Tag: constituency

  • ವಿದೇಶಾಂಗ ಸಚಿವ ಜೈಶಂಕರ್ ಫೆ.28ಕ್ಕೆ ಹುಬ್ಬಳ್ಳಿಗೆ ಆಗಮನ

    ವಿದೇಶಾಂಗ ಸಚಿವ ಜೈಶಂಕರ್ ಫೆ.28ಕ್ಕೆ ಹುಬ್ಬಳ್ಳಿಗೆ ಆಗಮನ

    ಹುಬ್ಬಳ್ಳಿ: ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಫೆ.28ರಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ (Dharwad Lok Sabha Constituency) ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಪುಸ್ತಕವನ್ನು ಜೈಶಂಕರ್ ಅಂದು ಬಿಡುಗಡೆಗೊಳಿಸಲಿದ್ದಾರೆ.  ಇದನ್ನೂ ಓದಿ: ಮೊದಲ 100 ದಿನ ಏನು ಮಾಡಬೇಕು? – ಹೊಸ ಸರ್ಕಾರದ ಕೆಲಸಕ್ಕೆ ಈಗಲೇ ತಯಾರಿ ಆರಂಭಿಸಿದ ಮೋದಿ

     

    ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ಫೆ.28ರಂದು ಸಂಜೆ 4:30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಜರುಗಲಿದೆ. ಇದನ್ನೂ ಓದಿ: 2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್‌ ಸೇತುವೆ ಉದ್ಘಾಟನೆ

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಸಂಸದ ಪ್ರಹ್ಲಾದ್‌ ಜೋಶಿ (Pralhad Joshi) ಅವರ 16 ವರ್ಷದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಒಳಗೊಂಡ ಪುಸ್ತಕ ಇದಾಗಿದೆ.

    ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕಾಗಿ ಕೈಗೊಂಡ ಚಟುವಟಿಕೆಗಳನ್ನು ಈ ಪುಸ್ತಕ ವಿಸ್ತಾರವಾಗಿ ಒಳಗೊಂಡಿದೆ ಎಂದು ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ.

     

  • ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ವ್ಯಂಗ್ಯ

    ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ವ್ಯಂಗ್ಯ

    – ಟಿಪ್ಪು, ಶಾದಿಭಾಗ್ಯ ಬಿಡೋವರೆಗೂ ಸಿದ್ದರಾಮಯ್ಯ ಗೆಲ್ಲಲ್ಲ ಎಂದ ಸಚಿವ

    ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಕರ್ನಾಟಕದ 224 ಕ್ಷೇತ್ರಗಳೂ ಸೇಫ್ ಅಲ್ಲ. ಅವರು ಪಾಕಿಸ್ತಾನ (Pakistana), ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು ಎಂದು ಸಚಿವ ಆರ್. ಅಶೋಕ್ (R Ashoka) ವ್ಯಂಗ್ಯವಾಡಿದ್ದಾರೆ.

    ಬಳ್ಳಾರಿಯಲ್ಲಿಂದು (Bellary) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಕರ್ನಾಟಕದ 224 ಕ್ಷೇತ್ರಗಳಲ್ಲಿ (Constituencies) ಯಾವ ಕ್ಷೇತ್ರವೂ ಸೇಫ್ ಅಲ್ಲ. ಅವರು ಎಲ್ಲಿ ಹೋದರೂ ಸೋಲ್ತಾರೆ. ಹಾಗಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು ಎಂದು ಕಾಲೆಳೆದಿದ್ದಾರೆ.

    ಸಿದ್ದರಾಮಯ್ಯ ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ, ಈಗ ಬಾದಾಮಿ ಬಿಟ್ಟು ಓಡಿಬಂದಿದ್ದಾರೆ. ಕೋಲಾರದಲ್ಲಿ ನಿಂತರೂ ಗೆಲ್ಲೋದು ಕಷ್ಟವಿದೆ. ಅವರ ಪಕ್ಷದವರೇ ಸಿದ್ದರಾಮಯ್ಯಗೆ ವಿಲನ್ ಆಗಿದ್ದಾರೆ. ಹಾಗಾಗಿ ಕರ್ನಾಟಕದ 224 ಕ್ಷೇತ್ರಗಳೂ ಅವರಿಗೆ ಸೇಫ್ ಅಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ

    ಟಿಪ್ಪು ಬಿಟ್ಟರೆ ಸೇಫ್ ಆಗಬಹುದು: ಸಿದ್ದರಾಮಯ್ಯ ಅವರು ಎಲ್ಲಿಯವರೆಗೆ ಟಿಪ್ಪು, ಶಾದಿಭಾಗ್ಯ ಬಿಡುವುದಿಲ್ಲವೂ ಅಲ್ಲಿಯವರೆಗೂ ಅವರೂ ರಾಜ್ಯದಲ್ಲಿ ಸೋಲುತ್ತಾರೆ. ಟಿಪ್ಪು ಸುಲ್ತಾನ್ ಬಿಟ್ಟರೆ, ಯಾವುದಾದರೂ ಒಂದು ಕ್ಷೇತ್ರದಲ್ಲಿ ಸೇಫ್ ಆಗಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ದೇಸಾಯಿ’ ಚಿತ್ರಕ್ಕೆ ‘ಲವ್ 360’ ಚಿತ್ರದ ಪ್ರವೀಣ್ ಕುಮಾರ್ ಹೀರೋ

  • ಕೋಲಾರ ಕ್ಷೇತ್ರದಲ್ಲಿ ಸಿದ್ದುಗೆ ಮತ್ತೊಂದು ಕಗ್ಗಂಟು

    ಕೋಲಾರ ಕ್ಷೇತ್ರದಲ್ಲಿ ಸಿದ್ದುಗೆ ಮತ್ತೊಂದು ಕಗ್ಗಂಟು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಮ್ಮ ಜನರಿಗೆ ಗುಡ್ ನ್ಯೂಸ್ ಕೊಡಲು ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ: ಎನ್ ಮಹೇಶ್

    ನಮ್ಮ ಜನರಿಗೆ ಗುಡ್ ನ್ಯೂಸ್ ಕೊಡಲು ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ: ಎನ್ ಮಹೇಶ್

    ಚಾಮರಾಜನಗರ: ಬಿಎಸ್‍ಪಿಯಿಂದ ಉಚ್ಛಾಟಿತನಾಗಿ ಅತಂತ್ರವಾಗಿರುವ ಶಾಸಕ ಎನ್ ಮಹೇಶ್ ಮುಂದಿನ ನಡೆಯೇನು ಎಂಬುದಕ್ಕೆ ಉತ್ತರ ಸಿಕ್ಕಿದೆ.

    ಇಂದು ಕೊಳ್ಳೇಗಾಲದಲ್ಲಿ ಮಾತನಾಡಿದ ಮಹೇಶ್ ಅವರು, ಕ್ಷೇತ್ರದ ಅಭಿವೃದ್ಧಿಯಾದ ದಿನ ನನ್ನ ಕ್ಷೇತ್ರದ ಜನರಿಗೆ ಗುಡ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದಾರೆ. ಸಂಕ್ರಾಂತಿ ಹೊತ್ತಿಗೆ ಸಾಕಷ್ಟು ಅನುದಾನ ಬರುವುದಿದೆ. ಅದು ಬಂದರೆ ಪಕ್ಕ ಗುಡ್ ನ್ಯೂಸ್ ಕೊಡುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರದ ಬಸ್ ನಿಲ್ದಾಣ, ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನ ಉದ್ಘಾಟನೆಯಾಗಬೇಕಿದೆ. ನಮ್ಮ ಜನರಿಗೆ ಗುಡ್ ನ್ಯೂಸ್ ಕೊಡಲೂ ಬಿಜೆಪಿಯೊಂದಿಗೆ ಚೆನ್ನಾಗಿದ್ದೇನೆ. ಬಿಜೆಪಿ ಸೇರುವ ಅವಕಾಶ ಓಪನ್ ಇದೆ. 2008ರಿಂದಲೂ ಯಡಿಯೂರಪ್ಪ ಆಪ್ತರು ಎಂದು ಹೇಳುವ ಮೂಲಕ ಮುಂದೆ ನಾನು ಬಿಜೆಪಿ ಸೇರುತ್ತೇನೆ ಎಂಬುವ ಸುಳಿವು ನೀಡಿದ್ದಾರೆ.

  • ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಮಳೆಯಲ್ಲೇ ಕೂತು ಬಯಲಲ್ಲಿ ಪಾಠ ಕೇಳ್ಬೇಕು- ಗೋವಿಂದ ಕಾರಜೋಳ ಸ್ವಕ್ಷೇತ್ರದ ಕಥೆ

    ಬಾಗಲಕೋಟೆ: ನೂತನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳಲಿಲ್ಲದೆ ಸಂತ್ರಸ್ತರು ಪರದಾಡುತ್ತಿದ್ದು, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಘಟಪ್ರಭಾ ನದಿ ಪ್ರವಾಹದದಿಂದಾಗಿ ಸರ್ಕಾರಿ ಶಾಲೆ ಮುಳುಗಡೆಯಾಗಿದ್ದು, ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳಿಗೆ ಪಾಠ ಮಾಡಲು ಬೇರೆ ಕಟ್ಟಡವಿಲ್ಲ. ಹೀಗಾಗಿ ಮಕ್ಕಳು ಬಯಲಲ್ಲೇ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

    ಶಾಲೆಯ ಕಟ್ಟಡ ಬೀಳುವ ಭಯದಿಂದ ಸಿಬ್ಬಂದಿ ಈಗಾಗಲೇ ಕಟ್ಟಡಕ್ಕೆ ಬೀಗ ಜಡಿದಿದ್ದಾರೆ. ಹೀಗಾಗಿ ಮಳೆ ಬಂದರೆ ಶಾಲೆಯ ಹೊರಗಡೆ ತಲೆ ಮೇಲೆ ಟಾರ್ಪಲ್ ಹಾಕಿಕೊಂಡು ಪಾಠ ಕೇಳುವ ಅನಿವಾರ್ಯ ಮಕ್ಕಳದ್ದಾಗಿದೆ.

    ಶಾಲಾ ಕಟ್ಟಡ ನೀರಲ್ಲಿ ಮುಳುಗಿ ಹಾಳಾಗಿ ಹೋಗಿದ್ದರಿಂದ ಯಾವಾಗ ಬೀಳುತ್ತೋ ಅನ್ನೋ ಆತಂಕದಲ್ಲಿರುವ ಸ್ಥಳೀಯರು ಇಷ್ಟೆಲ್ಲ ಆದರೂ ಯಾವೊಬ್ಬ ನಾಯಕರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸ್ಥಿತಿ ಆಲಿಸಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕೂಡಲೇ ಮಕ್ಕಳಿಗೆ ಶಾಲಾ ಕಟ್ಟಡದ ವ್ಯವಸ್ಥೆ ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

  • ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಹಾವೇರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಹಿರೇಕೆರೂರಿನ ಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್ ಜನರ ಒಪ್ಪಿಗೆ ಪಡೆದು ರಾಜೀನಾಮೆ ನೀಡಿದ್ದಾರೆ. ಅವರ ಈ ತೀರ್ಮಾನಕ್ಕೆ ನಾವು ಬದ್ಧ ಎಂದು ಅವರ ಧರ್ಮಪತ್ನಿ ವನಜಾ ಪಾಟೀಲ್ ಅವರು ಹೇಳಿದ್ದಾರೆ.

    ಇಂದು ಅವರು ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿ.ಸಿ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

    ಹಿರೇಕೆರೂರು ಕ್ಷೇತ್ರದಲ್ಲಿ 38 ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಗೆಲುವು ಪಡೆದಿಲ್ಲ. ಆದರೆ ಬಿ.ಸಿ.ಪಾಟೀಲ್ ಗೆದ್ದಿದ್ದಾರೆ. ಅವರು ಯಾವುದೇ ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ. ಹಾಗಿದ್ದರೆ ಚುನಾವಣೆಯ ಸಮಯದಲ್ಲಿ ಮನೆ ಸೈಟ್ ಮಾರಾಟ ಮಾಡುತ್ತಿರಲಿಲ್ಲ. ಅವರ ಈ ನಡೆಗೆ ನಾವು ಬದ್ಧರಾಗಿದ್ದೇವೆ ಎಂದು ಪತಿಯ ತೀರ್ಮಾನವನ್ನು ಸಮರ್ಥಿಸಿಕೊಂಡರು.

    ದಕ್ಷಿಣ ಕರ್ನಾಟಕ ಅಭಿವೃದ್ಧಿಯಾಗಿದೆ. ಅದರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಅದ್ದರಿಂದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಜನರಿಗೆ ತಿಳಿಸಿ ಹೋಗಿದ್ದಾರೆ. ಜನರಿಗೆ ತಿಳಿಸಿಯೇ ಕ್ಷೇತ್ರಕ್ಕೆ ವಾಪಸ್ ಬರುತ್ತಾರೆ. ರಾಜೀನಾಮೆ ವಾಪಸ್ ಪಡೆಯುವ ಸಾಧ್ಯತೆ ಕಡಿಮೆ ಎಂದು ಈ ವೇಳೆ ತಿಳಿಸಿದರು.

  • ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ- ಪ್ರಕಾಶ್ ರೈ

    ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ- ಪ್ರಕಾಶ್ ರೈ

    – ಮಹಾಘಟಬಂಧನ್ ಭಾಗವಾಗಿರುತ್ತೇನೆ

    ಬೆಂಗಳೂರು: ಬೆಂಗಳೂರು ಸೆಂಟ್ರಲ್ ನನಗೆ ಮಿನಿ ಇಂಡಿಯಾ. ಹೀಗಾಗಿ ನಾನು ಅಲ್ಲಿಂದಲೇ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಬಹುಭಾಷಾ ಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಹೇಳಿದ್ದಾರೆ.

    ನಗರದ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಎರಡು ಮೂರು ತಿಂಗಳಿನಿಂದ ಚಿಂತಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಹುಟ್ಟಿದ್ದು ಮಾರ್ಥಾಸ್ ಆಸ್ಪತ್ರೆಯಲ್ಲಿ, ನಾನು ಚಾಮರಾಜ ಪೇಟೆ, ಶಾಂತಿನಗರದಲ್ಲಿದ್ದೆ. ಇಲ್ಲಿ ನನ್ನ ಸಾಕಷ್ಟು ಬಂಧುಗಳಿದ್ದಾರೆ ಎಂದು ಹೇಳಿದರು.

    ಜನರಿಗಾಗಿ ಕಾನೂನುಗಳನ್ನು ರೂಪಿಸುವಾಗ ಅವರ ಧ್ವನಿಯಾಗಲು ನಿರ್ಧರಿಸಿದ್ದೇನೆ. ಕಳೆದ ಆರು ತಿಂಗಳಲ್ಲಿ ನಮ್ಮ ಜಸ್ಟ್ ಆಸ್ಕಿಂಗ್‍ನಿಂದ ಅನೇಕ ಪ್ರಶ್ನೆಗಳನ್ನು ಮಾಡಿದ್ದೇವೆ. ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಲೋಕಸಭೆಯಲ್ಲಿ ನಮ್ಮ ಸಂಸದರು ಜನರ ಧ್ವನಿಯಾಗುತ್ತಿಲ್ಲ. ಗೆದ್ದ ನಂತರ ಯಾರದ್ದೋ ಗುಲಾಮರಾಗುತ್ತಾರೆ. ಆದ್ದರಿಂದ ನಾನು ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

    ಮಹಾಘಟಬಂಧನ್ ವಿಚಾರವಾಗಿ ಮಾತನಾಡಿದ ಪ್ರಕಾಶ್ ರಾಜ್ ಅವರು, ಕೋಮುವಾದವನ್ನು ಎದುರಿಸಲು ಶಕ್ತಿಗಳಿಗೆ ನಾನು ಕೈ ಜೋಡಿಸುತ್ತೇನೆ ಎಂದು ಹೇಳುವ ಮೂಲಕ ಮಹಾಘಟಬಂಧನ್‍ಗೆ ಭಾಗವಾಗಿರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಬೆಂಗಳೂರು: 15ನೇ ವಿಧಾನಸಭಾ ಚುನಾವಣೆಯೂ ಮುಗಿತು. ಸರ್ಕಾರ ರಚನೆಯೂ ಆಯ್ತು. ಈಗಿನ ರಾಜಕೀಯ ನಾಯಕರಿಗೆನೇ 224 ವಿಧಾನ ಸಭಾ ಕ್ಷೇತ್ರದ ಹೆಸರುಗಳು ನೆನಪಿರೋಲ್ಲ. ಆದ್ರೇ ಇಲ್ಲೊಬ್ಬಳು ಪುಟಾಣಿ ಪೋರಿ 224 ಕ್ಷೇತ್ರದ ಜೊತೆ ಗೆದ್ದ ಅಭ್ಯರ್ಥಿ ಯಾರು ಮತ್ತು ಯಾವ ಪಕ್ಷದವರು ಅಂತಾ ಸಲೀಸಾಗಿ ಹೇಳುತ್ತಾಳೆ.

    ಹೌದು. ಈಗಿನ ಸಮಿಶ್ರ ಸರ್ಕಾರದ ಬಹುತೇಕ ಶಾಸಕರಿಗೆ ಸಡನ್ ಆಗಿ ಕೇಳಿದ್ರೇ, ತಮಗೆ ಬೆಂಬಲ ನೀಡಿರೋ 118 ಶಾಸಕರ ಹೆಸರನ್ನ ಹೇಳೊದಕ್ಕೆ ತಡವರಿಸುತ್ತಾರೆ. ಇನ್ನು 224 ಕ್ಷೇತ್ರದ ಬಗ್ಗೆ ಹೇಳೊದು ಅಂದ್ರೆ ತಮಾಷೆಯ ವಿಷಯವಲ್ಲ. ಆದ್ರೆ 224 ಕ್ಷೇತ್ರದ ಹೆಸರನ್ನ ಮಗ್ಗಿ ಹೇಳೊತರ ಹೇಳಿದ್ದ ಶಿವಮೊಗ್ಗದ ಬಾಲಕ ಇಂದ್ರಜೀತ್ ನ ನೋಡಿದ್ರಿ. ಆದ್ರೇ ಆ ಬಾಲಕನನ್ನ ಕೂಡ ಮೀರಿಸೋ ಪುಟಾಣಿ ಈ ಹುಡುಗಿಯಾಗಿದ್ದು, ಈಕೆ ಈ ಬಾರಿ ಕ್ಷೇತ್ರವಲ್ಲ, ಅಲ್ಲಿ ಗೆದ್ದಿರೋರು ಯಾರು ಮತ್ತು ಯಾವ ಪಕ್ಷದವರು ಅಂತಾ ಹೇಳುತ್ತಾಳೆ.

    ಈ ಪುಟಾಣಿಯ ಹೆಸರು ಸಂಭ್ರಮ. ಬೆಂಗಳೂರಿನ ಸುಂಕದಕಟ್ಟೆಯ ಬಳಿ ಇರೋ ಅಂಜನಾನಗರದ ನಿವಾಸಿಗಳಾದ ಜಾನಕಿ ಮತ್ತು ಶ್ರೀನಿವಾಸ್ ದಂಪತಿಯ ಮುದ್ದಿನ ಮಗಳು. ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರೋ ಈ ಪುಟಾಣಿ ಚತುರೇ ಮುಂದೆ ಶಿಕ್ಷಕಿಯಾಗಬೇಕೆಂಬ ಆಸೆ ಹೊಂದಿದ್ದಾಳೆ. ತಂದೆ ಶ್ರೀನಿವಾಸ್ ತಮ್ಮ ಬಿಡುವಿನ ವೇಳೆಯಲ್ಲಿ ಮಗಳಿಗೆ ಇದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಸಂಭ್ರಮಳಾ ಈ ಸಾಧನೆಯ ಬಗ್ಗೆ ಕಾರು ಚಾಲಕನಾಗಿರೋ ತಂದೆ ಸಂಭ್ರಮದಿಂದ ಹೇಳೊದು ಹೀಗೆ, ಬರೀ ಇಷ್ಟೇ ಅಲ್ಲ ನನ್ನ ಮಗಳು 5 ನಿಮಿಷದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಹೇಳುತ್ತಾಳೆ. ಜೊತೆಗೆ 1000ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

    ಎಂಟೇ ವರ್ಷದಲ್ಲಿ ಈ ರೀತಿಯ ಸಾಧನೆ ಮಾಡಿರೋ ಈ ಪುಟ್ಟ ಬಾಲಕಿಯ ನೆನಪಿನ ಶಕ್ತಿ ನೋಡಿದ್ರೇ, ಮುಂದೊಂದು ದಿನ ಸಾಧಕಿ ಆಗೊದ್ರಲ್ಲಿ ಅನುಮಾನವಿಲ್ಲ.

  • ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಮಾಲ್: ನಗರ, ಗ್ರಾಮೀಣದಲ್ಲಿ ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?

    ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಮಾಲ್: ನಗರ, ಗ್ರಾಮೀಣದಲ್ಲಿ ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಭಾರತೀಯ ಜನತಾ ಪಕ್ಷ ಕೇವಲ ನಗರದ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲೂ ತನ್ನ ಸಾಮರ್ಥ್ಯವನ್ನು ವೃದ್ಧಿಸಿದೆ.

    ಬಿಜೆಪಿಯನ್ನು ನಗರದ ಜನತೆ ಜಾಸ್ತಿ ಬೆಂಬಲಿಸಿದರೆ, ಗ್ರಾಮೀಣ ಭಾಗದ ಜನತೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ಮಾತಿದೆ. ಗುಜರಾತ್ ಚುನಾವಣೆಯಲ್ಲಿ ಇದು ಸಾಬೀತಾಗಿತ್ತು. ಹೀಗಾಗಿ ಈ ಬಾರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿರುವ ಕಾರಣ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ರಾಜಕೀಯ ಪಂಡಿತರು ಮುಂದಿಟ್ಟಿದ್ದರು. ಆದರೆ ಈ ಲೆಕ್ಕಾಚಾರ ತಲೆಕೆಳಗಾಗಿದ್ದು ಗ್ರಾಮೀಣ ಭಾಗದಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದೆ.

    ಈ ಬಾರಿ ಎಷ್ಟು ಏರಿಕೆಯಾಗಿದೆ?
    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ 82, ನಗರದಲ್ಲಿ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಗ್ರಾಮೀಣ ಭಾಗದಲ್ಲಿ 51 ಸ್ಥಾನ, ನಗರಗಳಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ.

    2013ರಲ್ಲಿ ಗ್ರಾಮೀಣದಲ್ಲಿ 22, ನಗರದಲ್ಲಿ 18 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಗ್ರಾಮೀಣ ಭಾಗದಲ್ಲಿ ಗೆದ್ದ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ 69, ನಗರದಲ್ಲಿ 35 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

    ಜನತಾ ದಳ ಸ್ಥಾನದ ಪ್ರಮಾಣದಲ್ಲಿ ನಿಖರತೆಯನ್ನು ಮುಂದುವರೆಸಿದ್ದು, 2013 ರಲ್ಲಿ ಗ್ರಾಮೀಣದಲ್ಲಿ 30, ನಗರದಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಗ್ರಾಮೀಣ ಭಾಗದಲ್ಲಿ 2 ಕ್ಷೇತ್ರ ಕಳೆದುಕೊಂಡು 28 ಸ್ಥಾನ ಗೆದ್ದರೆ, ನಗರ ಭಾಗದಲ್ಲಿ ಒಟ್ಟು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

    ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆದ್ದರೂ ಶೇಖಡವಾರು ಮತಗಳಿಕೆಯ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದಿದೆ. 2013 ರಲ್ಲಿ ಕಾಂಗ್ರೆಸ್ 36.6% ಮತ ಪಡೆದಿದ್ದರೆ, ಈ ಬಾರಿ 38% ಮತ ಪ್ರಮಾಣ ಪಡೆದಿದೆ. ಬಿಜೆಪಿ 2013 ರಲ್ಲಿ ಕೇವಲ 19.9% ಮತಗಳನ್ನು ಪಡೆದಿದ್ದರೆ, ಈ ಬಾರಿ 36.2% ರಷ್ಟು ಮತ ಪಡೆದಿದೆ. ಉಳಿದಂತೆ ಜೆಡಿಎಸ್ 2013ರಲ್ಲಿ 20.2% ಮತ ಪಡೆದಿದ್ದರೆ, ಈ ಬಾರಿ 18.4% ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.