Tag: Cooker

  • ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ

    ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ

    ಬೆಂಗಳೂರು: ಪ್ರಿಯತಮನೊಬ್ಬ ತನ್ನ ಪ್ರಿಯತಮೆಯನ್ನು ಕುಕ್ಕರ್ ನಿಂದ (Cooker) ಹೊಡೆದು ಕೊಲೆ ಮಾಡಿದ ಗಟನೆ ಸಿಲಿಕಾನ್ ಸಿಟಿಯ ಬೇಗೂರಿನಲ್ಲಿ ನಡೆದಿದೆ.

    ಬೇಗೂರಿನ ನ್ಯೂ ಮೈಕೋ ಲೇಔಟ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ದೇವಾ (24) ಹತ್ಯೆಯಾದ ಯುವತಿಯಾಗಿದ್ದು, ವೈಷ್ಣವ್ (24) ಹತ್ಯೆ ಮಾಡಿದ ಆರೋಪಿ. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಳ್ಳತನ

    ಕೇರಳ ಮೂಲದವರಾಗಿರುವ ಈ ಜೋಡಿ ಕಳೆದ ಎರಡು ವರ್ಷಗಳಿಂದ ಲಿವಿಂಗ್ ಟುಗೇದರ್ ನಲ್ಲಿತ್ತು. ಇತ್ತೀಚೆಗೆ ಪ್ರಿಯತಮೆ ದೇವಾ ಬೇರೊಬ್ಬ ಯುವಕನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆರೋಪ ಮಾಡಲಾಗಿತ್ತು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು. ಶನಿವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ವೈಷ್ಣವ್ ಅಲ್ಲೇ ಇದ್ದ ಕುಕ್ಕರ್‍ನಿಂದ ಯುವತಿಯ ತಲೆಗೆ ಹೊಡೆದಿದ್ದಾನೆ.

    ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವವಾಗಿ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಸದ್ಯ ಮೈಕೋ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ (Beguru Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು

    ಶಾಸಕ ಹಂಚಿದ ಕುಕ್ಕರ್ ಅಸಲಿ ಮುಖ ತೆರೆದಿಟ್ಟ ಶೃಂಗೇರಿಯ ಮತದಾರರು

    ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (T.D.Rajegowda) ಕುಕ್ಕರ್ ಹಂಚಿ ಮಾಡಿ ಮತದಾರರಿಂದ ವ್ಯಂಗ್ಯಕ್ಕೊಳಗಾಗಿದ್ದಾರೆ.

    ಎರಡು ದಿನದಿಂದ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಂಚಿದ ಕುಕ್ಕರ್ (Cooker) ಬಾಕ್ಸ್ ಮೇಲೆ 450 ರೂ. ಎಂದು ಅಚ್ಚಾಗಿದೆ. ಅದರ ಮೇಲೆ 1399 ರೂ. ಲೇಬಲ್ ಅಂಟಿಸಿ ಕಾರ್ಯಕರ್ತರು ಮತದಾರರಿಗೆ ಹಂಚಿದ್ದಾರೆ. ಆನ್‍ಲೈನ್‍ನಲ್ಲಿಯೂ ಕುಕ್ಕರ್ ಬೆಲೆ 450 ರೂ. ಎಂದಿದೆ. ಇದು ಜನರಿಗೆ ತಿಳಿಯುತ್ತಿದ್ದಂತೆ ಶಾಸಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ- ಹೊತ್ತಿ ಉರಿದ ಪ್ಲಾಸ್ಟಿಕ್ ಗೊಡಾನ್

    ಕುಕ್ಕರ್ ಅಲುಗಾಡಿಸಿದರೆ ಶಬ್ದ ಬರುತ್ತಿದೆ. ಯಾರೂ ಕೇಳದಿದ್ದರೂ ಕೊಟ್ಟಿದ್ದಾರೆ. ಕೊಟ್ಟ ಮೇಲೆ ಒಳ್ಳೆಯದಾದರೂ ಕೊಡಬೇಕು. ಇಲ್ಲ ಸುಮ್ಮನಿರಬೇಕು ಎಂದು ಮತದಾರರು ಕಾಂಗ್ರೆಸ್ (Congress) ವಿರುದ್ಧ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ವಿವಾಹ- ಸಾಮಾಜಿಕ ಬಹಿಷ್ಕಾರ ಪ್ರಕರಣ: 12 ಜನರ ಬಂಧನ

