Tag: Constitution Day

  • ಸಂವಿಧಾನ ಬದಲಾಯಿಸುತ್ತೇವೆ ಎಂದ ಬಿಜೆಪಿಯನ್ನೇ ಜನ ಬದಲಾಯಿಸಿದರು : ಡಿಕೆಶಿ

    ಸಂವಿಧಾನ ಬದಲಾಯಿಸುತ್ತೇವೆ ಎಂದ ಬಿಜೆಪಿಯನ್ನೇ ಜನ ಬದಲಾಯಿಸಿದರು : ಡಿಕೆಶಿ

    ಬೆಂಗಳೂರು: ಸಂವಿಧಾನವನ್ನು ಕಿತ್ತು ಹಾಕುತ್ತೇವೆ, ಹರಿದು ಹಾಕುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದ ಬಿಜೆಪಿಯವರನ್ನೇ ಜನರು ಬದಲಾಯಿಸಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಹೇಳಿದರು.

    ನಗರದ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಗಳವಾರ (ನ.26) ನಡೆದ ಸಂವಿಧಾನ ದಿನಾಚರಣೆಯಲ್ಲಿ (Constitution Day) ಮಾತನಾಡಿದ ಅವರು, ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಅವರು ತಮ್ಮ ಎಲ್ಲಾ ಭಾಷಣದ ವೇಳೆಯೂ ಸಂವಿಧಾನದ ಪ್ರತಿ ಹಿಡಿದು ಮಾತು ಪ್ರಾರಂಭಿಸುತ್ತಿದ್ದರು. ಇದರಿಂದ ಪ್ರಧಾನ ಮಂತ್ರಿಗಳು ಸಂವಿಧಾನ ಪ್ರತಿಗೆ ನಮಸ್ಕರಿಸಿ ಪ್ರಮಾಣ ವಚನ ತೆಗೆದುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಯಿತು. ನಮ್ಮ ಇಂಡಿಯಾ ಒಕ್ಕೂಟದ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದು ಇತಿಹಾಸ ಎಂದರು.ಇದನ್ನೂ ಓದಿ: ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ, ನಾವು ಎಚ್ಚರಿಕೆಯಿಂದ ಇರಬೇಕು: ಸಿಎಂ

    ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ, ಮಾರಾಟ ಮಾತ್ರ ಆಗಬೇಡ ಎನ್ನುವ ಕಿವಿಮಾತನ್ನು ರಾಜಕಾರಣಿಗಳಿಗೆ ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವುಗಳು ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಪ್ರತಿಯೊಬ್ಬರು ಇತಿಹಾಸದಿಂದ ಪಾಠ ಕಲಿಯಬೇಕು ಎನ್ನುವ ಸಂದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ ಎಂದು ಹೇಳಿದರು.

    ಅನೇಕ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಮಾರಾಟವಾಗಿರುವ ನಿದರ್ಶನಗಳನ್ನು ನೋಡಿದ್ದೇವೆ. ಇದು ನಮ್ಮೆಲ್ಲರ ಬದುಕಿಗೂ ಸಂಬಂಧ ಪಡುತ್ತದೆ ಎನ್ನುವ ಕಿವಿಮಾತನ್ನು ನಮಗೆ ಅಂಬೇಡ್ಕರ್ ಅವರು ಬಿಟ್ಟು ಹೋಗಿದ್ದಾರೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳನ್ನು ಆಯಾ ಧರ್ಮದವರು ಪವಿತ್ರ ಎಂದು ಹೇಳುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ. ಇದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.

