Tag: Containment Zone

  • ಲಾಕ್‍ಡೌನ್ ಅಂತ್ಯವಾದ್ರೂ ಬೆಂಗ್ಳೂರಿನ 18 ಏರಿಯಾಗಳಿಗಿಲ್ಲ ರಿಲೀಫ್!

    ಲಾಕ್‍ಡೌನ್ ಅಂತ್ಯವಾದ್ರೂ ಬೆಂಗ್ಳೂರಿನ 18 ಏರಿಯಾಗಳಿಗಿಲ್ಲ ರಿಲೀಫ್!

    – ಕಂಟೈನ್ಮೆಂಟ್ ಝೋನ್‍ನಲ್ಲಿ ಏನಿರಲ್ಲ?

    ಬೆಂಗಳೂರು: ಕೊರೊನಾ ವೈರಸ್ ಲಾಕ್ ಡೌನ್ ಭಾನುವಾರಕ್ಕೆ ಅಂತ್ಯವಾದರೂ ಕಂಟೈನ್ಮೆಂಟ್ ಝೋನ್ ಗಳಿಗೆ ಮಾತ್ರ ರಿಲೀಫ್ ಇಲ್ಲ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ ಡೌನ್ ಮುಗಿದರೂ 18 ಏರಿಯಾಗಳಲ್ಲಿ ಮಾತ್ರ ಮತ್ತಷ್ಟು ನಿರ್ಬಂಧ ಜಾರಿಯಾಗಲಿದೆ. ಕಂಟೈನ್ಮೆಂಟ್ ಝೋನ್ ಗಳ ಮೇಲೆ ನಿಗಾ ಇರಿಸಲಾಗುತ್ತಿದ್ದು, ಮತ್ತಷ್ಟು ಟಫ್ ರೂಲ್ಸ್ ಜಾರಿಯಾಗೋ ಸಾಧ್ಯತೆ ಇದೆ.

    ಒಂದು ವೇಳೆ ಕೊರೊನಾ ಪಾಸಿಟಿವ್ ಪತ್ತೆಯಾದರೆ ಎಲ್ಲದಕ್ಕೂ ಬ್ರೇಕ್ ಬೀಳಬಹುದು. ಇಂದಿನ ಪ್ರಕಾರ ಕಂಟೈನ್ಮೆಂಟ್ ಝೋನ್ ಲಿಸ್ಟ್ ನಲ್ಲಿರುವ ವಾರ್ಡ್ ಗಳ ವಿವರ ಹಾಗೂ ಪ್ರಕರಣಗಳ ಮಾಹಿತಿ ಹೀಗಿದೆ.

    1. ವಸಂತ ನಗರ – 2 ಪ್ರಕರಣ
    2. ಹಂಪಿ ನಗರ – 4 ಪ್ರಕರಣ
    3. ಬೈರಸಂದ್ರ – 1 ಪ್ರಕರಣ
    4. ಯಶವಂತಪುರ – 1 ಪ್ರಕರಣ
    5. ದೀಪಾಂಜಲಿನಗರ – 1 ಪ್ರಕರಣ

    6. ಬೀಳೇಕಹಳ್ಳಿ – 1 ಪ್ರಕರಣ
    7. ಹಗದೂರು – 6 ಪ್ರಕರಣ
    8. ಕೆ ಆರ್ ಮಾರುಕಟ್ಟೆ – 7 ಪ್ರಕರಣ
    9. ಪಾದರಾಯನ ಪುರ – 57 ಪ್ರಕರಣ
    10. ಶಿವಾಜಿನಗರ 5 + 11 – 16 ಪ್ರಕರಣ

    11. ಹೋಗಸಂದ್ರ -38 ಪ್ರಕರಣ
    12. ಬೇಗೂರು – 1 ಪ್ರಕರಣ
    13. ಬಿಟಿಎಂ ಲೇಔಟ್ – 1 ಪ್ರಕರಣ
    14. ಶಿವಾಜಿನಗರ – 16 ಪ್ರಕರಣ
    15. ಮಂಗಮ್ಮನ ಪಾಳ್ಯ – 3 ಪ್ರಕರಣ

    16.ಮಲ್ಲೇಶ್ವರಂ – 1 ಪ್ರಕರಣ
    17. ಹೆಚ್ ಬಿ ಆರ್ ಲೇಔಟ್ – 1 ಪ್ರಕರಣ
    18. ಹೇರೊಹಳ್ಳಿ – 1 ಪ್ರಕರಣ