  • 14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ, ತಗೊಳೋ ಮುನ್ನ ಎಚ್ಚರ: ರಮೇಶ್ ಜಾರಕಿಹೊಳಿ

    14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ, ತಗೊಳೋ ಮುನ್ನ ಎಚ್ಚರ: ರಮೇಶ್ ಜಾರಕಿಹೊಳಿ

    ಬೆಳಗಾವಿ: ಗ್ರಾಮೀಣ ಶಾಸಕರು ಮೊದಲು ಕುಕ್ಕರ್ (Cooker) ಕೊಟ್ರು, ಈಗ ಮಿಕ್ಸರ್ ಕೊಟ್ಟಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಎಂಎಲ್‌ಎ ಕ್ಷೇತ್ರದಲ್ಲಿ ಬ್ಲಾಸ್ಟ್ ಆಗಿದೆ. 14 ಕಡೆ ಕುಕ್ಕರ್ ಬ್ಲಾಸ್ಟ್ (Coocker Blast) ಆಗಿದೆ ಎಂದು ಮೊನ್ನೆ ಮಾಧ್ಯಮಗಳಲ್ಲಿ ತೋರಿಸಿದ್ದಾರೆ. ಯಾವುದಕ್ಕೂ ಹುಷಾರಾಗಿರಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಫ್ಯಾಕ್ಟರಿ ಇರುವುದು ಕನಕಪುರದಲ್ಲಿ. ಅಲ್ಲಿ ಯಾರಿದ್ದಾರೆ? ಡುಪ್ಲಿಕೇಟ್ ಮಾಡುವ ಮಹಾನಾಯಕರಿದ್ದಾರೆ. ಕುಕ್ಕರ್ ನೋಡಿ ಹುಷಾರಾಗಿ ತೆಗೆದುಕೊಳ್ಳಬೇಕು. ಮಾರ್ಕೆಟ್‌ನಲ್ಲಿ ಐಎಸ್‌ಐ ಮಾರ್ಕ್ ಇರುವ ಕುಕ್ಕರ್ 1,200 ರೂ.ಗೆ ಸಿಗುತ್ತದೆ. ಆದರೆ ಇದು 200 ರಿಂದ 300 ರೂ.ಗೆ ಸಿಗುತ್ತದೆ. ಬಡವರು ಆಸೆಗೆ ತೆಗೆದುಕೊಂಡು, ನಾಳೆ ಜೀವಕ್ಕೆ ಹಾನಿಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

    ನಾವು ಹುಷಾರಾಗಿರಬೇಕು. ಇಲ್ಲ ಎಂದರೆ ಅವರು ಅಲರ್ಟ್ ಆಗ್ತಾರೆ. ನಾವು ಹೇಗೆ ಎಂಎಲ್‌ಸಿಯಲ್ಲಿ ವಿಫಲವಾದೆವು, ಅದೇ ರೀತಿ. ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆಯನ್ನು ತುಂಬಾ ಹಗುರವಾಗಿ ತೆಗೆದುಕೊಂಡೆವು. ಹೀಗಾಗಿಯೇ ನಮ್ಮ ಸೋಲಾಯಿತು. ನಮ್ಮ ಗುಂಪಿನಲ್ಲಿದ್ದವರೇ ನಮಗೆ ವೋಟ್ ಹಾಕಿಲ್ಲ. ಅವರ ಹೆಸರು ಹೇಳಲು ಆಗಲ್ಲ ಎಂದರು. ಇದನ್ನೂ ಓದಿ: ವೀರೇಂದ್ರ ಪಾಟೀಲ್, ನಿಜಲಿಂಗಪ್ಪಗೆ ಕಾಂಗ್ರೆಸ್ ಅಪಮಾನ ಮಾಡಿಲ್ಲ: ಡಿಕೆಶಿ

    ಮಹಾಂತೇಶ ಕವಟಗಿಮಠ ಅವರಿಗೆ ಎರಡನೇ ಸ್ಥಾನ ಬರಬೇಕಾಗಿತ್ತು. ಆದರೆ ಬಿಜೆಪಿ ತಪ್ಪು ಗ್ರಹಿಕೆಯಿಂದ ಫೇಲ್ ಆಗಿದೆ. ಆ ಬಗ್ಗೆ ಈಗ ಹೆಚ್ಚು ಮಾತನಾಡೋದು ಬೇಡ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

  • ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ಹಣದ ಹೊಳೆ- ಶ್ರೀನಿವಾಸ್ ವಿರುದ್ಧ ವ್ಯಾಪಕ ಆಕ್ರೋಶ

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ಹಣದ ಹೊಳೆ- ಶ್ರೀನಿವಾಸ್ ವಿರುದ್ಧ ವ್ಯಾಪಕ ಆಕ್ರೋಶ

    ನೆಲಮಂಗಲ: ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್ (Srinivas) ವಿರುದ್ಧ ಆರೋಪವೊಂದು ಕೇಳಿಬಂದಿದೆ.

    ಚುನಾವಣೆ ಸಮಯದಲ್ಲಿ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತಿಗೆ ಮುಂದಾಗುತ್ತಿದ್ದಾರೆ. ಅಂತೆಯೇ ಶ್ರೀನಿವಾಸ್ ಅವರು ಕೂಡ ಮತದಾರರನ್ನು ತನ್ನತ್ತ ಸೆಳೆಯಲು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್‌ಗೆ ರಮೇಶ್ ಜಾರಕಿಹೊಳಿ ಶಾಕ್

    ನೆಲಮಂಗಲ ತಾಲೂಕಿನಲ್ಲಿ ಮತದಾರರಿಗೆ ಬೆಳಗ್ಗೆ ಕುಕ್ಕರ್ ಹಂಚಿಕೆ, ರಾತ್ರಿ ಹಣದ ಹಂಚಿಕೆ ಮಾಡುತ್ತಿದ್ದಾರೆ. ಕುಕ್ಕರ್ ಪಡೆಯಲು ಗ್ರಾಮಸ್ಥರು ಮುಗಿಬಿದ್ದಾರೆ. ಈ ಕುರಿತು ಶ್ರೀನಿವಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಎದ್ದಿದೆ.

    ಮತದಾರರನ್ನು ತನ್ನತ್ತ ಸೆಳೆಯಲು ಹಣ (Money) ದ ಹೊಳೆ ಹರಿಸಿರುವ ಆರೋಪ ಕೇಳಿಬಂದಿದೆ. ಹಬ್ಬದ ಉಡುಗೊರೆ ಎಂದು ಶ್ರೀನಿವಾಸ್ ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ಮುನ್ನವೇ ಮತದಾರರಿಗೆ ವಿವಿಧ ರೀತಿಯಲ್ಲಿ ಆಮಿಷ ಒಡ್ಡಲಾಗುತ್ತಿದೆ.

    ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ವಿವಿಧ ಆಮಿಷದ ಗಿಮಿಕ್ ಗೆ ಮುಂದಾಗಿರುವ ಶ್ರೀನಿವಾಸ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಶಾ ಶಾಕ್‌ – ಬೆಂಗಳೂರು ಗೆಲ್ಲಲು ಬಿಗ್ ಟಾಸ್ಕ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಕೆಶಿಗೆ ಮಂಗಳೂರು ಕುಕ್ಕರ್‌ನೊಂದಿಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ: ಯತ್ನಾಳ್ ವ್ಯಂಗ್ಯ

    ಡಿಕೆಶಿಗೆ ಮಂಗಳೂರು ಕುಕ್ಕರ್‌ನೊಂದಿಗೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ: ಯತ್ನಾಳ್ ವ್ಯಂಗ್ಯ

    ಕಲಬುರಗಿ: ಉಗ್ರಗಾಮಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರ ಬ್ರದರ್ಸ್. ಅವರಿಗೆ ಮಂಗಳೂರು (Mangaluru) ಕುಕ್ಕರ್ (Cooker) ಜೊತೆ ಬೆಳಗಾವಿಯ (Belagavi) ಕುಕ್ಕರ್ ಮೇಲೆ ಹೆಚ್ಚು ಪ್ರೀತಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda Patil Yatnal) ವ್ಯಂಗ್ಯವಾಡಿದ್ದಾರೆ.

