Tag: convict

  • ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ಕಲಬುರಗಿ: ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನ ಹಾಗೂ ಮೊಬೈಲ್‍ಗಾಗಿ ಪ್ರಿಯಕರಿಗೆ ಚಾಕು ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ನರೋಣ ಪೊಲೀಸರು ಬಂಧಿಸಿದ್ದಾರೆ.

    ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮನೋಜ್ ಅಲಿಯಾಸ್ ಪ್ರಸಾದ್ ಮಠಪತ್ತಿ ಕೊಲೆಯಾಗಿದ ದುರ್ದೈವಿ. ಕಲಬುರಗಿ ಹೊರವಲಯದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು 23ರಂದು ಘಟನೆ ನಡೆದಿದ್ದು, ಕೃತ್ಯ ಎಸಗಿದ್ದ ಕಡಗಂಚಿ ಗ್ರಾಮದ ಶಾಂತಪ್ಪ ದಂಡಘುಟಿ ಹಾಗೂ ಇನ್ನೋರ್ವ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಗಿದ್ದೇನು?: ಮನೋಜ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ತನ್ನ ಜನ್ಮದಿನ ಇಲ್ಲದಿದ್ದರೂ, ಕೇಂದ್ರಿಯ ವಿಶ್ವವಿದ್ಯಾಲಯದ ಕಟ್ಟಡ ಒಂದರ ಮೇಲೆ ಕೇಕ್ ಕತ್ತರಿಸಿ ಮನೋಜ್ ಸಂಭ್ರಮಿಸಿದ್ದ. ಬಳಿಕ ಕ್ಯಾಂಪಸ್‍ನಲ್ಲಿ ಏಕಾಂತವಾಗಿ ಮನೋಜ್ ತನ್ನ ಪ್ರೇಯಸಿಯ ಜೊತೆಗೆ ಕುಳಿತಿದ್ದ.

    ಕಳ್ಳತನ ಮಾಡಲು ಬಂದಿದ್ದ ಶಾಂತಪ್ಪ ದಂಡಘುಟಿ ಹಾಗೂ ಮತ್ತೋರ್ವ ಯುವಕ ಪ್ರೇಮಿಗಳಿಗೆ ಚಾಕು ತೋರಿಸಿ ಮೊಬೈಲ್ ಹಾಗೂ ಚಿನ್ನದ ಸರ ನೀಡುವಂತೆ ತಿಳಿಸಿದ್ದಾರೆ. ಆದರೆ ಇದಕ್ಕೆ ಹೆದರದ ಮನೋಜ್, ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಶಾಂತಪ್ಪ ಚಾಕು ಬೀಸಿದ ಪರಿಣಾಮ ಮನೋಜ್ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿದೆ. ಮನೋಜ್ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾನೆ ಎಂದು ಮತ್ತೆ ಹೊಟ್ಟೆಗೆ ಚಾಕುನಿಂದ ಇರಿದು ಕೊಲೆ ಮಾಡಿ, ಯುವತಿಯ ಬಳಿ ಇದ್ದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆರೋಪಿಗಳು ಸಿಕ್ಕಿದ್ದು ಹೇಗೆ?:
    ಯುವತಿಯಿಂದ ಕಿತ್ತುಕೊಂಡು ಬಂದಿದ್ದ ಮೊಬೈಲ್ ಅನ್ನು ತಮ್ಮ ಗ್ರಾಮದ ಕಡಗಂಚಿಯ ನಿವಾಸಿ ಲಕ್ಷ್ಮಣ ಎಂಬವರಿಗೆ ಮಾರಾಟ ಮಾಡಿದ್ದಾರೆ. ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಗ್ರಾಮಕ್ಕೆ ಬಂದಿದ್ದ. ಆರೋಪಿಗಳಿಂದ ಕಡಿಮೆ ಬೆಲೆ ಮೊಬೈಲ್ ಪಡೆದಿದ್ದ ಲಕ್ಷ್ಮಣ ಮತ್ತೆ ಪುಣೆಗೆ ಕೆಲಸಕ್ಕೆ ಮರಳಿದ್ದ. ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು, ಮೊಬೈಲ್ ಪುಣೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಲಕ್ಷ್ಮಣನನ್ನು ವಶಕ್ಕೆ ಪಡೆದು, ಕರೆ ತಂದಿದ್ದರು.

    ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನಾವು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ಚಾಕು ತಗುಲಿಸಿದ್ದರಿಂದ ಎಲ್ಲಿ ನಮ್ಮ ಹೆಸರು ಹೇಳುತ್ತಾನೆ ಅಂತಾ ಕೊಲೆ ಮಾಡಿದ್ದೇವೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಈ ಹಿಂದೆ ಕ್ಯಾಂಪಸ್ ನಿರ್ಜನ ಪ್ರದೇಶದಲ್ಲಿ ಸಿಗುತ್ತಿದ್ದ ಪ್ರೇಮಿಗಳನ್ನು ಬೆದರಿಸಿ, ಅವರಿಂದ ಹಣ ದೋಚುತ್ತಿದ್ದೇವು ಅಂತಾ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ವಿಶ್ವವಿದ್ಯಾಲಯದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದಿರುದನ್ನು ಕೆಲ ದುಷ್ಕರ್ಮಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಈ ಹಿಂದೆ ಕ್ಯಾಂಪಸ್‍ನಲ್ಲಿ ಕುರಿ ಮೇಯಿಸುವ ನೇಪದಲ್ಲಿ ಬಂದು, ಕಳ್ಳತನ ಮಾಡುತ್ತಿದ್ದರು. ತರಗತಿಗಳು ಮುಗಿದ ಮೇಲೆ ಕ್ಯಾಂಪಸ್‍ನಲ್ಲಿ ಏಕಾಂಗಿಯಾಗಿ ಸಿಗುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ, ಹಣ ದೋಚುತ್ತಿದ್ದರು ಎನ್ನವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮೊಬೈಲ್‍ನಲ್ಲಿ ಗೇಮ್ ಆಡ್ಬೇಡ ಅಂದಿದ್ದೆ ತಪ್ಪಾಯ್ತು – ಅಂಕಲ್‍ನನ್ನೇ ಇರಿದು ಕೊಲೆ ಮಾಡಿದ್ರು ಅಮ್ಮ, ಮಗ

    ಮೊಬೈಲ್‍ನಲ್ಲಿ ಗೇಮ್ ಆಡ್ಬೇಡ ಅಂದಿದ್ದೆ ತಪ್ಪಾಯ್ತು – ಅಂಕಲ್‍ನನ್ನೇ ಇರಿದು ಕೊಲೆ ಮಾಡಿದ್ರು ಅಮ್ಮ, ಮಗ

    ಬೆಂಗಳೂರು: ಸದಾ ಮೊಬೈಲ್ ಅಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ ಸ್ನೇಹಿತನ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆ ಯುವಕ ತನ್ನ ತಾಯಿಯೊಂದಿಗೆ ಸೇರಿ ಆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಸೋಲದೇವನ ಹಳ್ಳಿಯಲ್ಲಿ ನಡೆದಿದೆ.

    ಬಷೀರ್ ಅಹಮ್ಮದ್ (47) ಕೊಲೆಯಾದ ವ್ಯಕ್ತಿಯಾಗಿದ್ದು, ರೋಷನ್ (20) ಹಾಗೂ ಆತನ ತಾಯಿ ಜೈನಾಬಿ (42) ಕೊಲೆ ಮಾಡಿದ ಆರೋಪಿಗಳು. ಸಣ್ಣ ವಿಚಾರಕ್ಕೆ ಕೊಲೆ ಮಾಡಿ ಅಮ್ಮ, ಮಗ ಇಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

    ಏನಿದು ಪ್ರಕರಣ?
    ನಗರದ ಸೋಲದೇವನಹಳ್ಳಿಯಲ್ಲಿ ವಾಸಿಸುತ್ತಿದ್ದ ಬಷೀರ್ ಅಹಮ್ಮದ್ ಹಾಗೂ ಇಲಿಯಾಜ್ ಕಳೆದ 15 ವರ್ಷಗಳಿಂದ ಪ್ರಾಣ ಸ್ನೇಹಿತರು. ವಿಜಯಪುರ ಮೂಲದ ಬಷೀರ್ ರನ್ನು ಇಲಿಯಾಜ್ ತನ್ನ ಮನೆಯಲ್ಲೇ ಇಟ್ಟುಕೊಂಡು ಕೆಲಸ ಮಾಡುತ್ತಾ ಒಟ್ಟಿಗೆ ವಾಸಿಸುತ್ತಿದ್ದರು.