    ನಮ್ಮ ರಾಜಕೀಯ ಆಯಸ್ಸು ಇನ್ನು 10-15 ವರ್ಷ, ವಿದ್ಯಾರ್ಥಿಗಳು ಮುಂದಿನ 60- 70 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವವರು. ಅವರಿಗೆ ಸಂವಿಧಾನದ ಬಗ್ಗೆ ಅಡಿಪಾಯ ಹಾಕಬೇಕು ಎನ್ನುವ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಬಬಾಮ ಅವರು ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷ ಈ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಸ್ಮರಿಸಿಕೊಳ್ಳುವಂತಹ ಮಹಾನ್ ಗ್ರಂಥ ನಮಗೆ ನೀಡಿದ್ದಾರೆ ಎಂದು ಹೇಳಿದರು.

    ಮಹದೇವಪ್ಪಗೆ ಮೆಚ್ಚುಗೆ
    ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಗೆ ಹೊಸ ರೂಪವನ್ನು ನೀಡಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆದ ಮೇಲೆ ಮಹದೇವಪ್ಪ ಅವರನ್ನು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು. ಗುಣಕ್ಕೆ ಮತ್ಸರವಿಲ್ಲ ಎನ್ನುವ ರೀತಿ ನಮ್ಮ ಸಂವಿಧಾನವೇ ನಮ್ಮ ಧರ್ಮ. ಈ ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಅವರು ಸಂವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಂವಿಧಾನ ಪೀಠಿಕೆಯನ್ನು ಶಾಲಾ, ಕಾಲೇಜುಗಳಲ್ಲಿ ಪಠಿಸಬೇಕು ಎನ್ನುವ ಹೊಸ ಆಚರಣೆಗೆ ನಾಂದಿ ಹಾಡಿದವರು. ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.ಇದನ್ನೂ ಓದಿ: ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ – 400 ಲೀಟರ್ ಸೇಂದಿ ಜಪ್ತಿ

  • ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ, ನಾವು ಎಚ್ಚರಿಕೆಯಿಂದ ಇರಬೇಕು: ಸಿಎಂ

    ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ, ನಾವು ಎಚ್ಚರಿಕೆಯಿಂದ ಇರಬೇಕು: ಸಿಎಂ

    – ನಮ್ಮ ಸಂವಿಧಾನವನ್ನು ಆರ್‌ಎಸ್‌ಎಸ್‌, ಸಾವರ್ಕರ್‌ ವಿರೋಧಿಸಿದ್ದರು

    ಬೆಂಗಳೂರು: ನಮ್ಮ ಸಂವಿಧಾನವನ್ನು ಸಾವರ್ಕರ್, RSS ವಿರೋಧ ಮಾಡಿತ್ತು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆರೋಪ ಮಾಡಿದರು.

    ಸಂವಿಧಾನ ದಿನದ ಅಂಗವಾಗಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ, ಈ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಕಿಡಿಕಾರಿದರು. ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಬೇಕು ಎಂದರು. ಇದನ್ನೂ ಓದಿ: ಜೆಡಿಎಸ್‌ನ ಯಾವ ಶಾಸಕರೂ ಕಾಂಗ್ರೆಸ್ ಸೇರಲ್ಲ: ಬಿಎನ್ ರವಿಕುಮಾರ್

    ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು‌. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

    ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಎಚ್ಚರಿಕೆ ನಮಗೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃ ಪಕ್ಷ RSS ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು. ಬಾಬಾ ಸಾಹೇಬರ ಸಂವಿಧಾನ ಜಾರಿಗೂ ಮೊದಲು ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆಯನ್ನು ಆಚರಿಸುವ ಅನಾಗರಿಕ ವ್ಯವಸ್ಥೆ ಮತ್ತು ಶೂದ್ರರು-ದಲಿತರು-ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸುವ ಅಲಿಖಿತವಾದ ಮನುಸ್ಮೃತಿಯ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಿಂದೂಗಳ ಸುರಕ್ಷತೆ ಖಚಿತಪಡಿಸಿ: ಚಿನ್ಮಯ್‌ ಕೃಷ್ಣ ದಾಸ್ ಬಂಧಿಸಿದ್ದಕ್ಕೆ ಬಾಂಗ್ಲಾಗೆ ಭಾರತ ತರಾಟೆ