    ಉಗ್ರಗಾಮಿಗಳ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇ ಆರ್ ಆಲ್ ಮೈ ಬ್ರದರ್ಸ್ ಅಂತಾ ಡಿಕೆಶಿ ಹೇಳ್ತಿರ್ತಾರೆ. ಹಾಗಾಗಿ ಭಯೋತ್ಪಾದಕರು ಸಹ ಡಿಕೆಶಿಯ ಬ್ರದರ್ಸ್. ಡಿಕೆಶಿಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದೆ. ಮಂಗಳೂರು ಕುಕ್ಕರ್ ಜೊತೆ ಬೆಳಗಾವಿ ಕುಕ್ಕರ್ ಮೇಲೆ ಹೆಚ್ಚು ಪ್ರೀತಿ. ಒಟ್ಟಾರೆಯಾಗಿ ಡಿಕೆಶಿಗೆ ಕುಕ್ಕರ್ ಎಂದ್ರೆ ಬಹಳ ಪ್ರೀತಿ ಹಾಗಾಗಿ ಉಗ್ರ ಶಾರೀಕ್ ವಿಚಾರದಲ್ಲಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ಬಳಿಕ ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಚಿತ್ರದಲ್ಲಿ ನಟಿ ದೀಪಿಕಾ ಪಡಕೋಣೆ (Deepika Padukone)  ಕೇಸರಿ ಬಿಕಿನಿ (Bikini Controversy) ಧರಿಸಿದ ವಿಚಾರವಾಗಿ ಮಾತನಾಡಿ, ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣವನ್ನು ಅಪಮಾನ ಮಾಡಲಾಗ್ತಿದೆ. ಶೀಘ್ರವೇ ಶಾರುಖ್ ಖಾನ್ ಮಣ್ಣು ಮುಕ್ಕುತ್ತಾನೆ. ಈಗಾಗಲೇ ಅಮಿರ್ ಖಾನ್ ಸಿನಿಮಾ ಇಲ್ಲದೆ ಖಾಲಿ ಬಿದ್ದಿದ್ದಾನೆ. ಅದೇ ರೀತಿ ಶಾರುಖ್ ಖಾನ್ ಕೂಡ ಸಿನಿಮಾ ಇಲ್ಲದೆ ಕೂರುವ ಕಾಲ ಹತ್ತಿರವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಶಾರಿಕ್‌ನನ್ನು ವಶಕ್ಕೆ ಪಡೆದ NIA ಅಧಿಕಾರಿಗಳು

    Live Tv
    [brid partner=56869869 player=32851 video=960834 autoplay=true]

  • ಓವನ್ ಬೇಡ – ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿ ಚಾಕ್ಲೇಟ್ ಮಗ್ ಕೇಕ್

    ಓವನ್ ಬೇಡ – ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿ ಚಾಕ್ಲೇಟ್ ಮಗ್ ಕೇಕ್

