ಆಂಧ್ರ ಪ್ರದೇಶದ 25, ತೆಲಂಗಾಣದ 17, ಉತ್ತರಪ್ರದೇಶದ 13, ಮಹಾರಾಷ್ಟ್ರದ 11, ಬಂಗಾಳದ 8, ಬಿಹಾರದ 5, ಒಡಿಶಾ, ಜಾರ್ಖಂಡ್‌ನ ತಲಾ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 1 ಸ್ಥಾನಕ್ಕೆ ಮತದಾನ ನಡೆಯಲಿದ್ದು, 1717 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಇದನ್ನೂ ಓದಿ: ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ, ಪೂರ್ವ ಭಾರತವನ್ನು ಅಭಿವೃದ್ಧಿಪಡಿಸಬೇಕು – ಮೋದಿ
ಕೇಂದ್ರ ಸಚಿವರಾದ ನಿತ್ಯಾನಂದ ರೈ, ಅಜಯ್ ಮಿಶ್ರಾ, ಮಾಜಿ ಸಿಎಂ ಅಖಿಲೇಶ್ ಯಾದವ್, ಅಧೀರ್ ರಂಜನ್ ಚೌಧರಿ, ಮಹುವಾ ಮೊಯಿತ್ರಾ, ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್, ನಟ ಶತ್ರುಜ್ಞ ಸಿನ್ಹಾ, ಹೈದ್ರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ (Asaduddin Owaisi), ಮಾಧವಿಲತಾ ಸೇರಿ ಹಲವು ಪ್ರಮುಖರು ಕಣದಲ್ಲಿದ್ದಾರೆ.
ಇದೇ ವೇಳೆ, ಆಂಧ್ರಪ್ರದೇಶ ವಿಧಾನಸಭೆಗೂ ಸೋಮವಾರವೇ ಚುನಾವಣೆ ನಡೆಯಲಿದೆ. ಸಿಎಂ ಜಗನ್ ನೇತೃತ್ವದ ವೈಎಸ್‌ಆರ್ ಪಾರ್ಟಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದೆ. ಜಗನ್ ವಿರುದ್ಧ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಮತ್ತು ಬಿಜೆಪಿ ಜಂಟಿ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್ ಕೂಡ ಕಣದಲ್ಲಿ ಕಾಣಿಸಿಕೊಂಡಿದೆ.
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಳೆಗಟ್ಟಿದೆ. ಇದೇ ಏಪ್ರಿಲ್ 26 (ನಾಳೆ)ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸುಕರಾಗಿದ್ದಾರೆ. ಮೊದಲ ಹಂತದ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಸೇರಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಒಟ್ಟು 1,44,17,530 ಪುರುಷರು, 1,43,87,585 ಮಹಿಳೆಯರು ಹಾಗೂ 3,067 ತೃತೀಯ ಲಿಂಗಿಗಳು ಸೇರಿ ಒಟ್ಟು 2,88,08,182 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಾಗಾದ್ರೆ ಕ್ಷೇತ್ರವಾರು ಮತದಾರರ ವಿವರ ಎಷ್ಟಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ನವದೆಹಲಿ: ಚುನಾವಣೆಗಳಲ್ಲಿ (Election) ದೇಶಾದ್ಯಂತ ವಯಸ್ಕರ ಮೂರನೇ ಒಂದು ಭಾಗಷ್ಟು ಮತದಾನದಲ್ಲಿ ಕೊರತೆಯಾಗುತ್ತಿದೆ. ಅಲ್ಲದೇ ಕೆಲಸಗಳಿಗಾಗಿ ವಲಸೆ ಹೋಗಿರುವ ಎಷ್ಟೋ ಜನರು ರಜೆಯ ಕೊರತೆಯ ಕಾರಣ ಮತದಾನ ಮಾಡೋದನ್ನೇ ತಪ್ಪಿಸುತ್ತಿದ್ದಾರೆ. ಆದ್ದರಿಂದ ಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ (Election Commission) ಮಾಸ್ಟರ್ ಪ್ಲ್ಯಾನ್ ಮಾಡಿದೆ.