    ಈ ಚರಿತ್ರೆ, ಇತಿಹಾಸವನ್ನು ನಾವು ಮರೆಯಬಾರದು. ನಮಗೆ ಬಂದಿರುವ ಸ್ವಾತಂತ್ರ್ಯ ಸಫಲ ಆಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿ ಆಗಿದ್ದ ಅನಂತ ಕುಮಾರ ಹೆಗ್ಡೆ ಅವರು, ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು’ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು. ಆದರೆ ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲಿಲ್ಲ. ಆದ್ದರಿಂದ ಅನಂತ ಕುಮಾರ ಹೆಗ್ಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ. ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

    ಸಂವಿಧಾನದ ಧ್ಯೇಯೋದ್ದೇಶಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು. ನಮ್ಮ ಸರ್ಕಾರ ಕೂಡ ಸಂವಿಧಾನದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹತ್ತು ಹಲವು ಭಾಗ್ಯಗಳನ್ನು ಜಾರಿ ಮಾಡಿದೆವು‌. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವ ಕಾರ್ಯಕ್ರಮಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಡಿಸಿಎಂ ಶಿವಕುಮಾರ್, ಸಚಿವ ಮಹದೇವಪ್ಪ ಸೇರಿ ಹಲವರು ಉಪಸ್ಥಿತಿ ಇದ್ದರು.

  • Constitution Day: ರಾಷ್ಟ್ರಪತಿಯಿಂದ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

    Constitution Day: ರಾಷ್ಟ್ರಪತಿಯಿಂದ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸಂವಿಧಾನ ದಿನದ (Constitution Day) ಅಂಗವಾಗಿ ಸುಪ್ರೀಂ ಕೋರ್ಟ್ (Supreme Court) ಆವರಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ (Dr B.R.Ambedkar) ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿದರು.

    ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಭಾರತೀಯ ಸಂವಿಧಾನದ ಪಿತಾಮಹನಿಗೆ ಕೈ ಮುಗಿದು 7 ಅಡಿ ಎತ್ತರದ ಶಿಲ್ಪಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

    ರಾಷ್ಟ್ರಪತಿ ಮುರ್ಮು ಮತ್ತು ಸಿಜೆಐ ಚಂದ್ರಚೂಡ್ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಮಾರಂಭದಲ್ಲಿ ಉನ್ನತ ನ್ಯಾಯಾಲಯದ ಹಲವು ನ್ಯಾಯಾಧೀಶರು ಭಾಗವಹಿಸಿದ್ದರು. ಇದನ್ನೂ ಓದಿ: ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ

    1949ರಲ್ಲಿ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ನವೆಂಬರ್ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಮೊದಲು ಈ ದಿನವನ್ನು ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. ಇದನ್ನೂ ಓದಿ: ವಿದೇಶಗಳಲ್ಲಿ ಮದುವೆ ಆಗಬೇಡಿ: ಭಾರತೀಯರಿಗೆ ಪ್ರಧಾನಿ ಮೋದಿ ಸಲಹೆ

  • ನಾವಿಂದು ಜೈ ಭೀಮ್, ಜೈ ಭಾರತ್ ಅನ್ನಬೇಕು, ಸಂವಿಧಾನ ರಕ್ಷಣೆ ಮಾಡಬೇಕು: ಸಿ.ಟಿ ರವಿ

    ನಾವಿಂದು ಜೈ ಭೀಮ್, ಜೈ ಭಾರತ್ ಅನ್ನಬೇಕು, ಸಂವಿಧಾನ ರಕ್ಷಣೆ ಮಾಡಬೇಕು: ಸಿ.ಟಿ ರವಿ

    ಬೆಂಗಳೂರು: ಇಲ್ಲಿನ ಬಿಜೆಪಿ ಕಚೇರಿಯಲ್ಲಿಂದು (BJP Office) ಸಂವಿಧಾನ ಸಮರ್ಪಣಾ ದಿನ (Constitution Day) ಆಚರಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗ್ಡೆ ಕಾಗೇರಿ, ಸಿ.ಟಿ ರವಿ, ಕಾರ್ಯದರ್ಶಿ ರಾಜೇಶ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಇತರ ಗಣ್ಯರು ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಸಂವಿಧಾನ ಪೀಠಿಕೆ ಓದಿದರು.

