Tag: controversial statement

  • ವಿವಾದಾತ್ಮಕ ಟ್ವೀಟ್ – ಹರಿಯಾಣ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ವಜಾ

    ವಿವಾದಾತ್ಮಕ ಟ್ವೀಟ್ – ಹರಿಯಾಣ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ವಜಾ

    ಚಂಡೀಗಢ: ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಕುರಿತು 2017ರಲ್ಲಿ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಹರಿಯಾಣದ ಐಟಿ ಸೆಲ್ ಮುಖ್ಯಸ್ಥ ಅರುಣ್ ಯಾದವ್‌ನನ್ನು ಬಿಜೆಪಿ ಪಕ್ಷದಿಂದ ವಜಾ ಮಾಡಿದೆ.

    ಇತ್ತೀಚೆಗೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು 4 ವರ್ಷಗಳ ಹಿಂದಿನ ಟ್ವೀಟ್‌ಗೆ ಸಂಬಂಧಿಸಿದಂತೆ ಬಂಧಿಸಿದ ಹಿನ್ನೆಲೆ ಅರುಣ್ ಯಾದವ್ ಬಂಧನಕ್ಕೂ ಸಾಮಾಜಿಕ ಮಾಧ್ಯಮಗಳಲ್ಲಿ ಕರೆಗಳು ಬಂದಿತ್ತು. ಈ ಒತ್ತಡದ ನಡುವೆ ಬಿಜೆಪಿ ಗುರುವಾರ ಸಂಜೆ ಹರಿಯಾಣದ ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅವರನ್ನು ತೆಗೆದುಹಾಕಿದೆ. ಇದನ್ನೂ ಓದಿ: 51 ರನ್‌ ಚಚ್ಚಿ 4 ವಿಕೆಟ್‌ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು

    ಟ್ವಿಟ್ಟರ್‌ನಲ್ಲಿ ಅರುಣ್ ಯಾದವ್‌ನನ್ನು ಬಂಧಿಸಿ ಎಂಬ ಕರೆ ಮೂಲಕ #ArrestArunYadav ಟ್ರೆಂಡಿಂಗ್‌ನಲ್ಲಿದೆ. ಈ ಹ್ಯಾಶ್ ಟ್ಯಾಗ್ ಮೇ ತಿಂಗಳಿನಿಂದ ಹಾಗೂ ಜುಬೇರ್ ಬಂಧನದ ಬಳಿಕ ತೀವ್ರವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಹ್ಯಾಶ್‌ಟ್ಯಾಗ್‌ನಲ್ಲಿ 50,000 ಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ – 10 ಮಂದಿಗೆ ಗಾಯ

    ಕಳೆದ ತಿಂಗಳು ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು ತನ್ನ ಸ್ಥಾನದಿಂದ ಬಿಜೆಪಿ ಕಿತ್ತು ಹಾಕಿತ್ತು. ಬಳಿಕ ವಿವಾದಾತ್ಮಕ ಕಾಮೆಂಟ್ ಹಾಗೂ ಟ್ವೀಟ್ ಮಾಡಿದ್ದ ಮತ್ತೊಬ್ಬ ಕಾರ್ಯಕಾರಿ ನವೀನ್ ಜಿಂದಾಲ್ ಅವರನ್ನು ಬಿಜೆಪಿ ಹೊರ ಹಾಕಿತ್ತು.

    Live Tv
    [brid partner=56869869 player=32851 video=960834 autoplay=true]

  • ರೇಣುಕಾಚಾರ್ಯ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಹೆಚ್ ಆಂಜನೇಯ

    ರೇಣುಕಾಚಾರ್ಯ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಹೆಚ್ ಆಂಜನೇಯ

    ಕೊಪ್ಪಳ: ಹೆಣ್ಣು ಮಕ್ಕಳ ಉಡುಪುಗಳೇ ಪ್ರಚೋದನೆಗೆ ಕಾರಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಚಿವ ಎಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ.

    ಕಾಲೇಜು ಮುಂದೆ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಅಥವಾ ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಎಂದು. ರೇಣುಕಾಚಾರ್ಯ ಬಹಳ ಒಳ್ಳೇ ಮಾತು ಹೇಳಿದ್ದಾರೆ ಎಂದು ಆಂಜನೇಯ ಪರೋಕ್ಷವಾಗಿ ಹಿಜಬ್‍ಗೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ: ರೇಣುಕಾಚಾರ್ಯ

    ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುತ್ತಾರೆ ಹೀಗಾಗಿ ಅವರನ್ನು ಯಾರೂ ನೋಡಲ್ಲ. ಮೊದಲು ಚುನಾವಣೆಗೆ ಗಲಾಟೆ ನಡೆಯುತ್ತಿತ್ತು. ಇದೀಗ ಕಾಲೇಜು ಮಕ್ಕಳು ಬೀದಿಗಿಳಿದಿದ್ದಾರೆ. ಮಕ್ಕಳ ಕೈಯಲ್ಲಿ ಕಲ್ಲು, ಚಾಕು ಕೊಟ್ಟಿರುವುದು ಬಿಜೆಪಿಯವರು ಎಂದು ಹೇಳಿದರು.

    ನಾವು ಎತ್ತಿ ಕಟ್ಟೋ ಕೆಲಸ ಮಾಡಲ್ಲ. ಇದು ಬಿಜೆಪಿಯವರು ಮಾಡಿದ್ದು. ನಾವು ಅವರ ಹಿಂದಿದ್ದರೆ ಅವರಿಗೆ ಕಾಂಗ್ರೆಸ್ ಧ್ವಜ ಕೊಡುತ್ತಿದ್ದೆವು. ಹಿಜಬ್ ಗಲಾಟೆಗೆ ಬಿಜೆಪಿ ಕಾರಣ ಎಂದರು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ ರೇಣುಕಾಚಾರ್ಯ

    ಮೊದಲು ಇದ್ದ ಪದ್ಧತಿಯೇ ಮುಂದೆಯೂ ಇರಲಿ. ಅವರು ನೂರಾರು ವರ್ಷಗಳಿಂದ ಹೇಗೆ ಇದ್ದರು ಹಾಗೇ ಇರಲಿ. ಬಟ್ಟೆ ಇದನ್ನೇ ಹಾಕಬೇಕು ಎನ್ನುವುದು ಯಾವ ನ್ಯಾಯ? ಬಿಜೆಪಿಯವರು ಶಾಲು, ಪೇಟಾ ವಿತರಣೆ ಮಾಡಿದ್ದಾರೆ ಎಂದು ಆಂಜನೇಯ ಆರೋಪಿಸಿದರು.

  • ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ- ಶ್ವೇತಾ ತಿವಾರಿ ವಿವಾದಾತ್ಮಕ ಹೇಳಿಕೆ

    ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ- ಶ್ವೇತಾ ತಿವಾರಿ ವಿವಾದಾತ್ಮಕ ಹೇಳಿಕೆ

    ಭೋಪಾಲ್: ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಅವರು ಹೇಳಿಕೆಯೊಂದನ್ನು ನೀಡಿ ಇದೀಗ ವಿವಾದಕ್ಕೀಡಾಗಿದ್ದಾರೆ. ಈ ಹೇಳಿಕೆ ಸಂಬಂಧ ತನಿಖೆ ನಡೆಸುವಂತೆ ಭೋಪಾಲ್ ಕಮಿಷನರ್‍ಗೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.

    ತಮ್ಮ ಮುಂಬರುವ ವೆಬ್ ಸೀರಿಸ್ ವೇಳೆ ನಟಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಟಿಯ ಹೇಳಿಕೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪರ ವಿರೋಧ ಕಾಮೆಂಟ್ ಗಳು ಬರುತ್ತಿವೆ.

    ಶ್ವೇತಾ ಹೇಳಿದ್ದೇನು..?
    ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣ ಖ್ಯಾತಿಯ ಸೌರಭ್ ರಾಜ್ ಜೈನ್ ಜೊತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯಲ್ಲಿ ಶ್ವೇತಾ ತಿವಾರಿ ನಟಿಸಿದ್ದಾರೆ. ಈ ವೆಬ್ ಸೀರಿಸ್ ಪ್ರಮೋಷನ್ ಇತ್ತೀಚೆಗೆ ಭೋಪಾಲ್ ನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶ್ವೇತಾ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಶ್ವೇತಾ, ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು, ದೇವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಗನ ವಿಚ್ಛೇದನಕ್ಕೆ ನಿಜವಾದ ಕಾರಣವನ್ನು ಬಹಿರಂಗ ಪಡಿಸಿದ ನಾಗಾರ್ಜುನ

    ತನಿಖೆಗೆ ಸೂಚನೆ:
    ನಟಿಯ ಈ ಹೇಳಿಕೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಭೋಪಾಲ್ ಕಮಿಷನರ್ ಗೆ ತ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಶ್ವೇತಾ ತಿವಾರಿ ಅವರು ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಅಲ್ಲದೆ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ನನಗೆ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಬೆಂಗಳೂರು: ಅತ್ಯಾಚಾರದ ಕುರಿತು ಶಾಸಕ ರಮೇಶ್‌ ಕುಮಾರ್‌ ಅವರು ಬೆಳಗಾವಿ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್‌ ನಾಯಕರೇ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

    ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ ಎಂದು ರಮೇಶ್‌ ಕುಮಾರ್‌ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್‌ ನಾಯಕರೇ ಕಿಡಿಕಾರಿದ್ದಾರೆ. ರಮೇಶ್‌ ಕುಮಾರ್‌ ಅವರು ಹೆಣ್ಣಿನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್‌ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಎಚ್ಚರಿಕೆಯಿಂದ ಮಾತಾಡ್ತೀನಿ- ಕ್ಷಮೆಯಾಚಿಸಿದ ರಮೇಶ್ ಕುಮಾರ್

    ಇನ್ನು ಕೆಪಿಸಿಸಿ ರಾಮಲಿಂಗ ರೆಡ್ಡಿ ಅವರು ಕೂಡ ರಮೇಶ್‌ ಹೇಳಿಕೆಗೆ ಅಪಸ್ವರ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ನೀಡಿದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಶಾಸಕರು, ಸಚಿವರು ಒತ್ತಾಯಿಸಿದ್ದರು. ನಂತರ ರಮೇಶ್‌ ಕುಮಾರ್‌ ಟ್ವೀಟ್‌ ಮಾಡಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ರಿಲೇಶನ್‌ಶಿಪ್‌ನಲ್ಲಿ ಡಿಸ್ಟೆನ್ಸ್ ಹೆಚ್ಚಾಗಿದ್ದಕ್ಕೆ ಪ್ರಿಯಕರನಿಗೆ ಗುಂಡಿಟ್ಟ ಕಿರಾತಕಿ

  • ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ನೆಹರು ಕುಟುಂಬದ ಕೊಡುಗೆ: ಸಾಧ್ವಿ ಪ್ರಾಚಿ

    ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ನೆಹರು ಕುಟುಂಬದ ಕೊಡುಗೆ: ಸಾಧ್ವಿ ಪ್ರಾಚಿ

    ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ, ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ಎಲ್ಲವೂ ಸಮಾಜಕ್ಕೆ ನೆಹರು ಕುಟುಂಬದ ಕೊಡುಗೆ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಾಚಿ, ಭಾರತ ಅತ್ಯಾಚಾರದ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದಾರೆ. ನಕ್ಸಲಿಸಂ, ಭಯೋತ್ಪಾದನೆ, ಅತ್ಯಾಚಾರಗಳೆಲ್ಲ ನೆಹರು ಕುಟುಂಬದಿಂದಲೇ ಬಂದಿದ್ದು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಓದಿ: ಭಾರತ ವಿಶ್ವದ ಅತ್ಯಾಚಾರಗಳ ರಾಜಧಾನಿ: ರಾಹುಲ್ ಗಾಂಧಿ

    ನಮ್ಮ ದೇಶ ರಾಮ, ಕೃಷ್ಣನಂತವರು ಜನಿಸಿದ ಪುಣ್ಯಭೂಮಿ. ರಾಹುಲ್ ಗಾಂಧಿ ಹೇಳಿರುವುದು ಸರಿಯಲ್ಲ. ರಾಮ ಮತ್ತು ಕೃಷ್ಣನ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಹಾಳು ಮಾಡಿದ ನೆಹರು ಅವರೇ ಅತಿ ದೊಡ್ಡ ಅತ್ಯಾಚಾರಿ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಖಂಡಿಸಿ ಧರಣಿ ನಡೆಸುತ್ತಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ಮಾಡಿದ ಪ್ರಾಚಿ ಅಖಿಲೇಶ್ ಅಧಿಕಾರದಲ್ಲಿದ್ದಾಗ ಅತ್ಯಾಚಾರಿಗಳನ್ನೆಲ್ಲ ಕಾಪಾಡಿ, ಈಗ ಪ್ರತಿಪಕ್ಷದಲ್ಲಿ ಇದ್ದೇನೆ ಎಂದು ಧರಣಿ ಮಾಡುತ್ತಿದ್ದಾರೆ ಎಂದರು.