    ಏನಿರಲ್ಲ..?
    ಕಂಟೈನ್ಮೆಂಟ್ ಝೋನಿನಲ್ಲಿ ಅಡ್ಡಾದಿಡ್ಡಿ ಓಡಾಟ ಇರಲ್ಲ. ಕೆಲಸ ಕಾರ್ಯಕ್ಕೆ ಹೋಗುವಂತಿಲ್ಲ. ವಾಣಿಜ್ಯ ವಹಿವಾಟಿಗೆ ಅವಕಾಶವಿಲ್ಲ. ಟೆಸ್ಟ್ ಗೆ ಒಳಪಟ್ಟರೆ ಕೊರೊನಾ ನೆಗೆಟಿವ್ ಬರುವವರೆಗೂ ಕಾಯಬೇಕು. ಶುಭ ಸಮಾರಂಭಗಳಿಗೆ ಅವಕಾಶ ಇಲ್ಲ.

  • ತಮ್ಮ ವೇತನದಿಂದ ಕಂಟೈನ್ಮೆಂಟ್ ಝೋನ್‍ನಲ್ಲಿರೋ ಬಡವರಿಗೆ ಉಚಿತ ದಿನಸಿ ವಿತರಿಸ್ತಿರೋ ಪೇದೆ

    ತಮ್ಮ ವೇತನದಿಂದ ಕಂಟೈನ್ಮೆಂಟ್ ಝೋನ್‍ನಲ್ಲಿರೋ ಬಡವರಿಗೆ ಉಚಿತ ದಿನಸಿ ವಿತರಿಸ್ತಿರೋ ಪೇದೆ

    ಬೆಳಗಾವಿ/ಚಿಕ್ಕೋಡಿ: ಕಂಟೈನ್ಮೆಂಟ್ ಝೋನ್‍ನಲ್ಲಿರುವ ಬಡ ಜನರು ಹೊರಗೆ ಬರಲಾಗದೆ ಅವರ ಜೀವನ ತುಂಬಾ ಕಷ್ಟವಾಗಿದೆ. ಇದೀಗ ಇವರ ಸ್ಥಿತಿಯನ್ನ ನೋಡಿ ಪೊಲೀಸ್ ಕಾನ್ಸ್‌ಟೇಬಲ್ ಸಹಾಯ ಮಾಡುತ್ತಿದ್ದಾರೆ.

    ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಬಿ.ಕೆ.ನಾಗನೂರೆ ದಿನನಿತ್ಯ ಬಡವರಿಗೆ ತರಕಾರಿ ಹಂಚುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸಂಕೇಶ್ವರ ಪಟ್ಟಣವನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

    ಸಂಕೇಶ್ವರ ಪಟ್ಟಣದಲ್ಲಿ ಬಡವರು ದಿನಗೂಲಿ ಇಲ್ಲದೇ ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅವರು ದಿನನಿತ್ಯ ಎಪಿಎಂಸಿ ಯಾರ್ಡ್‌ನಿಂದ ತರಕಾರಿ ಖರೀದಿಸಿ ಬಡವರಿಗೆ ತರಕಾರಿ ಸೇರಿದಂತೆ ದಿನಸಿ ಸಾಮಗ್ರಿಗಳನ್ನ ಹಂಚುತ್ತಿದ್ದಾರೆ.

    ಸಂಕೇಶ್ವರ ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ತಮ್ಮಿಂದ ಆದ ಸಹಾಯವನ್ನ ಪೊಲೀಸ್ ಪೇದೆ ಮಾಡುತ್ತಿದ್ದಾರೆ. ಬಡವರ ಸ್ಥಿತಿ ನೋಡಿ ತಮ್ಮ ವೇತನದ ಹಣದಿಂದ ಸಹಾಯ ಮಾಡುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಕಂಟೈನ್ಮೆಂಟ್ ಝೋನ್ ಮಾಡಲು ಜನರು ವಿರೋಧ

    ಕಂಟೈನ್ಮೆಂಟ್ ಝೋನ್ ಮಾಡಲು ಜನರು ವಿರೋಧ

    ದಾವಣಗೆರೆ: ಕೊರೊನಾ ಸೋಂಕಿತನ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಆಗಿ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಜನರು ವಿರೋಧ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಿವನಗರದಲ್ಲಿ ಕಂಟೈನ್ಮೆಂಟ್ ಝೋನ್ ಮಾಡಲು ಜನರು ವಿರೋಧ ಮಾಡುತ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದ ಯುವಕನ ಏರಿಯಾವನ್ನು ಕಂಟೈನ್‍ಮೆಂಟ್ ವಲಯವನ್ನಾಗಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ವೇಳೆ ಕಂಟೈನ್ಮೆಂಟ್ ಝೋನ್ ಮಾಡಬೇಡಿ ಎಂದು ನೂರಾರು ಜನರು ತಡೆದಿದ್ದಾರೆ.

    ಅಜ್ಮೀರ್‌ನಿಂದ ದಾವಣಗೆರೆಗೆ ಆಗಮಿಸಿದ್ದ 22 ವರ್ಷದ ಯುವಕನಿಗೆ ಕೊರೊನಾ ಬಂದಿದೆ. ರೋಗಿ ನಂಬರ್ 847 ಯುವಕ ಶಿವನಗರದ ನಿವಾಸಿ. ಹೀಗಾಗಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಯುವಕನ ಇಡೀ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಮಾಡಲು ಜಿಲ್ಲಾಡಳಿತ ಹೋಗಿದೆ. ಆಗ ಶಿವನಗರ ನಿವಾಸಿಗಳು ಕಂಟೈನ್ಮೆಂಟ್ ಝೋನ್ ಮಾಡದಂತೆ ಅಡ್ಡಿಪಡಿಸಿದ್ದಾರೆ.

    ನೂರಾರು ಜನರು ಒಂದೇ ಸ್ಥಳದಲ್ಲಿ ಆಗಮಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ 144 ಸೆಕ್ಷನ್ ಇದ್ದರೂ ಕೂಡ ಜನರು ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ಹಾಗೂ ನಿವಾಸಿಗಳ ನಡುವೆ ವಾಗ್ವಾದ ನಡೆದಿದೆ. ಒಂದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಂಟೈನ್ಮೆಂಟ್ ಝೋನ್ ಮಾಡುತ್ತೀರ ಎಂದು ಜನರು ಆರೋಪ ಮಾಡಿದ್ದಾರೆ.

  • ಕಂಟೈನ್‍ಮೆಂಟ್ ಏರಿಯಾದಲ್ಲಿ ಶಾಸಕ ನಾಗೇಂದ್ರ ರೇಷನ್ ಕಿಟ್ ವಿತರಣೆ

    ಕಂಟೈನ್‍ಮೆಂಟ್ ಏರಿಯಾದಲ್ಲಿ ಶಾಸಕ ನಾಗೇಂದ್ರ ರೇಷನ್ ಕಿಟ್ ವಿತರಣೆ

    ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ 26ನೇ ವಾರ್ಡಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಇಡೀ ಪ್ರದೇಶವನ್ನ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿದೆ. ಹೀಗಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ರೇಷನ್ ಕಿಟ್ ವಿತರಿಸಿದ್ದಾರೆ.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ದಿನ ಕಂಟೈನ್‍ಮೆಂಟ್ ಏರಿಯಾದ ನೂರಾರು ಕುಟುಂಬ ಸದಸ್ಯರಿಗೆ ರೇಷನ್ ಕಿಟ್‍ಗಳನ್ನ ಶಾಸಕ ನಾಗೇಂದ್ರ ವಿತರಿಸಿದರು.

    ಕೌಲ್ ಬಜಾರ್ ವ್ಯಾಪ್ತಿಯ 26ನೇಯ ವಾರ್ಡಿನ ಪ್ರತಿಯೊಂದು ಮನೆಗಳಿಗೆ ತೆರಳಿದ ಶಾಸಕ ಬಿ.ನಾಗೇಂದ್ರ ಅವರು, ರೇಷನ್ ಕಿಟ್, ತರಕಾರಿ, ಹಾಲು, ಮೊಸರನ್ನ ವಿತರಿಸಿದರು. ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳ ಶಾಸಕ ನಾಗೇಂದ್ರ ಪೂರೈಸಿದ್ದಾರೆ.

    ಈ ವೇಳೆ ಮಾತನಾಡಿದ ಶಾಸಕ ನಾಗೇಂದ್ರ, ಅಂದಾಜು ಸಾವಿರಕ್ಕೂ ಅಧಿಕ ಕಿಟ್‍ಗಳನ್ನ ವಿತರಿಸಲಾಯಿತು. ಅದರೊಂದಿಗೆ ತರಕಾರಿ, ಹಾಲು, ಮೊಸರನ್ನ ವಿತರಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಎಂದು ಈ ಪ್ರದೇಶವನ್ನು ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಕೊರತೆಯಾಗಬಾರದೆಂಬ ಸದುದ್ದೇಶದೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ. ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನ ವಿತರಿಸಲಾಗಿದೆ. ವಾರದ ನಂತರ ಬೇಡಿಕೆಯಿದ್ದರೆ ಪೂರೈಕೆಗೂ ಸದಾ ಸಿದ್ಧವಿರುವುದಾಗಿ ಶಾಸಕ ನಾಗೇಂದ್ರ ತಿಳಿಸಿದ್ದಾರೆ.

  • ಕಂಟೈನ್‍ಮೆಂಟ್ ಝೋನ್ ಟಿಪ್ಪು ನಗರದಲ್ಲಿ ಮಹಿಳೆಯರ ಪ್ರತಿಭಟನೆ

    ಕಂಟೈನ್‍ಮೆಂಟ್ ಝೋನ್ ಟಿಪ್ಪು ನಗರದಲ್ಲಿ ಮಹಿಳೆಯರ ಪ್ರತಿಭಟನೆ

    -ಕಾರ್ಪೋರೇಟರ್ ಬೆಂಬಲಿಗರಿಂದ ಧರಣಿ

    ಬೆಂಗಳೂರು: ಕೆ.ಆರ್.ಮಾರ್ಕೆಟ್ ಕಾರ್ಪೋರೇಟರ್ ನಾಜಿಮಾ ಖಾನ್ ಮೇಲಿನ ಹಲ್ಲೆ ಖಂಡಿಸಿ ಟಿಪ್ಪು ನಗರದ ಮಹಿಳೆಯರು ಕಂಟೈನ್‍ಮೆಂಟ್ ಝೋನ್ ಎಂಬುದನ್ನು ಮರೆತು ಪ್ರತಿಭಟನೆ ನಡೆಸಿದ್ದಾರೆ.

    ಶುಕ್ರವಾರ ಚಾಮರಾಜಪೇಟೆಯ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾಜಿಮಾ ಖಾನ್ ಆರೋಪಿಸಿದ್ದರು. ಇಂದು ಪೊಲೀಸರು ವಿರುದ್ಧ ನಾಜಿಮಾ ಖಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಶಾಸಕ ಜಮೀರ್ ಅಹಮದ್ ಬರುವಂತೆ ಆಗ್ರಹಿಸಿದ್ದಾರೆ.

    ಕಾರ್ಪೋರೇಟ್ ನಜಿಮಾ ಖಾನ್ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಕಂಟೈನ್‍ಮೆಂಟ್ ಝೋನ್ ನಲ್ಲಿ ಓಡಾಡಿದ್ದರು. ಕರ್ತವ್ಯದಲ್ಲಿದ್ದ ಇನ್‍ಸ್ಪೆಕ್ಟರ್ ನಜಿಮಾರ ಐಡಿ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದರು. ಆದ್ರೆ ಇನ್‍ಸ್ಪೆಕ್ಟರ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ರು ಎಂದು ನಜಿಮಾ ಆರೋಪಿಸಿದ್ದಾರೆ.

  • ಮದ್ಯದಂಗಡಿ ಎದುರು ಕಾದು ಕುಳಿತವರಿಗೆ ನಿರಾಸೆ!

    ಮದ್ಯದಂಗಡಿ ಎದುರು ಕಾದು ಕುಳಿತವರಿಗೆ ನಿರಾಸೆ!

    – ಕಂಟೈನ್ಮೆಂಟ್ ಝೋನ್‍ನಲ್ಲಿ ಇಲ್ಲ ಎಣ್ಣೆ ಮಾರಾಟ

    ಬಳ್ಳಾರಿ: ಕಳೆದ 41 ದಿನಗಳಿಂದ ಮದ್ಯಕ್ಕಾಗಿ ಕಾದು ಕುಳಿತಿದ್ದ ಜಿಲ್ಲೆಯ ಹೊಸಪೇಟೆ ನಗರದ ನಿವಾಸಿಗಳಿಗೆ ನಿರಾಶೆ ಎದುರಾಗಿದೆ. ಕೊರೊನಾ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಿದ್ದ ಸರ್ಕಾರ ಸದ್ಯ ಕೆಲ ಸಡಿಲಿಕೆಯನ್ನು ಜಾರಿ ಮಾಡಿದೆ. ಲಾಕ್‍ಡೌನ್ ಜಾರಿ ಇದ್ದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಜಿಲ್ಲೆಯ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿರುವುದರಿಂದ ಮದ್ಯ ಪ್ರಿಯಯರು ನಿರಾಸೆ ಅನುಭವಿಸಿದ್ದಾರೆ.

    ಹಳದಿ ವಲಯದಲ್ಲಿರುವ ಜಿಲ್ಲೆಯ ಹೊಸಪೇಟೆ ನಗರ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಮದ್ಯ ಮಾರಾಟ ಜೋರಾಗಿದೆ. ಆದರೆ ಹೊಸಪೇಟೆ ನಗರದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ನಗರವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಝೋನ್ ಮಾಡಿಲಾಗಿರುವ ಕಾರಣ ಮದ್ಯ ಮಾರಾಟ ಮಾಡಲು ನಿರಾಕರಿಸಲಾಗಿದೆ.

    ಇತ್ತ ಮದ್ಯ ದಂಗಡಿ ತೆರೆಯಲಿದೆ ಎಂದು ಭಾವಿಸಿದ್ದ ಹಲವರು ಬೆಳಿಗ್ಗೆ ಇಂದಲೇ ಹೊಸಪೇಟೆ ನಗರದಲ್ಲಿರುವ ಮದ್ಯದಂಗಡಿ ಎದುರು ಕಾದು ಕುಳಿತ್ತಿದ್ದರು. ಆದರೆ ಶಾಪ್ ಮಾತ್ರ ಓಪನ್ ಆಗಲೇ ಇಲ್ಲಾ. ಪರಿಣಾಮ ಅಂಗಡಿಯ ಎದುರು ಕಾದು ಕಾದು ಸುಸ್ತಾದ ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿ ಬೇಸರದಿಂದಲೇ ಮನೆಗಳತ್ತ ತೆರಳಿದರು.

  • ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ಯಾವ ಜಿಲ್ಲೆಯಲ್ಲಿ ಎಷ್ಟು ಕಂಟೈನ್‍ಮೆಂಟ್ ಝೋನ್?

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಬೆಂಗಳೂರಿನಲ್ಲಿ ಇಳಿಕೆ ಕಂಡಿದೆ.

    ರೆಡ್ ಝೋನ್ ಮೈಸೂರು ಜಿಲ್ಲೆಯಲ್ಲಿ ಒಟ್ಟು 28 ಕಂಟೈನ್‍ಮೆಂಟ್ ವಲಯಗಳಿವೆ. ಇದರಲ್ಲಿ ಮೈಸೂರು ನಗರದ ಕೆಲವು ಪ್ರದೇಶ, ನಂಜನಗೂಡಿನ ಕೆಲವು ಬಡಾವಣೆ, ಮೈಸೂರು ತಾಲೂಕು ಕೆಲವು ಏರಿಯಾ ಹಾಗೂ ಟೀ ನರಸೀಪುರದ 1 ಗ್ರಾಮ ಸೇರಿವೆ.

    ಸಿಲಿಕಾನ್ ಸಿಟಿಯಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ 25ರಿಂದ 22ಕ್ಕೆ ಇಳಿಕೆಯಾಗಿದೆ. ಕೆಂಪು ವಲಯವನ್ನ ತೆಗೆದು ನೇರಳೆ ಮತ್ತು ಕಡು ನೇರಳೆ ಎರಡು ವಲಯಗಳನ್ನ ಬಿಬಿಎಂಪಿ ವಿಂಗಡನೆ ಮಾಡಿದೆ. ಹೊರಮಾವು, ಗುರಪ್ಪನ ಪಾಳ್ಯ ಮತ್ತು ಜೆಪಿ ನಗರವನ್ನು ಕಂಟೈನ್‍ಮೆಂಟ್ ಝೋನ್‍ನಿಂದ ಕೈ ಬಿಡಲಾಗಿದೆ.

    ಆರೆಂಜ್ ಝೋನ್ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್‍ಮೆಂಟ್ ವಲಯಗಳಿವೆ. ಮಳವಳ್ಳಿ ಪಟ್ಟಣದಲ್ಲಿ 7, ಮಂಡ್ಯ ನಗರದ ಪೇಟೆ ಬೀದಿ, ಸ್ವರ್ಣಸಂದ್ರ ಬಡಾವಣೆ, ನಾಗಮಂಗಲದ 1 ಬಡಾವಣೆ, ಪಾಂಡವಪುರದ ಡಿ ಕೋಡಗಹಳ್ಳಿ, ಕೆ.ಆರ್.ಪೇಟೆ ರಾಜಘಟ್ಟ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.

    ಆರೆಂಜ್ ಝೋನ್ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 18 ಕಂಟೈನ್‍ಮೆಂಟ್ ವಲಯಗಳಿವೆ. ಕಲಬುರಗಿ ನಗರದಲ್ಲಿ 15, ಚಿತ್ತಾಪುರದಲ್ಲಿ 2 ಹಾಗೂ ಆಳಂದದಲ್ಲಿ 1 ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 10 ಕಂಟೈನ್‍ಮೆಂಟ್ ವಲಯಗಳಿವೆ. ಜಮಖಂಡಿ 3 ಏರಿಯಾ, ಮುಧೋಳದ ಸಾಯಿನಗರ ಬಡಾವಣೆ, ಬಾಗಲಕೋಟೆ ನಗರದ 6 ವಾರ್ಡ್ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.

    ಆರೆಂಜ್ ಝೋನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಕಂಟೈನ್‍ಮೆಂಟ್ ವಲಯಗಳಿವೆ. ಮಂಗಳೂರು ನಗರದಲ್ಲೇ 4, ಬಂಟ್ವಾಳದಲ್ಲಿ 3, ಪುತ್ತೂರಿನಲ್ಲಿ 2 ಇವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್‍ಮೆಂಟ್ ವಲಯಗಳಿವೆ. ಹಿರೇಬಾಗೇವಾಡಿಯಲ್ಲಿ 3, ಬೆಳಗಾವಿ ನಗರದಲ್ಲಿ 1, ಹುಕ್ಕೇರಿಯಲ್ಲಿ 1, ರಾಯಬಾಗದಲ್ಲಿ 1 ಇದೆ.

    ಕಿತ್ತಳೆ ವಲಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್‍ಮೆಂಟ್ ವಲಯಗಳಿವೆ. ಚಿಕ್ಕಬಳ್ಳಾಪುರ ನಗರದ 4 ವಾರ್ಡ್, ಗೌರಿಬಿದನೂರಿನ 2 ವಾರ್ಡ್ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 4 ಕಂಟೈನ್‍ಮೆಂಟ್ ವಲಯಗಳಿವೆ. ವಿಜಯಪುರದ ಚಪ್ಪರ್ ಬಂದ್ ಸುತ್ತಮುತ್ತಲ ಪ್ರದೇಶ 3, ಬಾರಾಮಮಾನ್ 1 ಇದೆ.

    ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3 ಕಂಟೈನ್‍ಮೆಂಟ್ ವಲಯಗಳಿವೆ. ಹೊಸಪೇಟೆ ನಗರ, ಸಿರಗುಪ್ಪ ಎಚ್ ಹೊಸಹಳ್ಳಿ, ಬಳ್ಳಾರಿ ತಾಲೂಕಿನ ಗುಗ್ಗರಹಟ್ಟಿ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ. ಬೀದರ್ ನಲ್ಲಿ ಒಟ್ಟು 2 ಕಂಟೈನ್‍ಮೆಂಟ್ ಝೋನ್‍ಗಳಿವೆ. ಬೀದರ್ ತಾಲೂಕು ಓಲ್ಡ್ ಸಿಟಿ ಹಾಗೂ ಬಸವಕಲ್ಯಾಣ. ದಾವಣಗೆರೆಯ 2 ಪ್ರದೇಶ ಭಾಷಾನಗರ ಹಾಗೂ ಜಾಲಿನಗರ, ಗದಗನ ರಂಗನವಾಡಿ ಹಾಗೂ ಗಂಜಿ ಬಸವೇಶ್ವರ ಸರ್ಕಲ್ ಪ್ರದೇಶಗಳು ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.

    ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರ ಮಾತ್ರ ಕಂಟೈನ್‍ಮೆಂಟ್ ಝೋನ್ ಆಗಿದೆ. ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರವನ್ನು ಕಂಟೈನ್‍ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.

  • ಹೊಂಗಸಂದ್ರ ಕಂಟೈನ್‍ಮೆಂಟ್ ಪ್ರದೇಶಕ್ಕೆ ಡಿಎಚ್‍ಒ ಭೇಟಿ

    ಹೊಂಗಸಂದ್ರ ಕಂಟೈನ್‍ಮೆಂಟ್ ಪ್ರದೇಶಕ್ಕೆ ಡಿಎಚ್‍ಒ ಭೇಟಿ

    ಬೆಂಗಳೂರು: ಹೊಂಗಸಂದ್ರದ ಕಂಟೈನ್‍ಮೆಂಟ್ ಝೋನ್‍ಗೆ ಇಂದು ಡಿಎಚ್‍ಒ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗೆ ಎಲ್ಲಾ ಮುನ್ನೆಚ್ಚರಿಕೆ ವಹಿಸುವಂತೆ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.

    ಹೊಂಗಸಂದ್ರ ಈಗ ಹಾಟ್ ಸ್ಪಾಟ್ ಆಗಿರುವುದರಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಫಿವರ್ ಕ್ಲಿನಿಕ್ ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಫಿವರ್ ಕ್ಲಿನಿಕ್‍ಗೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ವೈದ್ಯಕೀಯ ಸಿಬ್ಬಂದಿ ಅಗತ್ಯ ಔಷಧಿ ನೀಡಿ ಕಳುಹಿಸುತ್ತಿದ್ದಾರೆ.

    ಇಲ್ಲಿ ಮೊದಲ ಬಾರಿಗೆ ಪಾಸಿಟಿವ್ ಕಾಣಿಸಿದ ಬಿಹಾರ ಮೂಲದ ಕಾರ್ಮಿಕ ಆರೋಗ್ಯ ಇಲಾಖೆಗೆ ಭಾರೀ ಸವಾಲಾಗಿದ್ದು ಆತನ ಸಂಪರ್ಕವನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಬಿಹಾರಿ ಕಾರ್ಮಿಕನ ಮನೆಯ ಸುತ್ತಮುತ್ತ ವಾಸವಿದ್ದ ಏರಿಯಾದವರಿಗೆಲ್ಲಾ ಗಂಟಲು ದ್ರವ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸಾಮಾನ್ಯವಾಗಿ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊರತುಪಡಿಸಿ, ಸೀಲ್ಡ್ ಡೌನ್ ಆಗಿದ್ದ ಭಾಗದಲ್ಲಿ ಯಾರಿಗಾದ್ರೂ ಗುಣ ಲಕ್ಷಣಗಳು ಕಂಡುಬಂದರಷ್ಟೇ ಟೆಸ್ಟ್ ನಡೆಸುತ್ತಿದ್ರು. ಆದರೆ ಬಿಹಾರಿ ಕಾರ್ಮಿಕ ಪಾಸಿಟಿವ್ ಬಂದ ಬೆನ್ನಲ್ಲೇ ಈತನ ಕಾಂಟಾಕ್ಟ್ ನಲ್ಲಿರುವವರಿಗೂ ಪಾಸಿಟಿವ್ ಬಂದಿದೆ. ಹೀಗಾಗಿ ಅಲರ್ಟ್ ಆದ ಆರೋಗ್ಯ ಇಲಾಖೆ ಅತ್ಯಧಿಕ ಸಂಖ್ಯೆಯಲ್ಲಿ ಹೊಂಗಸಂದ್ರ ಭಾಗದಿಂದ ಸ್ಯಾಂಪಲ್ ಕಲೆಕ್ಟ್ ಮಾಡಲು ನಿರ್ಧರಿಸಿದೆ.

    ಹೊಂಗಸಂದ್ರದಲ್ಲಿ ಆತಂಕದ ವಾತಾವರಣವಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳು ಕಂಪ್ಲೀಟ್ ಬಂದ್ ಆಗಿವೆ. ಹೊಂಗಸಂದ್ರದಲ್ಲಿ ನಿರಂತರ ಪಾಸಿಟಿವ್ ಪ್ರಕರಣ ಏರಿಕೆಯಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ರಕ್ಷಣಾ ಕವಚ ನೀಡಲಾಗಿದೆ. ಕಸ ಎತ್ತುವ ಮೊದಲು ಕಸಕ್ಕೆ ರಾಸಾಯನಿಕ ಸಿಂಪಡಣೆ ಮಾಡಿ ನಂತರ ಕಸದ ಗಾಡಿಗಳಿಗೆ ಹಾಕುತ್ತಿದ್ದಾರೆ.

    ಹೊಂಗಸಂದ್ರದ ವಿದ್ಯಾಜ್ಯೋತಿ ನಗರ ಸುತ್ತಮುತ್ತ ಬಿಬಿಎಂಪಿ ವತಿಯಿಂದ ಔಷಧಿ ಸಿಂಪಡಣೆ ಕಾರ್ಯವೂ ಇಂದು ನಡೆದಿದೆ.

  • ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಕಂಟೈನ್‍ಮೆಂಟ್ ಜೋನ್‍ಗಳಿಗೆ? ಇಲ್ಲಿದೆ ವಿವರ

    ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಕಂಟೈನ್‍ಮೆಂಟ್ ಜೋನ್‍ಗಳಿಗೆ? ಇಲ್ಲಿದೆ ವಿವರ

    ಬೆಂಗಳೂರು: ಕೊರೊನಾ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಮಾತ್ರ ಲಾಕ್‍ಡೌನ್ ಸಡಿಲಿಕೆ ನಿಯಮ ಅನ್ವಯ ಆಗಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಕೊರೋನಾ ಪೀಡಿತ ಜಿಲ್ಲೆಗಳ 359 ಪ್ರದೇಶಗಳನ್ನು ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.

    ರಾಜ್ಯದ ಕಂಟೈನ್‍ಮೆಂಟ್ ಜೋನ್‍ಗಳು 
    * ಬೆಂಗಳೂರು – 19
    * ಮೈಸೂರು – 12
    * ನಂಜನಗೂಡು ಪಟ್ಟಣ ಮತ್ತು ಐದು ಗ್ರಾಮ
    * ಕಲಬುರಗಿ – 17
    * ಚಿತ್ತಾಪುರ, ಶಹಬಾದ್, ವಾಡಿ, ಆಳಂದ

    * ಬಾಗಲಕೋಟೆ – 11
    * ಮಂಗಳೂರು – 7
    * ಚಿಕ್ಕಬಳ್ಳಾಪುರ -04
    * ಬಳ್ಳಾರಿ, ಬೆಳಗಾವಿ – 03
    * ಸಂಕೇಶ್ವರ ಮತ್ತು ಕುಡಚಿ ಪಟ್ಟಣ
    * ಬೆಂಗಳೂರು ಗ್ರಾಮಾಂತರ, ಮಂಡ್ಯ, ಹುಬ್ಬಳ್ಳಿ, ಬೀದರ್, ಗೌರಿಬಿದನೂರು -2
    * ಬಸವಕಲ್ಯಾಣ ಮತ್ತು ಮನ್ನಾಏಖೇಳಿ ಪಟ್ಟಣ
    * ಚಿತ್ರದುರ್ಗ, ಶಿರಾ, ಕಾರವಾರ, ವಿಜಯಪುರ, ಗದಗ -01

    ಕಂಟೈನ್‍ಮೆಂಟ್ ಜೋನ್‍ನಲ್ಲಿ ಏನಿರುತ್ತೆ..?
    > ಆಸ್ಪತ್ರೆ, ಮೆಡಿಕಲ್ ಶಾಪ್, ಜನೌಷಧಿ ಕೇಂದ್ರ
    > ಲ್ಯಾಬ್, ಆಂಬ್ಯುಲೆನ್ಸ್ ಸೇವೆ, ವೆಟರ್ನರಿ ಆಸ್ಪತ್ರೆ
    > ಮನೆ ಮನೆಗೆ ದಿನಸಿ ಸೇರಿ ಅಗತ್ಯ ವಸ್ತುಗಳು
    > ತುರ್ತು ಸೇವೆಯಲ್ಲಿರುವವರ ಓಡಾಟಕ್ಕೆ ಅವಕಾಶ