    ಬಳಿಕ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ (CT Ravi), 2015ರ ವರೆಗೂ ಈ ದಿನವನ್ನು ಕಾನೂನು ದಿನ ಅಂತ ಕರೆಯುತ್ತಿದ್ದರು. ಆದ್ರೆ ಪ್ರಧಾನಿ ಮೋದಿ ಅವರು ಸಮರ್ಪಣಾ ದಿನ ಅಂತ ಘೋಷಣೆ ಮಾಡಿದರು. ಕೆಲವರು ಭಾರತರತ್ನ ಅವರಿಗೆ ಅವರೇ ಕೊಟ್ಟುಕೊಳ್ಳುತ್ತಾರೆ. ಆದ್ರೆ ನಿಜವಾದ `ರತ್ನ’ ಅಂಬೇಡ್ಕರ್ (Ambedkar) ಅವರಿಗೆ ಕೊಡಲಿಲ್ಲ. ಅಟಲ್ ಜೀ ಪ್ರಸ್ತಾಪ ಮಾಡಿದ ಬಳಿಕ ಅವರಿಗೆ ಭಾರತರತ್ನ ಕೊಟ್ಟರು. ಹಾಗಾಗಿ ಅಂಬೇಡ್ಕರ್ ಅವರಿಗೆ ತಡವಾಗಿ ನ್ಯಾಯ ಸಿಕ್ಕಿತು ಎಂದು ಹೇಳಿದರು.

    ಕಾಂಗ್ರೆಸ್‌ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಮಾರಕಗಳನ್ನ ಅಭಿವೃದ್ಧಿ ಮಾಡಲಿಲ್ಲ. ಆದ್ರೆ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಅಂಬೇಡ್ಕರ್ ಸ್ಮಾರಕ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ (BJP Government) ಎಂದು ಬೀಗಿದರು. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

    ಲಂಡನ್‌ನಲ್ಲಿ ಅಂಬೇಡ್ಕರ್ ಅವರ ನಿವಾಸವನ್ನು ಅಭಿವೃದ್ಧಿಪಡಿಸಿದ್ದು, ಬಿಜೆಪಿ ಸರ್ಕಾರ. ನಾಗಪುರ ದೀಕ್ಷಾ ಭೂಮಿ ಅಭಿವೃದ್ಧಿ ಆಗ್ತಿದೆ. ದೆಹಲಿಯ ಆಲಿಪುರ ಮನೆಯನ್ನ ಸ್ಮಾರಕವನ್ನಾಗಿಸಲು ಅಲಟ್ ಬಿಹಾರಿ ವಾಜಪೇಯಿ ಅವರು ಮುಂದಡಿಯಿಟ್ಟರು. ಮೋದಿ ಅದಕ್ಕೆ ಪ್ರೋತ್ಸಾಹ ನೀಡಿದರು. ಅಂಬೇಡ್ಕರ್ ಸಮಾಧಿ ಸ್ಥಳ ಅಭಿವೃದ್ಧಿ ಮಾಡಿದ್ದು ಬಿಜೆಪಿ ಸರ್ಕಾರ, ಅಂಬೇಡ್ಕರ್ ಸ್ಮಾರಕ ಅಭಿವೃದ್ಧಿ ಮಾಡಿದ್ದು ಬಿಜೆಪಿ ಸರ್ಕಾರ. ಆದರೂ ಬಿಜೆಪಿ ಅಂಬೇಡ್ಕರ್ ವಿರೋಧಿ, ದಲಿತ ವಿರೋಧಿ ಸರ್ಕಾರ ಅಂತ ಅಪಪ್ರಚಾರ ಮಾಡ್ತಾರೆ ಎಂದು ಕಿಡಿ ಕಾರಿದರು.

    ಭಾರತರತ್ನದಿಂದ ಹಿಡಿದು ಅಂಬೇಡ್ಕರರ 5 ಜೀವನ ಪ್ರಮುಖ ಸ್ಥಳ ಸ್ಮಾರಕ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಅವರು ಅಂಬೇಡ್ಕರ್‌ಗೆ ಏನ್ ಮಾಡಿದ್ರು? ಹೇಳಲಿ ಚರ್ಚೆಗೆ ನಾವು ರೆಡಿ ಇದ್ದೇವೆ. ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೆ ಆರಡಿ-ಮೂರಡಿ ಜಾಗ ಕೊಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: IPL 2024: 10 ತಂಡಗಳಲ್ಲಿ ಯಾರಿಗೆಲ್ಲಾ ಗೇಟ್‌ ಪಾಸ್‌ – ರಿಲೀಸ್‌ ಆಟಗಾರರ ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ

    ಪ್ರತಿಯೊಬ್ಬರು ಸಂವಿಧಾನ ಅರ್ಥ ಮಾಡಿಕೊಂಡು ಬೇಡುವವರಾಗದೇ, ನೀಡುವ ಸಾಮರ್ಥ್ಯ ಗಳಿಸಿಕೊಳ್ಳಬೇಕು. ಸತ್ಯ ಯಾವುದು, ಸುಳ್ಳು ಯಾವುದು ಅಂತ ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಇವತ್ತು ಜೈ ಭೀಮ್, ಜೈ ಭಾರತ್ ಅನ್ನಬೇಕು. ಅಖಂಡ ಭಾರತ ಇರಬೇಕು ಅಂದವರು ಅಂಬೇಡ್ಕರ್. ಅವರ ವಿಚಾರಧಾರೆ ಇರೋದು ಭಾರತದ ಜೊತೆ. ಆದ್ರೆ ಜೈ ಭೀಮ್.. ಜೈ ಭಾರತ್ ಎಂದು ಹೇಳುತ್ತಾ ಯಾರೂ ಅವರ ವಿಚಾರಧಾರೆಗಳನ್ನ ಅಪಪ್ರಚಾರ ಮಾಡ್ತಾರೆ ಅವರಿಗೆ ಪಾಠ ಕಲಿಸಬೇಕು, ಸಂವಿಧಾನ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

  • ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷ: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

    ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷ: ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

    ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸತ್ತಿನಲ್ಲಿ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮಕ್ಕೆ 14 ವಿರೋಧ ಪಕ್ಷಗಳು ಗೈರಾಗಿದ್ದವು. ಇಂದು ನಡೆದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಕುಟುಂಬದಿಂದಲೇ ಪಕ್ಷ, ಕುಟುಂಬಕ್ಕಾಗಿಯೇ ಪಕ್ಷವಾಗಿದೆ… ಈ ಬಗ್ಗೆ ನಾನು ಹೆಚ್ಚು ಹೇಳಬೇಕೆ? ಒಂದೇ ಕುಟುಂಬ ಹಲವು ತಲೆಮಾರುಗಳ ತನಕ ಪಕ್ಷವೊಂದನ್ನು ನಡೆಸುವುದು ಆರೋಗ್ಯಕರ ಪ್ರಜಾಪ್ರಭುತ್ವವಾಗಲಾರದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ನೀಡಬೇಕು – ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಧಾನಿಗೆ ಪತ್ರ

    ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಳ್ಳುವುದು, ಸಂವಿಧಾನದ ಆತ್ಮ ಹಾಗೂ ಸಂವಿಧಾನದ ಎಲ್ಲಾ ವಿಧಿಗಳಿಗೂ ಎಸಗಿದ ದ್ರೋಹವಾಗುತ್ತದೆ. ಪ್ರಜಾಸತ್ತಾತ್ಮಕ ಗುಣಗಳೇ ಇಲ್ಲದ ಕೆಲವು ಪಕ್ಷಗಳಿಂದ ಪ್ರಜಾಪ್ರಭುತ್ವ ರಕ್ಷಣೆ ಹೇಗಾಗುತ್ತದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅಂತ ಕನಸು ಕಾಣ್ತಿದ್ದಾರೆ, ಮೂರ್ಖತನದ ಪರಮಾವಧಿ: ಬಿ.ಸಿ.ಪಾಟೀಲ್

    ಸಂವಿಧಾನ ದಿನ ನಾವು ಈ ಸದನಕ್ಕೆ ವಂದಿಸಬೇಕು. ಸಂವಿಧಾನ ನೀಡಲು ಸಾಕಷ್ಟು ಜನರು ಪರಿಶ್ರಮಪಟ್ಟಿದ್ದಾರೆ. ನಮ್ಮ ಸಂವಿಧಾನವು ನಮ್ಮ ವೈವಿಧ್ಯಮಯ ದೇಶವನ್ನು ಬೆಸೆಯುತ್ತಿದೆ. ಹಲವು ಅಡೆತಡೆಗಳ ನಂತರ ಇದನ್ನು ರಚಿಸಲಾಗಿದೆ. ದೇಶದಲ್ಲಿನ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಲಾಗಿದೆ. ಮಹಾತ್ಮ ಗಾಂಧಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಎಲ್ಲರಿಗೂ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಭಾರತದ ಪ್ರಥಮ ಕಾನೂನು ಸಚಿವ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಗೌರವಾರ್ಥ ದೇಶದಲ್ಲಿ 2015ರಲ್ಲಿ ಪ್ರಥಮ ಬಾರಿಗೆ ಸಂವಿಧಾನ ದಿನವನ್ನು ಆಚರಿಸಲಾಯಿತು. ಸಂವಿಧಾನ ಕರಡು ರಚನೆಯಲ್ಲಿ ಅಂಬೇಡ್ಕರರ ಪಾತ್ರ ಪ್ರಮುಖವಾದದ್ದು. ವಿಶ್ವದ ಸಂವಿಧಾನಗಳ ಪೈಕಿ ಭಾರತದ ಸಂವಿಧಾನ ದೊಡ್ಡದು ಎಂದು ಗುರುತಿಸಲಾಗಿದೆ.

  • ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಧಾನಿ ಮೋದಿ ಸರ್ಕಾರದಿಂದ ನಿರ್ಧಾರ

    ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಧಾನಿ ಮೋದಿ ಸರ್ಕಾರದಿಂದ ನಿರ್ಧಾರ

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಿನ್ನಲೆ ಈ ಬಾರಿಯ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆ ನವೆಂಬರ್ 26 ರಂದು ಅದ್ದೂರಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿ ಸಂವಿಧಾನ ದಿನ ಆಚರಣೆ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ 26 ರಂದು ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ಬೆಟ್ಟವನ್ನು ಕಾಂಕ್ರೀಟ್ ಕಾಡು ಮಾಡಬೇಡಿ – ಮೋದಿಗೆ ಪತ್ರ ಬರೆದ ಭೈರಪ್ಪ

    ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭೆ ಸ್ಪೀಕರ್ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಲಿದ್ದು ಇದೇ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂವಿಧಾನದ ಪೀಠಿಕೆ ಓದಲಿದ್ದಾರೆ. ಇನ್ನು ಸಂವಿಧಾನದ ಓದು ಕಾರ್ಯಕ್ರಮದಲ್ಲಿ ಜನರನ್ನು ಭಾಗಿ ಮಾಡಲು ನಿರ್ಧರಿಸಿದ್ದು ಇದಕ್ಕಾಗಿ ಎರಡು ಆ್ಯಪ್‍ಗಳನ್ನು ನಿರ್ಮಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನೇತೃತ್ವದಲ್ಲಿ ಇದರ ಪ್ರಚಾರ ನಡೆಯಲಿದ್ದು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದಲಿದ್ದಾರೆ ಮತ್ತು ಇನ್ನು ಆ್ಯಪ್‍ಗಳಲ್ಲಿ 22 ಭಾಷೆಗಳಲ್ಲಿ ಸಂವಿಧಾನದ ಪೀಠಿಕೆ ಇರಲಿದ್ದು, ಅದನ್ನು ಓದಿ ವೆಬ್‍ಸೈಟ್‍ಗೆ ಅಪ್ಲೋಡ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದಾಗಿದೆ. ಇದನ್ನೂ ಓದಿ: ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಇನ್ನೂ ವೆಬ್‍ನಲ್ಲಿ ಸಂವಿಧಾನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದ್ದು ಸಾವಿರಕ್ಕೂ ಅಧಿಕ ಪ್ರಶ್ನೆಗಳು ಇರಲಿದೆ. ಇದರಲ್ಲೂ ಜನರೂ ಭಾಗಿಯಾಗಿ ಉತ್ತರಿಸಬಹುದು. ಸಂವಿಧಾನದ ರಚನೆ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಹೆಚ್ಚು ಪ್ರಶ್ನೆಗಳಿರಲಿದ್ದು ಸರಿಯಾದ ಉತ್ತರ ನೀಡದವರಿಗೆ ಸರ್ಟಿಫಿಕೇಟ್ ಕೂಡ ಸಿಗಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

  • ಅಂಬೇಡ್ಕರ್ ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು: ಮೋದಿ

    ಅಂಬೇಡ್ಕರ್ ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು: ಮೋದಿ

    ನವದೆಹಲಿ: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ತುಂಬಾ ಸಂತೋಷಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು ಸಂವಿಧಾನ ದಿನದ ಅಂಗವಾಗಿ ಸಂಸತ್ತಿನಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಭಾರತ ಮತ್ತು ಭಾರತೀಯರ ಘನತೆ ಮತ್ತು ಐಕ್ಯತೆಯ ಭಾಗವಾಗಿ ನಿಂತಿದೆ. ಇದನ್ನು ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು ಎಂದು ಹೇಳಿದರು.

    ಸಂವಿಧಾನವನ್ನು ಅಂಗೀಕರಿಸಿದ 70 ವರ್ಷಗಳಲ್ಲಿ ಭಾರತ ತನ್ನ ಪ್ರಜಾಪ್ರಭುತ್ವವನ್ನು ತುಂಬಾ ಬಲಪಡಿಸಿಕೊಂಡಿದೆ. ಸಂವಿಧಾನದಲ್ಲಿ ಎರಡು ಮಂತ್ರಗಳಿವೆ. ಒಂದು ಭಾರತೀಯರ ಘನತೆ ಇನ್ನೊಂದು ಭಾರತದ ಐಕ್ಯತೆ. ಈ ರೀತಿಯ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಆರ್ ಅಂಬೇಡ್ಕರ್ ಅವರಿಗೆ ನನ್ನ ಧನ್ಯವಾದಗಳು. ದೇಶದ ಮೊದಲ ಕಾನೂನು ಸಚಿವರಾಗಿದ್ದವರು ಯಾರು ಕೂಡ ಖುಷಿಯಿಂದ ಇರಲು ಸಾಧ್ಯವಿಲ್ಲ. ಆದ್ದರಿಂದ ಅಂಬೇಡ್ಕರ್ ಇಂದು ಬದುಕಿದ್ದರೆ ಸಂತೋಷವಾಗಿ ಇರುತ್ತಿದ್ದರು ಎಂದು ಮೋದಿ ಅಭಿಪ್ರಾಯಪಟ್ಟರು.

