Tag: controller

  • ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

    ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

    ಹಾವೇರಿ: ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಮಾತಿಗೆ ಮಾತು ಬೆಳೆದು ಬಸ್ ನಿಲ್ದಾಣದಲ್ಲಿಯೇ ಇಬ್ಬರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.

    ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಗಲಾಟೆ ನಡೆದಿದೆ. ಅಲ್ಲದೆ ಇಬ್ಬರು ಹೊಡೆದಾಡುವುದನ್ನ ಬಿಡಿಸಲು ಜನರು ಹರಸಾಹಸವನ್ನೇ ಪಟ್ಟಿದ್ದಾರೆ. ಬೇರೆ ರೂಟ್‍ಗೆ ಡ್ಯೂಟಿಗೆ ಹೋಗುವಂತೆ ಕಂಟ್ರೋಲರ್ ನಿರ್ವಾಹಕನಿಗೆ ಹೇಳಿದ್ದಕ್ಕೆ ಈ ಹೊಡೆದಾಟ ನಡೆದಿದೆ. ಮೊದಲು ಬರೀ ಮಾತಿನಿಂದ ಶುರುವಾದ ಜಗಳ ಕೊನೆಗೆ ಇಬ್ಬರೂ ಕೈ ಕೈ ಹಿಡಿದುಕೊಂಡು ಹೊಡೆದಾಡುವ ಮಟ್ಟಿಗೆ ತಲುಪಿದೆ.

    ನಿರ್ವಾಹಕನಿಗೆ ಹುಲಗೂರು ಕಡೆ ಭಾಗದಲ್ಲಿ ಜನರು ಹೆಚ್ಚಾಗಿದ್ದಾರೆ, ಆ ರೂಟ್‍ಗೆ ಹೋಗು ಎಂದು ಕಂಟ್ರೋಲರ್ ಹೇಳಿದ್ದಾರೆ. ಆದರೆ ನಿರ್ವಾಹಕ ಈ ಮಾತಿಗೆ ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೊನೆಗೆ ಸ್ಥಳೀಯರು ಹಾಗೂ ಪೊಲೀಸರ ಗಲಾಟೆಯನ್ನು ಶಾಂತಗೊಳಿಸಿದ್ದಾರೆ. ಅಲ್ಲದೆ ಡಿಪೋ ಮ್ಯಾನೇಜರ್ ಗೆ ಈ ಬಗ್ಗೆ ದೂರು ನೀಡಲು ಕಂಟ್ರೋಲರ್ ಮುಂದಾಗಿದ್ದಾರೆ ಎನ್ನಲಾಗಿದೆ.

  • 15 ನಿಮಿಷ ತಡವಾಗಿ ಹೋಗಲ್ಲ ಎಂದ ಚಾಲಕನಿಗೆ ಥಳಿಸಿದ NEKRTC ನಿಯಂತ್ರಣಾಧಿಕಾರಿ

    15 ನಿಮಿಷ ತಡವಾಗಿ ಹೋಗಲ್ಲ ಎಂದ ಚಾಲಕನಿಗೆ ಥಳಿಸಿದ NEKRTC ನಿಯಂತ್ರಣಾಧಿಕಾರಿ

    ಯಾದಗಿರಿ: ಕರ್ತವ್ಯಕ್ಕೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ನಿಯಂತ್ರಣಾಧಿಕಾರಿಯೊಬ್ಬರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಆನಂದ ಪಟುವಾರಿ ಹಲ್ಲೆ ಮಾಡಿದ ಬಸ್ ನಿಯಂತ್ರಣ ಅಧಿಕಾರಿ. ಹಲ್ಲೆಗೆ ಒಳಗಾದ ಚಾಲಕ ರಾಘವೇಂದ್ರ ಗಂಭೀರವಾಗಿ ಗಾಯಗೊಂಡಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ.

    ಆಗಿದ್ದೇನು?:
    ಚಾಲಕ ರಾಘವೇಂದ್ರ ಯಾದಗಿರಿಯಿಂದ ವಿಜಯಪುರಕ್ಕೆ ತೆರಳುವ ಬಸ್ ಚಾಲಕರಾಗಿದ್ದಾರೆ. ಅವರು ಎಂದಿನಂತೆ ಶುಕ್ರವಾರ ಬೆಳಗ್ಗೆ 6:15ಕ್ಕೆ ಬಸ್ ನಿಲ್ದಾಣದಿಂದ ಹೊರಡುವುದಾಗಿ ಅನುಮತಿ ಪಡೆದಿದ್ದರು. ಆದರೆ ನಿಯಂತ್ರಣ ಅಧಿಕಾರಿ ಆನಂದ 15 ನಿಮಿಷ ತಡವಾಗಿ ಹೋಗುವಂತೆ ಹೇಳಿದ್ದಾರೆ. ಇದಕ್ಕೆ ರಾಘವೇಂದ್ರ ಒಪ್ಪದ ಕಾರಣ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ನಿಯಂತ್ರಣಾಧಿಕಾರಿ ರಾಘವೇಂದ್ರ ಅವರ ಕೆನ್ನೆಗೆ ಹೊಡೆದು, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

    ನನ್ನ ಸಮಯಕ್ಕೆ ಸರಿಯಾಗಿ ಬಸ್ ಚಾಲನೆ ಮಾಡಲು ಹೊರಟಿದ್ದೆ. ಈ ವೇಳೆ ಬಂದ ಆನಂದ ಅವರು ನನ್ನನ್ನು ತಡೆದು, 15 ನಿಮಿಷ ತಡವಾಗಿ ಹೊರಡು ಅಂತ ಹೇಳಿದರು. ಸರ್ ನನಗೆ 6:15ಕ್ಕೆ ಹೊರಡುವಂತೆ ಡಿಸ್‍ಪ್ಯಾಚ್ ಲೆಟರ್ ನಲ್ಲಿ ತಿಳಿಸಲಾಗಿದೆ ಅಂತ ತಿಳಿಸಿದೆ. ಇದರಿಂದಾಗಿ ಕೋಪಗೊಂಡು ನನಗೆ ಬುದ್ಧಿ ಹೇಳುತ್ತೀಯಾ ಅಂತ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಚಾಲಕ ರಾಘವೇಂದ್ರ ಆರೋಪಿಸಿದ್ದಾರೆ. ಈಗ ಹೊಡೆದಾಟ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಜಗಳ- ಅಕ್ಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮ

    ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಜಗಳ- ಅಕ್ಕನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ತಮ್ಮ

    ಜಾಕ್ಸನ್: ವಿಡಿಯೋ ಗೇಮ್ ಕಂಟ್ರೋಲರ್ ಗಾಗಿ ಅಕ್ಕ- ತಮ್ಮ ಜಗಳವಾಡಿಕೊಂಡಿದ್ದು, ಕೊನೆಗೆ ತಮ್ಮ ಅಕ್ಕನ ತಲೆಗೆ ಗುಂಡು ಹಾರಿಸಿರೋ ಆಘಾತಕಾರಿ ಘಟನೆ ಶನಿವಾರದಂದು ಅಮೆರಿಕದ ಮಿಸ್ಸಿಸ್ಸಿಪ್ಪಿಯಲ್ಲಿ ನಡೆದಿದೆ.

    ಗುಂಡೇಟು ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆಂದು ಇಲ್ಲಿನ ಮನ್ರೋ ಕೌಂಟಿಯ ಅಧಿಕಾರಿ ಸೆಸಿಲ್ ಕಂಟ್ರೆಲ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ. ವಿಡಿಯೋ ಗೇಮ್ ಕಂಟ್ರೋಲರ್ ತನ್ನ ಕೈಗೆ ಕೊಡಲಿಲ್ಲವೆಂದು 9 ವರ್ಷದ ಬಾಲಕ ತನ್ನ 13 ವರ್ಷದ ಅಕ್ಕ ಡಿಜೋನೇಗೆ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದ. ಕೂಡಲೇ ಆಕೆಯನ್ನ ಮೆಂಫಿಸ್ ಟೆನ್ನೀಸೀಯ ಲೀ ಬೋನ್‍ಹರ್ಸ್ ಮಕ್ಕಳ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಬಾಲಕಿ ಬದುಕುಳಿಯಲಿಲ್ಲ ಎಂದು ಅವರು ತಿಳಿಸಿದ್ದಾರೆ.

    ಘಟನೆ ನಡೆದ ವೇಳೆ ಮಕ್ಕಳ ತಾಯಿ ಮತ್ತೊಂದು ರೂಮಿನಲ್ಲಿ ಇತರೆ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು. ಬಾಲಕನಿಗೆ ಗನ್ ಸಿಕ್ಕಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.