    ಕಳೆದ ಜೂನ್ 30 ರಂದು ಇಲಿಯಾಜ್ ಕೆಲಸದ ನಿಮಿತ್ತ ಬೇರೊಂದು ಊರಿಗೆ ಹೋಗಿದ್ದು, ಈ ವೇಳೆ ಇಲಿಯಾಜ್ ಮಗ ರೋಷನ್ ಸದಾ ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚು ಬೆಳೆಸಿಕೊಂಡು ಕಾಲ ಕಳೆಯುವುದನ್ನು ಕಂಡು ಬುದ್ಧಿವಾದ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಮಗ ರೋಷನ್ ಆತನ ತಾಯಿ ಜೈನಾಬಿ ಸೇರಿ ಬಷೀರ್ ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

    ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ್ರು: ಬಷೀರ್ ನನ್ನು ಕೊಲೆ ಮಾಡಿದ ಆರೋಪಿಗಳು ಬಳಿಕ ಮೃತ ದೇಹವನ್ನು ಕಾರಿನಲ್ಲಿ ಮೈಸೂರಿನ ಕೆಆರ್ ನಗರದ ಬಳಿ ತೆಗೆದುಕೊಂಡು ಹೋಗಿ ನದಿಯೊಂದಕ್ಕೆ ಎಸೆದು ಬಂದಿದ್ದರು. ಆದರೆ ಇದಾದ ಎರಡು ದಿನದ ನಂತರ ಯಾರಿಗೂ ಅನುಮಾನ ಬರದೇ ಇರಲಿ ಎಂದು ತಾವೇ ಹೋಗಿ ಪೊಲೀಸ್ ಠಾಣೆಯಲ್ಲಿ ಬಷೀರ್ ನಾಪತ್ತೆಯಾಗಿದ್ದಾಗಿ ದೂರು ದಾಖಲಿಸಿದ್ದರು.

    ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಠಾಣೆ ಪೊಲೀಸರು ಅಮ್ಮ ತನಿಖೆ ನಡೆಸಿದ್ದರು. ಪ್ರಕರಣದ ತನಿಖೆ ವೇಳೆ ಕೊಲೆಯಾದ ದಿನ ಆರೋಪಿ ರೋಷನ್ ಹಾಗೂ ಜೈನಾಬಿ ಮೊಬೈಲ್ ನೇಟ್ ವರ್ಕ್ ಲೋಕೇಷನ್ ಕೆಆರ್ ನಗರಕ್ಕೆ ಹೋಗಿದ್ದರ ಬಗ್ಗೆ ಸುಳಿವು ದೊರೆತಿತ್ತು. ಅಲ್ಲದೇ ಆರೋಪಿಗಳಿಬ್ಬರ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿದ ಕುರಿತು ಬಾಯ್ಬಿಟ್ಟಿದ್ದಾರೆ.

    ಸ್ನೇಹಿತ ಬಷೀರ್ ನನ್ನು ಸ್ವತಃ ಪುತ್ರ ಹಾಗೂ ಪತ್ನಿಯೇ ಕೊಲೆ ಮಾಡಿದ ವಿಷಯ ತಿಳಿದ ಇಲಿಯಾಜ್ ಶಾಕ್ ಆಗಿದ್ದು. ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿಗಳು ಜೈಲು ಸೇರಿದ್ದಾರೆ.

  • 1993ರ ಮುಂಬೈ ಸ್ಫೋಟದ ಅಪರಾಧಿ ತಾಹೀರ್ ಮರ್ಚಂಟ್ ಸಾವು

    1993ರ ಮುಂಬೈ ಸ್ಫೋಟದ ಅಪರಾಧಿ ತಾಹೀರ್ ಮರ್ಚಂಟ್ ಸಾವು

    ಮುಂಬೈ: 1993 ರ ಮುಂಬೈ ಸ್ಫೋಟದ ಅಪರಾಧಿ 56 ವರ್ಷದ ತಾಹೀರ್ ಮರ್ಚಂಟ್ ಇಂದು ಮುಂಜಾನೆ ಮೃತಪಟ್ಟಿದ್ದಾನೆ.

    ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಮರ್ಚಂಟ್ ನನ್ನು ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ತಾಹೀರ್ 3.45ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ತಾಹೀರ್ ಪುಣೆಯ ಯೆರವಾಡ ಜೈಲಿನಲ್ಲಿದ್ದನು.

    ಈ ಮೊದಲು ಅಂದ್ರೆ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗುವ ಮುನ್ನ ಸಹಕೈದಿಯಾಗಿದ್ದ ಮುಸ್ತಾಫ ದೊಸಾ ಎಂಬಾತ ಮುಂಬೈನಲ್ಲಿ ಮೃತಪಟ್ಟಿದ್ದನು. ಅವನಿಗೂ ಕೂಡ ಜೈಲಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದನು.

    1993ರ ಮಾರ್ಚ್ 12ರಂದು ನಡೆದ ಮುಂಬೈ ಸ್ಫೋಟದಲ್ಲಿ 257 ಮಂದಿ ಮೃತಪಟ್ಟು, 700ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್ 28ರಂದು ನ್ಯಾಯಮೂರ್ತಿ ಜಿ.ಎ.ಸನಾಪ್ ಅವರ ಪೀಠ ವಿಚಾರಣೆ ನಡೆಸಿದ್ದು, ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿ ಆರು ಆರೋಪಿಗಳಾದ ಫಿರೋಜ್ ಖಾನ್, ಮೊಹಮ್ಮದ್ ತಾಹೀರ್ ಮರ್ಚಂಟ್, ಕರಿಮುಲ್ಲಾ ಖಾನ್ ಮತ್ತು ರಿಯಾಜ್ ಅಹ್ಮದ್ ಸಿದ್ದಿಕಿ ಮುಂತಾದವರನ್ನು ದೋಷಿಗಳೆಂದು ತೀರ್ಪು ನೀಡಿತ್ತು.

  • 5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಎಸಗಿ ಬೆಂಕಿ ಇಟ್ಟ ಅಪ್ರಾಪ್ತ ಬಾಲಕರು

    5ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ ಎಸಗಿ ಬೆಂಕಿ ಇಟ್ಟ ಅಪ್ರಾಪ್ತ ಬಾಲಕರು

    ಅಸ್ಸಾಂ: 5ನೇ ತರಗತಿಯ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಗ್ಯಾಂಗ್ ರೇಪ್ ನಡೆಸಿ, ಬಳಿಕ ಬೆಂಕಿ ಹಚ್ಚಿರುವ ಘಟನೆ ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾರೆ. ಆದರೆ ಶೇ. 90 ರಷ್ಟು ಸುಟ್ಟಗಾಯಗಳಾದ ಕಾರಣ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಬಾಲಕಿ ಸಾವನ್ನಪ್ಪಿದ್ದಾಳೆ.

    ಘಟನೆ ಕುರಿತು ಪೊಲೀಸರು ಮಾಹಿತಿ ಪಡೆದು ಆಸ್ಪತ್ರೆಗೆ ಧಾವಿಸಿದ್ದು, ಬಾಲಕಿಯ ಹೇಳಿಕೆಯನ್ನು ಪಡೆದಿದ್ದರು. ಬಾಲಕಿ ತನ್ನ ಹೇಳಿಕೆಯಲ್ಲಿ ತನಗೆ ಪರಿಚಯ ಇರುವ ಐವರು ಅತ್ಯಾಚಾರ ಎಸಗಿ ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ತಿಳಿಸಿದ್ದಳು.

    ಬಾಲಕಿ ಹೇಳಿಕೆ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಯಗಳನ್ನ ಬಂಧಿಸಿಲು ಹುಡುಕಾಟ ನಡೆಸಲಾಗಿದೆ. ಬಂಧಿತರು ಅಪ್ರಾಪ್ತರಾಗಿರುವ ಕಾರಣ ಅವರ ವಿರುದ್ಧ ಬಾಲಾಪರಾಧಿ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಬಾಲಕಿ ಹೇಳಿಕೆ ಪಡೆಯಲಾಗಿದ್ದು, ಆಕೆಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತು ಗ್ರಾಮಸ್ಥರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಚ್ 17 ರಂದು 8 ಜನ ದುಷ್ಕರ್ಮಿಗಳು ಪತಿಯನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದ ಘಟನೆ ನಡೆದಿತ್ತು. ಘಟನೆ ಬಳಿಕ ಅಸ್ಸಾಂ ನ ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ಮಹಿಳೆಯರ ರಕ್ಷಣೆ ಕುರಿತು ಪ್ರಶ್ನಿಸಿದ್ದರು.

  • ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

    ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.

    ಕಲಬುರಗಿ ನಗರದ ನಿವಾಸಿ ಆಗಿರುವ ಡಾ. ಅಮಿತ್ ಗಾಯಾಕವಾಡ್ ಬಂಧನವಾದ ವ್ಯಕ್ತಿಯಾಗಿದ್ದು, ಆರೋಪಿ ಅಮಿತ್ ಬೆಳಗಾವಿಯ ಬಿಐಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ.

    ಕಳೆದ ಒಂದು ವಾರದಿಂದ ನಗರದಲ್ಲಿ ಕಾರಿನ ಮೇಲೆ ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಘಟನೆಯನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಆದರೂ ನಗರದಿಂದ ತಪ್ಪಿಸಿಕೊಂಡು ಹೋಗಿದ್ದ ಅಮಿತ್‍ನನ್ನು ಕಲಬುರಗಿ ಪೊಲೀಸರ ಮಾಹಿತಿ ಮೇರೆಗೆ ಬೆಳಗಾವಿ ನಗರದಲ್ಲಿ ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ: ಕಲಬುರಗಿ ನಗರದ ಖುಬಾ ಪ್ಲಾಟ್ ನಲ್ಲಿ ಕಾರ್ ಗೆ ಬೆಂಕಿ ಹಚ್ಚುವ ಸಂರ್ಭದಲ್ಲಿ ಕಾರ್ ಮಾಲೀಕರು ಆರೋಪಿಯನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಹೆಲ್ಮೆಟ್ ಧರಿಸಿದ್ದ ಇದರಿಂದ ಅನುಮಾನಗೊಂಡ ಅವರು ಆತನನ್ನು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ವಾಗಿ ಆರೋಪಿ ನಾನು ಮನೆಯ ಮಾಲೀಕರಾದ ಡಿಸೋಜಾ ಅವರನ್ನು ಭೇಟಿ ಮಾಡಲು ಬಂದಿದೆ ಎಂದು ತಿಳಿಸಿದ್ದ. ಆದರೆ ಡಿಸೋಜಾ ಅವರು ಮೃತಪಟ್ಟು ಹಲವು ದಿನಗಳಾಗಿದ್ದವು. ನಂತರ ಆರೋಪಿ ಮುಖದ ಮೇಲಿನ ಹೆಲ್ಮೆಟ್ ತೆಗಿಸಿ ಪ್ರಶ್ನಿಸಿದ್ದರು. ಆದರೆ ಈ ವೇಳೆ ಅವರಿಗೆ ಬೇರೆ ಮಾಹಿತಿ ನೀಡಿ ಆರೋಪಿ ಅಲ್ಲಿಂದ ಎಸ್ಕೆಪ್ ಆಗಿದ್ದ. ಈ ಘಟನೆ ಕುರಿತು ಕಾರ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಈ ಮಾಹಿತಿಯ ಬೆನ್ನಟ್ಟಿದ್ದ ಪೊಲೀಸರಿಗೆ ಬೆಳಗಾವಿ ನಗರದ ವಿವೇಂತಾ ಆರ್ಪಾಟ್ ಮೆಂಟ್ ನಲ್ಲಿ ಇಂತಹದೇ ಘಟನೆಯಲ್ಲಿ ವ್ಯಕ್ತಿಯೊಬ್ಬರು ಸಿಕ್ಕಿ ಬಿದ್ದಿರುವ ಮಾಹಿತಿ ಲಭಿಸಿಸುತ್ತದೆ. ಬಂಧಿತ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಅಮಿತ್ ಬೆಳಗಾವಿಯ ಸದಾಶಿವ ನಗರದಲ್ಲಿ ವಾಸಿಸುತ್ತಿದ್ದು, ಆತನ ಮನೆಯಲ್ಲಿ ಕೃತ್ಯಕ್ಕೆ ಬಳಸಿದ ಎಲ್ಲಾ ವಸ್ತುಗಳು ಪತ್ತೆಯಾಗಿದೆ. ಪ್ರಸ್ತುತ ಆರೋಪಿ ಅಮಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಇದಕ್ಕೂ ಮುನ್ನ ಆರೋಪಿ ಕಲಬುರಗಿ ನಗರದ ಸೇಡಂ ರಸ್ತೆಯ ಜಯನಗರದ ಬಳಿ 2, ಬನಶಂಕರಿ ಕಾಲೋನಿ ಬಳಿ 1, ವಿಶ್ವೇಶರಯ್ಯ ಕಾಲೋನಿಯ ಬಳಿ 1, ಯುನೈಟೆಡ್ ಆಸ್ಪತ್ರೆ ಬಳಿ 1, ಲಾಲಗೇರಿ ಕ್ರಾಸ್ ಬಳಿ 1 ಕಾರು ಸೇರಿದಂತೆ ಎಂಟಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಅಲ್ಲದೇ ಈ ಘಟನೆಯ ಮರುದಿನವೇ ಆರೋಪಿ ಮತ್ತೆ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಗರದ ಖೂಬಾ ಪ್ಲಾಟ್ ನಲ್ಲಿ ಹುಂಡೈ ಕಂಪೆನಿ ಕಾರ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

