ಕಳೆದ ಸಲದಂತೆ ಈ ಬಾರಿಯೂ ಅಕ್ಟೋಬರ್ ಮೂರನೇ ವಾರದಿಂದ ಬಿಗ್ ಬಾಸ್ ಕನ್ನಡ (Bigg Boss Kannada) ಶುರುವಾಗಲಿದೆ ಅನ್ನೋ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಸರ್ವ ರೀತಿಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಕಳೆದ ಬಾರಿ ಕಂಟೆಸ್ಟೆಂಟ್ (Contestant) ಕಾರಣದಿಂದಾಗಿ ಶೋ ಗೆದ್ದಿತ್ತು. ಈ ಬಾರಿಯೂ ಅದೇ ತಂತ್ರಕ್ಕೆ ಬಿಗ್ ಬಾಸ್ ಟೀಮ್ ಮೊರೆ ಹೋಗಲಿದೆಯಂತೆ.
ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದೋರು, ವಿವಾದಕ್ಕೆ ಕಾರಣರಾಗಿದ್ದವರು ಮತ್ತು ಹೆಚ್ಚು ಮನರಂಜನೆ ನೀಡಬಲ್ಲ ಮುಖಗಳನ್ನು ಹುಡುಕುವ ಕೆಲಸವನ್ನು ಆರಂಭಿಸಲಾಗಿದೆ. ತುಕಾಲಿ ಸಂತು ಪತ್ನಿ ಮಾನಸ, ಗಿಚ್ಚಿಗಿಲಿಗಿಲಿಯ ರಾಘವೇಂದ್ರ. ರೀಲ್ಸ್ ರೇಷ್ಮಾ ಸೇರಿದಂತೆ ಹಲವರಿಗೆ ಈಗಾಗಳೇ ಆಫರ್ ಹೋಗಿದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.
ಎಂದಿನಂತೆ ಸುದೀಪ್ (Sudeep) ಈ ಬಾರಿಯೂ ಕಾರ್ಯಕ್ರಮವನ್ನು ನಡೆಸಲಿಕೊಡಲಿದ್ದಾರೆ. ತಮ್ಮ ಹೊಸ ಸಿನಿಮಾದ ಕಾಲ್ ಶೀಟ್ ಮಧ್ಯಯೂ ಬಿಗ್ ಬಾಸ್ ಗಾಗಿ ದರ್ಶನ್ ಟೈಮ್ ಹೊಂದಿಸಿಕೊಂಡಿದ್ದಾರಂತೆ. ಜೊತೆಗೆ ಸ್ವತಃ ಸುದೀಪ್ ಅವರೇ ಹಲವು ಹೊಸ ಐಡ್ಯಾಗಳನ್ನು ಬಿಗ್ ಬಾಸ್ ಟೀಮ್ ಗೆ ನೀಡಿದ್ದಾರಂತೆ. ಅವೆಲ್ಲವನ್ನೂ ಇಟ್ಟುಕೊಂಡು ಟೀಮ್ ತಮ್ಮ ಕೆಲಸ ಶುರು ಮಾಡಿದೆ.
ಬಿಗ್ ಬಾಸ್ ಹಳೆಮನೆಯಲ್ಲೇ ಹೊಸ ರೂಪ ಕೊಟ್ಟು ಶೂಟಿಂಗ್ ಮಾಡುವ ಪ್ಲ್ಯಾನ್ ವಾಹಿನಿಯದ್ದು. ಈಗಾಗಲೇ ಮನೆಯ ಕೆಲಸ ಕೂಡ ಶುರುವಾಗಿದೆಯಂತೆ. ಹೊಸ ವಿನ್ಯಾಸದಲ್ಲಿ ಮನೆ ತಯಾರಾಗಲಿದೆ. ಹಳೆಯ ನೆನಪುಗಳು ಯಾವವು ಬಾರದಂತೆ ಮನೆ ಸಿದ್ಧವಾಗಲಿ ಇರಲಿದೆ.
