Tag: convict

  • ಕಿದ್ವಾಯಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ವಿಜಯಪುರದಲ್ಲಿ ಅರೆಸ್ಟ್

    ಕಿದ್ವಾಯಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ವಿಜಯಪುರದಲ್ಲಿ ಅರೆಸ್ಟ್

    ಬೆಂಗಳೂರು/ವಿಜಯಪುರ: ಚಿಕಿತ್ಸೆಗೆಂದು ಬಂದಿದ್ದ ವೇಳೆ ಕಿದ್ವಾಯಿ ಆಸ್ಪತ್ರೆಯಿಂದ (Kidwai Hospital) ಪರಾರಿಯಾಗಿದ್ದ ಕೈದಿಯನ್ನು ಸಿದ್ದಾಪುರ ಪೊಲೀಸರು (Siddapura Police) ವಿಜಯಪುರದಲ್ಲಿ (Vijayapura) ಬಂಧಿಸಿದ್ದಾರೆ.

    ಕೈದಿ ಚೇತನ್ ಕಲ್ಯಾಣಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನ ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಕಿದ್ವಾಯಿ ಆಸ್ಪತ್ರೆಯಿಂದ ಸಜಾ ಕೈದಿ ಪರಾರಿ – ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಬಂದು ಎಸ್ಕೇಪ್

    ಕಳೆದ ಆಗಸ್ಟ್ 21ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಜಾ ಕೈದಿ ಚೇತನ್ ಸೆ.8ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಬ್ಬಂದಿ ಕಣ್ತಪ್ಪಿಸಿ ಪರಾರಿಯಾಗಿದ್ದ.
  • ಕಿದ್ವಾಯಿ ಆಸ್ಪತ್ರೆಯಿಂದ ಸಜಾ ಕೈದಿ ಪರಾರಿ – ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಬಂದು ಎಸ್ಕೇಪ್

    ಕಿದ್ವಾಯಿ ಆಸ್ಪತ್ರೆಯಿಂದ ಸಜಾ ಕೈದಿ ಪರಾರಿ – ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಬಂದು ಎಸ್ಕೇಪ್

    ಬೆಂಗಳೂರು: ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆಂದು (Cancer Treatment) ಆಸ್ಪತ್ರೆಗೆ ಸೇರಿಸಿದ್ದ ಸಜಾ ಕೈದಿ (Convict) ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಿಂದ (Kidwai Cancer Hospital) ಎಸ್ಕೇಪ್ ಆಗಿದ್ದಾನೆ. ಕೈದಿ ಆಸ್ಪತ್ರೆಯಿಂದ ಪರಾರಿಯಾಗಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಚೇತನ್ ಕಲ್ಯಾಣಿ ಎಸ್ಕೇಪ್ ಆದ ಸಜಾ ಕೈದಿ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯ ಬೇಜವಾಬ್ದಾರಿಯಿಂದ ಅಪರಾಧಿ ಎಸ್ಕೇಪ್ ಆಗಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಸಜಾ ಕೈದಿಯನ್ನ ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಬಾಯಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಪರಾಧಿಯನ್ನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದಿದ್ದ ವೇಳೆ ಜೈಲು ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಹಿಡಿಯಲು ಪ್ರಯತ್ನಿಸಿದರೂ ಸಿಗದೇ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಭದ್ರಾವತಿ ಈದ್‌ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ

    ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಪ್ಪನ ಅಗ್ರಹಾರ ಸಿಬ್ಬಂದಿ ರಘು ಕೊಟ್ಟ ದೂರಿನ ಮೇರೆಗೆ ಬಿಎನ್‌ಎಸ್ 262ರ ಅಡಿ ಪ್ರಕರಣ ದಾಖಲಾಗಿದೆ. ಕಳೆದ ಆಗಸ್ಟ್ 3ರಂದು ವಿಜಯಪುರ ಜೈಲಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಬಾಯಿಯ ಕ್ಯಾನ್ಸರ್ ಇದ್ದ ಕಾರಣ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದ ನಂತರ ಕಾರಾಗೃಹ ವೈದ್ಯರ ಸಲಹೆ ಮೇರೆಗೆ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಆಗಸ್ಟ್ 21ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಜಾ ಕೈದಿ ಚೈತನ್ಯ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಬ್ಬಂದಿ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ – 30 ಲಕ್ಷ ರೂ. ಕಳೆದುಕೊಂಡ ಮಾಜಿ ಶಾಸಕ

