Tag: Cook

  • 15 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಹಾಸ್ಟೆಲ್ ಅಡುಗೆಯಾತ, ನಿರ್ವಾಹಕ ಅರೆಸ್ಟ್

    ಜೈಪುರ: ರಾಜಸ್ಥಾನದ (Rajasthan) ಕೋಟಾ (Kota) ಜಿಲ್ಲೆಯಲ್ಲಿ 15 ವರ್ಷದ ವಿದ್ಯಾರ್ಥಿನಿಯನ್ನು (Student) ಅತ್ಯಾಚಾರಗೈದು (Rape) ಬ್ಲ್ಯಾಕ್‌ಮೇಲ್‌  ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್‌ನ ಅಡುಗೆಯಾತ (Cook) ಮತ್ತು ನಿರ್ವಾಹಕನನ್ನು (Operator) ಶುಕ್ರವಾರ ಬಂಧಿಸಲಾಗಿದೆ.

    ಬಿಹಾರ (Bihar) ಮೂಲದ ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಅಡುಗೆಯವರು ತನಗೆ ಪ್ರತಿನಿತ್ಯ ಆಹಾರ ನೀಡುತ್ತಿದ್ದರು. ಹೀಗಾಗಿ ಅವರ ಪರಿಚಯವಾಯಿತು. ಇದರ ಲಾಭ ಪಡೆದು ತನಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಆರೋಪಿಗಳು ಈ ಕೃತ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಬಾಲಕಿ ತನ್ನ ದೂರಿನಲ್ಲಿ ಹೇಳಿದ್ದಾಳೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ- ನಾಲ್ವರು ಸ್ಥಳದಲ್ಲೇ ಸಾವು

    ಹಾಸ್ಟೆಲ್ ನಿರ್ವಾಹಕ ವಿದ್ಯಾರ್ಥಿನಿ ಅಡುಗೆಯವರನ್ನು ಮದುವೆಯಾಗುವ ಮೂಲಕ ವಿಷಯವನ್ನು ಇತ್ಯರ್ಥಗೊಳಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ಆಕೆಯ ಫೋಟೋ ಮತ್ತು ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಇದನ್ನೂ ಓದಿ: 60 ಬಾರಿ ಚಿನ್ನ ಕಳ್ಳಸಾಗಾಣಿಕೆಗೆ ಸಹಾಯ – ಏರ್‌ಪೋರ್ಟ್ ಅಧಿಕಾರಿ ವಿರುದ್ಧ ಎಫ್‍ಐಆರ್

    ವಿದ್ಯಾರ್ಥಿನಿ ತನ್ನ ಸಹೋದರಿಯೊಂದಿಗೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು. ಆರೋಪಿ ಕೋಟಾ ನಿವಾಸಿಯಾಗಿದ್ದು, ಆಕೆಯ ಫೋಟೋ ಮತ್ತು ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ 6ರಿಂದ 7ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಐಟಿ ಅಧಿಕಾರಿ

    ವಿದ್ಯಾರ್ಥಿನಿ ಬೇರೊಬ್ಬರ ಮೂಲಕ ದೂರು ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಂಡು ಹಾಸ್ಟೆಲ್ ಅಡುಗೆಯಾತ ಮತ್ತು ನಿರ್ವಾಹಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಹಾಡಹಗಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಕೊಲೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿಯನ್ನು ಕೇಳದೆ ಅಡುಗೆಗೆ ಟೊಮೆಟೊ ಬಳಸಿದ ಪತಿ – ಕೋಪಗೊಂಡು ಮಗಳೊಂದಿಗೆ ಮನೆಬಿಟ್ಟ ಹೆಂಡತಿ

    ಪತ್ನಿಯನ್ನು ಕೇಳದೆ ಅಡುಗೆಗೆ ಟೊಮೆಟೊ ಬಳಸಿದ ಪತಿ – ಕೋಪಗೊಂಡು ಮಗಳೊಂದಿಗೆ ಮನೆಬಿಟ್ಟ ಹೆಂಡತಿ

    ಭೋಪಾಲ್: ಹೆಂಡತಿಯನ್ನು (Wife) ಕೇಳದೆ ಅಡುಗೆಯಲ್ಲಿ ಟೊಮೆಟೊ (Tomato) ಬಳಸಿದ್ದಕ್ಕೆ, ಮಗಳನ್ನು ಕರೆದುಕೊಂಡು ಪತ್ನಿ ಮನೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶದ (Madhya Pradesh) ಶಹದೋಲ್‌ನಲ್ಲಿ (Shahdol) ನಡೆದಿದೆ ಎಂದು ವರದಿಯೊಂದು ತಿಳಿಸಿದೆ.

    ಸಂಜೀವ್ ಬರ್ಮನ್ ಎಂಬವರು ಟಿಫಿನ್ ಸರ್ವಿಸ್ ನಡೆಸುತ್ತಿದ್ದು, ಅಡುಗೆ (Cook) ಮಾಡುವ ಸಂದರ್ಭದಲ್ಲಿ ಹೆಂಡತಿಯ ಪರ್ಮಿಷನ್ ಇಲ್ಲದೇ 2 ಟೊಮೆಟೊವನ್ನು ಅಡುಗೆಯಲ್ಲಿ ಬಳಸಿದ್ದಾರೆ. ಇದರಿಂದ ಕೋಪಗೊಂಡ ಹೆಂಡತಿ ಪತಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇದನ್ನೂ ಓದಿ: ಬಸ್ಸಿನೊಳಗೆ ನುಗ್ಗಿ, ಪೊಲೀಸರ ಮೇಲೆ ಖಾರದ ಪುಡಿ ಎರಚಿ ಆರೋಪಿಗೆ ಗುಂಡಿಟ್ಟು ಹತ್ಯೆ!

    ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಬಳಿಕ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಹುಡುಕಲು ಹೋಗಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮನೆ ಬಿಟ್ಟು ಹೋಗಿರುವ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಆಕೆಯನ್ನು ಹುಡುಕಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯ ದೇಹವನ್ನು ಕತ್ತರಿಸಿ ಎರಡು ಬ್ಯಾಗ್‍ನಲ್ಲಿ ಎಸೆದ್ರು

    ಹೆಂಡತಿಯನ್ನು ಕೇಳದೆ 2 ಟೊಮೆಟೊ ತೆಗೆದುಕೊಂಡು ಅಡುಗೆಯಲ್ಲಿ ಬಳಸಿದೆ. ಪತ್ನಿ ಜೊತೆ ಮಾತನಾಡದೆ 3 ದಿನಗಳಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಬಗ್ಗೆಯೂ ತಿಳಿದಿಲ್ಲ ಎಂದು ಸಂಜೀವ್ ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರು ಇವರ ಹೆಂಡತಿಯನ್ನು ಸಂಪರ್ಕಿಸಿ ಆದಷ್ಟು ಬೇಗ ಮನೆಗೆ ಬರುವಂತೆ ಮಾಡುತ್ತೇವೆ ಎಂದು ಸಂಜೀವ್ ಅವರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೇರಳ ಪ್ರೊಫೆಸರ್‌ ಕೈ ಕತ್ತರಿಸಿದ ಪ್ರಕರಣ – ಐವರು ಪಿಎಫ್‌ಐ ಕಾರ್ಯಕರ್ತರು ದೋಷಿಗಳು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕನ್ ಬೇಯಿಸುವ ವಿಚಾರಕ್ಕೆ ದಂಪತಿ ಜಗಳ- ಬಗೆಹರಿಸಲು ಹೋಗಿದ್ದ ನೆರೆ ಮನೆಯಾತ ಸಾವು

    ಚಿಕನ್ ಬೇಯಿಸುವ ವಿಚಾರಕ್ಕೆ ದಂಪತಿ ಜಗಳ- ಬಗೆಹರಿಸಲು ಹೋಗಿದ್ದ ನೆರೆ ಮನೆಯಾತ ಸಾವು

    ಭೋಪಾಲ್: ಚಿಕನ್ (Chicken) ಬೇಯಿಸುವ ವಿಚಾರಕ್ಕೆ ಸಂಬಂಧಿಸಿ ದಂಪತಿ (Couple) ಜಗಳವಾಡುತ್ತಿದ್ದನ್ನು ನೋಡಿದ ನೆರೆ ಮನೆಯಾತ (neighbour) ಬಗೆಹರಿಸಲು ಹೋಗಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನ (Bhopal) ಚವಾನಿ ಪಥರ್ ಗ್ರಾಮದಲ್ಲಿ ನಡೆದಿದೆ.

