Tag: Convert

  • ನಾನು ಮತಾಂತರಗೊಂಡಿದ್ದೇನೆ ಎನ್ನುವುದು ಸುಳ್ಳು : ನಟಿ ರಾಗಿಣಿ

    ನಾನು ಮತಾಂತರಗೊಂಡಿದ್ದೇನೆ ಎನ್ನುವುದು ಸುಳ್ಳು : ನಟಿ ರಾಗಿಣಿ

    ಬಾಲಿವುಡ್ ನ ಜನಪ್ರಿಯ ನಟಿ, ಹೆಸರಾಂತ ನಟ ಗೋವಿಂದ್ ಅವರ ಅಕ್ಕನ ಮಗಳು ರಾಗಿಣಿ ಖನ್ನಾ (Ragini Khanna) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದಾರೆ ಎಂದು ವರದಿಯಾಗಿತ್ತು. ಮತಾಂತರ ಗೊಂಡ ಒಂದೇ ದಿನಕ್ಕೆ ಅವರು ವಾಪಸ್ಸು ಹಿಂದೂ ಧರ್ಮಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಅವರು ಮೌನ ಮುರಿದಿದ್ದಾರೆ.

    ಅಭಿಮಾನಿಯೊಬ್ಬ ಒಂದು ಪೋಸ್ಟ್ ಮಾಡಿದ್ದ, ಅದನ್ನು ನಾನು ರೀಪೋಸ್ಟ್ ಮಾಡಿ ಸಂಕಟಕ್ಕೆ ಸಿಲುಕಿಕೊಂಡೆ. ನಾನು ಯಾವುದೇ ಕಾರಣಕ್ಕೂ ಮತಾಂತರಗೊಂಡಿಲ್ಲ. ಅದೆಲ್ಲವೂ ಸುಳ್ಳು. ಅಭಿಮಾನಿಯ ಎಡವಟ್ಟಿನಿಂದಾಗಿ ನಾನು ನೋವು ಅನುಭವಿಸಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

    ರಾಗಿಣಿ ಒಂದು ದಿನದ ಹಿಂದೆಯಷ್ಟೇ ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರ (convert) ಆಗಿ, ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದು ವರದಿಯಾಗಿತ್ತು. ತಾನು ಮತಾಂತರವಾಗಿ ತಪ್ಪು ಮಾಡಿದೆ, ನನ್ನ ತಪ್ಪಿನ ಅರಿವಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದೇನೆ ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿತ್ತು.

    ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ಸನಾತನ ಧರ್ಮವೇ ಶ್ರೇಷ್ಠವೆಂದು ಅವರು ಹೇಳಿಕೊಂಡಿದ್ದಾರೆ. ಬೇರೆ ಧರ್ಮಕ್ಕೆ ಮತಾಂತರವಾದ ನಂತರ, ಇಂದಿನಿಂದ ಈ ಧರ್ಮವನ್ನು ಪಾಲಿಸುತ್ತೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿದ್ದವು.

     

    ಮತಾಂತರಗೊಳ್ಳುವ ಕುರಿತಂತೆ ಹಾಕಿದ್ದ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದು, ಹಿಂದೂ (Hindu) ಧರ್ಮದ ಬಗ್ಗೆ ಮಾಡಲಾದ ಭಾಷಣವನ್ನು ಅವರು ಪೋಸ್ಟ್ ಮಾಡಿ, ಅದಕ್ಕೆ ತಮ್ಮ ತಮ್ಮ ಫೋಟೋ ಅಂಟಿಸಿದ್ದರು. ಈಗ ಎಲ್ಲ ಗೊಂದಲಕ್ಕೂ ಅವರು ತೆರೆ ಎಳೆದಿದ್ದಾರೆ.

  • ಹಿಂದೂ ಧರ್ಮಕ್ಕೆ ವಾಪಸ್ಸಾದ ನಟಿ ರಾಗಿಣಿ ಖನ್ನಾ

    ಹಿಂದೂ ಧರ್ಮಕ್ಕೆ ವಾಪಸ್ಸಾದ ನಟಿ ರಾಗಿಣಿ ಖನ್ನಾ

    ಬಾಲಿವುಡ್ ನ ಜನಪ್ರಿಯ ನಟಿ, ಹೆಸರಾಂತ ನಟ ಗೋವಿಂದ್ ಅವರ ಅಕ್ಕನ ಮಗಳು ರಾಗಿಣಿ ಖನ್ನಾ (Ragini Khanna) ಒಂದು ದಿನದ ಹಿಂದೆಯಷ್ಟೇ ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರ (convert) ಆಗಿ, ಎಲ್ಲರಿಗೂ ಶಾಕ್ ನೀಡಿದ್ದರು. ತಾನು ಮತಾಂತರವಾಗಿ ತಪ್ಪು ಮಾಡಿದೆ, ನನ್ನ ತಪ್ಪಿನ ಅರಿವಾಗಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

    ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ. ಸನಾತನ ಧರ್ಮವೇ ಶ್ರೇಷ್ಠವೆಂದು ಅವರು ಹೇಳಿಕೊಂಡಿದ್ದಾರೆ. ಬೇರೆ ಧರ್ಮಕ್ಕೆ ಮತಾಂತರವಾದ ನಂತರ, ಇಂದಿನಿಂದ ಈ ಧರ್ಮವನ್ನು ಪಾಲಿಸುತ್ತೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬಂದಿದ್ದವು.

     

    ಮತಾಂತರಗೊಳ್ಳುವ ಕುರಿತಂತೆ ಹಾಕಿದ್ದ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದು, ಹಿಂದೂ (Hindu) ಧರ್ಮದ ಬಗ್ಗೆ ಮಾಡಲಾದ ಭಾಷಣವನ್ನು ಅವರು ಪೋಸ್ಟ್ ಮಾಡಿ, ಅದಕ್ಕೆ ತಮ್ಮ ತಮ್ಮ ಫೋಟೋ ಅಂಟಿಸಿದ್ದಾರೆ.

  • ಶಿಕ್ಷಕಿ ಮೇಲೆ ಮುಸ್ಲಿಂ ಯುವಕನಿಂದ ಅತ್ಯಾಚಾರ – ಮತಾಂತರವಾಗಿ ಮದ್ವೆಯಾಗುವಂತೆ ಒತ್ತಾಯ

    ಲಕ್ನೋ: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ 28 ವರ್ಷದ ಶಾಲಾ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನೊಬ್ಬ ಅದರ ವೀಡಿಯೋ ಚಿತ್ರೀಕರಣ ಮಾಡಿದ್ದು, ಮತಾಂತರವಾಗಿ ತನ್ನನ್ನೇ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ.

    crime

    ಆರೋಪಿ ಅಮೀರ್ ಸೇರಿದಂತೆ ಐವರ ವಿರುದ್ಧ ಉತ್ತರ ಪ್ರದೇಶದ ಕಾನೂನು ಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಆರ್‌ನಲ್ಲಿ ಆರೋಪಿಯ ತಾಯಿ, ಸಹೋದರಿ, ಸಹೋದರ ಮತ್ತು ಮತ್ತೊಬ್ಬ ಸಂಬಂಧಿಯ ಹೆಸರನ್ನು ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

    CRIME (1)

    ನಡೆದಿದ್ದೇನು?: ಮೇ 4 ರಂದು ಮಹಿಳೆ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಅದೇ ಗ್ರಾಮದ ಅಮೀರ್, ಡ್ರಾಪ್ ಮಾಡುವುದಾಗಿ ಕರೆದೊಯ್ದಿದ್ದಾನೆ. ಬಳಿಕ ಮೂಗಿಗೆ ಮತ್ತಿನ ಔಷಧವನ್ನಿಟ್ಟು ಪ್ರಜ್ಞೆ ತಪ್ಪುವಂತೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಮೀರ್ ಕುಟುಂಬ ಸದಸ್ಯರೂ ಸಹ ಮತಾತಂತರವಾಗಿ ಆತನನ್ನೇ ಮದುವೆಯಾಗುವಂತೆ ಒತ್ತಾಯಿಸಿದ್ದರೆಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.

  • ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಇಸ್ಲಾಂಗೆ ಮತಾಂತರ ಆದ್ರಾ ಸ್ಟಾರ್ ನಟ ವಿಶಾಲ್: ಏನಿದು ಇನ್ಶ್ಯಾ ಅಲ್ಲಾಹ್?

