ಇವರಿಗೆ ಸರ್ಕಾರ ತಿಂಗಳಿಗೆ 18,000 ರೂ. ವೇತನ ನೀಡುತ್ತದೆ. ಆದರೆ ಮಹಾನಗರ ಪಾಲಿಕೆಗೆ ಬರುವ ಈ ವೇತನವನ್ನು ಗುತ್ತಿಗೆದಾರ ಕಡಿತ ಮಾಡಿ, ಕೇವಲ 8,000 ರೂ. ಹಣವನ್ನು ಮಾತ್ರ ನೀಡುತ್ತಿದ್ದ. ರಜೆ ಮಾಡಿದರೆ ಆ ಸಂಬಳದಲ್ಲೂ ಕಡಿತಗೊಳಿಸಿ ಹಣ ನೀಡುತ್ತಿದ್ದ.
ಇದರಿಂದ ಮನನೊಂದು ಪೌರಕಾರ್ಮಿಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪಾಲಿಕೆ ನಾಮ ನಿರ್ದೇಶಿತ ಸದಸ್ಯ ತುಳಸಪ್ಪ ಪೂಜಾರ ಆರೋಪಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಪೌರ ಕಾರ್ಮಿಕನಿಗೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ 15 ವರ್ಷಗಳಿಂದ ಧಾರವಾಡದ 17ನೇ ವಾರ್ಡ್ನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರಿಗೆ ಗುತ್ತಿಗೆದಾರ ಕೆಲ ತಿಂಗಳಿನಿಂದ ವೇತನವನ್ನೇ ನೀಡಿರಲಿಲ್ಲ. ಜೊತೆಗೆ ಕಿರುಕುಳ ಸಹ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.
ಈ ಬಗ್ಗೆ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ್ ಪ್ರತಿಕ್ರಿಯಿಸಿ, ಮಹಾನಗರ ಪಾಲಿಕೆಯಿಂದ ಪ್ರತಿ ತಿಂಗಳು ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಿಗೆ 18,000 ಸಾವಿರ ವೇತನವನ್ನ ನೇರವಾಗಿ ಅವರ ಅಕೌಂಟ್‌ಗೆ ಜಮೆ ಮಾಡುತ್ತದೆ. ಆದರೆ ಗುತ್ತಿಗೆದಾರ ಸಾಕಷ್ಟು ಪೌರ ಕಾರ್ಮಿಕರಿಗೆ ಇದೇ ರೀತಿಯಾಗಿ ಪ್ರತಿ ತಿಂಗಳು ವೇತನ ಕಡಿಮೆ ಕೊಟ್ಟು ತೊಂದರೆ ಕೊಡುತ್ತಿದ್ದಾನೆ. ಸಂಬAಧಪಟ್ಟ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿ: 30 ವರ್ಷಗಳ ಹಿಂದೆ ಗುತ್ತಿಗೆದಾರನಿಗೆ ನೀಡಬೇಕಿದ್ದ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿ (Belagavi DC) ಮೊಹಮ್ಮದ್ ರೋಷನ್ ಅವರು ಓಡಾಡ್ತಿದ್ದ ಕಾರು ಜಪ್ತಿ ಮಾಡಲಾಗಿದೆ.
ದೂದಗಂಗಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಕಾಮಗಾರಿಯೊಂದನ್ನ ದಿ.ನಾರಾಯಣ್ ಕಾಮತ್ ಎಂಬವರಿಗೆ ಗುತ್ತಿಗೆ ನೀಡಲಾಗಿತ್ತು. 1992-93ರಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಮುಗಿದು 2 ವರ್ಷ ಕಳೆದಿದ್ದರೂ ಬಿಲ್ ಪಾವತಿ ಆಗಿರಲಿಲ್ಲ. ಹೀಗಾಗಿ ಬಿಲ್‌ಗಾಗಿ 1995ರಲ್ಲಿ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್ ಕಂಡು ಹೌಹಾರಿದ ಜನ; ಕ್ಯಾಶ್ ವಹಿವಾಟಿಗೆ ದುಂಬಾಲು
ಈ ವೇಳೆ ಬೆಳಗಾವಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 34 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿತ್ತು. ಸ್ಥಳೀಯ ಕೋರ್ಟ್ ಆದೇಶ ಪ್ರಶ್ನಿಸಿ ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಬಳಿಕ 2024ರ ಜೂನ್ ಒಳಗಾಗಿ ಗುತ್ತಿಗೆದಾರನಿಗೆ ಬಡ್ಡಿ ಸಮೇತ ಅರ್ಧ ಬಿಲ್ ಪಾವತಿ ಮಾಡುವಂತೆ ಹೈಕೋರ್ಟ್ ಕೂಡ ಸೂಚನೆ ನೀಡಿತ್ತು.
