– ಭಾರತದಲ್ಲೇ ಮೊದಲ ಬಾರಿಗೆ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಂಗ್ ತಂತ್ರಜ್ಞಾನ!
ಚಿಕ್ಕಬಳ್ಳಾಪುರ: ಪ್ರಯಾಣಿಕ ಸ್ನೇಹಿ ವಿಮಾನ ನಿಲ್ದಾಣವೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಗಳಿಸಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್)ದಲ್ಲಿ ಶೀಘ್ರವೇ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಂಗ್ ತಂತ್ರಜ್ಞಾನ ಅಳವಡಿಸಲಿದೆ.
ಕೆಐಎಎಲ್ ನಿರ್ವಹಣೆ ನಡೆಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಮತ್ತು ವಿಷನ್ ಬಾಕ್ಸ್‍ಗಳು ಕಾಗದ ರಹಿತ ಬಯೋಮೆಟ್ರಿಕ್ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಗ್ ತಂತ್ರಜ್ಞಾನವನ್ನು ಆರಂಭಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ಹಾಗೂ ಮತ್ತು ಭವಿಷ್ಯಕ್ಕೆ ಸಜ್ಜಾದ ಹೈಟೆಕ್ ವಿಮಾನ ನಿಲ್ದಾಣವನ್ನು ಸೃಷ್ಟಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
https://twitter.com/BLRAirport/status/1037404789598904320
ಸ್ಮಾರ್ಟ್ ಫೋನ್ ಗಳಲ್ಲಿ ಇತ್ತೀಚೆಗೆ ಹೊಚ್ಚ ಹೊಸ ನವಜಮಾನದ ಟ್ರೆಂಡಿಂಗ್ ಆಗಿರುವ ಫೇಸ್ ಅನ್ ಲಾಕಿಂಗ್ ಮಾದರಿಯ ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣದಲ್ಲೂ ಸಹ ಪ್ರಯಾಣಿಕರ ಮುಖವನ್ನು ಗುರುತಿಸುವ ಮೂಲಕ ವಿಮಾನಯಾನಕ್ಕೆ ಅವಕಾಶ ಮಾಡಿಕೊಡುವುದಾಗಿದೆ. ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಕನಸಿಗೆ ಇದೊಂದು ಅತ್ಯಂತ ಗಮನಾರ್ಹ ಹೆಜ್ಜೆಗಳಲ್ಲಿ ಒಂದಾಗಿದ್ದು,.
ಏನಿದು ಯೋಜನೆ?
ಭಾರತ ಸರ್ಕಾರದ ಮಹತ್ವಕಾಂಕ್ಷಿ ಡಿಜಿಯಾತ್ರಾ ಯೋಜನೆಗೆ ಬಯೋಮೆಟ್ರಿಕ್ ಸೆಲ್ಫ್ ರೆಕಾಗ್ನೇಸಿಂಗ್ ಬೋರ್ಡಿಂಗ್ ತಂತ್ರಜ್ಞಾನ ಮತ್ತಷ್ಟು ಮೆರುಗು ನೀಡಲಿದೆ. ವಿಮಾನಯಾನದ ಪ್ರತಿಯೊಂದು ಹಂತದಲ್ಲಿ ಕಾಗದ ರಹಿತ ಪ್ರಯಾಣವನ್ನು ಸೃಷ್ಟಿಸಿ ಡಿಜಿಟಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಡಿಜಿಯಾತ್ರಾ ಹೊಂದಿದೆ. ಬಯೋಮೆಟ್ರಿಕ್ ತಂತ್ರಜ್ಞಾನದ ಅನುಷ್ಟಾನದಿಂದ ಕಾಗದರಹಿತ ವಿಮಾನ ಪ್ರಯಾಣ ಹೊಂದಿರುವ ಭಾರತದ ಪ್ರಪ್ರಥಮ ವಿಮಾನ ನಿಲ್ದಾಣವಾಗಿ ಶೀಘ್ರವೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊರಹೊಮ್ಮಲಿದೆ.
https://twitter.com/visionbox/status/1037389380762132481
ಕಾಗದರಹಿತ ವಿಮಾನಯಾನ:
ಈ ಡಿಜಿಯಾತ್ರಾ ಯೋಜನೆಯ ಉದ್ದೇಶ ಎಂದರೆ ಟಿಕೆಟ್ ನೋಂದಣಿಯಿಂದ ವಿಮಾನ ಹತ್ತುವವರೆಗಿನ ಪ್ರಕ್ರಿಯೆಯನ್ನು ಕಾಗದ ರಹಿತವಾಗಿಸುವುದರೊಂದಿಗೆ ವಿಮಾನ ಪ್ರಯಾಣವನ್ನು ಸರಳವಾಗಿಸುವುದು. ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನದಿಂದ ವಿಮಾನ ನಿಲ್ದಾಣದಲ್ಲಿ ಚಲಿಸುವಾಗಲೇ ಪ್ರಯಾಣಿಕರನ್ನು ಫೇಸ್ ರೆಕಾಗ್ನೇಸಿಂಗ್ ಮೂಲಕ ಅವರ ಮುಖಚರ್ಯೆಗಳಿಂದಲೆ ಗುರುತಿಸುವುದಲ್ಲದೆ, ಪದೇ ಪದೇ ಬೋರ್ಡಿಂಗ್ ಪಾಸ್‍ಗಳು, ಪಾಸ್‍ಪೋರ್ಟ್‍ಗಳನ್ನು ಅಥವ ಇತರೆ ಭೌತಿಕ ಗುರುತಿನ ದಾಖಲೆಗಳನ್ನು ಸಲ್ಲಿಸುವ ಮತ್ತು ಅನಗತ್ಯ ತಡೆಗಳನ್ನು ಇಲ್ಲವಾಗಿಸುವುದು. ಈ ಯೋಜನೆಯಿಂದಾಗಿ ಸಮಯದ ಉಳಿತಾಯದ ಜೊತೆಗೆ ಪ್ರಯಾಣಿಕರನ್ನು ಸಾಲುಗಟ್ಟಿ ನಿಲ್ಲದಂತೆ ಮಾಡಿ ಕಿರಿಕಿರಿ ತಪ್ಪಿಸುತ್ತದೆ.
ಯಾವಾಗ ಬರುತ್ತೆ?
ದೇಶದಲ್ಲೇ ಮೊದಲ ಅನುಷ್ಟಾನದ ಮೈಲುಗಲ್ಲಿನ ಪ್ರಕ್ರಿಯೆಯು ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2019 ರ ಮೊದಲ ತ್ರೈಮಾಸಿಕದಲ್ಲಿ ಪೂರ್ಣವಾಗಲಿದೆ ಎನ್ನಲಾಗಿದೆ.
ಈಗಾಗಲೇ ಈ ಒಪ್ಪಂದಕ್ಕೆ ಪೋರ್ಚುಗಲ್‍ನ ಲಿಸ್ಬನ್‍ನಲ್ಲಿ ಬಿಐಎಎಲ್ ನ ನಿರ್ದೇಶಕ ಹರಿ ಮಾರರ್ ಮತ್ತು ವಿಷನ್ ಬಾಕ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಗೆಲ್ ಲೀಟ್‍ಮನ್ ಸಹಿ ಹಾಕಿದ್ದಾರೆ. ಈ ಸಮಾರಂಭದಲ್ಲಿ ಪೋರ್ಚುಗೀಸ್ ಪ್ರಧಾನ ಮಂತ್ರಿ ಆಂಟೋನಿಯೊಕೋಸ್ಟಾ, ಹಣಕಾಸು ಸಚಿವರಾದ ಮ್ಯಾನ್ಯುವೆಲ್ ಕಾಲ್ಡಿರಾ ಕಾಬ್ರಲ್, ಪೋರ್ಚುಗಲ್ ಭಾರತದ ರಾಯಭಾರಿ ನಂದಿನಿ ಸಿಂಗ್ಲಾ, ಇಂಟರ್‌ನ್ಯಾಷನಲೈಷನ್‍ನ ರಾಷ್ಟ್ರೀಯ ಕಾರ್ಯದರ್ಶಿ ಯುರಿಕೊ ಬ್ರಿಲ್‍ಹಾಂಟೆ ಡಯಾಸ್ ಮತ್ತು ಇತರೆ ಸರ್ಕಾರಿ ಪ್ರತಿನಿಧಿಗಳು ಹಾಜರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv