Tag: Convocation

  • ಬಳ್ಳಾರಿ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ನೀಡಿ ಲಕ್ಷಾಂತರ ವಂಚನೆ

    ಬಳ್ಳಾರಿ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ನೀಡಿ ಲಕ್ಷಾಂತರ ವಂಚನೆ

    – ವಿವಿ ಸಿಬ್ಬಂದಿಯಿಂದಲೇ ದೋಖಾ; ತನಿಖಾ ತಂಡ ರಚನೆ

    ಬಳ್ಳಾರಿ: ನಕಲಿ ಘಟಿಕೋತ್ಸವ (Convocation) ಪ್ರಮಾಣ ಪತ್ರ ನೀಡಿ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಬಳ್ಳಾರಿಯ (Ballari) ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (Sri Krishnadevaraya University) ನಡೆದಿರುವುದು ಬೆಳಕಿಗೆ ಬಂದಿದೆ.

    ವಿವಿಯಿಂದ ವಿದ್ಯಾರ್ಥಿಗಳ ವ್ಯಾಸಂಗ ಮುಗಿದ ಬಳಿಕ ಘಟಿಕೋತ್ಸವ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಘಟಿಕೋತ್ಸವ ಪ್ರಮಾಣ ಪತ್ರ ನೀಡುವಲ್ಲಿ ವಿಎಸ್‌ಕೆ ವಿವಿಗೆ ಬರಬೇಕಿದ್ದ ಲಕ್ಷ ಲಕ್ಷ ರೂ. ಆದಾಯಕ್ಕೆ ವಿವಿ ಸಿಬ್ಬಂದಿಯಿಂದಲೇ ಕನ್ನ ಹಾಕಲಾಗಿದೆ. ಇದನ್ನೂ ಓದಿ: ದೆಹಲಿ ವಿಧಾನಸಭೆಯಲ್ಲಿ ಗದ್ದಲ – 15 ಎಎಪಿ ಶಾಸಕರ ಅಮಾನತು

    ಪ್ರಮುಖವಾಗಿ ವಿಎಸ್‌ಕೆ ವಿವಿಯ ಕುಲಪತಿ, ಕುಲಸಚಿವರ ಸಹಿಯನ್ನೇ ನಕಲು ಮಾಡಿ, ಘಟಿಕೋತ್ಸವ ಪ್ರಮಾಣ ಪತ್ರಗಳನ್ನ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಒಂದೊಂದು ಪ್ರಮಾಣ ಪತ್ರಕ್ಕೆ 10 ರಿಂದ 15 ಸಾವಿರ ರೂ. ಹಣ ಪಡೆದು ನೂರು ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರ ವಿತರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

    ನಿಯಮದ ಪ್ರಕಾರ ಪದವಿ, ಸ್ನಾತಕ ಪದವಿ ಬಳಿಕ ಘಟಿಕೋತ್ಸವ ಪ್ರಮಾಣ ಪತ್ರ ಪಡೆಯಲು ಶುಲ್ಕ ಪಾವತಿಸಬೇಕು. ಘಟಿಕೋತ್ಸವ ಶುಲ್ಕವು ವಿವಿಗೆ ಸೇರಬೇಕು. ಆದರೆ ವಿವಿಯ ಕೆಲ ಸಿಬ್ಬಂದಿ ತಮ್ಮ ಜೇಬಿಗೆ ಹಾಕಿಕೊಂಡು ವಂಚನೆ ಮಾಡಿದ್ದಾರೆ. ಇದನ್ನೂ ಓದಿ: ಜಾಗರಣೆ ಮಾಡಿದ್ದಕ್ಕೆ ಶಿವರಾತ್ರಿ ಮರುದಿನ ಹಿಂದೂ ಉದ್ಯೋಗಿಗಳಿಗೆ ರಜೆ ಕೊಡಿ: ಸರ್ಕಾರಕ್ಕೆ ಮನವಿ