ಹಾವೇರಿ: ಶಿಗ್ಗಾಂವಿಯಲ್ಲಿ (Shiggaon) ನಡೆದಿದ್ದ ಗುತ್ತಿಗೆದಾರನ (Contractor) ಹತ್ಯೆ ಪ್ರಕರಣದ ಎ1 ಆರೋಪಿ ಮನೆಗೆ ಬೆಂಕಿ ಹಾಕಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮನೆಗೆ ಬೆಂಕಿ ಹಾಕಿದ್ದ ಹತ್ಯೆಯಾದ ಶಿವಾನಂದ ಕುನ್ನೂರು ಕುಟುಂಬದ 6 ಜನ ಸದಸ್ಯರನ್ನು ಬಂಧಿಸಲಾಗಿದೆ. ಹತ್ಯೆಯಾದ ರಾತ್ರಿಯೇ ಪ್ರಕರಣದ ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಸಾವುನೋವು ಸಂಭವಿಸಿರಲಿಲ್ಲ. ಇದನ್ನೂ ಓದಿ: ಗುತ್ತಿಗೆದಾರನ ಹತ್ಯೆ ಕೇಸ್ – ಆರೋಪಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕುಟುಂಬಸ್ಥರು
ಬಂಧಿತ ಆರೋಪಿಗಳನ್ನು ಲಿಂಗರಾಜ್ ಕುನ್ನೂರು, ಧರ್ಮಣ್ಣ ಕುನ್ನೂರು, ಶ್ರೀಧರ್, ಪ್ರಕಾಶ್ ಕುನ್ನೂರು, ಶಂಕ್ರಪ್ಪ, ಪ್ರಕಾಶ್ ಎಂದು ಗುರುತಿಸಲಾಗಿದೆ. ಕಳೆದ ಜೂ.24 ರಂದು ಶಿಗ್ಗಾಂವಿಯಲ್ಲಿ ಶಿವಾನಂದ ಕುನ್ನೂರು ಹತ್ಯೆ ನಡೆದಿತ್ತು. ಸೈಟ್ ವಿಚಾರವಾಗಿ ಈ ಕೊಲೆ ನಡೆದಿತ್ತು. ಹತ್ಯೆಯಾದ ದಿನವೇ ಆರೋಪಿಗಳು ನಾಗರಾಜ್ ಮನೆಗೆ ಬೆಂಕಿ ಹಾಕಿದ್ದರು.
ಹಾವೇರಿ: ಗುತ್ತಿಗೆದಾರನನ್ನು (Contractor) ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ ಘಟನೆ ಶಿಗ್ಗಾಂವಿಯಲ್ಲಿ (Shiggaon) ನಡೆದಿದೆ.
ಪ್ರಕರಣ ಎ-1 ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಇದರಿಂದ ಮನೆಗೆ ಸಂಪೂರ್ಣ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಈ ಘಟನೆ ನಡೆದಿದೆ. ಇದರಿಂದ ಆರೋಪಿಯ ಮನೆಯ ಸದಸ್ಯರು ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಡಾಬಾಗೆ ನುಗ್ಗಿ ಮೂವರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು
ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಎಂಬವರನ್ನು ಮಂಗಳವಾರ (ಜೂ.24) ಹಾಡಹಗಲೇ ಮಾರಕಾಸ್ತ್ರಗಳಿಂದ ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಹತ್ಯೆಗೆ ಆರೋಪಿ ನಾಗರಾಜ್ ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ಥಳೀಯರು ಕೃತ್ಯದ ವಿಡಿಯೋ ಮಾಡಿದ್ದರು. ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ವಿಡಿಯೋದಲ್ಲಿ ನಾಗರಾಜ್ ಸವದತ್ತಿ, ಹನುಮಂತ, ಅಶ್ರಪ್, ಸುದೀಪ್ ಮತ್ತು ಸುರೇಶ್ ಹತ್ಯೆ ಮಾಡಿರುವುದು ಸೆರೆಯಾಗಿತ್ತು. ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಆಸ್ತಿ ವಿಚಾರದಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಈ ಐವರ ವಿರುದ್ಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಇದನ್ನೂ ಓದಿ: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ
ಹಾಸನ: ಚಿನ್ನಕ್ಕಾಗಿ ಗುತ್ತಿಗೆದಾರನ ಬರ್ಬರ ಹತ್ಯೆ ಮಾಡಿ, ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚಿ ಆರೋಪಿಗಳು ಪರಾರಿಯಾಗಿರುವ ಘಟನೆ ಅರಸೀಕೆರೆ (Arsikere) ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.