    ವನ್ ಇಲ್ಲದೇ ಕೇಕ್ (Cake Without Oven) ಮಾಡೋದು ಕಷ್ಟ. ಆದರೂ ಅಡುಗೆ ಪ್ರಿಯರು ಓವನ್ ಇಲ್ಲದೇ ಕೇಕ್ ಮಾಡುವ ಇತರ ಸುಲಭ ವಿಧಾನಗಳನ್ನು ಹುಡುಕಿದ್ದಾರೆ. ಇಂದು ನಾವು ಪ್ರೆಶರ್ ಕುಕ್ಕರ್‌ನಲ್ಲಿ (Pressure Cooker) ಮಗ್ ಕೇಕ್ (Mug Cake) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ತುಂಬಾ ರುಚಿಯಾದ ಎಗ್‌ಲೆಸ್ ಚಾಕ್ಲೇಟ್ ಮಗ್ ಕೇಕ್ (Eggless Chocolate Mug Cake) ಅನ್ನು ಒಮ್ಮೆ ನೀವು ಕೂಡಾ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮೈದಾ – 6 ಟೀಸ್ಪೂನ್
    ಕೋಕೋ ಪುಡಿ – 3 ಟೀಸ್ಪೂನ್
    ಸಕ್ಕರೆ – 3 ಟೀಸ್ಪೂನ್
    ಅಡುಗೆ ಸೋಡಾ – ಕಾಲು ಟೀಸ್ಪೂನ್
    ಉಪ್ಪು – ಚಿಟಿಕೆ
    ಹಾಲು – 6 ಟೀಸ್ಪೂನ್
    ಎಣ್ಣೆ – 3 ಟೀಸ್ಪೂನ್
    ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
    ಚಾಕ್ಲೇಟ್ ಚಿಪ್ 2 ಟೀಸ್ಪೂನ್
    ಕುಕ್ಕರ್‌ನಲ್ಲಿ ಬೇಯಿಸಲು:
    ಉಪ್ಪು – ಒಂದೂವರೆ ಕಪ್ ಇದನ್ನೂ ಓದಿ: ಬೆಳಗ್ಗಿನ ಉಪಾಹಾರಕ್ಕೆ ಮಾಡಿ ವೆಜ್ ಮಸಾಲ ಓಟ್ಸ್ ಉಪ್ಪಿಟ್ಟು

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ಒಂದೂವರೆ ಕಪ್ ಉಪ್ಪು ಹಾಕಿ ವಿಸಿಲ್ ಇಡದೇ ಕುಕ್ಕರ್ ಮುಚ್ಚಳವನ್ನು ಮುಚ್ಚಿ, 5-10 ನಿಮಿಷ ಬಿಸಿ ಮಾಡಿ.
    * ಈ ನಡುವೆ ಓವನ್ ಸೇಫ್ ಮಗ್ ತೆಗೆದುಕೊಂಡು, ಅದರಲ್ಲಿ ಮೈದಾ, ಕೋಕೋ ಪೌಡರ್, ಸಕ್ಕರೆ, ಅಡುಗೆ ಸೋಡಾ, ಹಾಗೂ ಚಿಟಿಕೆ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಮಿಶ್ರಣಕ್ಕೆ ಹಾಲು, ಎಣ್ಣೆ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ, ಗಂಟಿಲ್ಲದಂತೆ ಮಿಕ್ಸ್ ಮಾಡಿ ಬ್ಯಾಟರ್ ತಯಾರಿಸಿ.
    * ಈಗ ಕೇಕ್ ಬ್ಯಾಟರ್ ಮೇಲೆ ಚಾಕ್ಲೇಟ್ ಚಿಪ್ ಹಾಕಿ 20 ನಿಮಿಷ ಬೇಯಿಸಿ.
    * ಈದೀಗ ಎಗ್‌ಲೆಸ್ ಚಾಕ್ಲೆಟ್ ಮಗ್ ಕೇಕ್ ತಯಾರಾಗಿದ್ದು, ಬೇಕೆಂದರೆ ಮೇಲ್ಗಡೆ ಚಾಕ್ಲೇಟ್ ಸಾಸ್ ಹಾಕಿ, ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ರೈಸ್ ಕುಕ್ಕರನ್ನೇ ಮದುವೆಯಾದ ಆಸಾಮಿ

    ಜಕಾರ್ತಾ: ಹುಡುಗ, ಹುಡುಗಿ ಮದುವೆಯಾಗುವುದರಲ್ಲಿ ವಿಶೇಷತೆ ಏನು ಇಲ್ಲ. ಆದರೆ ಮದುವೆ ವಿಭಿನ್ನವಾಗಿ ನೀರಿನಲ್ಲೋ, ವಿಮಾನದಲ್ಲೋ ಆಗಿ ಸುದ್ದಿಯಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಆಸಾಮಿ ಅಡುಗೆ ಮಾಡುವ ಕುಕ್ಕರನ್ನೇ ಮದುವೆಯಾಗಿದ್ದಾನೆ.