    ಕುಲಪತಿ, ಕುಲಸಚಿವರ ಸಹಿ ನಕಲು ಮಾಡಿ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ನಕಲಿ ಪ್ರಮಾಣ ಪತ್ರ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಶುಲ್ಕ ಪಾವತಿಸಿದ ರಸೀದಿ ಕೇಳಿದಾಗ ರಸೀದಿ ಇರಲ್ಲ ಎಂದು ಸಬೂಬು ಹೇಳಿದ್ದಾರೆ. ಈ ವಿಚಾರ ವಿವಿ ಗಮನಕ್ಕೆ ಬರುತ್ತಿದ್ದಂತೆ ಸದ್ದಿಲ್ಲದೇ ತನಿಖಾ ಸಮಿತಿ ರಚನೆ ಮಾಡಲಾಗಿದೆ.

    ಕೊಪ್ಪಳ ಜಿಲ್ಲೆಯ ಕನಕಗಿರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ಇಲ್ಲಿವರೆಗೂ ಯಾರನ್ನೂ ಅಮಾನತು ಮಾಡದೇ ತನಿಖೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ಕೇರಳ| ಲವ್ವರ್, ಕುಟುಂಬದ ಐವರನ್ನು ಹತ್ಯೆ ಮಾಡಿದ ವ್ಯಕ್ತಿ – ತಾಯಿ ಸ್ಥಿತಿ ಗಂಭೀರ

  • ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ

    ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ

    ಹಾವೇರಿ: ಗೊಟಗೋಡಿಯಲ್ಲಿರುವ ಜಾನಪದ ವಿವಿ ಘಟಿಕೋತ್ಸವದಲ್ಲಿ (Janapada University Convocation) ಶಿಗ್ಗಾಂವಿಯ ನೂತನ ಕಾಂಗ್ರೆಸ್‌ ಶಾಸಕ ಯಾಸಿರ್ ಅಹಮದ್​ ಖಾನ್​ ಪಠಾಣ್ (Yasir Ahmad Kha Patan) ಹಾಗೂ ಬೆಂಬಲಿಗರು ದರ್ಪ ತೋರಿದ್ದಾರೆ.

    ಘಟಿಕೋತ್ಸವದ ಹಿನ್ನೆಲೆಯಲ್ಲಿ ಜಾನಪದ ವಿವಿ ಆವರಣದಲ್ಲಿ ಜಾನಪದ ಶೈಲಿಯಲ್ಲಿ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಅವರು ಪಾಲ್ಗೊಂಡಿದ್ದರು.

    ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕರು ಆಗಮಿಸಿದ್ದಾರೆ. ಮುಂದೆ ಹೋಗಿ ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಮುಂದೆ ಆಗಮಿಸಿ ನನ್ನನ್ನು ವೇದಿಕೆ ಕರೆದಿಲ್ಲ. ನಾನು ವಿವಿಗೆ ಬಂದರೂ ಯಾರೂ‌ ಸ್ವಾಗತಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೇ ಅವರ ಬೆಂಬಲಿಗರು ನಮ್ಮ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ ಎಂದು ಪ್ರಶ್ನಿಸಿ ಸಿಬ್ಬಂದಿಯ ಜೊತೆಗೆ ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಇದೆ, ಈಗ ವಿಚಾರಣೆಗೆ ಬರಲು ಸಾಧ್ಯವಿಲ್ಲ – ಪೊಲೀಸರಿಗೆ ಚಂದ್ರಶೇಖರ ಶ್ರೀ ಪತ್ರ

    ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಮತ್ತು ಸಭಿಕರು ಏನಿದು? ವಿಶ್ವವಿದ್ಯಾಲಯಗಳ ಘಟಿಕೋತ್ಸವಕ್ಕೆ ಶಾಸಕರಿಗೆ ಆಹ್ವಾನ ಇಲ್ಲ ಎಂಬ ಕನಿಷ್ಟ ಶಿಷ್ಟಾಚಾರದ ತಿಳುವಳಿಕೆ ಇಲ್ಲ ಎಂದು ಮಾತನಾಡತೊಡಗಿದರು.

    ವಿಶ್ವವಿದ್ಯಾಲಯ ಸಿಬ್ಬಂದಿ ಶಿಷ್ಟಾಚಾರದ ಪ್ರಕಾರವೇ ನಡೆದುಕೊಂಡ ವಿಚಾರ ಗೊತ್ತಾದ ಬಳಿಕ ಶಾಸಕರು, ಬೆಂಬಲಿಗರಿಗೆ ಶಿಷ್ಟಾಚಾರದ ಬಗ್ಗೆ ಗೊತ್ತಿರಲಿಲ್ಲ. ಬೆಂಬಲಿಗರು ತಿಳಿಯದೇ ತಪ್ಪು ಮಾಡಿದ್ದಾರೆ. ಬೆಂಬಲಿಗರಿಗೆ ತಿಳಿ ಹೇಳುತ್ತೇನೆ. ಇಲ್ಲಿ ಸಮಸ್ಯೆಗಳು ಇದ್ದರೆ ಹೇಳಿ ಎಂದು ಮನವಿ ಮಾಡಿ ತೆರಳಿದರು.

     

  • ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ಇನ್ಮುಂದೆ ಬ್ರಿಟಿಷ್ ಗೌನ್ ಕ್ಯಾನ್ಸಲ್- ಹೊಸ ಡ್ರೆಸ್ ಸ್ಟೈಲ್‍ನಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವ

    ನವದೆಹಲಿ: ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸುವಾಗ ಇಂದಿಗೂ ಬ್ರಿಟಿಷ್ ಗೌನ್ ಹಾಕಲಾಗುತ್ತಿದೆ. ಹೀಗಾಗಿ ಗೌನ್ ಬದಲಾಗಿ ಸ್ವದೇಶಿ ನಿರ್ಮಿತ ಕುರ್ತಾ ಬಳಸಬೇಕು ಅಂತ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

    ಕುರ್ತಾ ಡಿಸೈನ್ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳಿಂದ ಡಿಸೈನ್ ಬಂದ ಮೇಲೆ ಉನ್ನತವಾದ ಕುರ್ತಾವನ್ನು ಅಂತಿಮವಾಗಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿತ್ತು. ಅಲ್ಲದೇ ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿತ್ತು.

    ದೇಶದಲ್ಲಿ 800 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇದ್ದು, 40 ಸಾವಿರಕ್ಕೂ ಹೆಚ್ಚು ಶಿಕ್ಷಣದ ಸಂಸ್ಥೆಗಳಲ್ಲಿ 3ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕುರ್ತಾ ಬಳಸುವ ಮೂಲಕ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು.

  • ವಿವಿ ಘಟಿಕೋತ್ಸವ ವೇಳೆ ಧರಿಸುವ ಗೌನ್ ಸಂಸ್ಕೃತಿಗೆ ಕೇಂದ್ರದಿಂದ ಬ್ರೇಕ್

    ವಿವಿ ಘಟಿಕೋತ್ಸವ ವೇಳೆ ಧರಿಸುವ ಗೌನ್ ಸಂಸ್ಕೃತಿಗೆ ಕೇಂದ್ರದಿಂದ ಬ್ರೇಕ್

    ನವದೆಹಲಿ: ವಿಶ್ವವಿದ್ಯಾಲಯಗಳ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಧರಿಸುವ ಗೌನ್ ಪಾಶ್ಚಿಮಾತ್ಯ ಸಂಸ್ಕೃತಿಗೆ ಪ್ರತಿ ರೂಪವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಈ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾಗಿದೆ.

    ದೆಹಲಿಯಲ್ಲಿ ನಡೆದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಸಭೆಯಲ್ಲಿ ಗೌನ್ ಸಂಸ್ಕೃತಿಯು ಬ್ರಿಟಿಷ್ ವಸಾಹತು ಶಾಹಿಯ ಪ್ರತಿರೂಪವಾಗಿದೆ ಎನ್ನುವ ಒಮ್ಮತ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲು ಮುಂದಾಗಿದೆ.

    ಸಚಿವಾಲಯವು ಶೀಘ್ರದಲ್ಲಿಯೇ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡಲಾಗುವುದು ಎಂದು ತಿಳಿಸಿದೆ. ಅಲ್ಲದೆ ಈ ಕುರಿತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಸ್ತುತ ಭಾರತದ ಎಲ್ಲಾ ವಿಶ್ವವಿದ್ಯಾಲಯಗಳು ಘಟಿಕೋತ್ಸವದ ವೇಳೆ ಯಾವ ರೀತಿಯ ಉಡುಪು ಧರಿಸಬೇಕು ಎನ್ನುವುದರ ಬಗ್ಗೆ ತಮ್ಮದೇ ಅದ ನಿಯಮಗಳನ್ನು ಹೊಂದಿವೆ.

    ಕಳೆದ ವರ್ಷ ಮುಂಬೈಯ ಇಂಡಿಯನ್ ಇನ್‍ಸ್ಟುಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವದ ವೇಳೆ ವಿದ್ಯಾರ್ಥಿಗಳು ಖಾದಿ ವಸ್ತ್ರಗಳನ್ನು ಧರಿಸಿ ಬಂದಿದ್ದರು. ಈ ವರ್ಷ ಕಾನ್ಪುರ ಐಐಟಿ ವಿದ್ಯಾರ್ಥಿಗಳು ಕುರ್ತಾ, ಪೈಜಮಾ, ಚೂಡಿದಾರ್ ಧರಿಸಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

  • ಧಾರವಾಡ ಕೃಷಿ ವಿವಿ 30ನೇ ಘಟಿಕೋತ್ಸವ- 13 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

    ಧಾರವಾಡ ಕೃಷಿ ವಿವಿ 30ನೇ ಘಟಿಕೋತ್ಸವ- 13 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

    ಧಾರವಾಡ: ಕೃಷಿ ವಿವಿಯ 30 ನೇ ಘಟಿಕೋತ್ಸವದಲ್ಲಿ ಕೇರಳ ಮೂಲದ ಜೆಮ್ಮಿ ಜೋಸೆಫ್ ಅವರು ಬಿಎಸ್‍ಸಿ ಅಗ್ರಿಕಲ್ಚರ್‍ನಲ್ಲಿ 13 ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಬೆಡಗಿ ಎನ್ನಸಿಕೊಂಡಿದ್ದಾರೆ.

    ಈ ಬಾರಿ ಕೃಷಿ ವಿವಿಯಲ್ಲಿ 44 ಸಂಶೋಧಕ ವಿದ್ಯಾರ್ಥಿಗಳಿಗೆ, 265 ಸ್ನಾತಕ್ಕೋತ್ತರ ಹಾಗೂ 691 ಸ್ನಾತಕ ಪದವಿ ನೀಡಲಾಯಿತು. ಇದೇ ವೇಳೆ 82 ಚಿನ್ನದ ಪದಕ ಹಾಗೂ 8 ನಗದು ಬಹುಮಾನವನ್ನ ವಿದ್ಯಾರ್ಥಿಗಳಿಗೆ ನೀಡಲಾಯಿತು.

    ಈ ಬಾರಿ ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿನ ಚಿನ್ನದ ಪದಕ ಪಡೆದು ಮೇಲುಗೈ ಸಾಧಿಸಿದ್ದಾರೆ. ಪದಕ ಪಡೆದ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಳ್ಳವ ಮೂಲಕ ಸಂಭ್ರಮಿಸಿದರು. ಇನ್ನೊಂದೆಡೆ ವಿದ್ಯಾರ್ಥಿನಿಯರು ಸೀರೆಯನ್ನುಟ್ಟುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆಯಿತು.

    ಬೆಳಗಾವಿ ಮೂಲದ ಕೇಂದ್ರ ಸರ್ಕಾರ ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಅಪರ ಕಾರ್ಯದರ್ಶಿ ಅಶೋಕ್ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಇಸ್ರೋ ಅಧ್ಯಕ್ಷ ಕಿರಣ್‍ಕುಮಾರ್ ಆಗಮಿಸಿದ್ದರು.