    ಹೈದರಾಬಾದ್‍ನ ಮಹಿಳಾ ಪಶುವೈದ್ಯಾಧಿಕಾರಿ ದಿಶಾ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್ ನಲ್ಲಿ ಕೊಂದ ಹೈದರಾಬಾದ್ ಪೊಲೀಸರನ್ನು ಸಾಧ್ವಿ ಪ್ರಾಚಿ ಶ್ಲಾಘಿಸಿದರು. ಉನ್ನಾವೋ ಸಂತ್ರಸ್ತೆಯ ಸಾವಿಗೆ ಕಾರಣವಾದವರ ಮೇಲೆ ಕೂಡ ಇದೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

  • ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ: ರಾಮ್ ದೇವ್

    ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ: ರಾಮ್ ದೇವ್

    ಉಡುಪಿ: ಗೋವು ತಿನ್ನುವವರು ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ ಎಂದು ಯೋಗ ಗುರು ಬಾಬಾ ರಾಮ್ ದೇವ್ ಚರ್ಚಾಸ್ಪದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಸಂತ ಸಮ್ಮೇಳನ ನಡೆದಿದ್ದು, ಸಭೆಯಲ್ಲಿ ಅಷ್ಟ ಮಠದ ಸ್ವಾಮೀಜಿಗಳು ಸೇರಿದಂತೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯ 18 ಸಂತರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ರಾಮ್ ದೇವ್, ಗೋವು ಭಕ್ಷಕರೇ, ಮಾಂಸ ತಿನ್ನಲೇ ಬೇಕಂದರೆ ತಿನ್ನಿ. ಆದರೆ ಗೋವನ್ನು ಮಾತ್ರ ತಿನ್ನಬೇಡಿ. ಕೋಳಿ, ಮೀನು, ಕುದುರೆ, ಕತ್ತೆ, ನಾಯಿ, ಏನಾದರೂ ತಿನ್ನಿ ಎಂದು ಹೇಳಿದರು.

    ಗೋವು ತಾಯಿಗೆ ಸಮಾನ. ಅದನ್ನು ತಿನ್ನುತ್ತಿರಿ ಅಂದ್ರೆ ನಿಮ್ಮ ವೃದ್ಧ ತಂದೆಯನ್ನು ತಿನ್ನಲು ಹೇಸಲ್ಲ. ಭಾರತೀಯ ಮುಸಲ್ಮಾನರಿಗೆ ಕ್ರೂರ ಮೊಘಲರ ಆಡಳಿತ ಆದರ್ಶವಾಗಬಾರದು. ಭಾರತೀಯ ಮುಸಲ್ಮಾನರು ನಮ್ಮವರೇ, ಗೋಹತ್ಯಾ ನಿಷೇದ ಬೆಂಬಲಿಸಬೇಕು. ಅಕ್ಬರ್, ಬಾಬರ್, ಹುಮಾಯೂನ್, ಔರಂಗಜೇಬನ ಕಾಲದಲ್ಲೂ ಗೋ ಹತ್ಯಾ ನಿಷೇಧ ಇತ್ತು. ಆದರೆ ಈಗ ಯಾಕಿಲ್ಲ? ವಿರೋಧ ಯಾಕೆ ಎಂದು ಪ್ರಶ್ನಿಸಿದರು.

    ಗೋವು ನಮ್ಮ ತಾಯಿ ಎಂದು ಹೇಳಿದರೆ ಕೆಲವರು ಕೋಣವನ್ನು ತಂದೆ ಅಂತ ಅಪಹಾಸ್ಯ ಮಾಡುತ್ತಾರೆ. ಗ್ಲೋಬಲ್ ವಾರ್ಮಿಂಗ್ ಗೆ ಮಾಂಸಹಾರವೇ ಅತೀಮುಖ್ಯ ಕಾರಣ. ನನ್ನ ಮೇಲೆ ಸಾವಿರಕ್ಕೂ ಅಧಿಕ ಕೇಸ್ ಇದೆ. ಟುಕ್ಡೇ ಟುಕ್ಡೇ ಗ್ಯಾಂಗ್, ಕಮ್ಯುನಿಸ್ಟ್ ರು ಸರಣಿಯಾಗಿ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ನಾನು ಇದಕ್ಕೆಲ್ಲಾ ಭಯ ಪಡುವುದಿಲ್ಲ ಎಂದು ಬಾಬಾ ರಾಮ್ ದೇವ್ ಚರ್ಚಾಸ್ಪದ ಹೇಳಿಕೆ ಕೊಟ್ಟರು.

  • ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಮೇ 19ರಂದು ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು, ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ‍್ಯಾಲಿಯಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದ್ದಾರೆ. ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆಗೆ ತಮ್ಮ ಎಂಎನ್‍ಎಂ ಪಕ್ಷದ ಅಭ್ಯರ್ಥಿಯ ಪ್ರಚಾರದ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ವಿವಾದವನ್ನು ಸೃಷ್ಟಿಸಿದ್ದಾರೆ.

    ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಬಾಬ್ರಿ ಮಸೀದ್ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನು. ಅಲ್ಲದೆ ಒಳ್ಳೆಯ ಹೃದಯವಿರುವ ಮುಸಲ್ಮಾನರು ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡಲ್ಲ. ಈ ಬಗ್ಗೆ ಅವರು ಅವರ ಶ್ರೇಷ್ಠ ಗ್ರಂಥವನ್ನು ಮುಟ್ಟಿ ಹೇಳುತ್ತಾರೆ. ತ್ರಿವರ್ಣ ಧ್ವಜವೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಆದರೆ ತ್ರಿವರ್ಣದಲ್ಲಿ ಕೇವಲ ಒಂದು ಬಣ್ಣ ಉಳಿದ ಬಣ್ಣಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವಂತೆ ಆಗಬಾರದು. ಒಂದು ವೇಳೆ ಈ ರೀತಿಯಾದಲ್ಲಿ ನಾವು ಅದನ್ನು ತಡೆಯಬೇಕು. ದೇಶವನ್ನು ಒಡೆಯಲು ಪ್ರಯತ್ನಿಸುವ ಗುಂಪನ್ನು ಅಥವಾ ವ್ಯಕ್ತಿಯನ್ನು ಅಧಿಕಾರದಿಂದ ಇಳಿಸಬೇಕು ಎಂದರು.

    ಕಮಲ್‍ಹಾಸನ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದಾಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ, ಅಲ್ಲಿ ಜನಮತಗಣನೆ ನಡೆಯಲಿ ಎಂದು ಆಗ್ರಹಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಬಳಿಕ ಎಲ್ಲ ರಾಜಕಾರಣಿಗಳಂತೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು.

  • ಬ್ರಾಹ್ಮಣರನ್ನು ಹೀಯಾಳಿಸಿ ಕ್ಷಮೆ ಕೇಳಿದ ಶಾಸಕ ಆನಂದ್ ನ್ಯಾಮಗೌಡ

    ಬ್ರಾಹ್ಮಣರನ್ನು ಹೀಯಾಳಿಸಿ ಕ್ಷಮೆ ಕೇಳಿದ ಶಾಸಕ ಆನಂದ್ ನ್ಯಾಮಗೌಡ

    ಬಾಗಲಕೋಟೆ: ಜಮಖಂಡಿ ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಆನಂದ್ ನ್ಯಾಮಗೌಡ ಅವರು ಅಲ್ಪಸಂಖ್ಯಾತರನ್ನು ಒಲೈಸಲು ಹೋಗಿ ಬ್ರ್ರಾಹ್ಮಣರನ್ನು ಹೀಯಾಳಿಸಿ ಬಳಿಕ ಕ್ಷಮೆಯಾಚಿಸಿದ ಘಟನೆ ಇಂದು ನಡೆದಿದೆ.