    ಭೋಪಾಲ್‍ನ ಚವಾನ್ ಪಥರ್ ಗ್ರಾಮದಲ್ಲಿ ಚಿಕನ್ ಬೇಯಿಸುವ ವಿಷಯಕ್ಕೆ ದಂಪತಿ ಮನೆಯಲ್ಲಿ ಜಗಳವಾಡುತ್ತಿದ್ದರು. ಮಹಿಳೆ ಮನೆಯಲ್ಲಿ ಚಿಕನ್ ಅಡುಗೆ (Cook) ಮಾಡಲು ನಿರಾಕರಿಸಿದ್ದರು. ಆದರೆ ಆಕೆಯ ಪತಿ ಪಪ್ಪು ಅಹಿರ್ವಾರ್ ಕೋಪಗೊಂಡು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

    ದಂಪತಿ ಜಗಳ ಕೇಳಿ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬಬ್ಲು ಅಹಿರ್ವಾರ್ ಸೇರಿ ಕೆಲವರು ಆ ದಂಪತಿ ಮನೆಗೆ ಬಂದಿದ್ದಾರೆ. ಈ ವೇಳೆ ಜಗಳವನ್ನು ಬಗೆ ಹರಿಸಲು ಯಶಸ್ವಿಯಾಗಿದ್ದಾರೆ. ಆದರೆ ಕೆಲ ಸಮಯದ ನಂತರ ಪಪ್ಪು ತನ್ನ ನೆರೆ ಮನೆಯ ಬಬ್ಲು ಅಹಿರ್ವಾರ್ ಮನೆಗೆ ಬಂದು ದೊಣೆಯಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ದಾಳಿ ವೇಳೆ ಬಬ್ಲುಗೆ ತೀವ್ರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಪ್ಪು ಅಹಿರ್ವಾರ್‍ನನ್ನು ಬಂಧಿಸಿದ್ದಾರೆ. ಘಟನೆಯ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ

    Live Tv
    [brid partner=56869869 player=32851 video=960834 autoplay=true]

  • ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ದಲಿತ ಬಾಲಕಿಯರು ಬಡಿಸಿದ ಊಟವನ್ನು ಬಿಸಾಡಿ ಎಂದ ಅಡುಗೆಯವ – ಬಂಧನ

    ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರಿಗೆ ತಾರತಮ್ಯ ಮಾಡಿದ ಆರೋಪದ ಮೇಲೆ ಅಡುಗೆಯವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

    ಶುಕ್ರವಾರ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲ್ ರಾಮ್ ಗುರ್ಜರ್ ಎಂಬಾತ ತಯಾರಿಸಿದ ಮಧ್ಯಾಹ್ನದ ಊಟವನ್ನು ದಲಿತ ಬಾಲಕಿಯರು ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲ್ ರಾಮ್, ದಲಿತ ಬಾಲಕಿಯರು ಬಡಿಸಿದ ಊಟವನ್ನು ಎಸೆಯುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಅಡುಗೆಯವನ ಸೂಚನೆಯನ್ನು ಅನುಸರಿಸಿ ಊಟವನ್ನು ಎಸೆದಿದ್ದಾರೆ. ಈ ಘಟನೆಯ ಬಗ್ಗೆ ಬಾಲಕಿಯರು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಬಳಿಕ ಅವರು ತಮ್ಮ ಕೆಲವು ಸಂಬಂಧಿಕರೊಂದಿಗೆ ಶಾಲೆಗೆ ಆಗಮಿಸಿ, ಅಡುಗೆಯವನ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ – ಕನ್ನಡದಲ್ಲೇ ಟ್ವೀಟ್ ಮಾಡಿದ ಮೋದಿ

