Tag: cooker bomb

  • ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ವಿರೋಧಪಕ್ಷ ಮತಕ್ಕೋಸ್ಕರ ಭಯೋತ್ಪಾದನೆಗೆ ಸಪೋರ್ಟ್ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ರಾಮನಗರ: ಮಂಗಳೂರು ಕುಕ್ಕರ್ ಸ್ಫೋಟಕ್ಕೆ (Mangaluru Cooker bomb Blast) ತಮಿಳುನಾಡಿನ ಎಸ್‌ಡಿಪಿಐ ಲಿಂಕ್ ಸಿಗುತ್ತಿದೆ. ಕರಾವಳಿ ಭಾಗದಲ್ಲಿ ಇಸ್ಲಾಮಿಕ್ ಗೂಂಡಾ ಶಕ್ತಿ ಬೆಳೆಯುತ್ತಿದೆ. ಇದು ಪೊಲೀಸರಿಗೂ ಗೊತ್ತು. ಆದರೆ ಈ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಘಟನೆ ಆದಾಗ ಮಾತ್ರ ಕಾರ್ಯಾಚರಣೆ ಮಾಡ್ತಾರೆ. ರಾಜ್ಯ ಸರ್ಕಾರ ಜಾಗೃತವಾಗಬೇಕು. ಘಟನೆ ಆದ ಬಳಿಕ ತನಿಖೆ ಮಾಡಿ ಪ್ರಯೋಜನ ಇಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕಿತ ಉಗ್ರ ಶಾರೀಕ್ (Shariq) ಈ ಹಿಂದೆ ಬಂಧನವಾಗಿದ್ದ ವ್ಯಕ್ತಿ. ಆತನ ಬಿಡುಗಡೆ ಮಾಡದಿದ್ದರೆ ಈ ಬಾಂಬ್ ಸ್ಫೋಟ ಆಗುತ್ತಿರಲಿಲ್ಲ. ಸರ್ಕಾರ ಕೇವಲ ಚುನಾವಣೆ, ಅಧಿಕಾರ ಅಂತ ಕೂರಬಾರದು. ವಿರೋಧ ಪಕ್ಷ ಕೂಡಾ ಟೀಕೆ ಮಾಡಿ ಕೂರಬಾರದು. ವೋಟ್‌ಗೋಸ್ಕರ ಭಯೋತ್ಪಾದಕತೆಗೆ ಸಪೋರ್ಟ್ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ನಿಮ್ಮ ನೀಚ ಬುದ್ದಿ ಬಿಡಿ. ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇರಳ ಹಾಗೂ ತಮಿಳುನಾಡು ಗಡಿ ಭಾಗಗಳಲ್ಲಿ ಎಚ್ಚರಿಕೆ ವಹಿಸಿ. ಸೂಕ್ಷ್ಮ ಪ್ರದೇಶಗಳಲ್ಲಿ ಎನ್‌ಐಎ ಶಾಖೆ ಸ್ಥಾಪನೆ ಮಾಡಬೇಕು. ದೇಶ, ರಾಜ್ಯದ ರಕ್ಷಣೆ ಬಗ್ಗೆ ಚಿಂತನೆ ಮಾಡಿ ಎಂದರು. ಇದನ್ನೂ ಓದಿ: ಕುಕ್ಕರ್‌ ಬಾಂಬರ್‌ ಶಾರೀಕ್‌ ಗುಣಮುಖನಾಗಲು 25 ದಿನ ಬೇಕು

    ರಾಮನಗರ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ನಡೆಯುತ್ತಿದೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಕನಕಪುರದಲ್ಲಿ ಮತಾಂತರ ನಡೆಯುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಮತಾಂತರ ಮಾಡಲಾಗುತ್ತಿದೆ. ಇಲ್ಲಿ ಕಾನೂನು ಬಾಹಿರ ಚರ್ಚ್ಗಳು ತಲೆ ಎತ್ತುತ್ತಿವೆ. ಅವರಿಗೆ ಕುಮ್ಮಕ್ಕು ನೀಡಲು ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಮಾಡಲು ಹೊರಟಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಕ್ರಮವಹಿಸಿಲ್ಲ. ಈ ಬಗ್ಗೆ ಎಸ್‌ಪಿ, ಡಿಸಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿಂದೂ ಹುಡುಗಿಯರು ಎಚ್ಚರಿಕೆ ವಹಿಸಿ. ಆತುರದಲ್ಲಿ ಪ್ರೀತಿಗೆ ಮೋಸ ಹೋಗಿ ಪೀಸ್ ಪೀಸ್ ಆಗಬೇಡಿ. ದೆಹಲಿಯ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಿ. ಪ್ರೀತಿ ಮಾಡುವ ಮುನ್ನ ಯೋಚಿಸಿ. ಪೋಷಕರು ಕೂಡಾ ಈ ಬಗ್ಗೆ ಜಾಗೃತಿ ವಹಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ತಾಬ್ ನನ್ನನ್ನು ಕೊಂದು ಪೀಸ್ ಪೀಸ್ ಮಾಡ್ತಾನೆ – 2 ವರ್ಷದ ಹಿಂದೆಯೇ ಪೊಲೀಸರಿಗೆ ಪತ್ರ ಬರೆದಿದ್ದ ಶ್ರದ್ಧಾ

    Live Tv
    [brid partner=56869869 player=32851 video=960834 autoplay=true]

  • ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಮಂಗಳೂರು: ಶಾರೀಕ್‌(Shariq) ಬಳಿ ಇದ್ದಿದ್ದು ಅಂತಿಂಥ ಕುಕ್ಕರ್‌ ಬಾಂಬ್‌(Cooker Bomb) ಅಲ್ಲ. ಆ ಕುಕ್ಕರ್ ಬಾಂಬ್‌ಗೆ  ಇಡೀ ಬಸ್ಸನ್ನೇ(Bus) ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಈಗ ಲಭ್ಯವಾಗಿದೆ.

    ಹೌದು. ರಿಕ್ಷಾದಲ್ಲಿ ಸ್ಫೋಟ(Mangaluru Cooker Bomb Blast Case) ನಡೆದ ಬಳಿಕ ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ(FSL) ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದ ತಂಡ ಈ ಬಾಂಬ್‌ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಇದನ್ನೂ ಓದಿ: ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

    ಎಫ್‌ಎಸ್‌ಎಲ್‌ ತಂಡ ನೀಡಿದ ವರದಿಯಲ್ಲಿರುವ ಅಂಶಗಳ ಬಗ್ಗೆ ಪೊಲೀಸ್‌ ಮೂಲಗಳು ಪಬ್ಲಿಕ್‌ ಟಿವಿ ಮಾಹಿತಿ ನೀಡಿವೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್‌ ಇತ್ತು. ಇದರ ಜೊತೆ ಒಂದು ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. ಡಿಟೋನೇಟರ್‌ಗೆ ಪವರ್ ಹೋಗದೇ ಕೇವಲ ಜೆಲ್‌ಗೆ ಮಾತ್ರ ಬೆಂಕಿ ತಗುಲಿದೆ. ಜೆಲ್‌ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ. ಇದನ್ನೂ ಓದಿ: ವಾಟ್ಸಪ್‌ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ ಉಗ್ರ ಶಾರೀಕ್‌

    ಡಿಟೋನೇಟರ್ ಮತ್ತು ಜೆಲ್ ಎರಡಕ್ಕೇ ಏಕಕಾಲದಲ್ಲಿ ಬೆಂಕಿ ತಗುಲಿದ್ದರೆ ಊಹಿಸಲಾಗದ ಪ್ರಮಾಣದ ಅನಾಹುತ ಸಂಭವಿಸುತ್ತಿತ್ತು. ಒಂದು ವೇಳೆ ಸರಿಯಾಗಿ ಸ್ಫೋಟವಾಗಿದ್ದರೆ ರಿಕ್ಷಾ ರಿಕ್ಷಾವಾಗಿ ಇರುತ್ತಿರಲಿಲ್ಲ. ಸುತ್ತಮುತ್ತಲಿನ ವಾಹನಗಳು ಜಖಂ ಆಗಿ ಬಹಳ ಸಾವು ನೋವು ಸಂಭವಿಸುತ್ತಿತ್ತು. ಒಂದು ಬಸ್‌ ಅನ್ನೇ ಸ್ಫೋಟಿಸುವ ಸಾಮರ್ಥ್ಯ ಆ ಕುಕ್ಕರ್‌ ಬಾಂಬ್‌ಗೆ ಇತ್ತು ಎಂಬ ವಿಚಾರವನ್ನು ಎಫ್‌ಎಸ್‌ಲ್‌ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!

    ಮಂಗಳೂರು: ನಗರದ ಪಂಪ್‌ವೆಲ್ ವೃತ್ತದ ಬಳಿ ಶನಿವಾರ ಸಂಜೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿರುವ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಮಾಹಿತಿಗಳು ಬಯಲಾಗುತ್ತಲೇ ಇವೆ. ಈಗ ಬಾಂಬ್ ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ಹಂಪ್ಸ್‌ನಿಂದಾಗಿ ಆಟೋ ರಿಕ್ಷಾದಲ್ಲಿ ಸ್ಫೋಟವಾಗಿರಬಹುದು ಎಂಬ ಶಂಕೆ ಎದ್ದಿದೆ.

    ಕುಕ್ಕರ್ ಬ್ಲಾಸ್ಟ್ ಆಗಿರುವ ಸ್ಥಳದ ಬಳಿ ದಾರಿಯಲ್ಲಿ ಹಂಪ್ಸ್ ಇದ್ದಿದ್ದು, ಆ ಹಂಪ್ಸ್‌ನಲ್ಲಿ ಆಟೋವನ್ನು ಹತ್ತಿಸಿದ್ದರಿಂದ ಕುಕ್ಕರ್ ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನ ಎದ್ದಿದೆ.

    ಶನಿವಾರ ಸಂಜೆ ಮಂಗಳೂರಿನ ಪಂಪ್‌ವೆಲ್‌ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದೆ. ಇದಕ್ಕೂ ಮುನ್ನ ದಾರಿ ಮಧ್ಯೆ ಪ್ರಯಾಣಿಕನೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ. ಆತ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದ ಒಳಗೆ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಶಂಕಿತನ ಕೈಯಲ್ಲಿದ್ದ ಕುಕ್ಕರ್ ಛಿದ್ರಗೊಂಡಿದೆ. ಇದನ್ನೂ ಓದಿ: ತುಂಗಾ ನದಿಯಲ್ಲಿ ಸ್ಫೋಟ ಮಾಡಿ ಪರಾರಿಯಾದವನು ಮಂಗ್ಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

    ಕುಕ್ಕರ್ ಬಾಂಬ್ ಅನ್ನು ಜನಜಂಗುಳಿಯಿದ್ದ ಪ್ರದೇಶದಲ್ಲಿ ಟೈಮರ್ ಇಟ್ಟು ಸ್ಫೋಟಿಸುವ ಹುನ್ನಾರವನ್ನು ಮಾಡಲಾಗಿದೆ. ಮಾತ್ರವಲ್ಲದೇ ನಿನ್ನೆ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕುಕ್ಕರ್ ಸ್ಫೋಟ ಪ್ರಕರಣ – ನಕಲಿ ಆಧಾರ್ ಕಾರ್ಡ್‌ನ ಅಸಲಿ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]