    ಜಮಖಂಡಿಯಲ್ಲಿ ಇಂದು ನಡೆದ ಅಲ್ಪಸಂಖ್ಯಾತ ಸಮುದಾಯದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಆನಂದ್ ನ್ಯಾಮಗೌಡ, 1990 ರಲ್ಲಿ ನಮ್ಮ ತಂದೆ ಸಿದ್ದು ನ್ಯಾಮಗೌಡ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶಕ್ಕೆ ಚಿರಪರಿಚಿತರಾಗಿದ್ರು. ಸದ್ಯ ನಾನು ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿ ಶಾಸಕನಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಅವರನ್ನು ಸೋಲಿಸಿ ಇಂದು ಅಧಿಕಾರದಲ್ಲಿದ್ದೇನೆ ಎಂದು ವ್ಯಂಗ್ಯವಾಡಿದ್ದರು.

    ಆನಂದ್ ನ್ಯಾಮಗೌಡರ ಹೇಳಿಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ರಾಹ್ಮಣ ಸಮಾಜದವರಿಂದ ಆನಂದ್ ನ್ಯಾಮಗೌಡರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿತ್ತು. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದ್ದು, ಪ್ರಸಾರವಾದ ಬೆನ್ನಲ್ಲೇ ಶಾಸಕರು ಕ್ಷಮೆ ಕೋರಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, `ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನಗಿಂತ ಮೊದಲು ಭಾಷಣ ಮಾಡಿದವರು ಹೇಳಿದ ಮಾತನ್ನು ನಾನು ಮತ್ತೊಮ್ಮೆ ಹೇಳಿದ್ದೆ ಅಷ್ಟೆ. ಬ್ರಾಹ್ಮಣರನ್ನ ಸೋಲಿಸೋದು ನನ್ನ ಉದ್ದೇಶವಲ್ಲ ಚುನಾವಣೆ ಗೆಲ್ಲೋದು ನನಗೆ ಮುಖ್ಯವಾಗಿತ್ತು ಎಂದು ಸ್ಪಷ್ಟ ಪಡೆಸಲು ಆ ಮಾತು ಹೇಳಿದ್ದೆ. ಎಲ್ಲ ಸಮುದಾಯವನ್ನು ನಾವು ಸಮನಾಗಿ ನೋಡುತ್ತೇವೆ. ನನ್ನ ಹೇಳಿಕೆಯಿಂದ ಬ್ರಾಹ್ಮಣ ಸಮಾಜದವರಿಗೆ ನೋವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ ಎಂದು ಆನಂದ್ ನ್ಯಾಮಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

    ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

    ಮಂಗಳೂರು: ಗೋವುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಮನೆ ಮನೆಯ ಹೆಂಗಸರು ತಲವಾರುಗಳನ್ನು ಹಿಡಿದುಕೊಂಡು ಉತ್ತರ ನೀಡಲು ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮುಖಂಡ ಮುರಳಿಕೃಷ್ಣ ಹಸಂತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ವಾಮಂಜೂರಿನಲ್ಲಿ ನಡೆದ ಗೋವು ಕಳ್ಳತನ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೋವು ಕಳ್ಳತನ ಮಾಡುವ ಒಬ್ಬ ಮತಾಂಧನಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಮಹಿಳೆಯರನ್ನು ತಯಾರು ಮಾಡಲು ಹಿಂದೂ ಸಮಾಜ ಶ್ರಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಗೋವುಗಳ ರಕ್ತ ಭೂಮಿಗೆ ಬಿದ್ದರೆ, ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ಆಗುತ್ತದೆ. ಕೊನೆಗೆ ರಕ್ತಪಾತ ಆಯಿತು ಅಂತಾ ನಮ್ಮನ್ನು ದೂರಬೇಡಿ ಎಂದು ಹೇಳಿದ್ದಾರೆ.

    ಗೋವಿನ ರಕ್ಷಣೆಗಾಗಿ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಒಬ್ಬ ಹಿಂದೂ ವ್ಯಕ್ತಿಯ ಕೆನ್ನೆ ಹೊಡೆದು ಯಾರು ನಮ್ಮ ತಂಟೆಗೆ ಬರುತ್ತಾರೋ, ಅವರ ಹತ್ತು ಕೆನ್ನೆಗಳಿಗೆ ಹೊಡೆಯುವ ಮೂಲಕ ಪ್ರತ್ಯುತ್ತರ ನೀಡುವ ಸಂಕಲ್ಪವನ್ನು ಹಿಂದೂ ಸಮಾಜ ಮಾಡುತ್ತದೆ ಎಂದು ಹೇಳಿದ್ದಾರೆ.

  • ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

    ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

    ವಿಜಯಪುರ: ನಮ್ಮ ದೇಶಕ್ಕೆ ಪಾಕಿಸ್ತಾನಕ್ಕಿಂತ ಅಪಾಯ ಇರುವುದು ದೇಶದ ಬುದ್ಧಿಜೀವಿಗಳಿಂದ. ಅವರಿಂದ ದೇಶ ಹಾಳಾಗಿದ್ದು ನಾನು ಗೃಹ ಮಂತ್ರಿಯಾದರೆ ಅವರಿಗೆ ಗುಂಡು ಹಾರಿಸಿ ಅಂತಾ ಆದೇಶ ನೀಡುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟನೆ ನಂತರ ಮಾತನಾಡಿದ ಶಾಸಕರು, ಜಮ್ಮು ಮತ್ತು ಕಾಶ್ಮೀರ ಜನರು ನಮ್ಮ ದೇಶದ ಗಾಳಿ, ನೀರು, ಅನ್ನ ಸೇವಿಸುತ್ತಾರೆ. ನಾವು ಕಟ್ಟುವ ತೆರಿಗೆಯ ಹಣದಲ್ಲಿ ಹೆಚ್ಚಿನ ಪ್ರಮಾಣವನ್ನು ಅವರಿಗೆ ಖರ್ಚು ಮಾಡಲಾಗುತ್ತದೆ. ಆದರೆ ಬುದ್ಧಿಜೀವಿಗಳು ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ, ಸೈನಿಕರ ಮೇಲೆ ಕಲ್ಲು ಎಸೆಯುತ್ತಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ದೇಶ ವಿರೋಧಿ ಜಟುವಟಿಕೆ ಮಾಡುವವರ ಮೇಲೆ ಹಲ್ಲೆ ಮಾಡಿದಾಗ ಮಾನವ ಹಕ್ಕು ಸಮಿತಿ ಮಧ್ಯೆ ಪ್ರವೇಶಿಸಿ ಅವರನ್ನು ರಕ್ಷಿಸುತ್ತಾರೆ. ಹಾಗಾದರೆ ಸೈನಿಕರ ಮೇಲೆ ಆಗುವ ಷೋಷಣೆಯನ್ನು ತಡೆಯಲು ಯಾವುದೇ ಸಮಿತಿ ಮುಂದೆ ಬರುವುದಿಲ್ಲ. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇದ್ದಿದ್ದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ಜಾರಿ ಆಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಿಧಿಯನ್ನು ತೆಗೆದು ಹಾಕಲಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ಎಂದಿಗೂ ಗೆಲ್ಲುವುದಿಲ್ಲ ಎಂದು ನುಡಿದರು.

    ಯೋಧರು -60 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾವು 3 ಕಿ.ಮೀ. ಹೋಗುವುದಕ್ಕೆ ಪರದಾಡುತ್ತೇವೆ. ಇದು ನಮ್ಮ ದೇಶದ ದುರಂತವಾಗಿದೆ. ಇಸ್ರೇಲ್ ನಲ್ಲಿ ಹುಟ್ಟಿದ ಮಗುವು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇಂತಹ ವ್ಯವಸ್ಥೆ ನಮ್ಮ ದೇಶದಲ್ಲಿ ಬರಬೇಕು ಎಂದ ಶಾಸಕರು, ಪಾಕಿಸ್ತಾನ ಭೂಪಟದಲ್ಲಿ ಇಲ್ಲದಂತೆ ಮಾಡುವ ಶಕ್ತಿ ನಮ್ಮ ಸೈನ್ಯಕ್ಕಿದೆ. ಪಾಕಿಸ್ತಾನ ಸೈನಿಕರು ಏನೂ ಗೆಲ್ಲದೆ ಎದೆಯ ಮೇಲೆ ಮೆಡಲ್‍ಗಳನ್ನ ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ಸೈನಿಕರು ಸಾಯುವುದಕ್ಕೆ ಗಡಿಗೆ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸದೆ, ಭಾರತದ ಗಡಿಗೆ ಭೇಟಿ ನೀಡಿ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.