    ಅಡುಗೆಯವನ ವಿರುದ್ಧ ಗೋಗುಂದ ಪೊಲೀಸ್ ಠಾಣೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಷಯ ನಿಜವೆಂದು ಕಂಡುಬಂದಿದ್ದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ದಲಿತ ಬಾಲಕಿಯರು ಊಟವನ್ನು ಬಡಿಸಿದ್ದಕ್ಕೆ ಇತರ ವಿದ್ಯಾರ್ಥಿನಿಯರಿಗೆ ಅದನ್ನು ಎಸೆಯಲು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಡುಗೆಯವನು ಯಾವಾಗಲೂ ತಾನೇ ಆಯ್ಕೆ ಮಾಡಿ, ಮೇಲ್ವರ್ಗದ ವಿದ್ಯಾರ್ಥಿಗಳಿಂದ ಊಟವನ್ನು ಬಡಿಸುತ್ತಿದ್ದರು. ಆದರೆ ನಿನ್ನೆ ವಿದ್ಯಾರ್ಥಿಗಳು ಸರಿಯಾಗಿ ಬಡಿಸುತ್ತಿಲ್ಲ ಎಂಬ ಕಾರಣಕ್ಕೆ ದಲಿತ ಬಾಲಕಿಯರಿಗೆ ಊಟ ಬಡಿಸುವಂತೆ ಶಿಕ್ಷಕರೊಬ್ಬರು ಸೂಚನೆ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ – ಮುರುಘಾ ಶ್ರೀಗೆ ಸೋಮವಾರದವರೆಗಿಲ್ಲ ಜಾಮೀನು

    Live Tv
    [brid partner=56869869 player=32851 video=960834 autoplay=true]

  • ಅಡುಗೆ ಸಿಲಿಂಡರ್ ಸ್ಫೋಟ – ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

    ಅಡುಗೆ ಸಿಲಿಂಡರ್ ಸ್ಫೋಟ – ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

    ಬೆಂಗಳೂರು: ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮೂವರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬಿಹಾರ ಮೂಲದ ನಾಲ್ವರು ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಮನೆಯಲ್ಲಿ ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಮೂವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

    ಮಂಗಳವಾರ ಸಂಜೆ ನಡೆದ ಘಟನೆ ಇಂದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಕ್ರಿಸ್ ಮಸ್‍ಗಾಗಿ ಸಿಂಪಲ್ ಚಾಕ್ಲೇಟ್ ಕೇಕ್

    ಈಗಾಗಲೇ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಿಂಪಲ್ ಕೇಕ್ ಹಾಗೂ ಎಗ್‍ಲೆಸ್ ಕೇಕ್ ಮಾಡಿದ್ದೀರಾ. ಚಾಕ್ಲೇಟ್ ಅಂದರೆ ಕೆಲವರಿಗೆ ತುಂಬಾ ಇಷ್ಟ. ಹಾಗಾಗಿ ನಿಮಗಾಗಿ ಚಾಕ್ಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಮೈದಾ – 1 ಕಪ್
    2. ಜೋಳದ ಹಿಟ್ಟು – 2-3 ಚಮಚ ( ಕಾರ್ನ್ ಫ್ಲೋರ್)
    3. ಸಕ್ಕರೆ – 100 ಗ್ರಾಂ
    4. ಎಣ್ಣೆ – 3-4 ಚಮಚ
    5. ಕೋಕೋ ಪೌಡರ್ – 2 ಚಮಚ
    6. ಬೇಕಿಂಗ್ ಪೌಡರ್ – 1 ಚಮಚ
    7. ಬೆಣ್ಣೆ- 50 ಗ್ರಾಂ
    8. ಕಂಡೆನ್ಸ್‍ಡ್ ಮಿಲ್ಕ್ – 100 ಎಂಎಲ್

    ಮಾಡುವ ವಿಧಾನ:
    * ಒಂದು ಬೌಲ್‍ಗೆ 2 ಚಮಚ ಕೋಕೋ ಪೌಡರ್ ಹಾಕಿ ಬಿಸಿ ನೀರು ಸೇರಿಸಿ ತಣ್ಣಗಾಗಲು ಬಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ 50 ಗ್ರಾಂ ಬೆಣ್ಣೆ, ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಬೀಟ್ ಮಾಡಿ.
    * ಕಂಡೆನ್ಸಡ್ ಮಿಲ್ಕ್ ಹಾಕಿ ಬೀಟ್ ಮಾಡಿ. ಅದಕ್ಕೆ ಮೈದಾ, ಬೇಕಿಂಗ್ ಪೌಡರ್, ಜೋಳದ ಹಿಟ್ಟು ಹಾಕಿ ಮಿಕ್ಸ್ ಮಾಡಿ.
    * ಇದಕ್ಕೆ ಮಿಕ್ಸ್ ಮಾಡಿಟ್ಟಿದ್ದ ಕೋಕೋ ಪೌಡರ್ ಅನ್ನು ಸೇರಿಸಿ ಟ್ರೂಟಿ ಫ್ರೂಟಿ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ.
    * ಗಂಟಿಲ್ಲದಂತೆ ಮಿಕ್ಸ್ ಆದ ಕೇಕ್ ಮಿಶ್ರಣವನ್ನು ಎಣ್ಣೆ ಸವರಿದ ಒಂದು ಅಗಲವಾದ ಪಾತ್ರೆಗೆ ಶಿಫ್ಟ್ ಮಾಡಿ.
    * ಖಾಲಿ ಕುಕ್ಕರ್‍ನಲ್ಲಿ ಮರಳು, ಉಪ್ಪು ಅಥವಾ ಪ್ಯಾನ್ ಸ್ಟ್ಯಾಂಡ್ ಇಟ್ಟು 5 ನಿಮಿಷ ಬಿಸಿ ಮಾಡಿ.
    * ಬಳಿಕ ಕೇಕ್ ಮಿಶ್ರಣ ಇರುವ ಪ್ಯಾನ್ ಅನ್ನು ಕುಕ್ಕರ್ ಒಳಗೆ ಇಟ್ಟು 30-40 ನಿಮಿಷ ಲೋ ಫ್ಲೇಮ್‍ನಲ್ಲಿ ಬೇಯಿಸಿ.
    * ಬೇಕಿದ್ದರೆ ಕೇಕ್ ಮಿಶ್ರಣಕ್ಕೆ ಮೇಲೆ ಡ್ರೈ ಫ್ರೂಟ್ಸ್ ಹಾಕಬಹುದು.
    * ಕೇಕ್ ಆದ ಬಳಿಕ ತಣ್ಣಗಾದ ಮೇಲೆ ಕಟ್ ಮಾಡಿ ಸೇವಿಸಿ.
    * ಬೇಕಿದ್ದಲ್ಲಿ ಇದಕ್ಕೆ ಗಾರ್ನಿಶ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ಮೈಸೂರು: ಚಾಮರಾಜನಗರದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಘಟನೆ ಸಂಬಂಧ ಪುಟ್ಟಸ್ವಾಮಿ ಈಗಾಗಲೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಚಾಮರಾಜನಗರ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆಯಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಯ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಮಗಳಿಗೂ ವಿಷ ಹಾಕಿ ಪುಟ್ಟಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾನೋ ಎಂಬ ಅನುಮಾನವೊಂದು ಮೂಡಿದೆ. ಯಾಕಂದ್ರೆ ತಾನು ಪ್ರಸಾದ ತಿಂದಿದ್ದೇನೆ ಎಂದು ಆಸ್ಪತ್ರೆಯಲ್ಲಿ ಪುಟ್ಟಸ್ವಾಮಿ ಹೈಡ್ರಾಮಾ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆಸ್ಪತ್ರೆಯ ವೈದ್ಯರ ಬಳಿ ಪುಟ್ಟಸ್ವಾಮಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ವೈದ್ಯರು ಪುಟ್ಟಸ್ವಾಮಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿರುವ ಕಾರಣ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ಮಾರಮ್ಮನ ಮೇಲಾಣೆ…ಮಾದಪ್ಪನ ಮೇಲಾಣೆ.. ಅಡುಗೆಯಲ್ಲಿ ನಾನು ವಿಷ ಹಾಕಿಲ್ಲ. ನಾನು 2 ಸಾವಿರ ಸಂಬಳ ಕ್ಕೆ ಕೆಲಸಕ್ಕೆ ಹೋದವನು. ನಾನ್ಯಾಕೆ ಇಂತಹ ಕೆಲಸ ಮಾಡಲಿ. ನನಗೆ ಅಂಬಿಕಾ ಆಗಲಿ, ಅಂಬಿಕಾ ಪತಿಯಾಗಲಿ ಯಾರು ಅಷ್ಟು ಪರಿಚಯವಿಲ್ಲ. ಸಾಲೂರು ಬುದ್ಧಿಯನ್ನು ಇತ್ತೀಚೆಗೆ ನೋಡಿಯೇ ಇಲ್ಲ. ನನ್ನ ಮೇಲೆ ಅನುಮಾನ ಪಡಬೇಡಿ. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ನಾನೇ ತಪ್ಪು ಮಾಡಿದ್ದೇನೆ ಅಂದ್ರೂ ಶಿಕ್ಷೆ ಕೊಡಿ. ಆದರೆ ನಾನಂತೂ ವಿಷ ಹಾಕಿಲ್ಲ. ನನ್ನ ಮಗಳು ಅಂಗವಿಕಲೆ. ನನ್ನ ಒಬ್ಬಳು ಮಗಳಿಗೆ ಕಾಲು ಬರುತ್ತಿರಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.  ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಅಂಗವಿಕಲ ಮಗ್ಳನ್ನೇ ಕೊಲೆಗೈದ್ನಾ..?
    ಪುಟ್ಟಸ್ವಾಮಿ ಸುಳ್ವಾಡಿಯ ಮಾರಮ್ಮನ ದೇವಾಸ್ವಾನದಲ್ಲಿ ರೈಸ್‍ಬತ್ ಪ್ರಸಾದ ತಯಾರಿಸಿದ್ದನು. ಈ ಪ್ರಸಾದ ತಿಂದು ಆತನ 12 ವರ್ಷದ ಮಗಳು ಅನಿತಾ ಮೃತಪಟ್ಟಿದ್ದಳು. ಆದ್ರೆ ವಿಷ ಹಾಕಿದ ವಿಷಯ ತಿಳಿಯಬಾರದು ಎಂದು ಪುಟ್ಟಸ್ವಾಮಿ ತಾನೂ ಪ್ರಸಾದ ತಿಂದಿದ್ದಾನೆ. ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ.

    ಒಟ್ಟಿನಲ್ಲಿ ಅಂಗವಿಕಲೆ ಮಗಳು ಪುಟ್ಟಸ್ವಾಮಿಗೆ ಭಾರವಾಗಿತ್ತು. ಹೀಗಾಗಿ ಅಡುಗೆ ಭಟ್ಟನೇ ವಿಷ ಹಾಕಿದ್ದಾನೆ ಅನ್ನೋ ಅನುಮಾನ ಪೊಲೀಸರಲ್ಲಿ ಬಲವಾಗಿ ಮೂಡಿದೆ.

    https://www.youtube.com/watch?v=gE3_7jm0p4M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    ದುಬೈ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-4 ರ ಅಂತದ ಮೂಲಕ ಮುಗ್ಗರಿಸಿದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದೆ.

    ಸರಣಿಯ ಅಂತಿಮ ಓವೆಲ್ ಟೆಸ್ಟ್ ಹೋರಾಟದಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೋರಾಟದ ಬಳಿಕವೂ ಟೀಂ ಇಂಡಿಯಾ ಪಂದ್ಯದಲ್ಲಿ ಸೋಲುಂಡಿತು. ಆದರೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 115 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆದರೆ ಸರಣಿ ಸೋಲಿನ ಹಿನ್ನೆಲೆಯಲ್ಲಿ ಬರೋಬ್ಬರಿ 10 ಅಂಕಗಳನ್ನು ಕಳೆದುಕೊಂಡಿದೆ.

    ಇತ್ತ ಸರಣಿ ಗೆದ್ದ ಇಂಗ್ಲೆಂಡ್ 105 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ಏರಿದೆ. 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 102 ಅಂಕ ಗಳಿಸಿದ್ದು 5ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ ವಿರುದ್ಧದ ಟೂರ್ನಿಗೂ ಮುನ್ನ ಇಂಗ್ಲೆಂಡ್ 97 ಅಂಕಗಳನ್ನು ಹೊಂದಿತ್ತು.

    ಇಂಗ್ಲೆಂಡ್ ಪರ ವಿದಾಯ ಪಂದ್ಯವಾಡಿದ ಕುಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವೃತ್ತಿ ಜೀವನದಲ್ಲಿ 33ನೇ ಶತಕ ಸಿಡಿದ ಕುಕ್‍ಗೆ ಇಂಗ್ಲೆಂಡ್ ತಂಡದ ಆಟಗಾರಾರರು 33 ಬೀಯರ್ ಬಟಲ್ ಗಿಫ್ಟ್ ನೀಡಿದ್ದಾರೆ.

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ತಲಾ 106 ಅಂಕಗಳಿಂದ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದೆ. ಅಕ್ಟೋಬರ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದ್ದು, ಅಕ್ಟೋಬರ್ 4ರಿಂದ ರಾಜಕೋಟ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ವಿರಾಟ್ ಗೋಲ್ಡನ್ ಡಕ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ವಿರಾಟ್ ಗೋಲ್ಡನ್ ಡಕ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಸೋಲುಂಡರೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳವ ನಿರೀಕ್ಷೆ ಇತ್ತು. ಆದರೆ ಅಂತಿಮ ಟೆಸ್ಟ್ 2ನೇ ಇನ್ನಿಂಗ್ಸ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿ ಗೋಲ್ಡನ್ ಡಕ್ ಆಗುವ ಮೂಲಕ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.

    https://twitter.com/DRVcricket/status/1039185894039871488?

    ಇದಕ್ಕೂ ಮುನ್ನ ವಿದಾಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ಭಾರೀ ಮುನ್ನಡೆ ಪಡೆಯಲು ಕಾರಣದ ಕುಕ್ ತಮ್ಮ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿದರು. 147 ರನ್ ಸಿಡಿಸಿ ಕುಕ್ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ನೀಡಿದರು. ಇದರೊಂದಿಗೆ ವೃತ್ತಿ ಜೀವನದ 33ನೇ ಶತಕ ಪೂರೈಸಿದ ಕುಕ್ ಪಾದಾರ್ಪಣೆ ಪಂದ್ಯ ಹಾಗೂ ಅಂತಿಮ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ಹೆಗ್ಗಳಿಕೆ ಪಡೆದರು.

    ಎರಡನೇ ಇನ್ನಿಂಗ್ಸ್ ನಲ್ಲಿ 423 ರನ್ ಗಳಿಸಿದ ಇಂಗ್ಲೆಂಡ್ ಡಿಕ್ಲೇರ್ ನೀಡಿ ಟೀಂ ಇಂಡಿಯಾಗೆ 464 ರನ್ ಗುರಿ ನೀಡಿತು. ಇಂಗ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ರೂಟ್ (125) ಕೂಡ ಶತಕ ಸಿಡಿಸಿ ಮಿಂಚಿದರು. ಇತ್ತ ಇಂಗ್ಲೆಂಡ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 3 ರನ್ ಗಳಿಸುವಷ್ಟರಲ್ಲಿ ಆರಂಭಿಕ ಧವನ್ (1), ಪೂಜಾರ (0), ಕೊಹ್ಲಿ (0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ 58/3 ಕಳೆದುಕೊಂಡಿದ್ದು ಕೆಎಲ್ ರಾಹುಲ್ (46*), ರಹಾನೆ (10*) ರನ್  ಗಳಿಸಿ  ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಪರ ಮಿಂಚಿನ ದಾಳಿ ನಡೆಸಿದ ಆ್ಯಂಡರ್ ಸನ್ 2, ಬ್ರಾಡ್ 1 ವಿಕೆಟ್ ಗಳಿಸಿದ್ದಾರೆ.

    https://twitter.com/DRVcricket/status/1039186174244528129

    https://twitter.com/DRVcricket/status/1039186681793077248