    ಪದೇ ಪದೇ ಕಾರುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳಿಂದ ಕಂಗಲಾಗಿದ್ದ ಕಲಬುರಗಿ ನಗರದ ಕಾರು ಮಾಲೀಕರು, ತಮ್ಮ ಕಾರುಗಳ ರಕ್ಷಣೆಗಾಗಿ ಮನೆ ಬಿಟ್ಟು ಕಾರಿನಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಅರೋಪಿಯ ಪತ್ತೆಗಾಗಿ ಜಿಲ್ಲೆಯ ಎ ಡಿವಿಷನ್ ಡಿಎಸ್‍ಎಸ್ಪಿ ಲೊಕೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಅಲ್ಲದೇ ಆರೋಪಿ ಕಾರಿಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಕೋರಿದ್ದರು.

    https://www.youtube.com/watch?v=PWHq6BC0Dho

  • ಮಂಗ್ಳೂರು ಜೈಲಿನಲ್ಲಿ ಜೀವಂತವಾಗಿದೆ ಜೀತ ಪದ್ದತಿ-ರೌಡಿಯೊಬ್ಬನಿಗೆ ಸಹ ಕೈದಿಯಿಂದ ಭರ್ಜರಿ ಮಸಾಜ್

    ಮಂಗ್ಳೂರು ಜೈಲಿನಲ್ಲಿ ಜೀವಂತವಾಗಿದೆ ಜೀತ ಪದ್ದತಿ-ರೌಡಿಯೊಬ್ಬನಿಗೆ ಸಹ ಕೈದಿಯಿಂದ ಭರ್ಜರಿ ಮಸಾಜ್

    ಮಂಗಳೂರು: ರೌಡಿಗಳ ಪಾಲಿಗೆ ಸ್ವರ್ಗ ಅನ್ನೋ ಕುಖ್ಯಾತಿಗೆ ಕಾರಣವಾಗಿರುವ ಮಂಗಳೂರು ಜೈಲಿನಲ್ಲಿ ಜೀತ ಪದ್ಧತಿಯೂ ನಡೆಯುತ್ತೆ ಅನ್ನೋದು ಬೆಳಕಿಗೆ ಬಂದಿದೆ. ರೌಡಿಯೊಬ್ಬ ಸಹ ಕೈದಿಯೊಬ್ಬನಿಂದ ಕಾಲು ಒತ್ತಿಸಿ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ಲಭ್ಯವಾಗಿದೆ.

    ರವೂಫ್ ಅನ್ನುವ ಕೈದಿಯಿಂದ ತನ್ನ ಕಾಲು ಒತ್ತಿಸುತ್ತಾ ಅದನ್ನು ಸ್ವತಃ ರೌಡಿ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾನೆ. ಮೊಬೈಲ್ ವಿಡಿಯೋವನ್ನು ಈಗ ಜೈಲಿನ ಒಳಗಿನಿಂದಲೇ ರೌಡಿಗಳು ಮಾಧ್ಯಮಕ್ಕೆ ರವಾನಿಸಿದ್ದಾರೆ. ಆ ಮೂಲಕ ಮಂಗಳೂರಿನ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸುವುದರ ಜೊತೆಗೆ ಜೀತ ಪದ್ಧತಿಯನ್ನೂ ನಡೆಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

    ಕೈದಿಗಳು ಮೊಬೈಲ್, ಗಾಂಜಾ, ಡ್ರಗ್ಸ್ ಸೇವಿಸ್ತಾರೆ ಅನ್ನುವ ಆರೋಪ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಪೊಲೀಸರು ಆಗಿಂದಾಗ್ಗೆ ಜೈಲಿಗೆ ದಾಳಿ ಕಾರ್ಯಾಚರಣೆ ನಡೆಸುತ್ತಾರೆ. ಆದರೆ ಇದೇನಿದ್ದರೂ ಪ್ರಭಾವಿ ಕೈದಿಗಳ ಮೊಬೈಲ್ ಬಳಕೆಗೆ ನಿಯಂತ್ರಣ ಹೇರುವಲ್ಲಿ ಸಫಲವಾಗಿಲ್ಲ.

    https://www.youtube.com/watch?v=jAgdbTYO924