    ಬಾಯಿ ಕ್ಯಾನ್ಸರ್ ಇದ್ದ ಕಾರಣ ಮಾತನಾಡಲು ಸಹ ಚೈತನ್ಯಗೆ ಆಗುತ್ತಿರಲಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡು ಕೈದಿಗಾಗಿ ಸಿದ್ದಾಪುರ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

  • ಜಾತಿ ನಿಂದನೆ ಕೇಸ್‌ನಲ್ಲಿ 98 ಮಂದಿಗೆ ಜೀವಾವಧಿ – ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ದೋಷಿ ಸಾವು

    ಜಾತಿ ನಿಂದನೆ ಕೇಸ್‌ನಲ್ಲಿ 98 ಮಂದಿಗೆ ಜೀವಾವಧಿ – ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ದೋಷಿ ಸಾವು

    ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ (Marakumbi Case) ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಜಾತಿ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡು ಅಪರಾಧಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

    ರಾಮಪ್ಪ ಲಕ್ಷ್ಮಣ ಭೋವಿ (44) ಸಾವಿಗೀಡಾದ ಅಪರಾಧಿ. ಗಲಾಟೆ ಪ್ರಕರಣ ಸಂಬಂಧ ಗುರುವಾರ ಕೊಪ್ಪಳ (Koppal) ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಾಯಿತು. ಈ ವೇಳೆ ಅಸ್ವಸ್ಥಗೊಂಡಿದ್ದ ಅಪರಾಧಿ ರಾಮಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಬೆಳಗ್ಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣದಲ್ಲಿ 98 ಜನಕ್ಕೆ ಜೀವಾವಧಿ – ಕೊಪ್ಪಳ ಜಿಲ್ಲಾ ಕೋರ್ಟ್‌ ಐತಿಹಾಸಿಕ ತೀರ್ಪು!

    ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ರ ಅ.28 ರಂದು ಸಂಘರ್ಷ ನಡೆದಿತ್ತು. ದಲಿತರು ಹಾಗೂ ಸವರ್ಣಿಯರ ನಡುವೆ ಗಲಾಟೆ ನಡೆದು ದಲಿತ ಕೇರಿಯ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಹತ್ತು ವರ್ಷಗಳ ವಾದ ಆಲಿಸಿದ ನಂತರ ಈಚೆಗೆ ತೀರ್ಪು ಪ್ರಕಟಗೊಂಡಿತ್ತು.

    ಗುರುವಾರ 101 ಜನ ಆರೋಪಿತರಿಗೆ ಕೋರ್ಟ್‌ ಶಿಕ್ಷೆ ವಿಧಿಸಿತು. ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಪರಾಧಿ ರಾಮಪ್ಪ ಅಸ್ವಸ್ಥಗೊಂಡಿದ್ದರು. ಇದನ್ನೂ ಓದಿ: ಕೊಪ್ಪಳದಲ್ಲಿ ಅಸ್ಪೃಶ್ಯತೆ ಆಚರಣೆಗೆ ಗಲಭೆ ಕೇಸ್: 101 ಜನರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದ ನ್ಯಾಯಾಲಯ

  • ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

    ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

    ಶಿವಮೊಗ್ಗ: ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗ (Shivamogga) ನ್ಯಾಯಾಲಯ (Court) ತೀರ್ಪು ನೀಡಿದೆ.

    ಶಿವಮೊಗ್ಗದ ಶರಾವತಿ ನಗರದಲ್ಲಿ 2018ರಲ್ಲಿ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ರೇವಣ್ಣಪ್ಪ (51) ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲೂರಿನ ನಿವಾಸಿ ಪ್ರಕಾಶ್ (45) ಎಂಬವನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿ ಪ್ರಕಾಶ್‌ಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡದ ಮೊತ್ತ ಕಟ್ಟಲು ವಿಫಲವಾದರೆ ಎರಡು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಕೋರ್ಟ್ ತೀರ್ಪು ನೀಡಿದೆ. ಇದನ್ನೂ ಓದಿ: ಕಪ್ಪು ಸುಂದರಿಯ ಮೇಲೆ ಮುತ್ತಪ್ಪ ರೈ ಪುತ್ರನ ಕಣ್ಣು – ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ

  • ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

    ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್

    ಲಕ್ನೋ: ವಾರಣಾಸಿಯಲ್ಲಿ 2006ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ವಲಿಯುಲ್ಲಾನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 16 ವರ್ಷಗಳ ನಂತರ ದೋಷಿ ಎಂದು ಘೋಷಿಸಿದೆ.

    ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ದೋಷಿ ಎಂದು ಗುರುತಿಸಿದ್ದು ಜೂನ್ 6ರಂದು ಪ್ರಕಟಿಸಲಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

    CRIME

    ಸ್ಫೋಟ ಪ್ರಕರಣಗಳು: 2006ರ ಮಾರ್ಚ್ 7ರಂದು ಉತ್ತರ ಪ್ರದೇಶದ ವಾರಣಾಸಿಯ ಸಂಕತ್ಮೋಚ್‌ನ ದೇವಸ್ಥಾನ ಮತ್ತು ಕ್ಯಾಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ 30 ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. 2006 ರ ಏಪ್ರಿಲ್ 5 ರಂದು ಉತ್ತರ ಪ್ರದೇಶ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ಬಂಧಿಸಿದ್ದರು. ಹೈಕೋರ್ಟ್ನ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಗಿತ್ತು.

  • ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಕೈದಿ

    ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ ಕೈದಿ

    ಮುಂಬೈ: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಯರವಾಡ ತೆರೆದ ಜೈಲಿನಲ್ಲಿರುವ ಬ್ಯಾರಕ್‍ನಲ್ಲಿ ನಡೆದಿದೆ.

    ಗಣೇಶ್ ತಾಂಬೆ (53) ಆತ್ಮಹತ್ಯೆಗೆ ಶರಣಾದ ಕೈದಿ. 2010ರಲ್ಲಿ ವಿರಾರ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

    ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಡುಗೆ ಮನೆಯಲ್ಲಿ ಕೆಲಸ ಮುಗಿಸಿದ್ದ ತಾಂಬೆ ಬ್ಯಾರಕ್‍ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇತರೆ ಜೈಲು ಕೈದಿಗಳು ಆತನ ಶವವನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಊರಿಡೀ ಸುತ್ತಿದ

    ಉಪ ಪೊಲೀಸ್ ಆಯುಕ್ತ ರೋಹಿದಾಸ್ ಪವಾರ್ ಮಾತನಾಡಿ, ಕೈದಿ ಗುರುವಾರ ಮಧ್ಯಾಹ್ನ ಯರವಾಡ ಜೈಲಿನ ಬ್ಯಾರಕ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪ್ರಾಥಮಿಕ ತನಿಖೆಯು ಆತ್ಮಹತ್ಯೆಯನ್ನು ಸೂಚಿಸುತ್ತದೆ. ಆತ್ಮಹತ್ಯೆಗೆ ಕಾರಣ ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ ಜೀವಾವಧಿ ಶಿಕ್ಷೆ

    ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ- ಅಪರಾಧಿಗೆ ಜೀವಾವಧಿ ಶಿಕ್ಷೆ

    ಹಾವೇರಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,250 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

    ಪ್ರಕರಣದ ಆಪಾದನೆಗಳನ್ನ ಗಮನಿಸಿದ ಹಾವೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಜ್ಯೋತಿಶ್ರೀ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10,250 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ.ಎಂ.ಗೆಜ್ಜಿಹಳ್ಳಿ ವಾದ ಮಂಡಿಸಿದ್ದಾರೆ.

    ಶಿಗ್ಗಾಂವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಟ್ಯೂಶನ್ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಆರೋಪಿ ಮೊಹಮ್ಮದ್ ಜಮೀರ್ ಮಿಯಾಬೇಗನವರ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಶಿಗ್ಗಾಂವಿ ಪೊಲೀಸ್ ಠಾಣೆಯ ಡಿವೈಎಸ್‍ಪಿ ವಿಜಯಕುಮಾರ್.ಆರ್.ಬಿಸಹಳ್ಳಿ ತನಿಖೆ ನಡೆಸಿ ದೋಷಾರೋಪಣೆ ಪತ್ರವನ್ನ ನ್ಯಾಯಾಲಯಕ್ಕೆ ಸಲ್ಲಿಸಿದರು.

  • ತಾಯಿ, ಮಗಳ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಮರಣದಂಡನೆ ಶಿಕ್ಷೆ

    ತಾಯಿ, ಮಗಳ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಮರಣದಂಡನೆ ಶಿಕ್ಷೆ

    ಲಕ್ನೋ: ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

    ಉತ್ತರ ಪ್ರದೇಶದ ಅಜಾಮ್‍ಗಡ ಜಿಲ್ಲೆಯ ಮುಬಾರಕ್‍ಪುರದಲ್ಲಿ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಹಾಗೂ ವಾದ ಮಂಡಿಸಿದ ವಕೀಲರ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಕುಮಾರ್ ಸ್ವಸ್ಥಿ ಮಾಹಿತಿ ನೀಡಿದ್ದು, ಪ್ರಕರಣವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ ಅಧಿಕಾರಿಗಳಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಅಪರಾಧಿಯನ್ನು ನಜಿರುದ್ದಿನ್ ಅಲಿಯಾಸ್ ಪವ್ವಾ ಎಂದು ಗುರುತಿಸಲಾಗಿದ್ದು, 2019ರಲ್ಲಿ ಪ್ರಕರಣ ನಡೆದಿತ್ತು. ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ರಾಕ್ಷಸ ರೀತಿಯಲ್ಲಿ ಅಪರಾಧಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಮಹಿಳೆಯ ಪತಿ ಹಾಗೂ ಅವರ 4 ತಿಂಗಳ ಕೂಸನ್ನು ಸಹ ಕೊಲೆ ಮಾಡಿದ್ದ.

    ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ ಬುಧವಾರ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಅಲ್ಲದೆ ನ್ಯಾಯಾಲಯವು 9 ಲಕ್ಷ ರೂ.ಗಳ ದಂಡವನ್ನು ಸಹ ವಿಧಿಸಿದೆ. ನ್ಯಾಯಾಲಯವು 66 ಪುಟಗಳ ತೀರ್ಪಿನಲ್ಲಿ ಘಟನೆಯನ್ನು ಭಯಾನಕ, ಅಮಾನವೀಯ ಹಾಗೂ ಅಪರೂಪದಲ್ಲಿ ಅಪರೂಪವಾದ ಕೃತ್ಯ ಎಂದು ಹೇಳಿದೆ.

  • ಬೀದಿ ನಾಯಿ ಮೇಲೆ ಅತ್ಯಾಚಾರ- ವಿಕೃತ ಕಾಮಿಗೆ 6 ತಿಂಗಳು ಜೈಲು ಶಿಕ್ಷೆ

    ಬೀದಿ ನಾಯಿ ಮೇಲೆ ಅತ್ಯಾಚಾರ- ವಿಕೃತ ಕಾಮಿಗೆ 6 ತಿಂಗಳು ಜೈಲು ಶಿಕ್ಷೆ

    – ಪಾಸ್‍ಪೋರ್ಟ್ ಕಚೇರಿ ಬಳಿ ಇದ್ದ ನಾಯಿ ಮೇಲೆ ಅತ್ಯಾಚಾರ

    ಮುಂಬೈ: ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದ ವ್ಯಕ್ತಿಗೆ ಕೋರ್ಟ್ 6 ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿದೆ.

    ಕಳೆದ ಜುಲೈನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ಇದೀಗ ಥಾಣೆ ಜಿಲ್ಲಾ ನ್ಯಾಯಾಲಯ ಅಪರಾಧಿಗೆ 6 ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಪರಾಧಿಯನ್ನು ವಿಜಯ್ ಚಾಕ್ಲೆ(40) ಎಂದು ಗುರುತಿಸಲಾಗಿದ್ದು, ವಾಗ್ಲೆ ಎಸ್ಟೇಟ್ ನಿವಾಸಿಯಾಗಿದ್ದಾನೆ. ಈತ ಇತರೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದ. ಮುಖ್ಯವಾಗಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದ. ಅಲ್ಲದೆ ಡ್ರಗ್ ವ್ಯಸನಿಯಾಗಿದ್ದ ಎಂದು ವರದಿಯಾಗಿದೆ.

    ಪ್ರಥಮ ದರ್ಜೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ವಿ.ಪಿ.ಖಂಡಾರೆ ಅವರು ತೀರ್ಪು ಪ್ರಕಟಿಸಿದ್ದಾರೆ. ಐಪಿಸಿ ಸೆಕ್ಷನ್ 377(ಅಸ್ವಾಭಾವಿಕ ಲೈಂಗಿಕತೆ) ಅಡಿ ಆರೋಪ ಸಾಬೀತಾಗಿದ್ದರಿಂದ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಅಲ್ಲದೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವಿಕೆ ಅಡಿ 1,050 ರೂ.ದಂಡವನ್ನು ಸಹ ವಿಧಿಸಿದ್ದಾರೆ.

    ಬೀದಿ ನಾಯಿ ಥಾಣೆಯ ಹಳೆ ಪಾಸ್‍ಪೋರ್ಟ್ ಕಚೇರಿ ಬಳಿ ಇದ್ದಾಗ ಪ್ರಕರಣ ನಡೆದಿದೆ. ಕೆಲ ಸ್ಥಳೀಯರು ಬೀದಿ ನಾಯಿಗಳಿಗೆ ಆಹಾರ ನೀಡಲು ಹೋದಾಗ ನಾಯಿ ಮೇಲೆ ಅತ್ಯಾಚಾರ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರು ಪ್ರಾಣಿ ದಯಾ ಸಂಘದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಘಟನೆ ಕುರಿತು ಪೊಲೀಸರಿಗೆ ತಿಳಿಸಲಾಗಿದೆ. ಶ್ರೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಮತ್ತೊಮ್ಮೆ ಈ ರೀತಿಯ ಘಟನೆ ಮರುಕಳಿಸದಂತೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರಾಣಿ ದಯಾ ಸಂಘದವರು ಮನವಿ ಮಾಡಿದ್ದರು. ಅದರಂತೆ ಕೋರ್ಟ್ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದೆ.

  • ಕಲಬುರಗಿ ಮಹಿಳೆ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್

    ಕಲಬುರಗಿ ಮಹಿಳೆ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್

    – ತನ್ನದಲ್ಲದ ತಪ್ಪಿಗೆ ಕೊಲೆಯಾದ ನತದೃಷ್ಟೆ

    ಕಲಬುರಗಿ: ಕಲಬುರಗಿಯ ರಾಮನಗರದ ನಿವಾಸಿಯಾಗಿದ್ದ ಮಹಿಳೆ ಶರ್ಮಿಳಾ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನ್ನದಲ್ಲದ ತಪ್ಪಿಗೆ ಶರ್ಮಿಳಾ ಕೊಲೆಯಾಗಿದ್ದಾಳೆ ಎಂಬ ಅಂಶ ಬೆಳಕಿಗೆ ಬಂದಿದೆ.

    ನ. 15 ರಂದು ರಾಮನಗರದ ನಿವಾಸದಲ್ಲಿ ಶರ್ಮಿಳಾ ಅವರ ಕೊಲೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ಹಂತದಲ್ಲಿ ಲಭ್ಯವಾದ ಮಾಹಿತಿ ಆಧರಿಸಿ ಸದ್ಯ ಕೊಲೆ ಮಾಡಿದ್ದ ಆರೋಪಿ ಕೃಷ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೇ ಆರೋಪಿ ಕೃಷ್ಣ ಕೊಲೆಯಾದ ಶರ್ಮಿಳಾರ ಗಂಡ ಸಂಜಾಯ್‍ರ ಅಕ್ಕನ ಮಗನಾಗಿದ್ದಾನೆ.

    ಕಾರಣವೇನು?
    ಕೊಲೆಯಾದ ಶರ್ಮಿಳಾ ಪತಿ ಸಂಜಯ್ ಮದುವೆಗೂ ಮುನ್ನ ಆರೋಪಿ ಕೃಷ್ಣನ ತಂಗಿ ಪೂಜಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಮದುವೆಗೆ ಮುನ್ನ ಪೂಜಾಳನ್ನು ನಿರಾಕರಿಸಿ ಶರ್ಮಿಳಾರ ಕೈ ಹಿಡಿದಿದ್ದ. ಬಳಿಕ ಸಂಜಯ್, ಶರ್ಮಿಳಾ ಮದುವೆಯಾಗಿ ಸುಖಿ ಸಂಸಾರ ಆರಂಭಿಸಿದ್ದರು. ಅಲ್ಲದೇ ಈ ದಂಪತಿಗೆ ಒಂದು ಗಂಡು ಮಗು ಕೂಡ ಜನಿಸಿತ್ತು. ಮದುವೆಗೂ ಮುನ್ನ ನಡೆದ ಘಟನೆ ಬಗ್ಗೆ ಶರ್ಮಿಳಾ ಅವರಿಗೂ ತಿಳಿದಿತ್ತು. ಆದರೆ ದಂಪತಿಗೆ ಮಗುವಾದ ಬಳಿಕ ಕುಟುಂಬದೊಂದಿಗೆ ಹೊಂದಿಕೊಂಡು ನಡೆದಿದ್ದರು. ಇಬ್ಬರ ಸುಖಿ ಸಂಸಾರ ಕಂಡ ಕೃಷ್ಣ ಮಾತ್ರ ತನ್ನ ತಂಗಿಯ ಸಾವಿಗೆ ದ್ವೇಷ ಸಾಧಿಸುತ್ತಿದ್ದ.

    ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಮದುವೆ ನಿರಾಕರಿಸಿದಕ್ಕೆ ಆರೋಪಿ ಕೃಷ್ಣ ತಂಗಿ ತೀವ್ರವಾಗಿ ಅಘಾತಗೊಂಡಿದ್ದಳು. ಅಲ್ಲದೇ ಇದೇ ನೋವಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ತನ್ನ ತಂಗಿಯ ಸಾವಿಗೆ ಸಂಜಯ್ ಜೀವನದಲ್ಲಿ ಬಂದ ಶರ್ಮಿಳಾ ಕಾರಣ ಎಂದು ತಿಳಿದಿದ್ದ ಕೃಷ್ಣ ಮನಸ್ಸಿನಲ್ಲೇ ದ್ವೇಷ ಸಾಧಿಸಿದ್ದ. ಅಲ್ಲದೇ ಇಬ್ಬರ ಸಂಸಾರ ನೋಡುತ್ತಿದ್ದ ಕೃಷ್ಣ ತನ್ನ ತಂಗಿಯ ಸಾವಿಗೆ ಕಾರಣರಾದ ಬಗ್ಗೆ ದ್ವೇಷ ಸಾಧಿಸುತ್ತಿದ್ದ. ಆದರೂ ಸಂಜಯ್ ನೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದ ಕೃಷ್ಣ ಆಗಾಗ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಮಾತನಾಡಿಕೊಂಡು ಹೋಗುತ್ತಿದ್ದ. ಇದರಂತೆ ನ.15 ರಂದು ಶರ್ಮಿಳಾಗೆ ಫೋನ್ ಮಾಡಿದ್ದ ಕೃಷ್ಣ ಮನೆಯಲ್ಲಿ ಒಬ್ಬಳೆ ಇರುವ ಬಗ್ಗೆ ಮಾಹಿತಿ ಪಡೆದಿದ್ದ. ಬಳಿಕ ನೇರ ಸಂಜಯ್ ಮನೆಗೆ ಧಾವಿಸಿದ್ದ ಕೃಷ್ಣ ಶರ್ಮಿಳಾರನ್ನು ಚಾಕುವಿನಿಂದ ಕೊಲೆ ಮಾಡಿ ಪರಾರಿಯಾಗಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಆರೋಪಿ ಕೃಷ್ಣ, ಶರ್ಮಿಳಾರನ್ನು ಕೊಲೆ ಮಾಡಲು ಚಾಕು ಬಳಸಿದ್ದ. ಕೊಲೆಯಾದ ಬಳಿಕ ಚಾಕುವಿಗೆ ಅಂಟಿಕೊಂಡಿದ್ದ ರಕ್ತವನ್ನು ಮನೆಯಲ್ಲಿ ತೊಳೆದು ಇಟ್ಟಿದ್ದ. ಆದರೆ ಈ ವೇಳೆ ತನ್ನ ಕೈನಲ್ಲಿದ್ದ ವಾಚ್ ಅಲ್ಲೇ ಬಿಚ್ಚಿಟ್ಟಿದ್ದ ಆರೋಪಿ ಅದನ್ನು ಅಲ್ಲೇ ಮರೆತು ತೆರಳಿದ್ದ. ಪ್ರಕರಣ ಕುರಿತು ತನಿಖೆ ಆರಂಭಿಸಿದ ಕಲಬುರಗಿ ಪೊಲೀಸರು ಕೊಲೆಯಾದ ಸ್ಥಳದಲ್ಲಿ ಸಿಕ್ಕ ವಾಚ್ ಜಾಡು ಹಿಡಿದು ಘಟನೆ ನಡೆದ ವೇಳೆ ಆ ಪ್ರದೇಶದಲ್ಲಿದ್ದ ಮೊಬೈಲ್ ನೆಟ್‍ವರ್ಕ್ ಬಗ್ಗೆ ಮಾಹಿತಿ ಪಡೆದಿದ್ದರು. ಅಲ್ಲದೇ ಕೊಲೆಯಾದ ಶರ್ಮಿಳಾ ಫೋನ್‍ಗೆ ಕೊನೆಯ ಬಾರಿ ಕೃಷ್ಣ ಫೋನ್ ಮಾಡಿದ್ದ ಸಂಗತಿಯೂ ಬೆಳಕಿಗೆ ಬಂದಿತ್ತು. ಶರ್ಮಿಳಾ ಅಂತ್ಯ ಸಂಸ್ಕಾರದಲ್ಲೂ ಆರೋಪಿ ಭಾಗವಹಿಸಿರಲಿಲ್ಲ.

    ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಪಡೆದ ಪೊಲೀಸರು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ಬಂಧನಕ್ಕಾಗಿ ಬಲೆ ಬೀಸಿದ್ದರು. ಇಂದು ಆರೋಪಿ ನಗರ ರೈಲ್ವೇ ಟ್ರ್ಯಾಕ್ ಬಳಿ ಇದ್ದ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಕೃಷ್ಣ ಪೊಲೀಸರ ಮುಂದೇ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ತನ್ನದಲ್ಲದ ತಪ್ಪಿಗೆ ಮಾತ್ರ ಶರ್ಮಿಳಾ ಕೊಲೆಯಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews