Tag: Contestant

  • ರಾಯಚೂರಿಗೆ ಹನುಮಂತ ಭೇಟಿ – ಸೆಲ್ಫಿಗಾಗಿ ಮುಗಿಬಿದ್ದ ಜನ

    ರಾಯಚೂರಿಗೆ ಹನುಮಂತ ಭೇಟಿ – ಸೆಲ್ಫಿಗಾಗಿ ಮುಗಿಬಿದ್ದ ಜನ

    ರಾಯಚೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ’ ಕಾರ್ಯಕ್ರಮದ ರನ್ನರ್ ಅಪ್ ಹನುಮಂತ ರಾಯಚೂರಿಗೆ ಆಗಮಿಸಿದ್ದ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

    ಕರ್ನಾಟಕದ ಮನೆ ಮಾತಾಗಿರುವ ಹನುಮಂತನನ್ನು ನೋಡಲು ಬಿಸಿಲನಾಡು ರಾಯಚೂರಿನಲ್ಲಿ ಜನ ಮುಗಿಬಿದ್ದರು. ರಾಯಚೂರಿನ ಮಸ್ಕಿಯಲ್ಲಿ ನಡೆದ ಸಂತ ಸೇವಾಲಾಲ್ ಮಹಾರಾಜ್ ಜಯಂತಿಗೆ ಮುಖ್ಯ ಅತಿಥಿಯಾಗಿ ಬಂದಿದ್ದ ಹನುಮಂತಣ್ಣನನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

    ಕಾರ್ಯಕ್ರಮದಲ್ಲಿ ಹನುಮಂತನಿಗೆ ಲಂಬಾಣಿ ಸಮಾಜದವರು ಅವರದೇ ಶೈಲಿಯ ಟೋಪಿ ಹಾಗೂ ಶಾಲು ಹಾಕಿ ಸನ್ಮಾನಿಸಿದರು. ಮಸ್ಕಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದ ಬಂಜಾರ್ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಹನುಮಂತನಿಗೆ ಕೈಬೀಸಿ ಜನ ಅಭಿಮಾನ ಮೆರೆದು ಸೆಲ್ಫಿಗಾಗಿ ಮುಗಿಬಿದ್ದರು. ಅಲ್ಲದೇ ಮನೆ, ಕಟ್ಟಡಗಳ ಮೇಲೆ ನಿಂತು ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಕುತೂಹಲದ ಕಣ್ಣುಗಳಿಂದ ಬಿಸಿಲಲ್ಲಿ ಕಾದು ಹನುಮಂತನನ್ನು ನೋಡಿ ಖುಷಿಪಟ್ಟರು.

    ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದರು. ಆ ಕಾರ್ಯಕ್ರಮದಲ್ಲಿ ಹನುಮಂತ ಅವರೇ ಕೇಂದ್ರ ಬಿಂದುವಾಗಿದ್ದರು. ಹನುಮಂತ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಯಡ್ರಾಮಿ ಪಟ್ಟಣದ ಪ್ರಮುಖ ವೃತಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

    ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

    ಬೆಂಗಳೂರು: ಒಬ್ಬ ರೈತನ ಮಗನಾಗಿ ಬಿಗ್ ಬಾಸ್‍ನಲ್ಲಿ ಭಾಗವಹಿಸಿದ್ದು, ನನಗೆ ಹೆಚ್ಚು ಸಂತಸ ತಂದಿದೆ. ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ ಮಾಡಿದ್ದು ಮತ್ತಷ್ಟು ಖುಷಿ ನೀಡಿದ್ದು, ಒಬ್ಬ ಆಧುನಿಕ ರೈತನಾಗಿ ನಾಡಿನ ಜನರ ಪ್ರೀತಿ ಪಡೆದಿದ್ದಾರೆ ಎಂದು ಬಿಗ್‍ಬಾಸ್ ಸ್ಪರ್ಧಿ ಶಶಿಕುಮಾರ್ ಅವರ ತಾಯಿ ಪದ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಸ್ಪರ್ಧೆಯಲ್ಲಿ ಫೈನಲ್ ವರೆಗೂ ಬರಲು ಆತನ ಸ್ಟ್ರೈಟ್ ಫಾವರ್ಡ್ ನಡೆಯೇ ಕಾರಣ. ಬಿಗ್‍ಬಾಸ್ ಹೋಗುವ ಮುನ್ನ ಹೇಗಿದ್ದನೋ ಕಾರ್ಯಕ್ರಮದಲ್ಲೂ ತನ್ನ ತನವನ್ನು ಉಳಿಸಿಕೊಂಡು ಬಂದಿದ್ದಾನೆ. ಅವನಿಗೆ ಅವನ ಮೇಲೆ ಇರುವ ನಂಬಿಕೆಯೇ ಶಕ್ತಿ ಎಂದರು.

    ಪ್ರತಿದಿನ ಕಾರ್ಯಕ್ರಮವನ್ನು ನೋಡುತ್ತಿದ್ದು, ವಿಷ ಸರ್ಪ ಹಾಗೂ ಸಿನಿಮಾ ನಿರ್ದೇಶನ ಮಾಡಿದ ಆಟಗಳು ನನಗೆ ತುಂಬಾ ಇಷ್ಟ ಆಯ್ತು. ಆತನನ್ನು ಭೇಟಿ ಆಗಿ 3 ತಿಂಗಳು ಆಗಿದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಆತನ ಸಹಾಯ ಮಾಡುವ ಗುಣವೇ ಆತನನ್ನು ಇಲ್ಲಿಯವರೆಗೂ ಕರೆದುಕೊಂಡು ಹೋಗಿದೆ. ನಾಡಿನ ಅಷ್ಟು ಮಂದಿ ತನ್ನ ಮಗನಿಗೆ ಬೆಂಬಲ ನೀಡಿದ್ದು, ಅದು ಹಾಗೆಯೇ ಮುಂದುವರಿಯಲಿ ಎಂದು ಮನವಿ ಮಾಡಿದರು.

    ಮಗ ಬಿಗ್‍ಬಾಸ್ ಆಯ್ಕೆ ಆಗಿದ್ದು ಮೊದಲಿಗೆ ನನಗೆ ಖುಷಿ ತಂದಿದ್ದು, ಆತ ಶಿಕ್ಷಣ ಪಡೆಯುತ್ತಿರುವ ವೇಳೆಯೇ ರೈತನಾಗಿ ಮಾಡಿದ ಕಾರ್ಯಗಳು ನನಗೆ ಮೆಚ್ಚುಗೆ ಇತ್ತು. ಯಾರೇ ಕೃಷಿ ಬಗ್ಗೆ ಮಾಹಿತಿ ಕೇಳಿದ್ರು ತಪ್ಪದೇ ಕೊಡುತ್ತಿದ್ದ. ಬಿಗ್‍ಬಾಸ್ ಶೋ ಸ್ಪರ್ಧೆಯಲ್ಲಿ ಒಬ್ಬ ರೈತ ಯುವಕನಿಗೆ ಅವಕಾಶ ನೀಡುತ್ತಾರೆ ಎಂಬ ಊಹೆಯೂ ನನಗೆ ಇರಲಿಲ್ಲ. ರಾಮನಗರದಲ್ಲಿ ಫಾರ್ಮಿಂಗ್ ಮಾಡುತ್ತಿದ್ದ ಮಗ 3 ತಿಂಗಳಿನಿಂದ ನಮ್ಮೊಂದಿಗೆ ಇಲ್ಲದಿರುವುದು ಮತ್ತೊಂದೆಡೆ ತುಂಬಾ ಬೇಸರ ತಂದಿದೆ. ಆದ್ರೆ ಆತನ ಪ್ರಯತ್ನಗಳು ಈ ನಾಡಿಗೆ ಈ ಮೂಲಕ ತಿಳಿಯಿತು. ಇಷ್ಟು ದಿನ ಶಶಿಕುಮಾರ್ ಗೆ ಬೆಂಬಲ ನಿಂತ ಕನ್ನಡಿಗರಿಗೆ ವಂದನೆ ಎಂದು ಶಶಿಕುಮಾರ್ ತಂದೆ ಶ್ರೀರಾಮ್ ರೆಡ್ಡಿ ಅವರು ತಿಳಿಸಿದರು.

    ಶಶಿಕುಮಾರ್ ಭಾವ ಹರೀಶ್ ಹಾಗೂ ಸತೀಶ್ ಗೌಡ ಮಾತನಾಡಿ, 6 ಆವೃತ್ತಿಗಳಿಂದ ಬಿಗ್‍ಬಾಸ್ ನೀಡುತ್ತಿದ್ದ ಮನರಂಜನೆ ಈ ಬಾರಿ ಡಬಲ್ ಆಗಿದ್ದು, ಒಬ್ಬ ರೈತ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲ ಎಂಬುದು ಶಶಿ ಅವರಿಂದ ನಿಜವಾಗಿದೆ. ವಿವಿಧ ಕ್ಷೇತ್ರದಲ್ಲಿ ಶಶಿ ಅವರು ಗಳಿಸಿರುವ ಜ್ಞಾನವೇ ಅವರನ್ನು ಪ್ರಬಲ ಸ್ಪರ್ಧಿಯಾಗಿ ನಿಲ್ಲಿಸಿದೆ. ಬೇರೆ ಸ್ಪರ್ಧಿಗಳ ಬಗ್ಗೆ ಹಿಂದೆ, ಮುಂದೆ ಒಂದು ರೀತಿ ಮಾತನಾಡದೇ ಇರುವುದು ಆತನ ಪ್ಲಸ್ ಪಾಯಿಂಟ್. ಇದುವರೆಗೂ ಸ್ಪರ್ಧೆಯಲ್ಲಿ ಆತ ಜೈಲಿಗೆ ಹೋಗದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಸೌಂದರ್ಯ ಸ್ಪರ್ಧೆಯಲ್ಲಿ ಕೇಳಿದ ಪ್ರಶ್ನೆಗೆ ಸುಳ್ಳು ಹೇಳ್ದೆ, ಪ್ರಾಮಾಣಿಕ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿದ ಸ್ಪರ್ಧಿ

    ಮನಿಲಾ: ನೀವು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದರೆ ಏನು ಮಾಡ್ತೀರ ಅಂತ ಕೇಳಿದಾಗ ಎಲ್ಲಾ ಸ್ಪರ್ಧಿಗಳು ಸಮಾಜಕ್ಕಾಗಿ ಏನಾದ್ರೂ ಸಹಾಯ ಮಾಡ್ತೀನಿ ಎಂದು ಹೇಳಿದ್ರೆ, ಒಬ್ಬ ಸ್ಪರ್ಧಿ ಮಾತ್ರ ಸರಿಯಾಗಿ ಊಟ ಮಾಡಿ ತುಂಬಾ ದಿನ ಆಯ್ತು…. ಬಿಸಿಬೇಳೆ ಬಾತ್ ತಿಂತೀನಿ ಅಂತ ಹೇಳೋದನ್ನ ಜಾಹಿರಾತೊಂದರಲ್ಲಿ ಕೇಳಿರ್ತೀರ. ಆದೇ ರೀತಿ ಇಲ್ಲೊಬ್ಬ ಸ್ಪರ್ಧಿ ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪ್ರಾಮಾಣಿಕ ಉತ್ತರದಿಂದ ಸ್ಪರ್ಧೆಯ ನಿರ್ಣಾಯಕರನ್ನೇ ದಂಗಾಗಿಸಿದ್ದಾಳೆ.

    ಸೌಂದರ್ಯ ಸ್ಪರ್ಧೆಗಳು ಸ್ಕ್ರಿಪ್ಟೆಡ್ ಆಗಿರುತ್ತೆ, ಸ್ಪರ್ಧಿಗಳು ನೀಡೋ ಉತ್ತರ ಮೊದಲೇ ಅಭ್ಯಾಸ ಮಾಡಿಕೊಂಡು ಬಂದಿರುತ್ತಾರೆ ಎಂಬ ಆರೋಪವಿದೆ. ಆದ್ರೆ ಮಿಸ್ ಫಿಲಿಪೈನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬಳು ಪ್ರಶ್ನೋತ್ತರ ಸುತ್ತಿನಲ್ಲಿ ಸುಳ್ಳು ಹೇಳದೇ ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ಟಾಪ್ 15 ಸ್ಪರ್ಧಿಗಳಲ್ಲಿ ಮೊದಲು ವೇದಿಕೆ ಮೇಲೆ ಕರೆಯಲಾದ ಸಾಂದ್ರಾ ಲೆಮೊನಾನ್ ಗೆ ಸರ್ಕಾರಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಸರ್ಕಾರದ ಬಿಲ್ಡ್, ಬಿಲ್ಡ್, ಬಿಲ್ಡ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸ್ಪರ್ಧೆಯ ನಿರ್ಣಾಯಕರು ಕೇಳಿದ್ದರು. ಇದಕ್ಕೆ ಸಾಂದ್ರಾ ಸುಮ್ಮನೆ ಬುರುಡೆ ಬಿಡುವ ಬದಲು, ಸಾವಿರಾರು ಪ್ರೇಕ್ಷಕರ ಮುಂದೆ ತನಗೆ ಈ ಯೋಜನೆ ಬಗ್ಗೆ ಏನೂ ಗೊತ್ತಿಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾಳೆ.

    ನಿಜ ಹೇಳಬೇಕೆಂದರೆ, ನಾನು ಈ ಪ್ರಶ್ನೋತ್ತರ ಸುತ್ತಿಗಾಗಿ ಬಹಳ ಓದಿಕೊಂಡಿದ್ದೆ. ಆದ್ರೆ ಈ ವಿಷಯದ ಬಗ್ಗೆ ನನಗೆ ಹೆಚ್ಚಿಗೆ ಏನೂ ಗೊತ್ತಿಲ್ಲ. ಆದ್ರೂ ನಾನೊಂದು ಒಳ್ಳೆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಲು ಇಲ್ಲಿದ್ದೇನೆ, ಧನ್ಯವಾದ ಎಂದು ಹೇಳಿ ತನಗೆ ಆ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂಬುದನ್ನ ವೇದಿಕೆ ಮೇಲೆಯೇ ಹೇಳಿದ್ದಾಳೆ.

    ಸ್ಪರ್ಧಿಯ ಈ ಪ್ರಾಮಾಣಿಕ ಉತ್ತರ ಕೇಳಿ ಕಾರ್ಯಕ್ರಮದ ನಿರೂಪಕಿ ಹಾಗೂ 2015ರ ಮಿಸ್ ಯೂನಿವರ್ಸ್ ಪಿಯಾ ವರ್ಟ್‍ಬ್ಯಾಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆಯ ಪ್ರಾಮಾಣಿಕತೆ ನನಗೆ ಇಷ್ಟವಾಯ್ತು, ಸುಳ್ಳು ಹೇಳುವುದಕ್ಕಿಂತ ಇದು ಉತ್ತಮ ಎಂದು ವರ್ಟ್‍ಬ್ಯಾಚ್ ಹೇಳಿದ್ದಾರೆ.

    ಪ್ರಾಮಾಣಿಕ ಉತ್ತರ ನೀಡಿದ ಸಾಂದ್ರಾಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಂತಿಮವಾಗಿ ಸಾಂದ್ರಾ ಸ್ಪರ್ಧೆಯಲ್ಲಿ ಗೆದ್ದಿಲ್ಲವಾದ್ರೂ ಸಾವಿರಾರು ಅಭಿಮಾನಿಗಳನ್ನ ಗೆದ್ದಿದ್ದಾರೆ.

    https://www.youtube.com/watch?time_continue=11&v=sMJpf1DV9-4

  • ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಪ್ರವೇಶ ಪಡೆಯಲಿದ್ದಾರೆ?

    ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಪ್ರವೇಶ ಪಡೆಯಲಿದ್ದಾರೆ?

    ಬೆಂಗಳೂರು: ಬಿಗ್‍ಬಾಸ್ ಸೀಸನ್ -5 ರಿಯಾಲಿಟಿ ಶೋ ಮುಂದಿನ ವಾರದಿಂದ ಆರಂಭಗೊಳ್ಳಲಿದ್ದು, ಈ ಆವೃತ್ತಿಯಲ್ಲಿ ಯಾರ್ಯಾರು ಸ್ಪರ್ಧಿಗಳಾಗುತ್ತಾರೆಂಬ ಬಗ್ಗೆ ಕುತೂಹಲ ಎಲ್ಲರಲ್ಲೂ ಮೂಡಿದೆ.

    ಕೆಲ ನಟ-ನಟಿಯರು ಈ ರೇಸಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಂಡು ಗಾಳಿ ಸುದ್ದಿ ಹಬ್ಬಿಸಿ ಬಿಟ್ಟಿ ಪ್ರಚಾರ ಪಡೆದುಕೊಂಡಿದ್ದಾರೆ. ಇನ್ನು ಕೆಲವೊಮ್ಮೆ ವಾಹಿನಿಯೇ ಕನ್‍ಫ್ಯೂಸ್ ಮಾಡಲೆಂದೇ ಕೆಲವರ ಹೆಸರನ್ನು ತೇಲಿ ಬಿಟ್ಟಿದ್ದೂ ನಡೆದಿದೆ. ಆದರೆ ಈಗ ಕೆಲವರು ಹೆಸರನ್ನು ಕೇಳಿ ಬಂದಿದ್ದು ಅವರೇ ಫೈನಲ್ ಆಗಬಹುದು ಎಂದು ಹೇಳಲಾಗುತ್ತಿದೆ.

    ರೇಸ್‍ನಲ್ಲಿರೋ ವ್ಯಕ್ತಿಗಳು:
    ಬಿಗ್ ಬಾಸ್-5 ಆವೃತ್ತಿಯಲ್ಲಿ ಹಿರಿಯ ನಟ ಸಿಹಿ ಕಹಿ ಚಂದ್ರು, ಸಿಂಗರ್ ಚಂದನ್ ಶೆಟ್ಟಿ, ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ, ಗಾಯಕಿ ಅನುರಾಧಾ ಭಟ್ ಅಥವಾ ಸುಪ್ರಿಯಾ, ನಿರೂಪಕ ರಿಯಾಜ್, ಕಿರುತೆರೆ ನಟಿ ಕುಸುಮಾ ವರ್ಷಿಣಿ, ರಾಜೇಶ್ ನಟರಂಗ ಸೇರಿದಂತೆ ಇನ್ನೂ ಹಲವರ ಹೆಸರು ಅಂತಿಮ ರೇಸ್‍ನಲ್ಲಿ ಇದ್ದಾರೆ ಎಂದು ಹೇಳಲಾಗಿದೆ.

                                                                                           ಸಿಂಗರ್ ಚಂದನ್ ಶೆಟ್ಟಿ
                                                                                         ಗಾಯಕಿ ಅನುರಾಧಾ ಭಟ್
                                                                                         ಹಿರಿಯ ನಟ ಸಿಹಿ ಕಹಿ ಚಂದ್ರು
                                                                                                    ವಿಜಯಲಕ್ಷ್ಮಿ
                                                                                              ರಾಜೇಶ್ ನಟರಂಗ