    ಖೋಯಿರುಲ್ ಅನಾಮ್ ನನಗೆ ಮದುವೆಯಾಗಲು ಹೆಣ್ಣು ಬೇಡ ಎಂದು ಅನ್ನ ಮಾಡಲು ಬಳಸುವ ಕುಕ್ಕರೇ ನನ್ನ ಮಡದಿ ಎಂದು ನಿರ್ಧರಿಸಿ ಕುಕ್ಕರನ್ನು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ನಾಲ್ಕು ದಿನಗಳ ನಂತರ ಡಿವೋರ್ಸ್ ಮಾಡಿಕೊಂಡಿದ್ದಾನೆ.

    ಇಂಡೋನೇಷ್ಯಾದ ಖೋಯಿರುಲ್ ಅನಾಮ್ ರೈಸ್ ಕುಕ್ಕರ್ ಜೊತೆಗೆ ಮದುವೆ ಮಾಡಿಕೊಂಡಿದ್ದು, ಮಾತ್ರವಲ್ಲದೇ ನಾಲ್ಕು ದಿನಗಳ ನಂತರ ಡಿವೋರ್ಸ್ ಮಾಡಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ನೀನಿಲ್ಲದೇ ನನ್ನ ನನ್ನ ಅನ್ನ ಪೂರ್ಣ ಆಗೋದಿಲ್ಲ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾನೆ. ಇದನ್ನೂ ಓದಿ:  ಕಬ್ಬಿನ ಬಿಲ್ ಪಾವತಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಮುನೇನಕೊಪ್ಪ

    ತಾನು ವರನ ಉಡುಪಿನಲ್ಲಿ ಮಿಂಚಿದ್ದಲ್ಲದೇ ರೈಸ್ ಕುಕ್ಕರ್‍ಗೂ ವೇಲ್ ಹಾಕಿ ವಧುವಂತೆ ಭಾವಿಸಿ ಕುಕ್ಕರ್‍ಗೆ ಮುತ್ತಿಟ್ಟಿದ್ದಾನೆ. ಸದ್ಯ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ಒಂದೇ ವೇದಿಕೆಯಲ್ಲಿ ಕುಕ್ಕರ್ ಹಂಚಿದ ಅಪ್ಪ-ಮಗ

    ಒಂದೇ ವೇದಿಕೆಯಲ್ಲಿ ಕುಕ್ಕರ್ ಹಂಚಿದ ಅಪ್ಪ-ಮಗ

    ಬೆಂಗಳೂರು: ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಗಮನಸೆಳೆದ ಕ್ಷೇತ್ರ ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಕ್ಷೇತ್ರ. ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಆದೇಶವನ್ನು ಧಿಕ್ಕರಿಸಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಾರದೆ ಅಜ್ಞಾತ ಸ್ಥಳದಲ್ಲಿದ್ದ ಬಿ.ಎನ್ ಬಚ್ಚೇಗೌಡರು ಬುಧವಾರ ತಮ್ಮ ಮಗ ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಜೊತೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.

    ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸ್ಪರ್ಧಿಸಿದ್ದರು. ಇತ್ತ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ದಿಸಿ ಗೆಲುವು ಸಾದಿಸಿದ್ದರು. ಉಪಚುನಾವಣೆ ಹೊತ್ತಲ್ಲಿ ಅಜ್ಞಾತದಲ್ಲಿದ್ದ ಬಚ್ಚೇಗೌಡರು ಬುಧವಾರ ಮಗ ಶರತ್ ಬಚ್ಚೇಗೌಡರ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

    ಹೊಸಕೋಟೆ ಕಸಬಾ ಹೋಬಳಿಯ ಗುಟ್ಟಳ್ಳಿಯಲ್ಲಿ ನಡೆದ ವಿವಿಧ ಯೋಜನೆಗಳ ಭೂಮಿ ಪೂಜೆಯಲ್ಲಿ ಬಿಜೆಪಿ ಸಂಸದ ಶರತ್ ಬಚ್ಚೇಗೌಡರೊಂದಿಗೆ ವೇದಿಕೆ ಹಂಚಿಕೊಂಡಿದ್ದಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ತಮ್ಮ ಮಗ ಚುನಾವಣೆಯಲ್ಲಿ ಪಡೆದಿದ್ದ ಗುರುತು ಕುಕ್ಕರ್ ಗಳನ್ನು ತಂದೆ-ಮಗ ಜೊತೆಯಾಗಿ ಹಂಚಿದರು.

    ಉಪಚುನಾವಣೆ ನಂತರ ಎಂಟಿಬಿ ನಾಗರಾಜ್ ತಮ್ಮ ಸೋಲಿಗೆ ಅಪ್ಪ ಮಕ್ಕಳೇ ಕಾರಣ ಎಂದು ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಿ ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಉಪಚುನಾವಣೆ ವೇಳೆ ಮಗನ ಪರವಾಗಿ ಬಹಿರಂಗವಾಗಿ ಪ್ರಚಾರಕ್ಕೆ ಬರದ ಬಚ್ಚೇಗೌಡ ಅಜ್ಞಾತ ಸ್ಥಳದಲ್ಲಿ ಕುಳಿತು ಬಿಜೆಪಿ ಮುಖಂಡರನ್ನು ಸಂಪರ್ಕಿಸಿ ಶರತ್ ಪರ ಕೆಲಸ ಮಾಡುವಂತೆ ತಿಳಿಸಿದ್ದರು ಎಂದು ಎಂಟಿಬಿ ದೂರಿದ್ದಲ್ಲದೆ, ಅದಕ್ಕೆ ಆಡಿಯೋ ಸಾಕ್ಷಿ ಇದೆ ಎಂದಿದ್ದರು.

    ಒಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ಸಂಸದ ಬಚ್ಚೇಗೌಡ ಚುನಾವಣೆ ನಂತರ ಬಹಿರಂಗವಾಗಿ ಮಗನೊಂದಿಗೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿರೋದು ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.

  • ಬಿಸಿ ಕುಕ್ಕರ್ ನಿಂದ ಹಲ್ಲೆಗೈದು ಟೆಕ್ಕಿ ಪತಿಯ ಕೈ ಮುರಿದ ಪತ್ನಿ..!

    ಬಿಸಿ ಕುಕ್ಕರ್ ನಿಂದ ಹಲ್ಲೆಗೈದು ಟೆಕ್ಕಿ ಪತಿಯ ಕೈ ಮುರಿದ ಪತ್ನಿ..!

    ಮುಂಬೈ: ಪತ್ನಿ ತನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾಳೆ. ಅಲ್ಲದೇ ಚಿಕ್ಕ ವಾಗ್ವಾದ ನಡೆದಿದ್ದಕ್ಕೆ ಬಿಸಿಯಾಗಿದ್ದ ಕುಕ್ಕರ್ ನಿಂದ ಹಲ್ಲೆಗೈದು ನನ್ನ ಕೈ ಮುರಿದು ಹಾಕಿದ್ದಾಳೆ ಎಂದು ಪತಿಯೊಬ್ಬ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ನನ್ನ ಪತ್ನಿ ಹಲವು ವರ್ಷಗಳಿಂದ ನನಗೆ ಕಾರಣವಿಲ್ಲದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ಆರೋಪಿಸುತ್ತಿದ್ದಾರೆ. ಪತಿಯ ಆರೋಪಗಳನ್ನು ಕೇಳಿ ಈ ರೀತಿ ಮಾಡದಂತೆ ಕೋರ್ಟ್ ಪತ್ನಿಗೆ ಎಚ್ಚರಿಕೆ ನೀಡಿದೆ. ದೂರು ನೀಡಿದ ಪತಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ದಂಪತಿಗೆ ಬಾಲ್ಯದಿಂದಲೂ ಒಬ್ಬರನೊಬ್ಬರ ಪರಿಚಯವಿತ್ತು. ಅಲ್ಲದೇ ಇಬ್ಬರು 1998ರಲ್ಲಿ ಮದುವೆ ಆಗಿದ್ದರು.

    ನಮ್ಮಿಬ್ಬರ ನಡುವಿನ ಸಂಬಂಧ ಚೆನ್ನಾಗಿತ್ತು. ಆದರೆ ಕೆಲವು ತಿಂಗಳಿನಿಂದ ನನ್ನ ಪತ್ನಿ ಚಿಕ್ಕ-ಚಿಕ್ಕ ವಿಷಯಗಳಿಗೆ ನನ್ನ ಜೊತೆ ಜಗಳವಾಡುತ್ತಿದ್ದಾಳೆ. ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾಳೆ. ಅಲ್ಲದೆ ಕೆಟ್ಟದಾಗಿ ನಿಂದಿಸುತ್ತಿರುತ್ತಾಳೆ. ಕೆಲವು ಬಾರಿ ನಾನು ಆಕೆಯನ್ನು ಹುಡುಕಬೇಕೆಂದು ಆಕೆ ಬೇಕೆಂದಲೇ ಮನೆಯಿಂದ ಹೊರ ಹೋಗುತ್ತಿದ್ದಳು ಎಂದು ಪತಿ ತನ್ನ ಪತ್ನಿ ವಿರುದ್ಧ ಆರೋಪಿಸಿದ್ದಾರೆ.

    ಸುಳ್ಳು ದೂರು ದಾಖಲು:
    ನನ್ನ ಪತ್ನಿ 2016ರಲ್ಲಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 498 ಅಡಿಯಲ್ಲಿ ಸುಳ್ಳು ದೂರು ದಾಖಲಿಸಿದ್ದಳು. ಹಿಂಸಾಚಾರ ಕಾಯ್ದೆ ಅಡಿಯಲ್ಲಿ ನನ್ನ ವಿರುದ್ಧ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದಳು. ನನ್ನ ಪತ್ನಿಯ ಕಾಟ ತಡೆಯಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಕೆ ಮಕ್ಕಳ ಬಳಿ ನನ್ನ ವಿರುದ್ಧ ಮಾತನಾಡಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ರೀತಿ ಮಾಡುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ ಎಂಬುದನ್ನು ಕೂಡ ನೋಡಲು ಆಕೆ ಬಿಡುತ್ತಿಲ್ಲ.

    ನನ್ನ ಪತ್ನಿ ನನ್ನ ಜೊತೆ ಜಗಳವಾಡಲು ಚಿಕ್ಕ ಕಾರಣ ಹುಡುಕುತ್ತಾಳೆ. ಬಳಿಕ ಮನೆಯಲ್ಲಿರುವ ವಸ್ತುಗಳಿಂದ ನನ್ನ ಮೇಲೆ ಹಲ್ಲೆ ಮಾಡುತ್ತಾಳೆ. ಜನವರಿ 21ರಂದು ಆಕೆ ನನಗೆ ಬಿಸಿ ಕುಕ್ಕರ್‍ನಿಂದ ಹಲ್ಲೆ ಮಾಡಿದ್ದಳು. ಇದರಿಂದ ನನ್ನ ಕೈ ಮುರಿದು ಹೋಗಿದೆ. ನನಗೆ ಕಿರುಕುಳ ನೀಡಲು ಆಕೆ ಈ ರೀತಿ ಮಾಡುತ್ತಿದ್ದಾಳೆ. ಆಕೆಯ ವರ್ತನೆಯಿಂದ ನನ್ನ ಮಕ್ಕಳು ಅವರ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ನನಗೆ ಭಯ ಆಗುತ್ತಿದೆ ಎಂದು ಪತಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ದುರ್ಮರಣ!

    ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ದುರ್ಮರಣ!

    ಮಂಡ್ಯ: ಕುಕ್ಕರ್ ವಿಷಲ್ ನುಂಗಿ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ.

    ಭುವನ್ ಗೌಡ(1) ಸಾವನ್ನಪ್ಪಿದ ಮಗು. ಭುವನ್, ಮರಿಲಿಂಗೇಗೌಡ ಮತ್ತು ರೂಪ ದಂಪತಿಯ ಪುತ್ರನಾಗಿದ್ದು, ಶನಿವಾರ ರಾತ್ರಿ ಮನೆಯಲ್ಲಿ ಆಟ ಆಡುವಾಗ ಈ ಘಟನೆ ನಡೆದಿದೆ.

    ಶನಿವಾರ ರಾತ್ರಿ ಮನೆಯಲ್ಲಿ ಆಟ ಆಡುವಾಗ ಮಗು ಕುಕ್ಕರ್ ವಿಷಲ್ ನುಂಗಿದೆ. ತಕ್ಷಣ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.