ಅರಸೀಕೆರೆ ಪಟ್ಟಣದ ವಿಜಯಕುಮಾರ್, ಕಟ್ಟಡ ಹಾಗೂ ಲೇಬರ್ ಗುತ್ತಿಗೆದಾರರಾಗಿದ್ದರು. ಕೆಎಸ್‌ಆರ್‌ಟಿಸಿ ಮುಂಭಾಗ ನಿರ್ಮಾಣವಾಗುತ್ತಿರುವ ಹೊಸ ಹೋಟೆಲ್ ಕಟ್ಟಡದ ಗಾರೆ ಕೆಲಸಕ್ಕೆ ವಿಕ್ರಂ ಹಾಗೂ ಸಚಿನ್‌ನನ್ನು ಕರೆ ತಂದಿದ್ದರು. ಕೆಲವು ದಿನಗಳಿಂದ ವಿಕ್ರಂ ಹಾಗೂ ಸಚಿನ್, ವಿಜಯ್‌ಕುಮಾರ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಮೋಹನ್ ಬಾಬು ನಿರ್ಮಾಣದ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸದಿರಲು ಕಾರಣ ಬಿಚ್ಚಿಟ್ಟ ಶಿವಣ್ಣ
ಶುಕ್ರವಾರ ತಡರಾತ್ರಿ ವಿಕ್ರಂ ಹಾಗೂ ಸಚಿನ್, ವಿಜಯಕುಮಾರ್ ಅವರಿಗೆ ಕರೆ ಮಾಡಿ ನಮಗೆ ಆರೋಗ್ಯ ಸರಿಯಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಾವು ಹೊರಗಡೆ ಹೋದರೆ ಅನುಮಾನ ಪಡುತ್ತಾರೆ ಎಂದಿದ್ದರು. ತಕ್ಷಣವೇ ವಿಜಯಕುಮಾರ್ ಕಟ್ಟಡದ ಮಾಲೀಕ ಶ್ರೀನಿವಾಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಈಗ ನೀನು ಹೋಗುವುದು ಬೇಡ ನಾಳೆ ನೋಡೋಣ ಬಿಡು ಎಂದಿದ್ದರು. ಆದರೆ ವಿಜಯಕುಮಾರ್ ಅವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ನಾನು ಹೋಣೆಗಾರನಾಗಬೇಕಾಗುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ ಎಂದು ತಮ್ಮ ಸ್ಕೂಟಿಯಲ್ಲಿ ಕಟ್ಟಡದ ಬಳಿಗೆ ತೆರಳಿದ್ದರು. ವಿಜಯಕುಮಾರ್ ಬರುವುದನ್ನೇ ವಿಕ್ರಂ ಹಾಗೂ ಸಚಿನ್ ಕಾಯುತ್ತ ನಿಂತಿದ್ದರು. ನಿರ್ಮಾಣ ಹಂತದ ಕಟ್ಟಡದ ಮುಂದೆ ಸ್ಕೂಟಿ ನಿಲ್ಲಿಸಿ ಒಳಗೆ ಹೋಗುತ್ತಿದ್ದಂತೆ ಆರೋಪಿಗಳು, ಕಬ್ಬಿಣದ ರಾಡ್‌ನಿಂದ ಬಲವಾಗಿ ತಲೆಗೆ ಹೊಡೆದಿದ್ದು, ಪರಿಣಾಮ ಆ ಕೂಡಲೇ ವಿಜಯಕುಮಾರ್ ನೆಲಕ್ಕೆ ಬಿದ್ದಿದ್ದರು. ನಂತರ ಸಣ್ಣ ಗ್ಯಾಸ್ ಸಿಲಿಂಡರ್‌ನಿಂದ ತಲೆ, ಮುಖವನ್ನು ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದರು. ಇದನ್ನೂ ಓದಿ: ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್ ಇದೆ: ಹೆಚ್.ಸಿ.ಬಾಲಕೃಷ್ಣ
ವಿಜಯಕುಮಾರ್ ಮೃತಪಟ್ಟ ನಂತರ ಆರೋಪಿಗಳು ಅವರ ಕೊರಳಿನಲ್ಲಿದ್ದ ಚಿನ್ನದ ಚೈನ್, ಕೈಯಲ್ಲಿದ್ದ ಮೂರು ಉಂಗರುಗಳನ್ನು ಕಸಿದುಕೊಂಡಿದ್ದರು. 1 ಉಂಗುರ ಬೆರಳಿನಿಂದ ಬಾರದಿದ್ದಾಗ ಬೆರಳನ್ನು ತುಂಡರಿಸಿ ಬೆರಳಿನ ಸಮೇತ ಉಂಗುರವನ್ನು ಎತ್ತಿಕೊಂಡು ವಿಜಯಕುಮಾರ್ ಅವರ ಸ್ಕೂಟಿಯಲ್ಲಿಯೇ ಸ್ಥಳದಿಂದ ಹೊರಟಿದ್ದರು. ಬಳಿಕ ಪಟ್ಟಣದ ಹೋಟೆಲ್‌ವೊಂದರ ಮುಂದೆ ಸ್ಕೂಟಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರು – ವಿಜಯಪುರ ರೈಲು ಪ್ರಯಾಣ; ಸೋಮಣ್ಣ ಜೊತೆ ಎಂಬಿಪಿ ಮಾತುಕತೆ
ಆರೋಪಿಗಳು ವಿಜಯಕುಮಾರ್ ಅವರನ್ನು ಕೊಲೆ ಮಾಡಿ ಸ್ಕೂಟಿಯಲ್ಲಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಸೀಕೆರೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
– ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ – ನೀರಾವರಿ ಇಲಾಖೆಯಲ್ಲಿ ಬಲಾಢ್ಯರಿಗೆ 150 ಕೋಟಿ ಬಿಡುಗಡೆ – ಸಣ್ಣ ಗುತ್ತಿಗೆದಾರರಿಗೆ 3 ವರ್ಷದಿಂದ ಹಣ ಬಿಡುಗಡೆ ಆಗಿಲ್ಲ
ಬೆಂಗಳೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಈಗ ಸಿಡಿದೆದ್ದಿದೆ. ಹಣ ಬಿಡುಗಡೆಗೆ ಕಾಣದ ಕೈಗಳು, ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (Contractors’ Association) ಬಾಂಬ್ ಸಿಡಿಸಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಧ್ಯವರ್ತಿಗಳ ಕಾಟ ಕೊಡುತ್ತಿದ್ದಾರೆ. ಜೇಷ್ಠತೆ ಪಾಲಿಸದೇ ಸ್ಪೆಷಲ್ ಎಲ್‌ಓಸಿ ಸೃಷ್ಟಿ ಮಾಡಿ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪಬ್ಲಿಕ್ ಟಿವಿ ಜೊತೆ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಲೋಕೋಪಯೋಗಿ ಇಲಾಖೆಯಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬಸ್ಥರು, ನೀರಾವರಿ ಇಲಾಖೆಯಲ್ಲಿ ಬೋಸರಾಜ್ (N Boseraju) ಮಗ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಜೊತೆ ಪಬ್ಲಿಕ್ ಟಿವಿ ಮಾತನಾಡಿದಾಗ ಅವರು ಹಲವು ವಿಚಾರಗಳನ್ನು ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ : ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಪೇಮೆಂಟ್ ಸಿಗ್ತಿಲ್ಲ. ಎಲ್ಲಾ ಸ್ಪೆಷಲ್ ಎಲ್‌ಒಸಿ. ಸ್ಪೆಷಲ್ ಎಲ್‌ಒಸಿ.. ಜ್ಯೇಷ್ಠತೆ ಆಧಾರದ ಮೇಲೆ ಒಬ್ಬರೂ ಪೇಮೆಂಟ್ ಮಾಡ್ತಿಲ್ಲ. ಪಿಡಬ್ಲ್ಯೂಡಿಯಲ್ಲಿ ಯಾರೋ ಒಬ್ಬ ಕಾಣದ ಕೈ ಇಡೀ ಪಿಡಬ್ಲ್ಯೂಡಿಯನ್ನೇ ಕಂಟ್ರೋಲ್ ಮಾಡ್ತಿದೆ. ನಾಲ್ಕು ನಿಗಮಗಳಲ್ಲಿ ಎಲ್ಲಾ ದೊಡ್ಡ ದೊಡ್ಡವರಿಗೆ ಪೇಮೆಂಟ್ ಮಾಡ್ತಿದ್ದಾರೆ. 5-50 ಲಕ್ಷ ಇರೋರಿಗೆ ಪೇಮೆಂಟ್ ಮಾಡ್ತಿಲ್ಲ.
ಪ್ರತಿನಿಧಿ: ಯಾರು ಆ ಕಾಣದ ಕೈಗಳು? ಗುತ್ತಿಗೆದಾರರ ಸಂಘದ ಅಧ್ಯಕ್ಷ : ಕಾಣದ ಕೈಗಳು ಸಂಬಂಧಿಕರು. ಎಲ್ಲರೂ ಒಬ್ಬೊಬ್ಬರು ಸಂಬಂಧಿಕರನ್ನು ಇಲಾಖೆ ನಡೆಸಿಬಿಟ್ಟರೆ, ಹೆಂಗಾಗುತ್ತೆ.
ಪ್ರತಿನಿಧಿ: ಯಾವ್ಯಾವ ಸಚಿವರು ಸಂಬಂಧಿಕರನ್ನು ಇಟ್ಟುಕೊಂಡಿದ್ದಾರೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ : ಪಿಡಬ್ಲ್ಯೂಡಿ ಸಚಿವರ ಸಂಬಂಧಿಕರು ಕಂಟ್ರೋಲ್ ಇಟ್ಟುಕೊಂಡಿದ್ದಾರೆ. ಎಲ್ಲಾ ಅಧಿಕಾರಿಗಳ ಮೇಲೆ ಅವರೇ ದರ್ಬಾರ್ ಮಾಡ್ತಿದ್ದಾರೆ. ಅಧಿಕಾರಿಗಳಿಗೆ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಯಾರನ್ನು ಕೇಳಬೇಕು? ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ
ಪ್ರತಿನಿಧಿ: ಅವರಿಗೇನು ಕಮೀಷನ್ ಕೊಡಬೇಕಾ? ಗುತ್ತಿಗೆದಾರರ ಸಂಘದ ಅಧ್ಯಕ್ಷ : ಇಲ್ಲ ಹಂಗತಾ ಅಲ್ಲ. ಉದಾಹರಣೆಗೆ ಸೀನಿಯಾರಿಟಿ ಮೇಲೆ ಪೇಮೆಂಟ್ ಮಾಡಬೇಕು. ಆದ್ರೆ ಇವರು ಹಂಗಲ್ಲ, ಎಲ್ಲಾ ಎಲ್‌ಒಸಿ. ಸ್ಪೆಷಲ್ ಎಲ್‌ಒಸಿ ಯಾಕೆ ಇಂಟ್ರಡ್ಯೂಸ್ ಮಾಡಿದ್ರು. ಮೇಲೆ ಪೇಮೆಂಟ್ ಮಾಡ್ತಿದ್ದಾರೆ.
ಪ್ರತಿನಿಧಿ: ಸಂಬಂಧಿಕರು ಹೇಗೆ ಕಂಟ್ರೋಲ್ ಮಾಡ್ತಿದ್ದಾರೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ : ನಾವು ಸೆಕ್ರೆಟರಿ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಒಎಸ್‌ಸಿ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ಆಮೇಲೆ ಐಎಫ್‌ಎ ಕೇಳಿದ್ರೆ ನಮಗೆ ಗೊತ್ತಿಲ್ಲ ಅಂತಾರೆ. ನಾವು ಯಾರನ್ನು ಕೇಳಬೇಕು.
ಪ್ರತಿನಿಧಿ: ನೀರಾವರಿ ಇಲಾಖೆಯಲ್ಲಿ ಏನಾಗ್ತಿದೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ : ಎಂಡಿಗಳು ಬರೀ ಬಲಾಡ್ಯರಿಗೆ ಕೊಡ್ತಿದ್ದಾರೆ. ದೊಡ್ದವರಿಗೆ 100 ಕೋಟಿ, 200 ಕೋಟಿ ಯಾರಿಗೆ ಕೊಡ್ತಾರೆ ಅನ್ನೋದೇ ಗೊತ್ತಾಗಲ್ಲ. 5 ರಿಂದ 50 ಕೋಟಿ ಬಾಕಿ ಇರುವವರು 60% ಇದ್ದಾರೆ. ಅವರಿಗೆ ಪೇಮೆಂಟ್ ಕೊಡಬೇಕು. 3 ವರ್ಷದಿಂದ ಒದ್ದಾಡುತ್ತಿದ್ದಾರೆ. ಎರಡು ಏನು? ಬೋಸರಾಜು ಮಗ ಹಸ್ತಕ್ಷೇಪ ಮಾಡ್ತಿದ್ದಾರೆ. ಅವರು ಯಾಕೆ ಬರಬೇಕು?
ಪ್ರತಿನಿಧಿ: ಸರ್ಕಾರದ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ಇದ್ಯಾ? ಗುತ್ತಿಗೆದಾರರ ಸಂಘದ ಅಧ್ಯಕ್ಷ : ಹೌದು ಡೆಫನೇಟ್ಲಿ. 100% ಇಷ್ಟ ಬಂದವರಿಗೆ ಹಣ ಬಿಡುಗಡೆ ಮಾಡ್ತಿದ್ದಾರೆ ? ಒಂದು ರೀತಿ ನೀತಿ ಇಲ್ಲ. ಹಳೇ ಕಾಲದ್ದು ಎಲ್‌ಒಸಿ ಬಿಡುಗಡೆ ವೇಳೆ, ಹಳೇ ಕಾಲದ್ದಕ್ಕಿಂದ ಹೆಚ್ಚು ಪೇಮೆಂಟ್ ಕಲೆಕ್ಟ್ ಮಾಡ್ತಿದ್ದಾರೆ. ಯಾಕೆ? ಹಿಂದಿನ ಸರ್ಕಾರಕ್ಕಿಂತ ಹೆಚ್ಚು ಪೇಮೆಂಟ್ ಕಲೆಕ್ಟ್ ಮಾಡ್ತಿದ್ದಾರೆ.
ಪ್ರತಿನಿಧಿ: ಎಷ್ಟು ಪೇಮೆಂಟ್ ಕಲೆಕ್ಟ್ ಮಾಡ್ತಾರೆ..? ಗುತ್ತಿಗೆದಾರರ ಸಂಘದ ಅಧ್ಯಕ್ಷ : ಅದನ್ನ ಆಮೇಲೆ ಹೇಳ್ತಿವಿ.. ಈಗ ನಾವು ಎಲ್ಲಾ ಸರಿ ಆಗಬೇಕು ಅನ್ನೋದಷ್ಟೆ ನಮ್ಮ ಉದ್ದೇಶ. ಜಟಿಲ ಆಗಬಾರದು. ಮುಂದೆ ಸರಿಯಾಗದಿದ್ದರೆ, ಎಲ್ಲಾ ಬಹಿರಂಗವಾಗಿ ಹೇಳ್ತಿವಿ.
ದಾವಣಗೆರೆ: ಕಾರು (Car) ಚಾಲನೆ ಮಾಡುವಾಗಲೇ ಹೃದಯಘಾತದಿಂದ (Heart Attack) ಪ್ರಥಮ ದರ್ಜೆ ಗುತ್ತಿಗೆದಾರ (Contractor) ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೃತರನ್ನು ನಗರದ ಬನಶಂಕರಿ ಬಡಾವಣೆ ನಿವಾಸಿ ಸುರೇಶ್ ಪೈ ಎಂದು ಗುರುತಿಸಲಾಗಿದೆ. ನಗರದ ಬಿಐಟಿ ರಸ್ತೆಯ ಈಶ್ವರ ಧ್ಯಾನ ಮಂದಿರದ ಬಳಿ ಕಾರು ಚಾಲನೆ ಮಾಡಿಕೊಂಡು ಬರುವಾಗ ಅವರಿಗೆ ಹೃದಯಾಘಾತವಾಗಿದೆ. ಈ ವೇಳೆ ಕಾರು ರಸ್ತೆಯ ಪಕ್ಕದಲ್ಲಿರುವ ಕಾಂಪೌಂಡ್‌ಗೆ ಡಿಕ್ಕಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. ಇದನ್ನೂ ಓದಿ: ವಿನಯ್ ರೀಲ್ಸ್ ತಂದ ಆಪತ್ತು: ‘ಡೆವಿಲ್’ ಚಿತ್ರೀಕರಣಕ್ಕೆ ಮತ್ತೆ ತೊಂದರೆ?
ಚಿತ್ರದುರ್ಗ: ರಾಜ್ಯದಲ್ಲಿ ಅಧಿಕಾರಿಗಳು, ನೌಕರರ ಸರಣಿ ಆತ್ಮಹತ್ಯೆ ಹಿನ್ನೆಲೆ ಜ.4ಕ್ಕೆ ಕಲಬುರಗಿಯಲ್ಲಿ (Kalaburagi) ಬಿಜೆಪಿಯಿಂದ (BJP) ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದ್ದಾರೆ.
ಬೀದರ್‌ನಲ್ಲಿ (Bidar) ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಕುರಿತು ಚಿತ್ರದುರ್ಗದಲ್ಲಿ (Chitradurga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡೆತ್ ನೋಟ್‌ನಲ್ಲಿ ಇನ್ನೂ ನಾಲ್ವರಿಗೆ ಸುಪಾರಿ ಬಗ್ಗೆ ಪ್ರಸ್ತಾಪವಿದೆ. ಮಹಾರಾಷ್ಟ್ರದ ಸುಪಾರಿ ಕಿಲ್ಲರ್ಸ್‌ಗೆ ಸುಪಾರಿ ಬಗ್ಗೆ ಮಾಹಿತಿ ಹಿನ್ನೆಲೆ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ರವೀಶ್ ಹೆಚ್‌ಎಸ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಠಾಣೆಗೆ ದೂರು ನೀಡಲು ಹೋದರೆ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಸಿಎಂ, ಸಚಿವರು, ರಾಜ್ಯ ಸರ್ಕಾರದಿಂದ ಭಂಡತನ ಪ್ರದರ್ಶನವಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು ಆತ್ಮಹತ್ಯೆ ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೊಮ್ಮಸಂದ್ರದಲ್ಲಿ ಭಾರೀ ಅಗ್ನಿ ಅವಘಡ – ಹೊತ್ತಿ ಉರಿದ ಬಟ್ಟೆ ಕಾರ್ಖಾನೆ
ಬೆಂಗಳೂರು/ಕಲಬುರಗಿ: ಕಲಬುರಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ (Contractor Sachin) ನಿವಾಸಕ್ಕೆ ನಾಳೆ (ಭಾನುವಾರ) ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ನೇತೃತ್ವದ ನಿಯೋಗ ಮೃತ ಸಚಿನ್ ನಿವಾಸಕ್ಕೆ ಭೇಟಿ ನೀಡಲಿದೆ.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬೀದರ್, ಕಲಬುರ್ಗಿ, ಭಾಗದ ಬಿಜೆಪಿ ಶಾಸಕರು, ಪ್ರಮುಖರು ಸಾಥ್ ನೀಡಲಿದ್ದಾರೆ. ಸಚಿನ್ ಕುಟುಂಬದವರಿಂದ ಬಿಜೆಪಿ ನಾಯಕರು ಕೆಲ ಮಾಹಿತಿ ಕಲೆಹಾಕಲಿದ್ದಾರೆ, ಇದೇ ವೇಳೆ ಸಚಿನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಲಿದ್ದಾರೆ.
ಹೆಚ್ಚಿತು ವಿವಾದ ಕಿಚ್ಚು:
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ವಿವಾದ ಜೋರಾಗುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ವಿರುದ್ಧ ಕೊನೆಗೂ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಹೋರಾಟಕ್ಕೆ ಮಣಿದು ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ ಸೇರಿ 6 ಜನರ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಶಾಸಕ ಮತ್ತಿಮೂಡ್ ದೂರು ನೀಡಿದ್ರೂ ದೂರು ದಾಖಲಿಸದ ಹಿನ್ನೆಲೆ ಬೆಳಗ್ಗೆಯಷ್ಟೇ ಬೀದರ್ ಹಾಗೂ ಕಲಬುರಗಿಯಲ್ಲಿ ಪ್ರತಿಭಟನೆ ನಡೆದಿತ್ತು. ಪೊಲೀಸರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತ ಬೀದರ್ ಜಿಲ್ಲಾ ಬಿಜೆಪಿ ನಿಯೋಗ ಮೃತ ಸಚಿನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಬಿಜೆಪಿ ನಿಯೋಗದ ಮುಂದೆ ನಮಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಮತ್ತೊಂದೆಡೆ ಬೀದರ್ ರೈಲ್ವೆ ಪೊಲೀಸರು ಸಚಿನ್ ಮನೆಗೆ ಭೇಟಿ ನೀಡಿ ಮಹಜರು ನಡೆಸಿ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಶಾಸಕ ಬಸವರಾಜ ಮತ್ತಿಮೂಡ್ ಮಾತನಾಡಿ, ಸಚಿನ್ ಸಾವಿಗೂ ಮುನ್ನ ಡೆತ್‌ನೋಟ್‌ನಲ್ಲಿ ಸುಪಾರಿ ಕೊಲೆ ಬಗ್ಗೆ ಬರೆದಿದ್ದಾರೆ. ರಾಜು ಕಪನೂರ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾಗಿದ್ದಾನೆ. ಪ್ರಕರಣವನ್ನು ಸರ್ಕಾರ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಇಲ್ಲೊಬ್ಳು ಸುಂದ್ರಿ ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಹನಿಟ್ರ್ಯಾಪ್‌ಗಿಳಿದು ಪೋಲೀಸ್ರು ಹುಡುಕುವಂತೆ ಮಾಡಿಕೊಂಡಿದ್ದಾಳೆ. ಕಂಟ್ರಾಕ್ಟರ್‌ಗೆ ಬಲೆ ಬೀಸಿ ಸುಲಿಗೆ ಮಾಡಿದ ಕಿಲಾಡಿ ಲೇಡಿಯ ಸ್ಟೋರಿ ಇಲ್ಲಿದೆ ನೋಡಿ..
ಮನೆಗೆ ಬನ್ನಿ ಅಂತ ಕರೆದ ಸುಂದರಿ ನಂಬಿ ಹೋದ ಕಂಟ್ರಾಕ್ಟರ್‌ನ ಸುಲಿಗೆ ಮಾಡಲಾಗಿದೆ. ಸುಂದರಿ ಲೇಡಿ ಜೊತೆ ಇದ್ದಾಗ ಅಪರಿಚಿತರು ಎಂಟ್ರಿ ಕೊಟ್ಟು ನಾವು ಪೊಲೀಸರು ಅಂತ ಬೆದರಿಸಿ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದು ಚಿನ್ನದ ಸರ, ಹಣ ಸುಲಿಗೆ ಮಾಡಲಾಗಿದ್ದು ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಕಂಟ್ರಾಕ್ಟರ್ ರಂಗನಾಥ್ ದೂರು ನೀಡಿದ್ದಾರೆ.
ಕ್ರೈಂ ಹಿಸ್ಟರಿ ನೋಡೋದಾದ್ರೆ ಸ್ನೇಹಿತನೊಬ್ಬನ ಮೂಲಕ ಕಂಟ್ರಾಕ್ಟರ್ ರಂಗನಾಥ್‌ಗೆ ನಯನ ಎಂಬ ಮಹಿಳೆಯ ಪರಿಚಯವಾಗಿದ್ಲು. ಆರಂಭದಲ್ಲಿ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ, 10 ಸಾವಿರ ಹಣ ಹಾಕಿಸಿಕೊಂಡಿದ್ದಳಂತೆ. ಬಳಿಕ ನಿತ್ಯ ಕಾಲ್ ಮಾಡಿ ಮನೆಗೆ ಬನ್ನಿ ಅಂತ ಕರೆಯುತ್ತಿದ್ದಳಂತೆ. ಆದರೆ ಬರ್ತಿನಿ ಅಂತ ಹೇಳಿ ಹೋಗದೆ ರಂಗನಾಥ್ ಅವಾಯ್ಡ್ ಮಾಡಿದ್ದಾರೆ. ಇದನ್ನೂ ಓದಿ: ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ
ಡಿಸೆಂಬರ್ 9ರಂದು ಬೆಳಗ್ಗೆ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನ, ರಂಗನಾಥ್ ಕರೆದು ಮಾತಾಡಿಸಿದ್ದಾಳೆ. ಇಲ್ಲೇ ಮನೆ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗ್ತಾಳೆ. ಆಕೆಯನ್ನ ನಂಬಿ ಮನೆಗೆ ಹೋಗಿ ಆಕೆ ಜೊತೆ ಮಾತನಾಡ್ತಿದ್ದಂತೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿಯಾಗಿದೆ. ನಾವು ಪೊಲೀಸರು ಎಂದು ಬೆದರಿಸಿ ರಂಗನಾಥ್ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಚಿನ್ನದ ಸರ, 29,000 ರೂ. ನಗದು ಹಾಗೂ 26,000 ರೂ. ಫೋನ್ ಪೇ ಮಾಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ರು. ಇತ್ತ ನಯನಗೆ ದೂರು ಕೊಡೋಣ ಬಾ ಎಂದು ಕರೆದ್ರೂ ಡ್ರಾಮಾ ಶುರು ಮಾಡಿ ಬ್ಲಾಕ್ ಮೇಲ್ ಮಾಡಿದ್ದಳಂತೆ. ವಕೀಲರ ಜೊತೆ ಚರ್ಚಿಸಿ ಬ್ಯಾಡರಹಳ್ಳಿ ಪೊಲೀಸ್ರಿಗೆ ದೂರು ನೀಡಿದ್ದಾರೆ.