ದೂರದ ಪ್ರದೇಶಗಳಲ್ಲಿರುವ ಜನರು ತಾವಿದ್ದ ಸ್ಥಳದಿಂದಲೇ ಮತ ಚಲಾಯಿಸಲು ಅನುಕೂಲ ಮಾಡಿಕೊಡುವಂತೆ ಹೊಸ ರೀತಿಯ ಎಲೆಕ್ಟ್ರಾನಿಕ್ ಮತದಾನ ಯಂತ್ರ (EVM) ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚೆ ನಡೆಸಲು ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದೆ. ಸುಮಾರು 72 ಕ್ಷೇತ್ರಗಳಲ್ಲಿ ಮತದಾನ ಸಂಗ್ರಹ ಮಾಡಲು ಈ ಮಿಷಿನ್‌ನಲ್ಲಿ ಪ್ರೋಗ್ರಾಮ್ ಮಾಡಬಹುದಾಗಿದೆ. ಇದರಿಂದ ದೂರದಲ್ಲಿರುವ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.
2019ರ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ.67.4 ಆಗಿತ್ತು. ಆದ್ರೆ ಈ ಚುನಾವಣೆಯಲ್ಲಿ 30 ಕೋಟಿಗೂ ಅಧಿಕ ಮಂದಿ ಮತ ಚಲಾಯಿಸಿರಲಿಲ್ಲ ಎಂಬ ಅಂಶವನ್ನು ಚುನಾವಣಾ ಆಯೋಗ ಮನಗಂಡಿತು. ಆಂತರಿಕ ವಲಸೆ ಸೇರಿದಂತೆ ನಾನಾ ಕಾರಣದಿಂದಾಗಿ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೂ ಕಳವಳ ವ್ಯಕ್ತಪಡಿಸಿತ್ತು. ಆದ್ದರಿಂದ ಚುನಾವಣಾ ಆಯೋಗ ರಿಮೋಟ್ ವೋಟಿಂಗ್ ಮಿಷಿನ್ ಅನ್ನು ಅನುಷ್ಠಾನಕ್ಕೆ ತರಲು ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?
Live Tv
[brid partner=56869869 player=32851 video=960834 autoplay=true]
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ (Himachal Pradesh Assembly Election) ನಡೆಯುತ್ತಿದೆ. 68 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ (Election) ಈಗಾಗಲೇ ಆರಂಭಗೊಂಡಿದೆ. ಮತದಾನ ಸುಗಮವಾಗಿ ನಡೆಯಲು ಒಟ್ಟು 7,881 ಮತಗಟ್ಟೆಗಳನ್ನು ಸ್ಥಾಪಿಸಿದ್ದು ರಾಜ್ಯದಲ್ಲಿ ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. 981 ಮತಗಟ್ಟೆಗಳು ನಿರ್ಣಾಯಕವಾಗಿದ್ದರೆ 901 ಮತಗಟ್ಟೆಗಳು ದುರ್ಬಲವಾಗಿವೆ.
ಬೆಳಗ್ಗೆ 11 ಗಂಟೆ ವೇಳೆಗೆ 17.98% ರಷ್ಟು ಮತದಾನವಾಗಿದ್ದು, ಗುಡ್ಡಗಾಡು ಪ್ರದೇಶಗಳಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ 232 ಫ್ಲೈಯಿಂಗ್ ಸ್ಕ್ವಾಡ್ ಮತ್ತು 232 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳನ್ನು ರಚಿಸಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ – ಮತದಾರರ ಕೈಯಲ್ಲಿ 412 ಅಭ್ಯರ್ಥಿಗಳ ಭವಿಷ್ಯ
ನವೆಂಬರ್ 2021 ರಲ್ಲಿ ರಾಜ್ಯದಲ್ಲಿ ನಾಲ್ಕು ಉಪಚುನಾವಣೆಗಳನ್ನು ಗೆದ್ದ ನಂತರ, ಕಾಂಗ್ರೆಸ್ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲೂ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಆದರೆ ಪಕ್ಷದಲ್ಲಿನ ಆಂತರಿಕ ಕಲಹ ಮತ್ತು ರಾಷ್ಟ್ರೀಯ ನಾಯಕರ ಪ್ರಚಾರದ ಕೊರತೆಯಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಹಿಂದೆ ಬಿದ್ದಂತೆ ಕಂಡು ಬರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಬಂಡಾಯದ ಬಿಸಿ ಕಂಡು ಬಂದಿದೆ. ಆಡಳಿತ ವಿರೋಧಿ ಅಲೆ ಮತ್ತು ಶಾಸಕರ ಮೇಲಿನ ಅತೃಪ್ತಿ ಕಾರಣದಿಂದ ಬಿಜೆಪಿ ಕೆಲವು ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಕಾಂಗ್ರೆಸ್ ಕೂಡಾ ಗೆಲವಿನ ದಡ ಸೇರಲು ಅಭ್ಯರ್ಥಿಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಿದ್ದು ಕೆಲವು ಕ್ಷೇತ್ರಗಳಲ್ಲಿ ಬಂಡಾಯಕ್ಕೆ ಕಾರಣವಾಗಿದೆ.
ಆಮ್ ಅದ್ಮಿ (AAP) ಮೊದಲ ಬಾರಿ ಚುನಾವಣಾ ಕಣದಲ್ಲಿದ್ದು ಅಬ್ಬರದ ಪ್ರಚಾರ ನಡೆಸಿದೆ. ಆದರೆ ಅದು ಎರಡಂಕಿಯ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ. ಅದಾಗ್ಯೂ ಈ ಬಾರಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಲಕ್ಷಗಟ್ಟಲೇ ಮತದಾನ ನಡೆದಿರುವ ಕ್ಷೇತ್ರಗಳು ಹಲವು ರಾಜ್ಯಗಳಲ್ಲಿ ಇವೆ. ಆದರೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾರರು ಇದ್ದಾರೆ. ಹೀಗಾಗಿ ಇಲ್ಲಿ ಅತಿ ಕಡಿಮೆ ಮತದಾದ ನಡೆದ ಕ್ಷೇತ್ರಗಳ ಮಾಹಿತಿಯನ್ನು ನೀಡಲಾಗಿದೆ.
ಲಕ್ಷದ್ವೀಪ ಲೋಕಸಭಾ ಕ್ಷೇತ್ರದಿಂದ ಪಿ.ಎಂ.ಸಯೀದ್ ಅವರು 1967ರಿಂದ 1999ರ ವರೆಗೂ 10 ಬಾರಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ 1967ರಲ್ಲಿ ಸ್ಪರ್ಧೆ ಮಾಡಿದ್ದ ಪಿ.ಎಂ.ಸಯೀದ್ ಅವರು, ಕೇವಲ 4,151 ಮತ ಪಡೆದು ಗೆಲುವು ಸಾಧಿಸಿದ್ದರು. ಈ ವೇಳೆ ಒಟ್ಟು 11,807 ಜನರು ಮತ ಹಾಕಿದ್ದರು.
1977ರಲ್ಲಿ 16,386 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರೆ, 1980ರ ಚುನಾವಣೆಯ ಸಮಯದಲ್ಲಿ 17,772 ಮಂದಿ ಮತವನ್ನು ಚಲಾವಣೆ ಮಾಡಿದ್ದರು. 1984ರಲ್ಲಿಯೂ ಲಕ್ಷದ್ವೀಪ ದ್ವೀಪದಲ್ಲಿ ಒಟ್ಟು 19,023 ಜನರು ಮತ ಹಾಕಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ಸಯೀದ್ ಅವರು ಈ ಚುನಾವಣೆಯಲ್ಲಿ 10,361 ಮತ ಪಡೆದು ಆಯ್ಕೆಯಾಗಿದ್ದರು.
ಅತಿ ಕಡಿಮೆ ಮತದಾನವಾದ ಕ್ಷೇತ್ರಗಳ ಪೈಕಿ ದಾದ್ರಾ ಮತ್ತು ನಗರ್ ಹವೇಲಿ ಲೋಕಸಭಾ ಕ್ಷೇತ್ರವು ಐದನೇ ಸ್ಥಾನದಲ್ಲಿದ್ದು, 1967ರಲ್ಲಿ ಒಟ್ಟು 21,248 ಜನರು ಮತದಾನ ಮಾಡಿದ್ದಾರೆ. ಆರು ಹಾಗೂ ಏಳನೇ ಸ್ಥಾನದಲ್ಲಿಯೂ ದಾದ್ರಾ & ನಗರ್ ಹವೇಲಿ ಇದ್ದು 1971ರಲ್ಲಿ 21,658 ಮತ ಹಾಗೂ 1977ರಲ್ಲಿ 24,131 ಮತಗಳು ಚಲಾವಣೆಯಾಗಿದ್ದವು.
ಅತಿ ಕಡಿಮೆ ಮತದಾನವಾದ ಕ್ಷೇತ್ರಗಳು
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಪಕ್ಷೇತರ ಅಭ್ಯರ್ಥಿ ಒಟ್ಟು ಮತಗಳು : 11,807 ಕ್ಷೇತ್ರ: ಲಕ್ಷದ್ವೀಪ
ವರ್ಷ: 1967
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 16,386 ಕ್ಷೇತ್ರ: ಲಕ್ಷದ್ವೀಪ ವರ್ಷ: 1977
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ (ಐಎನ್‍ಸಿಯು) ಒಟ್ಟು ಮತಗಳು: 17,772 ಕ್ಷೇತ್ರ: ಲಕ್ಷದ್ವೀಪ ವರ್ಷ: 1980
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 19,023 ಕ್ಷೇತ್ರ: ಲಕ್ಷದ್ವೀಪ ವರ್ಷ: 1984
ಗೆದ್ದ ಅಭ್ಯರ್ಥಿ: ಎಸ್.ಆರ್.ಡೆಲ್ಕರ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 21,248 ಕ್ಷೇತ್ರ: ದಾದ್ರಾ & ನಗರ್ ಹವೇಲಿ ವರ್ಷ: 1967
ಗೆದ್ದ ಅಭ್ಯರ್ಥಿ: ರಾಮುಭಾಯ್ ರಾವಜಿಬಾಯ್ ಪಟೇಲ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 31,658 ಕ್ಷೇತ್ರ: ದಾದ್ರಾ & ನಗರ್ ಹವೇಲಿ ವರ್ಷ: 1971
ಗೆದ್ದ ಅಭ್ಯರ್ಥಿ: ರಾಮುಭಾಯ್ ರಾವಜಿಬಾಯ್ ಪಟೇಲ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 24,131 ಕ್ಷೇತ್ರ: ದಾದ್ರಾ & ನಗರ್ ಹವೇಲಿ ವರ್ಷ: 1977
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 25,321 ಕ್ಷೇತ್ರ: ಲಕ್ಷದ್ವೀಪ ವರ್ಷ: 1991
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಮತಗಳು: 25,490 ಕ್ಷೇತ್ರ: ಲಕ್ಷದ್ವೀಪ ವರ್ಷ: 1989
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 29,860 ಕ್ಷೇತ್ರ: ಲಕ್ಷದ್ವೀಪ ವರ್ಷ: 1999
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 30,188 ಕ್ಷೇತ್ರ: ಲಕ್ಷದ್ವೀಪ ವರ್ಷ: 1996
ಗೆದ್ದ ಅಭ್ಯರ್ಥಿ: ಪಿ.ಎಂ.ಸಯೀದ್ ಪಕ್ಷ: ಕಾಂಗ್ರೆಸ್ ಒಟ್ಟು ಮತಗಳು: 31,064 ಕ್ಷೇತ್ರ: ಲಕ್ಷದ್ವೀಪ ವರ್ಷ: 1998