Tag: contraceptive pills

  • ಮಧ್ಯಪ್ರದೇಶ ಸರ್ಕಾರದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ – ಗರ್ಭನಿರೋಧಕ ಮಾತ್ರೆ, ಕಾಂಡೋಮ್ ಗಿಫ್ಟ್

    ಮಧ್ಯಪ್ರದೇಶ ಸರ್ಕಾರದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ – ಗರ್ಭನಿರೋಧಕ ಮಾತ್ರೆ, ಕಾಂಡೋಮ್ ಗಿಫ್ಟ್

    ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ವಧು-ವರರಿಗೆ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು (Contraceptive Pills) ಮತ್ತು ಮೇಕಪ್‌ ಬಾಕ್ಸ್‌ಗಳಿರುವ ಕಿಟ್‌ಗಳನ್ನು ನೀಡಲಾಗಿದೆ.

    ಹೌದು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ (Wedding Event) ಆಯೋಜಿಸಿದ್ದರು. ಈ ವೇಳೆ ನೂತನ ವಧುವರರಿಗೆ ವಿತರಿಸಲಾದ ಕಿಟ್‌ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳೂ ಇತ್ತು. ಆದ್ರೆ ಈ ಬಗ್ಗೆ ಕೇಳಿದಾಗ ಜಿಲ್ಲಾ ಹಿರಿಯ ಅಧಿಕಾರಿ ಭೂರಸಿಂಗ್ ರಾವತ್, ಕುಟುಂಬ ಯೋಜನೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಆರೋಗ್ಯಾಧಿಕಾರಿಗಳು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನ ವಿತರಿಸಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ

    ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ವಿತರಿಸಿರೋದಕ್ಕೆ ನಾವು ಜವಾಬ್ದಾರರಲ್ಲ. ಇದು ಆರೋಗ್ಯ ಇಲಾಖೆ ಕುಟುಂಬ ಯೋಜನೆಯ ಜಾಗೃತಿ ಕಾರ್ಯಕ್ರಮ ಆಗಿರಬಹುದು. ನಾವು ನೇರವಾಗಿ 49 ಸಾವಿರ ರೂ.ಗಳನ್ನ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತೇವೆ. ಜೊತೆಗೆ ಅವರ ಆಹಾರ, ನೀರು ಹಾಗೂ 6 ಸಾವಿರ ಮೌಲ್ಯದ ಟೆಂಟ್ ವಸತಿ ಕಲ್ಪಿಸುವ ವ್ಯವಸ್ಥೆ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಆದ್ರೆ ವಧು-ವರರಿಗೆ ವಿತರಿಸಿದ ಮೇಕಪ್ ಬಾಕ್ಸ್ಗಳಲ್ಲಿ ಏನಿತ್ತು ಎಂಬುದು ನಮಗೆ ಗೊತ್ತೇ ಇಲ್ಲ ಎಂದು ರಾವತ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್‌, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?

    2006ರ ಏಪ್ರಿಲ್‌ನಲ್ಲಿ ಮಧ್ಯಪ್ರದೇಶ ಸರ್ಕಾರವು ಕನ್ಯಾ ವಿವಾಹ/ನಿಹಾಕ್ ಯೋಜನೆಯನ್ನ ಆರಂಭಿಸಿತು. ಆರ್ಥಿಕ ದುರ್ಬಲ ವರ್ಗದ ಮಹಿಳೆಯರ ವಿವಾಹಗಳಿಗೆ ಹಣಕಾಸು ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರವು ವಧುವಿನ ಕುಟುಂಬಕ್ಕೆ 55 ಸಾವಿರ ರೂ. ನೆರವು ನೀಡುತ್ತದೆ.

  • ನಕ್ಸಲರ ಶಿಬಿರದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ

    ನಕ್ಸಲರ ಶಿಬಿರದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ

    ರಾಯ್ಪುರ: ಓಡಿಶಾ-ಛತ್ತೀಸ್‍ಗಢ (Chhattisgarh) ಗಡಿಯಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯ ವೇಳೆ ಪೊಲೀಸರು ನಕ್ಸಲರ ಅಡಗುತಾಣದಿಂದ ಕಾಂಡೋಮ್‍ಗಳು (Condoms), ಗರ್ಭ ನಿರೋಧಕ ಮಾತ್ರೆ (Contraceptive Pills) ಹಾಗೂ ಗರ್ಭಧಾರಣೆಯ ಪರೀಕ್ಷಾ ಕಿಟ್‍ಗಳನ್ನು (Pregnancy Test Kits) ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಛತ್ತೀಸ್‍ಗಢದ ಗಡಿಯಲ್ಲಿರುವ ನಬರಂಗಪುರ ಜಿಲ್ಲೆಯ ರಾಯ್ಘರ್ ಪ್ರದೇಶದಲ್ಲಿ ಯೋಧರು ನಕ್ಸಲರ ವಿರೋಧಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರ ಶಿಬಿರದಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಘಟನೆಯೇನು?: ನಬರಂಪುರದ ಪೂರ್ವ ಭಾಗದ ಉದಾಂತಿ ಅರಣ್ಯದ ಸೈಬಿನ್ ಕಚಾರ್ ಗ್ರಾಮದಲ್ಲಿ ಶಸ್ತ್ರಸಜ್ಜಿತ 20 ರಿಂದ 25 ಸಿಪಿಐ ಮಾವೋವಾದಿಗಳ ಗುಂಪು ಇರುವುದರ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರು ಬರುತ್ತಿರುವುದನ್ನು ಗಮನಿಸಿದ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ರಕ್ಷಣೆಗಾಗಿ ಮರು ದಾಳಿ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಗುಂಡಿನ ಚಕಮಕಿ ಮುಂದುವರಿದಿದೆ. ಈ ವೇಳೆ ದಟ್ಟ ಅರಣ್ಯದ ಲಾಭ ಪಡೆದ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ.

    ಈ ವೇಳೆ ನಕ್ಸಲ ಶಿಬಿರದಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕ್ಸಲರ ಅಡಗು ತಾಣದಲ್ಲಿ ಕಾಂಡೋಮ್‍ಗಳು, ಗರ್ಭನಿರೋಧಕ ಮಾತ್ರಗಳು ಹಾಗೂ ಗರ್ಭಧಾರಣೆಯ ಪರೀಕ್ಷೆಯ ಕಿಟ್‍ಗಳು ಕಂಡುಬಂದಿವೆ. ಜೊತೆಗೆ 2 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ.

    ಶಿಬಿರದಲ್ಲಿ ನಕ್ಸಲರ ಕರಪತ್ರಗಳು, ಬ್ಯಾನರ್‌ಗಳು, ಡಿಟೋನೇಟರ್‌ಗಳು ಮತ್ತು ಆಹಾರ ಪದಾರ್ಥಗಳು ಸಹ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಏ.30ಕ್ಕೆ ಚನ್ನಪಟ್ಟಣಕ್ಕೆ ಮೋದಿ – ದಶಪಥ ಹೆದ್ದಾರಿ ಮಾರ್ಗ ಬದಲಾವಣೆ

    ಮಾವೋವಾದಿ ಶಿಬಿರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಅಲ್ಲಿನ ಎಸ್ಪಿ ಹೇಳಿದರು. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