ಎರಡು ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ರಂಜಿಸಿರುವ ನಟಿ ದೀಪಿಕಾ ದಾಸ್ (Deepika Das) ಯಾಕೋ ಬಿಗ್ ಬಾಸ್ ಮೇಲೆ (Bigg Boss Kannada) ಕೋಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರ ಕಂಟೆಸ್ಟೆಂಟ್ (Contestant) ಬಗ್ಗೆ ಅವರು ಗರಂ ಆಗಿದ್ದಾರೆ. ಜೊತೆಗೆ ತಮ್ಮ ಮನದಾಳದ ಅಭಿಪ್ರಾಯವನ್ನೂ ಅವರು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಎರಡೆರಡು ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ಸಿಗುವುದು ತುಂಬಾ ವಿರಳ. ಅಂಥದ್ದೊಂದು ಅವಕಾಶವನ್ನು ದೀಪಿಕಾ ಪಡೆದುಕೊಂಡಿದ್ದರು. ಎರಡೂ ಬಾರಿಯೂ ಅವರು ಉತ್ತಮ ಕಂಟೆಸ್ಟೆಂಟ್ ಆಗಿಯೇ ಜನಪ್ರಿಯತೆ ಪಡೆದರು. ಹಾಗಾಗಿ ಈ ಬಾರಿಯ ಕಂಟೆಸ್ಟೆಂಟ್ ಬಗ್ಗೆ ಅವರು ಕೋಪವಿದೆ. ಅಲ್ಲದೇ, ದೊಡ್ಮನೆಯ ಸದಸ್ಯರು ಆಡುತ್ತಿರುವ ಟಾಸ್ಕ್ ಬಗ್ಗೆ ಅವರಿಗೆ ಅಸಮಾಧಾನವಿದೆ. ಹಾಗಾಗಿಯೇ ಅವರು ಸೋಷಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಂದ ಇಂತಹ ಹುಚ್ಚುತನ, ಸಂವೇದನಾರಹಿತ ನಡೆ ಮತ್ತು ಅಸಹಿಷ್ಣುತೆಯ ವರ್ತನೆಯನ್ನು ಸಹಿಸಿಕೊಳ್ಳಲು ಅಸಾಧ್ಯ. ನಾನು ಮಾಜಿ ಸ್ಪರ್ಧಿ ಆಗಿರುವುದರಿಂದ ಯಾರನ್ನು ದೂಷಿಸಬೇಕು ಎಂದು ಅರ್ಥವಾಗುತ್ತಿಲ್ಲ. ಬಿಗ್ ಬಾಸ್ ಅವರನ್ನು ದೂಷಿಸಬೇಕಾ? ಸ್ಪರ್ಧಿಗಳನ್ನಾ ಅಥವಾ ಈ ಕಾರ್ಯಕ್ರಮ ನೋಡುವ ಪ್ರೇಕ್ಷಕರನ್ನಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಯಾರನ್ನೂ ವೈಯಕ್ತಿಕ ಗುರಿಯಾಗಿಸೋದು ಸ್ಪರ್ಧೆ ಆಗಲ್ಲ. ನನ್ನ ಪ್ರಕಾರ ಆಟವು ಆಟದಂತೆಯೇ ಇರಬೇಕು ಎಂದು ಅವರು ಸಲಹೆ ಕೂಡ ನೀಡಿದ್ದಾರೆ.
ನಿನ್ನೆಯ ಬೈಗುಳದ ಟಾಸ್ಕ್ ಬಗ್ಗೆ ಸಾಕಷ್ಟು ಜನರು ಅಸಮಾಧಾನ ತೋಡಿಕೊಂಡಿದ್ದಾರೆ. ಅದೊಂದು ರೀತಿಯ ಪರ್ಸನಲ್ ಅಟ್ಯಾಕ್ ಆಗಿತ್ತು ಎಂದು ದೂರಿದ್ದಾರೆ. ಸ್ನೇಹಿತ್ ಆಡಿದ ಮಾತಿಗೆ ಸ್ವತಃ ತನಿಷಾ ಕಣ್ಣೀರಿಟ್ಟಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾಗೆ ಸ್ನೇಹಿತ್ ಮತ್ತು ನಮ್ರತಾ ಆಡಿದ ಮಾತಿಗೆ ಅನೇಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವುಗಳ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಕೂಡ ಬಂದಿದೆ. ಹಾಗಾಗಿ ನಟಿ ದೀಪಿಕಾ ದಾಸ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಸುದೀಪ್ ಯಾವ ರೀತಿಯಲ್ಲಿ ಕಾಮೆಂಟ್ ಮಾಡುತ್ತಾರೆ ಎನ್ನುವುದನ್ನು ಕಾದನೋಡಬೇಕು.
ಬಿಗ್‍ಬಾಸ್ ಫೈನಲ್‍ಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಮನೆಯಲ್ಲಿ ಸ್ಪರ್ಧಿಗಳು ಗೇಮ್ ಪ್ಲ್ಯಾನಿಂಗ್, ಎಲಿಮಿನೇಷನ್ ಇದೆಲ್ಲ ಯೋಚನೆಯನ್ನು ಬಿಟ್ಟು ಸ್ಪರ್ಧಿಗಳು ಮಂಜು ಮದುವೆಯ ಕುರಿತಾಗಿ ಮಾತನಾಡಿದ್ದಾರೆ.
ಶುಭಾ, ಅರವಿಂದ್, ಮಂಜು, ವೈಷ್ಣವಿ, ದಿವ್ಯಾ ಸುರೇಶ್, ಚಕ್ರವರ್ತಿ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಮಂಜು ಬಳಿ ಶುಭಾ, ನಿನ್ನ ಮದುವೆಯಾಗುವ ಹುಡುಗಿ ಹೇಗಿರಬೇಕು ಎಂದು ಕೇಳಿದ್ದಾರೆ. ಈ ವೇಳೆ ಮಂಜು ತುಂಬಾ ನಾಚಿಕೆ ಮಾಡಿಕೊಂಡಿದ್ದಾರೆ.
ನನಗೆ ನಿನ್ನ ಮದುವೆ ನೋಡಬೇಕು ಎಂದು ಅನ್ನಿಸುತ್ತಿದೆ. ನಾನು ನಿನ್ನ ಮದುವೆಗೆ ಬಂದಾಗ ನಾನು ನಿಂಗೆ ಗಿಫ್ಟ್ ಕೊಡುವುದಿಲ್ಲ. ಬದಲಾಗಿ ನಿನ್ನ ಮದುವೆಯಾಗುವ ಹುಡುಗಿಗೆ ಕೊಡುತ್ತೇನೆ. ಹಾಗೇ ಒಂದು ನಿಮಿಷ ಮೌನಾಚರಣೆ ಮಾಡಿ, ತಾಯಿ ನಿನ್ನ ಬಾಳು ನಿನಗೆ ಪ್ರೀತಿ, ಇವನ ಕೈಯಲ್ಲಿ ಸಿಕ್ಕಾಕಿಕೊಂಡು ಹೇಗೆ ಬದುಕುತ್ತಿಯಾ ಅಂತ ಹೇಳಿ ಬರುತ್ತೇನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆದರೆ ಮಂಜು ಮಾತ್ರ ಚಕ್ರವರ್ತಿ ಅವರ ಮಾತಿಗೆ ಯಾವುದೇ ರಿಯ್ಯಾಕ್ಷನ್ ನೀಡದೆ ಸುಮ್ಮನೆ ಕುಳಿತಿದ್ದಾರೆ.
ನಾನು ಮಂಜು ಮದುವೆಯಾಗುವ ಹುಡುಗಿಯನ್ನು ನೋಡಬೇಕು. ಅವಳಿಗೆ ಸಾಧ್ಯವಾದಷ್ಟು ಫಿಟ್ಟಿಂಗ್ ಇಟ್ಟು ಬರುತ್ತೇನೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಇದೇ ವೇಳೆ ಶುಭಾ ಇಲ್ಲ, ನಾನು ಮಂಜು ಹುಡುಗಿ ನೋಡಲು ಜೊತೆಯಲ್ಲಿಯೇ ಹೋಗುತ್ತೇನೆ ಎಂದಿದ್ದಾರೆ. ಆಗ ಚಕ್ರವರ್ತಿ ನಾನು ಬಿಗ್‍ಬಾಸ್ ಸೀಸನ್ 8 ಅವರು ಎಲ್ಲರೂ ಸೇರಿ ಮಂಜು ಹುಡುಗಿ ನೋಡಲು ಹೋಗೋಣ ಎಂದಿದ್ದಾರೆ. ಆಗಲೂ ಮಂಜು ಮಾತ್ರ ಚಕ್ರವರ್ತಿ ಅವರ ಮಾತಿ ಸುಮ್ಮನೇ ತಲೆ ಅಲ್ಲಾಡಿಸಿ ಕುಳಿತಿದ್ದಾರೆ.
ನಾನು ಬರುತ್ತೇನೆ ಚಂಪು ಹುಡುಗಿ ನೋಡಲು ಎಂದು ಶುಭಾ ಹೇಳಿದಾಗ, ಮಂಜು ನಾನು ನಿನ್ನ ಹುಡುಗಿ ನೋಡಲು ಕರೆದುಕೊಂಡು ಹೋಗುತ್ತೇನೆ. ಆದರೆ ವಾಪಸ್ ಬರುವಾಗ ನಿನ್ನ ಅಲ್ಲೇ ಬಿಟ್ಟು ಬರುತ್ತೇನೆ. ಯಾಕೆಂದ್ರೆ ನೀನು ಅಲ್ಲೇ ಇದ್ದು ಎಲ್ಲಾ ಹೇಳಿ ಬಾ ಎಂದು ಹೇಳಿ ತಮಾಷೆ ಮಾಡಿದ್ದಾರೆ.
ಆಗ ದಿವ್ಯಾ ಹೊಂದಿಕೊಂಡು ಹೋಗಬೇಕು, ಲಕ್ಷಣವಾಗಿರಬೇಕು ಹುಡುಗಿ ಎಂದು ಹೇಳಿದ್ದಾರೆ. ಆಗ ಶುಭಾ ನಾನು ನಿನ್ನ ಹುಡುಗಿ ಬಳಿ ನಿನ್ನ ಕುರಿತಾಗಿ ಏನೂ ಹೇಳುವುದಿಲ್ಲ, ಯಾರಿಗೆ ಗೊತ್ತು ನಿನ್ನ ನೋಡಿ ಇಷ್ಟ ಆಗದೇ ಇರಬಹುದು. ನಾನು ನಿನ್ನ ಜೊತೆಗೆ ಬಂದರೆ ಹುಡುಗಿ ನಿನ್ನ ಒಪ್ಪಿಕೊಳ್ಳಬಹುದು. ಹೀಗಾಗಿ ನಾನು ಬರುತ್ತೇನೆ ಎಂದು ಶುಭಾ ಹೇಳಿದಾಗ ಮಂಜು ಶಾಕ್ ಆಗಿದ್ದಾರೆ. ಅಲ್ಲೇ ಜೊತೆಯಲ್ಲೇ ಇದ್ದ ವೈಷ್ಣವಿ, ದಿವ್ಯಾ ಜೋರಾಗಿ ನಕ್ಕಿದ್ದಾರೆ.
ಚಕ್ರವರ್ತಿ ಮಂಜು ಹುಡುಗಿಯ ಸುಳಿವು ಕೋಡುತ್ತಾರಾ ಎಂದು ಮತ್ತೆ ಮತ್ತೆ ಕೇಳಿದ್ದಾರೆ. ಯಾವ ತರ ಹುಡುಗಿ ಇರಬೇಕು ಎಂದು ನೀನು ಹೇಳುವುದಿಲ್ಲವಾ ಎಂದು ಕೇಳಿದ್ದಾರೆ. ಆಗ ಮಂಜು ಈಗ ಯಾಕೇ ಬಿಡಪ್ಪ ನೀನು ಮದುವೆ ಬರುತ್ತಿಯಲ್ಲ ಆಗ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಇಲ್ಲ ನಾನು ಹುಡುಗಿ ನೋಡಲೇ ಬರುತ್ತೇನೆ ಎಂದಿದ್ದಾರೆ. ಆಗ ಮಂಜು ಬೇಡ ಬೇಡ.. ನೀನು ಮದುವೆ ಬಾ ಎಂದು ಹೇಳಿ ತಮಾಷೆ ಮಾಡಿದ್ದಾರೆ.
ಬಿಗ್‍ಬಾಸ್‍ಮನೆಯಲ್ಲಿ ಇಷ್ಟು ದಿನ, ಜಗಳ, ಮುನಿಸು, ಕಿತ್ತಾಟಗಳನ್ನು ನೋಡಿ ಬೇಸರವಾಗಿರುವ ವೀಕ್ಷಕರಿಗೆ ಮಂಜು ಮದುವೆಯ ಕುರಿತಾಗಿ ಮಾತನಾಡುತ್ತಾ ಮನೆಮಂದಿ ಕೊಂಚ ಸಮಯ ತಮಾಷೆಯಾಗಿ ಕಾಲಕಳೆದಿರುವುದು ಸಖತ್ ಮನರಂಜನೆಯನ್ನು ಕೊಟ್ಟಿದೆ.
ಬೆಂಗಳೂರು: ಬಿಗ್ ಬಾಸ್ ಮನೆಗೆ ಸ್ಪರ್ಧಿ ಚಂದನಾ ಅವರು ಎಂಟ್ರಿ ಕೊಟ್ಟು ಮನೆಯ ಸ್ಪರ್ಧಿಗಳ ಬಳಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಶುಕ್ರವಾರ ಹಾಡು ಹಾಡುವ ಮೂಲಕವೇ ಚಂದನಾ ಕನ್ಛೇಶನ್ ರೂಮಿನಿಂದ ಮನೆಯೊಳಗೆ ಪ್ರವೇಶಿಸಿದರು. ಚಂದನಾ ಬರುತ್ತಿದ್ದಂತೆ ಮೊದಲು ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಬಳಿಕ ಮನೆಯ ಸದಸ್ಯರೆಲ್ಲಾ ಚಂದನಾ ಅವರನ್ನು ತಪ್ಪಿಕೊಂಡು ಸ್ವಾಗತಿಸಿದ್ದಾರೆ. ಚಂದನಾರನ್ನು ನೋಡಿ ಸದಸ್ಯರು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ.
ಚಂದನಾ ಲಿವಿಂಗ್ ಏರಿಯಾದಲ್ಲಿ ಕುಳಿತು ನಾನು ನಿಮ್ಮೆಲ್ಲರಾ ಜೊತೆ ಸಿಹಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಈ ವಿಷಯವನ್ನು ನಾನು ಇದುವರೆಗೂ ಯಾರ ಬಳಿಯೂ ಹಂಚಿಕೊಂಡಿಲ್ಲ. ಮೊದಲ ಬಾರಿಗೆ ನಿಮ್ಮೆಲ್ಲರಾ ಬಳಿ ಹೇಳುತ್ತಿದ್ದೇನೆ ಎಂದರು. ಚಂದನಾ ಈ ರೀತಿ ಹೇಳುತ್ತಿದ್ದಂತೆ ತಕ್ಷಣ ವಾಸುಕಿ ನಿಮಗೆ ಮದುವೆ ಫಿಕ್ಸ್ ಆಯ್ತಾ ಎಂದು ಹೇಳಿದ್ದಾರೆ. ಇದನ್ನು ಕೇಳಿ ಚಂದನಾ ಹಾಗೂ ಮನೆಯ ಸದಸ್ಯರು ನಕ್ಕಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಹೊಸದೊಂದು ಹಾಡಿನ ಕಾರ್ಯಕ್ರಮ ಶುರುವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಚಂದನಾ ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದಾರೆ. ಈ ವಿಷಯವನ್ನು ಚಂದನಾ ಬಿಗ್ ಬಾಸ್ ಮನೆಯ ಸದಸ್ಯರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕಾಗಿ ವಾಸುಕಿ ಅವರಿಗೆ ಶೀರ್ಷಿಕೆ ಗೀತೆ ಬರೆದುಕೊಡಲು ಹೇಳಿದ್ದಾರೆ. ವಾಸುಕಿ ಕಾರ್ಯಕ್ರಮಕ್ಕಾಗಿ ಹಾಡನ್ನು ಬರೆದು ಅದನ್ನು ಲಿವಿಂಗ್ ಏರಿಯಾದಲ್ಲಿ ಕುಳಿತುಕೊಂಡು ಹಾಡು ಹಾಡಿದ್ದಾರೆ. ವಾಸುಕಿ ಹಾಡು ಹಾಡಿದ ಬಳಿಕ ಬಿಗ್ ಬಾಸ್ ಚಂದನಾರನ್ನು ಮನೆಯಿಂದ ಹೊರಡುವಂತೆ ಹೇಳುತ್ತಾರೆ. ಆಗ ವಾಸುಕಿ, ಚಂದನಾರನ್ನು ತಪ್ಪಿಕೊಂಡು ಮುತ್ತು ನೀಡಿ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಹೊಸ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ ಶೇಷಮ್ಮ ಎಂಬವರು ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿ ಹರೀಶ್ ರಾಜ್ ಅವರು ಮಹಿಳೆಯಂತೆ ಸೀರೆ ಧರಿಸಿ, ಮೇಕಪ್ ಮಾಡಿಕೊಂಡಿದ್ದರು. ಅಲ್ಲದೆ ಮಹಿಳೆಯಂತೆ ಮಾತನಾಡುವ ಮೂಲಕ ಮನೆ ಮಂದಿಗೆ ಮನರಂಜನೆ ನೀಡಿದ್ದಾರೆ. ಪ್ರಿಯಾಂಕಾ ಅವರು ಹರೀಶ್‍ಗೆ ತಮ್ಮ ಸೀರೆಯನ್ನೇ ಉಡಿಸಿದ್ದಾರೆ. ಸದ್ಯ ಮಹಿಳೆಯಂತೆ ವೇಷ ಧರಿಸಿದ ಬಳಿಕ ಶೇಷಮ್ಮ ನಾನು ಹರೀಶ್ ತಂಗಿ ಎಂದುಕೊಂಡು ಮನೆ ತುಂಬಾ ಓಡಾಡಿದ್ದಾರೆ.
ಹರೀಶ್ ಅವರು ಮಹಿಳೆ ಸೀರೆ ಹಾಕಿರುವುದನ್ನು ನೋಡಿ ಸ್ಪರ್ಧಿಗಳು ಮೊದಲು ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ ಎಂದುಕೊಂಡಿದ್ದರು. ಬಳಿಕ ಹರೀಶ್ ಮನರಂಜನೆಗಾಗಿ ಈ ರೀತಿ ಮಾಡಿದ್ದಾರೆ ಎಂಬುದು ಮನೆ ಮಂದಿಗೆ ತಿಳಿಯಿತು. ಹರೀಶ್ ಮಹಿಳೆಯಂತೆ ಮಾತನಾಡುವಾಗ ಗಾರ್ಡನ್ ಏರಿಯಾದಲ್ಲಿದ್ದ ಭೂಮಿ ಹಾಗೂ ವಾಸುಕಿ ಹೊಸ ಸ್ಪರ್ಧಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂದುಕೊಂಡಿದ್ದರು. ಬಳಿಕ ಮನೆಯೊಳಗೆ ಬಂದು ನೋಡಿದಾಗ ಹರೀಶ್ ಅವರನ್ನು ನೋಡಿ ಶಾಕ್ ಆದರು.
ಈ ಹಿಂದೆ ಕಳ್ಳ- ಪೊಲೀಸ್ ಟಾಸ್ಕ್ ನಲ್ಲಿ ಹರೀಶ್ ಶೇಷಪ್ಪ ಎಂಬ ಪಾತ್ರವನ್ನು ಹುಟ್ಟು ಹಾಕಿದ್ದರು. ಈ ವೇಳೆ ಅವರು ಹೋರಾಟಗಾರನಂತೆ ನಟಿಸಿದ್ದರು. ಇತ್ತೀಚೆಗೆ ಅವರು ಕ್ಯಾಪ್ಟನ್ ಆಗಿದ್ದಾಗ ತೆಲುಗು ರೆಡ್ಡಿಗಾರು ಎಂಬ ಪಾತ್ರವನ್ನು ಸೃಷ್ಟಿಸಿ ಅದರಂತೆ ನಟಿಸಿದ್ದರು. ಹರೀಶ್ ಪ್ರತಿ ಬಾರಿ ಹೊಸ ಪಾತ್ರವನ್ನು ಸೃಷ್ಟಿಸಿ ತಮ್ಮ ಟ್ಯಾಲೆಂಟ್ ಅನ್ನು ಹೊರ ಹಾಕುತ್ತಾರೆ. ಸದ್ಯ ಹರೀಶ್ ಅವರ ಶೇಷಮ್ಮ ಪಾತ್ರವನ್ನು ಮನೆಯವರು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.
ಮುಂಬೈ: ಬಿಗ್ ಬಾಸ್ ಸೀಸನ್-13 ಹಿಂದಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಬ್ಬರು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ ಹಾಗೂ ರಶ್ಮಿ ದೇಸಾಯಿ ಬಿಗ್ ಬಾಸ್ ಮನೆಯಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಇವರ ರೊಮ್ಯಾನ್ಸ್ ದೃಶ್ಯವನ್ನು ಮತ್ತೊಬ್ಬ ಸ್ಪರ್ಧಿ ಶೆಹ್ನಾಜ್ ಗಿಲ್ ಮೊಬೈಲಿನಲ್ಲಿ ಚಿತ್ರಿಕರಿಸಿದ್ದು, ಇದು ಟಾಸ್ಕ್ ನ ಒಂದು ಭಾಗ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಶೆಹ್ನಾಜ್ ನಿರ್ದೇಶಕರಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಅವರಿಗೆ ರೊಮ್ಯಾನ್ಸ್ ಹೇಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದಾರೆ.
ಪ್ರೋಮೋದಲ್ಲಿ ಧಾರವಾಹಿಗಾಗಿ ಕೆಲವು ವರ್ಷಗಳ ಹಿಂದೆ ಸಿದ್ಧಾರ್ಥ್ ಹಾಗೂ ರಶ್ಮಿ ರೊಮ್ಯಾಂಟಿಕ್ ಸೀನ್‍ನಲ್ಲಿ ನಟಿಸಿದ್ದರು. ಈ ವಿಡಿಯೋವನ್ನು ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಿದ್ದರು. ಸಿದ್ಧಾರ್ಥ್ ವಿಡಿಯೋ ನೋಡಿ ಖುಷಿಪಟ್ಟರೆ, ರಶ್ಮಿ ತಮ್ಮ ಮುಖದ ಮೇಲೆ ಕೈ ಇಟ್ಟುಕೊಂಡು ನಾಚಿಕೊಳ್ಳುತ್ತಾರೆ. ಬಳಿಕ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಸಮ್ಮುಖದಲ್ಲಿ ರೊಮ್ಯಾನ್ಸ್ ಮಾಡುತ್ತಾರೆ. ಇವರು ರೊಮ್ಯಾನ್ಸ್ ಮಾಡುವಾಗ ಬಿಗ್ ಬಾಸ್ ‘ಸಾತಿಯಾ’ ಚಿತ್ರದ ‘ಅಯೇ ಉಡಿ ಉಡಿ ಉಡಿ’ ಹಾಡನ್ನು ಪ್ರಸಾರ ಮಾಡಿದ್ದಾರೆ.
ರೊಮ್ಯಾಂಟಿಕ್ ಸೀನ್‍ಗಾಗಿ ಸಿದ್ಧಾರ್ಥ್ ಹಾಗೂ ರಶ್ಮಿ ಬಳಿ ಬಣ್ಣ ಶರ್ಟ್ ಧರಿಸಿದ್ದಾರೆ. ಇವರ ರೊಮ್ಯಾನ್ಸ್‍ಗಾಗಿ ಹಾಸಿಗೆ ಮೇಲೆ ಗುಲಾಬಿ ದಳದಿಂದ ಹೃದಯದ ಆಕಾರದಲ್ಲಿ ಜೋಡಿಸಲಾಗಿತ್ತು. ಬಳಿಕ ಶೆಹ್ನಾಜ್ ಇಬ್ಬರಿಗೆ ಲಿವಿಂಗ್ ಏರಿಯಾ ಆಗೂ ಸ್ವಿಮ್ಮಿಂಗ್ ಪೂಲ್‍ನಲ್ಲಿ ರೊಮ್ಯಾನ್ಸ್ ಮುಂದುವರಿಸಲು ಹೇಳಿದ್ದಾರೆ. ಸ್ವಿಮ್ಮಿಂಗ್ ಪೂಲ್ ಸಹ ಗುಲಾಬಿ ದಳದಿಂದ ಅಲಂಕರಿಸಲಾಗಿತ್ತು. ಬಳಿಕ ಇಬ್ಬರು ಸ್ವಿಮ್ಮಿಂಗ್ ಪೂಲ್‍ನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ.
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸ ಸ್ಪರ್ಧಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಪ್ರತಿ ಸೀಸನ್‍ನಲ್ಲಿ ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಆರ್ ಜೆ ಪೃಥ್ವಿ ಎಂಟ್ರಿ ಕೊಟ್ಟಿದ್ದು, ಈಗ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.
ಖಾಸಗಿ ವಾಹಿನಿ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಯುವತಿಯೊಬ್ಬರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಪ್ರವೇಶಿಸಿದ ಸ್ಪರ್ಧಿ ಯಾರಿಗೂ ಪರಿಚಯ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ವೈಲ್ಡ್ ಕಾರ್ಡ್ ಸ್ಪರ್ಧಿ ಕಿಶನ್ ಅವರಿಗೆ ಮಾತ್ರ ಪರಿಚಯ ಇದ್ದಾರೆ ಎಂಬುದು ಪ್ರೋಮೋ ನೋಡಿದರೆ ತಿಳಿಯುತ್ತಿದೆ. ಏಕೆಂದರೆ ಸ್ಪರ್ಧಿ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಈ ವೇಳೆ ಮನೆಯ ಸದಸ್ಯರು ಹೊಸ ಎಂಟ್ರಿ ಯಾರು? ಎಂದು ಅಚ್ಚರಿಗೊಂಡಿದ್ದಾರೆ.
ಮಾಹಿತಿ ಪ್ರಕಾರ, ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ. ರಕ್ಷಾ, ನಟ ಕಾರ್ತಿಕ್ ಜಯರಾಂ ನಟಿಸಿದ್ದ `ಮೇ 1′ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇವರೇ ಈಗ ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವುದು ಎನ್ನಲಾಗಿದೆ.
ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ ಅವರನ್ನು ಹೊಗಳಿದ ಸ್ಪರ್ಧಿ ಮೇಲೆ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಬೇಸರಗೊಂಡಿದ್ದಾರೆ.
ಪೂಜಾ ಜಾ ಎಂಬವರು ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಮಿತಾಬ್ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಹಾಗೂ ಐಶ್ವರ್ಯ ಅಣ್ಣ – ತಂಗಿಯಾಗಿ ನಟಿಸಿದ ಚಿತ್ರ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ.
ಈ ಪ್ರಶ್ನೆಗೆ ಪೂಜಾ ‘ಜೋಶ್’ ಎಂದು ಉತ್ತರಿಸಿದ್ದರು. ಉತ್ತರ ನೀಡಿದ ಬಳಿಕ ಪೂಜಾ ನಟಿ ಐಶ್ವರ್ಯರನ್ನು ಹೊಗಳಲು ಶುರು ಮಾಡುತ್ತಾರೆ. “ನಾನು ಐಶ್ವರ್ಯ ಅವರ ದೊಡ್ಡ ಅಭಿಮಾನಿ. ನನಗೆ ಅವರ ಕಣ್ಣುಗಳೆಂದರೆ ನನಗೆ ತುಂಬಾ ಇಷ್ಟ” ಎಂದು ಹೇಳಿದ್ದರು.
ಪೂಜಾ ಅವರ ಮಾತಿನಿಂದ ಅಚ್ಚರಿಗೊಂಡ ಬಿಗ್-ಬಿ, ನಾನು ತುಂಬಾ ಬೇಸರಗೊಂಡಿದ್ದೆನೆ. ನೀನು ನನ್ನ ಕಣ್ಣುಗಳನ್ನು ಹೊಗಳಲಿಲ್ಲ. ಆದರೆ ನಾನು ನಿಮ್ಮ ಈ ಮಾತನ್ನು ಐಶ್ವರ್ಯಗೆ ಮರೆಯದೆ ಹೇಳುತ್ತೇನೆ ಎಂದು ಹೇಳಿ ಅಮಿತಾಬ್ ನಗಲು ಶುರು ಮಾಡುತ್ತಾರೆ.
2007ರಲ್ಲಿ ಐಶ್ವರ್ಯ ರೈ ನಟ ಅಭಿಷೇಕ್ ಬಚ್ಚನ್‍ರನ್ನು ಮದುವೆಯಾಗಿದ್ದರು. ದೀಪಾವಳಿ ಹಬ್ಬಕ್ಕೆ ಅಮಿತಾಬ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ನಟ ಶಾರೂಕ್ ಖಾನ್-ಗೌರಿ ಖಾನ್, ಅಜಯ್ ದೇವಗನ್-ಕಾಜೋಲ್, ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ, ಕರಣ್ ಜೋಹರ್ ಸೇರಿದಂತೆ ಹಲವು ಕಲಾವಿದರಿಗೆ ಆಹ್ವಾನ ನೀಡಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಸೀಸನ್ -7 ಸ್ಪರ್ಧಿ ದುನಿಯಾ ರಶ್ಮಿ ಅವರು ನಾನು ಸತ್ತು ಹುಟ್ಟಿದ್ದವಳು ಎಂಬ ವಿಷಯವನ್ನು ಹೇಳಿದ್ದಾರೆ.
ಗುರುವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಈ ವೇಳೆ ಸ್ಪರ್ಧಿಗಳ ತಮ್ಮ ತಂದೆ-ತಾಯಿ ಬಗ್ಗೆ ಮಾತನಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಮೊದಲು ಚಂದನಾ ಹಾಗೂ ಕಿಶನ್ ಶುರು ಮಾಡಿದ್ದರು. ಬಳಿಕ ಸ್ಪರ್ಧಿಗಳು ತಮ್ಮ ತಂದೆ-ತಾಯಿ ಜೊತೆ ಆಗಿರುವ ಅನುಭವವನ್ನು ಹಂಚಿಕೊಂಡರು.
ಈ ಟಾಸ್ಕ್ ನಲ್ಲಿ ಮಾತನಾಡಿದ ದುನಿಯಾ ರಶ್ಮಿ, ನಮ್ಮ ತಂದೆ-ತಾಯಿಗೆ ಮೂರು ಜನ ಮಕ್ಕಳಿದ್ದರು. ಮೊದಲು ನನ್ನ ಅಣ್ಣ ಹುಟ್ಟಿದ್ದ. ಬಳಿಕ ನಾನು ಹುಟ್ಟಿದೆ. ಆದರೆ ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿರಲಿಲ್ಲ. ನನ್ನ ತಾಯಿ ಹಾಗೂ ದೊಡ್ಡಮ್ಮ ನನ್ನ ತಂದೆಗೆ ಸಮಾಧಾನ ಮಾಡಿದ್ದರು. ಬಳಿಕ ನಮ್ಮ ಫ್ಯಾಮಿಲಿ ಚೆನ್ನಾಗಿಯೇ ಇತ್ತು. ನನ್ನ ತಂದೆ ಕೂಡ ನನಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.
ಈ ನಡುವೆ ನನ್ನ ತಾಯಿ ರಾಜಕೀಯಕ್ಕೆ ಪ್ರವೇಶಿದ್ದರು. ನನ್ನ ತಂದೆಯೇ ಅಮ್ಮನಿಗೆ ಬಲವಂತ ಮಾಡಿ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಿದ್ದರು. ಅಮ್ಮ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ನಂತರ ನನ್ನ ತಾಯಿ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದನು. ಆಗ ನನ್ನ ತಂದೆ ನನ್ನ ತಾಯಿ ಮೇಲೆ ಅನುಮಾನಪಡಲು ಶುರು ಮಾಡಿದ್ದರು. ನನ್ನ ತಾಯಿ ವೀಝಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಮಲಗಲು ತುಂಬಾ ಕಷ್ಟಪಡುತ್ತಿದ್ದರು ಎಂದು ಹೇಳುತ್ತಾ ಭಾವುಕರಾದರು.
ಒಂದು ದಿನ ಅಪ್ಪ-ಅಮ್ಮನ ನಡುವೆ ಜಗಳವಾಗುತ್ತಿತ್ತು. ಶಬ್ದ ಕೇಳಿ ನಾನು ಒಳಗಡೆ ಹೋಗಿ ನೋಡಿದೆ. ಆಗ ನನ್ನ ತಂದೆ ತಾಯಿಯ ತಾಳಿ ಎಳೆಯುತ್ತಿದ್ದರು. ಇದಾದ ಬಳಿಕ ನನ್ನ ತಾಯಿ, ನನ್ನ ಜೊತೆ ಬರುತ್ತೀರಾ. ಈ ಮನೆಯಲ್ಲಿ ಇರುವುದು ಬೇಡ. ಬೇರೆ ಎಲ್ಲಿಯಾದರೂ ದೂರ ಹೋಗೋಣ ಎಂದರು. ಬಳಿಕ ಆ ರಾತ್ರಿಯೇ ನಾವು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇವು. ಆ ಸಂದರ್ಭದಲ್ಲಿ ನಮ್ಮ ಬಳಿ ಹಣವಿರಲಿಲ್ಲ, ಕೇವಲ ಚಿನ್ನವಿತ್ತು. ಮನೆ ಬಿಟ್ಟು ಬಂದ ನಂತರ ನನ್ನ ತಂದೆಗೆ ಕರೆ ಮಾಡಿದಾಗ ನೀನು ಯಾರು ಎಂದು ಪ್ರಶ್ನಿಸಿದರು ಎಂದರು.
ನೀನು ಯಾರು ಎಂದು ನನ್ನ ತಂದೆ ಪ್ರಶ್ನಿಸಿದಾಗ ನಾವು ಮತ್ತೆ ಅವರನ್ನು ಕರೆ ಮಾಡಲು ಹೋಗಲಿಲ್ಲ. ಬಳಿಕ ದೊಡಮ್ಮನಿಗೆ ಕರೆ ಮಾಡಿದಾಗ ಅವರು ನಮಗೆ ಮಡಿಕೇರಿಗೆ ಕರೆದುಕೊಂಡು ಹೋದರು. ನನ್ನ ತಾಯಿಗೆ ವೀಝಿಂಗ್ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದೆ. ಆದರೆ ನನ್ನ ಬಳಿ ಹಣವಿರಲಿಲ್ಲ. ಹೀಗೆ ರಸ್ತೆಯಲ್ಲಿ ಹೋಗುವಾಗ ಕಾಲ್ಗೆಜ್ಜೆ ಬಿದ್ದಿತ್ತು. ಅದನ್ನು ಮಾರಿ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿದ್ದೇನೆ. ಇದುವರೆಗೂ ನನ್ನ ತಾಯಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ ಎಂದು ರಶ್ಮಿ ಟಾಸ್ಕ್ ನಲ್ಲಿ ತಿಳಿಸಿದರು.
ಮುಂಬೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸೆಟ್‍ನಿಂದಲೇ ನೇರವಾಗಿ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆಯೊಂದು ಮರಾಠಿ ಬಿಗ್ ಬಾಸ್ ಎರಡನೇ ಅವೃತ್ತಿಯಲ್ಲಿ ನಡೆದಿದೆ.
ಬಿಗ್‍ಬಾಸ್ ಸ್ಪರ್ಧಿಯಾದ ಅಭಿಜಿತ್ ಬಿಚುಕಲೆ ಅವರ ವಿರುದ್ಧ ಸತಾರಾ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು ಈ ಪ್ರಕರಣದ ಮೇಲೆ ಅವರನ್ನು ಬಂಧಿಸಲಾಗಿದೆ. ರಾಜಕೀಯ ಕಾರ್ಯಕರ್ತನಾಗಿರುವ ಅಭಿಜೆತ್ ಬಿಚುಕಲೆ ಅವರನ್ನು ರಾಜಕೀಯ ಕೋಟಾದ ಮೇಲೆ ಬಿಗ್‍ಬಾಸ್‍ಗೆ ಆಯ್ಕೆ ಮಾಡಲಾಗಿತ್ತು.
2015ದಿಂದ ಈ ಚೆಕ್ ಬೌನ್ಸ್ ಪ್ರಕರಣ ಕೋರ್ಟಿನಲ್ಲಿ ಇತ್ತು. ಈ ವಿಚಾರವಾಗಿ ಕೋರ್ಟ್ ಅಭಿಜಿತ್ ಅವರಿಗೇ ಎಷ್ಟು ಸಲ ಸಮನ್ಸ್ ಕಳುಹಿಸಿದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅದ್ದರಿಂದ ಕೋರ್ಟ್ ಅವರ ಮೇಲೆ ವಾರೆಂಟ್ ಜಾರಿ ಮಾಡಿತ್ತು. ಈ ಕಾರಣದಿಂದ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರೂ ಅವರನ್ನು ಅಲ್ಲಿಂದಲೇ ನೇರವಾಗಿ ಬಂಧಿಸಿ ಕರೆದುಕೊಂಡು ಬರಲಾಗಿದೆ.
ಕೋರ್ಟ್ ವಾರೆಂಟ್ ನೀಡಿದ ಬಳಿಕ ಸತಾರಾ ಠಾಣಾ ಪೊಲೀಸರು ಮತ್ತು ಗೋರೆಗಾಂವ್ ಪೂರ್ವದ ಆರೆ ಕಾಲೋನಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿ ಫಿಲ್ಮ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಬಿಗ್‍ಬಾಸ್ ಸೀಸನ್ 2 ರ ಸೆಟ್‍ಗೆ ನೇರವಾಗಿ ಹೋಗಿ ಅಲ್ಲಿಂದಲೇ ಅಭಿಜಿತ್ ಅವರನ್ನು ಬಂಧಿಸಿ ಕರೆದುಕೊಂದು ಕೊಂಡು ಬಂದಿದ್ದಾರೆ. ಈ ಸಮಯದಲ್ಲಿ ಶೋನ ಸಿಬ್ಬಂದಿ ಯಾರೂ ವಿರೋಧ ಪಡಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಿವಾದತ್ಮಾಕ ವ್ಯಕ್ತಿಯಾಗಿರುವ ಅಭಿಜಿತ್ ಪುರಸಭೆ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಯಾವುದೇ ಯಶಸ್ಸು ಕಂಡಿರಲಿಲ್ಲ. ಅಭಿಜಿತ್ ಅವರನ್ನು ಬಂಧಿಸಿ ಸತಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಇಂದು ಕೋರ್ಟ್‍ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.