    ಮಿಳಿನ ಖ್ಯಾತ ನಟ ವಿಶಾಲ್ ದೇವರ ಬಗ್ಗೆ ಅಪಾರ ನಂಬಿಕೆವುಳ್ಳವರು. ಅವರು ಯಾವ ಜಾತಿಯರು ಎಂದು ಈವರೆಗೂ ಅಭಿಮಾನಿಗಳು ಕೇಳದೇ ಆರಾಧಿಸುತ್ತಾ ಬಂದಿದ್ದಾರೆ. ಸದ್ಯ ವಿಶಾಲ್ ಮಾಡಿರುವ ಒಂದು ಟ್ವಿಟ್ ನಿಂದಾಗಿ ವಿಶಾಲ್ ಯಾವ ಧರ್ಮದವರು ಎಂದು ಹುಡುಕುತ್ತಿದ್ದಾರೆ ನೆಟ್ಟಿಗರು. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ವಿಶಾಲ್ ಅವರ ಸಹೋದರಿ ಐಶು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳ ಜತೆ ಹಂಚಿಕೊಂಡಿರುವ ಅವರು, ‘ನಾನು ಮತ್ತೆ ಅಂಕಲ್ ಆಗಿರುವೆ. ಮತ್ತೊಮ್ಮೆ ಅಂಕಲ್ ಆಗಿರುವುದು ಸಂಭ್ರಮ ತಂದಿದೆ. ನನ್ನ ಸಹೋದರಿ ಐಶು ಅವರು ರಾಜಕುಮಾರಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಮತ್ತು ಸಹೋದರಿಗೂ ಶುಭ ಹಾರೈಸಿ. ಇಬ್ಬರಿಗೂ ಇನ್ಶ್ಯಾ ಅಲ್ಲಾಹ್ ನ ಆಶೀರ್ವಾದವಿರಲಿ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ‘ಇನ್ಶ್ಯಾ ಅಲ್ಲಾಹ್’ ಎಂಬ ಪದವೇ ಇದೀಗ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಅಲ್ಲಾಹ್ ದೇವರ ಆಶೀರ್ವಾದ ಕೋರಿರುವ ವಿಶಾಲ್ ಹಾಗಾದರೆ, ಇಸ್ಲಾಂಗೆ ಮತಾಂತರ ಆಗಿದ್ದಾರಾ ಎಂದು ನೆಟ್ಟಿಗರು ಹಲವು ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಪದವನ್ನು ಅವರು ಹಾಕಿರುವುದಾದರೂ ಏತಕ್ಕೆ ಎನ್ನುವ ಚರ್ಚೆ ಕೂಡ ತಮಿಳು ನಾಡಿನಲ್ಲಿ ನಡೆದಿದೆ. ಅದಕ್ಕೆ ವಿಶಾಲ್ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡಲು ಹೋಗಿಲ್ಲ.

    ಸಮಾಜಮುಖಿ ಕಾರ್ಯಗಳಿಂದಾಗಿ ವಿಶಾಲ್ ಎಲ್ಲರ ಪ್ರೀತಿಯ ನಟರಾಗಿ ಉಳಿದುಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ ಕುಮಾರ್ ನಿಧನರಾದಾಗ, ಅಪ್ಪು ನೋಡಿಕೊಳ್ಳುತ್ತಿದ್ದ ಅಷ್ಟೂ ಮಕ್ಕಳನ್ನು ದತ್ತು ಪಡೆದುಕೊಂಡು ಓದಿಸುತ್ತೇನೆ ಎಂದು ಹೇಳಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅವರು ಗಿಡಗಳನ್ನು ನೆಟ್ಟು, ಪುನೀತ್ ಅಭಿಮಾನಿಗಳು ಪ್ರೀತಿಗೂ ವಿಶಾಲ್ ಪಾತ್ರರಾಗಿದ್ದರು. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಸದ್ಯ ವಿಶಾಲ್ ಅವರು ಲಾಠಿ ಎಂಬ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸುನೈನಾ ಅವರು ವಿಶಾಲ್ ಗೆ ನಾಯಕಿಯಾಗಿ ನಟಿಸಿದ್ದಾರೆ. ರಮಣ ಮತ್ತು ನಂದು ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ- ಪೊಲೀಸರ ತನಿಖೆಯಿಂದ ಬಯಲು

    ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ- ಪೊಲೀಸರ ತನಿಖೆಯಿಂದ ಬಯಲು

    ಮಂಗಳೂರು: ಮಾರ್ಗನ್ಸ್ ಗೇಟ್‍ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದಕ್ಕೆ ಮತಾಂತರ ಯತ್ನವೇ ಕಾರಣ ಎಂದು ಮಂಗಳೂರು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಮಂಗಳೂರಿನ ಮಾರ್ಗನ್ಸ್ ಗೇಟ್‍ನಲ್ಲಿ ಒಂದೇ ಕುಟುಂಬದ ನಾಗೇಶ್ ಶೇರಿಗುಪ್ಪಿ(30), ಪತ್ನಿ ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್(4) ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಟುಂಬದ ಸಾವಿಗೆ ನಿಜವಾದ ಕಾರಣ ತಿಳಿಯಲು ಮಂಗಳೂರು ಪೊಲೀಸರು ತನಿಖೆ ನಡೆಸಿದ್ದಾರೆ. ಕುಟುಂಬದವರ ಸಾವಿಗೆ ಮತಾಂತರ ಯತ್ನವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಕಾರಣವೇನು?
    ವಿಜಯಲಕ್ಷ್ಮಿ ಎಂಬಾಕೆ ಮುಸ್ಲಿಂ ಮಹಿಳೆ ನೂರ್ ಜಹಾನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನೂರ್ ಜಹಾನ್ ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿದ್ದು, ವಿಜಯಲಕ್ಷ್ಮಿ ಮತ್ತು ಆಕೆಯ ಪತಿ ನಾಗೇಶ್ ನಡುವಿನ ಜಗಳವನ್ನು ಅಡ್ವಾಂಟೇಜ್ ಆಗಿ ತೆಗೆದುಕೊಂಡಿದ್ದಾರೆ. ನೀನು ನಿನ್ನ ಗಂಡನಿಗೆ ವಿಚ್ಛೇದನ ಕೊಟ್ಟು ನಮ್ಮ ಧರ್ಮಕ್ಕೆ ಮತಾಂತರವಾಗು, ನಂತರ ನಮ್ಮ ಧರ್ಮದಲ್ಲೇ ಒಂದು ಹುಡುಗನನ್ನು ನೋಡಿ ಮದುವೆ ಮಾಡಿಸುತ್ತೇನೆ ಎಂದು ಪುಸಲಾಯಿಸಿದ್ದಾರೆ.

    ಪ್ರತಿದಿನ ಕುಡಿದು ಬರುತ್ತಿದ್ದ ಪತಿ ಜೊತೆಗಿನ ಜಗಳದಿಂದ ರೋಸಿ ಹೋಗಿದ್ದ ವಿಜಯಲಕ್ಷ್ಮೀ, ನೂರ್ ಜಹಾನ್ ಮಾತಿಗೆ ಒಪ್ಪುಗೆ ನೀಡಿದ್ದರು. ವಿಜಯಲಕ್ಷ್ಮಿಗೆ ಗಂಡು ಹುಡುಕುವ ಕೆಲಸವನ್ನು ನೂರ್ ಜಹಾನ್ ಆರಂಭಿಸಿದ್ದರು. ನಾಗೇಶ್‍ಗೆ ಈ ವಿಚಾರ ತಿಳಿದಿದ್ದು, ವಿಜಯಲಕ್ಷ್ಮಿ ಜೊತೆಗೆ ಗಲಾಟೆ ಮಾಡಿದ್ದಾನೆ. ಈ ವೇಳೆ ಮಕ್ಕಳು ಮತ್ತು ಪತ್ನಿಯನ್ನು ಕೊಂದು ನಾಗೇಶ್ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

    ಘಟನೆಗೆ ಸಂಬಂಧಿಸಿದಂತೆ ನೂರ್ ಜಹಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

  • ಮತಾಂತರದಿಂದ ಬಂಜಾರ ಸಮಾಜ ರಕ್ಷಿಸಲು ಸಂತರ ನಡೆ ತಾಂಡಗಳ ಕಡೆ ಅಭಿಯಾನ: ಪಿ.ರಾಜೀವ್

    ಮತಾಂತರದಿಂದ ಬಂಜಾರ ಸಮಾಜ ರಕ್ಷಿಸಲು ಸಂತರ ನಡೆ ತಾಂಡಗಳ ಕಡೆ ಅಭಿಯಾನ: ಪಿ.ರಾಜೀವ್

    ಯಾದಗಿರಿ: ಅನ್ಯ ಧರ್ಮದವರು ಆಸೆಯನ್ನು ಹುಟ್ಟಿಸಿ ಮತಾಂತರ ಮಾಡೋದು ಅಪರಾಧ, ಇಂತಹ ಕೆಲಸಕ್ಕೆ ನಾವು ಬ್ರೇಕ್ ಹಾಕುವ ಕೆಲಸ ಮಾಡುತ್ತೇವೆ. ನಮ್ಮ ಬಂಜಾರ ಸಂಸ್ಕೃತಿ ಪರಂಪರೆ ಉಳಿಸುತ್ತೆವೆ. ಇದಕ್ಕಾಗಿ ಸಂತರ ನಡೆ ತಾಂಡಗಳ ಕಡೆ ಅಭಿಯಾನ ಆರಂಭಿಸಲಾಗಿದೆ ಎಂದು ಶಾಸಕ ಪಿ.ರಾಜೀವ್ ತಿಳಿಸಿದರು.

    ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ಬಡವರನ್ನು ಹಾಗೂ ದಲಿತರನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡಿಸುತ್ತಾರೆ. ಅದಕ್ಕಾಗಿ ಸಂತರ ನಡೆ ತಾಂಡಗಳ ಕಡೆ ಅಭಿಯಾನ ಆರಂಭಿಸಿಲಾಗಿದೆ ಎಂದರು. ಇದನ್ನೂ ಓದಿ: ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

    ಮೂಢನಂಬಿಕೆ ಬಿತ್ತಿ, ಆಸೆ ತೋರಿಸುತ್ತಾರೆ, ಮದುವೆ ಮಾಡುತ್ತೇವೆ, ನೌಕರಿ ಕೊಡಿಸುತ್ತೇವೆ ಬನ್ನಿ ಎಂದು ಹೇಳುತ್ತಾರೆ. ಕೆಲ ಕ್ರಿಶ್ಚಿಯನ್ ಮಷಿನರಿಗಳು ಈ ಕೆಲಸ ಮಾಡುತ್ತಿದ್ದು, ಇಂತಹ ಕೆಲಸ ಆಗಬಾರದು. ಆಸೆ ಆಕಾಂಕ್ಷೆ ತೋರಿಸಿ ಮತಾಂತರ ಮಾಡಿಸುವುದು ಕಾನೂನು ಬಾಹಿರ, ಇಂತಹವರ ವಿರುದ್ಧ ಕೇಸ್ ಹಾಕಬೇಕು ಎಂದು ಹೇಳಿದರು.

  • ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

    ಹಿಂದೂ ಬಾಲಕಿಯ ಬಲವಂತದ ಮತಾಂತರ – ಮದ್ವೆಯಾದ ಪಾಕ್ ವ್ಯಕ್ತಿ

    ಇಸ್ಲಾಮಾಬಾದ್: ಹಿಂದೂ ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾಗಿರುವ ಘಟನೆ ಸಿಂಧ್ ಪ್ರಾಂತ್ಯದ ತಂಗ್ವಾನಿಯಲ್ಲಿ ನಡೆದಿದೆ.

    13 ವರ್ಷದ ಬಾಲಕಿಯನ್ನು ಬಹಲ್ಕನಿ ಬುಡಕಟ್ಟಿನ ನಿವಾಸಿಯೊಬ್ಬ ಅಪಹರಿದ್ದು, ಬರೆಲ್ವಿ ಮೌಲ್ವಿ ಮಿಯಾನ್ ಮಿಥೋ ಬಲವಂತವಾಗಿ ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಪಹರಣಕಾರನೊಂದಿಗೆ ವಿವಾಹ ಮಾಡಿದ್ದಾನೆ.

    ಮಾರ್ಚ್ 8 ರಂದು ಐವರು ಆಯುಧಗಳೊಂದಿಗೆ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯವರಿಗೆ ಬೆದರಿಸಿ ಬಾಲಕಿಯನ್ನು ಅಪಹರಿಸಿದ್ದಾರೆ. ಇದೀಗ ಮತಾಂತರಮಾಡಿ ಆಕೆಗೆ ಮದುವೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.

    ಹೆತ್ತವರ ಆಸೆಗೆ ವಿರುದ್ಧವಾಗಿ ನಾನು ಮದುವೆಯಾಗಿದ್ದೇನೆ. ಹೀಗಾಗಿ ನನ್ನ ಹೆತ್ತವರಿಗೆ ನನ್ನ ಮೇಲೆ ಕೋಪ ಇದೆ. ನನಗೆ 18 ವರ್ಷವಾಗಿದೆ. ನನಗೆ ರಕ್ಷಣೆ ಬೇಕೆಂದು ಎಂದು ಕೋರ್ಟ್ ಮುಂದೆ ಬಾಲಕಿ ಹೇಳಿಕೊಂಡಿದ್ದಾಳೆ.

    ಪೊಲೀಸರು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

  • ಹಣೆಯಲ್ಲಿರೋ ಕುಂಕುಮ ತೆಗೆದು ಮತಾಂತರವಾಗುವಂತೆ ಒತ್ತಡ – ಓರ್ವ ಅರೆಸ್ಟ್

    ಹಣೆಯಲ್ಲಿರೋ ಕುಂಕುಮ ತೆಗೆದು ಮತಾಂತರವಾಗುವಂತೆ ಒತ್ತಡ – ಓರ್ವ ಅರೆಸ್ಟ್

    – ಬೆಂಗಳೂರಿನಲ್ಲೊಂದು ಲವ್ ಜಿಹಾದ್ ಪ್ರಕರಣ

    ಬೆಂಗಳೂರು: ಲವ್ ಜಿಹಾದ್ ನಡೆಸಿದ್ದ ಹಿನ್ನೆಲೆಯಲ್ಲಿ ಸಿ.ಕೆ ಅಚ್ಚುಕಟ್ಟು ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ಶಬ್ಬೀರ್ ಅಹಮ್ಮದ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ರಿಜ್ವಾನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಪ್ರಮುಖ ಆರೋಪಿಯಾಗಿರುವ ರಿಜ್ವಾನ್ 2018ರಲ್ಲಿ ಹಿಂದೂ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಈ ಪರಿಚಯ ಪ್ರೀತಿಗೆ ತಿರುಗಿದ್ದು, 2020ರ ನವೆಂಬರ್ ತಿಂಗಳಲ್ಲಿ ಇಬ್ಬರೂ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.

    ಮದುವೆಯ ಬಳಿಕ ರಿಜ್ವಾನ್, ಹಣೆಯಲ್ಲಿರುವ ಕುಂಕುಮ ತೆಗೆದು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಪೀಡಿಸಲು ಆರಂಭಿಸಿದ್ದಾನೆ. ಅಲ್ಲದೆ ದುಬೈನಲ್ಲಿ ನಿನಗೆ ಕೆಲಸ ಕೊಡಿಸುತ್ತೇನೆ. ಅಲ್ಲಿಯೇ ನಾವು ಸೆಟ್ಲ್ ಆಗೋಣ ಎಂದು ಯುವತಿಗೆ ಕಿರುಕುಳ ನೀಡುತ್ತಿದ್ದನು.

    ಆರೋಪಿಗಳಾದ ಶಬ್ಬಿರ್ ಮತ್ತು ರಿಜ್ವಾನ್ ಸಹೋದರರು. ಸದ್ಯ ಈ ಇಬ್ಬರ ವಿರುದ್ಧ ಯುವತಿ ಮೇಲೆ ಅತ್ಯಾಚಾರಗೈದ ಆರೋಪವಿದೆ. ಈ ಸಂಬಂಧ ಸಿ.ಕೆ ಅಚ್ಚುಕಟ್ಟು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಇಬ್ಬರೂ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

    ಇಬ್ಬರೂ ಹಿಂದೂ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಹುಡುಗಿಯರನ್ನ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ಅಲ್ಪಸಂಖ್ಯಾತ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಯ ಟೀಕೆಯ ನಡುವೆಯೇ ಅಪಹರಿಸಿದ ಎರಡೇ ದಿನದಲ್ಲಿಯೇ ಈ ಮತಾಂತರ ನಡೆದಿದೆ.

    ಹಿಂದೂ ಯುವತಿಯನ್ನು ಏಕ್ತಾ ಕುಮಾರಿ ಎಂದು ಗುರುತಿಸಲಾಗಿದೆ. ಇಸ್ಲಾಂ ಧರ್ಮದ ಧರ್ಮಗುರು ಎಂದು ಗುರುತಿಸಿಕೊಂಡಿರುವ ಮಿಯಾನ್ ಅಬ್ದುಲ್ ಖಲೀಕ್ ಎಂಬಾತ ತನಗೆ ಪಾಕಿಸ್ತಾನದ ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ ಎಂದು ನಂಬಿಸಿ ಬಲವಂತವಾಗಿ ಇಸ್ಲಾಂಗೆ ಮಾತಾಂತರಿಸಿದ್ದಾನೆ.

    ಬಲೂಚಿಸ್ತಾನದ ಸಿಬಿ ನಗರದ ನಿವಾಸಿಯಾಗಿರುವ ಏಕ್ತಾ ಕುಮಾರಿಯು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಅನಿಲ್ ಕುಮಾರ್ ಎಂಬವರ ಪುತ್ರಿಯಾದ ಏಕ್ತಾಳನ್ನು ಸ್ಥಳೀಯ ಮುಸ್ಲಿಂ ಯಾರ್ ಮೊಹಮ್ಮದ್ ಭೂಟ್ಟೊ ಅಪಹರಿಸಿದ್ದ ಎಂದು ವರದಿಯಾಗಿತ್ತು.

    ಏಕ್ತಾಳನ್ನು ಭೂಟ್ಟೊ ಬಲವಂತವಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ದಾರಕಿಯಲ್ಲಿರುವ ದರ್ಗಾ ಎ ಆಲಿಯಾ ಭಾರ್ಚುಂಡಿ ಷರೀಪ್‍ಗೆ ಕರೆದುಕೊಂಡು ಹೋಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ. ನಂತರ ಹಿಂದೂ ಯುವತಿಯ ಹೆಸರನ್ನು ಆಯಿಷಾ ಎಂದು ಬದಲಾಯಿಸಿ ಮದುವೆ ಆಗಿದ್ದಾನೆ.

    ಈ ಹಿಂದೆ ಧನಿ ಕೊಹ್ಲಹಿ ಎಂಬ ಹಿಂದೂ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ಬಲವಂತವಾಗಿ ಜುಮಾ ಬಜಾರ್ ಎಂಬ ಪ್ರದೇಶದಿಂದ ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದ. ಈ ಪ್ರಕರಣದ ನಂತರ ಧನಿ ಕೊಹ್ಲಹಿ ಪೋಷಕರು ಮಗಳನ್ನು ಹುಡುಕಿದ್ದರು ಆಕೆ ಎಲ್ಲಿದ್ದಾಳೆಂಬ ಸಣ್ಣ ಸುಳಿವು ಸಿಕ್ಕಿರಲಿಲ್ಲ ಮತ್ತು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಯಾವುದೇ ಪ್ರಕರಣ ಕೂಡ ದಾಖಲಿಸಿಲ್ಲ.

    ಈ ಎಲ್ಲಾ ಪ್ರಕರಣಗಳಿಂದಾಗಿ ಕಂಗಾಲಾಗಿರುವ ಪಾಕಿಸ್ತಾನದಲ್ಲಿರುವ ಹಿಂದೂಗಳು ಮತ್ತೆ ಎರಡು ದಿನಗಳಲ್ಲಿ ಒಟ್ಟೊಟ್ಟಿಗೆ ನಡೆದ ಘಟನೆಯಿಂದ ಗಾಬರಿಗೊಂಡಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ಇರ್ಮಾನ್ ಖಾನ್ ಸರ್ಕಾರ ಮತ್ತು ಬಹು ಸಂಖ್ಯಾತ ಮುಸ್ಲಿಂರಿಂದ ಕೂಡಿರುವ ಪಾಕಿಸ್ತಾನ್ ದೇಶ, ಅಲ್ಪಸಂಖ್ಯಾತರಿಗೆ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಗೆ ಮತ್ತೆ ದ್ರೋಹ ಬಗೆದಂತಾಗಿದೆ ಎಂದು ಪಾಕಿಸ್ತಾನ ಹಿಂದೂಗಳು ಆಕ್ರೋಶ ಹೊರ ಹಾಕಿದ್ದಾರೆ.

    ಈ ಎರಡೂ ಪ್ರಕರಣಗಳನ್ನು ನೋಡಿದ ನಂತರ ಸ್ಥಳೀಯ ಆಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಮೌನಹರಿಸಿ ಆರೋಪಿಯ ವಿರುದ್ಧ ಕೇಸು ದಾಖಲಿಸಿಕೊಳ್ಳಲು ವಿಫಲವಾಗಿದೆ. ಹಲವು ಪ್ರಕರಣಗಳನ್ನು ಗಮನಿಸಿದಾಗ ಹಿಂದೂ ಯುವತಿಯರನ್ನು ಮದುವೆಯಾದ ನಂತರ ಅವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಕೊಳ್ಳಲಾಗುತ್ತದೆ ಅಥವಾ ವೇಶ್ಯಾವಾಟಿಕೆಗೆ ಮಾರಲಾಗುತ್ತದೆ ಎಂದು ವರದಿಯಾಗಿದೆ.

    ಮುಸ್ಲಿಂ ಪಾದ್ರಿಯಾಗಿ ಗುರುತಿಸಿಕೊಂಡಿದ್ದ ಭೂಟ್ಟೊ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ದಾರಕಿಯಲ್ಲಿರುವ ದರ್ಗಾ ಎ ಆಲಿಯಾ ಭಾರ್ಚುಂಡಿ ಷರೀಪ್ ಮಸೀದಿಯಲ್ಲಿರುತ್ತಿದ್ದ. ಐಶಾರಾಮಿ ಜೀವನ ನಡೆಸುತ್ತಿದ್ದ ಭೂಟ್ಟೊ ಪ್ರತಿದಿನ ಬೆಂಗಾವಲುಗಾರರನ್ನು ತನ್ನ ಜೊತೆಯಾಗಿಸಿಕೊಂಡು ಪ್ರಯಾಣಿಸುತ್ತಿದ್ದ. 2008ರಿಂದ 2013ರ ವರೆಗೆ ಪಾಕಿಸ್ತಾನದ ರಾಷ್ಟ್ರೀಯಾ ಅಸೆಂಬ್ಲಿಯಲ್ಲಿ ಸದಸ್ಯನಾಗಿದ್ದ.

    ನಂತರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಜೊತೆ ಕೈಜೋಡಿಸಿ 200 ಹಿಂದೂ ಯುವತಿಯರನ್ನು ಮತಾಂತರಗೊಳಿಸಿರುವುದಾಗಿ ಹೇಳಿಕೆ ಕೊಟ್ಟಿದ್ದ. 2012 ರಲ್ಲಿ ಸ್ಥಳೀಯ ಶಿಕ್ಷಕನ ಮಗಳಾದ ಹಿಂದೂ ಯುವತಿ ರಿಂಕಲ್ ಕುಮಾರಿ ಎಂಬ ಯುವತಿಯನ್ನು ಮತಾಂತರಗೊಳಿಸಿ ಮೊದಲ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ.

  • ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಿದ ಡಿವೈಎಸ್‍ಪಿ

    ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಿದ ಡಿವೈಎಸ್‍ಪಿ

    ಚಾಮರಾಜನಗರ: ಮತಾಂತರ ವಿರೋಧಿ ಹೋರಾಟ ಸಮಿತಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ನಗರ ಮಂಡಲದ ವತಿಯಿಂದ ಇಂದು ಚಾಮರಾಜನಗರದಲ್ಲಿ ಮತಾಂತರ ವಿರೋಧಿಸಿ ಜಾಗೃತಿ ಜಾಥಾ ನಡೆಯಿತು.

    ನಗರದ ಮಾರೀಗುಡಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮತಾಂತರ ನಿಲ್ಲಿಸುವಂತೆ ಘೋಷಣೆ ಕೂಗುತ್ತಾ ಅಲ್ಲಿಂದ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿ-209 ಹಾದುಹೋಗಿರುವ ಶ್ರೀ ಭುವನೇಶ್ವರಿ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ರಚಿಸಿ ಮತಾಂತರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ಬಳಿಕ ವಾಹನದಲ್ಲಿ ಮೈಕ್ ಕಟ್ಟಿಕೊಂಡು ಘೋಷಣೆ ಕೂಗುತ್ತಾ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹೊರಟ ಜಾಗೃತಿ ಜಾಥಾ ಜಿಲ್ಲಾಡಳಿತದ ಭವನ ತಲುಪಲು ಮುಂದಾಯಿತು. ಈ ವೇಳೆ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲೇ ಮೈಕ್ ಮೂಲಕ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರನ್ನು ಹಾಗೂ ಮೈಕ್ ಕಟ್ಟಿದ್ದ ವಾಹನವನ್ನು ತಡೆಯುತ್ತಿದ್ದಂತೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ಆರಂಭವಾಯಿತು.

    ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ಬೇರೆ ಸ್ವರೂಪ ಪಡೆದುಕೊಳ್ಳುತ್ತಿರುವ ಪರಿಸ್ಥಿತಿಯನ್ನು ಅರಿತ ಚಾಮರಾಜನಗರ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಪ್ರತಿಭಟನಾಕಾರರಿಂದ ಮೈಕ್ ಕಿತ್ತುಕೊಂಡು ರಾಷ್ಟ್ರಗೀತೆ ಆರಂಭಿಸಿದರು. ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಕೂಗಾಟವನ್ನು ಬಿಟ್ಟು ಡಿವೈಎಸ್‍ಪಿ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು.

    ಬಳಿಕ ಪ್ರತಿಭಟನಾಕಾರರು ಜಿಲ್ಲಾಡಳಿತ ಪ್ರವೇಶದ್ವಾರದ ಒಳಗೆ ಪ್ರವೇಶಿಸಿ ರಸ್ತೆ ಬದಿಯಲ್ಲೇ ಕುಳಿತು ಮತಾಂತರಿಗಳು ಹಾಗೂ ಜಿಲ್ಲಾಡಳಿತದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.