    ವಿರೋಧ ಪಕ್ಷದ ಪ್ರತಿಭಟನೆಯ ನಡುವೆಯೂ ಮಾತನಾಡಿದ ಮೋದಿ, ನಾನು 130 ಕೋಟಿ ಭಾರತೀಯರಿಗೆ ವಂದನೆ ಹೇಳುತ್ತೇನೆ. ಏಕೆಂದರೆ ಅವರು ಭಾರತದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಎಂದಿಗೂ ಕಡಿಮೆ ಮಾಡಿಲ್ಲ. ನಾನು ಯಾವಾಗಲೂ ನಮ್ಮ ಸಂವಿಧಾನವನ್ನು ಪವಿತ್ರ ಪುಸ್ತಕ ಮತ್ತು ಮಾರ್ಗದರ್ಶಕ ಬೆಳಕು ಎಂದು ಪರಿಗಣಿಸಿದ್ದೇನೆ ಎಂದು ಮೋದಿ ಬಣ್ಣಿಸಿದರು.

    ಇದೇ ವೇಳೆ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಮಾತನಾಡಿದ ಮೋದಿ, ಭಾರತದ ಸಂವಿಧಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎತ್ತಿ ತೋರಿಸುತ್ತದೆ. ಗಾಂಧೀಜಿ ಅವರು ಹೇಳಿರುವಂತೆ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ನಾವು ನಮ್ಮ ಮೂಲಭೂತ ಹಕ್ಕುಗಳನ್ನು ನಿರೀಕ್ಷಿಸಬಹುದು. ಹೀಗಾಗಿ ಗಾಂಧೀಜಿ ಹೇಳಿರುವಂತೆ ಕರ್ತವ್ಯಗಳು ಮತ್ತು ಹಕ್ಕುಗಳು ನೇರವಾಗಿ ಸಂಬಂಧ ಹೊಂದಿವೆ. ನಮ್ಮ ಪ್ರಜೆಗಳು ನಿರ್ವಹಿಸಬಹುದಾದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಹಲವಾರು ಸುಲಭ ಕರ್ತವ್ಯಗಳು ನಮ್ಮ ಸಂವಿಧಾನದಲ್ಲಿ ಇವೇ ಎಂದು ಮೋದಿ ತಿಳಿಸಿದ್ದಾರೆ.

    ಒಬ್ಬ ನಾಗರಿಕ ಒಂದು ಹನಿ ನೀರನ್ನು ಉಳಿಸಿದರೆ ಅದು ಅವನ ಕರ್ತವ್ಯ. ಚುನಾವಣೆಯಲ್ಲಿ ಮತದಾನ ಮಾಡಿದರೆ ಅದು ದೇಶಕ್ಕಾಗಿ ಮಾಡುವ ಒಂದು ಕೆಲಸ. ನಮ್ಮ ದೇಶದ ಪ್ರಜೆಗಳು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದರೆ ಅದು ಆತ ದೇಶದ ಅಭಿವೃದ್ಧಿಗಾಗಿ ಮಾಡುವ ಒಂದು ಕರ್ತವ್ಯ. ಸರಿಯಾದ ಸಮಯಕ್ಕೆ ಆತ ರೋಗನಿರೋಧಕ ಔಷಧಿಯನ್ನು ತೆಗೆದುಕೊಂಡರೆ ಅದು ಕೂಡ ದೇಶಕ್ಕಾಗಿ ಮಾಡುವ ಕರ್ತವ್ಯ ಎಂದು ಮೋದಿ ಪ್ರಜೆಗಳ ಕರ್ತವ್ಯವನ್ನು ನೆನಪಿಸಿದ್ದಾರೆ.

    ಈ ಭಾಷಣದ ವೇಳೆ 2011 ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ ಮೋದಿ, ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಸಂಸತ್ತಿನ ಒಳಗೆ ಭಾಷಣ ಮಾಡುತ್ತಿದ್ದರೆ ಸಂಸತ್ತಿನ ಹೊರಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವುದನ್ನು ವಿರೋಧಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತು.