿಫಲವಾದ ಬಾಂಬ್ ಬ್ಲಾಸ್ಟ್ ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್ ಕೇಸ್ – ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

    ಚೇತರಿಕೆ ಕಾಣದ ಶಾರಿಕ್ ಆರೋಗ್ಯ: ಬಾಂಬರ್ ಉಗ್ರ ಶಾರಿಕ್ ಆರೋಗ್ಯ ಇನ್ನೂ ಚೇತರಿಸಿಕೊಂಡಿಲ್ಲ. ಶೇ.45 ರಷ್ಟು ಸುಟ್ಟ ಗಾಯಗಳೊಂದಿಗೆ ಮಹಮ್ಮದ್ ಶಾರಿಕ್ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಕಣ್ಣನ್ನು ತೆರೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಮತ್ತೊಂದು ಕಣ್ಣು ಕಾಣದೇ ಶಾರಿಕ್ ನರಳಾಡುತ್ತಿದ್ದಾನೆ. ಆದ್ದರಿಂದ ಇನ್ನು ಕೂಡ ಪೊಲೀಸರು ಶಾರಿಕ್ ವಿಚಾರಣೆ ಮಾಡಿಲ್ಲ. ಕೈಗಳು ಸುಟ್ಟಿರೊದ್ರಿಂದ ಬರವಣಿಗೆ ಅಸಾಧ್ಯ. ಹೀಗಾಗಿ ಬರವಣಿಗೆ ಮೂಲಕ ಹೇಳಿಕೆ ಪಡೆಯಲು ಕೂಡ ಸಾಧ್ಯವಾಗಿಲ್ಲ ಎಂದು ಆಸ್ಪತ್ರೆ ಮತ್ತು ಪೊಲೀಸ್ ಮೂಲಗಳ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ

    ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ

    ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರಿಕ್ (Shariq) ಪ್ಲಾನ್ ಮಾಡಿದ್ದು, ಉಗ್ರನ ಚೈನ್ ಲಿಂಕ್ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಗುಮಾನಿ ಬಂದಿದೆ. ಈತನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳ ತನಿಖೆ ಆರಂಭಗೊಂಡಿದೆ.

    ಬಾಂಬ್ ಸ್ಫೋಟಿಸಿದ ಉಗ್ರ ಶಾರಿಕ್ ಪೊಲೀಸ್ ವಶದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ನಡುವೆ ಬಾಂಬ್ ಸ್ಫೋಟದ ಕೃತ್ಯ ಶಾರಿಕ್ ಒಬ್ಬನ ಪ್ಲ್ಯಾನ್ ಆಗಿರಲು ಸಾಧ್ಯವೇ ಇಲ್ಲ. ಈ ಸ್ಫೋಟದ ಹಿಂದೆ ದೊಡ್ಡ ಒಂದು ಜಾಲ ಇದೆ ಎಂಬ ಗುಮಾನಿ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಕೃತ್ಯದ ಬೆನ್ನು ಬಿದ್ದಿದ್ದಾರೆ.

    ಬಾಂಬ್ ತಯಾರಿಸಿ ಅಟ್ಟಹಾಸ ಮೆರೆಯುವುದು ಅಷ್ಟು ಸುಲಭದ ಕೆಲಸ ಅಲ್ಲ. ಇದರ ಹಿಂದೆ ಒಂದು ವ್ಯವಸ್ಥಿತವಾದ ಷಡ್ಯಂತ್ರ ಇದ್ದೇ ಇರುತ್ತದೆ. ದೊಡ್ಡ ಗುಂಪೊಂದು ಇದರ ಹಿಂದೆ ಕೆಲಸ ಮಾಡ್ತಿರುತ್ತದೆ. ದುಷ್ಕೃತ್ಯಕ್ಕೆ ಆರ್ಥಿಕ ಬಲವನ್ನ ತುಂಬಲಾಗಿರುತ್ತದೆ. ಬಾಂಬ್ ತಯಾರಿ, ಅದರ ಪ್ರಯೋಗ, ಎಲ್ಲಿ ಸ್ಫೋಟ ಮಾಡಬೇಕು ಎಂಬ ಬಗ್ಗೆ ವರ್ಷಗಳಿಗಿಂತ ಹೆಚ್ಚು ತಯಾರಿ ಬೇಕಾಗುತ್ತದೆ ಎಲ್ಲಾ ಆಯಾಮಗಳಲ್ಲಿ ರಾಷ್ಟ್ರೀಯ ತನಿಖಾದಳ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಮುಂದೆ ಆಗಬಹುದಾದ ಸಂಭಾವ್ಯ ಅವಘಡಗಳನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಪೊಲೀಸ್ ಇಲಾಖೆ ರಾತ್ರಿ ಹಗಲು ಕೆಲಸ ಮಾಡುತ್ತಿದೆ.

    ಫಾದರ್ ಮುಲ್ಲರ್ಸ್ ಆಸ್ಪತ್ರೆ (Father Muller Hospital) ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಶಾರೀಕ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ ಹೊಂಚು ಹಾಕಿ ಕುಳಿತಿದೆ. ಒಮ್ಮೆ ಡಿಸ್ಚಾರ್ಜ್ ಆದ್ರೆ ಹಲವಾರು ಆತಂಕಕಾರಿ ವಿಚಾರಗಳು ಉಗ್ರನ ಬಾಯಿಯಿಂದ ಹೊರ ಬೀಳಲಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ಅಲೋಕ್‌ಕುಮಾರ್

    Live Tv
    [brid partner=56869869 player=32851 video=960834 autoplay=true]